ಉಡುಪಿ: ನಾಳೆ (ಜು.09)ರಂದು ಶಾಲಾ- ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಸುದ್ದಿಗಳು News

Posted by vidyamaana on 2024-07-08 17:22:55 |

Share: | | | | |


ಉಡುಪಿ: ನಾಳೆ (ಜು.09)ರಂದು ಶಾಲಾ- ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಉಡುಪಿ: ಜಿಲ್ಲೆಯಲ್ಲಿ ವ್ಯಾಪಕ ಮಳೆ ಹಿನ್ನೆಲೆ ಜು.09 ರಂದು ರೆಡ್ ಅಲರ್ಟ್ ಘೋಷಿಸಿದ್ದು ಅದರಂತೆ ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಮಂಗಳವಾರ ಜಿಲ್ಲಾಡಳಿತ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.

ಉಡುಪಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖೆಯ ರೆಡ್ ಅಲರ್ಟ್ ಮುನ್ಸೂಚನೆಯಂತೆ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಜು.9ರಂದು ರಜೆ ಘೋಷಿಸಿ ಉಡುಪಿ ಅಪರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ

 Share: | | | | |


ಚೈತ್ರಾ ಕುಂದಾಪುರ ಅರೆಸ್ಟ್ ಬೆನ್ನಲ್ಲೇ ಅಭಿನವ ಹಾಲಶ್ರೀ ಎಸ್ಕೇಪ್!

Posted by Vidyamaana on 2023-09-13 15:58:40 |

Share: | | | | |


ಚೈತ್ರಾ ಕುಂದಾಪುರ ಅರೆಸ್ಟ್ ಬೆನ್ನಲ್ಲೇ ಅಭಿನವ ಹಾಲಶ್ರೀ ಎಸ್ಕೇಪ್!

ವಿಜಯನಗರ: ಬೈಂದೂರು ಬಿಜೆಪಿ ಟಿಕೆಟ್ ಆಕಾಂಕ್ಷಿ ಗೋವಿಂದ ಪೂಜಾರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿ 7 ಕೋಟಿ ರುಪಾಯಿ ವಂಚಿಸಿರುವ ಆರೋಪದ ಮೇರೆಗೆ ಪ್ರಚೋದನಾಕಾರಿ ಭಾಷಣಕಾರ್ತಿ ಚೈತ್ರಾಳನ್ನು ಮಂಗಳವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ. ಚೈತ್ರಾ ಜೊತೆಗೆ ಪ್ರಸಾದ್, ಗಗನ್ ಕಡೂರು, ಪ್ರಜ್ವಲ್ ಶೆಟ್ಟಿ ಆರ್ ಎಸ್ ಧನರಾಜ್, ರಮೇಶ್, ಶ್ರೀಕಾಂತ್ ನನ್ನೂ ಕೂಡಾ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.



ಸ್ವಾಮೀಜಿಯೊಬ್ಬರ ಹೆಸರು ಕೇಳಿಬಂದಿದೆ. ಹಗಡಲಿ ತಾಲೂಕಿನ ಹಿರೇಹಡಗಲಿ ಹಾಲು ಮಠದ ಅಭಿನವ ಹಾಲಶ್ರೀ ಆರೋಪಿಯಾಗಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಹಾಲಶ್ರೀ ಯಾರ ಕೈಗೂ ಸಿಗದೇ ಅಜ್ಞಾತ ಸ್ಥಳಕ್ಕೆ ತರಳಿದ್ದಾರೆ.



ಉದ್ಯಮಿ ಗೋವಿಂದ್ ಬಾಬು ಕಡೆದಿಂದ ಕೋಟ್ಯಂತರ ರೂಪಾಯಿ ಪಡೆದು ವಂಚನೆ ಕೇಸ್ ನಲ್ಲಿ ಮೂರು ಆರೋಪಿಗಳ ಬಂಧನವಾಗುತ್ತಿದ್ದಂತೆಯೇ 3ನೇ ಆರೋಪಿಯಾಗಿರುವ ಹಿರೇಹಡಗಲಿ ಹಾಲ ಮಠದ ಅಭಿನವ ಹಾಲಶ್ರೀ ನಾಪತ್ತೆಯಾಗಿದ್ದಾರೆ. ಹಾಲ ಮಠಕ್ಕೂ ಬಾರದೇ, ಯಾರ ಸಂಪರ್ಕಕ್ಕೂ ಸಿಗದ ಅಜ್ಞಾತ ಸ್ಥಳಕ್ಕೆ ತರಳಿದ್ದಾರೆ. ಇನ್ನು ಬೆಳಗಿನಿಂದ ಹಾಲಶ್ರೀ ಮೊಬೈಲ್ ಸ್ವೀಚ್ ಆಫ್ ಆಗಿದೆ.

ರಾಜ್ಯದಲ್ಲಿ ಪೈಶಾಚಿಕ ಕೃತ್ಯ : ವಿದ್ಯಾರ್ಥಿನಿಗೆ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ

Posted by Vidyamaana on 2023-10-14 14:19:51 |

Share: | | | | |


ರಾಜ್ಯದಲ್ಲಿ ಪೈಶಾಚಿಕ ಕೃತ್ಯ : ವಿದ್ಯಾರ್ಥಿನಿಗೆ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ

ಬಳ್ಳಾರಿ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಬಳ್ಳಾರಿಯ ಕಾಲೇಜೊಂದರ ವಿದ್ಯಾರ್ಥಿನಿಯನ್ನು ಅಪಹರಿಸಿದ ದುಷ್ಕರ್ಮಿಗಳು ಕೊಪ್ಪಳಕ್ಕೆ ಕರೆತಂದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.ವಿದ್ಯಾರ್ಥಿನಿಯನ್ನು ಕಿಡ್ನ್ಯಾಪ್ ಮಾಡಿದ ಕಿರಾತಕರು ಕೊಪ್ಪಳದ ಸಣಾಪುರ ಬಳಿಯ ಹೋಟೆಲ್ ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.ಈ ಸಂಬಂಧ ನವೀನ್, ಸಾಕೀವ್, ತನು ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.


ಯುವತಿ ಬಳ್ಳಾರಿಯ ಕಾಲೇಜೊಂದರಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದು, ನಿಮ್ಮ ಅಣ್ಣ ಬಂದಿದ್ದಾನೆಂದು ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ಹೊರಕ್ಕೆ ಕರೆಯಿಸಿ ನಂತರ ಆಟೋದಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾರೆ. ನಂತರ ಕೊಪ್ಪಳ ಜಿಲ್ಲೆಯ ಸಣಾಪುರ ಬಳಿಯ ಕೆಫೆ ಹೋಟೆಲ್ ಗೆ ಕರೆದೊಯ್ದು ಬಿಯರ್ ಕುಡಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದು ಬಂದಿದೆ.

ಕಿಡ್ನಾಪ್ ಆಗಿದ್ದ 6 ವರ್ಷದ ಬಾಲಕಿ ಆಶ್ರಮವೊಂದರ ಮೈದಾನದಲ್ಲಿ ಪತ್ತೆ..!

Posted by Vidyamaana on 2023-11-28 16:25:20 |

Share: | | | | |


ಕಿಡ್ನಾಪ್ ಆಗಿದ್ದ 6 ವರ್ಷದ ಬಾಲಕಿ ಆಶ್ರಮವೊಂದರ ಮೈದಾನದಲ್ಲಿ   ಪತ್ತೆ..!


ಕೊಲ್ಲಂ  : ಓಯೂರಿನಿಂದ ಅಪಹರಣಕ್ಕೊಳಗಾಗಿದ್ದ ಆರು ವರ್ಷದ ಬಾಲಕಿಯನ್ನು ಸುಮಾರು 20 ಗಂಟೆಗಳ ನಂತರ ಮಂಗಳವಾರ ಪೊಲೀಸರು ಪತ್ತೆ ಮಾಡಿದ್ದಾರೆ.ಬಾಲಕಿ ಅನಾಥ ಸ್ಥಿತಿಯಲ್ಲಿ ಆಶ್ರಮವೊಂದರ ಮೈದಾನದಲ್ಲಿ ಪತ್ತೆಯಾಗಿದ್ದಾಳೆ. ಮಗುವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಅಪಹರಣಕಾರರು ಬಳಸಿದ್ದ ಬಿಳಿ ಬಣ್ಣದ ಮಾರುತಿ ಸ್ವಿಫ್ಟ್ ಕಾರಿನ ಮೇಲೆ ಪೊಲೀಸರು ಹುಡುಕಾಟ ನಡೆಸಿದ್ದರು. ಬಾಲಕಿಯನ್ನು ಅಪಹರಿಸಿದ ವ್ಯಕ್ತಿಯೊಬ್ಬನ ರೇಖಾಚಿತ್ರವನ್ನೂ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಬಾಲಕಿಯನ್ನು ಬಿಡಿಸಲು ಅಪಹರಣಕಾರರು 10 ಲಕ್ಷ ರೂ ಹಣವನ್ನು ಕೇಳಿದ್ದರು. ಈ ನಡುವೆ ಕೇರಳ ಪೊಲೀಸರು ಇಡೀ ರಾಜ್ಯದಲ್ಲಿ ಕಿಡ್ನಾಪರ್ಸ್ ಗಾಗಿ ತೀವ್ರ ಶೋಧ ನಡೆಸಿದ್ದರು.


ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಪೊಲೀಸರು ಮೂವರನ್ನು ತಿರುವನಂತಪುರಂನಿಂದ ಕಸ್ಟಡಿಗೆ ತೆಗೆದುಕೊಂಡಿದ್ದರೂ, ಅವರಲ್ಲಿ ಇಬ್ಬರನ್ನು ವಿಚಾರಣೆಯ ನಂತರ ಬಿಡುಗಡೆ ಮಾಡಲಾಗಿದೆ. ಇದುವರೆಗೆ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ನಾಲ್ವರ ಗ್ಯಾಂಗ್ ಪತ್ತೆಗೆ ತನಿಖಾ ತಂಡ ಮಹತ್ವದ ವಿವರಗಳನ್ನು ಸಂಗ್ರಹಿಸಿದೆ ಎಂದು ಐಜಿ ಸ್ಪರ್ಜನ್ ಕುಮಾರ್ ಹೇಳಿದ್ದಾರೆ. ಸಂಜೆ ಸುಮಾರು 4.30ಕ್ಕೆ ಘಟನೆ ನಡೆದಿದ್ದು ಬಾಲಕಿ ಅಬಿಗೆಲ್‌ ಸಾರಾ ರೇಜಿಳನ್ನು ಅಪಹರಣಕಾರರು ಕಾರಿನೊಳಕ್ಕೆ ಎಳೆದೊಯ್ದಿದ್ದರು. ಆಕೆಯ ಎಂಟು ವರ್ಷದ ಅಣ್ಣನನ್ನೂ ಅಪಹರಿಸುವ ಯತ್ನ ನಡೆಯಿತಾದರೂ ಆತ ತಪ್ಪಿಸಿಕೊಳ್ಳುವಲ್ಲಿ ಸಫಲನಾಗಿದ್ದಾನೆ. ಆತನಿಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ. ಈ ಘಟನೆ ನಡೆದಾಗ ಮಕ್ಕಳ ಹೆತ್ತವರಾದ ರೇಜಿ ಜಾನ್‌ ಮತ್ತು ಸಿಜಿ ಜಾನ್‌ ಮನೆಯಲ್ಲಿರಲಿಲ್ಲ. ಇಬ್ಬರೂ ವೃತ್ತಿಯಲ್ಲಿ ನರ್ಸ್‌ ಆಗಿದ್ದಾರೆ.


ಘಟನೆ ನಡೆದ ಮೂರು ಗಂಟೆಗಳ ತರುವಾಯ ಬಾಲಕಿಯ ತಾಯಿಗೆ ಮಹಿಳೆಯೊಬ್ಬಳಿಂದ ಫೋನ್‌ ಕರೆ ಬಂದು ರೂ 5 ಲಕ್ಷಕ್ಕೆ ಬೇಡಿಕೆಯಿರಿಸಲಾಗಿತ್ತು. ಮತ್ತೆ ರಾತ್ರಿ 9.30ಕ್ಕೆ ಬಂದ ಕರೆಯಲ್ಲಿ ರೂ 10 ಲಕ್ಷಕ್ಕೆ ಬೇಡಿಕೆ ಇರಿಸಲಾಗಿತ್ತು. ಮಗು ಸುರಕ್ಷಿತವಾಗಿದೆ ಎಂದೂ ಅಪಹರಣಕಾರರು ಹೇಳಿದ್ದಾರೆನ್ನಲಾಗಿದೆ. ಅಪಹೃತ ಮಗುವಿಗಾಗಿ ರಾಜ್ಯಾದ್ಯಂತ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬಿಳಿ ಬಣ್ಣದ ಕಾರೊಂದು ತಮ್ಮನ್ನು ಕಟ್ಟಾಡಿ ಜಂಕ್ಷನ್‌ನಲ್ಲಿ ಅಡ್ಡಗಟ್ಟಿತ್ತು ಎಂದು ಬಾಲಕಿಯ ಸೋದರ ಹೇಳಿದ್ದಾನೆ. ಕಳೆದೆರಡು ದಿನಗಳಿಂದ ಬಿಳಿ ಸೆಡಾನ್‌ ಕಾರು ಆ ಪ್ರದೇಶದಲ್ಲಿ ಸಂಚರಿಸುತ್ತಿತ್ತು ಎಂಬ ಮಾಹಿತಿಯನ್ನು ಸ್ಥಳೀಯರು ಪೊಲೀಸರಿಗೆ ನೀಡಿದ್ದಾರೆ.

ಗುಪ್ತ್ ಗುಪ್ತಾಗಿ ಮದುವೆಯಾದ್ರಾ ಪ್ರಶಾಂತ್ ಮತ್ತು ಆಯೇಷಾ

Posted by Vidyamaana on 2023-12-08 10:30:16 |

Share: | | | | |


ಗುಪ್ತ್ ಗುಪ್ತಾಗಿ ಮದುವೆಯಾದ್ರಾ ಪ್ರಶಾಂತ್ ಮತ್ತು ಆಯೇಷಾ

ಸುರತ್ಕಲ್: ನಾಪತ್ತೆಯಾಗಿದ್ದ ಭಿನ್ನಕೋಮಿನ ಜೋಡಿ ವಿವಾಹವಾಗಿದ್ದಾರೆ ಎನ್ನುವ ಪೋಟೋ ವೈರಲ್ ಆಗಿದ್ದು ಇದರ ನಿಖರತೆ ಇನ್ನಷ್ಟೇ ತಿಳಿದುಬರಬೇಕಿದೆ.



ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ 7ನೇ ಬ್ಲಾಕ್ ಕಾಟಿಪಳ್ಳದ ಯುವಕ ಪ್ರಶಾಂತ್ ಭಂಡಾರಿ (31) ಹಾಗೂ 3ನೇ ಬ್ಲಾಕ್ ಆಶ್ರಯ ಕಾಲೋನಿ ನಿವಾಸಿ ಆಯೇಷಾ (19) ಡಿ.1 ರಂದು ನಾಪತ್ತೆಯಾಗಿದ್ದರು.


ಇವರಿಬ್ಬರು ವಿವಾಹವಾಗಿದ್ದಾರೆ ಎನ್ನುವ ಪೋಟೋವನ್ನು ಅವರ ಮಿತ್ರರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.


ಅಯೇಷಾ ತನ್ನ ಹೆಸರನ್ನು ಅಕ್ಷತಾ ಎಂದು ಬದಲಿಸಿಕೊಂಡಿದ್ದಾರೆ. ನಾಪತ್ತೆಯಾದ ದಿನ ಆಯೇಷಾ ತಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಯುವತಿ ಕುಟೂಂಬ ಮೂಲತಃ ಕಾರವಾರದ ಮುಂಡಗೋಡದವರಾಗಿದ್ದು, ಈಕೆಯ ತಂದೆ ಸ್ಥಳೀಯದವರಾಗಿದ್ದು , ಸ್ಥಳೀಯವಾಗಿ ಉದ್ಯೋಗದಲ್ಲಿದ್ದಾರೆ. ಅವರ ಪತ್ತೆಗೆ ಪೊಲೀಸರು ಕಾರ್ಯೋನ್ಮುಖರಾಗಿದ್ದಾರೆ

ಮುಳಿಯ ಪುತ್ತೂರು – ಬೆಳ್ತಂಗಡಿ ಶೋರೂಂಗಳಲ್ಲಿ ಡೈಮಂಡ್ ಪ್ರಭೆ

Posted by Vidyamaana on 2023-09-18 15:56:15 |

Share: | | | | |


ಮುಳಿಯ ಪುತ್ತೂರು – ಬೆಳ್ತಂಗಡಿ ಶೋರೂಂಗಳಲ್ಲಿ ಡೈಮಂಡ್ ಪ್ರಭೆ

ಪುತ್ತೂರು: ವೈವಿಧ್ಯಮಯ ಚಿನ್ನಾಭರಣಗಳಿಗೆ ಹೆಸರುವಾಸಿಯಾಗಿರುವ ಮುಳಿಯ ಜ್ಯುವೆಲ್ಲರ್ಸ್’ನ ಪುತ್ತೂರು ಹಾಗೂ ಬೆಳ್ತಂಗಡಿ ಮಳಿಗೆಯಲ್ಲಿ ಸೆ. 18ರಿಂದ ಅ. 5ರವರೆಗೆ ಡೈಮಂಡ್ ಫೆಸ್ಟ್ ಹಮ್ಮಿಕೊಳ್ಳಲಾಗಿದೆ.


ಕೈಗಟುಕು ವೈಭವ ಎನ್ನುವ ಸಾಲಿನೊಂದಿಗೆ ಗ್ರಾಹಕರ ಮುಂದೆ ಬಂದಿರುವ ಡೈಮಂಡ್ ಫೆಸ್ಟ್, ಹೆಸರಿನಂತೆ ಗ್ರಾಹಕರ ಕೈಗೆಟಕುವ ರೀತಿಯಲ್ಲಿದೆ. ಮಾತ್ರವಲ್ಲ ಗ್ರಾಹಕರಿಗಾಗಿ, ವಿಶೇಷ ಆಫರ್, ಗಿಫ್ಟ್’ಗಳನ್ನು ನೀಡಲಾಗಿದೆ.


ಡೈಮಂಡ್ ರಿಂಘ್ ಗೆಲ್ಲುವ ಅವಕಾಶದ ಜೊತೆಗೆ ನಿಮ್ಮ ಹಳೆ ಚಿನ್ನಾಭರಣಗಳನ್ನು ಹೊಸ ವಜ್ರಾಭರಣಗಳಿಗೆ ವಿನಿಮಯ ಮಾಡಿಕೊಳ್ಳುವ ಅವಕಾಶವನ್ನೂ ಕಲ್ಪಿಸಲಾಗಿದೆ. ಇದರಲ್ಲಿ ಪ್ರತಿ ಗ್ರಾಂ ಮೇಲೆ 100 ರೂ.ಗೂ ಅಧಿಕ ಪಡೆಯುವ ಸುವರ್ಣಾವಕಾಶ ಗ್ರಾಹಕರಿಗಿದೆ. ಹೆಚ್ಚಿನ ಮಾಹಿತಿಗೆ ಪುತ್ತೂರು ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಮಳಿಗೆಯ 9844692916 ಹಾಗೂ ಬೆಳ್ತಂಗಡಿ ಮುಖ್ಯರಸ್ತೆಯಲ್ಲಿರುವ ಮುಳಿಯ ಮಳಿಗೆ 9343004916 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೋಲೆ ಪ್ರಕರಣ: ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸಿದ ಕುಟುಂಬ

Posted by Vidyamaana on 2023-11-18 20:00:07 |

Share: | | | | |


ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೋಲೆ  ಪ್ರಕರಣ: ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸಿದ ಕುಟುಂಬ

ಉಡುಪಿ : ನೇಜಾರು ತಾಯಿ ಮತ್ತು ಮಕ್ಕಳ ಕೊಲೆ ಪ್ರಕರಣವನ್ನು ಕ್ಷಿಪ್ರವಾಗಿ ಪತ್ತೆ ಮಾಡಿದ ಉಡುಪಿ ಪೊಲೀಸ್ ಇಲಾಖೆಯನ್ನು ಮೃತರ ಕುಟುಂಬ ಇಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಅವರನ್ನು ಭೇಟಿಯಾಗಿ ಅಭಿನಂದಿಸಿತು.


ನೇಜಾರಿನ ನೂರ್ ಮುಹಮ್ಮದ್, ಅವರ ಮಗ ಅಸಾದ್,ಮೃತ ಹಸೀನಾರ ಸಹೋದರ ಅಶ್ರಫ್, ಇವರ ಮಗಳು ಫಾತಿಮಾ ಅಸ್ಟಾ ಸಂಬಂಧಿಕ ಯಾಸೀನ್, ಕಾಂಗ್ರೆಸ್ ಮುಖಂಡ ಎಂ.ಎ.ಗಫೂರ್ ಅವರು ಎಸ್ಪಿಯವರನ್ನು ಭೇಟಿಯಾಗಿ ಅಭಿನಂದಿಸಿದರು.ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಎಂ.ಎ.ಗಫೂರ್, ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ. ನೂರ್ ಮುಹಮ್ಮದ್ ತಮ್ಮ ಕುಟುಂಬದ ಜೊತೆ ಬೆರೆತು ಸಮಯ ಕಳೆಯುವಂತೆ ಮತ್ತು ಮಗನಿಗೆ ಭವಿಷ್ಯದ ಕುರಿತು ಕೆಲವು ಮಾರ್ಗದರ್ಶನ ನೀಡಿದರು ಎಂದು ತಿಳಿಸಿದರು.


ಅದೇ ರೀತಿ ಸಮಾಜದ ಸುರಕ್ಷತೆ, ಸೌಹಾರ್ದತೆ ಬಗ್ಗೆಯೂ ಎಸ್ಪಿಯವರ ಜೊತೆ ಚರ್ಚೆ ಮಾಡಿದ್ದೇವೆ.


ಸಮಾಜದಲ್ಲಿ ಶಾಂತಿ ಸಾಮರಸ್ಯ ನಿರ್ಮಾಣವಾಗಿ, ಜನ ಭಯಭೀತಿಯಿಂದ ಹೊರಬರಬೇಕು. ಮಹಿಳೆಯರು ಸುರಕ್ಷಿತವಾಗಿ ಕೆಲಸಕ್ಕೆ ಹೋಗುವಂತೆ ಮಾಡಬೇಕು ಎಂಬುದರ ಕುರಿತು ಎಸ್ಪಿ ಜೊತೆ ಮಾತುಕತೆ ನಡೆಸಿದ್ದೇವೆ ಎಂದು ಅವರು ಹೇಳಿದರು

Recent News


Leave a Comment: