KSRTC ಬಸ್-ಕಾರು ಡಿಕ್ಕಿ, ಕ್ರೈಸ್ಥ ಧರ್ಮಗುರು ಫಾ. ಆಂಥೋಣಿ ಪೀಟರ್ ಮೃತ್ಯು..

ಸುದ್ದಿಗಳು News

Posted by vidyamaana on 2024-07-24 17:11:55 |

Share: | | | | |


KSRTC ಬಸ್-ಕಾರು ಡಿಕ್ಕಿ, ಕ್ರೈಸ್ಥ ಧರ್ಮಗುರು ಫಾ. ಆಂಥೋಣಿ ಪೀಟರ್ ಮೃತ್ಯು..

ಶಿವಮೊಗ್ಗ : ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಕಾರು ಡಿಕ್ಕಿಯಾದ ಪರಿಣಾಮ ಕ್ರೈಸ್ತ ಧರ್ಮಗುರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಸಮೀಪ ಸವಳಂಗ ಚಿನ್ನಿಕಟ್ಟೆ ಬಳಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.ಕೆಎಸ್‌ಆರ್‌ಟಿಸಿ ಬಸ್ಸು ಹಾನಗಲ್‌ನಿಂದ ಶಿವಮೊಗ್ಗ ಕಡೆಗೆ ಹೋಗುತ್ತಿತ್ತುಎನ್ನಲಾಗಿದೆ.

ಕ್ರೈಸ್ತ ಧರ್ಮಗುರು ಇದ್ದ ಕಾರು ಶಿವಮೊಗ್ಗ ಕಡೆಯಿಂದ ತೆರಳುತ್ತಿತ್ತು. ಚಿನ್ನಿಕಟ್ಟೆ ಬಳಿ ಕಾರು, ಬಸ್ಸು ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದ ರಭಸಕ್ಕೆ ಕಾರು ರಸ್ತೆ ಪಕ್ಕದ ಜಮೀನಿಗೆ ಉರುಳಿ ಬಿದ್ದಿದ್ದು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಶಿಕಾರಿಪುರ ಧರ್ಮಕೇಂದ್ರದ ಧರ್ಮಗುರು ಆಂಥೋಣಿ ಪೀಟರ್‌ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು ನ್ಯಾಮತಿ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.

 Share: | | | | |


ಡಿಪ್ಲೋಮಾ ಪದವೀಧರರಿಗೆ ಗುಡ್ ನ್ಯೂಸ್ : ಯುವನಿಧಿ ಜಾರಿಗೆ ಮುಹೂರ್ತ ಫಿಕ್ಸ್

Posted by Vidyamaana on 2023-11-10 12:54:44 |

Share: | | | | |


ಡಿಪ್ಲೋಮಾ ಪದವೀಧರರಿಗೆ ಗುಡ್ ನ್ಯೂಸ್ : ಯುವನಿಧಿ ಜಾರಿಗೆ ಮುಹೂರ್ತ ಫಿಕ್ಸ್

ಬೆಂಗಳೂರು : ರಾಜ್ಯ ಸರ್ಕಾರದ 5 ನೇ ಗ್ಯಾರಂಟಿ ಯೋಜನೆಯಾದ ಡಿಪ್ಲೋಮಾ, ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆಗೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು, 2024 ರ ಜನವರಿಯಿಂದ ಜಾರಿಗೊಳಿಸುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.


ಈ ಕುರಿತು ಮಾಹಿತಿ ನೀಡಿರುವ ಮಧು ಬಂಗಾರಪ್ಪ ಅವರು, ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಯನ್ನು ಜನವರಿಯಿಂದ ಜಾರಿಗೊಳಿಸಲಾಗುತ್ತಿದ್ದು, ಡಿಪ್ಲೋಮಾ ಪೂರ್ಣಗೊಳಿಸಿದವರಿಗೆ 1,500 ರೂ. ಪದವಿ ಪೂರ್ಣಗೊಂಡವರಿಗೆ 3,000 ರೂ. ಹಣವನ್ನು ವಿದ್ಯಾರ್ಥಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.


ಶಿಕ್ಷಣ ಮುಗಿಸಿ ಕೆಲಸ ಸಿಗದೆ ಮನೆಯಲ್ಲಿರುವ ವಿದ್ಯಾರ್ಥಿಗಳು ತಂದೆ-ತಾಯಿಗಳಿಗೆ ಹೊರೆಯಾಗದಿರಲೆಂದು ಹಾಗೂ ತಮ್ಮ ಸಣ್ಣ ಪುಟ್ಟ ಖರ್ಚುಗಳು, ಉದ್ಯೋಗ ಹುಡುಕಲು ಅನುಕೂಲವಾಗಲೆಂಬ ಉದ್ದೇಶದಿಂದ ಯುವನಿಧಿ ಯೋಜನೆಯನ್ನು ಜನವರಿಯಿಂದ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದ್ದಾರೆ.

ಇನ್‌ಸ್ಟಾಗ್ರಾಮ್ ಸರ್ವರ್‌ ಡೌನ್‌ - ಬಳಕೆದಾರರ ಪರದಾಟ

Posted by Vidyamaana on 2023-03-09 04:54:22 |

Share: | | | | |


ಇನ್‌ಸ್ಟಾಗ್ರಾಮ್ ಸರ್ವರ್‌ ಡೌನ್‌ - ಬಳಕೆದಾರರ ಪರದಾಟ

ನವದೆಹಲಿ: ಮೆಟಾ ಒಡೆತನದ ಇನ್‌ಸ್ಟಾಗ್ರಾಮ್ ಸರ್ವರ್‌ ಡೌನ್‌ ಆಗಿ ಸಾವಿರಾರು ಬಳಕೆದಾರರಿಗೆ ತೊಂದರೆಯುಂಟಾಗಿದೆ ಎಂದು ವರದಿಯಾಗಿದೆ.

ಸರ್ವರ್‌ ಸ್ಥಗಿತ ಟ್ರ್ಯಾಕಿಂಗ್ ವೆಬ್‌ಸೈಟ್ ಡೌನ್‌ ಡಿಟೆಕ್ಟರ್ ವರದಿ ಮಾಡಿರುವ ಪ್ರಕಾರ 46 ಸಾವಿರಕ್ಕೂ ಅಧಿಕ ಬಳಕೆದಾರರಿಗೆ ಇನ್‌ಸ್ಟಾಗ್ರಾಮ್ ಬಳಕೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಇದರಲ್ಲಿ 2000 ಕ್ಕೂ ಅಧಿಕ ಮಂದಿ ಅಮೆರಿಕಾದ ಬಳಕೆದಾರರು, 1000 ಕ್ಕೂ ಹೆಚ್ಚಿನ ಆಸ್ಟ್ರೇಲಿಯಾ, ಭಾರತದ ಬಳಕೆದಾರರಿಗೆ ಸರ್ವರ್‌ ಕನೆಕ್ಷನ್‌ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವರದಿ ಹೇಳಿದೆ

ಬೆಳಿಗ್ಗೆ 7 ಗಂಟೆಗೆ ಡೌನ್ ಡಿಟೆಕ್ಟರ್ ಔಟ್ಟೇಜ್ ಗ್ರಾಫ್‌ನಲ್ಲಿ ಸಮಸ್ಯೆ ಬಗ್ಗೆ ವರದಿಯಾಗಿದ್ದು ಬಳಿಕ ಏರಿಕೆ ಕಂಡಿತು

ಶೇ.50 ಮಂದಿಗೆ ಸರ್ವರ್‌ ಕನೆಕ್ಷನ್‌ ಸಮಸ್ಯೆ ಕಾಣಿಸಿಕೊಂಡಿದ್ದು, ಶೇ.20 ಮಂದಿಗೆ ಲಾಗಿನ್‌ ಮಾಡುವಾಗ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವರದಿ ತಿಳಿಸಿದೆ.

ಭಾರೀ ಮಳೆ ಹಿನ್ನೆಲೆ ನಾಳೆ ಅಂಗನವಾಡಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Posted by Vidyamaana on 2023-07-05 13:56:56 |

Share: | | | | |


ಭಾರೀ ಮಳೆ  ಹಿನ್ನೆಲೆ ನಾಳೆ ಅಂಗನವಾಡಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜು. 6ರಂದು ಕೂಡ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.


ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೈಗೊಂಡಿರುವ ತುರ್ತು ಕ್ರಮಗಳಿವು:


 ನೀರು ಇರುವ ತಗ್ಗು ಪ್ರದೇಶ ಕೆರೆ, ನದಿ, ಸಮುದ್ರ ತೀರಕ್ಕೆ ಮಕ್ಕಳು ತೆರಳದಂತೆ ಪಾಲಕರು ಜಾಗ್ರತೆ ವಹಿಸುವುದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ, ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಪತ್ತು ನಿರ್ವಹಣಾ ಕಾರ್ಯ ಕೈಗೊಳ್ಳಬೇಕು, ಜಿಲ್ಲಾಡಳಿತದಿಂದ ವಿವಿಧ ಪ್ರದೇಶಗಳಿಗೆ ನೇಮಿಸಲಾಗಿರುವ ನೋಡಲ್ ಅಧಿಕಾರಿಗಳು ಸದಾ ಜಾಗೃತರಾಗಿದ್ದು ಸಾರ್ವಜನಿಕ ದೂರುಗಳಿಗೆ ತಕ್ಷಣ ಸ್ಪಂದಿಸುವುದು ಮತ್ತು ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದು.

 ಪ್ರವಾಸಿಗರು, ಸಾರ್ವಜನಿಕರು ನದಿ, ಸಮುದ್ರ ತೀರಕ್ಕೆ ತೆರಳದಂತೆ ಸೂಚಿಸಲಾಗಿದೆ.

 ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪ್ರತಿ ತಾಲೂಕುಗಳಲ್ಲಿ ಕಾಳಜಿ ಕೇಂದ್ರವನ್ನು ತೆರೆದು ಸನ್ನದ್ಧ ಸ್ಥಿತಿಯಲ್ಲಿರಿಸಿಕೊಳ್ಳುವುದು.

 ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಕಂಟ್ರೋಲ್ ರೂಂ 1077 ಹಾಗೂ ದೂರವಾಣಿ: 0824 – 2442590‌ ಸಂಪರ್ಕಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಮುಗಿಯದ ಜಂಗಿಕುಸ್ತಿ; ರಾಷ್ಟ್ರೀಯ ಕುಸ್ತಿ ಫೆಡರೇಶನ್ ಸಂಸ್ಥೆ ಅಮಾನತು ಮಾಡಿದ ಕೇಂದ್ರ

Posted by Vidyamaana on 2023-12-24 14:51:32 |

Share: | | | | |


ಮುಗಿಯದ ಜಂಗಿಕುಸ್ತಿ; ರಾಷ್ಟ್ರೀಯ ಕುಸ್ತಿ ಫೆಡರೇಶನ್ ಸಂಸ್ಥೆ ಅಮಾನತು ಮಾಡಿದ ಕೇಂದ್ರ

ಹೊಸದಿಲ್ಲಿ: ರಾಷ್ಟ್ರೀಯ ಕುಸ್ತಿ ಫೆಡರೇಶನ್ ನ ಜಂಗಿ ಕುಸ್ತಿ ಮುಂದುವರಿದಿದೆ. ಇತ್ತೀಚೆಗಷ್ಟೇ ಚುನಾವಣೆ ನಡೆದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಅವರು ಗೆಲುವು ಸಾಧಿಸಿದ್ದರು. ಇದರ ಬೆನ್ನಲ್ಲೇ ಬ್ರಿಜ್ ಭೂಷಣ್ ವಿರುದ್ಧ ಪ್ರತಿಭಟನೆ ಮಾಡಿದ್ದ ಕುಸ್ತಿಪಟುಗಳು ಅಸಮಾಧಾನ ಹೊರಹಾಕಿದ್ದರು. ಇದೀಗ ಕೇಂದ್ರ ಕ್ರೀಡಾ ಸಚಿವಾಲಯವು ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಹೊಸದಾಗಿ ಚುನಾಯಿತ ಸಂಸ್ಥೆಯನ್ನು ಅಮಾನತುಗೊಳಿಸಿದೆ.ಸಂಜಯ್ ಸಿಂಗ್ ನೇತೃತ್ವದ ಹೊಸ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಸಂಸ್ಥೆಯನ್ನು ಕ್ರೀಡಾ ಸಚಿವಾಲಯವು ಅಮಾನತುಗೊಳಿಸಿದೆ.ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳನ್ನು ಕುಸ್ತಿ ಫೆಡರೇಶನ್ ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಉಲ್ಲೇಖಿಸಿ ಸಚಿವಾಲಯವು ಡಿಸೆಂಬರ್ 24 ಭಾನುವಾರದಂದು ತನ್ನ ನಿರ್ಧಾರವನ್ನು ಪ್ರಕಟಿಸಿದೆ.


ಕ್ರೀಡಾ ಸಚಿವಾಲಯವು ಅಧಿಕೃತ ಪ್ರಕಟಣೆಯಲ್ಲಿ, ರಾಷ್ಟ್ರೀಯ ಸ್ಪರ್ಧೆಗಳ ಪ್ರಕಟಣೆಯು ತರಾತುರಿಯಲ್ಲಿತ್ತು ಮತ್ತು ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿಲ್ಲ ಎಂದು ಹೇಳಿದೆ.ಹೊಸದಾಗಿ ಆಯ್ಕೆಯಾದ ಸಂಸ್ಥೆಯ ಅಧ್ಯಕ್ಷ ಸಂಜಯ್ ಕುಮಾರ್ ಸಿಂಗ್ ಡಿಸೆಂಬರ್ 21 ರಂದು ಜೂನಿಯರ್ ರಾಷ್ಟ್ರೀಯ ಸ್ಪರ್ಧೆಗಳು ಈ ವರ್ಷಾಂತ್ಯದ ಮೊದಲು ಪ್ರಾರಂಭವಾಗಲಿದೆ ಎಂದು ಘೋಷಿಸಿದರು ಎಂದು ಸಚಿವಾಲಯ ಉಲ್ಲೇಖಿಸಿದೆ. ಇದು ನಿಯಮಗಳಿಗೆ ವಿರುದ್ಧವಾಗಿದೆ ಮತ್ತು ಕುಸ್ತಿಪಟುಗಳು ತಯಾರಾಗಲು ಕನಿಷ್ಠ 15 ದಿನಗಳ ಸೂಚನೆ ಅಗತ್ಯವಿದೆ ಎಂದು ಸಚಿವಾಲಯ ವಿವರಿಸಿದೆ.

ದುಬೈನಲ್ಲಿ ಮತ್ತೊಂದು ಅದ್ಭುತ ಕಟ್ಟಡ ನಿರ್ಮಾಣ.. ನೀರಿನಲ್ಲಿ ತೇಲುವ ಮಸೀದಿ ಏನೆಲ್ಲಾ ಇರುತ್ತದೆ ಗೊತ್ತಾ?

Posted by Vidyamaana on 2023-09-23 16:20:57 |

Share: | | | | |


ದುಬೈನಲ್ಲಿ ಮತ್ತೊಂದು ಅದ್ಭುತ ಕಟ್ಟಡ ನಿರ್ಮಾಣ.. ನೀರಿನಲ್ಲಿ ತೇಲುವ ಮಸೀದಿ ಏನೆಲ್ಲಾ ಇರುತ್ತದೆ ಗೊತ್ತಾ?

   

ದುಬೈ :ವಿಶ್ವದಲ್ಲಿಯೇ ಮೊದಲ ಬಾರಿಗೆ ತೇಲುವ ಮಸೀದಿಯನ್ನು ನಿರ್ಮಿಸುವುದಾಗಿ ಯುಎಇ ಘೋಷಿಸಿದೆ. ಈ ಮಸೀದಿಯಲ್ಲಿ ಮೂರು ಮಹಡಿಗಳನ್ನು ನಿರ್ಮಿಸಲಾಗುವುದು ಎಂದು ಘೋಷಿಸಲಾಗಿದೆ. ಎಮಿರೇಟ್ಸ್​ ಇಸ್ಲಾಮಿಕ್ ಅಫೇರ್ಸ್ ಮತ್ತು ಚಾರಿಟಬಲ್ ಆಕ್ಟಿವಿಟೀಸ್ ಡಿಪಾರ್ಟ್‌ಮೆಂಟ್‌ನ ಕೃಪೆಯಿಂದಾಗಿ ಈ ವಿಶಿಷ್ಟ ಪ್ರಾರ್ಥನಾ ಸ್ಥಳವು ಪ್ರಸ್ತುತ ದುಬೈ ವಾಟರ್ ಕೆನಾಲ್‌ನಲ್ಲಿ ನಿರ್ಮಾಣ ಹಂತದಲ್ಲಿದೆ.ದುಬೈನಲ್ಲಿ ಸ್ಪಟಿಕದಂತಹ ನೀರು ಇರುವ ಕಾಲುವೆಗಳಲ್ಲಿ 5.5 ಕೋಟಿ ದಿರಹಂ ವೆಚ್ಚ ಮಾಡಿ ಅಂದರೆ ಸುಮಾರು 125 ಕೋಟಿ ರೂ. ವೆಚ್ಚ ಮಾಡಿ, ನೀರಿನ ಮೇಲೆ ತೇಲುವ ಮಸೀದಿ (floating mosque) ನಿರ್ಮಿಸಲಾಗುವುದು. ಇಸ್ಲಾಮಿಕ್ ವ್ಯವಹಾರಗಳು ಮತ್ತು ಚಾರಿಟಬಲ್ ಚಟುವಟಿಕೆಗಳ ಇಲಾಖೆ (ಐಸಿಎಡಿ -Islamic Affairs and Charitable Activities Department in Dubai) ಅಧಿಕಾರಿಗಳು ಮುಂದಿನ ವರ್ಷ ಮಸೀದಿಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ (Religious Tourism Project) ಮಾಡಲಾಗುವುದು ಎಂದು ಹೇಳಿದ್ದಾರೆ.


ವಿಶ್ವದಲ್ಲಿಯೇ ಮೊದಲ ಬಾರಿಗೆ ತೇಲುವ ಮಸೀದಿಯನ್ನು ನಿರ್ಮಿಸುವುದಾಗಿ ಯುಎಇ ಘೋಷಿಸಿದೆ. ಈ ಮಸೀದಿಯಲ್ಲಿ ಮೂರು ಮಹಡಿಗಳನ್ನು ನಿರ್ಮಿಸಲಾಗುವುದು ಎಂದು ಘೋಷಿಸಲಾಗಿದೆ. ಎಮಿರೇಟ್ಸ್​ ಇಸ್ಲಾಮಿಕ್ ಅಫೇರ್ಸ್ ಮತ್ತು ಚಾರಿಟಬಲ್ ಆಕ್ಟಿವಿಟೀಸ್ ಡಿಪಾರ್ಟ್‌ಮೆಂಟ್‌ನಕೃಪೆಯಿಂದಾಗಿ ಈ ವಿಶಿಷ್ಟ ಪ್ರಾರ್ಥನಾ ಸ್ಥಳವು ಪ್ರಸ್ತುತ ದುಬೈ ವಾಟರ್ ಕೆನಾಲ್‌ನಲ್ಲಿ ನಿರ್ಮಾಣ ಹಂತದಲ್ಲಿದೆ. ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತು ದುಬೈಗೆ ಭೇಟಿ ನೀಡುವವರ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನಗಳ ಭಾಗವಾಗಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.


ಮಸೀದಿಯು ವಿಶಿಷ್ಟ ಲಕ್ಷಣಗಳನ್ನು ಹೊಂದಿರುವ ಮೂರು ಅಂತಸ್ತಿನ ರಚನೆಯಾಗಿದೆ. ಒಂದೇ ಸಮಯದಲ್ಲಿ 50 ರಿಂದ 75 ಭಕ್ತರು ಪ್ರಾರ್ಥನೆ ಸಲ್ಲಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಮುಸಲ್ಮಾನರು ಪ್ರಾರ್ಥನೆಗಾಗಿ ವಿಶೇಷವಾಗಿ ನಿರ್ಮಿಸಲಾದ ಈ ತೇಲುವ ಮಸೀದಿಗೆ ಭೇಟಿ ನೀಡಬಹುದು(Islamic tourism). ಇದು ಎಮಿರೇಟ್ಸ್​​ನಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ಹೆಚ್ಚುವರಿಯಾಗಿ, ಮಸೀದಿಯು ಶೇಖ್ ಮಕ್ತೌಮ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಕುರಾನ್‌ ಪ್ರದರ್ಶನವನ್ನು ಆಯೋಜಿಸುತ್ತದೆ.ಮಸೀದಿಯು ನೀರಿನ ಮೇಲೆ ಎರಡು ಮಹಡಿಗಳನ್ನು ಹೊಂದಿರುತ್ತದೆ, ಮುಂದಿನ ವರ್ಷದ ವೇಳೆಗೆ ಸಂದರ್ಶಕರಿಗೆ ಇಸ್ಲಾಮಿಕ್ ಉಪನ್ಯಾಸಗಳು, ಕಾರ್ಯಾಗಾರಗಳು ಇತ್ಯಾದಿಗಳಿಗಾಗಿ ಇಲ್ಲಿ ಸಭಾಂಗಣ ನಿರ್ಮಿಸಲಾಗುವುದು. ಗಮನಾರ್ಹ ಸಂಗತಿಯೆಂದರೆ, ಈ ತೇಲುವ ಮಸೀದಿ ಎಲ್ಲಾ ಧರ್ಮದ ಜನರನ್ನು ಆಹ್ವಾನಿಸುತ್ತದೆ. ಸಂದರ್ಶಕರು ಸಾಧಾರಣವಾದ ಸಾಮಾನ್ಯವಾದ ಉಡುಗೆ ತೊಟ್ಟುಬರಬಹುದು. ಆದರೂ ಇಸ್ಲಾಮಿಕ್ ಪದ್ಧತಿಗಳನ್ನು ಗೌರವಿಸಲು ವಿನಂತಿಸಲಾಗಿದೆ.

ಬೆಂಗಳೂರು ಕಂಬಳಕ್ಕೆ ವಿಧಾನಸಭಾ ಅಧ್ಯಕ್ಷರಾದ ಯು ಟಿ ಖಾದರ್ ಗೆ ಆಹ್ವಾನ

Posted by Vidyamaana on 2023-11-09 20:05:06 |

Share: | | | | |


ಬೆಂಗಳೂರು ಕಂಬಳಕ್ಕೆ ವಿಧಾನಸಭಾ ಅಧ್ಯಕ್ಷರಾದ ಯು ಟಿ ಖಾದರ್ ಗೆ ಆಹ್ವಾನ

ಪುತ್ತೂರು: ಬೆಂಗಳೂರು ಕಂಬಳಕ್ಮೆ ವಿಧಾನಸಭಾ ಅಧ್ಯಕ್ಷರಾದ ಯು ಟಿ ಖಾದರ್ ಅವರಿಗೆ ಕಂಬಳ ಸಮಿತಿ ಅಧ್ಯಕ್ಷರೂ ,ಪುತ್ತೂರು ಶಾಸಕರಾದ ಅಶೋಕ್ ರೈ ಆಹ್ವಾನ ಮಾಡಿದರು. ಈ ಸಂಧರ್ಬದಲ್ಲಿ ದ ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಕಂಬಳ ಕಾರ್ಯಾಧ್ಯಕ್ಷರಾದ ಗುರಕಿರಣ್,ಗುಣರಂಜನ್ ಶೆಟ್ಟಿ ,ಉದ್ಯಮಿ ಉಮೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Recent News


Leave a Comment: