ಪೊಲೀಸರಿಂದ ಎಸ್ಕೆಪ್ ಆಗಲು ಹೋಗಿ ನೀರುಪಾಲಾದ ಇಬ್ಬರ ರಕ್ಷಣೆ : ಐವರು ನಾಪತ್ತೆ

ಸುದ್ದಿಗಳು News

Posted by vidyamaana on 2024-07-03 10:25:40 |

Share: | | | | |


ಪೊಲೀಸರಿಂದ ಎಸ್ಕೆಪ್ ಆಗಲು ಹೋಗಿ ನೀರುಪಾಲಾದ ಇಬ್ಬರ ರಕ್ಷಣೆ : ಐವರು ನಾಪತ್ತೆ

ವಿಜಯಪುರ: ಇಸ್ಪೀಟ್ ಆಡುವಾಗ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಎಸ್ಕೇಪ್ ಆಗಲು ಹೋಗಿ ತೆಪ್ಪ ಮಗುಚಿದ ಘಟನೆ ನಿನ್ನೆ ಬಳೂತಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ. ಅಲ್ಲಿನ ಆಲಮಟ್ಟಿ ಜಲಾಶಯದ ಕೊಲ್ಹಾರ ಬಳಿಯ ಕೃಷ್ಣಾ ನದಿ ಹಿನ್ನೀರು ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಎಂಟು ಜನ ತೆಪ್ಪದಲ್ಲಿ ಕೃಷ್ಣಾ ನದಿಯ ಮೂಲಕ ಎಸ್ಕೇಪ್ ಆಗುವ ವೇಳೆ ದುರಂತ ನಡೆದಿದೆ. ಇನ್ನು, ಮೀನುಗಾರರು ಹಾಗೂ ಸ್ಥಳೀಯರ ನೆರವಿನೊಂದಿಗೆ ಇಬ್ಬರ ರಕ್ಷಣೆ ಮಾಡಲಾಗಿದ್ದು ಇಬ್ಬರ ಇಬ್ಬರ ಮೃತದೇಹ ಸಿಕ್ಕಿದೆ.

ಪುಂಡಲೀಕ ಯಂಕಂಚಿ (35), ಮಹಮ್ಮದ್ ತೈಹದ್ ಚೌಧರಿ(45) ಸಾವನ್ನಪ್ಪಿದ್ದಾರೆ. ಸಚಿನ್ ಕಟಬರ್, ಫಾರೂಕ್ ಅಮದ ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಎಂಟು ಜನ ಕೊಲ್ಹಾರ ಪಟ್ಟಣದವರಾಗಿದ್ದು, ನೀರುಪಾಲಾದವರು ದಶರಥ( 58),ಮೈಬೂಬ್ ವಾಲಿಕಾರ (35), ರಫೀಕ್ ಬಾಂಬೆ ,(40), ರಫೀಕ ಜಾಲಗಾರರಿಗಾಗಿ(48) ಹುಡುಕಾಟ ನಡೆಯುತ್ತಿದೆ.

 Share: | | | | |


ಇದು ಏರ್‌ಟೆಲ್‌ನ ಬಂಪ‌ರ್ ಪ್ಲಾನ್: ಕೇವಲ 49 ರೂ. ಗೆ ಅನಿಯಮಿತ ಡೇಟಾ

Posted by Vidyamaana on 2024-03-23 09:39:36 |

Share: | | | | |


ಇದು ಏರ್‌ಟೆಲ್‌ನ ಬಂಪ‌ರ್ ಪ್ಲಾನ್: ಕೇವಲ 49 ರೂ. ಗೆ ಅನಿಯಮಿತ ಡೇಟಾ

      ಟೆಲಿಕಾಂ ಕ್ಷೇತ್ರದಲ್ಲಿನ ಪೈಪೋಟಿ ಮತ್ತು ಜಿಯೋ-ವೊಡಾಫೋನ್ ಐಡಿಯಾಕ್ಕೆ ಟಕ್ಕರ್ ಕೊಡಲು ಏರ್​ಟೆಲ್ ತನ್ನ ರೂ. 49 ಡೇಟಾ ಪ್ಯಾಕ್​ನಲ್ಲಿ ಅನಿಯಮಿತ ಡೇಟಾವನ್ನು ನೀಡುತ್ತಿದೆ. ಈ ಯೋಜನೆಗೆ ಸಂಬಂಧಿಸಿದ ಎಲ್ಲಾ ವಿವರಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.


ಏರ್‌ಟೆಲ್ (Airtel) ಬಳಕೆದಾರರಿಗೊಂದು ಸಂತಸದ ಸುದ್ದಿ. ಏರ್‌ಟೆಲ್ ತನ್ನ ರೂ. 49 ಡೇಟಾ ಪ್ಯಾಕ್ ಅನ್ನು ಬದಲಾಯಿಸಿದೆ. ಈ ಯೋಜನೆಯನ್ನು ರೀಚಾರ್ಜ್ ಮಾಡುವ ಬಳಕೆದಾರರು ಈಗ ಅನಿಯಮಿತ ಡೇಟಾವನ್ನು ಪಡೆಯುತ್ತಾರೆ. ಏರ್‌ಟೆಲ್‌ನ ಈ ಯೋಜನೆಯು ಅಗ್ಗದ ಡೇಟಾ ಪ್ಯಾಕ್ ಆಗಿದೆ.ಟೆಲಿಕಾಂ ಕ್ಷೇತ್ರದಲ್ಲಿನ ಪೈಪೋಟಿ ಮತ್ತು ಜಿಯೋ-ವೊಡಾಫೋನ್ ಐಡಿಯಾಕ್ಕೆ ಟಕ್ಕರ್ ಕೊಡಲು ಏರ್​ಟೆಲ್ ತನ್ನ ರೂ. 49 ಡೇಟಾ ಪ್ಯಾಕ್​ನಲ್ಲಿ ಅನಿಯಮಿತ ಡೇಟಾವನ್ನು ನೀಡುತ್ತಿದೆ. ಈ ಯೋಜನೆಗೆ ಸಂಬಂಧಿಸಿದ ಎಲ್ಲಾ ವಿವರಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.ಏರ್‌ಟೆಲ್‌ನ ರೂ. 49 ಡೇಟಾ ಪ್ಯಾಕ್ ನಿಮಗೆ ಒಂದು ದಿನದ ಮಾನ್ಯತೆಯೊಂದಿಗೆ ಅನಿಯಮಿತ ಡೇಟಾದ ಪ್ರಯೋಜನವನ್ನು ನೀಡುತ್ತದೆ. ಆದರೆ, ಈ ಯೋಜನೆಯಲ್ಲಿ ನೀವು 20GB ವರೆಗೆ ಮಾತ್ರ ಅನಿಯಮಿತ ಡೇಟಾವನ್ನು ಪಡೆಯುತ್ತೀರಿ, ನಂತರ ಇಂಟರ್ನೆಟ್ ವೇಗವು 64 Kbps ಗೆ ಕಡಿಮೆಯಾಗುತ್ತದೆ.

ಅಂದರೆ, ಏರ್‌ಟೆಲ್‌ನ ಈ ಯೋಜನೆಯಲ್ಲಿ 1GB ಡೇಟಾದ ಬೆಲೆ ಸುಮಾರು 2.45 ರೂಪಾಯಿಗಳಾಗಿವೆ.ಏರ್‌ಟೆಲ್‌ನ ರೂ. 49 ಡೇಟಾ ಪ್ಯಾಕ್ ಈ ಹಿಂದೆ 6 GB ಹೈ-ಸ್ಪೀಡ್ ಡೇಟಾವನ್ನು ನೀಡುತ್ತಿತ್ತು. ಈ ಯೋಜನೆಯ ಮಾನ್ಯತೆ ಒಂದೇ ಆಗಿರುತ್ತದೆ. ಈ ಹಿಂದೆಯೂ ಈ ಯೋಜನೆಯು 1 ದಿನದ ವ್ಯಾಲಿಡಿಟಿಯೊಂದಿಗೆ ಲಭ್ಯವಿತ್ತು. ಈಗ ಏರ್‌ಟೆಲ್ ಈ ಯೋಜನೆಯ ಪ್ರಯೋಜನಗಳನ್ನು ಹೆಚ್ಚಿಸಿ ಹೆಚ್ಚಿನ ಡೇಟಾವನ್ನು ನೀಡುತ್ತಿದೆ.ರೂ. 49 ಡೇಟಾ ಪ್ಯಾಕ್‌ನಲ್ಲಿ ಬದಲಾವಣೆಯ ನಂತರ, ಏರ್‌ಟೆಲ್ ಅಂತಹ ಎರಡು ಯೋಜನೆಗಳನ್ನು ಹೊಂದಿದೆ. ಇದರಲ್ಲಿ ಬಳಕೆದಾರರು ಅನಿಯಮಿತ ಇಂಟರ್ನೆಟ್ ಅನ್ನು ಪಡೆಯುತ್ತಾರೆ.

 ಇದನ್ನು ಹೊರತುಪಡಿಸಿ, ನೀವು ಏರ್‌ಟೆಲ್‌ನ ರೂ. 99 ಡೇಟಾ ಪ್ಯಾಕ್‌ನೊಂದಿಗೆ ಅನಿಯಮಿತ ಡೇಟಾವನ್ನು ಪಡೆಯುತ್ತೀರಿ. ರೂ. 99 ಪ್ಲಾನ್‌ನ ವ್ಯಾಲಿಡಿಟಿ 2 ದಿನಗಳು.

ನರಿಮೊಗರು ಕಾಂಗ್ರೆಸ್ ವಲಯಾಧ್ಯಕ್ಷ ಪ್ರಕಾಶ್ ನಿಧನ

Posted by Vidyamaana on 2024-06-11 20:34:39 |

Share: | | | | |


ನರಿಮೊಗರು ಕಾಂಗ್ರೆಸ್ ವಲಯಾಧ್ಯಕ್ಷ ಪ್ರಕಾಶ್ ನಿಧನ

ಪುತ್ತೂರು: ನರಿಮೊಗರು ಕಾಂಗ್ರೆಸ್ ವಲಯ ಅಧ್ಯಕ್ಷ ಪ್ರಕಾಶ್ ಪುರುಷರಕಟ್ಟೆ (40 ವ.) ಮಂಗಳವಾರ ಸಂಜೆ ಹೃದಯಾಘಾತದಿಂದ ನಿಧನರಾದರು.

ಸಂಜೆ ಮನೆಯಲ್ಲಿದ್ದಾಗ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಕ್ರಿಸ್ಮಸ್: ಬನ್ನೂರು ಚರ್ಚ್ನಲ್ಲಿ ವಾಳೆವಾರು ಸಾಂಸ್ಕೃತಿಕ ಸ್ಪರ್ಧೆ

Posted by Vidyamaana on 2022-12-16 13:37:29 |

Share: | | | | |


ಕ್ರಿಸ್ಮಸ್: ಬನ್ನೂರು ಚರ್ಚ್ನಲ್ಲಿ ವಾಳೆವಾರು ಸಾಂಸ್ಕೃತಿಕ ಸ್ಪರ್ಧೆ

ಪುತ್ತೂರು: ಬನ್ನೂರು ಸಂತ ಅಂತೋನಿ ಚರ್ಚ್ನಲ್ಲಿ ದ.11 ರಂದು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಾಳೆವಾರು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.

ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೆ, ಹೆಣ್ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ, ಯುವಕರಿಗೆ, ವಾಲಿಬಾಲ್, ತ್ರೋಬಾಲ್, ಹಗ್ಗಜಗ್ಗಾಟ, ಲಿಂಬೆ ಚಮಚ ಓಟ, ಬಲೂನ್ ಹೊಡೆಯುವುದು, ಸ್ಟ್ರಾದ ಸಹಾಯದಿಂದ ಒಂದು ಗ್ಲಾಸಿನಿಂದ ಮತ್ತೊಂದು ಗ್ಲಾಸಿಗೆ ನೀರನ್ನು ಹಾಕುವುದು, ಚೆಂಡು ಪಾಸ್ ಮಾಡುವುದು, ಮದುವೆ ಜೋಡಿಗಳಿಗೆ ಬಲೂನ್ ಹೊಡೆಯುವ ಸ್ಪರ್ಧೆ ಮುಂತಾದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು. ಚರ್ಚ್ ಪ್ರಧಾನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್ರವರು ಸ್ಪರ್ಧಾಕೂಟವನ್ನು ಉದ್ಘಾಟಿಸಿ ವಾಳೆಯ ಸದಸ್ಯರೊಂದಿಗೆ ಆಟದಲ್ಲಿ ತೊಡಗಿಸಿಕೊಂಡರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್, ಕಾರ್ಯದರ್ಶಿ ಸಿರಿಲ್ ವಾಸ್, ವಿವಿಧ ವಾಳೆಯ ಗುರಿಕಾರರು, ಚರ್ಚ್ ಪಾಲನಾ ಸಮಿತಿ ಉಪಸ್ಥಿತರಿದ್ದರು.

ಲವರ್ ಜೊತೆ ಪತ್ನಿಯ ರಾಸಲೀಲೆ - ಕಣ್ಣಾರೆ ಕಂಡ ಪತಿ ಮೇಲೆ ಕಲ್ಲು ಎತ್ತಿಹಾಕಿ ಕೊಲೆ!

Posted by Vidyamaana on 2024-01-14 16:09:48 |

Share: | | | | |


ಲವರ್ ಜೊತೆ ಪತ್ನಿಯ ರಾಸಲೀಲೆ - ಕಣ್ಣಾರೆ ಕಂಡ ಪತಿ ಮೇಲೆ ಕಲ್ಲು ಎತ್ತಿಹಾಕಿ ಕೊಲೆ!

ಬೆಂಗಳೂರು :- ತಮ್ಮ ರಾಸಲೀಲೆ ಕಂಡ ಪತಿಯನ್ನು ರುಬ್ಬುವ ಕಲ್ಲು ಎತ್ತಿ ಹಾಕಿ ಹತ್ಯೆಗೈದು, ಬಳಿಕ ಆಯ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ ಎಂದು ಕಥೆ ಸೃಷ್ಟಿಸಿದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರಿಂದ ಬಂಧಿಸಿದ್ದಾರೆ.ಎಚ್‌ಎಸ್‌ಆರ್‌ ಲೇಔಟ್‌ 2ನೇ ಸೆಕ್ಟರ್‌ನ ನಂದಿನಿ ಬಾಯಿ (22) ಮತ್ತು ಆಕೆಯ ಪ್ರಿಯಕರ ನಿತೀಶ್‌ ಕುಮಾರ್‌ (22) ಬಂಧಿತರು. ಆರೋಪಿಗಳು ಜ.9ರಂದು ರಾತ್ರಿ ವೆಂಕಟರಮಣ ನಾಯಕ್‌ (30) ಎಂಬಾತನ ಮೇಲೆ ರುಬ್ಬುವ ಕಲ್ಲು ಎತ್ತಿ ಹಾಕಿ ಕೊಲೆಗೈದಿದ್ದರು. ಈ ಸಂಬಂಧ ಮೃತನ ತಂದೆ ಲಕ್ಷ್ಮೀ ನಾಯಕ್‌ ಎಂಬುವರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.


ಮದುವೆಯ ಆರಂಭದಲ್ಲಿ ದಂಪತಿ ಅನೋನ್ಯವಾಗಿದ್ದರು. ಆ ಬಳಿಕ ಪತ್ನಿ ನಂದಿನಿ ಸಣ್ಣ-ಪುಟ್ಟ ವಿಚಾರಗಳಿಗೆ ಜಗಳ ತೆಗೆದು ತವರು ಮನೆಗೆ ಹೋಗುತ್ತಿದ್ದಳು. ಅಲ್ಲದೆ, ತನ್ನ ಮೂರು ವರ್ಷದ ಮಗಳನ್ನು ತನ್ನ ತವರು ಮನೆಯಲ್ಲೇ ಬಿಟ್ಟಿದ್ದಳು. ಈ ಮಧ್ಯೆ ತನ್ನ ವಿದ್ಯಾರ್ಥಿ ಜೀವನದ ಗೆಳೆಯನ ಜತೆ ಮೊಬೈಲ್‌ ನಲ್ಲಿ ಹೆಚ್ಚು ಮಾತನಾಡುತ್ತಿದ್ದಳು. ಈ ವಿಚಾರ ತಿಳಿದ ಪತಿ ವೆಂಕಟರಮಣ ಪತ್ನಿ ಜತೆ ಜಗಳ ಮಾಡಿದ್ದ.ಬಳಿಕ ಇಬ್ಬರ ಕುಟುಂಬದ ಹಿರಿಯರು ರಾಜೀಸಂಧಾನ ಮಾಡಿದ್ದರು ಎಂಬುದು ಗೊತ್ತಾಗಿದೆ.


ಪತಿ ಹಾಗೂ ಹಿರಿಯರು ಎಚ್ಚರಿಕೆ ನೀಡಿದರೂ ನಂದಿನಿ, ಪ್ರಿಯಕರ ಜತೆಗಿನ ಮಾತುಕತೆ ಮುಂದುವರಿಸಿದ್ದಳು. ಅಲ್ಲದೆ, ಬೆಂಗಳೂರಿಗೆ ಕರೆಸಿಕೊಂಡು ದೈಹಿಕ ಸಂಪರ್ಕ ಬೆಳೆಸುತ್ತಿದ್ದಳು. ಜ.9ರಂದು ರಾತ್ರಿ 8ರ ಸುಮಾರಿಗೆ ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ರಾಸಲೀಲೆಯಲ್ಲಿ ತೊಡಗಿದ್ದಾಳೆ. ಅದೇ ವೇಳೆ ಪತಿ ವೆಂಕಟರಮಣ ಮನೆಗೆ ಬಂದಿದ್ದು, ಇಬ್ಬರು ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದಾರೆ. ಈ ವೇಳೆ ಮೂವರ ನಡುವೆ ಜೋರು ಜಗಳವಾಗಿದೆ. ಮದ್ಯ ಸೇವಿಸಿ ಬಂದಿದ್ದ ವೆಂಕಟರಮಣನ ಮೇಲೆ ನಿತೀಶ್‌ ಕುಮಾರ್‌ ಹಲ್ಲೆ ನಡೆಸಿ, ಕೆಳಗೆ ಬಿದ್ದಾಗ ಆತನ ತಲೆಗೆ ರುಬ್ಬುವ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಇಬ್ಬರು ಸೆಕ್ಯೂರಿಟಿ ಗಾರ್ಡ್‌ ಕೊಠಡಿಯ ಬಳಿಯ ಶೌಚಾಲಯಕ್ಕೆ ಎಳೆದೊಯ್ದು ಮಲಗಿಸಿದ್ದಾರೆ.ಆರೋಪಿ ನಿತೀಶ್‌ ಕುಮಾರ್‌ ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.


ಆ ನಂತರ ಪೊಲೀಸ್‌ ಸಹಾಯವಾಣಿ 112ಗೆ ಕರೆ ಮಾಡಿದ ನಂದಿನಿ, ಪತಿ ಶೌಚಾಲಯದಲ್ಲಿ ಕಾರು ಜಾರಿ ಬಿದ್ದಿದ್ದಾರೆ ಎಂದು ಕರೆ ಮಾಡಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರಿಗೆ, ವೆಂಕಟರಮಣನ ಮೃತದೇಹ ಗಮನಿಸಿದಾಗ ಬಿದ್ದು ಮೃತಪಟ್ಟಿರಲು ಸಾಧ್ಯವಿಲ್ಲ. ಯಾರೋ ಹಲ್ಲೆ ನಡೆಸಿಯೇ ಮೃತಪಟ್ಟಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿತ್ತು.

ಕಡಬ : ಹೊಳೆಗೆ ಬಿದ್ದು ಕೃಷಿಕ ಕೃಷ್ಣಪ್ಪ ಮೃತ್ಯು

Posted by Vidyamaana on 2023-07-10 16:28:58 |

Share: | | | | |


ಕಡಬ : ಹೊಳೆಗೆ ಬಿದ್ದು ಕೃಷಿಕ ಕೃಷ್ಣಪ್ಪ ಮೃತ್ಯು

ಕಡಬ : ಹೊಳೆನೀರಿಗೆ ಬಿದ್ದು ಕೃಷಿಕ ಸಾವನ್ನಪ್ಪಿರುವ ಘಟನೆ ಕಡಬ ಸಮೀಪದ ಇಚ್ಚಂಪಾಡಿ ಗ್ರಾಮದಲ್ಲಿ ನಡೆದಿದೆ.ಇಚ್ಚಂಪಾಡಿ ಗ್ರಾಮದ ಕುಡಾಲ ನಿವಾಸಿ ಕೃಷ್ಣಪ್ಪ ಗೌಡ(ಕಿಟ್ಟಣ್ಣ) ಮೃತ ದುರ್ದೈವಿ.

ಜು.9ರಂದು ಮಧ್ಯಾಹ್ನ ಇಚ್ಚಂಪಾಡಿಯ ಕೊಕ್ಕೊ ಕಾಡಿನ ಹೊಳೆಬದಿಗೆ ಹೋದವರು ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನೆಯವರು ಹೊಳೆಯಲ್ಲಿ ಹುಡುಕಾಟ ನಡೆಸಿದ್ದ ವೇಳೆ ಅವರ ಚಪ್ಪಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ರಾತ್ರಿ ತನಕ ಹೊಳೆ ಬದಿ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ದೊರೆತಿರಲಿಲ್ಲ.

ಜು.10ರಂದು ಬೆಳಿಗ್ಗೆ ಹೊಳೆಬದಿ ಮತ್ತೆ ಹುಡುಕಾಟ ನಡೆಸಿದಾಗ ಗುಂಡ್ಯಹೊಳೆ ಸೇರುವಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೆಯ್ಯೂರಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

Posted by Vidyamaana on 2024-04-08 15:19:41 |

Share: | | | | |


ಕೆಯ್ಯೂರಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

ಪುತ್ತೂರು: ರಾಜ್ಯದಲ್ಲಿ‌ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಪ್ರತೀ ಕುಟುಂಬಕ್ಕೆ ತಲಾ 30 ಸಾವಿರ ಹಣ ವಿವಿಧ ರೂಪದಲ್ಲಿ ದೊರಕಿದೆ ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಹೇಳಿದರು.

ಅವರು ಕೆಯ್ಯೂರು ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಎಂದಿಗೂ ಜನತೆಗೆ ದ್ರೋಹ ಮಾಡಿಲ್ಲ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಕಾಂಗ್ರೆಸ್ ಎಂದಿಗೂ ಬಡವರ ಹಾಗೂ ನೊಂದವರ ಪರವಾಗಿಯೇ ಕೆಲಸ ಮಾಡಲಿದೆ. ಗ್ಯಾರಂಟಿ ಯೋಜನೆಯನ್ನು ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಜಾರಿ ಮಾಡಿದ್ದೇವೆ. ಗ್ಯಾರಂಟಿ ಫಲಾನುಭವಿಗಳು ಕಾಂಗ್ರೆಸ್ ಗೆ ವೋಟು ಹಾಕುತ್ತಾರೆ ಎಂಬ ಪೀರ್ಣ ನಂಬಿಕೆ ನಮ್ಮಲ್ಲಿದೆ ಎಂದು ಅವರು ಹೇಳಿದರು.



Leave a Comment: