ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ

ಸುದ್ದಿಗಳು News

Posted by vidyamaana on 2024-07-24 16:52:02 |

Share: | | | | |


ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ

ವದೆಹಲಿ : ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯಿಸಿದರು.


ಈ ಹಿಂದೆ ಮಂಗಳೂರು- ಸುಬ್ರಹ್ಮಣ್ಯ ನಡುವೆ ಮೀಟರ್ ಗೇಜ್ ಹಳಿ ಇದ್ದಾಗ ಪ್ಯಾಸೆಂಜರ್ ರೈಲು ಓಡಾಟ ಇತ್ತು. ಬ್ರಾಡ್ ಗೇಜ್ ಹಳಿ ಮಾಡುವ ಸಲುವಾಗಿ 2005ರಲ್ಲಿ ಈ ರೈಲಿನ ಸಂಚಾರವನ್ನು ನಿಲ್ಲಿಸಲಾಗಿತ್ತು. ಆನಂತರ, ಬ್ರಾಡ್ ಗೇಜ್ ಹಳಿಯಾಗಿ ಪರಿವರ್ತನೆ ಮಾಡಲಾಗಿದೆ. ಅಂದು ಓಡುತ್ತಿದ್ದ ಪ್ಯಾಸೆಂಜರ್ ರೈಲು ಮಂಗಳೂರಿನಿಂದ ಕಬಕ- ಪುತ್ತೂರು ನಡುವೆ ಓಡಾಟ ನಡೆಸುತ್ತಿದ್ದು, ಅದನ್ನು ಸುಬ್ರಹ್ಮಣ್ಯದವರೆಗೆ ವಿಸ್ತರಣೆ ಮಾಡಬೇಕು.

ಮಂಗಳೂರು – ಸುಬ್ರಹ್ಮಣ್ಯ ಮಧ್ಯೆ ರೈಲು ಓಡಾಟವಾದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ, ಕಾಲೇಜಿಗೆ ಹೋಗುವವರಿಗೆ ಉಪಯೋಗವಾಗಲಿದೆ. ಗ್ರಾಮಾಂತರ ಪ್ರದೇಶವಾದ ಸುಳ್ಯದಿಂದ ಮಂಗಳೂರಿಗೆ ಪ್ರತಿದಿನ ಓಡಾಟ ಮಾಡುವವರಿದ್ದಾರೆ. ಅವರಿಗೂ ಉಪಯುಕ್ತ ಆಗಲಿದೆ. ಇದು ಸೌತ್ ವೆಸ್ಟರ್ನ್ ರೈಲ್ವೇ ವಿಭಾಗದಲ್ಲಿದ್ದು, ನಮ್ಮ ಜಿಲ್ಲೆಯ ಒಳಗೆ ಸಂಚರಿಸುವ ಏಕೈಕ ಪ್ಯಾಸೆಂಜರ್ ರೈಲಾಗಿದೆ.


ಜನಸಾಮಾನ್ಯರ ಹಿತದೃಷ್ಟಿಯಿಂದ ಈ ರೈಲನ್ನು ಸುಬ್ರಹ್ಮಣ್ಯದವರೆಗೂ ವಿಸ್ತರಣೆ ಮಾಡಬೇಕು ಎಂದು ರೈಲ್ವೇ ಸಚಿವರನ್ನು ಮನವಿ ಮಾಡಿದ್ದಾರೆ. ಇದಕ್ಕುತ್ತರಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಸೇನೆಯಿಂದ ನಿವೃತ್ತಿ ಪಡೆದು ಸಂಸದರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಬಗ್ಗೆ ಗೌರವ ಹೊಂದಿದ್ದು, ರೈಲ್ವೇ ವಿಚಾರಗಳ ಬಗ್ಗೆ ಯಾವುದೇ ಮನವಿಯಿದ್ದರೂ ನನ್ನ ಕಚೇರಿಗೆ ಬಂದು ವೈಯಕ್ತಿಕವಾಗಿ ಚರ್ಚಿಸಬಹುದು. ಪರಿಹರಿಸಲು ಮುಕ್ತನಿದ್ದೇನೆ ಎಂದು ಹೇಳಿದರು.

 Share: | | | | |


ಪೋಕ್ಸೊ ಕೇಸ್: ಜಾಮೀನಿನ ಮೇಲೆ ಬಿಡುಗಡೆಯಾದ 4 ದಿನಗಳಲ್ಲೇ ಮುರುಘಾ ಶ್ರೀ ಮರು ಬಂಧನ

Posted by Vidyamaana on 2023-11-20 15:51:04 |

Share: | | | | |


ಪೋಕ್ಸೊ ಕೇಸ್: ಜಾಮೀನಿನ ಮೇಲೆ ಬಿಡುಗಡೆಯಾದ 4 ದಿನಗಳಲ್ಲೇ ಮುರುಘಾ ಶ್ರೀ ಮರು ಬಂಧನ

ದಾವಣಗೆರೆ: ನವೆಂಬರ್.16ರಂದು ಪೋಕ್ಸೊ ಮೊದಲನೇ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾ ಶ್ರೀಗಳಿಗೆ ಹೈಕೋರ್ಟ್ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಈ ಜಾಮೀನಿನ ಮೇಲೆ ಬಿಡುಗಡೆ ಕೂಡ ಆಗಿದ್ದರು. ಆದ್ರೇ 2ನೇ ಪೋಕ್ಸೊ ಪ್ರಕರಣದಲ್ಲಿ ಜಾಮೀನು ಪಡೆಯೋ ಮುನ್ನವೇ ಬಿಡುಗಡೆ ಆಗಿದ್ದ ಕಾರಣ, ಅವರನ್ನು ಇಂದು ಜಾಮೀನು ಪಡೆದ 4 ದಿನಗಳಲ್ಲೇ ಮತ್ತೆ ಬಂಧಿಸಲಾಗಿದೆ.ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಚಿತ್ರದುರ್ಗದ ಮುರುಘಾ ಶ್ರೀ ವಿರುದ್ಧ ಪೋಕ್ಸೊ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಕಳೆದ 14 ತಿಂಗಳುಗಳ ಕಾಲ ಜೈಲು ಸೇರಿದ್ದರು. ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ ಬಂಧನದಲ್ಲಿದ್ದಂತ ಅವರಿಗೆ ಕೆಲ ದಿನಗಳ ಹಿಂದಷ್ಟೇ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿತ್ತು. ಆ ಜಾಮೀನಿನ ಮೇಲೆ ಬಿಡುಗಡೆ ಕೂಡ ಆಗಿದ್ದರು.


ಜಾಮೀನಿನ ಮೇಲೆ ಬಿಡುಗಡೆಗೊಂಡಿರುವಂತ ಮುರುಘಾ ಶ್ರೀಗಳು 2ನೇ ಪೋಕ್ಸೊ ಪ್ರಕರಣದಲ್ಲಿ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯಕ್ಕೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದ್ರೇ ಈ ಆದೇಶವನ್ನು ಪಾಲಿಸದೇ ವೀಡಿಯೋ ಕಾನ್ಫೆರೆನ್ಸ್ ಮೂಲಕ ಹಾಜರಾಗಿದ್ದರು. ಇದನ್ನು ಸರ್ಕಾರಿ ವಕೀಲರು ಪ್ರಶ್ನಿಸಿದ್ದರು. ಜೊತೆಗೆ ಆದೇಶ ಉಲ್ಲಂಘನೆ ಸಂಬಂಧ ಅವರ ವಿರುದ್ಧ ಕಾನೂನು ಕ್ರಮಕ್ಕೆ ಮನವಿ ಮಾಡಿದ್ದರು.ಸರ್ಕಾರಿ ವಕೀಲರ ಆಕ್ಷೇಪದ ನಂತ್ರ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯವು ಮುರುಘಾ ಶ್ರೀ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಗೊಳಿಸಿದೆ. ಈ ಹಿನ್ನಲೆಯಲ್ಲಿ ಇಂದು ದಾವಣಗೆರೆಯ ವಿರಕ್ತ ಮಠಕ್ಕೆ ತೆರಳಿದಂತ ಚಿತ್ರದುರ್ಗ ಜಿಲ್ಲೆಯ ಗ್ರಾಮಾಂತರ ಠಾಣೆಯ ಪೊಲೀಸರು, ಮುರುಘಾ ಶ್ರೀಗಳನ್ನು 2ನೇ ಪೊಕ್ಸೊ ಪ್ರಕರಣದಲ್ಲಿ ಬಂಧಿಸಿದ್ದಾರೆ.

ವಂದೇ ಭಾರತ್ ರೈಲಿನ ಟಾಯ್ಲೆಟ್ ನಲ್ಲಿ ವ್ಯಕ್ತಿಯ ಕಿತಾಪತಿ ತಂದ ಪಜೀತಿ

Posted by Vidyamaana on 2023-08-10 15:13:43 |

Share: | | | | |


ವಂದೇ ಭಾರತ್ ರೈಲಿನ ಟಾಯ್ಲೆಟ್ ನಲ್ಲಿ ವ್ಯಕ್ತಿಯ ಕಿತಾಪತಿ ತಂದ ಪಜೀತಿ

ವಿಜಯವಾಡ: ಟಿಕೆಟ್ ಇಲ್ಲದೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಟಿಕೆಟ್ ಕಲೆಕ್ಟರ್ ಗಳ ಕಣ್ತಪ್ಪಿಸಲು ಟಾಯ್ಲೆಟ್ ಸೇರಿಕೊಂಡು ಅಲ್ಲಿ ಬಳಿಕ ಸಿಗರೇಟ್ ಸೇದುವ ಮೂಲಕ ಅಧ್ವಾನ ಸೃಷ್ಟಿಸಿದ ಘಟನೆಯೊಂದು ವರದಿಯಾಗಿದೆ.


ತಿರುಪತಿ-ಸಿಕಂದರಾಬಾದ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದ್ದು, ರೈಲಿನ ಬೋಗಿಯ ಟಾಯ್ಲೆಟ್ ನಿಂದ ಹೊಗೆ ಬರುತ್ತಿದ್ದ ಕಾರಣ ಅಪಾಯದ ಕರೆಗಂಟೆ ಬಾರಿಸಿದ ಮತ್ತು ಆಟೋಮ್ಯಾಟಿಕ್ ಬೆಂಕಿ ನಿಯಂತ್ರಕ ವ್ಯವಸ್ಥೆ ಕಾರ್ಯಪ್ರವೃತ್ತಗೊಂಡ ಕಾರಣ ರೈಲು ನಿಲುಗಡೆಗೊಂಡ ಘಟನೆಯೂ ನಡೆದಿರುವುದನ್ನು ರೈಲ್ವೇ ಅಧಿಕಾರಿಗಳು ನೀಡಿರುವ ಮಾಹಿತಿಯಲ್ಲಿ ತಿಳಿಸಿದ್ದಾರೆ.


ರೈಲು ಸಂಖ್ಯೆ – 20702 ಆಂಧ್ರಪ್ರದೇಶದ ಗುಡೂರು ಮೂಲಕ ಸಾಗುತ್ತಿದ್ದಾಗ ಈ ಘಟನೆ ನಡೆದಿದ್ದು, ಸಿ-13 ಬೋಗಿಯಲ್ಲಿ ಇದು ನಡೆದಿದೆ. ಟಿಕೆಟ್ ಪಡೆದುಕೊಳ್ಳದ ವ್ಯಕ್ತಿಯೊಬ್ಬ ತಿರುಪತಿಯಲ್ಲಿ ರೈಲನ್ನು ಹತ್ತಿ ಸಿ-13 ಬೋಗಿಯಲ್ಲಿರುವ ಟಾಯ್ಲೆಟ್ ಒಳಹೊಕ್ಕು ಲಾಕ್ ಮಾಡಿಕೊಂಡಿದ್ದಾನೆ.


ಬಳಿಕ, ಅಲ್ಲಿ ಆ ವ್ಯಕ್ತಿ ಧೂಮಪಾನ ಮಾಡಿದ ಕಾರಣ ಟಾಯ್ಲೆಟ್ ಒಳಗಿದ್ದ ಸ್ವಯಂಚಾಲಿತ ಬೆಂಕಿ ನಿಯಂತ್ರಕ ವ್ಯವಸ್ಥೆ ಚಾಲನೆಗೊಂಡಿದೆ ಎಂಬ ಮಾಹಿತಿಯನ್ನು ದಕ್ಷಿಣ ಮಧ್ಯೆ ರೈಲ್ವೇ ವಲಯದ ವಿಜಯವಾಡ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.


ಮುನ್ನೆಚ್ಚರಿಕೆ ಗಂಟೆ ಬಾರಿಸುತ್ತಿದ್ದಂತೆ ಬೆಂಕಿ ನಿಯಂತ್ರಕದಿಂದ ಅಗ್ನಿ ಶಾಮಕ ಪೌಡರ್ ಬೋಗಿ ತುಂಬೆಲ್ಲಾ ಚಿಮುಕಲಾರಂಭಿಸಿದೆ, ಇದರಿಂದ ಗಾಬರಿಗೊಂಡ ಆ ಬೋಗಿಯಲ್ಲಿದ್ದ ಪ್ರಯಾಣಿಕರು ಕಂಗಾಲಾಗಿದ್ದಾರೆ. ಬಳಿಕ ಅಲ್ಲಿದ್ದ ಎಮರ್ಜೆನ್ಸಿ ಫೋನ್ ಮೂಲಕ ರೈಲಿನ ಗಾರ್ಡಿಗೆ ಮಾಹಿತಿ ನೀಡಿದ್ದಾರೆ. ಬಳಿಕ ರೈಲು ಮನುಬೋಲು ಎಂಬಲ್ಲಿ ನಿಂತಿದೆ.


ತಕ್ಷಣವೇ ಆ ಬೋಗಿಯ ಕಡೆಗೆ ಆಗಮಿಸಿದ ರೈಲ್ವೇ ಪೊಲೀಸರು ಬೆಂಕಿ ನಿಯಂತ್ರಕ ವ್ಯವಸ್ಥೆಯೊಂದಿಗೆ ಬಂದವರೇ ಟಾಯ್ಲೆಟ್ ನ ಕಿಟಕಿ ಮುರಿದು ಒಳನುಗ್ಗಿದಾಗ ಅಸಲೀ ವಿಷಯ ಬೆಳಕಿಗೆ ಬಂದಿದೆ. ಇದೀಗ ಆ ವ್ಯಕ್ತಿಯನ್ನು ರೈಲ್ವೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ರೈಲು ಅಲ್ಲಿಂದ ತನ್ನ ಪ್ರಯಾಣವನ್ನು ಮುಂದುವರೆಸಿದೆ.

ತುಮಕೂರು: ಬೆಳ್ತಂಗಡಿಯ ಮೂವರ ಸಜೀವ ದಹನ ಪ್ರಕರಣ: ತುಮಕೂರಿನಲ್ಲಿ ಗೃಹಸಚಿವರನ್ನು ಭೇಟಿಯಾದ ರಕ್ಷಿತ್ ಶಿವರಾಂ

Posted by Vidyamaana on 2024-03-24 22:08:55 |

Share: | | | | |


ತುಮಕೂರು: ಬೆಳ್ತಂಗಡಿಯ ಮೂವರ ಸಜೀವ ದಹನ ಪ್ರಕರಣ: ತುಮಕೂರಿನಲ್ಲಿ ಗೃಹಸಚಿವರನ್ನು ಭೇಟಿಯಾದ ರಕ್ಷಿತ್ ಶಿವರಾಂ

ಬೆಳ್ತಂಗಡಿ : ಮೂವರು ಬೆಳ್ತಂಗಡಿ ತಾಲೂಕಿನವರು ಕಾರಿನಲ್ಲಿ ತುಮಕೂರಿಗೆ ಹೋಗಿ ಅಲ್ಲಿ ದುಷ್ಕರ್ಮಿಗಳಿಂದ ಕಾರಿಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಗೃಹಸಚಿವ ಪರಮೇಶ್ವರ್ ಅವರ ನಿವಾಸದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಮಾ.24 ರಂದು ಸಂಜೆ ಭೇಟಿ ಮಾಡಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲು ಪೊಲೀಸ್ ಇಲಾಖೆಗೆ ಸೂಚಿಸಲು ಮನವಿ ಮಾಡಿದರು.ಅದಲ್ಲದೆ ಮೃತದೇಹದ ಡಿಎನ್ಎ ಪರೀಕ್ಷೆ ಮಾಡಿ ಕುಟುಂಬಕ್ಕೆ ಹಸ್ತಾಂತರಿಸುವ ಕ್ರಮ ಕೈಗೊಳ್ಳಲು ಮನವಿ ಮಾಡಿದರು. ಈ ವೇಳೆ ತುಮಕೂರು ಪೊಲೀಸ್ ಅಧಿಕಾರಿಯನ್ನು ಗೃಹ ಸಚಿವರು‌ ಕರೆ ಮಾಡಿ ಕರೆಸಿಕೊಂಡು ಪ್ರಕರಣದ ಬಗ್ಗೆ ಮಾಹಿತಿ ಪಡೆದರು. ಪೊಲೀಸ್ ಅಧಿಕಾರಿ ಪ್ರಕರಣದ ಎಲ್ಲಾ ಮಾಹಿತಿಯನ್ನು ವಿವರಿಸಿದ್ದು. ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು. ಇನ್ನೂ ಎರಡು ದಿನದಲ್ಲಿ ಪ್ರಕರಣದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಡಿ ತಿಳಿಸಲಾಗುವುದು ಎಂದು ಹೇಳಿದರು.

ತುಮಕೂರು ಎಡಿಷನ್ ಎಸ್ಪಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ವೇಳೆ ದ.ಕ.ಜಿಲ್ಲಾ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಫರ್ನಾಂಡೀಸ್ ಮತ್ತು  ಬೆಳ್ತಂಗಡಿ ಕಾಂಗ್ರೆಸ್ ಯೂತ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಹಕಿಂ ಕೊಕ್ಕಡ ಜೊತೆಯಲ್ಲಿದ್ದರು.

ಕಲ್ಲಡ್ಕ: ರೈಲಿನಡಿಗೆ ಬಿದ್ದು ಮಾಣಿ ಮಜಲು ನಿವಾಸಿ ಅರ್ಜುನ್ ಮೃತ್ಯು

Posted by Vidyamaana on 2023-03-17 04:42:27 |

Share: | | | | |


ಕಲ್ಲಡ್ಕ: ರೈಲಿನಡಿಗೆ ಬಿದ್ದು ಮಾಣಿ ಮಜಲು ನಿವಾಸಿ ಅರ್ಜುನ್ ಮೃತ್ಯು

ಕಲ್ಲಡ್ಕ: ರೈಲಿನಡಿಗೆ ಬಿದ್ದು ಯುವಕ ಮೃತಪಟ್ಟ ದಾರುಣ ಘಟನೆ ಮಾ 17 ರಂದು  ಬೆಳಗ್ಗೆ ಗೋಳ್ತಮಜಲು ಎಂಬಲ್ಲಿ ನಡೆದಿದೆ. ಮಾಣಿ ಮಜಲು ನಿವಾಸಿ ಅರ್ಜುನ್ (26) ಮೃತಪಟ್ಟ ದುರ್ದೈವಿ.

ಈ ಅಪಘಾತಕ್ಕೆ ಮೂಲ ಕಾರಣ ಏನೆಂದು ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನೀರಿಕ್ಷಿಸಲಾಗುತ್ತಿದೆ.

ಇಂದಿನಿಂದ ಸಾರ್ವಜನಿಕರಿಗೆ ರಾಮ್ ಲಲ್ಲಾ ದರ್ಶನ ಕ್ಕೆ ಅವಕಾಶ! ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ

Posted by Vidyamaana on 2024-01-23 11:24:46 |

Share: | | | | |


ಇಂದಿನಿಂದ ಸಾರ್ವಜನಿಕರಿಗೆ ರಾಮ್ ಲಲ್ಲಾ ದರ್ಶನ ಕ್ಕೆ ಅವಕಾಶ! ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅಯೋಧ್ಯೆಯ ರಾಮ ಮಂದಿರದಲ್ಲಿ ಹೊಸ ರಾಮ್ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ನೆರವೇರಿಸಿದರು. ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ, ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯವನ್ನು ಇಂದು ಸಾರ್ವಜನಿಕರಿಗೆ ಪ್ರವೇಶಿಸಬಹುದು.ಭವ್ಯವಾದ ದೇವಾಲಯವು ದರ್ಶನ ಅವಧಿಗಳಲ್ಲಿ ಭಗವಾನ್ ರಾಮ್ ಲಲ್ಲಾ ಅವರ ದರ್ಶನವನ್ನು ಬಯಸುವ ಸಾವಿರಾರು ಭಕ್ತರು "ಆರತಿ" ಗಾಗಿ ಉಚಿತ ಪಾಸ್ ಗಳು ಆಫ್ ಲೈನ್ ಮತ್ತು ಆನ್ ಲೈನ್ ಎರಡರಲ್ಲೂ ಲಭ್ಯವಿದೆ. ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ವೆಬ್ಸೈಟ್ ಪ್ರಕಾರ, ಶ್ರೀ ರಾಮ್ ಜನ್ಮಭೂಮಿಯಲ್ಲಿರುವ ಶಿಬಿರ ಕಚೇರಿಯಲ್ಲಿ ಮಾನ್ಯ ಸರ್ಕಾರಿ ಗುರುತಿನ ಪುರಾವೆಯನ್ನು ಪ್ರಸ್ತುತಪಡಿಸುವ ಮೂಲಕ ಆಫ್ಲೈನ್ ಪಾಸ್ಗಳನ್ನು ಪಡೆಯಬಹುದು. ಹೆಚ್ಚುವರಿ ಮಾಹಿತಿಯನ್ನು ಅವರ ವೆಬ್ಸೈಟ್ನಲ್ಲಿ ಕಾಣಬಹುದು.


ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ, ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯವನ್ನು ಇಂದು , ಜನವರಿ 23 ರಿಂದ ಸಾರ್ವಜನಿಕರಿಗೆ ಪ್ರವೇಶಿಸಬಹುದು. ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರವು ಭಗವಾನ್ ರಾಮ್ ಲಲ್ಲಾ ಅವರ ದರ್ಶನ ಕ್ಕಾಗಿ ಸಮಯವನ್ನು ಹಂಚಿಕೊಂಡಿದೆ.

ದರ್ಶನದ ಸಮಯ:ಬೆಳಿಗ್ಗೆ 7:00 ರಿಂದ 11:30

ಮಧ್ಯಾಹ್ನ 2:00 ರಿಂದ ಸಂಜೆ 7:00


ರಾಮ ಮಂದಿರ: ಆರತಿ ಸಮಯ:


ಜಾಗರಣ್ / ಶೃಂಗಾರ್ ಆರತಿ: ಬೆಳಿಗ್ಗೆ 6:30 (ಮುಂಗಡ ಬುಕಿಂಗ್ ಸಾಧ್ಯ)


ಸಂಧ್ಯಾ ಆರತಿ: ಸಂಜೆ 7:30 (ಲಭ್ಯತೆಗೆ ಅನುಗುಣವಾಗಿ ಅದೇ ದಿನದ ಬುಕಿಂಗ್ ಸಾಧ್ಯ)


ಆರತಿ/ದರ್ಶನಕ್ಕೆ ಬುಕ್ ಮಾಡುವುದು ಹೇಗೆ?


> ಭಕ್ತರು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು.

> ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿ ಮತ್ತು ವಿಸ್ಟರ್ ಗಳು ನೋಂದಣಿಗಾಗಿ ಒಟಿಪಿಯನ್ನು ಸ್ವೀಕರಿಸುತ್ತಾರೆ.

> ಮೈ ಪ್ರೊಫೈಲ್ ಗೆ ಹೋಗಿ ಮತ್ತು ಆರತಿ ಅಥವಾ ದರ್ಶನಕ್ಕಾಗಿ ಬಯಸಿದ ಸ್ಲಾಟ್ ಅನ್ನು ಕಾಯ್ದಿರಿಸಿ.

> ರುಜುವಾತುಗಳು ಮತ್ತು ಬುಕ್ ಪಾಸ್ ಒದಗಿಸಿ.

> ಆವರಣವನ್ನು ಪ್ರವೇಶಿಸುವ ಮೊದಲು ದೇವಾಲಯದ ಕೌಂಟರ್ ನಿಂದ ಪಾಸ್ ಪಡೆಯಬಹುದು.


ಪ್ರವೇಶ ಪಾಸ್ನಲ್ಲಿ ಉಲ್ಲೇಖಿಸಲಾದ ಕ್ಯೂಆರ್ ಕೋಡ್ಗಳನ್ನು ಸ್ಕ್ಯಾನ್ ಮಾಡಿದ ನಂತರ ಭಕ್ತರಿಗೆ ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಹಿಂದೆ ಹೇಳಿತ್ತು.ಸ್ಲಾಟ್ ಗಳ ಲಭ್ಯತೆಯ ಆಧಾರದ ಮೇಲೆ ಆಫ್ ಲೈನ್ ಅದೇ ದಿನದ ಬುಕಿಂಗ್ ಮಾಡಲಾಗುತ್ತದೆ. ಆರತಿಗೆ 30 ನಿಮಿಷಗಳ ಮೊದಲು ಭಕ್ತರು ದೇವಾಲಯದ ಆವರಣದಲ್ಲಿ ಹಾಜರಿರಬೇಕು. ಆರತಿ ಪಾಸ್ಗಳಿಗಾಗಿ, ಭಕ್ತರು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವೆಬ್ಸೈಟ್ನಲ್ಲಿ ನಿರ್ದಿಷ್ಟಪಡಿಸಿದಂತೆ ಮಾನ್ಯ ಸರ್ಕಾರಿ ಗುರುತಿನ ಪುರಾವೆಯನ್ನು ತರಬೇಕು

ದೇವಾಲಯದ ಅರ್ಚಕನ ಅಪಹರಿಸಲು ಯತ್ನಿಸಿದ ದುಷ್ಕರ್ಮಿಗಳು ಆಘಾತಕಾರಿ ವಿಡಿಯೋ ನೋಡಿ

Posted by Vidyamaana on 2023-10-22 15:59:15 |

Share: | | | | |


ದೇವಾಲಯದ ಅರ್ಚಕನ ಅಪಹರಿಸಲು ಯತ್ನಿಸಿದ ದುಷ್ಕರ್ಮಿಗಳು  ಆಘಾತಕಾರಿ ವಿಡಿಯೋ ನೋಡಿ

ಲಕ್ನೋ : ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಕೆಲವು ಗೂಂಡಾಗಳು ಅರ್ಚಕರೊಬ್ಬರನ್ನ ಥಳಿಸಿ ನಂತರ ದೇವಾಲಯದಿಂದ ಅಪಹರಿಸಲು ಪ್ರಯತ್ನಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ದೇವಾಲಯದ ಅರ್ಚಕನ ಅಪಹರಿಸಲು ಯತ್ನಿಸಿದ ದುಷ್ಕರ್ಮಿಗಳು, ಆಘಾತಕಾರಿ ವಿಡಿಯೋ ನೋಡಿ

ಈ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.ನಿಲ್ಲಿಸಿದ್ದ ಕಾರಿನಲ್ಲಿ ಅರ್ಚಕನನ್ನ ಸಾಗಿಸುವುದು ಅವರ ಯೋಜನೆಯಾಗಿತ್ತು. ಆದಾಗ್ಯೂ, ಗದ್ದಲದಿಂದಾಗಿ ಜನಸಂದಣಿ ಜಮಾಯಿಸಿದ ನಂತರ ಗೂಂಡಾಗಳು ಅರ್ಚಕರನ್ನ ಬಿಟ್ಟು ಸ್ಥಳದಿಂದ ಪಲಾಯನ ಮಾಡಬೇಕಾಯಿತು.

Recent News


Leave a Comment: