ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ

ಸುದ್ದಿಗಳು News

Posted by vidyamaana on 2024-07-03 08:24:56 |

Share: | | | | |


ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ

ಬೆಂಗಳೂರು : ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಕೆಲಸ ಮಾಡಲಾಗಿದೆ. ನಾಲ್ವರು ಕೆಎಎಸ್ ಅಧಿಕಾರಿ ಹಾಗೂ 25 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.

ಕರ್ನಾಟಕ ಆಡಳಿತ ಸೇವೆಗೆ ಸೇರಿದ ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ / ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ವರ್ಗಾವಣೆಗೊಂಡ ಕೆಎಎಸ್‌ ಅಧಿಕಾರಿಗಳು

ಡಾ. ಜಗದೀಶ್‌ ಕೆ. ನಾಯಕ್‌

ರಘುನಂದನ್‌ ಎ.ಎನ್‌

ಪ್ರಸನ್ನ ಕುಮಾರ್‌ ವಿ.ಕೆ

ಹುಲ್ಲುಮನಿ ತಿಮ್ಮಣ್ಣ

ವರ್ಗಾವಣೆಗೊಂಡ ಐಪಿಎಸ್‌ ಅಧಿಕಾರಿಗಳು

ಬಿ. ರಮೇಶ -ಡಿಐಜಿಪಿ, ಪೂರ್ವ ವಲಯ, ದಾವಣಗೆರೆ

ಎನ್. ವಿಷ್ಣು ವರ್ಧನ್ -ಎಸ್.ಪಿ. ಮೈಸೂರು ಜಿಲ್ಲೆ

ಸೀಮಾ ಲಾಟ್ಕರ್ -ಪೊಲೀಸ್ ಆಯುಕ್ತರು, ಮೈಸೂರು ನಗರ

ರೇಣುಕಾ ಸುಕುಮಾರ -ಎಐಜಿಪಿ ಬೆಂಗಳೂರು ಡಿಜಿ ಕಚೇರಿ

ಸಿ.ಕೆ. ಬಾಬಾ -ಎಸ್.ಪಿ. ಬೆಂಗಳೂರು ಗ್ರಾಮಾಂತರ

ಸುಮನ್ ಡಿ. ಪೆನ್ನೇಕರ್ -ಎಸ್‌ ಪಿ, ಬಿಎಂಟಿಎಫ್

ಸಿ.ಬಿ. ರಿಷ್ಯಂತ್ -ಎಸ್.ಪಿ

ಚನ್ನಬಸವಣ್ಣ - ಎಐಜಿಪಿ, ಆಡಳಿತ, ಡಿಜಿ ಕಚೇರಿ

ಲಾಬೂ ರಾಮ್ -ಐಜಿಪಿ ಕೇಂದ್ರ ವಲಯ

ರವಿಕಾಂತೇಗೌಡ -ಐಜಿಪಿ ಕೇಂದ್ರ ಕಚೇರಿ- ಒಂದು ಬೆಂಗಳೂರು ಡಿಜಿ ಕಚೇರಿ

ಕೆ. ತ್ಯಾಗರಾಜನ್ -ಐಜಿಪಿ, ಐ.ಎಸ್.ಡಿ.

ಎನ್. ಶಶಿಕುಮಾರ್ -ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್

ಪ್ರದೀಪ್‌ ಗುಂಡಿ - ಎಸ್‌ ಪಿ. ಬೀದರ್‌ ಜಿಲ್ಲೆ

ಯತೀಶ್‌ ಎನ್. - ಎಸ್‌ ಪಿ ದಕ್ಷಿಣ ಕನ್ನಡ ಜಿಲ್ಲೆ

ಮಲ್ಲಿಕಾರ್ಜುನ ಬಾಲದಂಡ ಎಸ್‌ ಪಿ ಮಂಡ್ಯ ಜಿಲ್ಲೆ

ಡಾ.ಟಿ. ಕವಿತಾ ಎಸ್.ಪಿ. ಚಾಮರಾಜನಗರ ಜಿಲ್ಲೆ

ಬಿ. ನಿಖಿಲ್‌ ಎಸ್‌ ಪಿ ಕೋಲಾರ ಜಿಲ್ಲೆ

 Share: | | | | |


ಸುಳ್ಯ : ಏಕಾಏಕಿ ಭೂಮಿ ಕುಸಿದು ಬೃಹತ್ ಹೊಂಡ ನಿರ್ಮಾಣ : ಕುಸಿದ ಭೂಮಿ ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್ ಫಾರ್ಮರ್ ಧರಾಶಾಹಿ

Posted by Vidyamaana on 2023-11-03 22:30:47 |

Share: | | | | |


ಸುಳ್ಯ : ಏಕಾಏಕಿ ಭೂಮಿ ಕುಸಿದು ಬೃಹತ್ ಹೊಂಡ ನಿರ್ಮಾಣ : ಕುಸಿದ ಭೂಮಿ ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್ ಫಾರ್ಮರ್ ಧರಾಶಾಹಿ

ಸುಳ್ಯ : ಕೆಲ ಸಮಯದ ಹಿಂದೆ ಸುರಿದ ಭಾರೀ ಮಳೆಗೆ ಏಕಾಏಕಿ ಭೂಮಿ ಕುಸಿದು ಬೃಹತ್ ಹೊಂಡ ನಿರ್ಮಾಣವಾದ ಘಟನೆ ಪರಿವಾರಕಾನ ಉಡುಪಿ ಗಾರ್ಡನ್ ಹೋಟೆಲ್ ಮುಂಭಾಗ ನಡೆದಿದ್ದು, ಸಮೀಪವಿದ್ದ ವಿದ್ಯುತ್ ಟ್ರಾನ್ಸ್ಫಾರ್ಮರ್ ಧರೆಗುರುಳಿದೆ.


ಕುಸಿದ ಭೂಮಿ ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್ಫಾರ್ಮರ್ ಧರಾಶಾಹಿ - ಇಲ್ಲಿದೆ ನೋಡಿ ವೀಡಿಯೋ

ಸುಮಾರು ಹತ್ತು ಅಡಿಯಷ್ಟು ಉದ್ದಕ್ಕೆ ಗುಂಡಿ ನಿರ್ಮಾಣವಾಗಿದ್ದು, ಪಕ್ಕದಲ್ಲಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್ ಬೀಳುವ ಹಂತಕ್ಕೆ ತಲುಪಿತ್ತು. ಹೊಂಡ ನಿರ್ಮಾಣವಾದ ಸ್ವಲ್ಪ ಸಮಯದ ಬಳಿಕ ವಿದ್ಯುತ್ ಟ್ರಾನ್ಸ್ಫಾರ್ಮರ್ ನೆಲಕ್ಕುರುಳಿದೆ.


ಘಟನೆಯಿಂದಾಗಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.

ಇಂಚಲಾ ಉಂಡಾ ಮಾರ್ರೆ.. ಅಸ್ತಿತ್ವಕ್ಕೆ ಬರಲಿದೆ ಅಖಿಲ ಭಾರತೀಯ ಬ್ರಹ್ಮಚಾರಿಗಳ ಸಂಘ

Posted by Vidyamaana on 2023-12-16 07:37:33 |

Share: | | | | |


ಇಂಚಲಾ ಉಂಡಾ ಮಾರ್ರೆ.. ಅಸ್ತಿತ್ವಕ್ಕೆ ಬರಲಿದೆ ಅಖಿಲ ಭಾರತೀಯ ಬ್ರಹ್ಮಚಾರಿಗಳ ಸಂಘ

ಮಂಡ್ಯ: ಮಂಡ್ಯದ ಬ್ರಹ್ಮಚಾರಿಗಳು ದೇಶಾದ್ಯಂತ ಬ್ರಹ್ಮಚಾರಿ (Brahmachari Sangha) ಸಂಘಟನೆ ವಿಸ್ತರಿಸಲು ಮುಂದಾಗಿದ್ದಾರೆ. ಅಖಿಲ ಭಾರತೀಯ ಬ್ರಹ್ಮಚಾರಿಗಳ ಸಂಘಕ್ಕೆ ಅಧ್ಯಕ್ಷರಾಗಲು ಕಾಂಗ್ರೆಸ್‌ನ ಕೇಂದ್ರ ನಾಯಕ ರಾಹುಲ್ ಗಾಂಧಿ (Ragul Gandi) ಅವರಿಗೆ ಆಹ್ವಾನ ಕೊಟ್ಟಿದ್ದಾರೆ.


ರೈತರ ಮಕ್ಕಳಿಗೆ ಹೆಣ್ಣು ಕೊಡದ ಕಾರಣಕ್ಕೆ ಬೇಸತ್ತು ಹೋಗಿರುವ ಮಂಡ್ಯ ಹೈಕಳು, ಇದೀಗ ಜನರಿಗೆ ಅರಿವು ಮೂಡಿಸಲು ಬ್ರಹ್ಮಚಾರಿ ಸಂಘವನ್ನು (Demand for bride) ಕಟ್ಟಿಕೊಂಡಿದ್ದಾರೆ.


ಇತ್ತೀಚಿನ ವರ್ಷಗಳಲ್ಲಿ ಗಂಡು ಮಕ್ಕಳು ಮದುವೆ ಆಗಬೇಕು ಎಂದರೂ ಹೆಣ್ಣು ಸಿಗುವುದು ಕಷ್ಟವಾಗಿದೆ. ಪೋಷಕರುಗೆ ತಮ್ಮ ಮಕ್ಕಳಿಗೆ ಹುಡುಗಿ ಹುಡುಕುವುದೇ ಈಗ ಒಂದು ಸವಾಲಿನ ಕೆಲಸವಾಗಿದೆ. ಅದರಲ್ಲೂ ರೈತರು, ಪುರೋಹಿತರು, ಸಣ್ಣ ಉದ್ಯೋಗಿಗಳು ಅಂದರೆ ಹುಡುಗಿ ಕೊಡಲು ಹಿಂದೆಟ್ಟು ಹಾಕುತ್ತಿದ್ದಾರೆ. ಹುಡುಗಿಯರಂತೂ ಇಂಥವರನ್ನು ಕಣ್ಣೆತ್ತಿಯೂ ನೋಡುವುದಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಬೇರೆ ದಾರಿ ಕಾಣದೆ (Demand for bride) ಯುವಕರು ದೇವರ ಮೊರೆ ಹೋಗಿದ್ದು ಆಯಿತು. ಬಳಿಕ ಪಾದಯಾತ್ರೆ ನಡೆಸಿದರೂ, ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಬ್ರಹ್ಮಚಾರಿ ಸಂಘವನ್ನು ಕಟ್ಟಿಕೊಂಡಿದ್ದಾರೆ.


ಬ್ರಹ್ಮಚಾರಿ ಸಂಘದಿಂದ 2024ರ ಜನವರಿಯಲ್ಲಿ ಚುಂಚನಗಿರಿಗೆ ಪಾದಯಾತ್ರೆ ನಡೆಸಿ ಅರಿವು ಮೂಡಿಸಲು ಮುಂದಾಗಿದ್ದಾರೆ. ಅಖಿಲ ಕರ್ನಾಟಕ ಬ್ರಹ್ಮಚಾರಿಗಳ ಸಂಘದಿಂದ ರಾಷ್ಟ್ರ ವ್ಯಾಪ್ತಿ ಸಂಘಟನೆ ಮಾಡಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.


ಅಖಿಲ ಕರ್ನಾಟಕ ಬ್ರಹ್ಮಚಾರಿಗಳ ಸಂಘದ ರಾಜ್ಯಾಧ್ಯಕ್ಷ ಆಗಿರುವ ಮಲ್ಲೇಶ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬ್ರಹ್ಮಚಾರಿಗಳ ನಡೆ.. ಕಾಲಭೈರವೇಶ್ವರನ ಕಡೆ.. ಎಂಬ ಘೋಷವಾಕ್ಯದೊಂದಿಗೆ ಮಂಡ್ಯದ ಕೆ.ಎಂ.ದೊಡ್ಡಿಯಿಂದ ಆದಿಚುಂಚನಗಿರಿಗೆ ಪಾದಯಾತ್ರೆ ನಡೆಸಲಾಗುತ್ತಿದೆ. ಮಂಡ್ಯದಿಂದ ನಾಗಮಂಗಲದವರೆಗೆ ಸುಮಾರು 86 ಕಿ.ಮೀವರೆಗೆ ಪಾದಯಾತ್ರೆಕೈಗೊಳ್ಳಲಾಗುತ್ತದೆ. ಈಗಾಗಲೇ ಪಾದಯಾತ್ರೆಗೆ ನೊಂದಣಿ ಪ್ರಕ್ರಿಯೆಯು ಶುರುವಾಗಿದೆ ಎಂದರು.


ಇನ್ನು ಆದಿಚುಂಚನಗಿರಿಯ ಪಾದಯಾತ್ರೆಗೆ ಕಾಂಗ್ರೆಸ್‌ನ ಕೇಂದ್ರ ನಾಯಕ ರಾಹುಲ್ ಗಾಂಧಿಯನ್ನು ಕರೆಸಲು ಸಂಘವು ಚಿಂತನೆ ನಡೆಸಿದೆ. ಈಗಾಗಲೇ ಕೆ.ಪಿ.ಸಿ.ಸಿ‌ ಮೂಲಕ ಪತ್ರ ವ್ಯವಹಾರ ನಡೆಸಿ ರಾಹುಲ್ ಗಾಂಧಿ ಕರೆಸಲು ಯೋಜಿಸಲಾಗಿದೆ. ಅವರಿಂದಲೇ ಬ್ರಹ್ಮಚಾರಿ ಸಂಘದ ಆದಿಚುಂಚನಗಿರಿ ಪಾದಯಾತ್ರೆಗೆ ಚಾಲನೆ ಕೊಡಿಸಲಾಗುತ್ತದೆ. ಜೊತೆಗೆ ಅಖಿಲ ಕರ್ನಾಟಕ ಬ್ರಹ್ಮಚಾರಿಗಳ ಸಂಘಕ್ಕೆ ಅಧ್ಯಕ್ಷರಾಗಿ ರಾಹುಲ್‌ ಗಾಂಧಿಯವರಿಗೆ ಆಹ್ವಾನವನ್ನು ನೀಡುತ್ತೇವೆ ಎಂದರು.


ಈಗಾಗಲೇ 2022-23ರಲ್ಲಿ ಬ್ರಹ್ಮಚಾರಿಗಳ ನಡೆ ಮಲೆ ಮಹದೇಶ್ವರ ಬೆಟ್ಟದ ಕಡೆ ಎಂದು ಪಾದಯಾತ್ರೆ ಹೋಗಿ ಬಂದಿದ್ದೇವೆ. ಇದೀಗ ಒಕ್ಕಲಿಗ ಸಮುದಾಯ ಪ್ರಬಲ ಮಠವಾದ ಆದಿಚುಂಚನಗಿರಿಗೆ ಪಾದಯಾತ್ರೆ ಕೈಗೊಳ್ಳಲಿದ್ದೇವೆ ಎಂದು ಮಲ್ಲೇಶ್ ತಿಳಿಸಿದರು.


ಪರಮ ಪವಿತ್ರ ಬ್ರಹ್ಮಚಾರಿಗಳು


ಇನ್ನು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ಬ್ರಹ್ಮಚಾರಿಗಳಿಗೆ ಆಹ್ವಾನವನ್ನು ನೀಡಲಾಗಿದೆ. ಈ ಪಾದಯಾತ್ರೆಗೆ ಬರುವರಿಗೆ ಸಂಘದಿಂದ ಕೆಲವು ನಿಬಂಧನೆಯು ಇದೆ. ಅವಿವಾಹಿತರಿಗೆ ಮಾತ್ರ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಹೆಣ್ಣು ಸಿಗದ ಮಂಡ್ಯ ಯುವಕರು ʻಪರಮ ಪವಿತ್ರ ಬ್ರಹ್ಮಚಾರಿಗಳುʼ ಎಂಬ ಹೆಸರಿನಲ್ಲಿ ವಾಟ್ಸ್‌ಆಯಪ್‌ ಗ್ರೂಪ್‌ ಅನ್ನು ಕ್ರೀಯೆಟ್‌ ಮಾಡಿಕೊಂಡಿದ್ದಾರೆ.

ಬಿಜೆಪಿ ಟಿಕೇಟ್ ಡೀಲ್ ಪ್ರಕರಣ : ವಜ್ರಾದೇಹಿ ಸ್ವಾಮಿಜೀಗೆ ಸಿಸಿಬಿ ನೋಟೀಸ್

Posted by Vidyamaana on 2023-10-10 16:50:37 |

Share: | | | | |


ಬಿಜೆಪಿ ಟಿಕೇಟ್ ಡೀಲ್ ಪ್ರಕರಣ : ವಜ್ರಾದೇಹಿ ಸ್ವಾಮಿಜೀಗೆ ಸಿಸಿಬಿ ನೋಟೀಸ್

ಬೆಂಗಳೂರು: ಬಿಜೆಪಿ ಟಿಕೆಟ್ ಡೀಲ್ ವಿಷಯವಾಗಿ


ಹಿಂದೂ ಮುಖಂಡೆ ಚೈತ್ರ ಕುಂದಾಪುರ (Chaithra


Kundapura) ಹಾಗೂ ಹಾಲಶ್ರೀ ಸ್ವಾಮಿಜಿ


ಬಂಧನವಾಗಿ ತಿಂಗಳು ಕಳೆದ ನಂತರ ದಕ್ಷಿಣ ಕನ್ನಡದ ಪ್ರಮುಖ ಹಿಂದೂ ಪರ ಇರುವ ಸ್ವಾಮಿಜೀಗೆ ವಿಚಾರಣೆಗೆ ಹಾಜರಾಗಲು ನೋಟಿಸ್


ಜಾರಿಯಾಗಿದೆ.ಉದ್ಯಮಿ ಗೋವಿಂದ ಬಾಬು ಪೂಜಾರಿಗೆ


ಬೈಂದೂರಿನ ಬಿಜೆಪಿ ಟಿಕೇಟ್ ನೀಡುವ ವಿಚಾರವಾಗಿ ಡೀಲ್ ನಡೆದು ಚೈತ್ರ ಕುಂದಾಪುರ ಬಂಧನ ಆದ ನಂತರ ಚೈತ್ರ ಇಡಿ ಗೆ ಬರೆದ ಪತ್ರದಲ್ಲಿ ವಜ್ರಾದೇಹಿ ಶ್ರೀ, ಚಕ್ರವರ್ತಿ ಸೂಲಿಬೆಲೆ, ಹಾಗೂ ಸಿಟಿ ರವಿ ಹೆಸರು ಉಲ್ಲೇಖವಾಗಿತ್ತು.ಇದೀಗ ಸಿಸಿಬಿ ಮಂಗಳೂರು ಗುರುಪುರ ವಜ್ರಾದೇಹಿ ಮಠದ ರಾಜಶೇಖರಾನಂದ ಸ್ವಾಮಿಜೀಗೇ ನೋಟಿಸ್ ಜಾರಿ ಮಾಡಿದೆಬೆಂಗಳೂರು ನಗರ ಸಿಸಿಬಿ ಮಹಿಳಾ ಸಂರಕ್ಷಣಾ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ

ಬೆಂಗಳೂರು ಸಿಸಿಬಿ ಸಹಾಯಕ ಪೊಲೀಸ್ಕಮಿಷನರ್ ರವರಾದ ರೀನಾ ಸುವರ್ಣ ಅವರು ವಜ್ರಾದೇಹಿ ಶ್ರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಹಾಲಶ್ರೀ ಸ್ವಾಮಿಜಿ ಅರೆಸ್ಟ್ ಹಿಂದಿದೆ ಸಿಸಿಬಿ ಎಸಿಪಿ ರೀನಾ ಸುವರ್ಣ ಶ್ರಮ!

Posted by Vidyamaana on 2023-09-20 15:25:32 |

Share: | | | | |


ಹಾಲಶ್ರೀ ಸ್ವಾಮಿಜಿ ಅರೆಸ್ಟ್ ಹಿಂದಿದೆ ಸಿಸಿಬಿ ಎಸಿಪಿ ರೀನಾ ಸುವರ್ಣ ಶ್ರಮ!

ಬೆಂಗಳೂರು : ಚೈತ್ರ ಅಂಡ್ ಗ್ಯಾಂಗ್ 5 ಕೊಟ್ಟಿ ವಂಚನೆ ಸಂಬಂಧ ಹಾಲಾಶ್ರೀ ಸ್ವಾಮಿಜಿ ಸಿಸಿಬಿಗೆ ಲಾಕ್ ಆಗಿದ್ದೆ ರೋಚಕ ಸ್ವಾಮಿಜಿ ಅರೆಸ್ಟ್ ಹಿಂದಿದೆ ಎಸಿಪಿ ರೀನಾ ಸುವರ್ಣ ಟೆಕ್ನಿಕಲ್ ಎಫರ್ಟ್. ಸತತ ಐದು ದಿನಗಳಿಂದ ಸ್ವಾಮಿಜಿ ಹಿಂದೆ ಬಿದ್ದಿದ್ದ ಸಿಸಿಬಿ ತಂಡ.‌ಆದ್ರ ಮೈಸೂರಿನಿಂದ‌ ಮಿಸ್ ಆಗಿದ್ದ ಸ್ವಾಮಿಜಿ ವೇಚ ಬದಲಿಸಿ ಮೊಬೈಲ್ ಸ್ವಿಟ್ಚ್ ಆಫ್ ಮಾಡಿ ಎಸ್ಕೇಪ್ ಆಗಿದ್ರು.ಹೈದರಬಾದ್ ಮಾಹಿತಿ ಪಡೆದು ಹೈದರಬಾದ್ ಗೂ ತೆರಳಿತ್ತು ಸಿಸಿಬಿ ಟೀಮ್. ಆದ್ರೆ ಹೈದರಾಬಾದ್ ಮಠದಿಂದ ಸ್ವಾಮಿಜಿ ಟ್ರೈನ್ ಮೂಲಕ ಕಾಶಿ ಕಡೆ ಪ್ರಯಾಣ ಮಾಡಿದ್ರು.‌ ಹೈದರಬಾದ್ ಮಠವೊಂದರ ಕಾರ್ ನಲ್ಲೇ ಸ್ವಾಮಿಜಿ ರತಯಲ್ವೇ ಸ್ಟೇಷನ್ ಗೆ ಡ್ರಾಪ್ ಪಡೆದುಕೊಂಡಿದ್ರು. ಮಾರ್ಗ ಮಧ್ಯ ಹೈದರಬಾದ್ ನಲ್ಲಿ ಸ್ವಾಮಿಜಿ ಹೊಸ ಮೊಬೈಲ್ ಖರೀದಿ ಮಾಡಿದ್ರ.


ಸಿಸಿಬಿ ಪೊಲಿಲೀಸ್ರ ವಿಚಾರಣೆ ವೇಳೆ ಮಠದ ಕಾರು ಚಾಲಕ ಹೊಸ ಮೊಬೈಲ್ ಬಗ್ಗೆ ಮಾಹಿತಿ ನೀಡಿದ್ದ.‌ ನಂತರ ಶುರುವಾಗಿದ್ದೆ ಅಸಲಿ ಕಹಾನಿ.‌ ಮೊಬೈಲ್ ಐ ಎಂ ಐ ನಂಬರ್ ನಿಂದ‌ ಸ್ವಾಮಿಜಿ ಟ್ರಾಕ್ ಮಾಡಿದ ಎಸಿಪಿ ರೀನಾ ಸುವರ್ಣ ಅಂಡ್ ಟೀಮ್. ಸ್ವಾಮಿಜಿ‌ ಹೊಸ ಮೊಬೈಲ್ ನಿಂದ ತಮ್ಮ‌ಮಠ ಹಾಗೂ ಹೈದರಬಾದಗ ಮಠದ ಸ್ವಾಮಿಜಿ ಸಂಪರ್ಕ ಮಾಡಿದ್ರು. ಇದಾದ ಕೆಲವೇ ಹೊತ್ತಲ್ಲಿ ಸ್ವಾಮಿಜಿಗೆ ಪೊಲೀಸ್ರು ಹೈದರಬಾದ್ ಗೆ ಬಂದಿರೋ‌ ವಿಷಯ ಕೂಡ ತಲುಪಿತ್ತು.ಹೈದರಾಬಾದ್ ನಲ್ಲಿ ತೆಗೆದುಕೊಂಡಿದ್ದ ಮೊಬೈಲ್‌ ಸ್ವಿಟ್ಚ್ ಆಫ್ ಮಾಡಿ ಒಡಿಶಾದಲ್ಲಿ ಹೊಸ ಸಿಮ್‌ಮತ್ತು ಮೊಬೈಲ್‌ಖರೀದಿ‌ಮಾಡಿದ್ರು. ಆದ್ರೆ ಸ್ವಾಮಿಜಿ‌ ರೆಗ್ಯೂಲರ್ ಆಗಿ ಫೋನ್‌ಮಾಡಿದ್ದ ನಂಬರ್ ಮೇಲೆ‌ ಸಿಸಿಬಿ ಕಣ್ಣಿಟ್ಟಿತ್ತು.‌ ಮತ್ತೆ ಅದೇ ನಂಬರ್ ಗೆ ಸ್ವಾಮಿಜಿ ಕರೆ ಮಾಡಿದಾಗ ಸಿಸಿಬಿ ಟ್ರಾಕ್ ಗೆ ಮತ್ತೆ ಸ್ವಾಮಿಜಿ ಬಂದಿದ್ರು.


ಈ ಒಟ್ಟು ತನಿಖಾ ಸಮಯದಲ್ಲಿ ಮೊಬೈಲ್ ಐಎಂಇಐ ಸಿಡಿ ಆರ್ ಹಾಗೂ ಲೊಕೇಶ್ ಟ್ರೇಸ್ ಸೇರಿದಂತೆ ಎಲ್ಲಾ ಟೆಕ್ನಿಕಲ್ ಡಾಟವನ್ನ ಇದೇ ಎಸಿಪಿ ರೀನಾ ಸುವರ್ಣ ನಿರ್ವಹಿಸಿದ್ರು. ಸಿಸಿಬಿ ಕಚೇರಿಯಲ್ಲೇ ಕುಳಿತು ಈ ಎಲ್ಲಾ ಟೆಕ್ನಿಕಲ್ ಎವಿಡೆನ್ಸ್ ನ ಎಸಿಪಿ ರೀನಾ ಸುವರ್ಣ ಕಲೆಕ್ಟ್ ಮಾಡಿ ಸಿಸಿಬಿ ಸಿಬ್ಬಂದಿಗೆ ಕೊಟ್ಟಿದ್ರು .‌ ಇದೇ ಕಾರಣಕ್ಕೆ ಸ್ವಾಮಿಜಿಯನ್ನ ಸಿಸಿಬಿ ಪೊಲೀಸ್ರು ಈಸಿಯಾಗಿ ಕ್ಯಾಚ್ ಮಾಡಲು ಸಹಕಾರಿಯಾಗಿದೆ.

ಜಮೀಲಾ ಸನಿಕ ಳಿಗೆ ಮಿಡಿದ ಹೃದಯಗಳು...

Posted by Vidyamaana on 2023-09-24 11:14:53 |

Share: | | | | |


ಜಮೀಲಾ ಸನಿಕ ಳಿಗೆ ಮಿಡಿದ ಹೃದಯಗಳು...

    ಹ್ರದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರೂ  ಆರೋಗ್ಯ ವಂತಳಾಗಿಯೇ ಕಾಣುತ್ತಿದ್ದ ಮಗು... ಸಾವಕಾಶವಾಗಿ ಶಸ್ತ್ರಕ್ರಿಯೆ ಯೊಂದನ್ನು ನಡೆಸಲು ವೈದ್ಯರು ಸೂಚಿಸಿದ್ದರು. ಈ ಮಧ್ಯೆ ಕುಟುಂಬ ಸಮೇತ ಪವಿತ್ರ ಉಮ್ರಾ ಕರ್ಮವನ್ನು ನಿರ್ವಹಿಸಿ ಬಂದಿದ್ದರು,ಮಗುವನ್ನು ಶಾಲೆಗೂ ದಾಖಲು ಮಾಡಿದ್ದರು.

ಇದ್ದಕ್ಕಿದ್ದಂತೆಯೇ ಇತ್ತೀಚೆಗೆ ಮಗು ತೀವ್ರ ಅನಾರೋಗ್ಯಳಾದಾಗ ಬೆಂಗಳೂರಿನ ನಾರಾಯಣ ಹ್ರದಯಾಲಯದಲ್ಲಿ ದಾಖಲುಮಾಡಿದ್ದರು.

  ಲಕ್ಷಾಂತರ ರೂಪಾಯಿ ಗಳನ್ನು ವ್ಯಯಿಸಿ ಚಿಕಿತ್ಸೆ ಮಾಡುತ್ತಾ ಕಂದಮ್ಮಳ ಜೀವರಕ್ಷಿಸಲು ಶತಪ್ರಯತ್ನ ಪಡುತ್ತಿದ್ದರೂ ಕೊನೆಗೆ ಶಸ್ತ್ರಕ್ರಿಯೆಗೂ ಸ್ಪಂದಿಸದೆ , ಅಲ್ಲಾಹನ ಅನುಲ್ಲಂಘನೀಯ ವಿಧಿಯ ಮುಂದೆ ಆ ಮಗು ಕೊನೆಯುಸಿರೆಳೆಯಿತು. ಅಲ್ಲಾಹನೇ...! ಸಹನೆ ನೀಡು...ಮಾತಾ ಪಿತರಿಗೆ  ಫಲಶ್ರುತಿಯಾದ ಸಂತಾನಗಳಲ್ಲಿ ಸೇರಿಸು.. ಸ್ವರ್ಗೋದ್ಯಾವನದಲ್ಲಿ ಒಂದು ಗೂಡಿಸು....ಆಮೀನ್...

*"ಅಲ್ಲಾಹನು ಹೇಳುತ್ತಿದ್ದಾನೆಂದು ಪ್ರವಾದಿ ಸ.ಅ.ರು ಹೇಳಿದರು: ನನ್ನ ದಾಸನಾದ ಸತ್ಯ ವಿಶ್ವಾಸಿಯ ನಿಕಟ ಬಂಧುವನ್ನು ನಾನು ಕರೆಸಿಕೊಂಡಾಗ (ಅರ್ಥಾತ್ ಮರಣಗೊಳಿಸಿದಾಗ) ಆ ಸತ್ಯವಿಶ್ವಾಸಿಯು ಸಹನೆಯೊಂದಿಗೆ ತನ್ನ ಪ್ರತಿಫಲವನ್ನು ಆಗ್ರಹಿಸಿದರೆ ಅವನಿಗೆ ಸ್ವರ್ಗ ವಲ್ಲದೆ ಬೇರೆ ಪ್ರತಿಫಲವಿಲ್ಲ."*


ವಿಶ್ವ ಜಾಂಬೂರಿಗೆ ತೆರಳುವ ಬಿ.ಎಂ.ತುಂಬೆ ಅವರಿಗೆ ಬಂಟ್ವಾಳ ಜಮೀಯತ್ತುಲ್ ಫಲಾಹ್ ವತಿಯಿಂದ ಬೀಳ್ಕೊಡುಗೆ

Posted by Vidyamaana on 2023-07-21 14:45:46 |

Share: | | | | |


ವಿಶ್ವ ಜಾಂಬೂರಿಗೆ ತೆರಳುವ ಬಿ.ಎಂ.ತುಂಬೆ ಅವರಿಗೆ ಬಂಟ್ವಾಳ ಜಮೀಯತ್ತುಲ್ ಫಲಾಹ್ ವತಿಯಿಂದ ಬೀಳ್ಕೊಡುಗೆ

ಬಂಟ್ವಾಳ : ದಕ್ಷಿಣ ಕೊರಿಯಾದ ಸೀಮನ್ ಗಾಮ್ ನಲ್ಲಿ 15 ದಿವಸದ ಕಾಲ ನಡೆಯುವ ಸ್ಕೌಟ್ ಮತ್ತು ಗೈಡ್ಸ್ 25 ನೇ ವಿಶ್ವ ಜಾಂಬೂರಿಯಲ್ಲಿ ಭಾಗವಹಿಸಲು ಭಾರತದ ಪ್ರತಿನಿಧಿಯಾಗಿ ತೆರಳುತ್ತಿರುವ ನಿವೃತ್ತ ಶಿಕ್ಷಕರೂ, ಬಂಟ್ವಾಳ ಜಮೀಯತ್ತುಲ್ ಫಲಾಹ್ ನ ಪೂರ್ವಾಧ್ಯಕ್ಷರೂ ಆಗಿರುವ ಬಿ. ಮೊಹಮ್ಮದ್ ತುಂಬೆ ಅವರನ್ನು ಸನ್ಮಾನಿಸಲಾಯಿತು.


    ಮೆಲ್ಕಾರ್ ಎಂ.ಎಚ್. ಕಂಪೌಂಡ್ ನಲ್ಲಿ ಶುಕ್ರವಾರ ನಡೆದ ಬಂಟ್ವಾಳ ತಾಲೂಕು ಜಮೀಯತುಲ್ ಫಲಾಹ್ ನ ಸಭೆ ಹಾಗೂ ಬೀಳ್ಕೊಡುವ ಸಮಾರಂಭದಲ್ಲಿ ಸಭಾಧ್ಯಕ್ಷತೆ ವಹಿಸಿದ್ದ ಘಟಕದ ಅಧ್ಯಕ್ಷ ರಶೀದ್ ವಿಟ್ಲ ಅವರು ಬಿ. ಮೊಹಮ್ಮದ್ ತುಂಬೆ ಅವರನ್ನು ಸನ್ಮಾನಿಸಿದರು.


   ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಅವರು ಅಭಿನಂದನಾ ಮಾತುಗಳನ್ನಾಡಿದರು. ಜಮೀಯತ್ತುಲ್ ಫಲಾಹ್ ಜಿಲ್ಲಾ ಕೇಂದ್ರ ಸಮಿತಿಯ ಪೂರ್ವಾಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಘಟಕದ ಕೋಶಾಧಿಕಾರಿ ಎಂ.ಎಚ್. ಇಕ್ಬಾಲ್, ಘಟಕದ ಪೂರ್ವಾಧ್ಯಕ್ಷರುಗಳಾದ ರಫೀಕ್ ಹಾಜಿ ಆಲಡ್ಕ, ನೋಟರಿ ಅಬೂಬಕರ್ ವಿಟ್ಲ, ಸುಲೈಮಾನ್ ಸೂರಿಕುಮೇರು, ಪಿ.ಮಹಮ್ಮದ್ ಪಾಣೆಮಂಗಳೂರು, ಆಸಿಫ್ ಇಕ್ಬಾಲ್ ಫರಂಗಿಪೇಟೆ, ಉಪಾಧ್ಯಕ್ಷ ಶೇಖ್ ರಹ್ಮತುಲ್ಲಾ ಕಾವಳಕಟ್ಟೆ, ಅಬ್ಬಾಸ್ ಅಲಿ ಬೋಳಂತೂರು, ಮಹಮ್ಮದ್ ನಾರಂಕೋಡಿ, ಅಹ್ಮದ್ ಮುಸ್ತಫಾ ಗೋಳ್ತಮಜಲು ಈ ಸಂದರ್ಭ ಉಪಸ್ಥಿತರಿದ್ದರು. 


ಪ್ರಧಾನ ಕಾರ್ಯದರ್ಶಿ ಕೆ.ಕೆ. ಶಾಹುಲ್ ಹಮೀದ್ ಸ್ವಾಗತಿಸಿದರು. ಉಪಾಧ್ಯಕ್ಷ ಲತೀಫ್ ನೇರಳಕಟ್ಟೆ ವಂದಿಸಿದರು.



Leave a Comment: