ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪ:ಅಣ್ಣಪ್ಪ ಮಾಲಕತ್ವದ ಮಾರುತಿ ಡ್ರೈವಿಂಗ್ ಸ್ಕೂಲ್‌ನ ಪರವಾನಗಿ ರದ್ದು

ಸುದ್ದಿಗಳು News

Posted by vidyamaana on 2024-07-23 21:09:49 |

Share: | | | | |


ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪ:ಅಣ್ಣಪ್ಪ ಮಾಲಕತ್ವದ  ಮಾರುತಿ ಡ್ರೈವಿಂಗ್ ಸ್ಕೂಲ್‌ನ ಪರವಾನಗಿ ರದ್ದು

ಬೆಂಗಳೂರು : ಬಸವೇಶ್ವರನಗರದ ಮಾರುತಿ ಡ್ರೈವಿಂಗ್‌ ಸ್ಕೂಲ್‌ನ ಪರವಾನಗಿ ಹಾಗೂ ಅದೇ ಶಾಲೆಯ ತರಬೇತುದಾರನ ಚಾಲನಾ ಪರವಾನಗಿಯನ್ನು (ಡಿಎಲ್‌) ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆ ರದ್ದುಗೊಳಿಸಿದೆ. 

ಯುವತಿಗೆ ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪದ ಅಡಿ ಕಾರು ತರಬೇತಿದಾರನ ವಿರುದ್ಧ ಬಸವೇಶ್ವರನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾದ ಬೆನ್ನಲ್ಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆಯಂತೆ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.

ನಗರದ ಯಾವುದೇ ಡ್ರೈವಿಂಗ್ ಶಾಲೆಯಲ್ಲೂ ಈ ರೀತಿಯ ಘಟನೆಗಳು ನಡೆಯಬಾರದು. ಈ ನಿಟ್ಟಿನಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಹಾಲಕ್ಷ್ಮೀಪುರದ 18 ವರ್ಷದ ಯುವತಿ ನೀಡಿದ್ದ ದೂರು ಆಧರಿಸಿ, ಬಸವೇಶ್ವರನಗರದ ಮಾರುತಿ ಡ್ರೈವಿಂಗ್‌ ಸ್ಕೂಲ್‌ನ ತರಬೇತುದಾರ ಅಣ್ಣಪ್ಪ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?:‌

ದೂರು ನೀಡಿದ್ದ ಯುವತಿ ಕಾರು ಚಾಲನೆ ಕಲಿಯಲು ಮಾರುತಿ ಡ್ರೈವಿಂಗ್‌ ಸ್ಕೂಲ್‌ಗೆ ಸೇರಿದ್ದರು. ಅಣ್ಣಪ್ಪ ಎಂಬಾತ ಕಾರು ಚಾಲನೆ ಬಗ್ಗೆ ತರಬೇತಿ ನೀಡಿದ್ದರು. ಒಂದು ತಿಂಗಳ ಕೋರ್ಸ್‌ ಮುಕ್ತಾಯವಾದ ಮೇಲೆ ಅಣ್ಣಪ್ಪ, ನಿಮ್ಮ ಮನೆಯ ಕಾರಿನಲ್ಲೇ ಪರಿಪೂರ್ಣವಾಗಿ ಚಾಲನೆ ಬಗ್ಗೆ ಹೇಳಿಕೊಡುತ್ತೇನೆ. ಒಂದು ಗಂಟೆಯ ವಿಶೇಷ ಕ್ಲಾಸ್‌ಗೆ ₹750 ಕೊಡಬೇಕು ಎಂದು ಯುವತಿಯನ್ನು ಕೇಳಿಕೊಂಡಿದ್ದರು. ಯುವತಿ 15 ದಿನಗಳ ವಿಶೇಷ ಕ್ಲಾಸ್‌ಗೆ ಅಣ್ಣಪ್ಪ ಅವರಿಗೆ ₹10,500 ಪಾವತಿಸಿದ್ದರು. ಅದರಂತೆ ಅಣ್ಣಪ್ಪ ವಿಶೇಷ ತರಬೇತಿ ಆರಂಭಿಸಿದ್ದರು ಎಂದು ಪೊಲೀಸರು ಹೇಳಿದರು.

ಪ್ರತಿದಿನ ಯುವತಿಯ ಮನೆ ಬಳಿ ಬಂದು ಆಕೆಯ ಕಾರಿನಲ್ಲೇ ಅಣ್ಣಪ್ಪ ಚಾಲನೆ ತರಬೇತಿ ನೀಡುತ್ತಿದ್ದರು. ಜುಲೈ 7ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಯುವತಿ ಮನೆ ಬಳಿ ಬಂದಿದ್ದ ಅಣ್ಣಪ್ಪ, ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಚಾಲನೆ ಬಗ್ಗೆ ಹೇಳಿಕೊಡಲು ಮುಂದಾಗಿದ್ದರು. ಬಸವೇಶ್ವರ ನಗರದ ನ್ಯಾಷನಲ್‌ ಶಾಲೆಯ ಮೇಲ್ಸೇತುವೆಯಲ್ಲಿ ತೆರಳುವಾಗ, ಯುವತಿ ಕಾರು ಚಾಲನೆ ಮಾಡುತ್ತಿದ್ದರು. ಆಗ ಅಣ್ಣಪ್ಪ ಅಸಭ್ಯವಾಗಿ ವರ್ತಿಸಿದ್ದರು ಎಂದು ಪೊಲೀಸರು ತಿಳಿಸಿದರು.

ತರಬೇತುದಾರನ ಅಸಭ್ಯ ವರ್ತನೆಯಿಂದ ಗಾಬರಿಗೊಂಡಿದ್ದ ಯುವತಿ ಕಾರನ್ನು ಮನೆಯತ್ತ ತಿರುಗಿಸಿದ್ದರು. ಅದಾದ ಮೇಲೆ ತರಬೇತುದಾರ ಸುಮ್ಮನಾಗಿದ್ದರು. ಅಣ್ಣಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಯುವತಿ ಪೊಲೀಸರಿಗೆ ದೂರು ನೀಡಿದ್ದರು.

 Share: | | | | |


ವಯನಾಡ್ ದುರಂತ: ಸಂತ್ರಸ್ತರಿಗೆ SKSSF ದ. ಕ ಈಸ್ಟ್ ಜಿಲ್ಲೆ ವತಿಯಿಂದ ಅಗತ್ಯ ವಸ್ತುಗಳ ನೆರವು

Posted by Vidyamaana on 2024-08-06 12:41:46 |

Share: | | | | |


ವಯನಾಡ್ ದುರಂತ: ಸಂತ್ರಸ್ತರಿಗೆ  SKSSF ದ. ಕ ಈಸ್ಟ್ ಜಿಲ್ಲೆ ವತಿಯಿಂದ ಅಗತ್ಯ ವಸ್ತುಗಳ ನೆರವು

ಪುತ್ತೂರು : ವಯನಾಡು ದುರಂತ ಸ್ಥಳಕ್ಕೆ ಸುಮಾರು ಹತ್ತು ಲಕ್ಷ ಮೌಲ್ಯದ ಅಗತ್ಯ ವಸ್ತುಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಮೊದಲ ಭಾರಿ SKSSF ದ.ಕ ಈಸ್ಟ್ ಜಿಲ್ಲಾ ಸಮಿತಿ ವತಿಯಿಂದ ವಿವಿಧ ವಲಯ ಸಮಿತಿಗಳ ಸಹಕಾರದೊಂದಿಗೆ ಸಂತ್ರಸ್ತರಿಗೆ ಹಸ್ತಾಂತರಿಸಲಾಯಿತು. 

 ಎಸ್ ಕೆ ಎಸ್ ಎಸ್ ಎಫ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಅಧ್ಯಕ್ಷರಾದ ಮೊಹಮ್ಮದ್ ನವವಿ ಯವರ ನೇತೃತ್ವದಲ್ಲಿ ವಸ್ತ್ರ ಮತ್ತು ಆಹಾರ ಸಾಮಗ್ರಿಗಳನ್ನು ಜೆಎಸ್ಎಂ ಅಲ್ ಬಿರ್ರ್ ಸಂಸ್ಥೆಯಲ್ಲಿ ಸಂಗ್ರಹಿಸಿ ಆಗಸ್ಟ್ ಒಂದರಂದು ರಾತ್ರಿ 10 ಗಂಟೆಗೆ ಕಳುಹಿಸಿಕೊಡಲಾಯಿತು.

ಶಿವಮೊಗ್ಗ : 1 ಗಂಟೆಯಾದರು ಬಾರದ ಈಶ್ವರಪ್ಪ : ಕಾದು ಸುಸ್ತಾಗಿ ತೆರಳಿದ ಕೇಂದ್ರ ನಾಯಕರು

Posted by Vidyamaana on 2024-03-17 20:42:07 |

Share: | | | | |


ಶಿವಮೊಗ್ಗ : 1 ಗಂಟೆಯಾದರು ಬಾರದ ಈಶ್ವರಪ್ಪ : ಕಾದು ಸುಸ್ತಾಗಿ ತೆರಳಿದ ಕೇಂದ್ರ ನಾಯಕರು

ಶಿವಮೊಗ್ಗ, ಮಾ.17: ಬಂಡಾಯ ಎದ್ದಿರುವ ಕೆ.ಎಸ್. ಈಶ್ವರಪ್ಪ ಸಿಟ್ಟು ಶಮನಕ್ಕೆ ಬಿಜೆಪಿ ಹೈಕಮಾಂಡ್​ ನಾಯಕರು ಮುಂದಾಗಿದ್ದು ಆದರೆ ಮಾತುಕತೆ ವಿಫಲವಾಗಿದೆ. ಮಾರ್ಚ್​ 18ರಂದು ಶಿವಮೊಗ್ಗದಲ್ಲಿ ನಡೆಯುವ ಪ್ರಧಾನಿ ಮೋದಿ ಸಮಾವೇಶಕ್ಕೆ ಕೆಎಸ್​ ಈಶ್ವರಪ್ಪ ಅವರನ್ನು ಆಹ್ವಾನಿಸಿ, ಸಿಟ್ಟು ಶಮನಗೊಳಿಸಲು ಕೇಂದ್ರ ನಾಯಕರು ಆಗಮಿಸಿದ್ದರು. ಆದರೆ ಈಶ್ವರಪ್ಪ ಕೇಂದ್ರ ನಾಯಕರನ್ನು ಮನೆಯಲ್ಲೇ ಬಿಟ್ಟು ಹೊರನಡೆದಿದ್ದಾರೆ. 


ಬಂಡಾಯ ಶಮನ ಮತ್ತು ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಹೇಳಲು ಇಂದು ಬೆಳಗ್ಗೆ ಕೆ.ಎಸ್​ ಈಶ್ವರಪ್ಪ ಮನೆಗೆ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್​ ಅಗರ್ವಾಲ್​, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್, ವಿಧಾನ ಪರಿಷತ್​ ಸದಸ್ಯ ಡಿ.ಎಸ್.ಅರುಣ್​ ಆಗಮಿಸಿದ್ದರು. 


ಆದರೆ ಕೆಎಸ್​ ಈಶ್ವರಪ್ಪ ಮಾತುಕತೆ ನಡುವೆಯೇ ಎದ್ದು ಹೊರ ನಡೆದಿದ್ದು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದರು. ನಗರದ ಗೋಪಾಳದಲ್ಲಿ ಆಯೋಜಿಸಿದ್ದ ದೇವಸ್ಥಾನ ಮತ್ತು ಹೋಮದಲ್ಲಿ ಭಾಗಿಯಾಗಿದ್ದ ಕೆಎಸ್​ ಈಶ್ವರಪ್ಪ ಒಂದು ಗಂಟೆ ಕಳೆದರೂ, ಮನೆಗೆ ಬರಲಿಲ್ಲ. ಹೀಗಾಗಿ ಕೇಂದ್ರ ನಾಯಕರು ಕೆ.ಎಸ್​.ಈಶ್ವರಪ್ಪ ಅವರನ್ನು ಕಾದು ಮನೆಯಿಂದ ತೆರಳಿದರು. 


ಇದಕ್ಕೂ ಮುನ್ನ ಹೈಕಮಾಂಡ್ ಸೂಚನೆ ಮೇರೆಗೆ ಈಶ್ವರಪ್ಪ ನಿವಾಸಕ್ಕೆ ಶಾಸಕ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯರಾದ ಡಿಎಸ್ ಅರುಣ್ ಮತ್ತು ರವಿಕುಮಾರ್ ಭೇಟಿ ನೀಡಿದ್ದರು. ಈಶ್ವರಪ್ಪ ಜೊತೆ ಒಂದು ಗಂಟೆ ಮಾತುಕತೆ ನಡೆಸಿ ಸಂಧಾನಕ್ಕೆ ಯತ್ನಿಸಿದ್ದರು. ಜಿಲ್ಲೆಗೆ ಮೋದಿ ಆಗಮಿಸುತ್ತಿದ್ದು, ಸಮಾವೇಶಕ್ಕೆ ಆಗಮಿಸುವಂತೆ ಆಹ್ವಾನವನ್ನೂ ನೀಡಿದ್ದರು. ಆದರೆ, ಸಂಧಾನಕಾರರ ಮನವಿಗೆ ಈಶ್ವರಪ್ಪ ಸ್ಪಂದಿಸಿಲ್ಲ. ಹೀಗಾಗಿ ಬಿಜೆಪಿ ನಾಯಕರು ಈಶ್ವರಪ್ಪ ನಿವಾಸದಿಂದ ವಾಪಸ್ ತೆರಳಿದ್ದರು.

ಭೀಕರ ರಸ್ತೆ ಅಪಘಾತ ; ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಮುಕ್ವೆ ನಿವಾಸಿ ಸಫ್ವಾನ್ ನಿಧನ

Posted by Vidyamaana on 2024-02-22 06:28:44 |

Share: | | | | |


ಭೀಕರ ರಸ್ತೆ ಅಪಘಾತ ; ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಮುಕ್ವೆ ನಿವಾಸಿ ಸಫ್ವಾನ್ ನಿಧನ

ಪುತ್ತೂರು : ಸಂಪ್ಯ ಕಲ್ಲಾರ್ಪೆ ಸಮೀಪ  ಬುಧವಾರ ಸಂಜೆ ಟಿಪ್ಪರ್ ಹಾಗೂ ಬೈಕ್  ಮಧ್ಯೆ ಢಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡಿದ್ದ ಮುಕ್ವೆ ನಿವಾಸಿ  ಸಫ್ವಾನ್  ಅವರು ಚಿಕಿತ್ಸೆ ಫಲಕಾರಿಯಾಗದೆ ಫೆ 22 ರಂದು ಬೆಳಗ್ಗೆ ನಿಧಾನರಾದರು.

ಟಿಪ್ಪರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮುಕ್ವೆ ನಿವಾಸಿ ಅಬ್ದುಲ್ಲಾ ರವರ ಮಗ ಸಫ್ವಾನ್ ಗಂಭೀರ ಗಾಯಗೊಂಡಿದ್ದರು ಕೊಡಲೇ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆ ಗೆ ಕರೆ ತಂದು ಹೆಚ್ಚಿನ ಚಿಕಿತ್ಸೆಗೆ  ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ  ಸಾವನ್ನಪ್ಪಿದ್ದಾರೆ.

 ಸಂಪ್ಯ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 25

Posted by Vidyamaana on 2023-09-25 04:45:03 |

Share: | | | | |


ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 25

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಸೆ 25 ರಂದು


ಬೆಳಗ್ಗೆ 7:30 ರಿಂದ ಮಧ್ಯಾಹ್ನ‌ 2 ಗಂಟೆ  ವರೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶತರುದ್ರಾಭಿಷೇಕ


ಮಧ್ಯಾಹ್ನ 3 ಗಂಟೆಗೆ  ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಪ್ರಯುಕ್ತ ರಾಜ್ಯ ಮಟ್ಟದ ರಿಹ್ಯಾಬ್ ಮೇಳ 2023

ಸ್ಥಳ ; ಕಾನ್ವೆಂಷನ್ ಹಾಲ್  ಮೋತಿ ಮಹಲ್ ಮಂಗಳೂರ್*


*ಸಂಜೆ 6 ಗಂಟೆಗೆ ಕಾಸರಗೋಡು  ಕಾಟುಕುಕ್ಕೆ ದೇವಸ್ಥಾನದಲ್ಲಿ ಕಾರ್ತಿಕ ಪೂಜೆ

 ಕಾರ್ಯಕ್ರಮ ದಲ್ಲಿ   ಭಾಗವಹಿಸಲಿದ್ದಾರೆ

ಚಾರ್ಮಾಡಿ ಘಾಟಿಯಲ್ಲಿ ಮತ್ತೆ 12 ಚಕ್ರದ ಲಾರಿ ಲಾಕ್… ವಾಹನ ಸವಾರರ ಪರದಾಟ

Posted by Vidyamaana on 2024-04-04 11:36:21 |

Share: | | | | |


ಚಾರ್ಮಾಡಿ ಘಾಟಿಯಲ್ಲಿ ಮತ್ತೆ 12 ಚಕ್ರದ ಲಾರಿ ಲಾಕ್… ವಾಹನ ಸವಾರರ ಪರದಾಟ

ಚಿಕ್ಕಮಗಳೂರು :ಕಳೆದ ಮಾರ್ಚ್ 18ರಂದು ಹುಬ್ಬಳ್ಳಿಯಿಂದ ಮಂಗಳೂರಿಗೆ ಹೋಗುತ್ತಿದ್ದ 16 ಚಕ್ರದ ಸಿಮೆಂಟ್ ಲಾರಿ ಚಾರ್ಮಾಡಿ ಘಾಟಿಯ ಹತ್ತನೇ ತಿರುವಿನಲ್ಲಿ ಲಾಕ್ ಆಗಿ ಮಂಗಳೂರು ಹಾಗೂ ಚಿಕ್ಕಮಗಳೂರು ಎರಡೂ ಮಾರ್ಗದಲ್ಲೂ ಮೂರ್ನಾಲ್ಕು ಕಿ.ಮೀ.ನಷ್ಟು ದೂರ ಟ್ರಾಫಿಕ್ ಜಾಮ್ ಆಗಿತ್ತು. ಇಂದು ಮತ್ತೆ ಚಾರ್ಮಾಡಿ ಘಾಟಿಯ ಎರಡನೇ ತಿರುವಿನಲ್ಲಿ 12 ಚಕ್ರದ ಲಾರಿ ಲಾಕ್ ಆಗಿದೆ. ರಸ್ತೆಯ ತಿರುವಿನಲ್ಲಿ ಲಾರಿ ಟರ್ನ್ ಆಗದೆ ನಿಂತಲ್ಲಿ ನಿಂತಿದೆ. ಬೆಳಗ್ಗೆಯಿಂದಲೂ ಕೂಡ ಚಾರ್ಮಾಡಿ ಘಾಟಿಯಲ್ಲಿ ವಾಹನಗಳು ನಿಂತಲ್ಲೇ ನಿಂತು ಮುಂದೆ ಹೋಗಲಾಗದೆ ಹಿಂದೆಯೂ ಬರಲಾಗದೆ ಪರದಾಡುವಂತೆ ಆಗಿದೆ.

ಕೆರೆಗೆ ಹಾರಿ ಆಟೋ ಚಾಲಕ ಮಹಮ್ಮದ್ ಆತ್ಮಹತ್ಯೆ

Posted by Vidyamaana on 2024-08-06 14:53:45 |

Share: | | | | |


ಕೆರೆಗೆ ಹಾರಿ ಆಟೋ ಚಾಲಕ ಮಹಮ್ಮದ್ ಆತ್ಮಹತ್ಯೆ

ಪುತ್ತೂರು: ಆಟೋ ಚಾಲಕರೋರ್ವರು ಸಂಪ್ಯದ ಕೆರೆಗೆ ಹಾರಿ ಆತ್ಮಹತ್ಯೆಗೈದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.ಸಂಪ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆಟೋ ಚಾಲಕ ಮಹಮ್ಮದ್ (48 ವ.) ಆತ್ಮಹತ್ಯೆಗೈದವರು.

Recent News


Leave a Comment: