ಪುತ್ತೂರು: ಲಾರಿ - ಸ್ಕೂಟರ್ ನಡುವೆ ಭೀಕರ ಅಪಘಾತ :ಮಿತ್ತೂರು ನಿವಾಸಿ ಶಿವರಾಮ ನಾಯ್ಕ ಮೃತ್ಯು

ಸುದ್ದಿಗಳು News

Posted by vidyamaana on 2024-07-24 08:25:31 | Last Updated by Vidyamaana on 2024-07-24 08:25:31

Share: | | | | |


ಪುತ್ತೂರು: ಲಾರಿ - ಸ್ಕೂಟರ್ ನಡುವೆ ಭೀಕರ ಅಪಘಾತ :ಮಿತ್ತೂರು ನಿವಾಸಿ ಶಿವರಾಮ ನಾಯ್ಕ ಮೃತ್ಯು

ಪುತ್ತೂರು: ನೆಹರುನಗರ ಮಂಜಲ್ಪಡ್ಪು ಬಳಿಯ ಮಂಗಲ ಸ್ಟೋರ್ಸ್ ಮುಂಭಾಗ ಜು.23 ರಂದು  ಲಾರಿ ಮತ್ತು ತ್ರಿವೀಲ್ಡರ್ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಮಿತ್ತೂರು ಏಮಾಜೆಯ ವಿಕಲಚೇತನ ಶಿವರಾಮ ನಾಯ್ಕ (50ವ) ಎಂಬವರು ಮೃತಪಟ್ಟ ಬಗ್ಗೆ ವರದಿಯಾಗಿದೆ

ಮಂಗಳೂರು ಕಡೆ ಹೋಗುತ್ತಿದ್ದ ಲಾರಿ ವೊಂದು ವಿಕಲಚೇತನ ಶಿವರಾಮ ಅವರು ಚಲಾಯಿಸುತ್ತಿದ್ದ ತ್ರಿವೀಲ್ಡ‌ರ್ ಸ್ಕೂಟರ್ ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡ ಸವಾರ ಮೃತ ಪಟ್ಟಿದ್ದಾರೆಂದು ತಿಳಿದು ಬಂದಿದೆ.

 Share: | | | | |


ಫೇಲ್ ಆಗಿದ್ದೇನೆಂದು ತಪ್ಪಾಗಿ ಭಾವಿಸಿ ಆತ್ಮಹತ್ಯೆ

Posted by Vidyamaana on 2024-05-10 07:23:36 |

Share: | | | | |


ಫೇಲ್ ಆಗಿದ್ದೇನೆಂದು ತಪ್ಪಾಗಿ ಭಾವಿಸಿ ಆತ್ಮಹತ್ಯೆ

ಮಂಡ್ಯ, ಮೇ 9: ಮಂಡ್ಯ ಜಿಲ್ಲೆಯಲ್ಲಿ SSLC ಫಲಿತಾಂಶ ಪ್ರಕಟಗೊಂಡ ನಂತರ ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೃತ ವಿದ್ಯಾರ್ಥಿನಿಯ ಫಲಿತಾಂಶ ಸೆಕೆಂಡ್ ಕ್ಲಾಸ್‌ನಲ್ಲಿ ಪಾಸಾಗಿದ್ದಾಳೆ. ಆದರೆ, ಕಡಿಮೆ ಅಂಕ ಬಂದಿದ್ದಕ್ಕೆ ತಾನು ಫೇಲ್ ಆಗಿದ್ದೇನೆಂದು ತಪ್ಪಾಗಿ ಭಾವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಹುಲಿಗೆರೆಪುರ ಗ್ರಾಮದ ಅಮೃತಾ (16) ಮೃತ ದುರ್ದೈವಿ‌. ಅಮೃತಾ ನಗರಕೆರೆ ಗ್ರಾಮದ ಪೂರ್ಣಿಮಾ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇಂದು ಎಸ್‌ಎಸ್ಎಲ್‌ಸಿ ಫಲಿತಾಂಶ ಪ್ರಕಟಗೊಂಡ ನಂತರ ಅದನ್ನು ಮೊಬೈಲ್‌ನಲ್ಲಿ ನೋಡಿದ್ದಾಳೆ. ಆದರೆ, 400ಕ್ಕಿಂತ ಕಡಿಮೆ ಅಂಕ ಬಂದಿರುವುದನ್ನು ನೋಡಿ ತಾನು ಫೇಲ್ ಆಗಿದ್ದೇನೆಂದು ಭಾವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ನೆಲ್ಯಾಡಿ ಅಡಿಕೆ ಗೋದಾಮಿನಲ್ಲಿ ನಡೆದಿದೆನ್ನಲಾದ ಕಳ್ಳತನ ಪ್ರಕರಣ : ಆರೋಪಿಗಳು ದೋಷ ಮುಕ್ತ

Posted by Vidyamaana on 2024-05-01 15:40:39 |

Share: | | | | |


ನೆಲ್ಯಾಡಿ ಅಡಿಕೆ ಗೋದಾಮಿನಲ್ಲಿ ನಡೆದಿದೆನ್ನಲಾದ ಕಳ್ಳತನ ಪ್ರಕರಣ : ಆರೋಪಿಗಳು ದೋಷ ಮುಕ್ತ

ನೆಲ್ಯಾಡಿ : ಸುಮಾರು ಆರು ವರ್ಷಗಳ ಹಿಂದೆ ನೆಲ್ಯಾಡಿ ಜಂಕ್ಷನ್ ನಲ್ಲಿದ್ದ ಕೆ. ಮೊಹಮ್ಮದ್ ಹನೀಫ್ ಎಂಬುವರ ಗೋದಾಮ್ ಕೊಠಡಿಯ ಶಟರ್ ತೆಗೆದು ಅವರು ಖರೀದಿಸಿದ ಸುಮಾರು 250 ಕೆಜಿ ಅಡಿಕೆಯನ್ನು ಯಾರೋ ಆರೋಪಿಗಳು ಕಳ್ಳತನ ಮಾಡಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರನ್ನು ನೀಡಿರುತ್ತಾರೆ. ಸದರಿ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿ ಪೊಲೀಸರು ಚಪ್ಪ (ಸರ್ಪರಾಜ್) ಮತ್ತು ಅಬ್ದುಲ್ ಅಸ್ಪರ್ (ಅಸ್ಫಕ್ ) ಎಂಬುವರನ್ನು ಆರೋಪಿಗಳೆಂದು ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.

ಸದ್ರಿ ಪ್ರಕರಣವನ್ನು ಕೈಗೆತ್ತಿಕೊಂಡು ನ್ಯಾಯಾಲಯವು ಈ ಪ್ರಕರಣದಲ್ಲಿ ಅಭಿಯೋಜನ ಪರ ಸುಮಾರು 21

ರಾಷ್ಟ್ರೀಯ ಸ್ವಯಂ ಸೇವಕ ಸಂಘದ – ಪುತ್ತೂರು ಜಿಲ್ಲಾ ಕಾರ್ಯಾಲಯ ‘ಪಂಚವಟಿ’ ಲೋಕಾರ್ಪಣೆ

Posted by Vidyamaana on 2023-01-18 08:56:42 |

Share: | | | | |


ರಾಷ್ಟ್ರೀಯ ಸ್ವಯಂ ಸೇವಕ ಸಂಘದ – ಪುತ್ತೂರು ಜಿಲ್ಲಾ ಕಾರ್ಯಾಲಯ ‘ಪಂಚವಟಿ’ ಲೋಕಾರ್ಪಣೆ

ಪುತ್ತೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಾಲಯ ಆ ಪ್ರದೇಶದ ಸಂಘ ಕಾರ್ಯಕ್ಕೆ ಪ್ರೇರಣೆ ಕೊಡುವ ಕುಂಡಲಿನಿ ಇದ್ದಂತೆ. ಅಲ್ಲಿ ನಡೆಯುವ ಬೈಠೆಕ್, ಸಂವಾದ, ಚಿಂತನೆ ಆ ಪ್ರದೇಶದ ಕಾರ್ಯಕರ್ತರ ಕಾರ್ಯದ ಕುಂಡಲಿನಿಯನ್ನು ಜಾಗೃತಿ ಮಾಡುತ್ತದೆ. ಆ ರೀತಿಯ ಜಾಗೃತಿಯು ಹಿಂದೂ ಸಮಾಜದ ಜಾಗೃತಿಯಾಗಿ ಸಾವಿರಾರು ಕೇಂದ್ರಗಳಾಗಿ ಮೂಡಿದೆ. ಇದರಿಂದಾಗಿ ದೇಶದಲ್ಲಿ ಕಳೆದ 100 ವರ್ಷದಿಂದ ಆದ ಬದಲಾವಣೆ ಇವತ್ತು ನಮ್ಮ ಕಣ್ಣ ಮುಂದಿದೆ. ಇದನ್ನು ನೋಡಿದಾಗ ಸಂಘ ಕಾರ್ಯವು ಕಾರ್ಯಾಲಯದಲ್ಲಲ್ಲ ಸಂಘ ಕಾರ್ಯ ಇರುವುದು ಸಮಾಜದಲ್ಲಿ, ಸಮಾಜದ ಬಂಧುಗಳ ಕುಟುಂಬಗಳ ಹೃದಯ ಮನಸ್ಸುಗಳಲ್ಲಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ ಅವರು ಹೇಳಿದರು.

ಅವರು ಜ.14ರಂದು ಇಲ್ಲಿನ ಹಳೆ ಪೊಲೀಸ್ ವಸತಿಗೃಹದ ಬಳಿಯಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲೆಯ ಕಾರ್ಯಾಲಯ ‘ಪಂಚವಟಿ ‘ಇದರ ದ್ವಾರಪೂಜೆಯೊಂದಿಗೆ ನಡೆದ ಪ್ರವೇಶ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜ.16ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ನಡೆದ ಲೋಕಾರ್ಪಣೆ ಸಮಾವೇಶದಲ್ಲಿ ಬೌಧಿಕ್ ನೀಡಿದರು.

ಬಂಟ್ವಾಳ:ಪೊಲೀಸ್ ಸಿಬ್ಬಂದಿಯ ಮೊಬೈಲನ್ನೇ ಎಗರಿಸಿದ ಖತರ್ನಾಕ್ ಕಳ್ಳ

Posted by Vidyamaana on 2023-09-21 16:09:12 |

Share: | | | | |


ಬಂಟ್ವಾಳ:ಪೊಲೀಸ್ ಸಿಬ್ಬಂದಿಯ ಮೊಬೈಲನ್ನೇ ಎಗರಿಸಿದ ಖತರ್ನಾಕ್ ಕಳ್ಳ

ಬಂಟ್ವಾಳ:ಪೊಲೀಸ್ ಸಿಬ್ಬಂದಿಯ ಮೊಬೈಲನ್ನೇ ಖತರ್ನಾಕ್ ಕಳ್ಳನೊಬ್ಬ ಎಗರಿಸಿದ ಘಟನೆ ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.


ಮೆಲ್ಕಾರ್ ಟ್ರಾಫಿಕ್ ಎಚ್.ಸಿ.ದೇವರಾಜ್ ಅವರು ಅನಾರೋಗ್ಯದಿಂದಾಗಿ ಸೆ.17 ರಂದು ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಬಳಿಕ ಅವರು ಸೆ.19 ರಂದು ಜನರಲ್ ವಾರ್ಡ್ ಗೆ ಶಿಫ್ಟ್ ಆಗಿದ್ದರು. ಅವರು ಮಲಗಿದ್ದ ವೇಳೆ ಇವರ ಬೆಡ್ ಪಕ್ಕದಲ್ಲಿ ಟೇಬಲ್ ಮೇಲೆ ಇರಿಸಲಾಗಿದ್ದ ಆಂಡ್ರಾಯ್ಡ್ ಮೊಬೈಲ್ ಹಾಗೂ ಕೀ ಪೇಡ್ ಮೊಬೈಲ್ ಫೋನ್ ನ್ನು ಕಳ್ಳನೊಬ್ಬ ಎಗರಿಸಿದ್ದಾನೆ. ಇನ್ನು ಕಳ್ಳ ಮೊಬೈಲ್ ಕಳ್ಳತನ ಮಾಡಿದ ಮತ್ತು ಆತ ಆಸ್ಪತ್ರೆಗೆ ಬಂದು ಹೋಗುವ ಬಗ್ಗೆ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ.


ಈತ ಕಳೆದ ವಾರ ಐಸಿಯು ಘಟಕದೊಳಗೆ ನುಗ್ಗಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಜ್ಜಿಯೋರ್ವರಲ್ಲಿ ಒಮ್ಮೆ ಪೋನ್ ಕೊಡಿ ಅಜ್ಜಿ ಅರ್ಜೆಂಟಾಗಿ ಪೋನ್ ಮಾಡಲು ಇದೆ ಎಂದು ಹೇಳಿ ಮೊಬೈಲ್ ಪಡೆದುಕೊಂಡು ಹೋಗಿ ಮೊಬೈಲ್ ಸಮೇತ ಎಸ್ಕೆಪ್ ಆಗಿದ್ದ. ಇದೀಗ ಆತನೇ ಪೊಲೀಸ್ ಸಿಬ್ಬಂದಿಯ ಮೊಬೈಲ್ ಕಳ್ಳತನ ಮಾಡಿದ್ದು ಈತನ ಓಡಾಟದ ದೃಶ್ಯ ಸಿ.ಸಿ.ಕ್ಯಾಮರಾ ದಲ್ಲಿ ಸೆರೆಯಾಗಿದೆ


ಇದೀಗ ಆಸ್ಪತ್ರೆಯಲ್ಲಿ ಈತನ ಪೋಟೋ ಅಂಟಿಸಲಾಗಿದ್ದು,ಈತನ ಚಹರೆ ಯನ್ನು ಗಮನಿಸಿದವರು ಕೂಡಲೇ ಪೋಲಿಸರಿಗೆ ಮಾಹಿತಿ ನೀಡಿ ಎಂದು ತಿಳಿಸಲಾಗಿದೆ.

ಬೆಟ್ಟಂಪಾಡಿ: ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಶಂಕುಸ್ಥಾಪನೆ

Posted by Vidyamaana on 2022-12-16 13:44:26 |

Share: | | | | |


ಬೆಟ್ಟಂಪಾಡಿ: ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಶಂಕುಸ್ಥಾಪನೆ


ಪುತ್ತೂರು: ಲೋಕೋಪಯೋಗಿ ವಿಶೇಷ ಅನುದಾನದಲ್ಲಿ ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಚೆಲ್ಯಡ್ಕ ಪುಳಿತ್ತಡಿ ರಸ್ತೆ ಕಾಮಗಾರಿಗೆ 10 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಶಾಸಕ ಸಂಜೀವ ಮಠಂದೂರು ಅವರು ಡಿ. 16ರಂದು ಶಂಕುಸ್ಥಾಪನೆ ನೆರವೇರಿಸಿದರು. ಶಕ್ತಿ ಕೇಂದ್ರದ  ಅಧ್ಯಕ್ಷ ಜಗನಾಥ್ ರೈ ಕೋರ್ಮಂಡ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ್, ಬೆಂದ್ರ್ ತೀರ್ಥ ಶಿವಾಜಿ ಫ್ರೆಂಡ್ ಕಾರ್ಯಕರ್ತರು PLD ಬ್ಯಾಂಕ್ ಸದಸ್ಯ ಪ್ರವೀಣ್ ರೈ , ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.

ವಿಟ್ಲ ಮೋತಿ ಸಿಟಿ ಕಟ್ಟಡದಲ್ಲಿ ಮೆಹಂದಿ ತರಗತಿ ಉದ್ಘಾಟನೆ

Posted by Vidyamaana on 2024-07-02 22:10:24 |

Share: | | | | |


ವಿಟ್ಲ ಮೋತಿ ಸಿಟಿ ಕಟ್ಟಡದಲ್ಲಿ ಮೆಹಂದಿ ತರಗತಿ ಉದ್ಘಾಟನೆ

ವಿಟ್ಲ: ಮೆಹಂದಿಗೆ ಪ್ರಾಚೀನ ಕಾಲದ ಇತಿಹಾಸ ಇದ್ದು ಅದೊಂದು ಕೈಯಿಂದ ಕೈಯಲ್ಲಿ ಅರಳುವ ಅದ್ಬುತ ಕಲೆಯಾಗಿದೆ. ವಿದ್ಯಾರ್ಥಿನಿಯರು, ಯುವತಿಯರು ಹಾಗೂ ಗೃಹಣಿಯರು ಮೆಹಂದಿ ಬಿಡಿಸುವುದು ಕಲಿಯುವ ಮೂಲಕ ಕುಟುಂಬಕ್ಕೆ ಆರ್ಥಿಕ ನೆರವಾಗಬಹುದು ಎಂದು ವಿಟ್ಲದ ದಂತ ವೈದ್ಯೆ ಡಾ. ಕೌಲತ್ ಬಿ.ಎಂ. ಹೇಳಿದರು. 

ವಿಟ್ಲ ಸ್ಕೂಲ್ ರೋಡಿನ ಮೋತಿ ಸಿಟಿ ಕಟ್ಟಡದಲ್ಲಿ ಇತ್ತೀಚಿಗೆ ಆರಂಭಗೊಂಡ ದಿ ನ್ವಾಲೇಜ್ ಹಬ್ ಟ್ಯೂಷನ್ ಆ್ಯಂಡ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ಮೆಹಂದಿ ತರಗತಿಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. 


Recent News


Leave a Comment: