ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಸುದ್ದಿಗಳು News

Posted by vidyamaana on 2024-07-24 18:06:21 | Last Updated by Vidyamaana on 2024-07-24 18:06:21

Share: | | | | |


ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಕಾರವಾರ: ಉತ್ತರ ಕನ್ನಡದ ಶಿರೂರಿನ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಕೋಝಿಕ್ಕೋಡ್ ಮೂಲದ ಅರ್ಜುನ್ ಅವರ ಲಾರಿ ಎಂದು ನಂಬಲಾದ ಟ್ರಕ್ ನದಿಯ ಆಳದಲ್ಲಿ ಇರುವ ಸುಳಿವು ಲಭ್ಯವಾಗಿದೆ. ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇದನ್ನು ಖಚಿತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಸಚಿವರು ಮಾಹಿತಿ ನೀಡಿದ್ದಾರೆ.

ನದಿಯ ಕೆಳಭಾಗದಲ್ಲಿ ಟ್ರಕ್ ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು ಅದಕ್ಕಾಗಿ ಶೋಧ ನಡೆಯುತ್ತಿದೆ.

ಶಿರೂರಿನಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ಒಂಬತ್ತನೇ ದಿನದಂದು, ಲಾರಿಯ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಪಡೆಯಲಾಗಿದೆ. ಇಂದು ಬೆಳಗ್ಗೆ ಬೂಮ್ ಲೆಂಗ್ತ್ ಕ್ರೇನ್ ಬಂದಿದ್ದು, ತಪಾಸಣೆ ಪುನರಾರಂಭವಾಗಿದೆ. ಈ ಯಂತ್ರವು 60 ಅಡಿ ಆಳದವರೆಗೆ ಹುಡುಕಬಲ್ಲ ಸಾಮರ್ಥ್ಯ ಹೊಂದಿದೆ. ಪೊಲೀಸ್ ವಾಹನದೊಂದಿಗೆ ವಾಹನವನ್ನು ಸ್ಥಳಕ್ಕೆ ತರಲಾಗಿದೆ.

ಈ ಕುರಿತು ಕೃಷ್ಣ ಬೈರೇಗೌಡ Xನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ X ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.ಜುಲೈ 16 ರಂದು ಬೆಳಿಗ್ಗೆ ಕೋಝಿಕ್ಕೋಡ್‌ನ ಕಂಡ್ಯಕ್ಕಲ್ ಮೂಲದ ಅರ್ಜುನ್ (30) ಕರ್ನಾಟಕ-ಗೋವಾ ಗಡಿಯಲ್ಲಿ ಹಾದು ಹೋಗುವ ಪನ್ವೇಲ್-ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದರು. ಭೂಕುಸಿತದಲ್ಲಿ ಟೀ ಅಂಗಡಿ ಮಾಲೀಕ ಸೇರಿದಂತೆ 10 ಜನರು ಸಾವನ್ನಪ್ಪಿದ ಸ್ಥಳದಲ್ಲಿ ಲಾರಿಯ ಜಿಪಿಎಸ್ ಸ್ಥಳವನ್ನು ಕೊನೆಯದಾಗಿ ಪತ್ತೆ ಹಚ್ಚಲಾಯಿತು.

 Share: | | | | |


ನಾಳೆ (ಜು.26) ಪುತ್ತೂರು ಸಹಿತ - ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ - ರಜೆ ಘೋಷಣೆ!!!

Posted by Vidyamaana on 2023-07-25 13:41:53 |

Share: | | | | |


ನಾಳೆ (ಜು.26) ಪುತ್ತೂರು ಸಹಿತ - ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ - ರಜೆ ಘೋಷಣೆ!!!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ಹೆಚ್ಚು ಮಳೆಯಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುತ್ತೈ ಮುಗಿಲನ್ ಆದೇಶಿಸಿದ್ದಾರೆ.

ಮಾಣಿಲ ಗ್ರಾಮದ ಕಾಮಜಾಲಿನಲ್ಲಿ ೧೦೦ ಕೋಟಿ ರೂ ವೆಚ್ಚದಲ್ಲಿ ಸೇತುವೆ ನಿರ್ಮಾಣ

Posted by Vidyamaana on 2023-10-17 07:44:31 |

Share: | | | | |


ಮಾಣಿಲ ಗ್ರಾಮದ ಕಾಮಜಾಲಿನಲ್ಲಿ ೧೦೦ ಕೋಟಿ ರೂ ವೆಚ್ಚದಲ್ಲಿ ಸೇತುವೆ ನಿರ್ಮಾಣ

ಪುತ್ತೂರು: ಮಾಣಿಲ ಗ್ರಾಮದ ಕಾಮಜಾಲು ಎಂಬಲ್ಲಿ ನದಿಗೆ ಕಿಂಡಿ ಅಣೆಕಟ್ಟು ಮತ್ತು ಸೇತುವೆ ನಿರ್ಮಾಣಕ್ಕೆ ಈಗಾಗಲೇ ೧೦೦ ಕೋಟಿ ರೂ ಪ್ರಸ್ತಾವನೆ ಸಲ್ಲಿಸಲಾಗಿದ್ದು ಕೇರಳ ಮತ್ತು ಕರ್ನಾಟಕದ ಗಡಿ ಪ್ರದೇಶವಾದ ಕಾರಣ ಕೇರಳ ಮತ್ತು ಕರ್ನಾಟಕ ಸರಕಾರದ ಒಪ್ಪಿಗೆಯೊಂದಿಗೆ ಇಲ್ಲಿ ಕಾಮಗಾರಿ ನಡೆಸಬೇಕಾಗಿದ್ದು ಕೇರಳದಿಂದ ಒಪ್ಪಿಗೆಗಾಗಿ ಸರಕಾರದ ಜೊತೆ ಮಾತುಕತೆ ನಡೆಸುವುದಾಗಿ ಮಂಜೇಶ್ವರ ಶಾಸಕರಾದ ಎನ್ ಕೆ ಎಂ ಅಶ್ರಫ್‌ರವರು ಒಪ್ಪಿಕೊಂಡಿದ್ದು ಶೀಘ್ರದಲ್ಲೇ ಕಾಮಗಾರಿಗೆ ಸಂಬಂದಿಸಿದ ಪ್ರಸ್ತಾವನೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಯವರು ತಿಳಿಸಿದ್ದಾರೆ.


ನದಿಯ ಒಂದು ತಟ ಕರ್ನಾಟಕ್ಕೆ ಸೇರಿದರೆ ಇನ್ನೊಂದು ತಟ ಕೇರಳಕ್ಕೆ ಸೇರಿದ್ದಾಗಿದೆ. ಇಲ್ಲಿ ಸೇತುವೆ ನಿರ್ಮಾಣವಾಗಬೇಕಾದರೆ ಎರಡೂ ಸರಕಾರದ ಒಪ್ಪಿಗೆ ಅಗತ್ಯವಾಗಿದೆ. ಇದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪೆರ್ಲಕ್ಕೆ ಸಂಪರ್ಕ ಕಲ್ಪಿಸುತ್ತದೆ. ಮಾಣಿಲಂದಿದ ಕಾಸರಗೋಡಿಗೆ ತೆರಳಬೇಕಾದರೆ ಸುತ್ತು ಬಳಸಿ ಹೋಗಬೇಕಾಗಿದ್ದು ಸೇತುವೆ ನಿರ್ಮಾಣವಾದಲ್ಲಿ ಕೇವಲ ಬೆರಳೆಣಿಕೆಯ ಕಿ ಮಿ ದೂರ ಕ್ರಯಿಸಿದರೆ ಪೆರ್ಲವನ್ನು ತಲುಪಬಹುದಾಗಿದೆ. ಇಲ್ಲಿ ಸೇತುವೆ ನಿರ್ಮಾಣವಾಗಬೇಕೆಂದು ಕಳೆದ ೩೦ ವರ್ಷಗಳಿಂದ ಜನರು ಬೇಡಿಕೆಯನ್ನು ಸಲ್ಲಿಸುತ್ತಿದ್ದಾರೆ. ಒಂದು ಬಾರಿ ಸ್ಥಳದಲ್ಲಿ ಸರ್ವೆ ಕಾರ್ಯ ನಡೆದಿದ್ದು ಆ ಬಳಿಕ ಅದು ಸ್ಥಗಿತಗೊಂಡಿತ್ತು. ನದಿಯ ಒಂದು ಬದಿ ಎಣ್ಮಕಜೆ ಗ್ರಾಪಂ ಸೇರಿದ್ದು ಈಚೆ ಬದಿ ಕಾಮಜಾಲು ಹೆಸರಿನಿಂದ ಕರೆದರೆ ಆಚೆ ಬದಿ ಪೂವನಡ್ಕಂ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ.

ಮಂಜೇಶ್ವರ ಶಾಸಕರ ಜೊತೆ ಅಶೋಕ್ ರೈ ಮಾತುಕತೆ

ಕೇರಳ ಮತ್ತು ಕರ್ನಾಟಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿರುವ ಕಾರಣ ಕೇರಳ ಸರಕಾರದಿಂದ ಎನ್ ಒ ಸಿ ಪಡೆಯಬೇಕಾಗಿದೆ. ಕರ್ನಾಕಟದಿಂದ ಎನ್ ಒ ಸಿ ವ್ಯವಸ್ಥೆಯನ್ನು ಸಾಸಕ ಅಶೋಕ್ ರೈ ಮಾಡಲಿದ್ದು ಕೇರಳ ಸರಕಾರದಿಂದ ಮಂಜೇಶ್ವರ ಶಾಸಕರಾದ ಅಶ್ರಫ್ ರವರು ಎನ್ ಒ ಸಿ ವ್ಯವಸ್ಥೆ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಈ ನದಿ ತಡದಲ್ಲಿ ಸುಮಾರು ೫೦೦ ಎಕ್ರೆ ಕೃಷಿ ಭೂಮಿಯೂ ಇದೆ. ನದಿಯ ನೀರನ್ನು ಕರ್ನಾಟಕ ಮತ್ತು ಕೇರಳದ ಕೃಷಿಕರು ಬಳಸುವ ಕಾರಣ ಮುಂದಕ್ಕೆ ತಕರಾರು ಬಾರದಂತೆ ವ್ಯವಸ್ಥೆಯನ್ನೂ ಮಾಡಬೇಕಿದೆ. ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿದಂತೆ ಶಾಸಕದ್ವಯರು ಮಾತುಕತೆ ನಡೆಸಿದ್ದಾರೆ.

ಪೆರ್ಲಕ್ಕೆ ೭ ಕಿ ಮೀ

ಸೇತುವೆಯ ಜೊತೆಗೆ ಅಣೆಕಟ್ಟು ಕೂಡಾ ನಿರ್ಮಾಣವಾಗಲಿದೆ. ಸೇತುವೆ ನಿರ್ಮಾಣವಾದರೆ ಮಾಣಿಲದಿಂದ ಪೆರ್ಲಕ್ಕೆ ಕೇವಲ ೭ ಕಿ ಮೀ ದೂರ ಕ್ರಯಿಸಿದರೆ ಸಾಕಾಗುತ್ತದೆ. ಮಾಣಿಲದಿಂದ ಪೆರ್ಲಕ್ಕೆ ತೆರಳಬೇಕದರೆ ಸುತ್ತು ಬಳಸಿ ೩೫ ಕಿ ಮೀ ಪ್ರಯಾಣ ಮಾಡಬೇಕಾಗುತ್ತದೆ. ಸೇತುವೆಯ ಎರಡು ರಾಜ್ಯಗಳ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡಲಿದೆ. ಉಪ್ಪಳಕ್ಕೆ ತೆರಳುವುದು ಅತ್ಯಂತ ಹತ್ತಿರವಾಗಲಿದೆ.

೧೦೦ ಕೋಟಿ ರೂ ಪ್ರಸ್ತಾವನೆ

ಹೊಸ ಸೇತುವೆಯ ನಿರ್ಮಾಣಕ್ಕೆ ೧೦೦ ಕೋಟಿ ರೂ ಬೇಕಾಗಿದ್ದು ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಜನತೆಯ ಹಲವು ವರ್ಷಗಳ ಬೇಡಿಕೆಯ ಬಗ್ಗೆ ಚುನಾವಣಾ ಸಮಯದಲ್ಲಿ ಗ್ರಾಮಸ್ಥರು ಶಾಸಕರ ಮುಂದಿಟ್ಟಿದ್ದರು. ಇದೀಗ ಶಾಸಕರು ಪ್ರಸ್ತಾವನೆಯನ್ನು ಸರಕಾರದ ಮುಂದಿಟ್ಟಿದ್ದಾರೆ.


ಮಾಣಿಲ ಗ್ರಾಮದ ಕಾಮಜಾಲಿನಲ್ಲಿ ಕೇರಳ ಸಂಪರ್ಕ ಸೇತುವೆಯ ನಿರ್ಮಾಣದ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಒಂದು ಬದಿ ಕೇರಳಕ್ಕೆ ಸೇರಿದ ಕಾರಣ ಕೇರಳ ಸರಕಾರದಿಂದ ಎನ್ ಒ ಸಿ ಪೊಡೆಯಬೇಕಾಗುತ್ತದೆ ಇದಕ್ಕಾಗಿ ಈಗಾಗಲೇ ಮಂಜೇಶ್ವರ ಶಾಸಕರು ಎನ್ ಒ ಸಿ ಗಾಗಿ ಕೇರಳ ಸರಕಾರದ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ. ಕೇರಳ ಮತ್ತು ಕರ್ನಾಟಕ ಸರಕಾರಗಳ ಜಂಟಿ ಯೋಜನೆಯಲ್ಲಿ ಇಲ್ಲಿ ಸೇತುವೆಯ ನಿರ್ಮಾಣವಾಗಲೂ ಬಹುದು. ಏನೇ ಆಗಲಿ ಜನರ ಬೇಡಿಕೆಯನ್ನು ಪರಿಗಣಿಸಲಾಗಿದೆ.

ಅಶೋಕ್ ಕುಮಾರ್ ರೈ ಶಾಸಕರು, ಪುತ್ತೂರು

5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಹೈಕೋರ್ಟ್ ಗ್ರೀನ್ ಸಿಗ್ನಲ್ ಮಾ. 27ರಿಂದ ಪರೀಕ್ಷೆ ನಡೆಸಲು ಸೂಚನೆ

Posted by Vidyamaana on 2023-03-15 14:20:07 |

Share: | | | | |


5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಹೈಕೋರ್ಟ್ ಗ್ರೀನ್ ಸಿಗ್ನಲ್  ಮಾ. 27ರಿಂದ ಪರೀಕ್ಷೆ ನಡೆಸಲು ಸೂಚನೆ

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ 5 ಮತ್ತು 8ನೇ ತರಗತಿಗೆ ಇದೇ ಮಾರ್ಚ್ 27ರಿಂದ ಪಬ್ಲಿಕ್ ಪರೀಕ್ಷೆ ನಡೆಸಲು ರಾಜ್ಯ ಹೈಕೋರ್ಟ್‌ ಗ್ರೀನ್ ಸಿಗ್ನಲ್ ನೀಡಿದೆ.ಈ ಬಾರಿ ಪಬ್ಲಿಕ್ ಪರೀಕ್ಷೆ ನಡೆಸಬಾರದು ಎಂದು ಖಾಸಗಿ ಶಾಲೆಗಳ ಒಕ್ಕೂಟವು ಹೈಕೋರ್ಟ್‌ ಮೆಟ್ಟಿಲೇರಿತ್ತು. ಇದೀಗ ಕೋರ್ಟ್ ಆದೇಶದಿಂದ ಒಕ್ಕೂಟದ ನಿಲುವಿಗೆ ಹಿನ್ನಡೆಯಾದಂತಾಗಿದೆ.ನ್ಯಾ.ನರೇಂದರ್ ಹಾಗೂ ಅಶೋಕ್ ಕಿಣಗಿ ಅವರನ್ನೊಳಗೊಂಡ ವಿಭಾಗೀಯ ಪೀಠದಲ್ಲಿ ಬುಧವಾರ ಸಂಜೆ ವಿಚಾರಣೆ ನಡೆದು ಕೋರ್ಟ್ ಪರೀಕ್ಷೆಗೆ ಅನುಮತಿ ನೀಡಿದೆ. ಈ ಬಾರಿಯಿಂದಲೇ ಪಬ್ಲಿಕ್ ಪರೀಕ್ಷೆ ನಡೆಸುವ ನಿರ್ಧಾರವನ್ನು ಏಕಸದಸ್ಯ ಪೀಠ ರದ್ದುಪಡಿಸಿತ್ತು. ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಅದರ ವಿಚಾರಣೆ ಎರಡು ದಿನಗಳ ಕಾಲ ನಡೆದು ಬುಧವಾರ ಸಂಜೆ ಕೋರ್ಟ್ ತನ್ನ ಅಭಿಪ್ರಾಯವನ್ನು ತಿಳಿಸಿದೆ.

ಕರಾವಳಿಯಲ್ಲಿ ಭಾರೀ ಬಿಸಿಗಾಳಿ ಬೀಸುವ ಸಾಧ್ಯತೆ ಹವಾಮಾನ ಇಲಾಖೆಯಿಂದ ಎಚ್ಚರಿಕೆ

Posted by Vidyamaana on 2023-03-03 17:20:17 |

Share: | | | | |


ಕರಾವಳಿಯಲ್ಲಿ ಭಾರೀ ಬಿಸಿಗಾಳಿ ಬೀಸುವ ಸಾಧ್ಯತೆ ಹವಾಮಾನ ಇಲಾಖೆಯಿಂದ ಎಚ್ಚರಿಕೆ

ಮಂಗಳೂರು: ಈಗಾಗಲೇ ಬಿಸಿಲಿನಿಂದ ಬಳಲಿ ಬೆಂಡಾಗಿ ಹೋಗಿರುವ ಕರಾವಳಿಗರಿಗೆ ಭಾರತೀಯ ಹವಾಮಾನ ಇಲಾಖೆ ಇದೀಗ ಮತ್ತೊಂದು ಶಾಕ್ ನೀಡಿದೆ.

ದಕ್ಷಿಣಕನ್ನಡ ಉಡುಪಿ ಸಹಿತ ಕರಾವಳಿ ಕರ್ನಾಟಕದಲ್ಲಿ ಮುಂದಿನ 48 ಗಂಟೆಗಳಲ್ಲಿ ಬಲವಾದ ಬಿಸಿ ಗಾಳಿ ಬೀಸುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

ಅಲ್ಲದೆ ಈ ಅವಧಿಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಮೀರುವ ಸಾಧ್ಯತೆಗಳಿದ್ದು, ಜನರ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ವಿಶೇಷ ನಿಗಾ ವಹಿಸಲು ಸೂಚನೆ ನೀಡಲಾಗಿದೆ.

ಲೋಕಸಭಾ ಎಲೆಕ್ಷನ್ - ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏರುತ್ತಲೇ ಇದೆ ಆಕಾಂಕ್ಷಿಗಳ ಪಟ್ಟಿ

Posted by Vidyamaana on 2024-02-08 17:52:07 |

Share: | | | | |


ಲೋಕಸಭಾ ಎಲೆಕ್ಷನ್ - ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏರುತ್ತಲೇ ಇದೆ ಆಕಾಂಕ್ಷಿಗಳ ಪಟ್ಟಿ

ಪುತ್ತೂರು: ಸತ್ಯಜಿತ್ ಸುರತ್ಕಲ್ ರವರಿಗೆ ಲೋಕಸಭಾ ಚುನಾವಣೆಗೆ ಭಾಜಪದಿಂದ ದ.ಕ ಜಿಲ್ಲೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಫೆ.25ರಂದು ಜಿಲ್ಲಾ ಮಟ್ಟದ ಆಗ್ರಹ ಸಭೆಯ ಪ್ರಯುಕ್ತ ಫೆ.9ರಂದು ಪುತ್ತೂರು ರೋಟರಿ ಕ್ಲಬ್ ಮನಿಶಾ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯು 5.30ಕ್ಕೆ ನಡೆಯಲಿದೆ ಎಂದು ಪುತ್ತೂರು ತಾಲೂಕು ಸತ್ಯಜಿತ್‌ ಸುರತ್ಕಲ್ ಅಭಿಮಾನಿ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ.

ವೈರಲ್ ವೀಡಿಯೋ: ಬಸ್ಸಿನಲ್ಲಿ ಬೀಡಿ ಕಟ್ಟುತ್ತಾ ಉಚಿತ ಪ್ರಯಾಣ ಮಾಡಿದ ಮಹಿಳೆಯರು

Posted by Vidyamaana on 2024-01-23 16:53:36 |

Share: | | | | |


ವೈರಲ್ ವೀಡಿಯೋ: ಬಸ್ಸಿನಲ್ಲಿ ಬೀಡಿ ಕಟ್ಟುತ್ತಾ ಉಚಿತ ಪ್ರಯಾಣ ಮಾಡಿದ ಮಹಿಳೆಯರು

ಹೈದರಾಬಾದ್, ಜನವರಿ 23: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಮಹಾಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದೆ. ಆದರೆ ಮಹಿಳೆಯರು ಈ ಸೌಲಭ್ಯವನ್ನು ಅತಿಯಾಗಿ ಬಳಸಿಕೊಂಡು ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ. ಉಚಿತ ಪ್ರಯಾಣದ ವೇಳೆ ಹಲವು ಬಾರಿ ಬಸ್ಸುಗಳಲ್ಲಿ ಪರಸ್ಪರ ಥಳಿಸಿಕೊಂಡಿರುವ ನಿದರ್ಶನಗಳೂ ಇವೆ. ಹೀಗೆ ಸುದ್ದಿಯಾಗಿದ್ದ TSRTC ಉಚಿತ ಬಸ್ ಪ್ರಯಾಣ ಇದೀಗ ಮಹಿಳೆಯರಿಬ್ಬರು ಮಾಡಿರುವ ಕೆಲಸದಿಂದ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.


ವಿಡಿಯೋ ನೋಡಲು ಕ್ಲಿಕ್ ಮಾಡಿ 

ವೈರಲ್ ವೀಡಿಯೋ: ಬಸ್ಸಿನಲ್ಲಿ ಬೀಡಿ ಕಟ್ಟುತ್ತಾ ಉಚಿತ ಪ್ರಯಾಣ ಮಾಡಿದ ಮಹಿಳೆಯರು

ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರು ಸುಮ್ಮನೆ ಕುಳಿತುಕೊಳ್ಳುವುದು ಏಕೆಂದು ತಮ್ಮ ಕೈಲಾದ ಕೆಲಸವನ್ನು ಸಾಂಗೋಪಾಂಗವಾಗಿ ಮಾಡಿದ್ದಾರೆ. ಘಟನೆಯ ವಿಡಿಯೋ ತೆಗೆದ ಯುವಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೋ ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ. ಘಟನೆ ಯಾವ ಡಿಪೋದಲ್ಲಿ ನಡೆದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.


ಈ ವೀಡಿಯೊವನ್ನು ಪೋಸ್ಟ್ ಮಾಡುವ ಮೊದಲು ಹೇ ರೇವಂತ್ ರೆಡ್ಡಿ, ಹೇ ಉತ್ತಮ್ ಕುಮಾರ್ ರೆಡ್ಡಿ, ಯೇ ಕ್ಯಾ ಹುವಾ! ಮನೆಯಲ್ಲಿ ಕುಳಿತು ಒಬ್ಬರೇ ಬೀಡಿ ಕಟ್ಟಿದರೆ ಬೇಜಾರಾಗುತ್ತದೆ ಎಂದು ಬಸ್ ಗಳಲ್ಲೂ ಹೀಗೆ ಕಾಯಕದಲ್ಲಿ ನಿರತರಾಗಿದ್ದಾರೆ ನೋಡಿ ಆನಂದಿಸಿ ಎಂದಿದ್ದಾರೆ.ವಿಡಿಯೋ ಹಾಕಿದವರ ವಿರುದ್ಧ ಕೆಲವರು ಟೀಕೆಯನ್ನೂ ಮಾಡಿದ್ದಾರೆ. ಹಾಯ್ ಬಿಚ್ಚಗಾಡು! ಅವರಿಗೆ ಸೀಟು ಸಿಕ್ಕರೆ ಉಚಿತ ಬಸ್ ಯೋಜನೆ ಯಶಸ್ವಿಯಾಗಿದೆ ಎಂದರ್ಥ. ಅವರು ಬೇರೆ ಏನನ್ನೂ ಮಾಡಲು ಸಾಧ್ಯವಿಲ್ಲ. ಅಷ್ಟಕ್ಕೂ ಅವರು ಏನನ್ನಾದರೂ ಮಾಡಿಕೊಳ್ಳಲಿ, ನಿನಗೇನು?ಇಷ್ಟು ಚೀಪಾಗಿ ಅವರ ಅನುಮತಿಯಿಲ್ಲದೆ ಆ ಮಹಿಳೆಯರ ವೀಡಿಯೊಗಳನ್ನು ತೆಗೆಯುವುದು ಅಪರಾಧವಲ್ಲವೆ ಎಂದೂ ಪ್ರಶ್ನಿಸಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.


ಸದ್ಯಕ್ಕೆ ಸರ್ಕಾರದಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಉಚಿತ ಬಸ್‌ಗಳಲ್ಲಿ ಸಾಕಷ್ಟು ಅಹಿತಕರ ಘಟನೆಗಳು ಮತ್ತು ಆಘಾತಕಾರಿ ಘಟನೆಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಏನೆಲ್ಲಾ ಬೆಳವಣಿಗೆಗಳು ಸೃಷ್ಟಿಯಾಗುತ್ತವೋ ಎಂದು ಜನ ಮಾತನಾಡುತ್ತಿದ್ದಾರೆ.

Recent News


Leave a Comment: