ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಸುದ್ದಿಗಳು News

Posted by vidyamaana on 2024-07-03 11:16:18 |

Share: | | | | |


ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.

ವಿಶ್ವ ಹಿಂದೂ ಪರಿದ್ ನ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಭಟ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

 Share: | | | | |


ಪಣೆಮಜಲಿನಲ್ಲಿ ರಸ್ತೆಗೆ ಕಂಟಕವಾಗಿದೆ ಹಿಟಾಚಿ ಸಂಚಾರ - ವೀಡಿಯೋ ಚಿತ್ರೀಕರಿಸಿ ಜಾಲತಾಣದಲ್ಲಿ ಹರಿಬಿಟ್ಟ ಸಾರ್ವಜನಿಕರು

Posted by Vidyamaana on 2023-06-07 16:04:50 |

Share: | | | | |


ಪಣೆಮಜಲಿನಲ್ಲಿ ರಸ್ತೆಗೆ ಕಂಟಕವಾಗಿದೆ  ಹಿಟಾಚಿ ಸಂಚಾರ - ವೀಡಿಯೋ ಚಿತ್ರೀಕರಿಸಿ ಜಾಲತಾಣದಲ್ಲಿ ಹರಿಬಿಟ್ಟ ಸಾರ್ವಜನಿಕರು

ಪುತ್ತೂರು: ಟಯರ್ ಇಲ್ಲದೇ, ಚೈನ್ ಸಹಾಯದಿಂದ ಮುನ್ನಡೆಯುವ ಹಿಟಾಚಿಗಳನ್ನು ರಸ್ತೆಗೆ ಇಳಿಸಬಾರದು ಎಂಬ ನಿಯಮವಿದೆ. ಈ ಕಾರಣದಿಂದ, ಹಿಟಾಚಿಗಳಿಗೆ ಆರ್.ಟಿ.ಓ. ನೋಂದಣಿಯೂ ಇರುವುದಿಲ್ಲ. ಹೀಗಿದ್ದರೂ ಪಣೆ ಮಜಲು ಪರಿಸರದಲ್ಲಿ ಹಿಟಾಚಿಯೊಂದನ್ನು ರಸ್ತೆಯಲ್ಲೇ ಕೊಂಡೊಯ್ಯುತ್ತದೆ ದೃಶ್ಯ ವೀಡಿಯೋವೊಂದರಲ್ಲಿ ಸೆರೆಯಾಗಿದೆ.

ಹಿಟಾಚಿಗಳನ್ನು ಮಣ್ಣು ಅಗೆಯಲು ಉಪಯೋಗಿಸುತ್ತಾರೆ. ಗುಡ್ಡವನ್ನು ಲೀಲಾಜಾಲವಾಗಿ ಹತ್ತಿಳಿಯಬಲ್ಲ ಈ ಹಿಟಾಚಿಗಳನ್ನು ರಸ್ತೆಗೆ ತರುವಂತೆ ಇಲ್ಲ. ತಂದದ್ದೇ ಆದರೆ, ಡಾಮರು ರಸ್ತೆ ಕಿತ್ತು ಹೋಗುತ್ತದೆ. ಇದಕ್ಕೆ ಸಾಕಷ್ಟು ನಿದರ್ಶನಗಳೂ ಇವೆ. ಆದ್ದರಿಂದ ಹಿಟಾಚಿಯನ್ನು ರಸ್ತೆಗೆ ಇಳಿಸಲು ನಿರ್ಬಂಧ ವಿಧಿಸಲಾಗಿದೆ.

ಪಣೆಮಜಲು ಪರಿಸರದ ಮುಖ್ಯರಸ್ತೆಯಲ್ಲಿ ಹಿಟಾಚಿಯೊಂದು ಬೆಳ್ಳಂಬೆಳಗೆ ತೆರಳುತ್ತಿರುವುದು ವೀಡಿಯೋದಲ್ಲಿ ಚಿತ್ರೀಕರಣಗೊಂಡಿದೆ. ರಸ್ತೆ ಹಾಳಾಗಿ ಹೋಗುತ್ತದೆ ಎನ್ನುವ ಪರಿಜ್ಞಾನವೇ ಇಲ್ಲದೇ, ನಿಯಮಗಳನ್ನು ಗಾಳಿಗೆ ತೂರಿ ಮುಖ್ಯರಸ್ತೆಯಲ್ಲೇ ಕೊಂಡೊಯ್ಯಲಾಗುತ್ತಿತ್ತು. ಯಾರೂ ನೋಡುವುದಿಲ್ಲ, ಯಾರಿಗೂ ತಿಳಿಯುವುದಿಲ್ಲ ಎಂಬ ಕಾರಣಕ್ಕೆ ಬೆಳಗ್ಗಿನ ಹೊತ್ತನ್ನೇ ಆಯ್ಕೆ ಮಾಡಿಕೊಂಡು, ಹಿಟಾಚಿ ಕೊಂಡೊಯ್ಯಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಪ್ರಜ್ಞಾವಂತ ನಾಗರಿಕರು ಕಾನೂನು ಕೈಗೆತ್ತಿಕೊಳ್ಳಲಾರರು ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಕಾನೂನು ತಿಳಿದೂ, ಹೀಗೆ ವರ್ತಿಸಿದವರಿಗೆ ಏನೆನ್ನಬೇಕು? ಸಂಬಂಧಪಟ್ಟ ಇಲಾಖೆಗಳು ಇದರ ಬಗ್ಗೆ ಏನು ಕ್ರಮ ಕೈಗೊಳ್ಳಬಹುದು. ಕಾದು ನೋಡಬೇಕಿದೆ?

ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹೇಮಾವತಿ ನದಿಯಲ್ಲಿ ಆಟವಾಡುತ್ತಿದ್ದ ಯುವತಿ ನೀರಿನಲ್ಲಿ ಮುಳುಗಿ ಸಾವು!

Posted by Vidyamaana on 2023-12-25 12:55:35 |

Share: | | | | |


ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹೇಮಾವತಿ ನದಿಯಲ್ಲಿ ಆಟವಾಡುತ್ತಿದ್ದ ಯುವತಿ ನೀರಿನಲ್ಲಿ ಮುಳುಗಿ ಸಾವು!

ಹೇಮಾವತಿ ನದಿ ಹಿನ್ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿ (Drowned in water) ಯುವತಿಯೊಬ್ಬಳು ಮೃತಪಟ್ಟಿದ್ದಾಳೆ. ಹಾಸನ ತಾಲೂಕಿನ ಗೊರೂರಿನ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಘಟನೆ ನಡೆದಿದೆ. ಹಾಸನ: ಹೇಮಾವತಿ ನದಿ ಹಿನ್ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿ (Drowned in water) ಯುವತಿಯೊಬ್ಬಳು ಮೃತಪಟ್ಟಿದ್ದಾಳೆ.ಹಾಸನ ತಾಲೂಕಿನ ಗೊರೂರಿನ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಘಟನೆ ನಡೆದಿದೆ. ನಿತ್ಯಾ (19) ಹೇಮಾವತಿ ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಯುವತಿ. ಹಾಸನ ತಾಲೂಕಿನ ಕಟ್ಟಾಯ ಹೋಬಳಿಯ ಗೊರೂರು ಅರಳಿಕಟ್ಟೆ ನಿವಾಸಿ ಗಿರೀಶ್ ಎಂಬುವವರ ಪುತ್ರಿ ನಿತ್ಯಾ, ಹನುಮ ಜಯಂತಿ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ತೆರಳಿದ್ದರು. ತಮ್ಮ ಸಂಬಂಧಿಕರೊಂದಿಗೆ ಅರಳಿಕಟ್ಟೆ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದರು.ಪೂಜೆ ಸಲ್ಲಿಸಿ, ಪ್ರಸಾದ ಸೇವಿಸಿ ಹೇಮಾವತಿ ಹಿನ್ನೀರಿನಲ್ಲಿ ಆಟವಾಡುತ್ತಿದ್ದಾಗ ನಿತ್ಯಾ ಈ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲೇ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕದಳ ಭೇಟಿ ನೀಡಿದ್ದು,ನಿತ್ಯಾ ಮೃತದೇಹಕ್ಕಾಗಿ ಶೋಧಕಾರ್ಯ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗೊರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಶ್ವದಾದ್ಯಂತ X ಡೌನ್: ಬಳಕೆದಾರರ ಪರದಾಟ

Posted by Vidyamaana on 2023-09-19 21:21:50 |

Share: | | | | |


ವಿಶ್ವದಾದ್ಯಂತ X ಡೌನ್: ಬಳಕೆದಾರರ ಪರದಾಟ

ನವದೆಹಲಿ: ಟ್ವಿಟ್ಟರ್ ಎಕ್ಸ್ ಆಗಿ ಬದಲಾವಣೆ ಮಾಡಲಾಗಿತ್ತು. ಈ ಬಳಿಕ ಎಕ್ಸ್ ಅನ್ನು ಪಾವತಿ ವ್ಯವಸ್ಥೆ ಜಾರಿಗೊಳಿಸೋದಾಗಿ ಎಲೋನ್ ಮಸ್ಕ್ ಘೋಷಣೆ ಮಾಡಿದ್ದರು. ಆ ಬೆನ್ನಲ್ಲೇ ಜನಪ್ರಿಯ ಸಾಮಾಜಿಕ ಮಾಧ್ಯಮ ಎಕ್ಸ್ ಡೌನ್ ಆಗಿದೆ. ಬಳಕೆದಾರರು ಈಗ ಪರದಾಡುತ್ತಿರೋದಾಗಿ ತಿಳಿದು ಬಂದಿದೆ.ಈ ಹಿಂದೆ ಟ್ವಿಟರ್ ಎಂದು ಕರೆಯಲ್ಪಡುತ್ತಿದ್ದ ಪ್ಲಾಟ್ ಫಾರ್ಮ್ ಎಕ್ಸ್ ಕೆಲಸ ಮಾಡುವುದನ್ನು ನಿಲ್ಲಿಸಿದೆ. ಎಲೋನ್ ಮಸ್ಕ್ ಅವರು ಸೈಟ್ಗೆ ಪ್ರವೇಶಕ್ಕಾಗಿ ಎಲ್ಲರಿಗೂ ಪಾವತಿಸಲು ಒತ್ತಾಯಿಸಲು ಯೋಜಿಸುತ್ತಿದ್ದಾರೆ ಎಂದು ಹೇಳಿದ ಕೆಲವೇ ಗಂಟೆಗಳ ನಂತರ ಸೈಟ್ ಡೌನ್ ಆಗಿದೆ.


ಎಕ್ಸ್ ಕೆಲವು ಬಳಕೆದಾರರಿಗೆ ಕೈಕೊಟ್ಟ ಕಾರಣ, ಸರ್ವರ್ ಡೌನ್ ಆಗಿ, ಬಳಕೆದಾರರು ಪರದಾಡುವಂತೆ ಆಗಿದೆ. ಟ್ರ್ಯಾಕಿಂಗ್ ವೆಬ್ಸೈಟ್ ಡೌನ್ ಡಿಟೆಕ್ಟರ್ ಮಂಗಳವಾರ ಮಧ್ಯಾಹ್ನ ವಿಶ್ವದಾದ್ಯಂತ ಸಮಸ್ಯೆಗಳ ವರದಿಗಳ ದೊಡ್ಡ ಒಳಹರಿವನ್ನು ತೋರಿಸಿದೆ. ಆ ಸೈಟ್ X ನ ವರದಿಗಳ ಮೇಲೆ ಅವಲಂಬಿತವಾಗಿರುತ್ತದೆ, ಮತ್ತು ಆದ್ದರಿಂದ ಸಮಸ್ಯೆಗಳನ್ನು ಸ್ವತಃ ಅನುಭವಿಸಬಹುದು.

ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ತುಳಸಿಕಟ್ಟೆ ಪ್ರತಿಷ್ಠೆ

Posted by Vidyamaana on 2024-02-24 18:28:18 |

Share: | | | | |


ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ತುಳಸಿಕಟ್ಟೆ ಪ್ರತಿಷ್ಠೆ

ಪುತ್ತೂರು: ಬೊಳುವಾರು ವಿಶ್ವಕರ್ಮ ಸಭಾಭವನಕ್ಕೆ ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಸುಮಾರು 1.5 ಲಕ್ಷ ರೂ. ವೆಚ್ಚದಲ್ಲಿ ಕೊಡುಗೆಯಾಗಿ ನೀಡಿದ ಸ್ಟೈನ್ಲೆಸ್ ಸ್ಟೀಲ್ ಸಿಂಕ್ನ ಉದ್ಘಾಟನೆ ಹಾಗೂ ಸ್ಥಳಾಂತರಗೊಂಡ ತುಳಸಿ ಕಟ್ಟೆಯ ಪ್ರತಿಷ್ಠಾಪನಾ ಕಾರ್ಯಕ್ರಮ ಫೆ. 24ರಂದು ನಡೆಯಿತು.


ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಆನಂದ ಆಚಾರ್ಯ ಅಜ್ಜಿನಡ್ಕ ಮಾತನಾಡಿ, ಸೊಸೈಟಿ ಇಂದು ವಜ್ರ ಮಹೋತ್ಸವದ ಸಂಭ್ರಮದಲ್ಲಿದೆ. ಹಾಗಾಗಿ ಈ ವರ್ಷ ವಿಶೇಷವಾಗಿ 60 ಕಾರ್ಯಕ್ರಮ ಮಾಡಬೇಕು ಎಂಬ ಯೋಜನೆ ಇದೆ. ಅದರಲ್ಲಿ ಗ್ರಾಹಕರ ಸಮಾವೇಶ ಏರ್ಪಡಿಸಬೇಕು ಎಂಬ ಆಲೋಚನೆ ಅಧ್ಯಕ್ಷರಾದ ಪಿ. ಉಪೇಂದ್ರ ಆಚಾರ್ಯ ಅವರದ್ದು. ಸಾಮಾಜಿಕ ಕಳಕಳಿಯ ಕಾರಣಕ್ಕೆ ಫಾಲ್ಕೆ ಬಾಬುರಾವ್ ಆಚಾರ್ಯ ಅವರು 1964ರಲ್ಲಿ ಸೊಸೈಟಿ ಹುಟ್ಟಿಕೊಂಡಿತು. ಇಂತಹ ಸಂಸ್ಥೆ ಇಂದು ಸಾವಿರಾರು ಮಂದಿಗೆ ಉದ್ಯೋಗ ನೀಡುತ್ತಿದೆ. ಇಂದು ವಿಶ್ವಬ್ರಾಹ್ಮಣ ಸೇವಾ ಸಂಘದ ಮನವಿ ಮೇರೆಗೆ ಸ್ಟೈನ್ಲೆಸ್ ಸ್ಟೀಲ್ ಸಿಂಕ್ ಅನ್ನು ಕೊಡುಗೆಯಾಗಿ ನೀಡಿದ್ದೇವೆ ಎಂದರು.


ಅಧ್ಯಕ್ಷತೆ ವಹಿಸಿದ್ದ ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಶ್ರೀಧರ್ ಕೆ. ಮಾತನಾಡಿ, ಸಮಿತಿ ಸದಸ್ಯರ ಸಹಕಾರದಿಂದ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುಂದುವರಿಯುತ್ತಿದ್ದೇವೆ. ಮಾಜಿ ಶಾಸಕ ಸಂಜೀವ ಮಠಂದೂರು ನೀಡಿದ ಅನುದಾನದಲ್ಲಿ ಪಾಕಶಾಲೆ, ಕಚೇರಿ ಮೊದಲಾದ ಕೆಲಸಗಳು ಈಗಾಗಲೇ ಪೂರ್ಣಗೊಂಡಿದೆ. ಇದೀಗ ವಾಸ್ತುಪ್ರಕಾರವಾಗಿ ತುಳಸಿಕಟ್ಟೆಯನ್ನು ಸ್ಥಳಾಂತರಿಸಿ, ಪ್ರತಿಷ್ಠಾಪನೆ ಮಾಡಲಾಗಿದೆ. 1.5 ಲಕ್ಷ ರೂ.ನಲ್ಲಿ ಸ್ಟೈನ್ಲೆಸ್ ಸ್ಟೀಲ್ ಸಿಂಕ್ ಅನ್ನು ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಕೊಡುಗೆಯಾಗಿ ನೀಡಿದ್ದು, ಇಂದು ಉದ್ಘಾಟನೆಗೊಂಡಿದೆ. ಮುಂದೆ ವೇದಿಕೆ ನವೀಕರಣ, ಪಾರ್ಕಿಂಗ್ ವ್ಯವಸ್ಥೆಗಳು ಆಗಬೇಕಿದೆ ಎಂದರು.


ವಿಶ್ವಬ್ರಾಹ್ಮಣ ಸೇವಾ ಸಂಘದ ಉಪಾಧ್ಯಕ್ಷ ಅಣ್ಣಿ ಆಚಾರ್ಯ, ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ನಿರ್ದೇಶಕ ಶಶಿಕಾಂತ ಆಚಾರ್ಯ ಶುಭ ಹಾರೈಸಿದರು.


ಸಂಸ್ಥೆಯ ಪರವಾಗಿ ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಆನಂದ ಆಚಾರ್ಯ ಅಜ್ಜಿನಡ್ಕ ಅವರನ್ನು ಸನ್ಮಾನಿಸಲಾಯಿತು.


ವಿಶ್ವಕರ್ಮ ಯುವ ಸಮಾಜ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಆನೆಗುಂದಿ ಗುರುಸೇವಾ ಪರಿಷತ್ ಪುತ್ತೂರು ವಲಯ ಅಧ್ಯಕ್ಷ ವಿ. ಪುರುಷೋತ್ತಮ್ ಆಚಾರ್ಯ, ಎಸ್.ಕೆ.ಜಿ.ಐ. ಸೊಸೈಟಿಯ ಪುತ್ತೂರು ಶಾಖಾ ಪ್ರಬಂಧಕಿ ಉಷಾ ಆಚಾರ್ಯ, ವಿಶ್ವಕರ್ಮ ಮಹಿಳಾ ಮಂಡಳಿ ಅಧ್ಯಕ್ಷೆ, ನಗರಸಭೆ ಸದಸ್ಯೆ ಇಂದಿರಾ ಪುರುಷೋತ್ತಮ್ ಉಪಸ್ಥಿತರಿದ್ದರು.


ಶ್ರೀನಿವಾಸ ಆಚಾರ್ಯ ಪ್ರಾರ್ಥಿಸಿ, ವಿಶ್ವಬ್ರಾಹ್ಮಣ ಸೇವಾ ಸಂಘದ ಉಪಾಧ್ಯಕ್ಷ ಭುಜಂಗ ಆಚಾರ್ಯ ಸ್ವಾಗತಿಸಿದರು. ಕಿಶನ್ ಬಿ.ವಿ. ವಂದಿಸಿ, ನಿಕಟಪೂರ್ವ ಅಧ್ಯಕ್ಷ ಜಗದೀಶ್ ಎಸ್.ಎನ್. ಕಾರ್ಯಕ್ರಮ ನಿರೂಪಿಸಿದರು.



ತುಳಸಿ ಕಟ್ಟೆ ಪ್ರತಿಷ್ಠೆ:

ಸ್ಥಳಾಂತರಗೊಂಡು ಪ್ರತಿಷ್ಠಾಪನೆಗೊಂಡ ತುಳಸಿ ಕಟ್ಟೆಯ ಧಾರ್ಮಿಕ ಕಾರ್ಯಕ್ರಮವನ್ನು ಗೇರುಕಟ್ಟೆ ರಮೇಶ್ ಪುರೋಹಿತ್ ನಡೆಸಿಕೊಟ್ಟರು. ಕೆ. ಕೃಷ್ಣ ಆಚಾರ್ಯ ಹಾಗೂ ಬೇಬಿ ಕೆ. ಆಚಾರ್ಯ ದಂಪತಿ ನೇತೃತ್ವ ವಹಿಸಿದ್ದರು.


ಮಾಣಿ ಬಾಲವಿಕಾಸ ದಲ್ಲಿ ಬದುಕಿನ ಕಲೆಯ ಪಯಣ ಭಾವಯಾನ ಕಾರ್ಯಕ್ರಮ

Posted by Vidyamaana on 2024-02-18 07:51:47 |

Share: | | | | |


ಮಾಣಿ ಬಾಲವಿಕಾಸ ದಲ್ಲಿ  ಬದುಕಿನ ಕಲೆಯ ಪಯಣ ಭಾವಯಾನ ಕಾರ್ಯಕ್ರಮ

ವಿಟ್ಲ : ಮಾಣಿ - ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ,  ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಇದರ ವತಿಯಿಂದ ಪೆ. 19 ರಿಂದ 23 ರ ತನಕ ಹರ್ಯಾಣದ ಘಟಪುರಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ  ಭಾಗವಹಿಸಲಿರುವ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ, ಶುಭ ಹಾರೈಕೆಯ ಬದುಕಿನ ಕಲೆಯ ಪಯಣ ಭಾವಯಾನ ಕಾರ್ಯಕ್ರಮ ಬಾಲವಿಕಾಸ ಸಭಾ ಭವನದ ದಿ. ಪಾಳ್ಯ ಅನಂತರಾಮ ರೈ ವೇದಿಕೆಯಲ್ಲಿ ಶುಕ್ರವಾರ ನಡೆಯಿತು.


    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಣಿ ಬಾಲವಿಕಾಸ ಟ್ರಸ್ಟ್ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮಾಣಿ ಇದರ ಅದ್ಯಕ್ಷ ಜೆ. ಪ್ರಹ್ಲಾದ್ ಶೆಟ್ಟಿ ಮಾತನಾಡಿ ರಾಷ್ಟ್ರ ಮಟ್ಟದಲ್ಲಿ ನಡೆಯುವ ಭಾವೈಕ್ಯತಾ ಶಿಬಿರದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಇಡೀ ಕರ್ನಾಟಕದ ಜನತೆಯ ಭಾವನೆಗಳು, ಇಲ್ಲಿನ ಜನತೆಯ ಬದುಕು, ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸಲಿದ್ದಾರೆ ಎಂದರು.


    ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ. ಮಾತನಾಡಿ ಹರ್ಯಾಣದಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಕರ್ನಾಟಕದಿಂದ ಒಟ್ಟು 18 ವಿದ್ಯಾರ್ಥಿಗಳ ಪೈಕಿ ಮಾಣಿ ಬಾಲವಿಕಾಸ ಶಾಲೆಯಿಂದಲೇ 18 ಮಂದಿ ಭಾಗವಹಿಸುತ್ತಿರುವುದು ಶ್ಲಾಘನೀಯ ಎಂದ ಅವರು 

ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ‌ಶುಭ ಹಾರೈಸಿದರು.


    ಅತಿಥಿಗಳಾಗಿ ಭಾಗವಹಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮಾಣಿ ಇದರ ಉಪಾಧ್ಯಕ್ಷ ಕೆ.ಬಾಲಕೃಷ್ಣ ಆಳ್ವ, ಕಾರ್ಯದರ್ಶಿ ಯು.ಶರಣಪ್ಪ 

ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಕಸ್ತೂರಿ ಪಿ.ಶೆಟ್ಟಿ, ಬಾಲವಿಕಾಸ ಟ್ರಸ್ಟ್ ಕಾರ್ಯದರ್ಶಿ ಮಹೇಶ್ ಶೆಟ್ಟಿ ಮಾತನಾಡಿ ಶುಭ ಹಾರೈಸಿದರು.


ವಿದ್ಯಾರ್ಥಿ ರಕ್ಷಕ ತೋಟ ಕೃಷ್ಣಪ್ಪ ಪೂಜಾರಿ, ವಿದ್ಯಾರ್ಥಿ ಅಜ್ಮಲ್ ಮಾತನಾಡಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.


 ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸುತ್ತಿರುವ  ಗೈಡ್ ಕ್ಯಾಪ್ಟನ್  ಸುಪ್ರಿಯಾ ಡಿ, ಲೇಡಿ ಸ್ಕೌಟ್ ಮಾಸ್ಟರ್  ಸಪ್ನಾ ಪ್ರಸನ್ನ 

ಸ್ಕೌಟ್ಸ್ ವಿದ್ಯಾರ್ಥಿಗಳಾದ 

ವರುಣ್, ವರ್ಷಿತ್ ಬಿ.ಎಂ, ಆಶ್ರಯ್ ಎಲ್, ಅಬ್ದುಲ್ ಮಾಹಿಝ್, ದಿಗಂತ್ ಎಸ್, ಸೌರಭ್ ಪ್ರಭು, ಮನ್ವಿತ್ ಕುಲಾಲ್, ದರ್ಶಿಲ್ ಗೈಡ್ಸ್ ವಿದ್ಯಾರ್ಥಿನಿಯರಾದ 

ಸಾಕ್ಷಿ, ತನ್ವಿ ಎನ್ ಶೆಟ್ಟಿ, ಚಿನ್ಮಯಿ, ಗೌತಮಿ ಪಿ, ರಿಷಿಕಾ ರೈ, ಸಿಂಚನಾಶ್ರೀ ಶೆಟ್ಟಿ, ಸಿಂಚನ, ದಿಶಾ ಎಂ

ಸುಹಾನಿ ಎಸ್ ಶೆಟ್ಟಿ,

ನಿವ್ಯಾ ರೈ ಅವರನ್ನು ಅಭಿನಂದಿಸಿ ಬೀಳ್ಕೊಡಲಾಯಿತು.


   ಶಾಲಾ ಆಡಳಿತಾಧಿಕಾರಿ ರವೀಂದ್ರ ದರ್ಬೆ ಪ್ರಸ್ತಾವನೆಗೈದು, ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ವಿ.ಶೆಟ್ಟಿ ವಂದಿಸಿದರು.

ಶಿಕ್ಷಕಿಯರಾದ ಅಶ್ವಿನಿ ಪಿ.ಆರ್ ಹಾಗೂ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಬುಲ್ ಬುಲ್ ಫ್ಲಾಕ್ ಲೀಡರ್ ಯಶೋದಾ ಕೆ, ಗೈಡ್ಸ್ ಕ್ಯಾಪ್ಟನ್ ಲೀಲಾ  ಸಹಕರಿಸಿದರು.

ಪುತ್ತೂರು ಶಾಸಕರ ಇಂದಿನ ಕಾರ್ಯಕ್ರಮ ಜು 22

Posted by Vidyamaana on 2023-07-22 00:53:05 |

Share: | | | | |


ಪುತ್ತೂರು ಶಾಸಕರ ಇಂದಿನ ಕಾರ್ಯಕ್ರಮ ಜು 22

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಜುಲೈ 22 ರಂದು.


ಬೆಳಿಗ್ಗೆ 10 ಗಂಟೆಗೆ ಉಪ್ಪಿನಂಗಡಿ ಪ್ರಥಮ‌ದರ್ಜೆ ಕಾಲೇಜಿನಲ್ಲಿ ಪುತ್ತೂರು ತಾಲೂಕು ಕಾರ್ಯನಿರತ‌ಪತ್ರಕರ್ತರ ಸಂಘ ದ ವತಿಯಿಂದ ಪತ್ರಿಕಾ ದಿನಾಚರಣೆ

ಬೆಳಿಗ್ಗೆ 11 ಗಂಟೆಗೆ ಕೊಂಬೆಟ್ಟು ಶಾಲೆಯಲ್ಲಿ ಕಣ್ಣಿನ ಶಿಬಿರ

ನಂತರ ನಿಡ್ಪಳ್ಳಿ ಹಾಗೂ ಆರ್ಯಾಪು ಗ್ರಾಪಂ ಉಪ ಚುನಾವಣೆಗೆ ಸಂಬಂದಿಸಿದಂತೆ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ.



Leave a Comment: