ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ

ಸುದ್ದಿಗಳು News

Posted by vidyamaana on 2024-07-24 16:52:02 |

Share: | | | | |


ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ

ವದೆಹಲಿ : ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯಿಸಿದರು.


ಈ ಹಿಂದೆ ಮಂಗಳೂರು- ಸುಬ್ರಹ್ಮಣ್ಯ ನಡುವೆ ಮೀಟರ್ ಗೇಜ್ ಹಳಿ ಇದ್ದಾಗ ಪ್ಯಾಸೆಂಜರ್ ರೈಲು ಓಡಾಟ ಇತ್ತು. ಬ್ರಾಡ್ ಗೇಜ್ ಹಳಿ ಮಾಡುವ ಸಲುವಾಗಿ 2005ರಲ್ಲಿ ಈ ರೈಲಿನ ಸಂಚಾರವನ್ನು ನಿಲ್ಲಿಸಲಾಗಿತ್ತು. ಆನಂತರ, ಬ್ರಾಡ್ ಗೇಜ್ ಹಳಿಯಾಗಿ ಪರಿವರ್ತನೆ ಮಾಡಲಾಗಿದೆ. ಅಂದು ಓಡುತ್ತಿದ್ದ ಪ್ಯಾಸೆಂಜರ್ ರೈಲು ಮಂಗಳೂರಿನಿಂದ ಕಬಕ- ಪುತ್ತೂರು ನಡುವೆ ಓಡಾಟ ನಡೆಸುತ್ತಿದ್ದು, ಅದನ್ನು ಸುಬ್ರಹ್ಮಣ್ಯದವರೆಗೆ ವಿಸ್ತರಣೆ ಮಾಡಬೇಕು.

ಮಂಗಳೂರು – ಸುಬ್ರಹ್ಮಣ್ಯ ಮಧ್ಯೆ ರೈಲು ಓಡಾಟವಾದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ, ಕಾಲೇಜಿಗೆ ಹೋಗುವವರಿಗೆ ಉಪಯೋಗವಾಗಲಿದೆ. ಗ್ರಾಮಾಂತರ ಪ್ರದೇಶವಾದ ಸುಳ್ಯದಿಂದ ಮಂಗಳೂರಿಗೆ ಪ್ರತಿದಿನ ಓಡಾಟ ಮಾಡುವವರಿದ್ದಾರೆ. ಅವರಿಗೂ ಉಪಯುಕ್ತ ಆಗಲಿದೆ. ಇದು ಸೌತ್ ವೆಸ್ಟರ್ನ್ ರೈಲ್ವೇ ವಿಭಾಗದಲ್ಲಿದ್ದು, ನಮ್ಮ ಜಿಲ್ಲೆಯ ಒಳಗೆ ಸಂಚರಿಸುವ ಏಕೈಕ ಪ್ಯಾಸೆಂಜರ್ ರೈಲಾಗಿದೆ.


ಜನಸಾಮಾನ್ಯರ ಹಿತದೃಷ್ಟಿಯಿಂದ ಈ ರೈಲನ್ನು ಸುಬ್ರಹ್ಮಣ್ಯದವರೆಗೂ ವಿಸ್ತರಣೆ ಮಾಡಬೇಕು ಎಂದು ರೈಲ್ವೇ ಸಚಿವರನ್ನು ಮನವಿ ಮಾಡಿದ್ದಾರೆ. ಇದಕ್ಕುತ್ತರಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಸೇನೆಯಿಂದ ನಿವೃತ್ತಿ ಪಡೆದು ಸಂಸದರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಬಗ್ಗೆ ಗೌರವ ಹೊಂದಿದ್ದು, ರೈಲ್ವೇ ವಿಚಾರಗಳ ಬಗ್ಗೆ ಯಾವುದೇ ಮನವಿಯಿದ್ದರೂ ನನ್ನ ಕಚೇರಿಗೆ ಬಂದು ವೈಯಕ್ತಿಕವಾಗಿ ಚರ್ಚಿಸಬಹುದು. ಪರಿಹರಿಸಲು ಮುಕ್ತನಿದ್ದೇನೆ ಎಂದು ಹೇಳಿದರು.

 Share: | | | | |


ಗಮನಿಸಿ : ಗ್ರಾಮಪಂಚಾಯಿತಿಗಳಲ್ಲಿ ಜನನ-ಮರಣ ನೋಂದಣಿ ಮಾಡುವ ಕುರಿತು ಇಲ್ಲಿದೆ ಮಾಹಿತಿ

Posted by Vidyamaana on 2024-07-02 06:38:49 |

Share: | | | | |


ಗಮನಿಸಿ : ಗ್ರಾಮಪಂಚಾಯಿತಿಗಳಲ್ಲಿ ಜನನ-ಮರಣ ನೋಂದಣಿ ಮಾಡುವ ಕುರಿತು ಇಲ್ಲಿದೆ ಮಾಹಿತಿ

ಬೆಂಗಳೂರು : ರಾಜ್ಯದ ಗ್ರಾಮೀಣ ಜನತೆಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಜನನ, ಮರಣದ ನೋಂದಣಿಯನ್ನು ಇನ್ನು ಮುಂದೆ ಗ್ರಾಮ ಪಂಚಾಯಿತಿಯಲ್ಲೇ ಆರಂಭಿಸುವ ಪ್ರಕ್ರಿಯೆ (ಜುಲೈ 1 ರಿಂದ) ಜಾರಿಗೆ ಬಂದಿದೆ.

ಗ್ರಾಮೀಣ ಪ್ರದೇಶದಲ್ಲಿ ಜನನ, ಮರಣ ನೋಂದಣಿ ವ್ಯವಸ್ಥೆಗೆ ಬಲ ತುಂಬುವ ಜೊತೆಗೆ 30 ದಿನದೊಳಗೆ ನೋಂದಾಯಿಸಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಜನನ, ಮರಣ ಉಪನೋಂದಣಾಧಿಕಾರಿಗಳನ್ನಾಗಿ ಸರ್ಕಾರ ನೇಮಿಸಿದೆ.

BIG Alert: ಎಚ್ಚರ.! ನೀವು ಹಾಸನ ಅಶ್ಲೀಲ ವಿಡಿಯೋ ಶೇರ್ ಮಾಡಿದ್ರೆ ಜೈಲಿಗೆ ಹೋಗೀರಿ ಹುಷಾರ್

Posted by Vidyamaana on 2024-05-06 16:48:07 |

Share: | | | | |


BIG Alert: ಎಚ್ಚರ.! ನೀವು ಹಾಸನ ಅಶ್ಲೀಲ ವಿಡಿಯೋ ಶೇರ್ ಮಾಡಿದ್ರೆ ಜೈಲಿಗೆ ಹೋಗೀರಿ ಹುಷಾರ್

ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಮ ಅವರ ಅಶ್ಲೀಲ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ದಿನೇ ದಿನೇ ಶೇರ್ ಆಗುತ್ತಾ ವೈರಲ್ ಆಗುತ್ತಿವೆ. ಸಾಮಾಜಿಕ ಮಾದ್ಯಮಗಳಲ್ಲಿ ಹರಿದಾಡುತ್ತಿರೋ ಈ ವೀಡಿಯೋಗಳನ್ನು ಶೇರ್ ಮಾಡೋದಕ್ಕೆ ಈಗ ಎಸ್‌ಐಟಿ ಬ್ರೇಕ್ ಹಾಕಿದೆ.

ಒಂದು ವೇಳೆ ನೀವು ಹಾಸನ ಅಶ್ಲೀಲ ವೀಡಿಯೋಗಳನ್ನು ಶೇರ್ ಮಾಡಿದ್ದೇ ಆದ್ರೇ ಜೈಲಿಗೆ ಹೋಗೋದು ಗ್ಯಾರಂಟಿ. ಅದೇಕೆ ಅಂತ ಮುಂದೆ ಓದಿ.ಈ ಕುರಿತಂತೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವಂತ ಸಿಐಡಿಯ ಎಸ್‌ಐಟಿ ಅಧಿಕಾರಿಗಳು, ಹಾಸನ ಅಶ್ಲೀಲ ವೀಡಿಯೋಗಳನ್ನು ಸಂತ್ರಸ್ತೆಯರ ಹಿತದೃಷ್ಠಿಯಿಂದ ಶೇರ್ ಮಾಡುವುದು, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳದಂತೆ ಎಚ್ಚರಿಕೆ ನೀಡಿದೆ. ಅಲ್ಲದೇ ಇದು ಅಪರಾಧ, ಒಂದು ವೇಳೆ ಶೇರ್ ಮಾಡಿದ್ದೇ ಆದ್ರೇ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಎಸ್‌ಐಟಿ ಹೊರಡಿಸಿರುವಂತ ಪತ್ರಿಕಾ ಪ್ರಕಟಣೆಯಲ್ಲಿ ಏನಿದೆ.?

ಹಾಸನದ ಲೈಂಗಿಕ ಹಿಂಸೆ ಮತ್ತು ಶೋಷಣೆಯ ಪ್ರಕರಣದ ಹಿನ್ನೆಲೆಯಲ್ಲಿ ಈ ಪ್ರಕಟಣೆಯನ್ನು ಹೊರಡಿಸಲಾಗುತ್ತಿದೆ.

ಬಪ್ಪಳಿಗೆ: ಅನ್ಸಾರುಲ್ ಇಸ್ಲಾಂ ಯುವಕ ಸಮಿತಿಯಿಂದ ಯೌವ್ವನ ಒಳಿತಿಗಾಗಿ ಸದಸ್ಯತ್ವ ಅಭಿಯಾನ ಸಮಾರೋಪ

Posted by Vidyamaana on 2023-09-09 15:18:18 |

Share: | | | | |


ಬಪ್ಪಳಿಗೆ: ಅನ್ಸಾರುಲ್ ಇಸ್ಲಾಂ ಯುವಕ ಸಮಿತಿಯಿಂದ ಯೌವ್ವನ ಒಳಿತಿಗಾಗಿ ಸದಸ್ಯತ್ವ ಅಭಿಯಾನ ಸಮಾರೋಪ

ಪುತ್ತೂರು :ಮನುಷ್ಯ ಜೀವನದ ಪ್ರಧಾನ ಹಂತವಾದ ಯೌವನಕ್ಕೆ ಇಸ್ಲಾಂ ಹೆಚ್ಚಿನ ಆದ್ಯತೆ ಮತ್ತು ಪ್ರಾಮುಖ್ಯತೆಯನ್ನು ನೀಡಿದೆ.ಇತಿಹಾಸವನ್ನು ಅರಿತಾಗ ಒಂದು ಸಮುದಾಯದ ಅಭಿವೃದ್ಧಿ ಮತ್ತು ಅವನತಿ ಯುವಜನಾಂಗ ದಿಂದಲೇ ಎಂಬುವುದು ಮನವರಿಕೆಯಾಗುತ್ತದೆ,ಎಂದು ಬಪ್ಪಳಿಗೆ ಮಸೀದಿಯ ಖತೀಬ್  ಸಿರಾಜುದ್ದೀನ್ ಫೈಝಿ ನುಡಿದರು.ಅವರು ಬಪ್ಪಳಿಗೆ ಅನ್ಸಾರುಲ್ ಇಸ್ಲಾಂ ಯುವಕ ಸಮಿತಿಯು "ಯೌವ್ವನ ಒಳಿತಿಗಾಗಿ"ಸದಸ್ಯತ್ವ ಅಭಿಯಾನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಪ್ಪಳಿಗೆ ಮಸೀದಿಯ ಅಧ್ಯಕ್ಷ ಅಬ್ದುಲ್ ಹಮೀದ್ ಲವ್ಲಿ ಯವರು ಯುವಕರು ಒಳಿತನ್ನು ಬಯಸಿಕೊಂಡು ಅಲ್ಲಾಹನ ಮಾರ್ಗದಲ್ಲೇ ಸಾಗಿ, ಸಾಮಾಜಿಕ ಸೇವೆಗಳಿಂದ ಮಾದರೀಯೋಗ್ಯರಾಗಬೇಕೆಂದರು.

   ನಲುವತ್ತೈದು ವರ್ಷಗಳ ಇತಿಹಾಸ ಹೊಂದಿರುವ ಈ ಯುವಕ ಸಮಿತಿಗೆ ಒಂದು ತಿಂಗಳ ಕಾಲ ಹಮ್ಮಿಕೊಂಡ ಸದಸ್ಯತ್ವ ನವೀಕರಣ ಹಾಗೂ ಹೊಸದಾಗಿ ಸದಸ್ಯರನ್ನು ಸೇರ್ಪಡೆಗೊಳಿಸುವ ಕಾರ್ಯ ಚಟುವಟಿಕೆಗಳ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಸಮಿತಿ ಅಧ್ಯಕ್ಷ ಮೋನು ಬಪ್ಪಳಿಗೆ ಕ್ರತಜ್ಞತೆ ಸಲ್ಲಿಸಿದರು.ಸಮಾರಂಭದಲ್ಲಿ ಜಮಾಅತ್ ಕಾರ್ಯದರ್ಶಿ ಇಕ್ಬಾಲ್ ಯು.ಕೆ.,ಇಸ್ಹಾಕ್, ಅಬ್ದುಲ್ ರಝಾಕ್ ಬಿ.ಹೆಚ್. ಹಾಗೂ ಇನ್ನಿತರ ಜಮಾಅತ್ ಸಮಿತಿ ಪದಾಧಿಕಾರಿಗಳು ಯುವಕ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.

ಪುತ್ತೂರು: ಮೆಸ್ಕಾಂ ತುರ್ತು ಕಾಮಗಾರಿ ಇಂದು (ಅಕ್ಟೋಬರ್ 07) ವಿದ್ಯುತ್ ನಿಲುಗಡೆ

Posted by Vidyamaana on 2023-10-07 07:18:54 |

Share: | | | | |


ಪುತ್ತೂರು: ಮೆಸ್ಕಾಂ ತುರ್ತು ಕಾಮಗಾರಿ ಇಂದು (ಅಕ್ಟೋಬರ್ 07) ವಿದ್ಯುತ್ ನಿಲುಗಡೆ

ಪುತ್ತೂರು: 33ಕೆ.ವಿ ಪುತ್ತೂರು-ಕಡಬ-ಸುಬ್ರಹ್ಮಣ್ಯ ಹಾಗೂ 33ಕೆ.ವಿ ಪುತ್ತೂರು- ಸವಣೂರು- ನೆಲ್ಯಾಡಿ ವಿದ್ಯುತ್ ಮಾರ್ಗಗಳ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ

ಹಾರ್ಟ್ ಅಟ್ಯಾಕ್ - ಹಾರ್ಟ್ ಫೈಲ್ಯೂರ್ - ಕಾರ್ಡಿಯಾಕ್ ಅರೆಸ್ಟ್: ಏನಿದೆ ವ್ಯತ್ಯಾಸ?


ಅ.7ರಂದು ಶನಿವಾರ ಪೂರ್ವಾಹ್ನ 10:00 ರಿಂದ ಸಾಯಂಕಾಲ 3:00 ಗಂಟೆಯವರೆಗೆ 33ಕೆ.ವಿ ಪುತ್ತೂರು- ಕಡಬ-ಸುಬ್ರಹ್ಮಣ್ಯ ಹಾಗೂ 33ಕೆ.ವಿ ಪುತ್ತೂರು-ಸವಣೂರು- ನೆಲ್ಯಾಡಿ ವಿದ್ಯುತ್ ಮಾರ್ಗಗಳ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 33/11ಕೆವಿ ಕಡಬ, ನೆಲ್ಯಾಡಿ, ಸವಣೂರು ಮತ್ತು ಬಿಂದು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ವ್ಯಂಗ್ಯ ಚಿತ್ರ ರಚಿಸಿ ಮುಸ್ಲಿಂ ಧಾರ್ಮಿಕ ಭಾವನೆಗೆ ಧಕ್ಕೆ

Posted by Vidyamaana on 2023-05-30 11:58:10 |

Share: | | | | |


ವ್ಯಂಗ್ಯ ಚಿತ್ರ ರಚಿಸಿ ಮುಸ್ಲಿಂ ಧಾರ್ಮಿಕ ಭಾವನೆಗೆ ಧಕ್ಕೆ

ಪುತ್ತೂರು : ಮುಸಲ್ಮಾನರ ಭಾವನೆಗೆ ಚ್ಯುತಿ ತಂದಿರುವ ಸುದೀಪ್ ಪನಿಯನ್ ಎಂಬವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮುಸ್ಲಿಂ ಯುವ ಜನ ಪರಿಷತ್ ನ ಅಧ್ಯಕ್ಷ ಅಶ್ರಫ್ ಕಲ್ಲೇಗ ಪುತ್ತೂರು ಉಪವಿಭಾಗದ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ.ಅರುಣ್ ಪುತ್ತಿಲ ಬ್ರಿಗ್ರೇಡ್ ಪಾಣಾಜೆ’ ಎಂಬ ವಾಟ್ಸಪ್ ಗ್ರೂಪಿನಲ್ಲಿ ಕಾರ್ಟೂನ್ ಅನ್ನು ರಚಿಸಿ ಆ ಕಾರ್ಟೂನ್ ನಲ್ಲಿ ಮುಸ್ಲಿಂ ಮಹಿಳೆಯು ಮುಸಲ್ಮಾನರ ಪವಿತ್ರ ನಮಾಜ್ ಪ್ರಾರ್ಥನೆ ನೇತೃತ್ವ ವಹಿಸಿ ಅವರ ಹಿಂದೆ ಮೂರು ಮುಸಲ್ಮಾನ ಪುರುಷರು ಪ್ರಾರ್ಥನೆ ಮಾಡುತ್ತಾ ಇರುವಂತೆ ಅಶ್ಲೀಲ ಭಂಗಿಯಲ್ಲಿ ಚಿತ್ರವನ್ನು ರಚಿಸಿ ವಾಟ್ಸಾಪ್ ಗ್ರೂಪ್ ನಲ್ಲಿ ಹರಿಯ ಬಿಟ್ಟು ಮುಸಲ್ಮಾನರ ಭಾವನೆಗೆ ಚ್ಯುತಿ ಹಾಗೂ ಭಂಗ ತಂದಿರುತ್ತಾರೆ.ಈ ವಿಚಾರದಿಂದ ಇಸ್ಲಾಂ ವಿಶ್ವಾಸಿಯಾದ ನನಗೆ ತೀವ್ರ ನೋವುಂಟಾಗಿರುತ್ತದೆ ಮಾತ್ರವಲ್ಲ ಇದು ಸಮಾಜದಲ್ಲಿ ಕೋಮು ಭಾವನೆ ಕೆರಳಿಸಲು ಪ್ರಯತ್ನಿಸಿ ಸಮಾಜದಲ್ಲಿ ಅಶಾಂತಿ ಉಂಟಾಗುವಂತೆ ಮಾಡಿದ ಕೃತ್ಯವಾಗಿರುತ್ತದೆ ಆದ್ದರಿಂದ ಆಪಾದಿತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಶ್ರಫ್ ಕಲ್ಲೇಗ ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳೆಯರ ಉಚಿತ ಬಸ್ ಪ್ರಯಾಣ ಕ್ಕೆ ಮತ್ತೊಂದು ಹೊಸ ರೂಲ್ಸ್

Posted by Vidyamaana on 2023-06-10 11:06:52 |

Share: | | | | |


ಮಹಿಳೆಯರ ಉಚಿತ ಬಸ್ ಪ್ರಯಾಣ ಕ್ಕೆ ಮತ್ತೊಂದು ಹೊಸ ರೂಲ್ಸ್

ಬೆಂಗಳೂರು : ನಾಳೆ ಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಸಾರಿಗೆ ಬಸ್ ಉಚಿತ ಪ್ರಯಾಣ ಸೌಲಭ್ಯ ಆರಂಭಗೊಳ್ಳಲಿದೆ. ಈಗಾಗಲೇ ಹಲವು ಷರತ್ತು ವಿಧಿಸಿರುವಂತ ರಾಜ್ಯ ಸರ್ಕಾರ, ಈಗ ಮತ್ತೊಂದು ಹೊಸ ರೂಲ್ಸ್ ಜಾರಿಗೊಳಿಸಿದೆ. ಅದೇ ಸ್ಟಿಕ್ಕರ್ ಇದ್ದಂತ ಬಸ್ ಗಳಲ್ಲಿ ಮಾತ್ರವೇ ಸಂಚರಿಸೋದಕ್ಕೆ ಮಹಿಳೆಯರಿಗೆ ಅವಕಾಶ ನೀಡಿದೆ.ಈ ಕುರಿತಂತೆ ಇಂದು ನಾಳೆ ವಿಧಾನಸೌಧದ ಮುಂಭಾಗದಲ್ಲಿ ಶಕ್ತಿ ಯೋಜನೆ ಉದ್ಘಾಟನಾ ಕಾರ್ಯಕ್ರಮದ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾಳೆ ಶಕ್ತಿ ಯೋಜನೆಗೆ ಸಿಎಂ ಸಿದ್ಧರಾಮಯ್ಯ ಚಾಲನೆಗೊಳಿಸಲಿದ್ದಾರೆ ಎಂಬುದಾಗಿ ತಿಳಿಸಿದರು.ನಾಳೆ ಮಧ್ಯಾಹ್ನ 1ರ ನಂತ್ರ ರಾಜ್ಯಾಧ್ಯಂತ ಸಾರಿಗೆ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಆರಂಭದಲ್ಲಿ ಐಡಿ ಕಡ್ಡಾಯಗೊಳಿಸಲಾಗಿದೆ. ಮೂರು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ ಪಡೆದು ಓಡಾಡಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.ಇನ್ನೂ ಈವರೆಗೆ ರಾಜಹಂಸ, ಎಸಿ, ನಾನ್ ಎಸಿ ಸ್ಲೀಪರ್ ಸೇರಿದಂತೆ ಐಷಾರಾಮಿ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿರಲಿಲ್ಲ ಎಂಬುದಾಗಿ ಷರತ್ತು ವಿಧಿಸಲಾಗಿತ್ತು. ಈಗ ಮತ್ತೊಂದು ಹೊಸ ರೂಲ್ಸ್ ಬಗ್ಗೆಯೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದ್ದಾರೆ. ಅದೇ ಸ್ಟಿಕ್ಕರ್ ಇರುವಂತ ಸಾರಿಗೆ ಬಸ್ ಗಳಲ್ಲಿ ಮಾತ್ರವೇ ಮಹಿಳೆಯರು ಪ್ರಯಾಣಿಸಲು ಅವಕಾಶ ಎಂಬುದಾಗಿದೆ

Recent News


Leave a Comment: