KSRTC ಬಸ್-ಕಾರು ಡಿಕ್ಕಿ, ಕ್ರೈಸ್ಥ ಧರ್ಮಗುರು ಫಾ. ಆಂಥೋಣಿ ಪೀಟರ್ ಮೃತ್ಯು..

ಸುದ್ದಿಗಳು News

Posted by vidyamaana on 2024-07-24 17:11:55 |

Share: | | | | |


KSRTC ಬಸ್-ಕಾರು ಡಿಕ್ಕಿ, ಕ್ರೈಸ್ಥ ಧರ್ಮಗುರು ಫಾ. ಆಂಥೋಣಿ ಪೀಟರ್ ಮೃತ್ಯು..

ಶಿವಮೊಗ್ಗ : ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಕಾರು ಡಿಕ್ಕಿಯಾದ ಪರಿಣಾಮ ಕ್ರೈಸ್ತ ಧರ್ಮಗುರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಸಮೀಪ ಸವಳಂಗ ಚಿನ್ನಿಕಟ್ಟೆ ಬಳಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.ಕೆಎಸ್‌ಆರ್‌ಟಿಸಿ ಬಸ್ಸು ಹಾನಗಲ್‌ನಿಂದ ಶಿವಮೊಗ್ಗ ಕಡೆಗೆ ಹೋಗುತ್ತಿತ್ತುಎನ್ನಲಾಗಿದೆ.

ಕ್ರೈಸ್ತ ಧರ್ಮಗುರು ಇದ್ದ ಕಾರು ಶಿವಮೊಗ್ಗ ಕಡೆಯಿಂದ ತೆರಳುತ್ತಿತ್ತು. ಚಿನ್ನಿಕಟ್ಟೆ ಬಳಿ ಕಾರು, ಬಸ್ಸು ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದ ರಭಸಕ್ಕೆ ಕಾರು ರಸ್ತೆ ಪಕ್ಕದ ಜಮೀನಿಗೆ ಉರುಳಿ ಬಿದ್ದಿದ್ದು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಶಿಕಾರಿಪುರ ಧರ್ಮಕೇಂದ್ರದ ಧರ್ಮಗುರು ಆಂಥೋಣಿ ಪೀಟರ್‌ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು ನ್ಯಾಮತಿ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.

 Share: | | | | |


ಪುತ್ತೂರು-ಉಪ್ಪಿನಂಗಡಿ ಹೆದ್ದಾರಿಯ ಕೋಡಿಂಬಾಡಿ ಯಲ್ಲಿ ಧರೆ ಕುಸಿತ

Posted by Vidyamaana on 2024-08-03 21:43:22 |

Share: | | | | |


ಪುತ್ತೂರು-ಉಪ್ಪಿನಂಗಡಿ ಹೆದ್ದಾರಿಯ ಕೋಡಿಂಬಾಡಿ ಯಲ್ಲಿ ಧರೆ ಕುಸಿತ

ಪುತ್ತೂರು: ಪುತ್ತೂರು-ಉಪ್ಪಿನಂಗಡಿ ಸಂಪರ್ಕಿಸುವ ರಾಜ್ಯ ಹೆದ್ದಾರಿ ಕೋಡಿಂಬಾಡಿ ಯಲ್ಲಿ ಭಾರೀ ಭೂಕುಸಿತ ಉಂಟಾಗಿ ರಸ್ತೆ ಬಂದ್ ಆಗಿದೆ. ಶಾಸಕ ಅಶೋಕ್‌ ಕುಮಾರ್ ರೈ ಅವರ ಮನೆಯ ಬಳಿಯಲ್ಲಿ ಈ ಭೂಕುಸಿತ ಉಂಟಾಗಿದ್ದು, ರಸ್ತೆಗೆ ಮಣ್ಣು ಬಿದ್ದಿದೆ.

ನೈತಿಕ ಪೊಲೀಸ್ ಗಿರಿ ತಡೆಗೆ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು ಸೂಚನೆ

Posted by Vidyamaana on 2023-06-06 09:01:45 |

Share: | | | | |


ನೈತಿಕ ಪೊಲೀಸ್ ಗಿರಿ ತಡೆಗೆ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು ಸೂಚನೆ

ಮಂಗಳೂರು: ನೈತಿಕ ಪೊಲೀಸ್ ಗಿರಿ ತಡೆಗೆ ಮಂಗಳೂರು ನಗರದಲ್ಲಿ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.ಮಂಗಳೂರಿನಲ್ಲಿ ಪಶ್ಚಿಮ ವಲಯದ ದ.ಕ., ಉಡುಪಿ, ಉ.ಕ., ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳ ಸಭೆಯ ಬಳಿಕ ಗೃಹ‌ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.


ಕೋಮು‌ಸೌಹಾರ್ದ ಕಾಪಾಡಲು ಕಠಿನ ಕ್ರಮಕ್ಕೆ ಪೊಲೀಸರಿಗೆ ಸೂಚನೆ‌ ನೀಡಿದ್ದೇನೆ ಎಂದ ಅವರು ಮುಂದೆ‌ ಬೇರೆ ಕಡೆ ಅಗತ್ಯ‌ ಬಿದ್ದರೆ ಅಲ್ಲಿಯೂ ವಿಂಗ್ ರಚಿಸಲಾಗುವುದು ಎಂದು ಹೇಳಿದರು.

ಇಲ್ಲಿನ‌ ಜನರಿಗೆ ಭಯ ಮುಕ್ತ ವಾತಾವರಣ ನಿರ್ಮಿಸಬೇಕಾಗಿದೆ. ಡ್ರಗ್ಸ್ ನಿಯಂತ್ರಣಕ್ಕೆ ಅಭಿಯಾನ ನಡೆಸಲು ಸೂಚಿಸಿದ್ದು, ಆ.15 ರೊಳಗೆ ಡ್ರಗ್ಸ್ ಚಟುವಟಿಕೆ ಹತ್ತಿಕ್ಕಲು ಗಡುವು ನೀಡಿದ್ದೇನೆ ಎಂದರು.

ಪರ್ಲಡ್ಕ :ರಸ್ತೆಗೆ ಉರುಳಿದ ಬೃಹತ್ ಗಾತ್ರದ ಮರ

Posted by Vidyamaana on 2023-11-09 10:04:35 |

Share: | | | | |


ಪರ್ಲಡ್ಕ :ರಸ್ತೆಗೆ ಉರುಳಿದ ಬೃಹತ್ ಗಾತ್ರದ ಮರ

ಪುತ್ತೂರು: ಪುತ್ತೂರು ನಗರದ ಕಲ್ಲಿಮಾರ್-ಪರ್ಲಡ್ಕ ಸಂಪರ್ಕ ರಸ್ತೆಯಲ್ಲಿ ಇಂದು ಬೆಳಿಗ್ಗೆ ಬೃಹತ್ ಗಾತ್ರ ಮರ ಬಿದ್ದಿದೆ.

ಬೆಳಿಗ್ಗೆ ಸುಮಾರು 8 ಗಂಟೆ ಹೊತ್ತಿಗೆ ಮರ ಧರೆಗೆ ಉರುಳಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.

ಸ್ಥಳಕ್ಕೆ ಪೊಲೀಸರು ತೆರಳಿದ್ದು, ಇದೀಗ ಮರ ತೆರವು ಕಾರ್ಯ ನಡೆಯುತ್ತಿದೆ.

ಉಪ್ಪಿನಂಗಡಿ ಕಂದಾಯ ನಿರೀಕ್ಷಕರಾಗಿ ಚಂದ್ರ ನಾಯ್ಕ್

Posted by Vidyamaana on 2023-12-05 15:59:14 |

Share: | | | | |


ಉಪ್ಪಿನಂಗಡಿ ಕಂದಾಯ ನಿರೀಕ್ಷಕರಾಗಿ ಚಂದ್ರ ನಾಯ್ಕ್

ಪುತ್ತೂರು: ಉಪ್ಪಿನಂಗಡಿ ಹೋಬಳಿಯ ಕಂದಾಯ ನಿರೀಕ್ಷಕರಾಗಿ ಪಂಜ ಹೋಬಳಿಯಿಂದ ವರ್ಗಾವಣೆಗೊಂಡಿರುವ ಚಂದ್ರ ನಾಯ್ಕ್ ಡಿ.4ರಂದು ಅಧಿಕಾರ ಸ್ವೀಕರಿಸಿದ್ದಾರೆ.


ಕೋಡಿಂಬಾಡಿ, ಬೆಳ್ಳಿಪ್ಪಾಡಿ, ಉಪ್ಪಿನಂಗಡಿ, ಕಡಬ ತಾಲೂಕಿನ ಸವಣೂರು, ಪುಣ್ಚಪ್ಪಾಡಿ ಗ್ರಾಮಗಳಲ್ಲಿ ಗ್ರಾಮಕರಣಿಕರಾಗಿದ್ದ ಚಂದ್ರ ನಾಯ್ಕ ಆಹಾರ ನಿರೀಕ್ಷಕರಾಗಿ ಭಡ್ತಿಹೊಂದಿ ಕಡಬಕ್ಕೆ ವರ್ಗಾವಣೆಗೊಂಡಿದ್ದರು. ನಂತರ ವರ್ಗಾವಣೆಗೊಂಡು ಸುಳ್ಯ ತಾಲೂಕಿನ ಪಂಜ ಹೋಬಳಿಯ ಕಂದಾಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಇದೀಗ ಉಪ್ಪಿನಂಗಡಿ ಹೋಬಳಿಗೆ ವರ್ಗಾವಣೆಗೊಂಡಿದ್ದಾರೆ

ವಂಚನೆ ಪ್ರಕರಣ: ಚೈತ್ರಾ ಮತ್ತು ಶ್ರೀಕಾಂತ್​ ಗೆ ಷರತ್ತುಬದ್ಧ ಜಾಮೀನು

Posted by Vidyamaana on 2023-12-05 11:56:37 |

Share: | | | | |


ವಂಚನೆ ಪ್ರಕರಣ: ಚೈತ್ರಾ ಮತ್ತು ಶ್ರೀಕಾಂತ್​ ಗೆ ಷರತ್ತುಬದ್ಧ ಜಾಮೀನು

ಬೆಂಗಳೂರು,  ಉದ್ಯಮಿ ಗೋವಿಂದಬಾಬು ಪೂಜಾರಿ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಹಾಗೂ ಎರಡನೇ ಆರೋಪಿ ಶ್ರೀಕಾಂತ್​ಗೆ ಮೂರನೇ ಎಸಿಎಂಎಂ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಅದರಂತೆ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.


ಉದ್ಯಮಿ ಗೋವಿಂದ ಬಾಬು ಅವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚನೆ ಎಸಗಿದ ಆರೋಪದಡಿ ಹಿಂದೂ ಕಾರ್ಯಕರ್ತೆ ಚೈತ್ರಾಳನ್ನು ಸೆಪ್ಟೆಂಬರ್ 13 ರಂದು ಸಿಸಿಬಿ ಪೊಲೀಸರು ಬಂಧಿಸಿದ್ದರು.


ಗೋವಿಂದಬಾಬು ಅವರ ಬಳಿಯಿಂದ ಚೈತ್ರಾ ಒಟ್ಟು 4 ಕೋಟಿ ರೂ. ಹಣ ಪಡೆದಿದ್ದಳು. ಆದರೆ ಗೋವಿಂದಬಾಬು ಪೂಜಾರಿ ಅವರಿಗೆ ಟಿಕೆಟ್​ ಸಿಗಲಿಲ್ಲ. ಬಳಿಕ ಗೋವಿಂದಬಾಬು ಕೊಟ್ಟ ಹಣವನ್ನು ವಾಪಸ್ಸು ಕೇಳಿದ್ದಾರೆ. ಆದರೆ ಚೈತ್ರಾ ಮತ್ತು ಗ್ಯಾಂಗ್ ಹಣ ನೀಡದೇ ವಂಚಿಸಿತ್ತು. ಈ ಬಗ್ಗೆ ಗೋವಿಂದಬಾಬು ಪೂಜಾರಿ ಅವರು ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಸಿಸಿಬಿ ಪೊಲೀಸರು ಚೈತ್ರಾಳನ್ನು ಬಂಧಿಸಿದ್ದರು.

ಇನ್ನು ಸಹಿಸಲು ಸಾಧ್ಯವಿಲ್ಲ”: ಸುಚನಾ ಸೇಠ್ ಐಲೈನರ್‌ನಿಂದ ಬರೆದಿರುವ ಕೈಬರಹ ಪತ್ತೆ

Posted by Vidyamaana on 2024-01-12 21:53:19 |

Share: | | | | |


ಇನ್ನು ಸಹಿಸಲು ಸಾಧ್ಯವಿಲ್ಲ”: ಸುಚನಾ ಸೇಠ್ ಐಲೈನರ್‌ನಿಂದ ಬರೆದಿರುವ ಕೈಬರಹ ಪತ್ತೆ

ಪಣಜಿ: ನಾಲ್ಕು ವರ್ಷದ ಮಗುವನ್ನು ಕೊಂದು ಬ್ಯಾಗಲ್ಲಿ ಹಾಕಿ ಪ್ರಯಾಣಿಸುವಾಗ ಬಂಧಿಸಲ್ಪಟ್ಟ ಸ್ಟಾರ್ಟ್‌ಅಪ್ ಸಂಸ್ಥಾಪಕಿ ಸುಚನಾ ಸೇಠ್ ಬರೆದಿದ್ದ ಬರಹವೊಂದು ಪತ್ತೆಯಾಗಿದೆ.ತನ್ನ ಮಗುವಿನ ಶವ ಹಾಕಿದ್ದ ಬ್ಯಾಗೊಳಗೆ “ಇನ್ನು ಸಹಿಸಲು ಸಾಧ್ಯವಿಲ್ಲ…” ಎಂದು ಐಲೈನರ್‌ನಿಂದ ಬರೆದಿರುವ ಆರು ಸಾಲಿನ ಕೈಬರಹ ಪೊಲೀಸರಿಗೆ ಸಿಕ್ಕಿದೆ. ಇದು ಆಕೆಯ ಮನಸ್ಥಿತಿ ಮತ್ತು ಮಗುವಿನ ಹತ್ಯೆಯ ಉದ್ದೇಶವನ್ನು ತಿಳಿಸುವಂತಿದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.


ಆಕೆಯ ಮಾಜಿ ಪತಿಗೆ ಮಗುವಿನೊಂದಿಗೆ ಮಾತನಾಡಲು ಅವಕಾಶ ಮಾಡಿಕೊಡಲು ನ್ಯಾಯಾಲಯ ಆದೇಶಿಸಿದ್ದನ್ನೇ ಸುಚನಾ ಸೇಠ್, ” ಇನ್ನು ಸಹಿಸಲು ಸಾಧ್ಯವಿಲ್ಲ‌..” ಎಂದು ಬರೆದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಪೊಲೀಸರು ಕೈಬರಹವನ್ನು ವಿಧಿವಿಜ್ಞಾನ ಪರಿಶೀಲನೆಗೆ ಕಳುಹಿಸಿದ್ದಾರೆ.ಅವಳು ತನ್ನ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದಳು. ಮಗುವನ್ನು ಕೊಲ್ಲುವ ಮೊದಲಿನ‌ ಆಕೆಯ ಕರೆ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ. ಅದೇ ರೀತಿ ಮಗುವಿನ ಸಾವಿನ ನಂತರ ಅವಳು ಯಾರಿಗೆ ಕರೆ ಮಾಡಿದಳು ಎಂನ ಮಾಹಿತಿಯನ್ನೂ ಕಲೆಹಾಕಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಹೋಟೆಲ್ ಸೋಲ್ ಬನಿಯನ್ ಗ್ರಾಂಡೆಯ 404 ಕೊಠಡಿಯಲ್ಲಿ ಸುಚನಾ ಸೇಠ್ ತನ್ನ ಮಗನನ್ನು ಕೊಚ್ಚಿ ಕೊಲೆ ಮಾಡಿದ್ದಾಳೆ. ಅಲ್ಲದೆ, ಕೋಣೆಯಲ್ಲಿ ಕೆಮ್ಮಿನ ಸಿರಪ್‌ನ ಎರಡು ಖಾಲಿ ಬಾಟಲಿಗಳು ಪತ್ತೆಯಾಗಿದ್ದು, ಆಕೆ ತನ್ನ ಮಗನನ್ನು ಕೊಲ್ಲೋ‌ ಮೊದಲು ಅಮಲೇರಿಸಲು ಯತ್ನಿಸಿದ್ದಾಳೆಂದು ಪೊಲೀಸ್‌ ಅಧಿಕಾರಿಗಳು ಶಂಕಿಸಿದ್ದಾರೆ.

Recent News


Leave a Comment: