ಪುತ್ತೂರು: ಲಾರಿ - ಸ್ಕೂಟರ್ ನಡುವೆ ಭೀಕರ ಅಪಘಾತ :ಮಿತ್ತೂರು ನಿವಾಸಿ ಶಿವರಾಮ ನಾಯ್ಕ ಮೃತ್ಯು

ಸುದ್ದಿಗಳು News

Posted by vidyamaana on 2024-07-24 08:25:31 | Last Updated by Vidyamaana on 2024-07-24 08:25:31

Share: | | | | |


ಪುತ್ತೂರು: ಲಾರಿ - ಸ್ಕೂಟರ್ ನಡುವೆ ಭೀಕರ ಅಪಘಾತ :ಮಿತ್ತೂರು ನಿವಾಸಿ ಶಿವರಾಮ ನಾಯ್ಕ ಮೃತ್ಯು

ಪುತ್ತೂರು: ನೆಹರುನಗರ ಮಂಜಲ್ಪಡ್ಪು ಬಳಿಯ ಮಂಗಲ ಸ್ಟೋರ್ಸ್ ಮುಂಭಾಗ ಜು.23 ರಂದು  ಲಾರಿ ಮತ್ತು ತ್ರಿವೀಲ್ಡರ್ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಮಿತ್ತೂರು ಏಮಾಜೆಯ ವಿಕಲಚೇತನ ಶಿವರಾಮ ನಾಯ್ಕ (50ವ) ಎಂಬವರು ಮೃತಪಟ್ಟ ಬಗ್ಗೆ ವರದಿಯಾಗಿದೆ

ಮಂಗಳೂರು ಕಡೆ ಹೋಗುತ್ತಿದ್ದ ಲಾರಿ ವೊಂದು ವಿಕಲಚೇತನ ಶಿವರಾಮ ಅವರು ಚಲಾಯಿಸುತ್ತಿದ್ದ ತ್ರಿವೀಲ್ಡ‌ರ್ ಸ್ಕೂಟರ್ ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡ ಸವಾರ ಮೃತ ಪಟ್ಟಿದ್ದಾರೆಂದು ತಿಳಿದು ಬಂದಿದೆ.

 Share: | | | | |


ತೇಜಾ ರಾಮಕೃಷ್ಣ ಭಟ್ ನಾಪತ್ತೆ

Posted by Vidyamaana on 2024-03-13 16:47:16 |

Share: | | | | |


ತೇಜಾ ರಾಮಕೃಷ್ಣ ಭಟ್ ನಾಪತ್ತೆ

ಯಲ್ಲಾಪುರ :ಯುವತಿಯೊಬ್ಬಳು ಕಾಣೆಯಾದ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಲ್ಲಾಪುರ ತಾಲೂಕಿನ ಚಂದ್ಗುಳಿಯ ದೇಸಾಯಿಮನೆ ತೇಜಾ ರಾಮಕೃಷ್ಣ ಭಟ್ಟ (26)ಕಾಣೆಯಾದ ಯುವತಿ.ಹುಬ್ಬಳ್ಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈಕೆ, ಕಳೆದ ಡಿಸೆಂಬರ್ 20 ರಂದು ಹುಬ್ಬಳ್ಳಿಗೆ ಹೋಗುವುದಾಗಿ ಮನೆಯಿಂದ ಹೊರಟಿದ್ದು, ಅಲ್ಲಿಗೂ ಹೋಗದೇ ಸಂಬಂಧಿಕರ ಮನೆಗೂ ಹೋಗದೇ ಈವರೆಗೂ ಮರಳಿ ಬಂದಿಲ್ಲ. ಈ ಕುರಿತು ತಂದೆ ರಾಮಕೃಷ್ಣ ಎಸ್ ಭಟ್ಟ ದೇಸಾಯಿಮನೆ ಪೋಲಿಸ್ ದೂರು ನೀಡಿದ್ದಾರೆ.

ಸಾಧಾರಣ ಮೈಕಟ್ಟು, ಗೋಧಿ ಬಣ್ಣ, ಕಪ್ಪು ಕೂದಲು ಹೊಂದಿದ್ದು, ಕನ್ನಡ, ಇಂಗ್ಲಿಷ್ ಮಾತನಾಡುತ್ತಾಳೆ. ಈಕೆ ಎಲ್ಲಿಯಾದರೂ ಕಂಡು ಬಂದಲ್ಲಿ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಕೋರಿದ್ದಾರೆ.

ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ: ಸೌದಿ ಅರೇಬಿಯಾದಲ್ಲಿ ಮಂಗಳೂರು ಮೂಲದ ಸಿರಾಜುದ್ದೀನ್ ಮೃತ್ಯು

Posted by Vidyamaana on 2023-04-21 11:46:41 |

Share: | | | | |


ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ: ಸೌದಿ ಅರೇಬಿಯಾದಲ್ಲಿ ಮಂಗಳೂರು ಮೂಲದ ಸಿರಾಜುದ್ದೀನ್ ಮೃತ್ಯು

ರಿಯಾದ್: ಸೌದಿ ಅರೇಬಿಯಾದಲ್ಲಿ ಮಸೀದಿಗೆ ತೆರಳಲು ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿಯಾಗಿ ಮಂಗಳೂರಿನ ಯುವಕ ಮೃತಪಟ್ಟಿರೋ ಘಟನೆ ನಡೆದಿದೆ.

ಸಜಿಪದ ಕೋಣೆಕಣಿ ಮೂಲದ ಖಾಸಿಮ್ ಮತ್ತು ಮೈನಬಾ ದಂಪತಿ ಪುತ್ರ ಸಿರಾಜುದ್ದೀನ್ ಮೃತಪಟ್ಟ ಯುವಕ. ಈತ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಚಂದ್ರಯಾಣ 3: ಭಾರತಕ್ಕೆ ಐತಿಹಾಸಿಕ ಯಶಸ್ಸು

Posted by Vidyamaana on 2023-08-23 12:56:29 |

Share: | | | | |


ಚಂದ್ರಯಾಣ 3: ಭಾರತಕ್ಕೆ ಐತಿಹಾಸಿಕ ಯಶಸ್ಸು

ಬೆಂಗಳೂರು : ಚಂದ್ರಯಾನ-3 ಲ್ಯಾಂಡರ್ ಮಾಡ್ಯೂಲ್ ಚಂದ್ರನ ಮೇಲೆ ಬುಧವಾರ ಸಂಜೆ 06.03ಕ್ಕೆ ಯಶಸ್ವಿಯಾಗಿ ಇಳಿದಿದ್ದು , ಇಸ್ರೋ ಛಲಕ್ಕೆ ಹೊಸದೊಂದು ಬಲ ದೊರಕಿದ್ದು ಭಾರತದ ವೈಜ್ಞಾನಿಕ ಶಕ್ತಿಯ ಅನಾವರಣವಾಗಿ ಜಗತ್ತಿಗೆ ಮತ್ತೊಮ್ಮೆ ಬೆಳಕು ಚಲ್ಲಿದೆ.


ನಾಲ್ಕು ವರ್ಷಗಳಲ್ಲಿ ಇಸ್ರೋದ ಎರಡನೇ ಪ್ರಯತ್ನದಲ್ಲಿ ಚಂದ್ರಯಾನ-3 ಮಿಷನ್ ಚಂದ್ರನ ಮೇಲೆ ಸ್ಪರ್ಶಿಸುವಲ್ಲಿ ಮತ್ತು ರೋಬೋಟಿಕ್ ಲೂನಾರ್ ರೋವರ್ ಅನ್ನು ಲ್ಯಾಂಡಿಂಗ್ ಮಾಡುವಲ್ಲಿ ಯಶಸ್ವಿಯಾಗಿದ್ದು, ಯುಎಸ್ ನಂತರ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ತಂತ್ರಜ್ಞಾನ ಯಶಸ್ಸು ಪಡೆದುಕೊಂಡ ನಾಲ್ಕನೇ ದೇಶ ಭಾರತವಾಗಿದೆ. ಚೀನಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟ ಯಶಸ್ವಿ ಯಾಗಿದ್ದವು.


ಇಸ್ರೋ ವಿಜ್ಞಾನಿಗಳು ಚಂದ್ರಯಾನ-3 ನ್ನು ಚಂದ್ರನ ಮೇಲ್ಮೈ ಮೇಲೆ ಮೃದುವಾಗಿ ಇಳಿಸಲು ಸಾಕಷ್ಟು ಎಚ್ಚರಿಕೆಗಳನ್ನು ತೆಗೆದುಕೊಂಡಿದ್ದರು.

BGF ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ ವತಿಯಿಂದ ಯುವ ವಿದ್ವಾಂಸ ಬಪ್ಪಳಿಗೆ ಶಫೀಕ್ ಫೈಝಿರವರಿಗೆ ಹುಟ್ಟೂರ ಸನ್ಮಾನ

Posted by Vidyamaana on 2023-09-29 11:28:59 |

Share: | | | | |


BGF ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ ವತಿಯಿಂದ ಯುವ ವಿದ್ವಾಂಸ ಬಪ್ಪಳಿಗೆ ಶಫೀಕ್ ಫೈಝಿರವರಿಗೆ  ಹುಟ್ಟೂರ ಸನ್ಮಾನ

   ಪುತ್ತೂರು : ತೋಡಾರು ಶಂಸುಲ್ ಉಲಮಾ ಅರಬಿಕ್  ಕಾಲೇಜಿನ ಸಂತತಿ ಬಪ್ಪಳಿಗೆ ನೂರುಲ್ ಹುದಾ ಮದ್ರಸದ ಹಳೆ ವಿದ್ಯಾರ್ಥಿ ಪಟ್ಟಿಕ್ಕಾಡ್ ಜಾಮಿಆಃ ನೂರಿಯದಲ್ಲಿ 2022 ನೇ ಸಾಲಿನ ಫಿಕ್ಹ್ ವಿಭಾಗದಲ್ಲಿ ಪ್ರಥಮ  ಸ್ಥಾನ ಪಡೆದು ಫೈಝಿ ಅಲ್ ಮಅಬರಿ  ಪದವಿ ಪಡೆದ ಮುಹಮ್ಮದ್ ಶಫೀಕ್ ರನ್ನು   ಬಪ್ಪಳಿಗೆಯಲ್ಲಿ ನಡೆದ ಮೀಲಾದ್ ಸಮಾರಂಭದಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಯಿತು.

    ಸ್ಥಳೀಯ ಸಾಮಾಜಿಕ ಸೇವಾ ಸಂಘಟನೆಯಾದ  *BGF ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್* ಈ ಸನ್ಮಾನವನ್ನು ಜಮಾಅತರ ಪರವಾಗಿ, ಮಸೀದಿ ವಠಾರದಲ್ಲಿ ನಡೆದ ಮೀಲಾದ್ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿತ್ತು.

ಶಾಲು ಹೊದಿಸಿ,ಐದು ಸಾವಿರ ರೂಪಾಯಿಯನ್ನೊಳಗೊಂಡ ನಗದು, ಸನ್ಮಾನ ಫಲಕ ಹಾಗೂ ಅಮೂಲ್ಯ ಗ್ರಂಥಗಳನ್ನು ನೀಡಿ ಯುವ ವಿದ್ವಾಂಸನನ್ನು ಸಂಘಟಕರು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಜಮಾಅತ್ ಸಮಿತಿ ಪದಾಧಿಕಾರಿಗಳು, ಅನ್ಸಾರುಲ್ ಇಸ್ಲಾಂ ಯುವಕ ಸಮಿತಿ ಕಾರ್ಯಕರ್ತರು, ಬಪ್ಪಳಿಗೆ ಈದ್ ಮಿಲಾದ್ ಸಮಿತಿಯ ಸಾರಥಿಗಳು, ಮಸೀದಿ ಮದ್ರಸದ ಉಸ್ತಾದರು ಹಾಗೂ ಜಮಾಅತ್ ಬಾಂಧವರು ಉಪಸ್ಥಿತರಿದ್ದರು.

      ಹಿರಿಯ ವಿದ್ವಾಂಸರಾಗಿದ್ದ ಮರ್ಹೂಂ ಅಬ್ದುಲ್ ಖಾದಿರ್ ಫೈಝಿ ಬಪ್ಪಳಿಗೆ ಹಾಗೂ ಝೈನಬ ದಂಪತಿಗಳ ಗಂಡು ಮಕ್ಕಳಲ್ಲಿ ಕಿರಿಯವರೇ ಮುಹಮ್ಮದ್ ಶಫೀಕ್.

     ಮಕ್ಕಳಿಗೆ ಬೇಕಾದ ಧಾರ್ಮಿಕ ಮತ್ತು ಲೌಕಿಕ ವಿದ್ಯಾಭ್ಯಾಸಗಳೆರಡನ್ನೂ ನೀಡಿ ಜೀವನದ ಉತ್ತಮ ದಾರಿಯನ್ನು ಕಂಡುಕೊಳ್ಳುವಲ್ಲಿ ಮಕ್ಕಳಿಗೆ ಸರಿಯಾದ ದಾರಿ ತೋರುವಲ್ಲಿ ಮರ್ಹೂಂ ಅಬ್ದುಲ್ ಖಾದರ್ ಫೈಝಿ ಉಸ್ತಾದರು ಯಶಸ್ವಿಯಾಗಿದ್ದಾರೆ.ಗಂಡು ಮಕ್ಕಳ ಪೈಕಿ ಮೂರು ಮಂದಿ ವಿದೇಶ ಉದ್ಯೋಗದಲ್ಲಿದ್ದು ಕಿರಿಯ ಮಗನಾದ ಶಫೀಕ್ ನನ್ನು ಓರ್ವ ಧಾರ್ಮಿಕ ವಿದ್ವಾಂಸ(ಆಲಿಂ)ನನ್ನಾಗಿ ಮಾಡಬೇಕೆಂದು ನನ್ನ ಆಸೆ ಎಂದು ಬಪ್ಪಳಿಗೆ ಮದ್ರಸದ ಒಂದನೇ ತರಗತಿಗೆ ದಾಖಲು ಮಾಡುವಾಗ ಹೇಳಿದ್ದರು.

   ಮದ್ರಸದ ಒಂದನೇ ತರಗತಿಯಲ್ಲಿ ಆತೂರು ಕುದ್ಲೂರಿನ  ನಝೀರ್ ಮದನಿ ಉಸ್ತಾದರು ಅಧ್ಯಾಪಕರಾಗಿದ್ದು, ಒಂದನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ 

 ತ್ರಪ್ತಿ ದಾಯಕ ಅಂಕಗಳು ಶಫೀಕ್ ಪಡೆದಿಲ್ಲ ಎಂಬ ಮಾಹಿತಿಯನ್ನು ಅವರು ಅಂದು  ಮದ್ರಸಾ ಮುಖ್ಯೋಪಾಧ್ಯಾಯರಾಗಿದ್ದ ನನ್ನ ಗಮನಕ್ಕೆ ತಂದಾಗ ಮರ್ಹೂಂ ಫೈಝಿ ಉಸ್ತಾದರಿಗೆ ಈ ಮಾಹಿತಿಯನ್ನು ನಾನು ತಿಳಿಸಿ,ಇನ್ನೊಂದು ವರ್ಷ ಒಂದನೇ ತರಗತಿಯಲ್ಲೇ ಕಲಿಯುವುದಾದರೆ ಮುಂದಿನ  ಭವಿಷ್ಯ ಒಳ್ಳೆಯ ದಾಗಲಿದೆ ಎಂದಾಗ ,ಅವನ ಹಿತಕ್ಕಾಗಿ ನೀವು ಕೈಗೊಳ್ಳುವ ಎಲ್ಲಾ ಕ್ರಮಗಳಿಗೆ ನಾನು ಬದ್ಧ ಎಂದರು.

   ಅಲ್ಲಿಂದ ಮತ್ತೆ ಪ್ರಾರಂಭವಾಯಿತು,ಶಫೀಕನ ಕಲಿಕೆಯ ಛಲ.ಮುಂದಿನ ಎಲ್ಲಾ ತರಗತಿಗಳಲ್ಲೂ ಪ್ರಥಮನಾಗಿ,ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ರೇಂಜ್ ಮಟ್ಟದಲ್ಲಿಯೇ ಉನ್ನತ ಸಾಧನೆಗೈದು, ಉತ್ತಮ ನಡವಳಿಕೆಯ ವಿದ್ಯಾರ್ಥಿ ಯಾಗಿ ಗುರುಹಿರಿಯರ ಸಂಪೂರ್ಣ ತೃಪ್ತಿ ಗಳಿಸಿದ್ದ.

    ಹತ್ತನೇ ತರಗತಿಯ ಬಳಿಕ ತಂದೆಯ ಅಭಿಲಾಷೆಯಂತೆ ಜಾಮಿಆಃ ನೂರಿಯಾದ ಸಂತತಿಯಾಗಿ ,ಧರ್ಮ ಪ್ರಬೋಧನೆಯ ಕುಡಿಯಾಗಬೇಕೆಂದು ಪ್ರತಿಷ್ಠಿತ ತೋಡಾರು ಶಂಸುಲ್ ಉಲಮಾ ಅರಬಿಕ್ ಕಾಲೇಜಿನಲ್ಲಿ ಪ್ರವೇಶಾತಿ ಪಡೆದ.(ವಿದ್ಯಾರ್ಥಿಯಾಗಿದ್ದ ಈ ಮಗನೇ ತಂದೆಯ ಜನಾಝ ನಮಾಝಿಗೆ ನೇತ್ರತ್ವವನ್ನು ನೀಡಿದ್ದರು.)ಕಾಲೇಜಿನ  ಅಧ್ಯಯನ ವರ್ಷಗಳನ್ನು 

ಪ್ರತಿಭಾನ್ವಿತನಾಗಿ ಪೂರೈಸಿ, ಜಾಮಿಆಃ ನೂರಿಯಾದಲ್ಲಿ ಸೇರಿ, ಅಧ್ಯಯನಕ್ಕೆ   ಫಿಖ್ಹ್ ವಿಭಾಗವನ್ನು ಆಯ್ಕೆ ಮಾಡಿ,ಅಂತಿಮ ಪರೀಕ್ಷೆಯಲ್ಲಿ ಘಟಾನುಘಟಿ ವಿದ್ಯಾರ್ಥಿ ಗಳೆಡೆಯಲ್ಲಿ  ಪ್ರಥಮ ಸ್ಥಾನವನ್ನು ಪಡೆದು ಮಹ್ಬರಿ ಫೈಝಿ ಪಟ್ಟ ಅಲಂಕರಿಸಿ ಬಪ್ಪಳಿಗೆಗೆ ಕೀರ್ತಿ ತಂದ ಶಫೀಕ ರನ್ನು ಅಭಿನಂದಿಸಿ ಈ ಸನ್ಮಾನವನ್ನು ನೀಡಲಾಯಿತು.

ಪ್ರಸ್ತುತ ಶಫೀಕ್ ಫೈಝಿಯವರು ಕಿನ್ಯದ ವಾದೀ ತೈಬ ಅಕಾಡೆಮಿಯಲ್ಲಿ ಮುದರ್ರಿಸರಾಗಿ ಸೇವೆ ಸಲ್ಲಿಸುತ್ತಿದ್ದು,ಮುಂದಿನ ಜೀವನ ಇನ್ನಷ್ಟು ಬೆಳಗಿ ಅವರ ವಿದ್ವತ್ ಸಂಪತ್ತು ಸಮುದಾಯಕ್ಕೆ ಬೆಳಕಾಗಲಿ...ಆಮೀನ್

ದ.ಕ. ಜಿಲ್ಲೆಯಲ್ಲಿ ಎ.24 ರಿಂದಲೇ ನಿಷೇಧಾಜ್ಞೆ ಜಾರಿ ; ಒಟ್ಟು 18.18 ಲಕ್ಷ ಮತದಾರರು - ಎರಡು ದಿನ ಮದ್ಯ ನಿಷೇಧ -ಇಲ್ಲಿದೆ ಸಂಪೂರ್ಣ ಮಾಹಿತಿ

Posted by Vidyamaana on 2024-04-24 03:29:16 |

Share: | | | | |


ದ.ಕ. ಜಿಲ್ಲೆಯಲ್ಲಿ ಎ.24 ರಿಂದಲೇ ನಿಷೇಧಾಜ್ಞೆ ಜಾರಿ ; ಒಟ್ಟು 18.18 ಲಕ್ಷ ಮತದಾರರು - ಎರಡು ದಿನ ಮದ್ಯ ನಿಷೇಧ -ಇಲ್ಲಿದೆ ಸಂಪೂರ್ಣ ಮಾಹಿತಿ

ಮಂಗಳೂರು, ಏ.23: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ಈ ಬಾರಿ ಜಿಲ್ಲೆಯಲ್ಲಿ 1,876 ಮತಗಟ್ಟೆಗಳಿದ್ದು, 524 ಸರ್ವಿಸ್ ವೋಟರ್ ಗಳು ಸೇರಿದಂತೆ ಒಟ್ಟು 18,18,127 ಮಂದಿ ಮತದಾರರಿದ್ದಾರೆ. 2,251 ಪ್ರಿಸೈಡಿಂಗ್ ಅಧಿಕಾರಿಗಳು, 2,251 ಎಪಿಆರ್‌ಓಗಳು, 4,502 ಪಿಓಗಳು, 2,251 ಗ್ರೂಪ್ ಡಿ ನೌಕರರು ಸೇರಿದಂತೆ ಒಟ್ಟಾರೆ 11,255 ಅಧಿಕಾರಿ, ಸಿಬ್ಬಂದಿಗಳು ಕಾರ್ಯ‌ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ತಿಳಿಸಿದ್ದಾರೆ. ‌


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 40 ಸಖಿ, ವಿಕಲಚೇತನರೇ ನಿರ್ವಹಿಸುವ 8, ವಿಷಯಾಧಾರಿತ 8, ಯುವ ಮತದಾರರ 8 ಹಾಗೂ ಪಾರಂಪರಿಕತೆ ಬಿಂಬಿಸುವ 8 ಬೂತ್ ಗಳು ಸೇರಿದಂತೆ ಒಟ್ಟಾರೆ 72 ಮಾದರಿ ಮತಗಟ್ಟೆಗಳನ್ನು ಈ ಬಾರಿ ನಿರ್ಮಿಸಲಾಗಿದೆ. ವಿಕಲಚೇತನರೇ ನಿರ್ವಹಿಸುವ ಮತಗಟ್ಟೆಗಳಿಗೆ ಪ್ರತ್ಯೇಕ ವಾಹನಗಳ ವ್ಯವಸ್ಥೆ ಮಾಡಲಾಗಿದೆ. 1,876 ಮತಗಟ್ಟೆಗಳ ಪೈಕಿ 1,005 ಬೂತ್ ಗಳು ನಿರ್ದಿಷ್ಟ ಪ್ರದೇಶದಲ್ಲಿವೆ, 938 ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ, 50 ಲೊಕೇಶನ್ ಗಳಲ್ಲಿ 132 ಪೋಲಿಂಗ್ ಸ್ಟೇಷನ್ ಬರಲಿದ್ದು, 200 ಮೈಕ್ರೋ ಒಬ್ಸರ್ವರ್ ಗಳನ್ನು ನೇಮಕ ಮಾಡಲಾಗಿದೆ. ಒಟ್ಟು 171 ಕ್ರಿಟಿಕಲ್ ಮತಗಟ್ಟೆಗಳನ್ನು ಗುರುತಿಸಲಾಗಿದೆ. 72 ಗಂಟೆಗಳ ಅವಧಿಯಲ್ಲಿ ಮಾದರಿ ನೀತಿ ಸಂಹಿತೆಗಾಗಿ 24 ವಿಡಿಯೋ ಸರ್ವೆಲೆನ್ಸ್ ತಂಡ, 72 ಫ್ಲೈಯಿಂಗ್ ಸ್ಕ್ವಾಡ್, 69 ಸ್ಟ್ಯಾಟಿಸ್ಟಿಕ್ಸ್ ಸರ್ವೆಲೆನ್ಸ್ ತಂಡ,  186 ಸೆಕ್ಟರ್ ಅಧಿಕಾರಿಗಳು, 8 ವಿಡಿಯೋ ವಿವಿಂಗ್ ಟೀಮ್, 8 ಮಾದರಿ ನೀತಿ ಸಂಹಿತೆ ತಂಡ, 8 ವೆಚ್ಚ ನಿರ್ವಹಣಾ ತಂಡ ಹಾಗೂ 8 ಸಹಾಯಕ ಖರ್ಚು ವೆಚ್ಚಗಳ ವೀಕ್ಷಕರನ್ನು ನಿಯೋಜಿಸಲಾಗಿದೆ.

ಕೋಟಿ – ಚೆನ್ನಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಮುಂಭಾಗ ನೋ ಪಾರ್ಕಿಂಗ್

Posted by Vidyamaana on 2023-04-08 12:08:31 |

Share: | | | | |


ಕೋಟಿ – ಚೆನ್ನಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಮುಂಭಾಗ ನೋ ಪಾರ್ಕಿಂಗ್

ಪುತ್ತೂರು: ಇತ್ತೀಚೆಗಷ್ಟೇ ಪುತ್ತೂರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಕೋಟಿ – ಚೆನ್ನಯ ಅವಳಿ ವೀರರ ಹೆಸರನ್ನು ನಾಮಕರಣ ಮಾಡಲಾಗಿದೆ. ಆ ಸಂದರ್ಭ ಬಸ್ ನಿಲ್ದಾಣ ಮುಂಭಾಗ ಹಾಕಲಾಗಿದ್ದ ನೋ ಪಾರ್ಕಿಂಗ್ ಬ್ಯಾರಿಕೇಡ್ ಇನ್ನೂ ತೆರವಾಗಿಲ್ಲ. ಪರಿಣಾಮ, ಬಸ್ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು ಅನ್ಯಥಾ ಸಮಸ್ಯೆ ಎದುರಿಸುತ್ತಿದ್ದಾರೆ.

Recent News


Leave a Comment: