ಎರಡು ವರ್ಷಗಳ ಹಿಂದಿನ ಮನೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು

ಸುದ್ದಿಗಳು News

Posted by vidyamaana on 2024-07-03 08:00:29 |

Share: | | | | |


ಎರಡು ವರ್ಷಗಳ ಹಿಂದಿನ ಮನೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು

ಬೆಳ್ಳಾರೆ : ಎರಡು ವರ್ಷಗಳ ಹಿಂದೆ ನಡೆದ ಮನೆ ಕಳ್ಳತನ ಪ್ರಕರಣವನ್ನು ಬೆಳ್ಳಾರೆ ಪೊಲೀಸರು ಭೇದಿಸಿದ್ದಾರೆ.


ಪೊಲೀಸ್ ಠಾಣಾ ವ್ಯಾಪ್ತಿಯ ಕಡಬ ತಾಲೂಕು ಎಡಮಂಗಲ ಗ್ರಾಮದ ದಡ್ಡು ಎಂಬಲ್ಲಿ ನಡೆದ ಸುಮಾರು 1,48,000 ರೂ. ಮೌಲ್ಯದ ಚಿನ್ನಾಭರಣಗಳು ಮತ್ತು ನಗದು ಹಣ 30,000 ರೂ. ಸೇರಿ ಒಟ್ಟು 1,78,000 ರೂ. ಮೌಲ್ಯದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಠಾಣೆಯಲ್ಲಿ ಅಪರಾಧ ಕ್ರಮಾಂಕ. 22/2022 ಕಲಂ 457,380 ಭಾ. ದಂ. ಸಂ ರಂತೆ ಪ್ರಕರಣ ದಾಖಲಿಸಿಕೊಂಡು, ಕಳೆದ ಎರಡು ವರ್ಷಗಳಿಂದ ತನಿಖೆ ನಡೆಸಿದ್ದು, ಪ್ರಸ್ತುತ ಪ್ರಕರಣದ ಆರೋಪಿ ಬೆಳ್ತಂಗಡಿ ನೆರಿಯಾ ನಿವಾಸಿ ಶರತ್ (24) ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ಕಳವು ಮಾಡಿದ ಸೊತ್ತುಗಳನ್ನು ಪತ್ತೆ ಮಾಡಿ ಸ್ವಾದೀನಪಡಿಸಿಕೊಳ್ಳಲಾಗಿದೆ.

ಸದ್ರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಸಿ ಬಿ ರಿಷ್ಯಂತ್ ಐಪಿಎಸ್ ರವರು, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಗದೀಶ್ ಎಂ ಕೆ.ಎಸ್.ಪಿ.ಎಸ್ ಮತ್ತು ರಾಜೇಂದ್ರ ಕೆ.ಎಸ್.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ವಿಜಯ ಪ್ರಸಾದ್, ಪ್ರಭಾರ ಪೊಲೀಸ್ ಉಪಾಧೀಕ್ಷಕರು, ಪುತ್ತೂರು ಉಪವಿಭಾಗ ಮತ್ತು ಸುಳ್ಯ ವೃತ್ತ ನಿರೀಕ್ಷಕರಾದ ಸತ್ಯನಾರಾಯಣ ಕೆ ರವರ ನೇತೃತ್ವದಲ್ಲಿ, ಸಂತೋಷ್ ಬಿ ಪಿ ಪೊಲೀಸ್ ಉಪನಿರೀಕ್ಷಕರು, ಬೆಳ್ಳಾರೆ ಪೊಲೀಸ್ ಠಾಣೆ ಹಾಗೂ ಬೆಳ್ಳಾರೆ ಪೊಲೀಸ್ ಠಾಣಾ ಸಿಬ್ಬಂದಿಗಳಾದ ನವೀನ ಕೆ. ಚಂದ್ರಶೇಖರ್ ಗೌಡ, ಸಂತೋಷ್ ಜಿ. ಜೀಪು ಚಾಲಕ ಪುರಂದರ ಹಾಗೂ ಬೆರಳುಮುದ್ರೆ ಘಟಕದ ಪ್ರಶಾಂತ್ ಹೊಸಮನಿ ಮತ್ತು ಸಚಿನ್ ಬಿ. ಬಿ ರವರನ್ನೊಳಗೊಂಡು ವಿಶೇಷ ತನಿಖಾ ತಂಡವು ಕರ್ತವ್ಯ ನಿರ್ವಹಿಸಿರುತ್ತದೆ.

ಸದ್ರಿ ತನಿಖಾ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಂದ ಮತ್ತು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಯನ್ನು ವ್ಯಕ್ತವಾಗಿದೆ.

 Share: | | | | |


ದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಪ್ರತಿಭಟನೆ

Posted by Vidyamaana on 2024-02-07 14:55:35 |

Share: | | | | |


ದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಪ್ರತಿಭಟನೆ

ದೆಹಲಿ: ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದ ತಾರತಮ್ಯ ನೀತಿ ಮತ್ತು ಮಲತಾಯಿ ಧೋರಣೆಯನ್ನು ಆರೋಪಿಸಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದೆ.



ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯಸಂಪುಟದ ಎಲ್ಲ ಸಚಿವರು, ಕಾಂಗ್ರೆಸ್ ಪಕ್ಷದ ವಿಧಾನಸಭಾ ಮತ್ತು ವಿಧಾನ ಪರಿಷತ್ ಸದಸ್ಯರು, ಸಂಸದರು ಮತ್ತು ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ನಮ್ಮ ತೆರಿಗೆ ನಮ್ಮ ಹಕ್ಕು ಎಂಬ ಫಲಕಗಳನ್ನು ಶಾಸಕರು ಸಂಸದರು ಪ್ರದರ್ಶಿಸುವ ಮೂಲಕ ಗಮನ ಸೆಳೆದರು.

ನೈತಿಕ ಪೊಲೀಸ್ ಗಿರಿ ತಡೆಗೆ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು ಸೂಚನೆ

Posted by Vidyamaana on 2023-06-06 09:01:45 |

Share: | | | | |


ನೈತಿಕ ಪೊಲೀಸ್ ಗಿರಿ ತಡೆಗೆ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು ಸೂಚನೆ

ಮಂಗಳೂರು: ನೈತಿಕ ಪೊಲೀಸ್ ಗಿರಿ ತಡೆಗೆ ಮಂಗಳೂರು ನಗರದಲ್ಲಿ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.ಮಂಗಳೂರಿನಲ್ಲಿ ಪಶ್ಚಿಮ ವಲಯದ ದ.ಕ., ಉಡುಪಿ, ಉ.ಕ., ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳ ಸಭೆಯ ಬಳಿಕ ಗೃಹ‌ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.


ಕೋಮು‌ಸೌಹಾರ್ದ ಕಾಪಾಡಲು ಕಠಿನ ಕ್ರಮಕ್ಕೆ ಪೊಲೀಸರಿಗೆ ಸೂಚನೆ‌ ನೀಡಿದ್ದೇನೆ ಎಂದ ಅವರು ಮುಂದೆ‌ ಬೇರೆ ಕಡೆ ಅಗತ್ಯ‌ ಬಿದ್ದರೆ ಅಲ್ಲಿಯೂ ವಿಂಗ್ ರಚಿಸಲಾಗುವುದು ಎಂದು ಹೇಳಿದರು.

ಇಲ್ಲಿನ‌ ಜನರಿಗೆ ಭಯ ಮುಕ್ತ ವಾತಾವರಣ ನಿರ್ಮಿಸಬೇಕಾಗಿದೆ. ಡ್ರಗ್ಸ್ ನಿಯಂತ್ರಣಕ್ಕೆ ಅಭಿಯಾನ ನಡೆಸಲು ಸೂಚಿಸಿದ್ದು, ಆ.15 ರೊಳಗೆ ಡ್ರಗ್ಸ್ ಚಟುವಟಿಕೆ ಹತ್ತಿಕ್ಕಲು ಗಡುವು ನೀಡಿದ್ದೇನೆ ಎಂದರು.

ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 30

Posted by Vidyamaana on 2023-09-30 07:25:57 |

Share: | | | | |


ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 30

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಸೆ 30 ರಂದು

ಬೆಳಿಗ್ಗೆ 10. ಗಂಟೆಗೆ ಪ್ರೋ ಕಬಡ್ಡಿ ಅಹರ್ನಿಶಿ ಮಾದರಿಯ ಕಬಡ್ಡಿ ಪಂದ್ಯಾಟ ಕಾರ್ಯಕ್ರಮ 

ಸ್ಥಳ; ಕಿಲ್ಲೆ ಮೈದಾನ ಪುತ್ತೂರು


11 ಗಂಟೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆ


ಮಧ್ಯಾಹ್ನ 3 ಗಂಟೆಗೆ ಮಂಗಳೂರು ವುಡ್ ಲ್ಯಾಂಡ್ ಹೊಟೇಲ್ ನಲ್ಲಿ ಕಂಬಳ ಕೋಣದ ಯಜಮಾನರುಗಳ ( ಮಾಲಕರ) ಸಭೆಯಲ್ಲಿ ಭಾಗವಹಿಸಲಿದ್ದಾರೆ

ಯತ್ನಾಳ್ ಮುಂದೆ ಕಣ್ಣೀರು ಹಾಕಿದ ಪುತ್ತಿಲ – ಅರುಣನ್ನ ಕಣ್ಣೀರಾಗಿದ್ದು ಹಿಂದು ಕಾರ್ಯಕರ್ತರ ನೋವಿಗೆ

Posted by Vidyamaana on 2023-05-19 09:12:57 |

Share: | | | | |


ಯತ್ನಾಳ್ ಮುಂದೆ ಕಣ್ಣೀರು ಹಾಕಿದ ಪುತ್ತಿಲ – ಅರುಣನ್ನ ಕಣ್ಣೀರಾಗಿದ್ದು ಹಿಂದು ಕಾರ್ಯಕರ್ತರ ನೋವಿಗೆ

ಪುತ್ತೂರು: ಬಿಜೆಪಿ ನಾಯಕರಿಬ್ಬರ ಅವಹೇಳನಕಾರಿ ಬ್ಯಾನರ್ ವಿಚಾರದಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೊಳಗಾಗಿ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಹಿಂದು ಯುವಕರ ಆರೋಗ್ಯವನ್ನು ವಿಚಾರಿಸಲು ಮತ್ತು ಘಟನೆಯ ಕುರಿತಾಗಿ ಮಾಹಿತಿಯನ್ನು ಪಡೆದುಕೊಳ್ಳಲು ಮಾಜಿ ಕೇಂದ್ರ ಸಚಿವ, ವಿಜಯಪುರ ನಗರ ಕ್ಷೇತ್ರದ ಶಾಸಕ ಮತ್ತು ತನ್ನ ನೇರ ನುಡಿಗಳಿಂದಲೇ ಜನಪ್ರಿಯರಾಗಿರುವ ಹಿಂದು ಫೈರ್ ಬ್ರ್ಯಾಂಡ್ ಲೀಡರ್ ಬಸವನ ಗೌಡ ಪಾಟೀಲ ಯತ್ನಾಳ ಅವರು ಇಂದು ಪುತ್ತೂರಿಗೆ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಯತ್ನಾಳ ಅವರು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಇಬ್ಬರು ಹಿಂದು ಯುವಕರ ಆರೋಗ್ಯವನ್ನು ವಿಚಾರಿಸಿದರು ಈ ಸಂದರ್ಭದಲ್ಲಿ ಅವರ ಜೊತೆಗಿದ್ದ ಅರುಣ್ ಕುಮಾರ್ ಪುತ್ತಿಲ ಮತ್ತು ಇತರರ ಒಟ್ಟಾರೆ ಘಟನೆಯ ಮಾಹಿತಿಯನ್ನು ಯತ್ನಾಳ ಅವರಿಗೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕೆಲವರು ಸ್ಥಳೀಯ ಬಿಜೆಪಿ ನಾಯಕರ ವರ್ತನೆಯ ಬಗ್ಗೆಯೂ ಯತ್ನಾಳ ಅವರಿಗೆ ದೂರು ನೀಡಿದ್ದು ವಿಶೇಷವಾಗಿತ್ತು. ಮಾತ್ರವಲ್ಲದೇ ಇಲ್ಲಿನ ಮಾಜಿ ಶಾಸಕರು ಬಿಜೆಪಿಯವರೇ ಆಗಿದ್ದರೂ ಇದುವೆರೆಗೂ ಆಸ್ಪತ್ರೆಗೆ ಬಂದಿಲ್ಲ ಎಂದು ಹಿಂದು ಕಾರ್ಯಕರ್ತರು ದೂರಿದರು.

ಪೊಲೀಸರ ಏಟಿನಿಂದಾಗಿ ಯುವಕರಿಗೆ ಆಗಿರುವ ಗಾಯಗಳನ್ನು ಸ್ವತಃ ಪುತ್ತಿಲ ಅವರೇ ಯತ್ನಾಳ ಅವರಿಗೆ ವಿವರಿಸಿ ಇನ್ನು ಮುಂದೆ ಈ ಯುವಕರ ಭವಿಷ್ಯದ ಗತಿಯೇನು ಎಂದು ಮರುಗಿದರು. ‘ಇವರು ಯಾವುದೇ ರಾಲಕೀಯ ಪಕ್ಷದಲ್ಲಿ ಇರದವರು, ಇವರೆಲ್ಲಾ ಕೇವಲ ಹಿಂದುತ್ವಕ್ಕಾಗಿ ಕೆಲಸ ಮಾಡ್ತಿದ್ದವರು – ಇವತ್ತು ಅಂತವರನ್ನೇ ಗುರಿಯಾಗಿಸಿ ದೌರ್ಜನ್ಯ ನಡೆಸಲಾಗಿದೆ’ ಎಂದು ಶ್ರೀಕೃಷ್ಣ ಉಪಾಧ್ಯಾಯ ಅವರು ವಿವರಿಸಿದರು.


‘ಮೊನ್ನೆಯ ಚುನಾವಣೆಯಲ್ಲಿ ಬಿಜೆಪಿಗೆ ಕೆಲಸ ಮಾಡಿದ್ದಾರೆ, ಆದರೆ ಇವರು ನಮ್ಮ ಪರವಾಗಿ ಕೆಲಸ ಮಾಡಿದ್ದಾರೆ ಎಂಬ ಒಂದೇ ಕಾರಣಕ್ಕಾಗಿ ಹೀಗೆ ಮಾಡಿದ್ದಾರೆ. ನಮ್ಮ ಮನವಿ ಇಷ್ಟೇ ಇವರಿಗೆ ನ್ಯಾಯ ಸಿಗ್ಬೇಕು, ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿಗಳ ಪರಿಹಾರ ಕೊಡಿಸ್ಬೇಕು ಮತ್ತು ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು, ಹಾಗೆ ನೀವು ಪ್ರಯತ್ನಿಸ್ಬೇಕು..’ ಎಂದು ಪುತ್ತಿಲ ಅವರು ಗದ್ಗದಿತರಾಗಿ ಯತ್ನಾಳ ಅವರಲ್ಲಿ ಕೈಮುಗಿದು ಪ್ರಾರ್ಥಿಸಿಕೊಂಡರು.

ಗಾಯಾಳು ಯುವಕ ತನ್ನ ಮೇಲಾದ ದೌರ್ಜನ್ಯದ ಕುರಿತಾಗಿ ಯತ್ನಾಳ ಅವರಿಗೆ ವಿವರಿಸಿದರು. ‘ನಮಗೆ ಮೇಲಿನಿಂದ ಪ್ರೆಶರ್ ಇದೆ..ಕಾಲ್ ಬರ್ತಾ ಇದೆ..’ ಅಂತ ಪೊಲೀಸರು ಮಾತಾಡಿಕೊಳ್ತಿದ್ರು ಎಂಬ ವಿಚಾರವನ್ನು ಯತ್ನಾಳ ಅವರ ಗಮನಕ್ಕೆ ಗಾಯಾಳು ಯುವಕ ತಂದಿದ್ದಾರೆ.

ಪುತ್ತಿಲ ಮತ್ತು ಹಿಂದು ಕಾರ್ಯಕರ್ತರು ಮತ್ತು ಸಂತ್ರಸ್ತ ಯುವಕನ ಮಾತುಗಳನ್ನು ಮೌನವಾಗಿಯೇ ಕೇಳಿಸ್ಕೊಂಡ ಯತ್ನಾಳ ಅವರು ಬಳಿಕ ಈ ಪ್ರಕರಣದಲ್ಲಿ ನೊಂದವರಿಗೆ ನ್ಯಾಯ ದೊರಕಿಸಿಕೊಡಲು ತನ್ನಿಂದಾಗುವ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ತಲೆಯಾಡಿಸಿ ಉತ್ತರಿಸಿ ಭರವಸೆ ತುಂಬಿದ್ದಾರೆ.

ಒಟ್ಟಿನಲ್ಲಿ ಪುತ್ತೂರಿನಲ್ಲಿ ಹಿಂದು ಯುವಕರ ಮೇಲೆ ಪೊಲೀಸ್ ದೌರ್ಜನ್ಯ ಪ್ರಕರಣ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದು ಇನ್ನು ಯಾವ ಮಗ್ಗುಲು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಪುತ್ತೂರಿನಲ್ಲಿ ನಾಳೆ ರಮ್ಯ-ನಿಕೇತ್ ರಾಜ್ ಜೋಡಿ ಮಾಡಲಿದೆ ಮೋಡಿ -ಅಶೋಕ್ ರೈ ಪರ ಮತಯಾಚನೆ

Posted by Vidyamaana on 2023-05-07 09:17:33 |

Share: | | | | |


ಪುತ್ತೂರಿನಲ್ಲಿ ನಾಳೆ ರಮ್ಯ-ನಿಕೇತ್ ರಾಜ್ ಜೋಡಿ ಮಾಡಲಿದೆ ಮೋಡಿ -ಅಶೋಕ್ ರೈ ಪರ ಮತಯಾಚನೆ

ಪುತ್ತೂರು: ಖ್ಯಾತ ಚಲನಚಿತ್ರ ನಟಿ ರಮ್ಯ ಮತ್ತು ನಿಕೇತ್ ರಾಜ್ ಮೌರ್ಯ ಅವರು ನಾಳೆ ನಡೆಯುವ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರ ರೋಡ್ ಶೋ ದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 2.30ರಿಂದ ಸಂಜೆ 5ರವರೆಗೆ ಬೋಳುವಾರು ವೃತ್ತದಿಂದ ಆರಂಭಗೊಂಡು ದರ್ಬೆ ವೃತ್ತದವರೆಗೆ ಬೃಹತ್ ರೋಡ್ ಶೋ ನಡೆಯಲಿದೆ. ಖ್ಯಾತ ಚಲನಚಿತ್ರ ನಟಿ, ರಮ್ಯಾ ಮತ್ತು ಖ್ಯಾತ ವಾಗಿ ನಿಕೇತ್ ರಾಜ್ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದು, ಅಶೋಕ್ ಕುಮಾರ್ ರೈ ಪರ ಮತ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು ಈಗಾಗಲೇ ಕ್ಷೇತ್ರದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಪುತ್ತೂರಿನಲ್ಲಿ ಯುವತಿಗೆ ಚೂರಿ ಇರಿತ : ಯುವತಿ ಮೃತ್ಯು

Posted by Vidyamaana on 2023-08-24 10:32:19 |

Share: | | | | |


ಪುತ್ತೂರಿನಲ್ಲಿ ಯುವತಿಗೆ ಚೂರಿ ಇರಿತ :  ಯುವತಿ ಮೃತ್ಯು

ಪುತ್ತೂರು: ಚೂರಿ ಇರಿತಗೊಳಗಾಗಿ ಗಂಭೀರ ಗಾಯಗೊಂಡ ಯುವತಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.


ಯುವತಿಯನ್ನು ಅಳಿಕೆ ಮೂಲದ ಗೌರಿ ಎಂದು ಹೇಳಲಾಗಿದೆ.


ಆರೋಪಿ ಪದ್ಮರಾಜ್ ಎಂಬಾತನನ್ನು ಬಂಧಿಸುವಲ್ಲಿ‌ ಪೊಲೀಸರು ಯಶಸ್ವಿಯಾದ ಬೆನ್ನಲ್ಲೇ, ಯುವತಿ ಕೊನೆಯುಸಿರೆಳೆದಿದ್ದಾಳೆ.


ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಹಿಂಬದಿಯಲ್ಲಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಬಳಿಯ ದ್ವಾರದಲ್ಲಿ ಘಟನೆ ನಡೆದಿದೆ.



Leave a Comment: