ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಸುದ್ದಿಗಳು News

Posted by vidyamaana on 2024-07-03 11:16:18 |

Share: | | | | |


ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.

ವಿಶ್ವ ಹಿಂದೂ ಪರಿದ್ ನ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಭಟ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

 Share: | | | | |


ವಿಧಾನ ಪರಿಷತ್ ನೂತನ ಸದಸ್ಯರ ಪ್ರಮಾಣ ವಚನ

Posted by Vidyamaana on 2024-06-24 14:11:13 |

Share: | | | | |


ವಿಧಾನ ಪರಿಷತ್ ನೂತನ ಸದಸ್ಯರ ಪ್ರಮಾಣ ವಚನ

ಪ್ರಮಾಣ ವಚನ ಸ್ವೀಕರಿಸಿ ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿದ ಸಿಟಿ ರವಿ, ಕಿವಿ ಹಿಂಡಿ ಅಭಿನಂದಿಸಿದ ಸಿಎಂ!

ಬೆಂಗಳೂರು : ಕರ್ನಾಟಕದ ವಿಧಾನ ಪರಿಷತ್‌ಗೆ ನೂತನವಾಗಿ ಆಯ್ಕೆಯಾಗಿ ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇಂದು ವಿಧಾನಸೌಧಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಿತು. ನೂತನ ಪರಿಷತ್ ಸದಸ್ಯರಿಗೆ ಸಭಾಪತಿ ಬಸವರಾಜ್ ಹೊರಟ್ಟಿ (Basavaraj Horatti) ಪ್ರಮಾಣ ವಚನ (MLC Oath Ceremony) ಬೋಧಿಸಿದರು

ವಿಧಾನಸಭೆ, ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ನೂತನ 17 ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಸಿಎಂ ಸಿದ್ದರಾಮಯ್ಯ, ಕಾನೂನು ಹಾಗೂ ಸಂಸದೀಯ ಸಚಿವ ಎಚ್‌ಕೆ ಪಾಟೀಲ್ ಸೇರಿ ಹಲವರು ಭಾಗಿಯಾದರು. ಇದರೊಂದಿಗೆ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ 11 ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವೂ ನಡೆಯಿತು.

ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ

Posted by Vidyamaana on 2023-12-07 13:41:00 |

Share: | | | | |


ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ

ಹೈದರಾಬಾದ್‌: ಹೈದರಾಬಾದಿನ ಎಲ್‌ಬಿ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಅದ್ದೂರಿ ಕಾರ್ಯಕ್ರಮದಲ್ಲಿ ರೇವಂತ್ ರೆಡ್ಡಿ ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಹಾಗೂ ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಉಪಸ್ಥಿತರಿದ್ದರು.


ಸುಮಾರು ಒಂದು ಲಕ್ಷ ಮಂದಿ ಈ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಮಂಗಳೂರು: ಪೊಲೀಸ್‌ ಸೇವೆಗಳ ಫೀಡ್‌ಬ್ಯಾಕ್‌ಗೆ ಜನಸ್ಪಂದನಾ

Posted by Vidyamaana on 2023-09-21 12:20:26 |

Share: | | | | |


ಮಂಗಳೂರು: ಪೊಲೀಸ್‌ ಸೇವೆಗಳ ಫೀಡ್‌ಬ್ಯಾಕ್‌ಗೆ ಜನಸ್ಪಂದನಾ

ಮಂಗಳೂರು: ಜನಸ್ನೇಹಿ ಪೊಲೀಸಿಂಗ್‌ನ ಭಾಗವಾಗಿ ಪಾರದರ್ಶಕ ಮತ್ತು ತ್ವರಿತ ಸೇವೆಗೆ ಮುಂದಡಿ ಇಟ್ಟಿರುವ ಪೊಲೀಸ್‌ ಇಲಾಖೆಯು ಸಾರ್ವಜನಿಕರು ತಮಗೆ ಪೊಲೀಸ್‌ ಠಾಣೆಯಲ್ಲಿ ದೊರೆಯುವ ಸ್ಪಂದನೆಯ ಬಗ್ಗೆ ಕೂಡಲೇ ಮೇಲಾಧಿಕಾರಿಗಳಿಗೆ ತಿಳಿಸಿ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆಯನ್ನು ರಾಜ್ಯಾದ್ಯಂತ ಶೀಘ್ರ ಜಾರಿಗೆ ತರಲಿದೆ.


ಸಾರ್ವಜನಿಕರು ದೂರು, ಅರ್ಜಿ, ಅಹವಾಲು ಇತ್ಯಾದಿಗಳನ್ನು ಸಲ್ಲಿಸಲು ಠಾಣೆಗೆ ತೆರಳಿದಾಗ ವಿಎಂಎಸ್‌ನಲ್ಲಿ (ವಿಸಿಟರ್ ಮ್ಯಾನೇಜ್‌ಮೆಂಟ್‌ ಸಿಸ್ಟಂ) ವಿವರ ದಾಖಲಿಸಿಕೊಂಡು ಆ ವಿವರಗಳುಳ್ಳ ಮುದ್ರಿತ ಚೀಟಿಯನ್ನು ನೀಡಲಾಗುತ್ತದೆ. ಅದರಲ್ಲಿ ಯಾವ ಅಧಿಕಾರಿ/ಸಿಬಂದಿಯನ್ನು ಭೇಟಿ ಮಾಡಬೇಕು ಎಂಬ ಮಾಹಿತಿಯೂ ಇರುತ್ತದೆ. ಸಂಬಂಧಿಸಿದ ಅಧಿಕಾರಿ/ಸಿಬಂದಿಯನ್ನು ಭೇಟಿಯಾದ ಅನಂತರ ಅವರು ಅದಕ್ಕೆ ಸಹಿ ಮಾಡುವ ಮೂಲಕ ಅಹವಾಲು ಸ್ವೀಕರಿಸಿರುವುದನ್ನು ದೃಢಪಡಿಸಬೇಕು.


ಆ ಪ್ರಕ್ರಿಯೆಗಳು ಮುಗಿದ ಬಳಿಕ ವಿಎಂಎಸ್‌ನಲ್ಲಿ ನಮೂದಾಗಿರುವ ದೂರು ದಾರರ ಮೊಬೈಲ್‌ ಸಂಖ್ಯೆಗೆ ಇಲಾಖೆಯಿಂದ ಲಿಂಕ್‌ ಕಳುಹಿಸಲಾಗುತ್ತದೆ. ಆ ಲಿಂಕ್‌ ಅನ್ನು ಒತ್ತಿದಾಗ “ಫೀಡ್‌ಬ್ಯಾಕ್‌’ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಠಾಣೆಯಲ್ಲಿ ದೊರೆತ ಸ್ಪಂದನೆಯ ಕುರಿತು ಕೆಲವು ಪ್ರಶ್ನೆಗಳಿದ್ದು ಅವುಗಳಿಗೆ ಉತ್ತರಿಸಬೇಕು. ಅದು ಪೊಲೀಸ್‌ ವರಿಷ್ಠಾಧಿಕಾರಿ, ಪೊಲೀಸ್‌ ಆಯುಕ್ತ ಮೊದಲಾದ ಉನ್ನತ ಅಧಿಕಾರಿಗಳಿಗೆ ತಲುಪುತ್ತದೆ. ಲಿಂಕ್‌ ಮೂಲಕ ಅಲ್ಲದೆ ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕವೂ ಫೀಡ್‌ಬ್ಯಾಕ್‌ ನೀಡಬಹುದು. ಎಲ್ಲ ಠಾಣೆಗಳಲ್ಲಿಯೂ ಕ್ಯುಆರ್‌ ಕೋಡ್‌ ಅಳವಡಿಸಿ ಸಾರ್ವಜನಿಕರಿಂದ ಫೀಡ್‌ಬ್ಯಾಕ್‌ ಪಡೆಯಲು ವ್ಯವಸ್ಥೆ ಮಾಡಲಾಗುತ್ತದೆ.ಠಾಣೆಯಲ್ಲಿರುವಾಗಲೇ ಫೀಡ್‌ಬ್ಯಾಕ್‌ ನೀಡಬೇಕಾಗಿಲ್ಲ. ಅನಂತರವೂ ನೀಡಬಹುದು.


ಪೊಲೀಸರ ಮೇಲೆ ನಿಗಾ!


ಜನಸ್ಪಂದನಾ ಮೂಲಕ ಪರೋಕ್ಷವಾಗಿ ಸಾರ್ವಜನಿಕರು ಸ್ಥಳೀಯ ಪೊಲೀಸರ ಮೇಲೆಯೇ ನಿಗಾ ಇಡಲು ಸಾಧ್ಯವಾಗಲಿದೆ. ವಿನಾಕಾರಣವಾಗಿ ವಿಳಂಬ ಮಾಡುವುದು, ನಿರ್ಲಕ್ಷ್ಯ ತೋರುವುದು, ಒರಟುತನದಿಂದ ವರ್ತಿಸುವುದು, ವಾಪಸ್‌ ಕಳುಹಿಸುವುದು, ಎಫ್ಐಆರ್‌ ದಾಖಲಿಸಲು ಹಿಂದೇಟು ಹಾಕುವುದು ಮೊದಲಾದವುಗಳ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲು ಇದರಿಂದ ಅನುಕೂಲವಾಗಲಿದೆ. ಈಗಾಗಲೇ ಮಂಗಳೂರು ಪೊಲೀಸ್‌ ಕಮಿಷನರೆಟ್‌ ಸಹಿತ ಕೆಲವು ನಗರ ಹಾಗೂ ಕೆಲವು ಜಿಲ್ಲೆಗಳಲ್ಲಿ ಇಂತಹ ಫೀಡ್‌ಬ್ಯಾಕ್‌ ವ್ಯವಸ್ಥೆ ಆರಂಭಗೊಂಡಿದ್ದು ದ.ಕ., ಉಡುಪಿ ಸಹಿತ ಇತರ ಜಿಲ್ಲೆಗಳಲ್ಲಿಯೂ ಅನುಷ್ಠಾನಗೊಳ್ಳಲಿದೆ.


ಜನಸ್ಪಂದನಾ ಮೂಲಕ ಪೊಲೀಸರ ಸ್ಪಂದನೆ ಬಗ್ಗೆ ಸಾರ್ವಜನಿಕರು ನೇರವಾಗಿ ಮಾಹಿತಿ ನೀಡಬಹುದು. ಇದು ಸರಳ ವ್ಯವಸ್ಥೆಯಾಗಿದ್ದು ಪರಿಣಾಮಕಾರಿಯಾಗಲಿದೆ. ಜನರ ಪ್ರತಿಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿ ವಿಚಾರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್‌ ಇಲಾಖೆಗೆ ಸಂಬಂಧಿಸದ ವಿಚಾರಗಳಾಗಿದ್ದರೆ ಯಾರನ್ನು ಸಂಪರ್ಕಿಸಬಹುದು ಎಂಬುದನ್ನುಸಾರ್ವಜನಿಕರಿಗೆ ತಿಳಿಸಲಾಗುವುದು.


ಉಡುಪಿ ಜಿಲ್ಲೆಯಲ್ಲಿಯೂ ಪ್ರತೀ ಪೊಲೀಸ್‌ ಠಾಣೆಯಲ್ಲಿ ಜನಸ್ಪಂದನ ಶೀಘ್ರ ಆರಂಭಗೊಳ್ಳಲಿದೆ. ಇದಕ್ಕೆ ಪೂರಕವಾಗಿ ತರಬೇತಿ ಪೂರ್ಣಗೊಂಡಿದೆ

ಮಿನ್ಹಾ ಫ್ಯಾಬ್ರಿಕ್ ಸ್ಪಾಟ್ ನಲ್ಲಿ ಸ್ಟಾಕ್ ಕ್ಲಿಯರೆನ್ಸ್ ಸೇಲ್ ಡ್ರೆಸ್ ಮಳಿಗೆಯಲ್ಲಿ ಅತೀ ಕಡಿಮೆ ಬೆಲೆಗೆ ಮಾರಾಟ

Posted by Vidyamaana on 2023-06-16 06:46:10 |

Share: | | | | |


ಮಿನ್ಹಾ ಫ್ಯಾಬ್ರಿಕ್ ಸ್ಪಾಟ್ ನಲ್ಲಿ ಸ್ಟಾಕ್ ಕ್ಲಿಯರೆನ್ಸ್ ಸೇಲ್ ಡ್ರೆಸ್ ಮಳಿಗೆಯಲ್ಲಿ ಅತೀ ಕಡಿಮೆ ಬೆಲೆಗೆ ಮಾರಾಟ

ಪುತ್ತೂರು: ಪುತ್ತೂರಿನ ಡ್ರೆಸ್ ಮಳಿಗೆಗಳ ಪೈಕಿ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಮಿನ್ಹಾ ಫ್ಯಾಬ್ರಿಕ್ ಸ್ಪಾಟ್ ನಲ್ಲಿ ಸ್ಟಾಕ್ ಕ್ಲಿಯರೆನ್ಸ್ ಸೇಲ್ ಜೂನ್ 16ರಿಂದ ನಡೆಯಲಿದೆ.

ಅತೀ ಕಡಿಮೆ ಬೆಲೆಗೆ ಡ್ರೆಸ್ ಗಳ ಮಾರಾಟ ಇಲ್ಲಿ ನಡೆಯಲಿದ್ದು, ಗ್ರಾಹಕರ ನಿರೀಕ್ಷೆಯಂತೆಯೇ ಶುಕ್ರವಾರದಿಂದ ಈ ಸೇಲ್ ಗೆ ಚಾಲನೆ ನೀಡಲಾಗಿದೆ.

ಪುತ್ತೂರು ಕೋಟಿ – ಚೆನ್ನಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗದ ಶಾಲಿಮಾರ್ ಬಿಲ್ಡಿಂಗ್ ನ ಎದುರುಗಡೆ ಮಿನ್ಹಾ ಫ್ಯಾಬ್ರಿಕ್ ಸ್ಪಾಟ್ ಕಾರ್ಯಾಚರಿಸುತ್ತಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Video | ಔಟ್ ಮಾಡಲು ಈ ಆಟಗಾರರು ಪಟ್ಟ ಪಡಿಪಾಟಲು ಕಂಡು ಬಿದ್ದು ಬಿದ್ದು ನಗ್ತಿರಾ..!

Posted by Vidyamaana on 2024-05-30 06:24:38 |

Share: | | | | |


Video | ಔಟ್ ಮಾಡಲು ಈ ಆಟಗಾರರು ಪಟ್ಟ ಪಡಿಪಾಟಲು ಕಂಡು ಬಿದ್ದು ಬಿದ್ದು ನಗ್ತಿರಾ..!

ಆಟವಾಡುವ ಸಂದರ್ಭದಲ್ಲಿ ಹಲವು ತಮಾಷೆಯ ಘಟನೆಗಳು ನಡೆಯುತ್ತಿರುತ್ತವೆ. ಅಂತಹ ಕ್ಷಣಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೂಲಕ ನೋಡುಗರಿಗೆ ಮನರಂಜನೆ ನೀಡುತ್ತವೆ. ಅಂತವುದೇ ಒಂದು ವಿಡಿಯೋ ಈಗ ಫುಲ್ ವೈರಲ್ ಆಗಿದೆ.ಮೈದಾನದಲ್ಲಿ ಹುಡುಗರು ಕ್ರಿಕೆಟ್ ಆಡುತ್ತಿರುತ್ತಾರೆ.

ಅವರೆಲ್ಲರೂ ಬಿಳಿ ಬಣ್ಣದ ಪ್ಯಾಂಟ್ – ಶರ್ಟ್ ಹಾಕಿದ್ದು ನೋಡಿದರೆ ಯಾವುದೋ ಪ್ರಮುಖ ಟೂರ್ನಮೆಂಟ್ ನಡೆಯುತ್ತಿರುವಂತೆ ಕಾಣುತ್ತದೆ.

ನನ್ನ ಹೆಂಡತಿಗೂ ಸಿಗುತ್ತೆ ರೀ: ಸಿದ್ದರಾಮಯ್ಯ ಹಾಸ್ಯ ಚಟಾಕಿ

Posted by Vidyamaana on 2023-06-02 14:25:24 |

Share: | | | | |


ನನ್ನ ಹೆಂಡತಿಗೂ ಸಿಗುತ್ತೆ ರೀ: ಸಿದ್ದರಾಮಯ್ಯ ಹಾಸ್ಯ ಚಟಾಕಿ

ಬೆಂಗಳೂರು : ಕಾಂಗ್ರೆಸ್ ಗ್ಯಾರಂಟಿ ಘೋಷಣೆ ವೇಳೆ ಸಿಎಂ ಸಿದ್ದರಾಮಯ್ಯ ಅವರು ರಫ್ & ಟಫ್ ಆಗಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.ಸುದ್ದಿಗೋಷ್ಠಿಯ ವೇಳೆ ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಕುರಿತು ಪತ್ರಕರ್ತರೊಬ್ಬರು ಈ ಯೋಜನೆ ದುಡಿಯುವ ವರ್ಗ, ಸರ್ಕಾರಿ ಉದ್ಯೋಗಿ ಮಹಿಳೆಯರಿಗೆ ಸಿಗುತ್ತದೆಯಾ ಎಂದು ಪ್ರಶ್ನಿಸಿದರು. ಉತ್ತರಿಸಿದ ಸಿಎಂ, ”ಎಲ್ಲರಿಗೂ ಸಿಗುತ್ತದೆ, ನನ್ನ ಹೆಂಡತಿಗೂ ಸಿಗುತ್ತದೆ” ಎಂದು ಉತ್ತರಿಸಿದರು. ಈ ವೇಳೆ ಉಪಸ್ಥಿತರಿದ್ದ ಸಚಿವರೆಲ್ಲರೂ ಗೊಳ್ಳನೇ ನಕ್ಕು ನಗೆ ಗಡಲಲ್ಲಿ ತೇಲಾಡಿದರು.

ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ, ವಿದ್ಯಾರ್ಥಿನಿಯರನ್ನೊಳಗೊಂಡಂತೆ ಬಸ್ ನಲ್ಲಿ ಉಚಿತ ಪ್ರಯಾಣ ಜೂನ್ 11 ರಿಂದ ಜಾರಿ ಮಾಡುತ್ತೇವೆ. ಕರ್ನಾಟಕದೊಳಗೆ ಪ್ರಯಾಣಿಸಲು ಅನ್ವಯ. ರಾಜ್ಯದ ಒಳಗಡೆ ಎಸಿ, ರಾಜಹಂಸ ಬಸ್ ಹೊರತುಪಡಿಸಿ ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ನಲ್ಲೂ ಫ್ರೀ ಆಗಿ ಪ್ರಯಾಣ ಮಾಡಬಹುದು. ಕೆಎಸ್ ಆರ್ ಟಿಸಿ ಯಲ್ಲಿ ಪುರುಷರಿಗೆ 50% ಮೀಸಲಿಡುತ್ತೇವೆ, ಇದು ಬಿಎಂಟಿಸಿ ಬಸ್ ನಲ್ಲಿ ಅನ್ವಯವಾಗುವುದಿಲ್ಲ ಎಂದರು.



Leave a Comment: