ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ

ಸುದ್ದಿಗಳು News

Posted by vidyamaana on 2024-07-24 16:52:02 |

Share: | | | | |


ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ

ವದೆಹಲಿ : ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯಿಸಿದರು.


ಈ ಹಿಂದೆ ಮಂಗಳೂರು- ಸುಬ್ರಹ್ಮಣ್ಯ ನಡುವೆ ಮೀಟರ್ ಗೇಜ್ ಹಳಿ ಇದ್ದಾಗ ಪ್ಯಾಸೆಂಜರ್ ರೈಲು ಓಡಾಟ ಇತ್ತು. ಬ್ರಾಡ್ ಗೇಜ್ ಹಳಿ ಮಾಡುವ ಸಲುವಾಗಿ 2005ರಲ್ಲಿ ಈ ರೈಲಿನ ಸಂಚಾರವನ್ನು ನಿಲ್ಲಿಸಲಾಗಿತ್ತು. ಆನಂತರ, ಬ್ರಾಡ್ ಗೇಜ್ ಹಳಿಯಾಗಿ ಪರಿವರ್ತನೆ ಮಾಡಲಾಗಿದೆ. ಅಂದು ಓಡುತ್ತಿದ್ದ ಪ್ಯಾಸೆಂಜರ್ ರೈಲು ಮಂಗಳೂರಿನಿಂದ ಕಬಕ- ಪುತ್ತೂರು ನಡುವೆ ಓಡಾಟ ನಡೆಸುತ್ತಿದ್ದು, ಅದನ್ನು ಸುಬ್ರಹ್ಮಣ್ಯದವರೆಗೆ ವಿಸ್ತರಣೆ ಮಾಡಬೇಕು.

ಮಂಗಳೂರು – ಸುಬ್ರಹ್ಮಣ್ಯ ಮಧ್ಯೆ ರೈಲು ಓಡಾಟವಾದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ, ಕಾಲೇಜಿಗೆ ಹೋಗುವವರಿಗೆ ಉಪಯೋಗವಾಗಲಿದೆ. ಗ್ರಾಮಾಂತರ ಪ್ರದೇಶವಾದ ಸುಳ್ಯದಿಂದ ಮಂಗಳೂರಿಗೆ ಪ್ರತಿದಿನ ಓಡಾಟ ಮಾಡುವವರಿದ್ದಾರೆ. ಅವರಿಗೂ ಉಪಯುಕ್ತ ಆಗಲಿದೆ. ಇದು ಸೌತ್ ವೆಸ್ಟರ್ನ್ ರೈಲ್ವೇ ವಿಭಾಗದಲ್ಲಿದ್ದು, ನಮ್ಮ ಜಿಲ್ಲೆಯ ಒಳಗೆ ಸಂಚರಿಸುವ ಏಕೈಕ ಪ್ಯಾಸೆಂಜರ್ ರೈಲಾಗಿದೆ.


ಜನಸಾಮಾನ್ಯರ ಹಿತದೃಷ್ಟಿಯಿಂದ ಈ ರೈಲನ್ನು ಸುಬ್ರಹ್ಮಣ್ಯದವರೆಗೂ ವಿಸ್ತರಣೆ ಮಾಡಬೇಕು ಎಂದು ರೈಲ್ವೇ ಸಚಿವರನ್ನು ಮನವಿ ಮಾಡಿದ್ದಾರೆ. ಇದಕ್ಕುತ್ತರಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಸೇನೆಯಿಂದ ನಿವೃತ್ತಿ ಪಡೆದು ಸಂಸದರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಬಗ್ಗೆ ಗೌರವ ಹೊಂದಿದ್ದು, ರೈಲ್ವೇ ವಿಚಾರಗಳ ಬಗ್ಗೆ ಯಾವುದೇ ಮನವಿಯಿದ್ದರೂ ನನ್ನ ಕಚೇರಿಗೆ ಬಂದು ವೈಯಕ್ತಿಕವಾಗಿ ಚರ್ಚಿಸಬಹುದು. ಪರಿಹರಿಸಲು ಮುಕ್ತನಿದ್ದೇನೆ ಎಂದು ಹೇಳಿದರು.

 Share: | | | | |


ರೋಟರಿಪುರ : ಮನೆ ಮನೆ ಮತ ಚೀಟಿ ವಿತರಣೆಗೆ ತೆರಳಿದ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Posted by Vidyamaana on 2024-04-16 14:15:00 |

Share: | | | | |


ರೋಟರಿಪುರ : ಮನೆ ಮನೆ ಮತ ಚೀಟಿ ವಿತರಣೆಗೆ ತೆರಳಿದ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

ಪುತ್ತೂರು: ಲೋಕಸಭಾ ಚುನಾವಣೆ ಕರ್ತವ್ಯ ನಿರತ ಮನೆ ಮನೆಗೆ ಮತ ಚೀಟಿ ವಿತರಣೆಗೆ ತೆರಳಿದ ರೋಟರಿಪುರ ಅಂಗನವಾಡಿ ಕಾರ್ಯಕರ್ತೆಗೆ ಮಹಿಳೆಯೊಬ್ಬರು ಹಲ್ಲೆ ನಡೆಸಿದ ಘಟನೆ ಎ.16 ರಂದು ಬೆಳಿಗ್ಗೆ ನಡೆದಿದೆ

ಕಲ್ಲಡ್ಕ ಪ್ರಭಾಕರ್ ಭಟ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ- ದೂರು ದಾಖಲು

Posted by Vidyamaana on 2023-08-01 13:10:03 |

Share: | | | | |


ಕಲ್ಲಡ್ಕ ಪ್ರಭಾಕರ್ ಭಟ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ- ದೂರು ದಾಖಲು

ಬಂಟ್ವಾಳ: ಅರ್ ‌ಎಸ್.ಎಸ್.ಪ್ರಮುಖ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರದು ಆಕ್ಷೇಪ ಅರ್ಹ ಬರಹಗಳನ್ನು ಬರೆದು ಸಮಾಜದಲ್ಲಿ ಅಶಾಂತಿ ಹಬ್ಬಲು ಕೆಲವು ಕಿಡಿಗೇಡಿಗಳು ಪ್ರಯತ್ನಿಸುತ್ತಿದ್ದು, ಇವರ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಮಂಗಳೂರು ಸೈಬರ್ ಕ್ರೈಮ್ ಪೋಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.


ಆರ್‌.ಎಸ್.ಎಸ್.ಪ್ರಮುಖರಾಗಿರುವ ಕಲ್ಲಡ್ಕ ಶ್ರೀರಾಮ‌ ವಿದ್ಯಾ ಕೇಂದ್ರದ ಸಂಸ್ಥಾಪಕ, ಪುತ್ತೂರು ವಿವೇಕಾನಂದ ವಿದ್ಯಾ ವರ್ದಕ ಸಂಘದ ಅಧ್ಯಕ್ಷರಾಗಿರುವ ಹಿಂದೂ ಸಾಮ್ರಾಟ್ ಎಂದೇ ಕರೆಯಲ್ಪಡುವ ಕಲ್ಲಡ್ಕ ‌ಡಾ. ಪ್ರಭಾಕರ್ ಭಟ್ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆಯನ್ನು ತೆರದು ಆಕ್ಷೇಪ ಆರ್ಹ ಸುದ್ದಿಗಳನ್ನು ಬಿತ್ತರಿಸುತ್ತಿರುವ ಬಗ್ಗೆ ದೂರು ದಾಖಲಾಗಿದೆ.

ಕಲ್ಲಡ್ಕ ಡಾ ಭಟ್ ಅವರ ಫೇಸ್ ಬುಕ್ ಖಾತೆಯಾಗಲಿ, ಅಥವಾ ಇನ್ನಿತರ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನು ಹೊಂದಿರುವುದಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೆ ಈ ಖಾತೆಯ ಮೂಲಕ ಸಮಾಜದಲ್ಲಿ ಅಶಾಂತಿ ಹಬ್ಬಿಸುವ ಪ್ರಯತ್ನ ಮತ್ತು ಹೆಸರನ್ನು ಕೆಡಿಸುವ ಕೆಲಸ ಮಾಡಲಾಗುತ್ತಿದ್ದು ಈ ಬಗ್ಗೆ ಪೋಲೀಸರು ಸೂಕ್ತವಾದ ತನಿಖೆ ನಡೆಸುವಂತೆ ಮತ್ತು ಅವರ ಮೇಲೆ ಕಾನೂನು ಕ್ರಮವನ್ನು ಕೈಗೊಂಡು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಪುನರಾವರ್ತನೆ ಕಂಡುಬರದಂತೆ ಪೋಲೀಸರು ‌ನಿಗಾವಹಿಸುವಂತೆಯೂ ಅವರು ತಿಳಿಸಿದ್ದಾರೆ.

ನಾಪತ್ತೆಯಾದವನು ಅಕ್ರಮ ಸಂಬಂಧಕ್ಕೆ ಬಲಿ; ಶವವನ್ನು ತುಂಡು ತುಂಡಾಗಿ ಕತ್ತರಿಸಿ ಮೋರಿಗೆ ಬಿಸಾಡಿದ ಹಂತಕ!

Posted by Vidyamaana on 2024-06-08 17:17:10 |

Share: | | | | |


ನಾಪತ್ತೆಯಾದವನು ಅಕ್ರಮ ಸಂಬಂಧಕ್ಕೆ ಬಲಿ; ಶವವನ್ನು ತುಂಡು ತುಂಡಾಗಿ ಕತ್ತರಿಸಿ ಮೋರಿಗೆ ಬಿಸಾಡಿದ ಹಂತಕ!

ಬೆಂಗಳೂರು : ರಾಜಧಾನಿ ಬೆಂಗಳೂರಿ‌ನಲ್ಲಿ (Bengaluru News) ಭಯಂಕರ ಕೊಲೆ (Bengaluru Murder) ಪ್ರಕರಣವನ್ನು ಸಂಪಿಗೇಹಳ್ಳಿ ಪೊಲೀಸರು ಬಯಲು ಮಾಡಿದ್ದಾರೆ. ಮನೆಗೆ ಬಂದಿದ್ದ ವ್ಯಕ್ತಿಗೆ ಜಾಕ್‌ ರಾಡ್‌ನಿಂದ ಹೊಡೆದು ಕೊಂದು, ನಂತರ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮೋರಿಗೆ ಎಸೆದಿದ್ದಾನೆ.

ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (Murder case) ಈ ಕೃತ್ಯ ನಡೆದಿದೆ. ಕೆ.ವಿ.ಶ್ರೀನಾಥ್ (34) ಕೊಲೆಯಾದವನು. ಮಾಧವ ರಾವ್ ಎಂಬಾತ ಕೊಲೆ ಆರೋಪಿಯಾಗಿದ್ದಾನೆ.

ಥಣಿಸಂದ್ರದ ಅಂಜನಾದ್ರಿ ಲೇಔಟ್ ನಿವಾಸಿಯಾದ ಕೆ.ವಿ. ಶ್ರೀನಾಥ್‌ ಬೆಂಗಳೂರಿನ ಬಸವೇಶ್ವರನಗರದಲ್ಲಿರುವ ಮಾರ್ಗದರ್ಶಿ ಚಿಟ್‌ ಫಂಡ್‌ನಲ್ಲಿ ಡೆವಲಪ್ಮೆಂಟ್ ಆಫೀಸರ್ ಆಗಿದ್ದ. ಹೀಗಿರುವಾಗ ಕಳೆದ ಮೇ.28ರ ಬೆಳಗ್ಗೆ ಮನೆಯಿಂದ ಹೊರಹೋಗಿದ್ದ ಶ್ರೀನಾಥ್‌ ವಾಪಸ್ ಆಗಿರಲಿಲ್ಲ. ಇದರಿಂದ ಹೆದರಿದ ಶ್ರೀನಾಥ್‌ ಪತ್ನಿ ಮೇ.29ರಂದು ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್‌ ಕೇಸ್‌ ದಾಖಲಿಸಿದ್ದರು.

ದೂರು ದಾಖಲಿಸಿಕೊಂಡು ಪ್ರಕರಣದ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಕೆ.ವಿ.ಶ್ರೀನಾಥ್ ಮೇ.28ರಂದು ಆರೋಪಿ ಮಾಧವರಾವ್ ಮನೆಗೆ ಹೋಗಿದ್ದು ಗೊತ್ತಾಗಿತ್ತು. ಕೆ.ಆರ್.ಪುರಂನ ವಿಜಿನಪುರದಲ್ಲಿರುವ ಮಾಧವರಾವ್ ಮನೆಗೆ ಶ್ರೀನಾಥ್‌ ಹೋಗುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆದರೆ ಒಳಗೆ ಹೋದವನು ಹೊರಗೆ ಬಂದಿರಲಿಲ್ಲ. ಜತೆಗೆ ಮನೆಯ ಒಳಗಡೆ ಪರಿಶೀಲನೆ ಮಾಡಿದಾಗ ರಕ್ತದ ಕಲೆಗಳು ಪತ್ತೆಯಾಗಿದ್ವು. ಇದರಿಂದ ಮಾಧವರಾವ್ ಬಗ್ಗೆ ವಿಚಾರಿಸಿದಾಗ ಆತನೂ ನಾಪತ್ತೆಯಾಗಿದ್ದ.

ಬಳಿಕ ಆತನ ಮೊಬೈಲ್‌ ಲೋಕೇಶನ್‌ ಪತ್ತೆ ಮಾಡಿದ ಪೊಲೀಸರಿಗೆ ಆರೋಪಿ ಆಂಧ್ರಪ್ರದೇಶದಲ್ಲಿಇದ್ದಾನೆ ಎಂದು ಗೊತ್ತಾಗಿತ್ತು. ನಂತರ ಮಾಧವರಾವ್‌ನನ್ನು ಕರೆತಂದು ಪೊಲೀಸರು ವಿಚಾರಣೆಯನ್ನು ನಡೆಸಿದಾಗ ಅಸಲಿ ಕಥೆಯನ್ನು ತೆರೆದಿಟ್ಟಿದ್ದ.

ಮೇ.9ರಿಂದ ಹಜ್ ಯಾತ್ರೆ ಪ್ರಾರಂಭ: ಬೆಂಗಳೂರಿನಿಂದ ತೆರಳಲಿರುವ ಮೊದಲ ವಿಮಾನಕ್ಕೆ ಸಿಎಂ ಚಾಲನೆ ಸಾಧ್ಯತೆ

Posted by Vidyamaana on 2024-05-02 07:19:40 |

Share: | | | | |


ಮೇ.9ರಿಂದ ಹಜ್ ಯಾತ್ರೆ ಪ್ರಾರಂಭ: ಬೆಂಗಳೂರಿನಿಂದ ತೆರಳಲಿರುವ ಮೊದಲ ವಿಮಾನಕ್ಕೆ ಸಿಎಂ ಚಾಲನೆ ಸಾಧ್ಯತೆ

ಬೆಂಗಳೂರು : ಮೇ.9 ರಿಂದ ಹಜ್ ಯಾತ್ರೆ ಪ್ರಾರಂಭವಾಗಲಿದ್ದು, ಬೆಂಗಳೂರಿನಿಂದ ತೆರಳುವ ಮೊದಲ ವಿಮಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.ದೇಶದಾದ್ಯಂತ ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ಮುಂದುವರೆದಿದ್ದು, ರಾಜ್ಯದಲ್ಲಿ ಉಳಿದ 14 ಕ್ಷೇತ್ರಗಳ ಮತದಾನ ಪ್ರಕ್ರಿಯೆ ಮೇ.7 ರಂದು ನಡೆಯಲಿದೆ.ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂದರೆ ಮೇ.8 ರಂದು ಕಾರ್ಯಕ್ರಮ ಆಯೋಜಿಸಲು ಕರ್ನಾಟಕ ಹಜ್ ಸಮಿತಿ ಚಿಂತನೆ ನಡೆಸಿದೆ.

ಉದ್ಯಮಿ ಪರ್ಲಡ್ಕ ಮೊಹಮ್ಮದ್ ಹಾರೀಸ್ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ನಿಧನ

Posted by Vidyamaana on 2023-05-28 01:51:41 |

Share: | | | | |


ಉದ್ಯಮಿ ಪರ್ಲಡ್ಕ  ಮೊಹಮ್ಮದ್  ಹಾರೀಸ್ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ನಿಧನ

ಪುತ್ತೂರು:ಪರ್ಲಡ್ಕ ನಿವಾಸಿಯಾಗಿದ್ದು ಸೌದಿ ಅರೇಬಿಯಾದಲ್ಲಿ ಉದ್ಯಮಿಯಾಗಿದ್ದ ಮೊಹಮ್ಮದ್ ಹಾರೀಸ್ (43ವ)ರವರು ಮೇ 27ರಂದು ರಾತ್ರಿ ಸೌದಿ ಅರೇಬಿಯಾ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.


ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ, ದರ್ಬೆ ನಿವಾಸಿಯಾಗಿದ್ದ ದಿ.ಮೊಹಮ್ಮದ್ ಹಟ್ಟಾ ಅವರ ಸಹೋದರ, ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಉದ್ಯೋಗಿ ಪರ್ಲಡ್ಕದ ಪಿ. ಅಬ್ದುಲ್ಲಾ ಹಾಜಿ ದರ್ಬೆ ಎಂಬವರ ಪುತ್ರ ಮೊಹಮ್ಮದ್ ಹಾರೀಸ್ ಅವರು ಹಲವು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಸ್ವಂತ ಉದ್ಯಮ ಮಾಡಿಕೊಂಡು ಪತ್ನಿ ಮಕ್ಕಳು ಸಮೇತರಾಗಿ ಸೌದಿ ಅರೇಬಿಯಾದ ಜುಬೈಲ್‌ನಲ್ಲಿ ವಾಸ್ತವ್ಯ ಹೊಂದಿದ್ದರು. ಮೇ 27ರಂದು ರಾತ್ರಿ ಅವರ ಆರೋಗ್ಯದಲ್ಲಿ ಏರುಪೇರಾಗಿ ಹೃದಯಾಘಾತದಿಂದ ನಿಧನರಾದರು.ಮೃತರು ತಂದೆ , ತಾಯಿ, ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಮತ್ತು ಓರ್ವ ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

ಕಿಂಗ್ ಪಿನ್ ಆರ್ ಡಿ ಪಾಟೀಲ್ ಗೆ ಸಲಾಂ: ಪೊಲೀಸ್ ಕಾನ್ಸ್‌ ಟೇಬಲ್‌ ಅಮಾನತು

Posted by Vidyamaana on 2023-11-19 07:49:44 |

Share: | | | | |


ಕಿಂಗ್ ಪಿನ್ ಆರ್ ಡಿ ಪಾಟೀಲ್ ಗೆ ಸಲಾಂ: ಪೊಲೀಸ್ ಕಾನ್ಸ್‌ ಟೇಬಲ್‌ ಅಮಾನತು

ಕಲಬುರಗಿ: ಕೆಇಎ ನಡೆಸಿದ ಎಫ್ ಡಿಎ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಆಗಿರುವ ಆರ್ ಡಿ ಪಾಟೀಲ್ ಅವರನ್ನು ಜಿಮ್ಸ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕರೆತಂದಾಗ ಓರ್ವ ಕಾನ್ಸ್‌ ಟೇಬಲ್‌ ನಮಸ್ಕಾರ ಮಾಡಿದ ಹಿನ್ನಲೆ ಅಮಾನತು ಮಾಡಲಾಗಿದೆ.


ಆರ್ ಡಿ ಪಾಟೀಲ್ ಗೆ ಸಲಾಂ ಎಂದಿದ್ದ ನಗರದ ಬ್ರಹ್ಮಪೂರ ಪೊಲೀಸ್ ಠಾಣೆಯ ಕಾನ್ಸ್‌ ಟೇಬಲ್‌ ಮಾಳಪ್ಪ ಭಾಸಗಿ ಎಂಬುವವರನ್ನು ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನರವರು ಅಮಾನತಗೊಳಿಸಿ ಆದೇಶಿಸಿದ್ದಾರೆ.

Recent News


Leave a Comment: