ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಸುದ್ದಿಗಳು News

Posted by vidyamaana on 2024-07-24 18:06:21 | Last Updated by Vidyamaana on 2024-07-24 18:06:21

Share: | | | | |


ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಕಾರವಾರ: ಉತ್ತರ ಕನ್ನಡದ ಶಿರೂರಿನ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಕೋಝಿಕ್ಕೋಡ್ ಮೂಲದ ಅರ್ಜುನ್ ಅವರ ಲಾರಿ ಎಂದು ನಂಬಲಾದ ಟ್ರಕ್ ನದಿಯ ಆಳದಲ್ಲಿ ಇರುವ ಸುಳಿವು ಲಭ್ಯವಾಗಿದೆ. ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇದನ್ನು ಖಚಿತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಸಚಿವರು ಮಾಹಿತಿ ನೀಡಿದ್ದಾರೆ.

ನದಿಯ ಕೆಳಭಾಗದಲ್ಲಿ ಟ್ರಕ್ ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು ಅದಕ್ಕಾಗಿ ಶೋಧ ನಡೆಯುತ್ತಿದೆ.

ಶಿರೂರಿನಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ಒಂಬತ್ತನೇ ದಿನದಂದು, ಲಾರಿಯ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಪಡೆಯಲಾಗಿದೆ. ಇಂದು ಬೆಳಗ್ಗೆ ಬೂಮ್ ಲೆಂಗ್ತ್ ಕ್ರೇನ್ ಬಂದಿದ್ದು, ತಪಾಸಣೆ ಪುನರಾರಂಭವಾಗಿದೆ. ಈ ಯಂತ್ರವು 60 ಅಡಿ ಆಳದವರೆಗೆ ಹುಡುಕಬಲ್ಲ ಸಾಮರ್ಥ್ಯ ಹೊಂದಿದೆ. ಪೊಲೀಸ್ ವಾಹನದೊಂದಿಗೆ ವಾಹನವನ್ನು ಸ್ಥಳಕ್ಕೆ ತರಲಾಗಿದೆ.

ಈ ಕುರಿತು ಕೃಷ್ಣ ಬೈರೇಗೌಡ Xನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ X ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.ಜುಲೈ 16 ರಂದು ಬೆಳಿಗ್ಗೆ ಕೋಝಿಕ್ಕೋಡ್‌ನ ಕಂಡ್ಯಕ್ಕಲ್ ಮೂಲದ ಅರ್ಜುನ್ (30) ಕರ್ನಾಟಕ-ಗೋವಾ ಗಡಿಯಲ್ಲಿ ಹಾದು ಹೋಗುವ ಪನ್ವೇಲ್-ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದರು. ಭೂಕುಸಿತದಲ್ಲಿ ಟೀ ಅಂಗಡಿ ಮಾಲೀಕ ಸೇರಿದಂತೆ 10 ಜನರು ಸಾವನ್ನಪ್ಪಿದ ಸ್ಥಳದಲ್ಲಿ ಲಾರಿಯ ಜಿಪಿಎಸ್ ಸ್ಥಳವನ್ನು ಕೊನೆಯದಾಗಿ ಪತ್ತೆ ಹಚ್ಚಲಾಯಿತು.

 Share: | | | | |


ಫಾಸ್ಟಾಗ್‌ಗಳಿಗೆ ಕೆವೈಸಿ ಪೂರ್ಣಗೊಳಿಸದಿದ್ದರೆ ಜ.31ರಿಂದ ಫಾಸ್ಟಾಗ್‌ ಖಾತೆಗಳು ನಿಷ್ಟ್ರಿಯ

Posted by Vidyamaana on 2024-01-17 09:31:21 |

Share: | | | | |


ಫಾಸ್ಟಾಗ್‌ಗಳಿಗೆ ಕೆವೈಸಿ ಪೂರ್ಣಗೊಳಿಸದಿದ್ದರೆ ಜ.31ರಿಂದ ಫಾಸ್ಟಾಗ್‌ ಖಾತೆಗಳು ನಿಷ್ಟ್ರಿಯ

ಹೊಸದಿಲ್ಲಿ: ಫಾಸ್ಟಾಗ್‌ಗಳಿಗೆ ಕೆವೈಸಿ ಪೂರ್ಣಗೊಳಿಸದಿದ್ದರೆ ಜ.31ರಿಂದ ಫಾಸ್ಟಾಗ್‌ ಖಾತೆಗಳು ನಿಷ್ಟ್ರಿಯವಾಗಲಿವೆ ಎಂದು ಈಗಾಗಲೇ ಎನ್‌ಎಚ್‌ಎಐ ಎಚ್ಚರಿಸಿದೆ. ಫಾಸ್ಟಾಗ್‌ಗೆ ಕೆವೈಸಿ ಪೂರ್ಣಗೊಂಡಿದೆಯೇ, ಇಲ್ಲವೇ ಎಂಬ ಸ್ಥಿತಿಗತಿ ತಿಳಿಯುವುದು ಹೇಗೆ ಹಾಗೂ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.


ಪರಿಶೀಲನೆ ಹೇಗೆ?

ಬಳಕೆದಾರರು https://fastag.ihmcl.com ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

ಲಾಗಿನ್‌ ಆಗಲು ನೋಂದಾಯಿತ ಮೊಬೈಲ್‌ ಸಂಖ್ಯೆ, ಪಾಸ್‌ವರ್ಡ್‌ ಮತ್ತು ಬಳಿಕ ಮೊಬೈಲ್‌ಗೆ ಬರುವ ಒಟಿಪಿ ಬೇಕಾಗಲಿದೆ.

ಒಮ್ಮೆ ಲಾಗಿನ್‌ ಆದ ಅನಂತರ, ಡ್ಯಾಶ್‌ಬೋರ್ಡ್‌ಗೆ ತೆರಳಿ, “ಮೈ ಪ್ರೊಫೈಲ್‌’ ವಿಭಾಗದ ಮೇಲೆ ಕ್ಲಿಕ್‌ ಮಾಡಬೇಕು.

ಇಲ್ಲಿ ನಿಮ್ಮ ಕೈವೈಸಿ ಪ್ರಕ್ರಿಯೆ ಪೂರ್ಣಗೊಂಡಿದೆಯೇ ಎಂಬ ಸ್ಥಿತಿಗತಿ ಹಾಗೂ ನೀವು ಸಲ್ಲಿಸಿರುವ ಪ್ರೊಫೈಲ್‌ ವಿವರ ಸಿಗಲಿದೆ.

ಪೂರ್ಣಗೊಳ್ಳದಿದ್ದರೆ ಏನು ಮಾಡಬೇಕು?

ಪ್ರೊಫೈಲ್‌ ವಿಭಾಗದಲ್ಲಿ, ಕೆವೈಸಿ ಎಂಬ ಉಪ ವಿಭಾಗವಿದೆ. ಅಲ್ಲಿ ಕ್ಲಿಕ್‌ ಮಾಡಿ ನೀವು ನಿಮ್ಮ ಕೆವೈಸಿ ಅಪ್‌ಡೇಟ್‌ ಮಾಡಬಹುದು.

ಬಳಕೆದಾರರು ಗುರುತು, ವಿಳಾಸದ ದಾಖಲೆಗಳನ್ನು ಸಲ್ಲಿಸಬೇಕು. ಪಾಸ್‌ಪೋರ್ಟ್‌ ಗಾತ್ರದ ಫೋಟೋ ಕೂಡ ಅಗತ್ಯ.

ಒಮ್ಮೆ ಪರಿಶೀಲಿಸಿ, ಅನಂತರ ದೃಢೀಕರಿಸಬೇಕಾಗುತ್ತದೆ.

ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಅನಂತರ, “ಪ್ರೊಸೀಡ್‌’ ಕ್ಲಿಕ್‌ ಮಾಡಿ ದರೆ ಕೈವೈಸಿ ಪೂರ್ಣಗೊಳ್ಳಲಿದೆ.

ವಂಚನೆ ಪ್ರಕರಣ : ಮುಸ್ಲಿಮ್ ಲೀಗ್ ನಾಯಕರ ಆಸ್ತಿ ಮುಟ್ಟುಗೋಲು

Posted by Vidyamaana on 2023-08-23 16:00:45 |

Share: | | | | |


ವಂಚನೆ ಪ್ರಕರಣ : ಮುಸ್ಲಿಮ್ ಲೀಗ್ ನಾಯಕರ ಆಸ್ತಿ ಮುಟ್ಟುಗೋಲು

ಕಾಸರಗೋಡು: ಫ್ಯಾಶನ್‌ ಗೋಲ್ಡ್‌ ಠೇವಣಿ ವಂಚನೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಮುಸ್ಲಿಂ ಲೀಗ್‌ ನಾಯಕರಾದ ಚಂದೇರದ ಪೂಕೋಯ ತಂಙಳ್‌, ಮಾಜಿ ಶಾಸಕ ಎಂ.ಸಿ. ಖಮರುದ್ದೀನ್‌ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.


ಅನಿಯಂತ್ರಿತ ಠೇವಣಿ ಯೋಜನೆ ನಿಷೇಧ ಕಾನೂನು ಪ್ರಕಾರ ಹೊಣೆಗಾರಿಕೆಯುಳ್ಳ ರಾಜ್ಯ ಮಟ್ಟದ ಅಧಿಕಾರಿಯಾದ ರಾಜ್ಯ ಫಿನಾನ್ಸ್‌ ಸೆಕ್ರೆಟರಿ ಸಂಜಯ್‌ಎಂ. ಕೌಲ್‌ ಅವರು ಆಸ್ತಿಗಳನ್ನು ಮುಟ್ಟುಗೋಲು ಹಾಕಿ ಆದೇಶ ಹೊರಡಿಸಿದ್ದಾರೆ. ಪ್ರಕರಣದ ತನಿಖೆಗೆ ಮೇಲ್ನೋಟ ವಹಿಸುವ ಕಣ್ಣೂರು ಕ್ರೈಂ ಬ್ರ್ಯಾಂಚ್‌ ಎಸ್‌ಪಿ ಪಿ.ವಿ. ಸದಾನಂದನ್‌ ಅವರ ವರದಿಯ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ.


ಕಂಪೆನಿಯ ಚೇರ್ಮನ್‌ ಆಗಿರುವ ಖಮರುದ್ದೀನ್‌, ಪೂಕೋಯ ತಂಙಳ್‌ ಅವರ ಹೆಸರಿನಲ್ಲಿ ಪಯ್ಯನ್ನೂರು ನಗರದಲ್ಲಿ ಕಾರ್ಯಾಚರಿಸುತ್ತಿರುವ ನಾಲ್ಕು ಕೊಠಡಿಗಳನ್ನೊಳಗೊಂಡ ಫ್ಯಾಶನ್‌ ಆರ್ನಮೆಂಟ್‌ ಜ್ಯುವೆಲ್ಲರಿ ಕಟ್ಟಡ ಹಾಗೂ ಬೆಂಗಳೂರು ಸಿಲಿಕುಂಡ ವಿಲೇಜ್‌ನಲ್ಲಿ ಪೂಕೋಯ ತಂಙಳ್‌ ಹೆಸರಿನಲ್ಲಿರುವ 1 ಎಕ್ರೆ ಭೂಮಿ ಮುಟ್ಟುಗೋಲು ಹಾಕಿಕೊಂಡ ಸೊತ್ತುಗಳಲ್ಲಿ ಒಳಗೊಂಡಿದೆ

ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೆ ಕೋವಿಡ್ ಪಾಸಿಟಿವ್: ಎಲ್ಲಾ ಕಾರ್ಯಕ್ರಮಗಳು ರದ್ದು

Posted by Vidyamaana on 2024-01-09 21:01:47 |

Share: | | | | |


ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೆ ಕೋವಿಡ್ ಪಾಸಿಟಿವ್: ಎಲ್ಲಾ ಕಾರ್ಯಕ್ರಮಗಳು ರದ್ದು

ಬೆಂಗಳೂರು : ಕರ್ನಾಟಕ ರಾಜ್ಯಪಾಲರಾಗಿರುವಂತ ಥಾವರ್ ಚಂದ್ ಗೆಹ್ಲೋಟ್ ( Thawar Chand Gehlot ) ಅವರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಮುಂದಿನ ದಿನಾಂಕದವರೆಗೆ ಅವರ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.ಈ ಕುರಿತಂತೆ ರಾಜಭವನದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೋವಿಡ್-19 ಪರೀಕ್ಷೆಗೆ ( Covid19 Test ) ಒಳಪಟ್ಟಿದ್ದರು. ಅವರ ಪರೀಕ್ಷೆ ವರದಿಯಲ್ಲಿ ಅವರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ತಿಳಿದು ಬಂದಿದೆ ಎಂದಿದೆ.


ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕೋವಿಡ್-19 ಪಾಸಿಟಿವ್ ( Covid19 Positive ) ಎಂಬುದಾಗಿ ಪರೀಕ್ಷೆಯಲ್ಲಿ ದೃಢಪಟ್ಟ ಕಾರಣ, ಮುಂದಿನ ದಿನಾಂಕದವರೆಗೆ ಅವರ ಎಲ್ಲಾ ನಿಗದಿತ ಕಾರ್ಯಕ್ರಮಗಳನ್ನು ರ್ದದುಗೊಳಿಸಿರೋದಾಗಿ ತಿಳಿಸಿದೆ.


ಇನ್ನೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಂಜಾಗ್ರತಾ ಕ್ರಮವಾಗಿ ರಾಜಭವನದಲ್ಲೇ ಕ್ವಾರಂಟೈನ್ ಆಗಲಿದ್ದಾರೆ. ಅವರು ಕೊರೋನಾ ಸೌಮ್ಯ ಲಕ್ಷಣಗಳನ್ನು ಹೊಂದಿದ್ದು, ಆರೋಗ್ಯವಾಗಿದ್ದಾರೆ. ಅವರಿಗೆ ಕೋವಿಡ್ ಚಿಕಿತ್ಸೆಯು ಹೋಂ ಕ್ವಾರಂಟೈನ್ ನಲ್ಲಿ ಮುಂದುವರೆಯಲಿದೆ ಅಂತ ಹೇಳಿದೆ.

ಎಸ್ ಬಿಐ, ಪಿಎನ್ ಬಿ ಬ್ಯಾಂಕ್ ಜೊತೆಗೆ ರಾಜ್ಯ ಸರ್ಕಾರದ ವ್ಯವಹಾರ ಸ್ಥಗಿತ, ಎರಡು ಪ್ರಕರಣ ನೆಪದಲ್ಲಿ ಎರಡು ಸಾವಿರ ಕೋಟಿ ಠೇವಣಿ ಹಿಂಪಡೆಯಲು ಸಿಎಂ ಸೂಚನೆ

Posted by Vidyamaana on 2024-08-15 06:09:36 |

Share: | | | | |


ಎಸ್ ಬಿಐ, ಪಿಎನ್ ಬಿ ಬ್ಯಾಂಕ್ ಜೊತೆಗೆ ರಾಜ್ಯ ಸರ್ಕಾರದ ವ್ಯವಹಾರ ಸ್ಥಗಿತ, ಎರಡು ಪ್ರಕರಣ ನೆಪದಲ್ಲಿ ಎರಡು ಸಾವಿರ ಕೋಟಿ ಠೇವಣಿ ಹಿಂಪಡೆಯಲು ಸಿಎಂ ಸೂಚನೆ

ಬೆಂಗಳೂರು, ಆಗಸ್ಟ್ 15: ಸರ್ಕಾರದಿಂದ ಇಡಲಾಗಿದ್ದ ನಿಶ್ಚಿತ ಠೇವಣಿಗಳನ್ನು ಹಿಂದಿರುಗಿಸದೆ ವಂಚನೆ ಎಸಗಿರುವ ಎರಡು ಪ್ರಕರಣ ನೆಪದಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಹಾಗೂ ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ (ಪಿಎನ್‌ಬಿ)ಗಳಲ್ಲಿ ಇರಿಸಿರುವ ವಿವಿಧ ಇಲಾಖೆಗಳ ಎಲ್ಲ ಠೇವಣಿ ಮೊತ್ತಗಳನ್ನು ವಾಪಸ್‌ ಪಡೆದುಕೊಳ್ಳಲು ರಾಜ್ಯ ಸರಕಾರ ಮುಂದಾಗಿದ್ದು, ಭವಿಷ್ಯದಲ್ಲಿ ಈ ಎರಡು ಬ್ಯಾಂಕ್‌ಗಳಲ್ಲಿ ಯಾವುದೇ ರೀತಿಯ ಠೇವಣಿ ಇಡದಂತೆ ಹಣಕಾಸು ಇಲಾಖೆಯಿಂದ ಎಲ್ಲ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.


ಇತ್ತೀಚೆಗೆ ನಡೆದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಹಾಗೂ 2011 ಮತ್ತು 2013ರಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳನ್ನು ಉಲ್ಲೇಖಿಸಿ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (ಪಿಎಸಿ) ಮಾಡಿದ್ದ ಶಿಫಾರಸಿನ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಹಣಕಾಸು ಇಲಾಖೆಯನ್ನೂ ಹೊಂದಿರುವ ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಹಣಕಾಸು ಇಲಾಖೆಯ (ಆಯವ್ಯಯ ಮತ್ತು ಸಂಪನ್ಮೂಲ) ಕಾರ್ಯದರ್ಶಿ ಡಾ| ಪಿ.ಸಿ. ಜಾಫ‌ರ್‌ ಆದೇಶ ಹೊರಡಿಸಿದ್ದು, ಸೆ.9ರೊಳಗೆ ಈ ಬ್ಯಾಂಕ್‌ಗಳಲ್ಲಿ ಇರಿಸಿರುವ ಎಲ್ಲ ನಿಶ್ಚಿತ ಠೇವಣಿ ಖಾತೆಗಳನ್ನು ಮುಕ್ತಾಯಗೊಳಿಸಿ ದೃಢೀಕರಣ ಹಾಗೂ ಖಾತೆಗಳ ವಿವರವನ್ನು ಇಲಾಖೆಗೆ ಸಲ್ಲಿಸುವಂತೆ ಸೂಚಿಸಲಾಗಿದೆ

ಕೇಪು:ಮತದಾರರ ಮನವೊಲಿಸಿ ಚುನಾವಣಾ ಬಹಿಷ್ಕಾರದ ಬ್ಯಾನರ್ ತೆರವುಗೊಳಿಸಿದ ಪುತ್ತಿಲ

Posted by Vidyamaana on 2023-04-25 01:54:53 |

Share: | | | | |


ಕೇಪು:ಮತದಾರರ ಮನವೊಲಿಸಿ ಚುನಾವಣಾ ಬಹಿಷ್ಕಾರದ ಬ್ಯಾನರ್ ತೆರವುಗೊಳಿಸಿದ ಪುತ್ತಿಲ

ಪುತ್ತೂರು:ಕೇಪು ಗ್ರಾಮದ ಕೊಲ್ಲಪದವು ಕೋಡಂದೂರು ಎಂಬಲ್ಲಿ ಸಾರ್ವಜನಿಕರು ಚುನಾವಣೆ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಲ್ಲಿಗೆ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿ ನಾಗರಿಕರೊಂದಿಗೆ  ಮಾತುಕತೆ ನಡೆಸಿ ಬ್ಯಾನರ್ ತೆರವುಗೊಳಿಸಿದ್ದಾರೆ.

ಅಭಿವೃದ್ಧಿ ಕಾಮಗಾರಿಗಳನ್ನು ಮಾಡದ ಹಿನ್ನೆಲೆಯಲ್ಲಿ ಈ ಬಾರಿ ತಾವು ಮತದಾನದಲ್ಲಿ ಭಾಗವಹಿಸುವುದಿಲ್ಲ ಎಂದು ಸಾರ್ವಜನಿಕರು ಚುನಾವಣಾ ಬಹಿಷ್ಕಾರ ಬ್ಯಾನರ್ ಅಳವಡಿಸಿದ್ದರು.ವಿಷಯ ತಿಳಿದು ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್ ಪುತ್ತಿಲ ಅವರು ಸ್ಥಳಕ್ಕೆ ತೆರಳಿ ಆ ಭಾಗದ ಜನರ ಮನವೊಲಿಸಿ ಬ್ಯಾನರ್ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾಣಿ-ಮೈಸೂರು ಹೆದ್ದಾರಿಯ ಶೇಖಮಲೆಯಲ್ಲಿ ಗುಡ್ಡ ಕುಸಿತ : ಪುತ್ತೂರು-ಸುಳ್ಯ ಸಂಚಾರ ಬಂದ್!

Posted by Vidyamaana on 2024-07-30 13:10:03 |

Share: | | | | |


ಮಾಣಿ-ಮೈಸೂರು ಹೆದ್ದಾರಿಯ ಶೇಖಮಲೆಯಲ್ಲಿ ಗುಡ್ಡ ಕುಸಿತ : ಪುತ್ತೂರು-ಸುಳ್ಯ ಸಂಚಾರ ಬಂದ್!

ಪುತ್ತೂರು : ಮಾಣಿ-ಮೈಸೂರು ಹೆದ್ದಾರಿಯ ಶೇಖಮಲೆ ಶಾಲೆಯ ಬಳಿ ಗುಡ್ಡ ಕುಸಿತ ಸಂಭವಿಸಿದೆ.

Recent News


Leave a Comment: