‘ನನ್ನ ಪ್ರಿಯ ವಿದ್ಯಾರ್ಥಿನಿಯ ಮೃತದೇಹಕ್ಕೆ ಹೆಗಲು ಕೊಡ್ಲಿಕ್ಕಾದ್ರೂ ಒಂದು ಅವಕಾಶ ನೀಡ್ತೀರಾ..!?’
ಧರ್ಮವನ್ನು ಮೀರಿದ ಗುರು-ಶಿಷ್ಯರ ಮಾನವೀಯ ಸಂಬಂಧ ಅನಾವರಣ
ಮಂಜನಾಡಿ ಗ್ಯಾಸ್ ದುರಂತದಲ್ಲಿ ಸಂತ್ರಸ್ತ ಮಕ್ಕಳ ಚೇತರಿಕೆಗಾಗಿ ೨೧ ದಿನ ಐಸಿಯು ಹೊರಗೇ ಕಾದು ಕುಳಿತ ಸಂತೋಷ್ ಸರ್!
✍️ ಸೈಫ್ ಕುತ್ತಾರ್ ಶಿಕ್ಷಕರು ಎಂದರೆ ಕೇವಲ ಮಕ್ಕಳ ಭವಿಷ್ಯ ರೂಪಿಸುವವರಲ್ಲ, ಬದಲಾಗಿ ಮಾನವೀಯತೆಯ ಜೊತೆಗೆ ಅಕ್ಷರ ಜ್ಞಾನದ ಮೂಲಕ ಶಿಕ್ಷಣ ನೀಡುವ ಮಹಾನ್ ವ್ಯಕ್ತಿಗಳು ಅಂತ ಹೇಳ್ತಿವಿ. ಅಂತಹ ಮಾನವೀಯತೆಯ ಪ್ರತೀಕ, ಹೃದಯವಂತ ಶಿಕ್ಷಕ ಅದು *_ಮೊಂಟೆಪದವು ಸರಕಾರಿ ಶಾಲೆಯ…