ಇಂದಿನಿಂದ ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ :ರಾಜ್ಯ ಸರ್ಕಾರ ಆದೇಶ

ಸುದ್ದಿಗಳು News

Posted by vidyamaana on 2024-07-05 17:43:40 |

Share: | | | | |


ಇಂದಿನಿಂದ ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ :ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ಇಂದಿನಿಂದ ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ ಮಾಡಿ ರಾಜ್ಯ ಸರ್ಕಾರ ಖಡಕ್ ಆದೇಶ ಹೊರಡಿಸಿದೆ .ಈ ಮೂಲಕ ಆಟೋ, ಕ್ಯಾಬ್ ಚಾಲಕರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.ಕಳೆದ ವರ್ಷ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸುವಂತೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಲಾಗಿತ್ತು.

ಈ ವೇಳೆ ಸರ್ಕಾರದಿಂದ ಎಲ್ಲ ಮಾದರಿಯ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಆದರೂ, ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಮಾಡಲಾಗುತ್ತಿದೆ.ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ ಮಾಡುವಂತೆ ಸಾರಿಗೆ ಸಂಘಟನೆಗಳು ಸರ್ಕಾರಕ್ಕೆ ಹಲವು ಬಾರಿ ಒತ್ತಾಯಿಸಿತ್ತು ಸಾರಿಗೆ ಸಂಘಟನೆಗಳ ಮನವಿ ಬೆನ್ನಲ್ಲೇ ಸಾರಿಗೆ ಇಲಾಖೆ ಅಧಿಕಾರಿಗಳು ಅನಧಿಕೃತ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ವಿರುದ್ದ ಕ್ರಮಕ್ಕೆ ಮುಂದಾಗಿದೆ.

ಈ ಹಿನ್ನೆಲೆ ಸಾರಿಗೆ ಅಧಿಕಾರಿಗಳು ನಗರದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೀಜ್ ಮಾಡಲು ಮುಂದಾಗಿದ್ದು. 11 ತಂಡವನ್ನು ರಚಿಸಿ ಆರ್ಟಿಓ ಅಧಿಕಾರಿಗಳ ನೇತೃತ್ವದಲ್ಲಿ ಸೀಜ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.ರಾಜ್ಯಾದ್ಯಂತ ಜು.5ರಿಂದ ಕಡ್ಡಾಯವಾಗಿ ಎಲೆಕ್ಟ್‌ಇಕ್ ಬೈಕ್ ಟ್ಯಾಕ್ಸಿಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಒಂದು ವೇಳೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಕಂಡುಬಂದಲ್ಲಿ ಕೂಡಲೇ ಅವುಗಳನ್ನು ಜಪ್ತಿ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

 Share: | | | | |


ಇಂಮ್ತಿಯಾಝ್ ಪರ್ಪುಂಜ ಹೃದಯಾಘಾತದಿಂದ ನಿಧನ

Posted by Vidyamaana on 2023-06-18 15:54:13 |

Share: | | | | |


ಇಂಮ್ತಿಯಾಝ್ ಪರ್ಪುಂಜ ಹೃದಯಾಘಾತದಿಂದ ನಿಧನ

ಪುತ್ತೂರು : ಮೂಲತ ಪರ್ಪುಂಜ ನಿವಾಸಿ ಸಂಪ್ಯ ಗ್ರಾಮಾಂತರ ಪೋಲೀಸ್ ಠಾಣೆಯ ಹಿಂಬದಿಯ ಪ್ಲಾಟ್ ನ ವಾಸವಾಗಿರುವ  ಹಾಗೂ ಪುತ್ತೂರಿನ ಸ್ಟಾರ್ ಒಪ್ಟಿಕಲ್ಸ್ ನಲ್ಲಿ ಉದ್ಯೋಗ ದಲ್ಲಿರುವ  ಇಂಮ್ತಿಯಾಝ್ ರವರು ಹೃದಯಾಘಾತದಿಂದ ಜೂ 18 ರಂದು ನಿಧನರಾದರು.ತಾಯಿ ಪತ್ನಿ, ಪುತ್ರಿಯರನ್ನು ಮತ್ತು ಸಹೋದರನ್ನು ಅಗಲಿದ್ದಾರೆ.

ವಿಟ್ಲ : ಶೆಡ್ ನಲ್ಲಿ ನಿಲ್ಲಿಸಿದ್ದ ಪಿಕಪ್ ಕದ್ದ ಪ್ರಕರಣ

Posted by Vidyamaana on 2023-10-15 11:29:31 |

Share: | | | | |


ವಿಟ್ಲ : ಶೆಡ್ ನಲ್ಲಿ ನಿಲ್ಲಿಸಿದ್ದ ಪಿಕಪ್ ಕದ್ದ  ಪ್ರಕರಣ

ವಿಟ್ಲ : ಕುಡ್ತಮುಗೇರು ಎಂ.ಎಚ್. ಶಾಮಿಯಾನ ಮಾಲಕರೊಬ್ಬರಿಗೆ ಸೇರಿದ ಪಿಕಪ್ ವಾಹನ ಕಳುವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಕೇರಳ ಮೂಲದ ರಂಷನ್ ಯಾನೆ ಸಾನು, ಜುನ್ಸಿಫ್, ನೌಫಲ್, ಹಂಸಕ್, ತಬ್ರಿಜ, ಮೊಹಮ್ಮದ್ ಉಸೈನ್, ಹ್ಯಾರೀಸ್, ಮೊಹಮ್ಮದ್ ಅಯೂಬ ಖಾನ್ ಎಂಬವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.


ಸೆ.23 ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಡ್ತಮುಗೇರಿನಲ್ಲಿ ಶಾಮಿಯಾನ ಸಾಮಾಗ್ರಿಯ ಜೊತೆಗೆ ನಿಲ್ಲಿಸಿದ್ದ ವಾಹನವನ್ನು ಕಳವುಗೈಯಲಾಗಿದ್ದು, ಪಿಕಪ್ ವಾಹನ ಇನ್ನೂ ಪತ್ತೆಯಾಗಿಲ್ಲ.


ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ಎಚ್. ಇ. ನಾಗರಾಜ್ ಅವರ ಮಾರ್ಗದರ್ಶನದಂತೆ ಸಬ್ ಇನ್ಸ್ಪೆಕ್ಟರ್ ವಿದ್ಯಾ ಕೆ.ಜೆ ಹಾಗೂ ಸಿಬ್ಬಂದಿಗಳಾದ ರಕ್ಷಿತ್ ರೈ,ಅಶೋಕ್, ಹೇಮರಾಜ್ ಪಾಲ್ಗೊಂಡಿದ್ದರು.

ಸಹೋದ್ಯೋಗಿಗೆ ಹಲ್ಲೆಗೈದು ಹಲ್ಲುಗಳನ್ನ ಉದುರಿಸಿದ ರಿಕ್ಷಾ ಡ್ರೈವರ್

Posted by Vidyamaana on 2023-11-15 05:38:10 |

Share: | | | | |


ಸಹೋದ್ಯೋಗಿಗೆ ಹಲ್ಲೆಗೈದು ಹಲ್ಲುಗಳನ್ನ ಉದುರಿಸಿದ ರಿಕ್ಷಾ ಡ್ರೈವರ್

ಉಳ್ಳಾಲ, ನ.15: ಸಹೋದ್ಯೋಗಿಗೆ ಹಲ್ಲೆಗೈದು ಹಲ್ಲುಗಳನ್ನ ಉದುರಿಸಿ ಎಸ್ಕೇಪ್ ಆಗಿದ್ದ ಕುಂಪಲದ ಸೈಕೋ ರಿಕ್ಷಾ ಚಾಲಕನನ್ನ ಉಳ್ಳಾಲ ಪೊಲೀಸರು 24 ಗಂಟೆಗಳೊಳಗೆ ಬಂಧಿಸಿ ಜೈಲಿಗಟ್ಟಿದ್ದಾರೆ. 


ಕಳೆದ ಆದಿತ್ಯವಾರ ಸಂಜೆ ಕುಂಪಲ ಬೈಪಾಸ್ ಆಟೋ ರಿಕ್ಷಾ ಪಾರ್ಕಿನಲ್ಲಿದ್ದ ರಿಕ್ಷಾ ಚಾಲಕ ಸುಶಾಂತ್(31) ಎಂಬವರಿಗೆ ಅದೇ ಪಾರ್ಕಿನಲ್ಲಿ ರಿಕ್ಷಾ ಚಾಲನೆ ಮಾಡುತ್ತಿರುವ ರೋಕೇಶ್(37) ಯಾನೆ ಸೈಕೋ ರೋಸ್ ಎಂಬಾತ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮುಖಕ್ಕೆ ಬಲವಾಗಿ ಥಳಿಸಿದ ಪರಿಣಾಮ ಸುಶಾಂತ್ ಅವರ ಎರಡು ಹಲ್ಲುಗಳು ಉದುರಿ ಹೋಗಿದೆ. ತೀವ್ರ ಗಾಯಗೊಂಡಿದ್ದ ಸುಶಾಂತ್ ರವರು  ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು ಹಲ್ಲೆಗೈದ ಆರೋಪಿ ರೋಕೇಶ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಠಾಣೆಯಲ್ಲಿ ತನ್ನ ವಿರುದ್ದ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ರೋಕೇಶ್ ತಲೆಮರೆಸಿಕೊಂಡಿದ್ದ.

ಉಳ್ಳಾಲ ಪೊಲೀಸ್ ಠಾಣೆಯ ಪಿಐ ಬಾಲಕೃಷ್ಣ ರವರು ಸೋಮವಾರವೇ ತನ್ನ ಸಿಬ್ಬಂದಿಗಳೊಂದಿಗೆ ಅತೀ ಶೀಘ್ರವಾಗಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ ಜೈಲಿಗಟ್ಟಿದ್ದಾರೆ.


ಬಂಧಿತ ಆರೋಪಿ ರೋಕೇಶ್ ಯಾನೆ ಸೈಕೊ ರೋಸ್ ಕುಂಪಲ ನಿವಾಸಿಯಾಗಿದ್ದು ಅಮಲು ಪದಾರ್ಥಗಳಿಗೆ ದಾಸನಾಗಿ ಪ್ರದೇಶಕ್ಕೆ ಕಂಟಕಪ್ರಾಯನಾಗಿದ್ದ. ಈತನ ವಿರುದ್ದ ಉಳ್ಳಾಲ ಠಾಣೆಯಲ್ಲಿ ಈ ಹಿಂದೆಯೂ ಅನೇಕ ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಸ್ಥಳೀಯ ಹೆಣ್ಮಕ್ಕಳಿಗೆ ಲೈಗಿಂಕ ಕಿರುಕುಳ ನೀಡಿ ಸಾರ್ವಜನಿಕರಿಂದ ಶಾಸ್ತಿ ಮಾಡಿಸಿಕೊಂಡಿದ್ದ. ಆರೋಪಿಯ ಸಹೋದರ ವೃತ್ತಿಪರ ವಕೀಲನಾಗಿದ್ದು ಆತನ ಧೈರ್ಯದಿಂದಲೇ ಸೈಕೋ ರೋಸ್ ನಿರಂತರ ಅಪರಾಧ ಕೃತ್ಯ ಎಸಗುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.


ದಿನ ನಿತ್ಯವೂ ನಶೆಯಲ್ಲೇ ರಿಕ್ಷಾ ಚಾಲನೆ ನಡೆಸುತ್ತಿರುವ ರೋಕೇಶನ ನಡವಳಿಕೆಯ ಬಗ್ಗೆ ಬೈಪಾಸಿನ ರಿಕ್ಷಾ ಚಾಲಕರು, ಮಾಲಕರೇ ಒಟ್ಟಾಗಿ ಉಳ್ಳಾಲ ಠಾಣೆಗೆ ಬರವಣಿಗೆಯಲ್ಲಿ ಮಾಹಿತಿ  ಕೊಟ್ಟಿದ್ದು ಶೀಘ್ರ ಬಂಧನಕ್ಕೆ ಆಗ್ರಹಿಸಿದ್ದರು.

ಉಳ್ಳಾಲದಿಂದ ಕಾಣೆಯಾದ ಹುಡುಗ ಗೋವಾದಲ್ಲಿ ಪತ್ತೆ

Posted by Vidyamaana on 2023-10-31 07:23:11 |

Share: | | | | |


ಉಳ್ಳಾಲದಿಂದ ಕಾಣೆಯಾದ ಹುಡುಗ ಗೋವಾದಲ್ಲಿ ಪತ್ತೆ

ಮಂಗಳೂರು: ಉಳ್ಳಾಲದ ಮಾಸ್ತಿಕಟ್ಟೆ – ಆಝಾದ್ ನಗರದ ಹುಡುಗನೊಬ್ಬ ಕಾಣೆಯಾಗಿ ದಿನದ ಬಳಿಕ ಪತ್ತೆಯಾದ ಘಟನೆ ನಡೆದಿದೆ.


ಉಳ್ಳಾಲ ಮಾಸ್ತಿ ಕಟ್ಟೆ ಆಝಾದ್ ನಗರದ ಉಸ್ಮಾನ್ ಫಯಾಝ್ ಎಂಬವರ ಮಗ ಸ್ಥಳೀಯ ಶಾಲೆ ಯೊಂದರಲ್ಲಿ 10 ನೇ ತರಗತಿಯಲ್ಲಿ ಕಲಿಸುತ್ತಿರುವ ಮೊಹಮ್ಮದ್ ಹುಝಯ್ಫ್ ಎಂಬ 16 ವರ್ಷದ ಹುಡುಗ ನಿನ್ನೆ ಸಂಜೆಯಿಂದ (28-10-2023) ಕಾಣೆಯಾಗಿದ್ದನು.ಮನೆಯವರು, ಬಂಧುಗಳು ಆತಂಕಕ್ಕೆ ಈಡಾಗಿದ್ದರು. ಇದೀಗ ಆತ ಗೋವಾದಲ್ಲಿ ಸಿಕ್ಕಿದ ಮಾಹಿತಿಯನ್ನು ಬಾಲಕನ ಕುಟುಂಬ ಹಂಚಿಕೊಂಡಿದೆ.


ಮನೆಯಿಂದ ಹೊರ ಹೋದವನು ವಾಪಸ್ ಬರದೇ ಇರುವ ಕಾರಣ ಹುಡುಗನ ಹೆತ್ತವರು ತುಂಬಾ ಆತಂಕ, ಗಾಬರಿಗೊಂಡಿದ್ದರು. ಒಂದು ದಿನದ ಬಳಿಕ ಹುಡುಗ ಪತ್ತೆಯಾಗಿದ್ದು, ನಾಪತ್ತೆಯ ಕಾರಣ ತಿಳಿದುಬಂದಿಲ್ಲ.

ಅರ್ಧ ಗಂಟೆ ಕಾಲ ಸರತಿ ಸಾಲಿನಲ್ಲಿ ನಿಂತು ತನ್ನ ಹಕ್ಕು ಚಲಾಯಿಸಿದ ಪದ್ಮರಾಜ್

Posted by Vidyamaana on 2024-04-26 11:05:12 |

Share: | | | | |


ಅರ್ಧ ಗಂಟೆ ಕಾಲ ಸರತಿ ಸಾಲಿನಲ್ಲಿ ನಿಂತು ತನ್ನ ಹಕ್ಕು ಚಲಾಯಿಸಿದ ಪದ್ಮರಾಜ್

ಮಂಗಳೂರು, ಎ.26: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಕಪಿತಾನಿಯೋ ಶಾಲೆಯ ಮತಗಟ್ಟೆಯಲ್ಲಿ ಪತ್ನಿ ಮತ್ತು ಮಗಳ ಜೊತೆ ಮತ ಚಲಾಯಿಸಿದರು. 

ಮತಗಟ್ಟೆಯತ್ತ ಬರುವಾಗಲೇ ಮತದಾರರಿಗೆ ಕೈಮುಗಿಯುತ್ತಲೇ ಒಳಬಂದ ಪದ್ಮರಾಜ್, ಸರತಿ ಸಾಲಿನಲ್ಲಿ ಅರ್ಧ ಗಂಟೆ ಕಾಲ ನಿಂತು ಮತ ಚಲಾಯಿಸಿದರು.

ಬಿಜೆಪಿಯಿಂದ ಮಾಜಿ ಶಾಸಕ ರಘುಪತಿ ಭಟ್ ಉಚ್ಚಾಟನೆ

Posted by Vidyamaana on 2024-05-25 20:01:21 |

Share: | | | | |


ಬಿಜೆಪಿಯಿಂದ ಮಾಜಿ ಶಾಸಕ ರಘುಪತಿ ಭಟ್ ಉಚ್ಚಾಟನೆ

ಬೆಂಗಳೂರು : ವಿಧಾನಪರಿಷತ್‌ ಚುನಾವಣೆಯಲ್ಲಿ ನೈಋತ್ಯ ಪದವೀಧರರ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಸಚಿವ ರಘುಪತಿ ಭಟ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬಿಜೆಪಿ ಪಕ್ಷದಿಂದ ಉಚ್ಚಾಟಿಸಲಾಗಿದೆ.

ಉಚ್ಚಾಟನೆ ಆದೇಶದಲ್ಲಿ ಏನಿದೇ?: ಪಕ್ಷದ ಸೂಚನೆಯನ್ನು ಕಡೆಗಣಿಸಿ ಪ್ರಸಕ್ತ ವಿಧಾನಪರಿಷತ್‌ ಚುನಾವಣೆಗೆ ನೈಋತ್ಯ ಪದವೀಧರರ ಕ್ಷೇತ್ರದಿಂದ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪಕ್ಷದ ಮುಜುಗರಕ್ಕೆ ಕಾರಣವಾಗಿದ್ದೀರಿ. ಇದು ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ.

Recent News


Leave a Comment: