ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಸುದ್ದಿಗಳು News

Posted by vidyamaana on 2024-07-24 18:06:21 | Last Updated by Vidyamaana on 2024-07-24 18:06:21

Share: | | | | |


ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಕಾರವಾರ: ಉತ್ತರ ಕನ್ನಡದ ಶಿರೂರಿನ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಕೋಝಿಕ್ಕೋಡ್ ಮೂಲದ ಅರ್ಜುನ್ ಅವರ ಲಾರಿ ಎಂದು ನಂಬಲಾದ ಟ್ರಕ್ ನದಿಯ ಆಳದಲ್ಲಿ ಇರುವ ಸುಳಿವು ಲಭ್ಯವಾಗಿದೆ. ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇದನ್ನು ಖಚಿತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಸಚಿವರು ಮಾಹಿತಿ ನೀಡಿದ್ದಾರೆ.

ನದಿಯ ಕೆಳಭಾಗದಲ್ಲಿ ಟ್ರಕ್ ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು ಅದಕ್ಕಾಗಿ ಶೋಧ ನಡೆಯುತ್ತಿದೆ.

ಶಿರೂರಿನಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ಒಂಬತ್ತನೇ ದಿನದಂದು, ಲಾರಿಯ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಪಡೆಯಲಾಗಿದೆ. ಇಂದು ಬೆಳಗ್ಗೆ ಬೂಮ್ ಲೆಂಗ್ತ್ ಕ್ರೇನ್ ಬಂದಿದ್ದು, ತಪಾಸಣೆ ಪುನರಾರಂಭವಾಗಿದೆ. ಈ ಯಂತ್ರವು 60 ಅಡಿ ಆಳದವರೆಗೆ ಹುಡುಕಬಲ್ಲ ಸಾಮರ್ಥ್ಯ ಹೊಂದಿದೆ. ಪೊಲೀಸ್ ವಾಹನದೊಂದಿಗೆ ವಾಹನವನ್ನು ಸ್ಥಳಕ್ಕೆ ತರಲಾಗಿದೆ.

ಈ ಕುರಿತು ಕೃಷ್ಣ ಬೈರೇಗೌಡ Xನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ X ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.ಜುಲೈ 16 ರಂದು ಬೆಳಿಗ್ಗೆ ಕೋಝಿಕ್ಕೋಡ್‌ನ ಕಂಡ್ಯಕ್ಕಲ್ ಮೂಲದ ಅರ್ಜುನ್ (30) ಕರ್ನಾಟಕ-ಗೋವಾ ಗಡಿಯಲ್ಲಿ ಹಾದು ಹೋಗುವ ಪನ್ವೇಲ್-ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದರು. ಭೂಕುಸಿತದಲ್ಲಿ ಟೀ ಅಂಗಡಿ ಮಾಲೀಕ ಸೇರಿದಂತೆ 10 ಜನರು ಸಾವನ್ನಪ್ಪಿದ ಸ್ಥಳದಲ್ಲಿ ಲಾರಿಯ ಜಿಪಿಎಸ್ ಸ್ಥಳವನ್ನು ಕೊನೆಯದಾಗಿ ಪತ್ತೆ ಹಚ್ಚಲಾಯಿತು.

 Share: | | | | |


ಇಂದಿನಿಂದ ಬೆಂಗಳೂರು ಕಂಬಳ

Posted by Vidyamaana on 2023-11-25 08:52:02 |

Share: | | | | |


ಇಂದಿನಿಂದ ಬೆಂಗಳೂರು ಕಂಬಳ

ಬೆಂಗಳೂರು:ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಐತಿಹಾಸಿಕ ಕಂಬಳ ಕೂಟಕ್ಕೆ ಬೆಂಗಳೂರು ಸಜ್ಜಾಗಿದೆ.

ನಗರದ ಅರಮನೆ ಮೈದಾನದಲ್ಲಿ ಶನಿವಾರದಿಂದ ಎರಡು ದಿನಗಳ ಕಾಲ ಕಂಬಳ ನಡೆಯಲಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಂದ ಬಂದಿರುವ 180ಕ್ಕೂ ಅಧಿಕ ಜೋಡಿ ಕೋಣಗಳು ಕಂಬಳದ ಕರೆಯಲ್ಲಿ ಓಟದ ರಸದೂಟ ಉಣಿಸಲಿವೆ. ಬೆಂಗಳೂರು ಕಂಬಳವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಜನತೆ ಕಾತುರರಾಗಿದ್ದಾರೆ.

ಅರಮನೆ ಮೈದಾನದ ಗೇಟ್‌ ನಂ. 5ರೊಳಕ್ಕೆ ಪ್ರವೇಶ ಪಡೆಯುತ್ತಿದ್ದಂತೆ ಕರಾವಳಿಯ ಸೊಗಡು ಕಣ್ತುಂಬುತ್ತಿದೆ. ಅಲಂಕಾರಗೊಂಡಿರುವ ಮೂರು ಬೃಹತ್‌ ವೇದಿಕೆಗಳ ಮೂಲಕ ಕಂಬಳಪ್ರಿಯರಿಗೆ ರಸದೌತಣ ನೀಡಲು ಬೆಂಗಳೂರು ಕಂಬಳದ ಕರೆ ಸಜ್ಜಾಗಿದೆ.

ಚಹಾ ಮೇಕರ್.. ಕ್ಲೀನರ್.. ಶೆಫ್..ನಿಂದ ಇಂದು ಯಶಸ್ವೀ ಉದ್ಯಮಿ

Posted by Vidyamaana on 2023-09-14 21:00:29 |

Share: | | | | |


ಚಹಾ ಮೇಕರ್.. ಕ್ಲೀನರ್.. ಶೆಫ್..ನಿಂದ ಇಂದು ಯಶಸ್ವೀ ಉದ್ಯಮಿ

ಉಡುಪಿ: ಪುಡಿಗಾಸು ಇಲ್ಲದೆ ಮುಂಬೈ ಮಹಾನಗರ ಹೋಗಿದ್ದ ಗೋವಿಂದ ಬಾಬು ಪೂಜಾರಿ (Govinda Babu Poojary) ಸತತ ಪರಿಶ್ರಮದಿಂದ ನೂರಾರು ಕೋಟಿಯ ವ್ಯವಹಾರ ನಡೆಸುವ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ. ಸದ್ಯ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆಯಲು ಹೋಗಿ ಚೈತ್ರಾ ಕುಂದಾಪುರ ಅವರಿಗೆ ಹಣ ಕೊಟ್ಟು ಇತ್ತ ಟಿಕೆಟ್ ಸಿಗದೆ ಅತ್ತ ಕೊಟ್ಟ ಹಣವೂ ವಾಪಸ್ ಸಿಗದೆ ವಂಚನೆಗೆ ಸಿಲುಕಿದ್ದಾರೆ. ಈ ಬಗ್ಗೆ ಗೋವಿಂದ ಅವರು ದೂರು ನೀಡಿದ್ದು, ಚೈತ್ರಾ ಕುಂದಾಪುರ (Chaitra Kundapur) ಮತ್ತಿತರರು ಬಂಧಿತರಾಗಿದ್ದಾರೆ. ಹಾಗಿದ್ದರೆ, ಗೋವಿಂದ ಬಾಬು ಪೂಜಾರಿ ಯಾರು? ಅವರ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ.ಕುಂದಾಪುರದ ಬಿಜೂರಿನ ಕೃಷಿ ಕುಟುಂಬವೊಂದರಲ್ಲಿ 1977 ರಲ್ಲಿ ಜನಿಸಿದ ಗೋವಿಂದ ಬಾಬು ಪೂಜಾರಿ, ಬಾಲ್ಯದಿಂದಲೇ ಏಳು ಬೀಳುಗಳನ್ನು ಕಂಡವರು. ತನ್ನ 13ನೇ ವಯಸ್ಸಿನಲ್ಲಿಯೇ ಮುಂಬೈಯಲ್ಲಿ ಕೆಲಸಕ್ಕೆ ಸೇರಿದ ಅವರು, ಹೋಟೆಲ್ ಒಂದರಲ್ಲಿ ಚಹಾ ಮಾಡುವ ಮೂಲಕ ವೃತ್ತಿ ಬದುಕು ಆರಂಭಸಿದರು.


ನಂತರದ ವರ್ಷಗಳಲ್ಲಿ ಬಿಎಸ್‌ಟಿ ಕ್ಯಾಂಟೀನ್‌ನಲ್ಲಿ ಅಡುಗೆ ಸಹಾಯಕನಾಗಿ ಸೇರಿಕೊಂಡರು. ನಂತರ ಇರ್ಲಾದ ಸನ್ನಿ ಬಾರ್​ನಲ್ಲಿ ಬಾಣಸಿಗನಾಗಿ ಮುಂದೆ ಸ್ವ ಉದ್ಯೋಗದ ಕನಸಿನೊಂದಿಗೆ ಜನರಲ್ ಸ್ಟೋರ್ ಒಂದನ್ನು ತೆರೆದರು. ಆದರೆ ಇದು ಕೈ ಹಿಡಿಯಲಿಲ್ಲ. ಇದರಿಂದ ಸಾಕಷ್ಟು ನಷ್ಟ ಅನುಭವಿಸಿದರು.ಮತ್ತೆ ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ಕ್ಲೀನಿಂಗ್ ವಿಭಾಗದಲ್ಲಿ ಕೆಲಸಕ್ಕೆ ಸೇರಿಕೊಂಡ ಗೋವಿಂದ ಅವರು 2007 ರಲ್ಲಿ ಏಳು ಮಂದಿ ನೌಕರರೊಂದಿಗೆ ಷೆಫ್ ಟಾಕ್ ಕೇಟರಿಂಗ್ ಸರ್ವಿಸಸ್ ಸಂಸ್ಥೆಯನ್ನು ಕಟ್ಟಿದರು. ಮುಂದೆ ಇದು ಷೆಫ್ ಟಾಕ್ ಫುಡ್ ಆಯಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಆಗಿ ಬದಲಾಯಿತು.


ಪ್ರಸ್ತುತ ಪೂಜಾರಿ ಅವರು ತಮ್ಮ ಸಂಸ್ಥೆಯ ಮೂಲಕ 5,000 ಜನರಿಗೆ ಉದ್ಯೋಗ ನೀಡಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಜಾರ್ಖಂಡ್, ಗುಜರಾತ್‌ನಲ್ಲಿ ಸಂಸ್ಥೆ, ಅತ್ಯಾಧುನಿಕ ಕಿಚನ್‌ಗಳನ್ನು ಹೊಂದಿದ್ದು, ವಿವಿಧ ಕಾರ್ಪೊರೇಟ್ ಕಂಪನಿಗಳಿಗೆ ಕೇಟರಿಂಗ್ ಸೇವೆ ಒದಗಿಸುತ್ತಿದ್ದಾರೆ.


ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮವು ಮತ್ಸ್ಯಬಂಧನ ಕಂಪನಿಯ ಸಹಯೋಗದಲ್ಲಿ ರಾಣಿ ಮೀನು ಮತ್ತು ಬೂತಾಯಿ ಮೀನುಗಳಿಂದ ಚಿಪ್​ಗಳನ್ನು ತಯಾರಿಸುವ ಕಂಪನಿಯನ್ನು ಆರಂಭಿಸಿದರು. ಇದರೊಂದಿಗೆ ಪ್ರಗ್ನ್ಯಾ ಸಾಗರ್ ಹೋಟೆಲ್ ಮತ್ತುರೆಸಾರ್ಟ್, ಶೆಫ್ ಟಾಕ್ ನ್ಯೂಟ್ರಿಫುಡ್ ಸಂಸ್ಥಗೆಳನ್ನು ಸ್ಥಾಪಿಸಿ ಇದರಿಂದ ವರ್ಷಕ್ಕೆ ನೂರಾರು ಕೋಟಿ ವಹಿವಾಟು ನಡೆಸುವ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ. ಸದ್ಯ ಶ್ರೀವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಮೂಲಕ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.


ರಾಜಕೀಯ ರಂಗಕ್ಕೂ ಲಗ್ಗೆ ಇಡಲು ಮುಂದಾದ ಗೋವಿಂದ ಅವರಿಗೆ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಚೈತ್ರಾ ಕುಂದಾಪುರ ಅವರು ಹಂತಹಂತವಾಗಿ ಒಟ್ಟು ಐದೂವರೆ ಕೋಟಿ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ.


ವಂಚನೆ ಬಗ್ಗೆ ಅನುಮಾನ ಉಂಟಾದ ಹಿನ್ನೆಲೆ ಹಣವನ್ನು ವಾಪಸ್ ಕೇಳಿದಾಗ ತಾನು ಮೋಸ ಹೋಗಿರುವುದು ತಿಳಿದುಬಂದಿದೆ. ತಿಂಗಳಿಂದ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆಗುತ್ತಿದ್ದರೂ, ಗೋವಿಂದ ಬಾಬು ಪೂಜಾರಿದೂರು ನೀಡಿರಲಿಲ್ಲ. ಈ ನಡುವೆ ಕೋಟಿ ಕೋಟಿ ನುಂಗಿದ್ದು ಹೇಗೆ ಎಂಬ ಸವಿವರವಾದ ಕಥೆಯನ್ನೊಳಗೊಂಡ ಅನಾಮಿಕ ಪತ್ರವೊಂದು ವಾಟ್ಸಾಪ್, ಫೇಸ್ ಬುಕ್​ನಲ್ಲಿ ಹರಿದಾಡುತ್ತಿತ್ತು. ಎಲ್ಲಾ ದಾಖಲೆಗಳನ್ನು ಸಂಗ್ರಹ ಮಾಡುತ್ತಿದ್ದ ಗೋವಿಂದ ಬಾಬು ಪೂಜಾರಿ ಬೆಂಗಳೂರಿನಲ್ಲಿ ಪ್ರಕರಣ ದಾಖಲಿಸಿದ್ದಾರೆ.


ಕರಣ ದಾಖಲಾಗುತ್ತಿದ್ದಂತೆ ಚೈತ್ರ ಅವರ ಇಡೀ ಗ್ಯಾಂಗ್ ರಾಜ್ಯದ ಅಲ್ಲಲ್ಲಿ ತಲೆಮರಿಸಿಕೊಂಡಿತ್ತು. ಅದಾಗ್ಯೂ, ಸಿಸಿಬಿ ಪೊಲೀಸರು ಚೈತ್ರಾರ ಆಪ್ತನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಉಡುಪಿಯ ಡಯಾನ ಸಮೀಪ ಅಪಾರ್ಟ್ಮೆಂಟ್ ಒಂದರಲ್ಲಿ ಅವಿತು ಕುಳಿತಿರುವ ತಿಳಿದುಬಂದಿದೆ. ಉಡುಪಿ ಕೃಷ್ಣಮಠಕ್ಕೆ ಕರೆಸಿದ ಪೊಲೀಸರು ಚೈತ್ರಾಳನ್ನು ಬಂಧಿಸಿದ್ದಾರೆ.

ಹಜರತ್ ಇಮಾಮ್ ಶಾ ವಲೀ ದರ್ಗಾಗೆ ದಸರಾ ಆನೆಗಳ ಸಲಾಂ!

Posted by Vidyamaana on 2023-10-25 08:45:27 |

Share: | | | | |


ಹಜರತ್ ಇಮಾಮ್ ಶಾ ವಲೀ ದರ್ಗಾಗೆ ದಸರಾ ಆನೆಗಳ ಸಲಾಂ!

ಮೈಸೂರು: ಅರಮನೆ ನಗರಿ ಮೈಸೂರು ಸಾಂಸ್ಕೃತಿಕ ವೈವಿಧ್ಯದಿಂದಲೂ ಶ್ರೀಮಂತ. ಅಷ್ಟೇ ಅಲ್ಲ ಸೌಹಾರ್ದದ ಪ್ರತೀಕ. ನಾಡಹಬ್ಬ ದಸರೆಯು ಎಲ್ಲರನ್ನೂ ಒಳಗೊಳ್ಳುವ ಹಬ್ಬ. ಅದನ್ನು ಸಾಬೀತು ಮಾಡುವಂತೆ ಇಲ್ಲಿ ಪರಂಪರಾಗತವಾಗಿ ಬಂದ ನೂರಾರು ಆಚರಣೆಗಳಿವೆ. ಅವು ಎಲ್ಲ ಧರ್ಮಗಳಿಗೂ ಸೇರಿವೆ.ಸೋಮವಾರ ಅರಮನೆಯಲ್ಲಿ ಜಂಬೂಸವಾರಿಗೆ ಭರದ ಸಿದ್ಧತೆಗಳು ನಡೆದಿರುವಾಗಲೇ ನಗರದ ಚಾಮರಾಜ ಮೊಹಲ್ಲಾದಲ್ಲಿರುವ ಹಜರತ್ ಇಮಾಮ್ ಶಾ ವಲೀ ದರ್ಗಾಕ್ಕೆ ದಸರಾ ಆನೆಗಳು ಬಂದು ಸಲಾಂ ಮಾಡಿದವು.


ಈ ಬಹುತ್ವದ ಹಿರಿಮೆಯನ್ನು ಸಾರುವ, ವೈವಿಧ್ಯದ ಸುಂದರ  ದೃಶ್ಯವನ್ನು  ಕಣ್ಣುಂಬಿಕೊಳ್ಳಲು ನೂರಾರು ಜನರು ಜಮಾಯಿಸಿದ್ದರು. ಸೂಫಿ ಸಂತ ಇಮಾಮ್ ಶಾ ವಲೀ ಅವರಿಗೆ, ಚಾಮುಂಡೇಶ್ವರಿ ದೇವಿಗೆ ಭಕ್ತರು ಜಯಕಾರ ಹಾಕಿದರು. ನೋಡಿದವರ ಎದೆಯಲ್ಲಿ ಸೌಹಾರ್ದದ ಹೂ ಅರಳಿತು. ಭಕ್ತರಲ್ಲಿ ಕಣ್ಣಾಲಿಗಳು ತುಂಬಿದವು.


82 ವರ್ಷಗಳಿಂದಲೂ ವಿಜಯದಶಮಿಯ ಮುನ್ನಾ ದಿನ ಆನೆಗಳು ಇಲ್ಲಿಗೆ ಬರುತ್ತಿವೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅವಧಿಯಲ್ಲಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಯೊಂದಕ್ಕೆ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿತ್ತು. ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ, ಆಶೀರ್ವಾದ ಪಡೆದ ನಂತರ ಸರಿಯಾಯಿತು. ಅಂದಿನಿಂದ ಇಂದಿನವರೆಗೂ ಆನೆಗಳು ನಿರಂತರವಾಗಿ ಪ್ರತಿ ದಸರೆಯಲ್ಲೂ ಬರುತ್ತಿವೆ.ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 14 ಆನೆಗಳು ಅರಮನೆ ದಕ್ಷಿಣ ದ್ವಾರವಾದ ಬ್ರಹ್ಮಪುರಿಯಿಂದ ಆಗಮಿಸಿದವು. ಜಗನ್ನೋಹನ ಅರಮನೆ ಹಾದಿಯಲ್ಲಿ ಕ್ರಮಿಸಿ, ಕೃಷ್ಣವಿಲಾಸ ರಸ್ತೆಯಲ್ಲಿರುವ ದರ್ಗಾಕ್ಕೆ ಬಂದವು. ಧೂಪಾರತಿ ಮಾಡಿದ ನಂತರ ವಿಭೂತಿಯನ್ನು ಹಣೆಗೆ ಹಚ್ಚಲಾಯಿತು. ದರ್ಗಾದ ಚಾದರ ಮೇಲಿಟ್ಟಿದ್ದ ನವಿಲುಗರಿಯಿಂದ ಆಶೀರ್ವಾದವನ್ನು ದರ್ಗಾದ ಮುಖ್ಯಸ್ಥ ಮೊಹಮ್ಮದ್ ನಖೀಬುಲ್ಲಾ ಷಾ ಖಾದ್ರಿ ಮಾಡಿದರು.


ಇದಕ್ಕೂ ಮೊದಲು ದರ್ಗಾದ ವತಿಯಿಂದ ಡಿಸಿಎಫ್ ಸೌರಭ್ ಕುಮಾರ್‌ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿಗೆ ಶಾಲು ಹೊದಿಸಿ ಆಶೀರ್ವದಿಸಲಾಯಿತು. ಅಭಿಮನ್ಯು, ವರಲಕ್ಷ್ಮಿ ಅರ್ಜುನ, ಮಹೇಂದ್ರ, ವಿಜಯಾ, ಪ್ರಶಾಂತ, ಸುಗ್ರೀವ, ಕಂಜನ್, ಭೀಮ, ಹಿರಣ್ಯ, ಧನಂಜಯ, ಲಕ್ಷ್ಮಿ ಆನೆಗಳು ಸೊಂಡಿಲೆತ್ತಿ ನಮಸ್ಕರಿಸಿದವು. ಗೋಪಿ


ರಾಜರಿಗೆ ಔಷಧಿಯಾಗಿ ಮಣ್ಣು ನೀಡಿದರು: 1757ರಲ್ಲಿ ರಾಜರಿಗೆ ಕಾಯಿಲೆ ಬರುತ್ತದೆ. ಯಾವುದೇ ವೈದ್ಯರಿಂದಲೂ ಪರಿಹಾರವಾಗದೇ ನರಳುತ್ತಿದ್ದಾಗ, ಅವರ ಎತ್ತಿನ ಗಾಡಿಯ ಸವಾರ ಸೂಫಿ ಗುರುಗಳನ್ನು ಕಂಡರೆ ವಾಸಿಯಾಗುತ್ತದೆ ಎಂದು ಸಲಹೆ ನೀಡಿದ್ದರು. ಅದರಂತೆ ಸಿದ್ದಿಪುರುಷ ಇಮಾಮ್ ಶಾ ವಲೀ ಅವರ ಬಳಿ ರಾಜರು ಬಂದಾಗ, ಗುರುಗಳು ಪೀಠದ ಪಕ್ಕದಲ್ಲಿದ್ದ ಮಣ್ಣನ್ನು ಮೈಗೆ ಸವರಿಕೊಳ್ಳುವಂತೆ ಅವರಿಗೆ ಕೊಟ್ಟರು ಎಂದು ದರ್ಗಾದ ಮುಖ್ಯಸ್ಥ ಮೊಹಮ್ಮದ್ ನಖೀಬುಲ್ಲಾ ಷಾ ಖಾದ್ರಿ ಪ್ರಜಾವಾಣಿಗೆ ತಿಳಿಸಿದರು.


ರಾಜರು ಮಣ್ಣನ್ನು ಹಚ್ಚಿಕೊಳ್ಳಲಿಲ್ಲ. ಮೂರು ಬಾರಿ ರಾಜರ ಕನಸಿನಲ್ಲಿ ಬಂದ ಗುರುಗಳು ಔಷಧ ಹಚ್ಚಿಕೊಳ್ಳುವಂತೆ ಹೇಳಿದರು. ಕೊನೆಗೆ ರಾಜರು ಮಣ್ಣನ್ನು ಹಚ್ಚಿಕೊಂಡ ನಂತರ ಕಾಯಿಲೆ ವಾಸಿಯಾಯಿತು. ಬರಿಗಾಲಿನಲ್ಲೇ ಗುರುಗಳಿದ್ದ ಸ್ಥಳಕ್ಕೆ ಬಂದ ರಾಜರು ಆಶೀರ್ವಾದ ಪಡೆದರು. ಅಂದಿನಿಂದಲೂ ದರ್ಗಾ ರಾಜರ ಶ್ರದ್ಧಾಕೇಂದ್ರವೂ ಆಗಿದೆ ಎಂದರು.


*1758ರಲ್ಲಿ ಇಮಾಮ್ ಶಾ ವಲೀ ಅವರ ಸಮಾಧಿಯಾದ ನಂತರ 1801ರಿಂದಲೂ ರಾಜವಂಶಸ್ಥರು ಪೂಜೆ ಸಲ್ಲಿಸಿಕೊಂಡು ಬಂದಿದ್ದಾರೆ. 8 ದಶಕದಿಂದ ಆನೆಗಳು ಆಶೀರ್ವಾದ ಪಡೆಯುತ್ತಿವೆ ಎಂದು ತಿಳಿಸಿದರು.ಇಲ್ಲಿ ಬರುವ ದಸರಾ ಆನೆಗಳು ಆಶೀರ್ವಾದ ಪಡೆದ ಮೇಲೆ ದರ್ಗಾಕ್ಕೆ ಬೆನ್ನು ತೋರಿಸಿ ತಿರುಗುವುದಿಲ್ಲ. ಹಿಮ್ಮುಖವಾಗಿ ಚಲಿಸಿ ನಂತರ ಅರಮನೆಗೆ ವಾಪಸಾಗುವುದು ಅಚ್ಚರಿಯೆನ್ನುತ್ತಾರೆ ಇಲ್ಲಿನ ಭಕ್ತರು. ಆನೆಗಳಿಗೆ ತೊಂದರೆಯಾದರೆ ಇಲ್ಲಿನ ಖಾದ್ರಿಗಳು ಅರಮನೆಯ ಆನೆ ಬಿಡಾರಕ್ಕೂ ಭೇಟಿ ನೀಡಿ, ಪೂಜೆ ಸಲ್ಲಿಸಿ ದೃಷ್ಟಿ ತೆಗೆಯುತ್ತಾರೆ. ನಾಡಹಬ್ಬ ದಸರೆ, ಆನೆಗಳು ಹಾಗೂ ದರ್ಗಾದ ಗುರುಗಳಿಗೂ ನಂಟು ಶತಮಾನಗಳಿಂದ ಬೆಸೆದಿದೆ.


ದಸರಾ ನಾಡಹಬ್ಬವಾಗಿದ್ದು, ಇದು ಎಲ್ಲರನ್ನೂ ಒಳಗೊಳ್ಳುತ್ತದೆ. ಸಾಂಸ್ಕೃತಿಕ ವೈವಿಧ್ಯವನ್ನು ಸಾರುತ್ತದೆ. ಅಂಬಾರಿ ಆನೆಗಳಿಗೆ ಚಾಮುಂಡೇಶ್ವರಿ, ಇಮಾಮ್ ಶಾ ವಲೀ ಸೇರಿದಂತೆ ದೇವರ- ಗುರುಗಳ ಆಶೀರ್ವಾದ ಸಿಕ್ಕಿದೆ. ನಾಡಿನ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ಡಿಸಿಎಫ್‌ ಸೌರಭ್ ಕುಮಾರ್ ತಿಳಿಸಿದರು.


ಆರ್‌ಎಫ್‌ಒ ಸಂತೋಷ್ ಹೂಗಾರ್, ಆನೆ ವೈದ್ಯ ಡಾ.ಮುಜೀಬ್ ರೆಹಮಾನ್, ಸಿಬ್ಬಂದಿ ಅಕ್ರಂ ಇದ್ದರು.

ರೈಲ್ವೆ ಹಳಿಗಳ ಮೇಲೆ ವಿಧ್ವಂಸಕ ಕೃತ್ಯ ನಡೆಸಲು ಯತ್ನ: ಮೂವರ ಬಂಧನ

Posted by Vidyamaana on 2023-11-16 04:40:47 |

Share: | | | | |


ರೈಲ್ವೆ ಹಳಿಗಳ ಮೇಲೆ ವಿಧ್ವಂಸಕ ಕೃತ್ಯ ನಡೆಸಲು ಯತ್ನ: ಮೂವರ ಬಂಧನ

ಮೈಸೂರು: ರೈಲ್ವೆ ಹಳಿಗಳ ಮೇಲೆ ಕಬ್ಬಿಣದ ಸ್ಲೀಪರ್ ಮತ್ತು ಮರದ ದಿಮ್ಮಿಗಳನ್ನು ಇರಿಸಿ ವಿಧ್ವಂಸಕ ಕೃತ್ಯ ನಡೆಸಲು ಯತ್ನಿಸಿದ ಪ್ರಕರಣವನ್ನು ರೈಲ್ವೆ ರಕ್ಷಣಾ ಪಡೆ ಪತ್ತೆ ಹಚ್ಚುವ ಮೂಲಕ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಿದೆ.



ಚಾಮರಾಜನಗರದಿಂದ ಮೈಸೂರಿಗೆ ಬರುತ್ತಿದ್ದ ಎಕ್ಸ್ ಪ್ರೆಸ್ ರೈಲು ಗಾಡಿ ಸಂ. 06275 ರ ಲೋಕೋ ಪೈಲಟ್ (ಚಾಲಕ) ನಂಜನಗೂಡು ಮತ್ತು ಕಡಕೊಳ ರೈಲ್ವೆ ನಿಲ್ದಾಣಗಳ ನಡುವಿನ ರೈಲ್ವೆ ಹಳಿಯಲ್ಲಿ ಸಂಭಾವ್ಯ ಅನಾಹುತವನ್ನು ತಪ್ಪಿಸಿ ಅತ್ಯಂತ ಜಾಗರೂಕವಾದ ಶ್ಲಾಘನೀಯವಾದ ಕಾರ್ಯ ಮಾಡಿದ್ದಾರೆ. ರೈಲ್ವೆ ಎಂಜಿನ್ ನ ಚಾಲಕನ ತ್ವರಿತ ಪ್ರತಿಕ್ರಿಯೆಯ ಕಾರಣವಾಗಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಕಾಪಾಡಲಾಗಿದ್ದು ರೈಲನ್ನು ಧ್ವಂಸಗೊಳಿಸುವ ದುರುದ್ದೇಶಪೂರಿತ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ.


ಘಟನೆಗೆ ಸಂಬಂಧಿಸಿದಂತೆ ಸೋಮಯ್ ಮರಾಂಡಿ, ಭಜನು ಮುರ್ಮು ಮತ್ತು ದಸಮತ್ ಮರಾಂಡಿ ಎಂದು ಗುರುತಿಸಲಾದ ಮೂವರು ವ್ಯಕ್ತಿಗಳನ್ನು ರೈಲ್ವೆ ಸಂರಕ್ಷಣಾ ಪಡೆ ಮತ್ತು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಮೂವರೂ ಆರೋಪಿಗಳು ಉದ್ದೇಶಪೂರ್ವಕವಾಗಿ ಕಿಲೋ ಮೀಟರ್. ನಂ 19/200-300ರಲ್ಲಿ ಹಳಿಗಳ ಮೇಲೆ ಕಬ್ಬಿಣದ ಸ್ಲೀಪರ್ ಮತ್ತು ಮರದ ದಿಮ್ಮಿಗಳನ್ನು ಇರಿಸಿದ್ದರು. ಇದರಿಂದಾಗಿ ರೈಲು ಗಾಡಿ ಸಂಖ್ಯೆ 06275 ಅನ್ನು ಬಲವಂತವಾಗಿ ನಿಲ್ಲಿಸಬೇಕಾಯಿತು.


ಈ ಕುರಿತು ಮಾಹಿತಿ ಪಡೆದ ಮೈಸೂರಿನ ರೈಲ್ವೆ ಸಂರಕ್ಷಣಾ ದಳದ ಸಹಾಯಕ ರಕ್ಷಣಾ ಆಯುಕ್ತ ಎಂ.ಎನ್.ಎ.ಖಾನ್, ಪೋಸ್ಟ್ ಕಮಾಂಡರ್ ಲ ಕೆ.ವಿ.ವೆಂಕಟೇಶ ಮತ್ತು ಅವರ ತಂಡ, ಆರ್‌ಪಿಎಫ್ ನ ಶ್ವಾನ ದಳ ಘಟನಾ ಸ್ಥಳಕ್ಕೆ ಕ್ಷಿಪ್ರವಾಗಿ ತೆರಳಿ ಅನಾಹುತ ತಪ್ಪಿಸುವಲ್ಲಿ‌ ಯಶಸ್ವಿಯಾಗಿದ್ದಾರೆ.ಒಡಿಶಾದ ಮಯೂರ್‌ಬಂಜ್ ನ ಬಂಗಿರಿಪೋಸಿದ ಜಲ್ದಿಹಾ ಮೂಲದ ಸೋಮಯ್ ಮರಾಂಡಿ ಎಂಬಾತ ಸ್ಥಳದಲ್ಲಿ ಪತ್ತೆಯಾಗಿದ್ದು, ವಿಚಾರಣೆ ನಡೆಸಿದಾಗ, ತನ್ನ ಸಹಚರರೊಂದಿಗೆ



ವಿಧ್ವಂಸಕ ಕೃತ್ಯದ ಯತ್ನವನ್ನು ಒಪ್ಪಿಕೊಂಡಿದ್ದಾನೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಮೈಸೂರಿನ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಆರೋಪಿಗಳ‌ವಿರುದ್ದ ರೈಲ್ವೆ ಕಾಯಿದೆ-1989ರ ಅನ್ವಯ Cr.No.39/2023 U/s 150(1)(A) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ಕುರಿತಂತೆ ತನಿಖೆಯು ನಡೆಯುತ್ತಿದ್ದು ಜೀವಾವಧಿವರೆಗಿನ ಶಿಕ್ಷೆಗೆ ಗುರಿಯಾಗಬಹುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.


ಘಟನೆಯ ಕಾರಣಕ್ಕಾಗಿ ರೈಲು ಸಂಖ್ಯೆ 06275ರ ಸಂಚಾರವನ್ನು ತಡೆಹಿಡಿದಿದ್ದ ಹಿನ್ನೆಲೆಯಲ್ಲಿ ಆ ಮಾರ್ಗದ ರೈಲುಗಳ ಸಂಚಾರದಲ್ಲಿ ಕೆಲ‌ ನಿಮಿಷಗಳ ಕಾಲ ವ್ಯತ್ಯಯ ಉಂಟಾಗಿತ್ತು.


ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ರವರು ರೈಲಿನ ಚಾಲಕನ ಸಮಯೋಚಿತ ಕ್ರಮ ಮತ್ತು ಭದ್ರತಾ ಪಡೆಗಳ ತ್ವರಿತ ಪ್ರತಿಕ್ರಿಯೆ ಶ್ಲಾಘಿಸಿ, ಪ್ರಯಾಣಿಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ವಿಚಾರಿಸಿಕೊಂಡು ಕೃತಜ್ಞತೆ ಸಲ್ಲಿಸಿದರು.


ಹಳಿಗಳ ಮೇಲೆ ಇಂತಹ ಕೃತ್ಯದಲ್ಲಿ ತೊಡಗಿ ಪ್ರಯಾಣಿಕರಿಗೆ ದೊಡ್ಡ ಆಪತ್ತು ತರುವ ಮತ್ತು ಜೀವಹಾನಿ ಉಂಟುಮಾಡುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಅಂತಹ ಚಟುವಟಿಕೆಗಳಲ್ಲಿ ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ ಅವರ ವಿರುದ್ಧ ರೈಲ್ವೆ ಆಡಳಿತವು ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಳ್ತಂಗಡಿ : ಧರ್ಮಸ್ಥಳದಲ್ಲಿ ನೈತಿಕ ಪೊಲೀಸ್ ಗಿರಿ

Posted by Vidyamaana on 2023-08-03 05:13:52 |

Share: | | | | |


ಬೆಳ್ತಂಗಡಿ : ಧರ್ಮಸ್ಥಳದಲ್ಲಿ ನೈತಿಕ ಪೊಲೀಸ್ ಗಿರಿ

ಬೆಳ್ತಂಗಡಿ : ಬೆಂಗಳೂರಿನ ನಿವಾಸಿ ಹಿಂದೂ ವಿದ್ಯಾರ್ಥಿನಿಯೊಬ್ಬಳು ಉಜಿರೆ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು ಕಳೆದ ವಾರ ಕಾಲೇಜ್ ಕೊನೆಗೊಂಡಿದ್ದು. ಬುಧವಾರ ರಾತ್ರಿ ಬೆಂಗಳೂರು ಊರಿಗೆ ಲಗೇಜ್ ಜೊತೆ ತೆರಳಲು ಉಜಿರೆ ದ್ವಾರದ ಎದುರು ನಿಂತು ಪರಿಚಯಸ್ಥ ಮುಸ್ಲಿಂ ಆಟೋ ಚಾಲಕನಿಗೆ ಕರೆ ಮಾಡಿದ್ದು ಆತ ಬಂದು ಉಜಿರೆಯಿಂದ ಧರ್ಮಸ್ಥಳ ಬಸ್ ನಿಲ್ದಾಣಕ್ಕೆ ಆ.2 ರಂದು ರಾತ್ರಿ ಸುಮಾರು 9 ಗಂಟೆಗೆ ಡ್ರಾಪ್ ಮಾಡಿ ಹೊರಡುವಾಗ ಅಪರಿಚಿತ ಯುವಕರ ತಂಡ ನಿನಗೆ ಹಿಂದೂ ಯುವತಿಯರೆ ಬೇಕಾ ಎಂದು ಬೆದರಿಕೆ ಹಾಕಿ ಹಲ್ಲೆ ಹಾಕಿ ಹಲ್ಲೆ ನಡೆಸಿದ್ದಾರೆ.ಯುವಕ ಸಾಧ್ಯ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಅತ್ತಾಜೆ ನಿವಾಸಿ ಅಬ್ದುಲ್ ಹಮೀದ್ ಅವರ ಏಳನೇ ಪುತ್ರ ಆಟೋ ಚಾಲಕ ಮೊಹಮ್ಮದ್ ಅಶೀಕ್(22) ಮೇಲೆ ಆ‌.2 ರಂದು ರಾತ್ರಿ ಸುಮಾರು9 ಗಂಟೆಗೆ ಧರ್ಮಸ್ಥಳ ದ್ವಾರದ ಮುಂಭಾಗದ ಬಸ್ ನಿಲ್ದಾಣದ ಮುಂದೆ ಹಲ್ಲೆದ್ದು . ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಧರ್ಮಸ್ಥಳ ಸಬ್ ಇನ್ಸ್‌ಪೆಕ್ಟರ್ ಅನಿಲ್‌ ಕುಮಾರ್ ತಂಡದಿಂದ ಧರ್ಮಸ್ಥಳ ಸುತ್ತಮುತ್ತಲಿನ ಸಿಸಿಕ್ಯಾಮರದ ಸಹಾಯದಿಂದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಅಕ್ಷಯ ಕಾಲೇಜಿನಲ್ಲಿ ವೈವಿಧ್ಯಮಯ ಓಣಂ ಶ್ರಾವಣೋತ್ಸವ ಹಬ್ಬ ಆಚರಣೆ

Posted by Vidyamaana on 2023-08-31 10:28:45 |

Share: | | | | |


ಅಕ್ಷಯ ಕಾಲೇಜಿನಲ್ಲಿ ವೈವಿಧ್ಯಮಯ ಓಣಂ ಶ್ರಾವಣೋತ್ಸವ ಹಬ್ಬ ಆಚರಣೆ


ಪುತ್ತೂರು: ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್(ರಿ) ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ ಆ.30 ರಂದು IQAC ಮತ್ತು ಸಾಂಸ್ಕೃತಿಕ ಸಂಘದ ಜಂಟಿ ಆಶ್ರಯದಲ್ಲಿ ಓಣಂ ‘ಶ್ರಾವಣೋತ್ಸವ’ ಹಬ್ಬವನ್ನು ಆಚರಿಸಲಾಯಿತು.  ಕಾರ್ಯಕ್ರಮವನ್ನು ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್ ಇದರ ಸ್ಥಾಪಕಾಧ್ಯಕ್ಷ  ಗೋಕುಲ್‌ನಾಥ್ ದೀಪಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ಬಳಿಕ  ಮಾತನಾಡಿ ಎಲ್ಲಾ ಹಬ್ಬಗಳನ್ನು ಆಚರಿಸುವ ಮೂಲಕ ವಿದ್ಯಾಸಂಸ್ಥೆಯಲ್ಲಿ ಆಚರಿಸಿ ಸೌಹಾರ್ಧತೆಯ ಸಂದೇಶವನ್ನು ಸಾರಬಹುದು. ವೃತ್ತಿಪರ ಕೋರ್ಸ್‌ಗಳ ಕನಸುಗಳನ್ನು ಹೊತ್ತ ವಿದ್ಯಾರ್ಥಿಗಳಿಗೆ ಈ ಸಂಸ್ಥೆ ಆಶಾಕಿರಣವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲು ವಹಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಜಯಕುಮಾರ್ ಆರ್ ನಾಯಕ್, ಕಾಲೇಜಿನ ಆಡಳಿತ ನಿದೇಶಕಿ ಕಲಾವತಿ ನಡುಬೈಲು, ಪ್ರಾಂಶುಪಾಲರಾದ ಸಂಪತ್ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ ಉಪಸ್ಥಿತರಿದ್ದರು.

ವಿದ್ಯಾರ್ಥಿ ಪ್ರಕೃತಿ ಪ್ರಾರ್ಥಿಸಿ, ಉಪನ್ಯಾಸಕಿ ರಶ್ಮಿ ಕೆ ಇವರು ಸ್ವಾಗತಿಸಿ, ಉಪನ್ಯಾಸಕರಾದ ರೋಶನ್ ಅಂಟೋನಿ ವಂದಿಸಿದರು. ಉಪನ್ಯಾಸಕ ರಾಕೇಶ್ ಕುಲದಪಾರೆ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಮೆರಗು:

ಕೇರಳದ ವಿವಿಧ ಬಗೆಯ ನೃತ್ಯ ರೂಪಕಗಳು ವಿದ್ಯಾರ್ಥಿಗಳಿಂದ ಮೂಡಿಬಂದವು.

ಕಾರ್ಯಕ್ರಮದ ನಂತರ ಕೇರಳದ ಓಣಂ ‘ಸದ್ಯ’ ಏರ್ಪಡಿಸಿದ್ದು, ಎಲ್ಲಾ ವಿದ್ಯಾರ್ಥಿಗಳು, ನೆಲದಲ್ಲಿ ಕುಳಿದು ಬಾಳೆಯಲ್ಲಿ ಓಣಂ ‘ಸದ್ಯವನ್ನು ಸವಿದರು. 

ಕಲಾರೂಪದೊಂದಿಗೆ ಆಕರ್ಷಣೀಯ ಮೆರವಣಿಗೆ:

ಅಕ್ಷಯ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದದವರು ಅಕ್ಷಯ ಕಾಲೇಜಿನಿಂದ ಸಂಪ್ಯ ಪೊಲೀಸ್ ಸ್ಟೇಷನ್‌ವರೆಗೆ ಕೇರಳ ಶೈಲಿಯ ಉಡುಗೆಯಲ್ಲಿ ಚೆಂಡೆ- ಸಿಂಗಾರಿ ಮೇಳದೊಂದಿಗೆ ವೈಭವೇತವಾಗಿ ಮೆರವಣಿಗೆ ನಡೆಯಿತು.

ವಾಮನ ಮತ್ತು ಮಹಾಬಲಿ ಚಕ್ರವರ್ತಿ, ಮೋಹಿಣಿಯಾಟ್ಟಂ ಮೊದಲಾದ ಕಲಾರೂಪದೊಂದಿಗೆ ಆಕರ್ಷಣೀಯ ಮೆರವಣಿಗೆ ನಡೆಯಿತು.

Recent News


Leave a Comment: