ಉಳ್ಳಾಲ ಖಾಝಿ ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ನಿಧನ

ಸುದ್ದಿಗಳು News

Posted by vidyamaana on 2024-07-08 11:07:30 | Last Updated by Vidyamaana on 2024-07-08 11:07:30

Share: | | | | |


ಉಳ್ಳಾಲ ಖಾಝಿ ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ನಿಧನ

ಮಂಗಳೂರು(ಇಟ್ಟಿಕುಳಂ): ಉಳ್ಳಾಲ ಖಾಝಿ ಸಯ್ಯದ್ ಫಝಲ್ ಕೋಯಮ್ಮ ತಂಜಳ್ ನಿಧನರಾಗಿದ್ದಾರೆ. ಕಣ್ಣೂರಿನ ಇಟ್ಟಿಕುಳಂ ನಿವಾಸಿಯಾಗಿರುವ ಹಾಗೂ ಉಳ್ಳಾಲ ಖಾಝಿಯಾಗಿದ್ದ ಇವರು ಕೂರ ತಂಜಳ್ ಎಂದೇ ಪ್ರಸಿದ್ದರಾಗಿದ್ದರು. ಅಲ್ಪಕಾಲದಿಂದ ಅನಾರೋಗ್ಯದಿಂದಿದ್ದ ಅವರು ಇಂದು ಬೆಳಿಗ್ಗೆ ನಿಧರಾಗಿದ್ದಾರೆ.

ಮೃತರು ಪತ್ನಿ ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ. ಇಂದು ರಾತ್ರಿ 9

ಗಂಟೆ ವೇಳೆಗೆ ಕೂರ ಮಸೀದಿ ವಠಾರದಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ. ಸುಲ್ತಾನುಲ್ ಉಲಮಾ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ಇಂದು ಸಂಜೆ 5 ಗಂಟೆಗೆ ಕೂರ ಮಸೀದಿಯಲ್ಲಿ ನಡೆಯಲಿರುವ ಜನಾಝಾನಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಇದೇನು ಮಿತ್ತೂರೇ? ಕಿತ್ತೂರೇ? ಹತ್ತೂರೇ? ಪುತ್ತೂರೇ? | ಪುತ್ತೂರು ನಗರಸಭೆ ಬೋರ್ಡ್ ತಂದ ಅನುಮಾನ.

Posted by Vidyamaana on 2023-01-26 13:03:53 |

Share: | | | | |


ಇದೇನು ಮಿತ್ತೂರೇ? ಕಿತ್ತೂರೇ? ಹತ್ತೂರೇ? ಪುತ್ತೂರೇ? | ಪುತ್ತೂರು ನಗರಸಭೆ ಬೋರ್ಡ್ ತಂದ ಅನುಮಾನ.

ಪುತ್ತೂರು: ಯಾವುದೇ ಪ್ರವಾಸಿಗ ಅಥವಾ ಯಾತ್ರಾರ್ಥಿ ತಾನು ಸಾಗುವ ಪ್ರಯಾಣದ ಸಂದರ್ಭ ಎದುರಾದ ಊರು ಯಾವುದೆಂದು ನೋಡಿಯೇ ನೋಡುತ್ತಾನೆ. ಆದರೆ ಪುತ್ತೂರು ಬಂದಾಗ ಮಾತ್ರ ಆತನಿಗೆ ಇದು ಯಾವ ಊರು ಎಂಬ ಅನುಮಾನ ಬಾರದೇ ಇರದು. ಇದಕ್ಕೆ ಕಾರಣ ಮುರದ ಬಳಿ ಸ್ವಾಗತಿಸುವ ಕಮಾನು.

ಮುರ ಹಾಗೂ ನೆಹರೂನಗರದ ನಡುವೆ ಪುತ್ತೂರು ನಗರಸಭೆಯ ಕಮಾನು ಎದುರುಗೊಳ್ಳುತ್ತದೆ. ಪ್ರವಾಸಿಗರಿಗೆ, ಯಾತ್ರಾರ್ಥಿಗಳಿಗೆ ಪುತ್ತೂರು ನಗರಕ್ಕೆ ಸ್ವಾಗತ ನೀಡುವ ಉದ್ದೇಶದಿಂದ ಈ ಕಮಾನನ್ನು ಅಳವಡಿಸಲಾಗಿದೆ. ಆದರೆ ವೈಚಿತ್ರ್ಯವೆಂದರೆ, ಯಾವ ಉದ್ದೇಶದಿಂದ ಈ ಕಮಾನನ್ನು ಅಳವಡಿಸಲಾಗಿದೆಯೋ, ಆ ಉದ್ದೇಶವನ್ನೇ ಮರೆತಂತಿದೆ.

       ಪುತ್ತೂರು ನಗರಕ್ಕೆ ಸ್ವಾಗತ ಎನ್ನುವುದು ಕಮಾನಿನ ಫಲಕದಲ್ಲಿದ್ದ ಒಕ್ಕಣೆ. ಆದರೆ ಇಂದು ನೋಡಿದರೆ, `ಪು’ ಅಕ್ಷರ ಅಳಿಸಿಹೋಗಿದೆ. `ತ್ತೂರು’ ಶಬ್ದ ಮಾತ್ರ ಕಾಣಿಸುತ್ತಿದೆ. ಆದ್ದರಿಂದ ಹೊರಭಾಗದಿಂದ ಬಂದವರು, ಇದನ್ನು ಯಾವ ರೀತಿಯಲ್ಲಿ ಅರ್ಥವಿಸಿಕೊಳ್ಳಬೇಕು. ಸುತ್ತೂರು, ಮಿತ್ತೂರು, ಹತ್ತೂರು ಹೀಗೆ ಹತ್ತು ಹಲವು ಹೆಸರುಗಳ ಗೊಂದಲಕ್ಕೆ ಈಡಾಗುವ ಸಾಧ್ಯತೆಯೇ ಅಧಿಕ.

   ಈ ಕಮಾನಿನ ಫಲಕದಲ್ಲಿ ಹೆಚ್ಚಿನ ಎಲ್ಲಾ ಶಬ್ದಗಳು ಅಳಿಸಿಹೋಗಿದೆ. ಕಂಬ ಹಾಗೂ ಫಲಕ ಬಣ್ಣ ಕಳೆದುಕೊಂಡು, ವಿಕೃತಿಗೊಂಡಿದೆ. ಪ್ರವಾಸಿಗರ ಗಮನವನ್ನು ಸೆಳೆಯಬೇಕಿದ್ದ ಫಲಕ, ಪ್ರವಾಸಿಗರನ್ನು ಗೊಂದಲಕ್ಕೆ ಈಡು ಮಾಡುತ್ತಿದೆ.

      ಇಂತಹ ಕಮಾನು, ಫಲಕಗಳು ಪುತ್ತೂರು ಪೇಟೆಯ ಅಂದವನ್ನು ಹೆಚ್ಚಿಸಬೇಕಿತ್ತು. ಮಾತ್ರವಲ್ಲ, ಪುತ್ತೂರು ಪೇಟೆಯ ಪ್ರತಿಬಿಂಬದಂತೆ ಕಾರ್ಯನಿರ್ವಹಿಸಬೇಕಿತ್ತು. ಆದರೆ ಈ ಫಲಕ ಪುತ್ತೂರು ಪೇಟೆಯ ಅಂದವನ್ನು ಕೆಡಿಸುವಂತಿದೆ. ಪುತ್ತೂರು ನಗರಸಭೆ ಸ್ವಚ್ಛತೆಯಲ್ಲಿ 3ನೇ ಸ್ಥಾನದಲ್ಲಿದೆ ಎಂಬ ಅಭಿದಾನಕ್ಕೆ ಪಾತ್ರವಾಗಿದೆ. ಆದರೆ ಈ ಫಲಕವನ್ನು ನೋಡಿದರೆ, ಇದು ನಿಜವೇ ಎಂಬ ಪ್ರಶ್ನೆಗೆ ದಾರಿ ಮಾಡಿಕೊಡುವಂತಿದೆ.

ಕೈ ಕೊಟ್ಟ ಯುವತಿಯ ಖಾಸಗಿ ವಿಡಿಯೋ ಲೀಕ್ : ಮದುವೆ ನಿಲ್ಲಿಸಿ ಅರೆಸ್ಟ್ ಆದ ಮಾಜಿ ಪ್ರೇಮಿ ಮುತ್ತುರಾಜ್ ..!

Posted by Vidyamaana on 2024-02-24 11:34:44 |

Share: | | | | |


ಕೈ ಕೊಟ್ಟ ಯುವತಿಯ ಖಾಸಗಿ ವಿಡಿಯೋ ಲೀಕ್ : ಮದುವೆ ನಿಲ್ಲಿಸಿ ಅರೆಸ್ಟ್ ಆದ ಮಾಜಿ ಪ್ರೇಮಿ ಮುತ್ತುರಾಜ್ ..!

ಬೆಳಗಾವಿ : ಯುವತಿಯ ಖಾಸಗಿ ವಿಡಿಯೋ ಹರಿಬಿಟ್ಟು ಮದುವೆ ನಿಲ್ಲಿಸಿದ ಮಾಜಿ ಪ್ರೇಮಿಯೋರ್ವ ಪೊಲೀಸರ ಅತಿಥಿಯಾಗಿದ್ದಾನೆ. ಹೌದು, ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಯುವತಿಯ ಜೀವನವೇ ಹಾಳಾಗಿದೆ.ಯುವತಿ ತನ್ನನ್ನು ಬಿಟ್ಟು ಬೇರೊಬ್ಬನನ್ನು ಮದುವೆಯಾಗಲು ಹೊರಟ್ಟಿದ್ದಕ್ಕೆ ಸಿಟ್ಟಾದ ಮಾಜಿ ಪ್ರೇಮಿ ಮುತ್ತುರಾಜ್ ಎಂಬಾತ ಯುವತಿಯೊಂದಿಗೆ ಕಳೆದಿದ್ದ ಖಾಸಗಿ ಕ್ಷಣದ ಫೋಟೋ, ವಿಡಿಯೋವನ್ನು ಪತಿಗೆ ಕಳುಹಿಸಿದ್ದಾನೆ.ಈ ವಿಚಾರ ತಿಳಿದ ಗಂಡಿನ ಕಡೆಯವರು ಮದುವೆ ಬೇಡ ಎಂದು ಹೇಳಿದ್ದಾರೆ.


ಮುತ್ತುರಾಜ್ (24) ಎಂಬಾತ ಯುವತಿಯೋರ್ವಳನ್ನು ಪ್ರೀತಿಸಿದ್ದಾನೆ. ಇವರಿಬ್ಬರು ಕೆಲವರ್ಷ ಜೊತೆಯಲ್ಲಿ ಸುತ್ತಾಡಿದ್ದರು. ಅಲ್ಲದೇ ಯುವತಿ ಮುತ್ತುರಾಜ್ ಬಲೆಗೆ ಬಿದ್ದು ದೈಹಿಕ ಸಂಪರ್ಕವನ್ನು ಬೆಳೆಸಿದ್ದಾಳೆ . ಈ ವೇಳೆ ಮುತ್ತುರಾಜ್ ಖಾಸಗಿ ವಿಡಿಯೋಗಳನ್ನು ಕದ್ದು ಸೆರೆ ಹಿಡಿದಿದ್ದಾನೆ. ನಂತರ ಯಾವಾಗ ಯುವತಿ ಮದುವೆ ಆಗೋದಿಲ್ಲ ಎಂದು ಉಲ್ಟಾ ಹೊಡೆದು ಬೇರೊಬ್ಬನನ್ನು ಮದುವೆಯಾಗಲು ಸಿದ್ದಳಾದಳೋ ಆಗ ಮುತ್ತುರಾಜ್ ಯುವತಿಯ ಮನೆಯವರು ನೋಡಿದ ಗಂಡಿಗೆ ಖಾಸಗಿ ಫೋಟೋ, ವಿಡಿಯೋ ಕಳುಹಿಸಿದ್ದಾನೆ. ಈ ವಿಚಾರ ತಿಳಿದ ಗಂಡಿನ ಕಡೆಯವರು ಮದುವೆ ಬೇಡ ಎಂದು ಹೇಳಿದ್ದಾರೆ.ಸದ್ಯ, ಆರೋಪಿ ಮುತ್ತುರಾಜ್ ವಿರುದ್ಧ ಯುವತಿ ದೂರು ದಾಖಲಿಸಿದ್ದು, ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಪುತ್ತೂರು : ಬಾಯ್ದೆರೆದ ಹೊಂಡ: ಸೇತುವೆಯಲ್ಲಿದೆ ಅಪಾಯ ನೋಡ

Posted by Vidyamaana on 2024-06-06 11:51:22 |

Share: | | | | |


ಪುತ್ತೂರು : ಬಾಯ್ದೆರೆದ ಹೊಂಡ: ಸೇತುವೆಯಲ್ಲಿದೆ ಅಪಾಯ ನೋಡ

ಪುತ್ತೂರು: ಇಲ್ಲಿನ ಎಪಿಎಂಸಿ ರಸ್ತೆಯಲ್ಲಿರುವ ಆದರ್ಶ ಆಸ್ಪತ್ರೆ ಸಮೀಪದ ಸೇತುವೆ ಮೇಲೆ ಹೊಂಡವೊಂದು ಬಾಯ್ದೆರೆದು ಕೂತಿದೆ. ದಿನದಿಂದ ದಿನಕ್ಕೆ ಗಾತ್ರ ಹಿಗ್ಗಿಸಿಕೊಳ್ಳುತ್ತಿದ್ದು, ವಾಹನ ಸವಾಹರರಿಗೆ, ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.

ಅಪ್ರಾಪ್ತಗೆ ಲೈಂಗಿಕ ಕಿರುಕುಳ ಆರೋಪ. ಬೆಳಿಯೂರುಕಟ್ಟೆ ನಿವಾಸಿ ಪ್ರಸಾದ್ ಬಂಧನ

Posted by Vidyamaana on 2024-07-24 10:52:54 |

Share: | | | | |


ಅಪ್ರಾಪ್ತಗೆ ಲೈಂಗಿಕ ಕಿರುಕುಳ ಆರೋಪ. ಬೆಳಿಯೂರುಕಟ್ಟೆ ನಿವಾಸಿ ಪ್ರಸಾದ್ ಬಂಧನ

ಪುತ್ತೂರು : ಅಪ್ರಾಪ್ತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬೆಳಿಯೂರುಕಟ್ಟೆ ನಿವಾಸಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.

ಕೆಂಪೇಗೌಡ್ರ ನಾಡಿನಲ್ಲಿ ಕಂಬಳದ ಗೌಜಿ – ಸಿಲಿಕಾನ್ ಸಿಟಿಯಲ್ಲಿ ಕೋಣಗಳ ಓಟದ ಗೌಜಿ-ಗಮ್ಮತ್ತು

Posted by Vidyamaana on 2023-08-07 01:47:24 |

Share: | | | | |


ಕೆಂಪೇಗೌಡ್ರ ನಾಡಿನಲ್ಲಿ ಕಂಬಳದ ಗೌಜಿ – ಸಿಲಿಕಾನ್ ಸಿಟಿಯಲ್ಲಿ ಕೋಣಗಳ ಓಟದ ಗೌಜಿ-ಗಮ್ಮತ್ತು

ಬೆಂಗಳೂರು : ರಾಜ್ಯದಲ್ಲಿ ಹಲವು ಪ್ರಾದೇಶಿಕ ಸೊಗಡುಗಳನ್ನು ಹೊಂದಿದ ಕರಾವಳಿ ತೀರದ ಯಕ್ಷಗಾನ ಬೆಂಗಳೂರಿಗೆ ಕಾಲಿಟ್ಟು ದಶಕಗಳೇ ಕಳೆದಿವೆ. ಈಗ ಕಾಂತಾರ ಸಿನಿಮಾದ ಮೂಲಕ ಜಗತ್ತಿಗೆ ಅತಿಹೆಚ್ಚು ಚಿರಪರಿಚಿತವಾದ ಕೆಸರಿನ ಗದ್ದೆಯಲ್ಲಿ ಶರವೇಗದಲ್ಲಿ ಓಡುವ ಕೋಣಗಳ ಕಂಬಳವನ್ನು ಈಗ ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗುತ್ತಿದೆ.ಇದಕ್ಕೆ ದಿನಗಣನೆ ಆರಂಭವಾಗಿದ್ದು, ತುಳು ಕೂಟದಿಂದ ಭರ್ಜರಿಯಾಗಿ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. 


ಇನ್ನು ರಾಜ್ಯದಲ್ಲಿ ನಮಗೆ ಕಂಬಳ ಎಂದಾಕ್ಷಣ ಕರಾವಳಿಯ ಪ್ರದೇಶಗಳು ನೆನಪಿಗೆ ಬರುತ್ತವೆ. ಅದರಲ್ಲೂ ಜಾಗತಿಕವಾಗಿ ಭರ್ಜರಿ ಯಶಸ್ಸು ಕಂಡ "ಕಾಂತಾರ" ಸಿನಿಮಾ ಬಂದ ಮೇಲಂತೂ ಕಂಬಳ ಪ್ರಸಿದ್ಧಿಯೂ ಮತ್ತಷ್ಟು ಹೆಚ್ಚಾಗಿತ್ತು. ಇನ್ನು ಕಂಬಳ ಎಂದಾಕ್ಷಣ ಕಾಂತಾರ ಸಿನಿಮಾದ ನೆನಪು ಬರುವಷ್ಟರ ಮಟ್ಟಿಗೆ ಜನಜನಿತವಾಯಿತು. ಕರಾವಳಿಯಲ್ಲಷ್ಟೇ ನಡೆಯುವ ಹಾಗೂ ಅಲ್ಲಿ ಮಾತ್ರ ನಡೆಸಬಹುದಾದ ಕಂಬಳ ಕ್ರೀಡೆಯನ್ನು ಅಥವಾ ಪ್ರಾದೇಶಿಕ ಸೊಗಡನನ್ನು ರಾಜಧಾನಿ ಬೆಂಗಳೂರಿನಲ್ಲಿ ನಡೆಸಲು ಮುಂದಾಗಿದ್ದಾರೆಅದಕ್ಕೆ ಭರದ ಸಿದ್ಧತೆಯೀ ನಡೆಸಲಾಗಿದೆ 

ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಬೆಂಗಳೂರು ತುಳು ಕೂಟದ 50ನೇ ವರ್ಷಾಚರಣೆ: ಕರಾವಳಿಗೆ ಸೀಮಿತವಾಗಿರುವ ಕಂಬಳ ಬೆಂಗಳೂರಿನಲ್ಲಿ ನಡೆದರೆ ಹೇಗೆ? ಎಂಬ ಯೋಚನೆ ಕಳೆದ ಕೆಲವು ವರ್ಷದಿಂದ ಕರಾವಳಿಗರ ಅನೇಕರ ಮನಸ್ಸಲ್ಲಿದೆ. ಇದೀಗ ಅದಕ್ಕೂ ಕಾಲ ಕೂಡಿ ಬಂದಿದೆ. ಬೆಂಗಳೂರಿನಲ್ಲೇ ಕಂಬಳವನ್ನು ನಡೆಸಲು ಒಂದು ತಂಡವೇ ಸಿದ್ಧವಾಗಿದೆ. ಇದಕ್ಕಾಗಿ ಸೂಕ್ತ ಸ್ಥಳವನ್ನು ಸ್ಥಳವನ್ನು ಪರಿಶೀಲನೆ ಕೂಡ ನಡೆಸಲಾಗಿದೆ. ಅದನ್ನು ಆಯೋಜನೆ ಮಾಡುವುದಕ್ಕೂ ಈಗ ಸೂಕ್ತ ಮತ್ತು ಸಕಾಲವೂ ಒದಗಿಬಂದಿದೆ. ಅದೇನೆಂದರೆಮ ಬೆಂಗಳೂರಿನ ತುಳು ಕೂಟದ 50ನೇ ವರ್ಷದ ಸಂಭ್ರಮಾಚರಣೆ ಸಲುವಾಗಿ ಬೆಂಗಳೂರಿನಲ್ಲೇ ಕಂಬಳ ನಡೆಸಲು ನಿರ್ಧರಿಸಲಾಗಿದೆ. ಅದರಲ್ಲೂ ಬೆಂಗಳೂರಿನ ಅರಮನೆ ಮೈದಾನದಲ್ಲೇ ಈ ಕಂಬಳ ನಡೆಯಲಿದೆ ಎನ್ನುವುದು ಅತ್ಯಂತ ಸಂತಸದಾಯಕ ವಿಚಾರವಾಗಿದೆ. 


ಕಂಬಳ ನಡೆಸಲು ಸ್ಥಳ ಪರಿಶೀಲನೆಯೂ ಮುಕ್ತಾಯ:

ಬೆಂಗಳೂರಿನಲ್ಲಿ ಕಂಬಳ ಆಯೋಜನೆ ಮಾಡುವ ಕುರಿತು ಪುತ್ತೂರು ಶಾಸಕ ಹಾಗೂ ಉಪ್ಪಿನಂಗಡಿ ವಿಜಯವಿಕ್ರಮ ಜೋಡುಕೆರೆ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಕಂಬಳಕ್ಕಾಗಿ ಅರಮನೆ ಮೈದಾನದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ ಕಂಬಳ ಯಾವತ್ತು ನಡೆಯಲಿದೆ ಎನ್ನುವ ಕುರಿತು ಇನ್ನೂ ದಿನಾಂಕವನ್ನು ಮಾತ್ರ ನಿಗದಿ ಮಾಡಿಲ್ಲ. ಜೊತೆಗೆ, ಯಾವ ಕೋಣಗಳನ್ನು ಇಲ್ಲಿನ ಕಂಬಳಕ್ಕೆ ಆಯ್ಕೆ ಮಾಡಬೇಕು, ಅವುಗಳನ್ನು ಊರಿನಿಂದ ಬೆಂಗಳೂರಿಗೆ ಹೇಗೆ ತರಬೇಕು ಎಂಬ ನಿಟ್ಟಿನಲ್ಲಿಯೂ ಚರ್ಚೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಶಾಸಕ ಅಶೋಕ್‌ ಕುಮಾರ್‌ ರೈ ಅವರೊಂದಿಗೆ ತುಳು ಕೂಟದ ಅಧ್ಯಕ್ಷ ಸುಂದರ್ ರಾಜ್ ರೈ, ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ಕೆ., ತುಳುಕೂಟದ ಗೌರವಾಧ್ಯಕ್ಷ ಹಾಗೂ ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜೇಂದ್ರ ಕುಮಾರ್ ಕೆ.ವಿ., ಮಾಜಿ ಅಧ್ಯಕ್ಷ ದಿನೇಶ್ ಹೆಗ್ಡೆ ಬಿ., ಜಯರಾಮ್ ಸೂಡ, ಚಂದ್ರಹಾಸ ರೈ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಸಂಪತ್ ಕುಮಾರ್, ಅಕ್ಷಯ್ ರೈ ದಂಬೆಕಾನ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಕೂಡ ಕಂಬಳ ನಡೆಯುವ ಅರಮನೆ ಮೈದಾನದ ಸ್ಥಳವನ್ನು ಪರಿಶೀಲನೆ ಮಾಡಿದ್ದಾರೆ.

1,563 ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ರದ್ದು, ಜೂನ್ 23ಕ್ಕೆ ಮರು ಪರೀಕ್ಷೆ: ಸುಪ್ರೀಂಗೆ ಕೇಂದ್ರ ಮಾಹಿತಿ

Posted by Vidyamaana on 2024-06-13 14:31:21 |

Share: | | | | |


1,563 ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ರದ್ದು, ಜೂನ್ 23ಕ್ಕೆ ಮರು ಪರೀಕ್ಷೆ: ಸುಪ್ರೀಂಗೆ ಕೇಂದ್ರ ಮಾಹಿತಿ

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ನೀಟ್-ಯುಜಿ 2024 ರ 1,563 ಅಭ್ಯರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡುವ ನಿರ್ಧಾರವನ್ನು ರದ್ದುಗೊಳಿಸಲಾಗಿದೆ ಮತ್ತು ವಿದ್ಯಾರ್ಥಿಗಳಿಗೆ ಜೂನ್ 23 ರಂದು ಮರು ಪರೀಕ್ಷೆಗೆ ಅರ್ಜಿ ಸಲ್ಲಿಸುವ ಆಯ್ಕೆಯನ್ನು ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.

Recent News


Leave a Comment: