ಪೊಲೀಸರಿಂದ ಎಸ್ಕೆಪ್ ಆಗಲು ಹೋಗಿ ನೀರುಪಾಲಾದ ಇಬ್ಬರ ರಕ್ಷಣೆ : ಐವರು ನಾಪತ್ತೆ

ಸುದ್ದಿಗಳು News

Posted by vidyamaana on 2024-07-03 10:25:40 |

Share: | | | | |


ಪೊಲೀಸರಿಂದ ಎಸ್ಕೆಪ್ ಆಗಲು ಹೋಗಿ ನೀರುಪಾಲಾದ ಇಬ್ಬರ ರಕ್ಷಣೆ : ಐವರು ನಾಪತ್ತೆ

ವಿಜಯಪುರ: ಇಸ್ಪೀಟ್ ಆಡುವಾಗ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಎಸ್ಕೇಪ್ ಆಗಲು ಹೋಗಿ ತೆಪ್ಪ ಮಗುಚಿದ ಘಟನೆ ನಿನ್ನೆ ಬಳೂತಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ. ಅಲ್ಲಿನ ಆಲಮಟ್ಟಿ ಜಲಾಶಯದ ಕೊಲ್ಹಾರ ಬಳಿಯ ಕೃಷ್ಣಾ ನದಿ ಹಿನ್ನೀರು ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಎಂಟು ಜನ ತೆಪ್ಪದಲ್ಲಿ ಕೃಷ್ಣಾ ನದಿಯ ಮೂಲಕ ಎಸ್ಕೇಪ್ ಆಗುವ ವೇಳೆ ದುರಂತ ನಡೆದಿದೆ. ಇನ್ನು, ಮೀನುಗಾರರು ಹಾಗೂ ಸ್ಥಳೀಯರ ನೆರವಿನೊಂದಿಗೆ ಇಬ್ಬರ ರಕ್ಷಣೆ ಮಾಡಲಾಗಿದ್ದು ಇಬ್ಬರ ಇಬ್ಬರ ಮೃತದೇಹ ಸಿಕ್ಕಿದೆ.

ಪುಂಡಲೀಕ ಯಂಕಂಚಿ (35), ಮಹಮ್ಮದ್ ತೈಹದ್ ಚೌಧರಿ(45) ಸಾವನ್ನಪ್ಪಿದ್ದಾರೆ. ಸಚಿನ್ ಕಟಬರ್, ಫಾರೂಕ್ ಅಮದ ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಎಂಟು ಜನ ಕೊಲ್ಹಾರ ಪಟ್ಟಣದವರಾಗಿದ್ದು, ನೀರುಪಾಲಾದವರು ದಶರಥ( 58),ಮೈಬೂಬ್ ವಾಲಿಕಾರ (35), ರಫೀಕ್ ಬಾಂಬೆ ,(40), ರಫೀಕ ಜಾಲಗಾರರಿಗಾಗಿ(48) ಹುಡುಕಾಟ ನಡೆಯುತ್ತಿದೆ.

 Share: | | | | |


ಪುತ್ತೂರು ಪೇಟೆಡ್ ಇಡೀ ಕರೆಂಟ್ ಇಜ್ಜಿಗೆ

Posted by Vidyamaana on 2023-11-04 04:48:05 |

Share: | | | | |


ಪುತ್ತೂರು ಪೇಟೆಡ್ ಇಡೀ ಕರೆಂಟ್ ಇಜ್ಜಿಗೆ


ಪುತ್ತೂರು : ನಿರ್ವಹಣೆ ಮತ್ತು ತುರ್ತು ಕಾಮಗಾರಿ ನಿಮಿತ್ತ 110/33/11 ಕೆವಿ ಪುತ್ತೂರು ವಿದ್ಯುತ್‌ ಕೇಂದ್ರದಿಂದ ಹೊರಡುವ ದರ್ಬೆ ಫೀಡರ್‌ನಲ್ಲಿ ನ.4ರಂದು ಪೂರ್ವಾಹ್ನ ಗಂಟೆ 10 ರಿಂದ ಅಪರಾಹ್ನ 5 ರವರೆಗೆ ವಿದ್ಯುತ್‌ ನಿಲುಗಡೆ ಮಾಡಲಾಗುವುದು. ಆದುದರಿಂದ 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್‌ ಸರಬರಾಜಾಗುವ ಹಾರಾಡಿ, ಚಿಕ್ಕಪುತ್ತೂರು, ನೆಲ್ಲಿಕಟ್ಟೆ, ಕೆಎಸ್‌ಆರ್‌ಟಿಸಿ ಬಸ್‌ ಸ್ಟ್ಯಾಂಡ್, ಕಲ್ಲಾರೆ, ದರ್ಬೆ ಮತ್ತು ಏಳ್ಳುಡಿ ಪರಿಸರದ ವಿದ್ಯುತ್‌ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ

ಸೇಡಿಯಾಪು: ಅಪಘಾತದಿಂದ ಮೃತಪಟ್ಟ ಕುಟುಂಬಕ್ಕೆ ಶಾಸಕರಿಂದ ಸಹಾಯಧನ

Posted by Vidyamaana on 2023-08-08 01:29:06 |

Share: | | | | |


ಸೇಡಿಯಾಪು: ಅಪಘಾತದಿಂದ ಮೃತಪಟ್ಟ ಕುಟುಂಬಕ್ಕೆ ಶಾಸಕರಿಂದ ಸಹಾಯಧನ

ಪುತ್ತೂರು;  ಕೆಲವು ದಿನಗಳ ಹಿಂದೆ ಕೆಮ್ಮಾಯಿ ಪೆಟ್ರೋಲ್ ಬಂಕ್ ಬಳಿ ಬೈಕ್ ಸ್ಕಿಡ್ ಆಗಿ ಮೃತಪಟ್ಟಿದ್ದ ಸೇಡಿಯಾಪು ನಿವಾಸಿ ಚೈತ್ರೇಶ್ ರವರ ಕುಟುಂಬಕ್ಕೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ಸಹಾಯಧನವನ್ನು ವಿತರಿಸಿದರು.

ಅಪಘಾತದಿಂದ ಮೃತಪಟ್ಟ ಚೈತ್ರೇಶ್ ರವರ ತಾಯಿ ಮಂಜುಳಾ ಅವರಿಗೆ ಶಾಸಕರು ರೂ. ೨೫ ಸಾವಿರ ಮೊತ್ತವನ್ನು ವ್ಯಯುಕ್ತಿಕ ನೆಲೆಯಲ್ಲಿ ವಿತರಿಸಿದರು. ಚೈತ್ರೇಶ್ ಮನೆಗೆ ಭೇಟಿ ನೀಡಿದ್ದ ಶಾಸಕರು ಅವರ ಕುಟುಂಬದ ಆರ್ಥಿಕ ಸ್ಥಿತಿಗತಿಯನ್ನು ಕಂಡು ತನ್ನ ವ್ಯಯುಕ್ತಿಕ ನೆಲೆಯಲ್ಲಿ ಸಹಾಯ ಮಾಡುವುದಾಗಿ ಹೇಳಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಇಂಟಕ್ ಅಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ಸಹಿತ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಪುತ್ತೂರಿನ ರೀಮಾ ಪೂಟ್ ವೇರ್ ಮಾಲಕ ಖಾಸೀಂ ನಿಧನ

Posted by Vidyamaana on 2023-10-05 20:33:27 |

Share: | | | | |


ಪುತ್ತೂರಿನ ರೀಮಾ ಪೂಟ್ ವೇರ್ ಮಾಲಕ ಖಾಸೀಂ ನಿಧನ


ಪುತ್ತೂರು: ಇಲ್ಲಿನ ಪಡೀಲ್ ನಿವಾಸಿ, ರೀಮಾ ಪುಟ್ ವೇರ್ ಮಾಲಕ ಖಾಸೀಂ ಅವರು ಹೃದಯಾಘಾತದಿಂದ ನಿಧನರಾದರು.

ನಾಳೆ (ಅ. 6) ಖಾಸಿಂ ಅವರ ಮನೆಯಲ್ಲಿ ಮೌಲೀದ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದಕ್ಕೆ ಆಮಂತ್ರಿಸಲು ನೆರೆಹೊರೆ, ಸಂಬಂಧಿಕರ ಮನೆಗೆ ತೆರಳುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರ ಸಲಹೆಯಂತೆ ಮಂಗಳೂರಿಗೆ ಕರೆದುಕೊಂಡು ಹೋಗುವ ದಾರಿಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಇವರು ಹಲವಾರು ವರ್ಷಗಳ ಹಿಂದೆ ಪುತ್ತೂರಿನಲ್ಲಿ ಕಟ್ಲೇರಿ ಅಂಗಡಿ ವ್ಯಾಪಾರಸ್ತರಾಗಿದ್ದ ಮರ್ಹೂಮ್ ಇಸ್ಮಾಯಿಲ್ ಅವರ ಮಗ. ಖಾಸೀಂ ಅವರು ಪುತ್ತೂರಿನ  ಶ್ರೀಧರ ಭಟ್ ಬ್ರದರ್ಸ್ ಮೆಡಿಕಲ್‌ ಶಾಪ್ ನ ಮುಂಭಾಗ ರೀಮಾ ಪುಟ್ ವೇರ್ ನಡೆಸುತ್ತಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಮಂಗಳೂರಿನಲ್ಲಿ ಭವಾನಿ ಬಸ್ ಮಾಲಕ ಪ್ರಜ್ವಲ್ ಆತ್ಮಹತ್ಯೆ

Posted by Vidyamaana on 2024-02-28 16:48:11 |

Share: | | | | |


ಮಂಗಳೂರಿನಲ್ಲಿ ಭವಾನಿ ಬಸ್ ಮಾಲಕ ಪ್ರಜ್ವಲ್ ಆತ್ಮಹತ್ಯೆ

ಮಂಗಳೂರು, ಫೆ.28: ಮಂಗಳೂರಿನಲ್ಲಿ ಖಾಸಗಿ ಬಸ್‌ ವ್ಯವಹಾರ ನೋಡಿಕೊಳ್ಳುತ್ತಿದ್ದ ನಗರದ ಬಜಾಲ್‌ ನಿವಾಸಿ ಪ್ರಜ್ವಲ್‌ ಡಿ. (35) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಇವರು ಭವಾನಿ ಬಸ್‌ನ ಮಾಲಕರಾಗಿದ್ದ ದಿ. ದೇವೇಂದ್ರ ಅವರ ಎರಡನೇ ಪುತ್ರ. ಮಂಗಳವಾರ ಬೆಳಗ್ಗೆ ಜೆ.ಎಂ. ರೋಡ್‌ನ‌ಲ್ಲಿರುವ ಸ್ವಗೃಹದಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.


ತನ್ನ ಸಹೋದರನ ಜೊತೆ ಸೇರಿ ಪ್ರಜ್ವಲ್‌ ಬಸ್ಸಿನ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಬ್ಯಾಂಕ್ ಸಾಲ ಹೊಂದಿದ್ದ ಇವರಿಗೆ ಬ್ಯಾಂಕ್‌ನವರು ಕಿರುಕುಳ ನೀಡುತ್ತಿದ್ದರೆಂಬ ಆರೋಪ ಇದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರು ಪತ್ನಿ ಮತ್ತು ನಾಲ್ಕು ವರ್ಷದ ಮಗುವನ್ನು ಅಗಲಿದ್ದಾರೆ.

ಬಂಟ್ವಾಳ: ಬಿಜೆಪಿ ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸುತ್ತಿದ್ದ ಪ್ರವೀಣ್ ಹೃದಯಾಘಾತದಿಂದ ಮೃತ್ಯು..!!!

Posted by Vidyamaana on 2023-05-05 11:57:17 |

Share: | | | | |


ಬಂಟ್ವಾಳ: ಬಿಜೆಪಿ ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸುತ್ತಿದ್ದ ಪ್ರವೀಣ್ ಹೃದಯಾಘಾತದಿಂದ ಮೃತ್ಯು..!!!

ಪುಂಜಾಲಕಟ್ಟೆ: ಮನೆ, ಮನೆ ಚುನಾವಣಾ ಪ್ರಚಾರಕ್ಕೆಂದು ತೆರಳಿದ್ದ ಬಿಜೆಪಿ ಕಾರ್ಯಕರ್ತರೋರ್ವರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮೇ.5ರ ಶುಕ್ರವಾರ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಲಾಯಿ ಎಂಬಲ್ಲಿ ಸಂಭವಿಸಿದೆ.ವೃತ್ತಿಯಲ್ಲಿ ಛಾಯಾಗ್ರಾಹಕರಾಗಿರುವ ಇಲ್ಲಿನ ನಿವಾಸಿ ಪ್ರವೀಣ್ ನಾಯಕ್( 45) ಮೃತಪಟ್ಟವರಾಗಿದ್ದಾರೆ.ಪ್ರವೀಣ್ ಮತ್ತು ತಂಡ ಅವರ ನಿವಾಸದ ಪರಿಸರದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪರ ಮನೆ ಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದಾಗ ಮಧ್ಯಾಹ್ನ ಸುಮಾರು 1.30 ಗಂಟೆಯ ಹೊತ್ತಿಗೆ ಎದೆನೋವೆಂದು ಕುಸಿದು ಬಿದ್ದಿದ್ದರು. ತತ್ ಕ್ಷಣ ಅವರನ್ನು ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರಕ್ಕೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು.

ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.ಮುಲ್ಕಾಜೆ ಮಾಡದಲ್ಲಿ ಪ್ರವೀಣ್ ಡಿಜಿಟಲ್ ಸ್ಟುಡಿಯೋ ನಡೆಸುತ್ತಿದ್ದ ಅವರು ಸೌಮ್ಯ ವ್ಯಕ್ತಿತ್ವದಿಂದ ಜನಾನುರಾಗಿಯಾಗಿದ್ದರು.

ತರೀಕೆರೆಯಲ್ಲಿ ಮೈತ್ರಿ ಅಭ್ಯರ್ಥಿಗಳದ ಡಾ. ಧನಂಜಯ ಸರ್ಜಿ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್. ಎಲ್. ಭೋಜೇಗೌಡರಪರ ಮತಯಾಚನೆ ಮತ್ತು ಪೂರ್ವಭಾವಿ ಸಭೆ

Posted by Vidyamaana on 2024-05-26 14:28:46 |

Share: | | | | |


ತರೀಕೆರೆಯಲ್ಲಿ ಮೈತ್ರಿ ಅಭ್ಯರ್ಥಿಗಳದ ಡಾ. ಧನಂಜಯ ಸರ್ಜಿ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್. ಎಲ್. ಭೋಜೇಗೌಡರಪರ ಮತಯಾಚನೆ ಮತ್ತು ಪೂರ್ವಭಾವಿ ಸಭೆ

ತರೀಕೆರೆ : ವಿಧಾನ ಪರಿಷತ್ ನೈರುತ್ಯ ಪದವಿಧರ ಮತ್ತು ನೈರುತ್ಯ ಶಿಕ್ಷಕರ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ತರೀಕೆರೆ ಮಂಡಲದ ವತಿಯಿಂದ ಇಲ್ಲಿನ ಅರಮನೆ ಹೋಟೆಲ್ ಸಭಾಂಗಣದಲ್ಲಿ ಬಿಜೆಪಿ ಕಾರ್ಯಕರ್ತರ ಮತ್ತು ಚುನಾವಣಾ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು. 

ಸಭೆಯಲ್ಲಿ ತರೀಕೆರೆ ಮಂಡಲದ ಬಿಜೆಪಿ ವಾರ್ಡ್ ಅಧ್ಯಕ್ಷರು , ಬೂತ್ ಅಧ್ಯಕ್ಷರು, ಮಹಾಶಕ್ತಿ ಕೇಂದ್ರದ ಪ್ರಮುಖರಿಗೆ ಚುನಾವಣೆಯ ರೂಪುರೇಷೆಗಳನ್ನು ತಿಳಿಸಿ ತಮ್ಮ ವ್ಯಾಪ್ತಿಯ ಮಹಾಶಕ್ತಿ ಕೇಂದ್ರಗಳಲ್ಲಿ ಪದವೀಧರ ಮತದಾರರನ್ನು ತಲುಪಿ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್. ಎಲ್. ಭೋಜೇಗೌಡರ ಪರವಾಗಿ ಮತಯಾಚಿಸಿ, ಗೆಲ್ಲಿಸುವಂತೆ ಮನವಿ ಮಾಡಲಾಯಿತು. 



Leave a Comment: