ಶಾಲಾ ಆವರಣದಲ್ಲಿ ಸಾರ್ವಜನಿಕ ಕೃಷ್ಣಾಷ್ಠಮಿ, ಗಣೇಶೋತ್ಸವ, ಹಬ್ಬಗಳ ಆಚರಣೆಗೆ ನಿರ್ಬಂಧ : ಬಿಜೆಪಿ ಆಡಳಿತಾವಧಿಯಲ್ಲೇ ಆದೇಶ

ಸುದ್ದಿಗಳು News

Posted by vidyamaana on 2024-07-24 17:19:41 |

Share: | | | | |


ಶಾಲಾ ಆವರಣದಲ್ಲಿ ಸಾರ್ವಜನಿಕ ಕೃಷ್ಣಾಷ್ಠಮಿ, ಗಣೇಶೋತ್ಸವ, ಹಬ್ಬಗಳ ಆಚರಣೆಗೆ ನಿರ್ಬಂಧ : ಬಿಜೆಪಿ ಆಡಳಿತಾವಧಿಯಲ್ಲೇ ಆದೇಶ

ರಾಜ್ಯದ ಸರಕಾರಿ ಶಾಲೆ ಮತ್ತು ಕಾಲೇಜು ಕ್ಯಾಂಪಸ್‌ ಗಳಲ್ಲಿ ಧಾರ್ಮಿಕ ಆಚರಣೆ ಸೇರಿದಂತೆ ಶೈಕ್ಷಣಿಕೇತರ ಚಟುವಟಿಕೆ ನಡೆಸದಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಇದು ಭಾರೀ ಸಂಚಲನವನ್ನೇ ಹುಟ್ಟುಹಾಕಿದೆ. ಇದರಿಂದ ಸಾರ್ವಜನಿಕ ಕೃಷ್ಣಾಷ್ಟಮಿ, ಗಣೇಶೋತ್ಸವ, ಶಾರದೋತ್ಸವ ಆಚರಣೆಯ ಸಂಘಟಕರು ಗೊಂದಲದಲ್ಲಿದ್ದಾರೆ.

ಬೆಂಗಳೂರು ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಿಂದ 2013ರ ಫೆ.7 ರಂದು ಮತ್ತು 2023ರ ಡಿ.1ರಂದು ರಾಜ್ಯದ ಎಲ್ಲ ಡಿಡಿಪಿಐ ಕಚೇರಿಗಳಿಗೆ ಖಾಸಗಿ ಕಾರ್ಯಕ್ರಮಗಳಿಗೆ ಶಾಲಾ ಕಟ್ಟಡ ಅಥವಾ ಶಾಲಾ ಮೈದಾನ ಅನುಮತಿ ನೀಡಬಾರದೆಂದು ಸುತ್ತೋಲೆ ಬಂದಿತ್ತು. ಈ ಆಧಾರದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಡಿಡಿಪಿಐ ವೆಂಕಟೇಶ್ ಪಟಗಾರ ಅವರು ಜು.16ರಂದು ಜ್ಞಾಪನಾ ಪತ್ರವನ್ನು ಎಲ್ಲ ಬಿಇಒಗಳಿಗೆ ರವಾನಿಸಿದ್ದಾರೆ.

ಜ್ಞಾಪನಾ ಪತ್ರದಲ್ಲಿ ಏನಿದೆ?

ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ, ಶಾಲಾ ಮೈದಾನ ಅಥವಾ ಆವರಣವನ್ನು ಶೈಕ್ಷಣಿಕೇತರ ಚಟುವಟಿಕೆ ಅಥವಾ ಉದ್ದೇಶಕ್ಕೆ ಬಳಸಬಾರದು ಮತ್ತು ಅನುಮತಿಯನ್ನು ನೀಡಬಾರದೆಂದು ಸೂಚಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಸಂಬಂಧಿತ ಶಾಲಾ ಮುಖ್ಯಸ್ಥರೇ ಹೊಣೆಯಾಗುತ್ತಾರೆ ಎಂದು ಜ್ಞಾಪನಾ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಬಿಜೆಪಿಯಿಂದ ಹೋರಾಟ :

ರಾಜ್ಯಾದ್ಯಂತ ಹಲವು ದಶಕಗಳಿಂದ ಶಾಲೆಯ ಕ್ಯಾಂಪಸ್, ಶಾಲಾ ಕಟ್ಟಡದಲ್ಲಿ ಕೃಷ್ಣಾಷ್ಟಮಿ, ಗಣೇಶೋತ್ಸವ, ಶಾರದೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಈಗ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ರಾಜಕೀಯ ಮಾಡಲು ಹೊರಟಿದ್ದು, ಶಾಲಾ ವಠಾರದಲ್ಲಿ ಧಾರ್ಮಿಕ ಆಚರಣೆ ನಡೆಸದಂತೆ ಆದೇಶ ಹೊರಡಿಸಿದೆ. ಇದು ಖಂಡನೀಯವಾಗಿದ್ದು, ಈ ಹಿಂದೆ ನಿಗದಿತ ಸ್ಥಳದಲ್ಲೇ ಕಾರ್ಯಕ್ರಮ ಆಯೋಜಿಸುತ್ತೇವೆ. ಇದನ್ನು ತಡೆಯಲು ಬಂದರೆ ಸುಮ್ಮನಿರಲ್ಲ ಎಂದು ಬಿಜೆಪಿ ತಾಕೀತು ಮಾಡಿದೆ. ಇದೇ ರೀತಿ ಜಿಲ್ಲಾದ್ಯಂತ ಹೋರಾಟ ನಡೆಯುತ್ತಿದೆ.

ಬಿಜೆಪಿ ಸರಕಾರದಲ್ಲೇ ಆದೇಶ :

2013ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದು, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಶಿಕ್ಷಣೇತರ ಚಟುವಟಿಕೆ ನಡೆಸದಂತೆ ಆದೇಶ ಹೊರಡಿಸಿತ್ತು ಆದೇ ಆದೇಶದಡಿ ನಿಯಮದಂತೆ ದಕ್ಷಿಣ ಕನ್ನಡ ಶಿಕ್ಷಣಾಧಿಕಾರಿಯವರು ಬಿಇಒ ಮೂಲಕ ಜ್ಞಾಪನಾ ಪತ್ರ ಹೊರಡಿಸಿದ್ದಾರೆ. ಆದರೆ ಅಧಿಕಾರದಲ್ಲಿದ್ದಾಗ ಆದೇಶ ಹೊರಡಿಸಿದ್ದ ಬಿಜೆಪಿಯವರೇ ಈಗ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದರಿಂದ ಈ ವಿವಾದವೂ ಜಿಲ್ಲೆಯಲ್ಲಿ ದಿನ ಹೋದಂತೆ ರಾಜಕೀಯ ಬಣ್ಣ ಪಡೆದು ಕಾವೇರತೊಡಗಿದೆ.

 Share: | | | | |


ವಿಟ್ಲ ಮೋತಿ ಸಿಟಿ ಕಟ್ಟಡದಲ್ಲಿ ಮೆಹಂದಿ ತರಗತಿ ಉದ್ಘಾಟನೆ

Posted by Vidyamaana on 2024-07-02 22:10:24 |

Share: | | | | |


ವಿಟ್ಲ ಮೋತಿ ಸಿಟಿ ಕಟ್ಟಡದಲ್ಲಿ ಮೆಹಂದಿ ತರಗತಿ ಉದ್ಘಾಟನೆ

ವಿಟ್ಲ: ಮೆಹಂದಿಗೆ ಪ್ರಾಚೀನ ಕಾಲದ ಇತಿಹಾಸ ಇದ್ದು ಅದೊಂದು ಕೈಯಿಂದ ಕೈಯಲ್ಲಿ ಅರಳುವ ಅದ್ಬುತ ಕಲೆಯಾಗಿದೆ. ವಿದ್ಯಾರ್ಥಿನಿಯರು, ಯುವತಿಯರು ಹಾಗೂ ಗೃಹಣಿಯರು ಮೆಹಂದಿ ಬಿಡಿಸುವುದು ಕಲಿಯುವ ಮೂಲಕ ಕುಟುಂಬಕ್ಕೆ ಆರ್ಥಿಕ ನೆರವಾಗಬಹುದು ಎಂದು ವಿಟ್ಲದ ದಂತ ವೈದ್ಯೆ ಡಾ. ಕೌಲತ್ ಬಿ.ಎಂ. ಹೇಳಿದರು. 

ವಿಟ್ಲ ಸ್ಕೂಲ್ ರೋಡಿನ ಮೋತಿ ಸಿಟಿ ಕಟ್ಟಡದಲ್ಲಿ ಇತ್ತೀಚಿಗೆ ಆರಂಭಗೊಂಡ ದಿ ನ್ವಾಲೇಜ್ ಹಬ್ ಟ್ಯೂಷನ್ ಆ್ಯಂಡ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ಮೆಹಂದಿ ತರಗತಿಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. 


ಕಾರವಾರ: ರೈಲಲ್ಲಿ ಮಲಗಿದ್ದ ಮಹಿಳೆಯ ಸಮ್ಮುಖ ಹಸ್ತಮೈಥುನ,ಕಿರಾತಕನ ಬೆಂಡೆತ್ತಿದ್ದ ರೈಲ್ವೇ ಪೊಲೀಸ್.!

Posted by Vidyamaana on 2024-01-04 09:37:54 |

Share: | | | | |


ಕಾರವಾರ: ರೈಲಲ್ಲಿ ಮಲಗಿದ್ದ ಮಹಿಳೆಯ ಸಮ್ಮುಖ ಹಸ್ತಮೈಥುನ,ಕಿರಾತಕನ ಬೆಂಡೆತ್ತಿದ್ದ ರೈಲ್ವೇ ಪೊಲೀಸ್.!

ಕಾರವಾರ : ರೈಲಿನಲ್ಲಿ ಮಹಿಳೆಯ ಮಂದೆ ಲೈಂಗಿಕ ಚೇಷ್ಟೆಗಳನ್ನು ನಡೆಸಿ ಹಸ್ತಮೈಥುನ ಮಾಡುತ್ತಿದ್ದ ಯುವಕನನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ.ಮಂಗಳವಾರ ಪೂರ್ಣಾ ಎಕ್ಸ್‌ಪ್ರೆಸ್‌ನ ಸ್ಲೀಪರ್ ಕೋಚ್‌ನಲ್ಲಿ ಈ ಅಹಿತಕ ಘಟನೆ ನಡೆದಿದೆ. ಮಹಿಳೆ ತನ್ನ ಸ್ನೇಹಿತರೊಂದಿಗೆ ಕೇರಳದಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದರು.ರೈಲು ಗೋಕರ್ಣ ನಿಲ್ದಾಣಕ್ಕೆ ಬಂದಾಗ ಈ ಘಟನೆ ನಡೆದಿದೆ. 42 ವರ್ಷದ ವ್ಯಕ್ತಿಯೊಬ್ಬ ಎದುರುಗಡೆ ಮಲಗಿದ್ದ 22 ವರ್ಷದ ಕೇರಳದ ಮಹಿಳೆಯ ಮುಂದೆ ತನ್ನ ಗುಪ್ತಾಂಗವನ್ನು ಪ್ರದರ್ಶಿಸಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ಎಂದು ಆರೋಪಿಸಲಾಗಿದೆ. ಸ್ಲೀಪರ್ ಕೋಚ್‌ನಲ್ಲಿ ಮಲಗಿದ್ದ ಮಹಿಳೆಯ ಮುಂದೆ ಕುಳಿತು ಯುವಕ ಪ್ಯಾಂಟಿನ ಸಿಪ್ ತೆರೆದು ತನ್ನ ಗುಪ್ತಾಂಗವನ್ನು ಪ್ರದರ್ಶಿಸಿ ಹಸ್ತಮೈಥುನ ಮಾಡಿಕೊಂಡಿದ್ದಾನೆ. ಮಹಿಳೆ ಮತ್ತು ಆಕೆಯ ಸ್ನೇಹಿತರು ರೈಲ್ವೆ ತುರ್ತು ಸಂಖ್ಯೆಗೆ ಮಾಹಿತಿ ನೀಡಿದ್ದಾರೆ. ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಮುಂದಿನ ಠಾಣೆಗೆ ಬರುವಷ್ಟರಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತುರ್ತು ವಿಭಾಗ ಮಹಿಳೆಗೆ ಮಾಹಿತಿ ನೀಡಿದೆ. ಅಷ್ಟರಲ್ಲಿ ರೈಲು ಮಾರ್ಗೋ ರೈಲು ನಿಲ್ದಾಣ ತಲುಪಿತ್ತು. ನಿಲ್ದಾಣದಲ್ಲಿ ಕಾದು ಕುಳಿತಿದ್ದ ಗೋವಾ ಪೊಲೀಸರ ಕೊಂಕಣ ರೈಲ್ವೆ ಘಟಕ ಆರೋಪಿ ಯುವಕನನ್ನು ಬಂಧಿಸಿದೆ.

ಇರ್ದೆ : ಬಡವರ ಅಕ್ರಮಸಕ್ರಮ ಕಡತ ವಿಲೇವಾರಿಗೂ ಹಣ ಕೇಳುತ್ತಿದ್ದ ಬಿಜೆಪಿಗರು ಇದೇ ಕಾರಣಕ್ಕೆ ನಾನು ಬಿಜೆಪಿ ಬಿಟ್ಟುಬಂದೆ: ಅಶೋಕ್ ರೈ

Posted by Vidyamaana on 2023-04-27 07:12:28 |

Share: | | | | |


ಇರ್ದೆ : ಬಡವರ ಅಕ್ರಮಸಕ್ರಮ ಕಡತ ವಿಲೇವಾರಿಗೂ ಹಣ ಕೇಳುತ್ತಿದ್ದ ಬಿಜೆಪಿಗರು ಇದೇ ಕಾರಣಕ್ಕೆ ನಾನು ಬಿಜೆಪಿ ಬಿಟ್ಟುಬಂದೆ: ಅಶೋಕ್ ರೈ

ಪುತ್ತೂರು: ನಾನು ಹಣಮಾಡಬೇಕು ಎಂಬ ಉದ್ದೇಶಕ್ಕೆ ರಾಜಕೀಯಕ್ಕೆ ಬಂದಿಲ್ಲ, ನನಗೆ ರಾಜಕೀಯಕ್ಕೆ ಬಂದು ಹಣ ಮಾಡಬೇಕೆಂಬ ಆಸೆಯೂ ಇಲ್ಲ. ನಾನು ಕಳೆದ ೨೨ ವರ್ಷಗಳಿಂದ ಮಾಡಿದ ಸಮಾಜ ಸೇವೆ ಸಾರ್ಥಕವಾಗಿದೆ ಎಂಬ ಸಂಥೋಷ ನನಗಿದೆ. ಅಭಿಮಾನಿಗಳು ಮತ್ತು ಕಾರ್ಯಕರ್ತರ ಅಭಿಮಾನಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದೆಂದಿಗೂ ನಿಮ್ಮ ಜೊತೆಯೇ ಇರುವೆ, ನಿಮ್ಮ ನೋವು ನಲಿವುಗಳಿಗೆ ಸದಾ ಸ್ಪಂದಿಸುವೆ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್‌ಕುಮಾರ್ ಸಭೆಯಲ್ಲಿ ನೆರೆದ ನೂರಾರು ಮಂಧಿ ಕಾರ್ಯಕರ್ತರಿಗೆ ನೀಡಿದ ವಾಗ್ದಾನದ ಮಾತುಗಳು, ಈ ಮಾತುಗಳನ್ನಾಡುವ ವೇಳೆ ರೈಗಳು ಸ್ವಲ್ಪ ಹೊತ್ತು ಗದ್ದಧಿತರಾದರು.

ಪುತ್ತೂರು : ಮೆಸ್ಕಾಂ ತುರ್ತು ಕಾಮಗಾರಿ: ಇಂದು (ಜುಲೈ 06) ವಿದ್ಯುತ್ ನಿಲುಗಡೆ

Posted by Vidyamaana on 2023-07-05 23:31:45 |

Share: | | | | |


ಪುತ್ತೂರು : ಮೆಸ್ಕಾಂ ತುರ್ತು ಕಾಮಗಾರಿ: ಇಂದು (ಜುಲೈ 06) ವಿದ್ಯುತ್ ನಿಲುಗಡೆ

ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ರಾಮಕುಂಜ ಫೀಡರ್‌ನಲ್ಲಿ ಜು 06 ರಂದು . ಪೂರ್ವಾಹ್ನ ಗಂಟೆ 10 ರಿ೦ದ ಅಪರಾಹ್ನ 4:00 ರ ವರೆಗೆ ವಿದ್ಯುತ್‌ ನಿಲುಗಡೆ ಮಾಡಲಾಗುವುದು. ಆದುದರಿಂದ, 110/33/11ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್‌ ಸರಬರಾಜಾಗುವ ರಾಮಕುಂಜ ಗ್ರಾಮ, ಹಿರೇಬಂಡಾಡಿ ಗ್ರಾಮ, ಬೆಳ್ಳಿಪ್ಪಾಡಿ ಗ್ರಾಮ ಮತ್ತು ಕೋಡಿಂಬಾಡಿ ಗ್ರಾಮದ ವಿದ್ಯುತ್‌ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ರಾಜ್ಯಾಧ್ಯಂತ ಕಲರ್‌ ಕಾಟನ್‌ ಕ್ಯಾಂಡಿ ನಿಷೇಧ- ಸಚಿವ ದಿನೇಶ್ ಗುಂಡೂರಾವ್ ಘೋಷಣೆ

Posted by Vidyamaana on 2024-03-11 12:58:02 |

Share: | | | | |


ರಾಜ್ಯಾಧ್ಯಂತ ಕಲರ್‌ ಕಾಟನ್‌ ಕ್ಯಾಂಡಿ ನಿಷೇಧ- ಸಚಿವ ದಿನೇಶ್ ಗುಂಡೂರಾವ್ ಘೋಷಣೆ

ಗಳೂರು:ರಾಜ್ಯಾಧ್ಯಂತ ಕಾಟನ್‌ ಕ್ಯಾಂಡಿ ನಿಷೇಧ ಮಾಡಲಾಗಿದೆ ಅಂತ ಆರೋಗ್ಯ ಸಚಿವ ದಿನೇಶ್‌ ಗುಂಡುರಾವ್‌ ಅವರು ಹೇಳಿದರು. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಅವರು ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಮಾತನಾಡಿ, ವಿವಿಧ ಕಡೆಗಳಲ್ಲಿ ಎರಡು ಪದಾರ್ಥಗಳಲ್ಲಿ ನ ಸ್ಯಾಂಪಲ್‌ಗಳನ್ನು ಸಂಗ್ರಹಿಸ ಮಾಡಲಾಯಿತು.ಗೋಬಿ ಮಂಚೂರಿಯ 121 ಮಾದರಿಯನ್ನು ಸಂಗ್ರಹ ಮಾಡಲಾಯಿತು. ಇದಲ್ಲದೇ ಇದರಲ್ಲಿ ಎರಡು ವಿಶಕಾರಿ ಅಂಶಗಳು ಪತ್ತೆಯಾಗಿದ್ದು, ಇದರಿಂದ ಇದರ ಸೇವನೆ ಮಾಡುವುದು ಯೋಗ್ಯವಲ್ಲ ಅಂತ ಹೇಳಿದರು. ಇದನ್ನು ದಿನ ನಿತ್ಯ ಸೇವನೆ ಮಾಡುವುದರಿಂದ ಕ್ಯಾನ್ಸರ್ ಬರುವ ಸಂಭವಿದೆ ಅಂಥ ಹೇಳಿದರು. ಇದನ್ನು ಬಳಕೆ ಮಾಡುವುದು ಕಾನೂನು ಬಾಹಿರ ಅಂಥ ಹೇಳಿದರು.


ಮಾದರಿಗಳನ್ನು ಬೇರೆ ಬೇರೆ ಕಡೆ ಸಂಗ್ರಹಿಸಲಾಗಿತ್ತು. 171 ಗೋಬಿ ಮಂಚೂರಿ ಮಾದರಿಯನ್ನು ಸಂಗ್ರಹಿಸಲಾಗಿದೆ. ಅದರಲ್ಲಿ ಕೃತಕ ಬಣ್ಣಗಳ ಅಸುರಕ್ಷಿತ ಮಾದರಿಯನ್ನು ಪತ್ತೆ ಹಚ್ಚಿರೋದು 107 ಇದೆ. ಸೋ ಗೋಬಿ ಮಂಚೂರಿನೂ ಮಾಡಿದ್ದೇವೆ, ಕ್ಯಾಂಡಿಯನ್ನೂ ಮಾಡಿದ್ದೇವೆ ಎಂದರು.


ಒಂದು ರೋಡಮೈನ್ ಬೀ, ಇನ್ನೊಂದು ಟಾಟ್ರಾಸೈನ್ ಅಂತ ಅದು ಇವತ್ತು ನಾವು ಈ ಒಂದು ಪದಾರ್ಥಗಳಲ್ಲಿ, ನಮ್ಮ ಸ್ಯಾಂಪಲ್ಲಿನಲ್ಲಿ ಸಿಕ್ಕಿದೆ. ಇದು ನಮ್ಮ ಉಪಯೋಗಕ್ಕೆ ಅನ್ ಸೇಫ್. ರೋಡಮೈನ್ ಬೀ ಕ್ಯಾನ್ಸರ್ ಗೆ ಬರೋದಕ್ಕೆ ಒಂದು ರೀತಿ ಕಾರಣವಾಗುತ್ತದೆ. ಈ ಕೆಮಿಕಲ್ ಅವಕಾಶ ಮಾಡಿಕೊಡುತ್ತದೆ. ವಿಶೇಷವಾಗಿ ಈ ಬಣ್ಣವನ್ನು ಯೂಸ್ ಮಾಡುವ ಹಾಗೋ ಇಲ್ಲ. ಯಾವ ಪದಾರ್ಥಗಳಲ್ಲೂ ಯೂಸ್ ಮಾಡೋ ಹಾಗೇಇಲ್ಲ. ಹಾಗಿದ್ದರೂ ಅದನ್ನು ಸ್ಯಾಂಪಲ್ ಗಳಲ್ಲಿ ಪರೀಕ್ಷೆಯಲ್ಲಿ ಬಳಕೆ ಮಾಡಿರೋದು ಕಂಡು ಬಂದಿದೆ ಎಂದರು.


ಯಾಕೆ ರೋಡಮೈನ್ ಬೀ ಬಳಕೆ ಮಾಡುತ್ತಾರೆ ಅಂದರೇ ಪಿಂಕ್ ಕಲರ್ ಬರೋದಕ್ಕೆ ಬಳಕೆ ಮಾಡುತ್ತಾರೆ. ಈಗ ನಮ್ಮ ಆರೋಗ್ಯ ಇಲಾಖೆಯ ಆಯುಕ್ತರು ಕೂಡ ಸುತ್ತೋಲೆ ಹೊರಡಿಸುತ್ತಾರೆ. ಅದನ್ನು ಬಳಕೆ ಮಾಡುವಂತಿಲ್ಲ. ಬಳಕೆ ಮಾಡಿದ್ರೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.


ಗೋಬಿ ಮಂಚೂರಿ ಇದೊಂದು ಪುಡ್ ಐಟಂ. ಟಾಟ್ರಾಸೈನ್ ಏನಿದೆ ಅದು ಅಪ್ರೂವ್ಡ್ ಆರ್ಟಿಫಿಷಲ್ ಪುಡ್ ಕಲ್ಲರ್. ಕೆಮಿಕಲ್ ಬಳಕೆ ಮಾಡದಂತ ಗೋಬಿಮಂಚೂರಿಯನ್ನು ಬಳಕೆಗೆ ಅವಕಾಶ ನೀಡಲಾಗುತ್ತದೆ. ವಿತ್ ಔಟ್ ಕಲರ್ ಬಳಕೆ ಮಾಡಿರದ ಕ್ಯಾಂಡಿಯನ್ನು ಬಳಕೆ ಮಾಡೋದಕ್ಕೆ ಅವಕಾಶ ನೀಡಲಾಗುತ್ತದೆ. ಅದರ ಹೊರತಾಗಿ ಕಲರ್ ಬಳಕೆ ಮಾಡುವಂತ ಗೋಬಿಮಂಚೂರಿ, ಕ್ಯಾಂಡಿ ನಿಷೇಧ ಮಾಡಲಾಗುತ್ತಿದೆ ಎಂಬುದಾಗಿ ಘೋಷಣೆ ಮಾಡಿದರು

ಮುಕ್ವೆ ನಿವಾಸಿ ಸಯ್ಯದ್ ಅಮೀರ್ ಸಾಹೇಬ್ ನಿಧನ

Posted by Vidyamaana on 2023-10-26 16:24:15 |

Share: | | | | |


ಮುಕ್ವೆ ನಿವಾಸಿ ಸಯ್ಯದ್ ಅಮೀರ್ ಸಾಹೇಬ್ ನಿಧನ

ಪುತ್ತೂರು: ಇಲ್ಲಿನ ಮುಕ್ವೆ ನಿವಾಸಿ ಸಯ್ಯದ್ ಅಮೀರುದ್ದಿನ್ (ಅಮೀರ್ ಸಾಹೇಬ್) ಅಲ್ಪ ಕಾಲದ ಸೌಖ್ಯದಿಂದ  ಇಂದು (ಅ.26) ನಿಧರಾಗಿದ್ದಾರೆ.

ಇವರು ಈ ಹಿಂದೆ ಹಲವಾರು ವರ್ಷಗಳ ಕಾಲ ಸೌದಿ ಅರೇಬಿಯಾದ ಅಲ್ - ಕೋಬರ್ ನಲ್ಲಿ ABT ಕಂಪನಿಯ ಚಾಲಕರಾಗಿ ಉದ್ಯೋಗದಲ್ಲಿದ್ದ ಹಾಗೂ ಈ ಹಿಂದೆ ಬೊಂಬಾಯಿಲ್ಲಿ ವಾಹನ ಚಾಲಕರಾಗಿದ್ದ ಹಾಗೂ ಬಳಿಕ ಊರಲ್ಲಿದ್ದು ಮುಕ್ವೆಯಲ್ಲಿ  ವಾಸವಾಗಿದ್ದರು ಮೃತರು ಪತ್ನಿ ಪುತ್ರ ಸಯ್ಯದ್ ಮನ್ನಾನ್ , ಪುತ್ರಿಯರು ಹಾಗೂ ಸಹೋದರರನ್ನು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Recent News


Leave a Comment: