ಅತಿ ವೇಗವಾಗಿ ಬಂದು ಮಹಿಳೆಗೆ ಡಿಕ್ಕಿ ಹೊಡೆದ ಟ್ಯಾಕ್ಸಿ; ವಿಡಿಯೊ ನೋಡಿ

ಸುದ್ದಿಗಳು News

Posted by vidyamaana on 2024-07-23 19:43:42 |

Share: | | | | |


ಅತಿ ವೇಗವಾಗಿ ಬಂದು ಮಹಿಳೆಗೆ ಡಿಕ್ಕಿ ಹೊಡೆದ ಟ್ಯಾಕ್ಸಿ; ವಿಡಿಯೊ ನೋಡಿ

ಪುಣೆ: ಅತಿ ವೇಗ ಅಪಘಾತಕ್ಕೆ ಕಾರಣವೆಂದು ತಿಳಿದರೂ ಕೂಡ ಕೆಲವು ಚಾಲಕರು ಅವಸರದಲ್ಲಿ ವೇಗವಾಗಿ ವಾಹನ ಚಲಾಯಿಸಿ ಜನರ ಜೀವಕ್ಕೆ ಆಪತ್ತು ತರುತ್ತಿದ್ದಾರೆ. ಎಲ್ಲೆಂದರಲ್ಲಿ ನಿಂತ ಜನರ ಮೇಲೂ ವಾಹನವನ್ನು ಹಾರಿಸಿಕೊಂಡು ಹೋಗುತ್ತಾರೆ. ಇದೀಗ ಅಂತಹದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Hit and Run Case)ಆಗಿದೆ.ಪ್ರಿ-ಚಿಂಚ್ವಾಡ್‍ನಲ್ಲಿ ಅತಿವೇಗವಾಗಿ ಚಲಿಸುತ್ತಿದ್ದ ಟ್ಯಾಕ್ಸಿ ಮಹಿಳೆಗೆ ಡಿಕ್ಕಿ ಹೊಡೆದು ನಂತರ ಚಾಲಕ ಅಪಘಾತದ ಸ್ಥಳದಿಂದ ಓಡಿಹೋದ ಹೊಸ ಹಿಟ್ ಅಂಡ್ ರನ್ ಪ್ರಕರಣ ವರದಿಯಾಗಿದೆ. ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪುಣೆಯಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಪಿಂಪ್ರಿ-ಚಿಂಚ್ವಾಡ್‍ನಲ್ಲಿ ಈ ಘಟನೆ ನಡೆದಿದೆ. ಈ ಹಿಟ್ ಅಂಡ್ ರನ್ ಪ್ರಕರಣ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊದಲ್ಲಿ ಭಾನುವಾರ ಮಧ್ಯಾಹ್ನ 1:30ರ ಸುಮಾರಿಗೆ ರಸ್ತೆಯಲ್ಲಿ ಮಹಿಳೆ ನಡೆದುಕೊಂಡು ಹೋಗುತ್ತಿರುವಾಗ ಎದುರಿಗೆ ವೇಗವಾಗಿ ಬಂದ ಟ್ಯಾಕ್ಸಿ ಮಹಿಳಾ ಪಾದಚಾರಿಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ. ರಸ್ತೆಯಲ್ಲಿದ್ದ ಇತರ ಜನರು ಆಕೆಯ ಸಹಾಯಕ್ಕಾಗಿ ಓಡಿ ಬರುತ್ತಿರುವುದು ಕಂಡುಬಂದಿದೆ. ಟ್ಯಾಕ್ಸಿಗೆ ಡಿಕ್ಕಿ ಹೊಡೆದ ಮಹಿಳೆ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ಪಿಂಪ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಈ ಪ್ರಕರಣದ ಬಗ್ಗೆ ಪಿಂಪ್ರಿ-ಚಿಂಚ್ವಾಡ್ ಡಿಸಿಪಿ ಶಿವಾಜಿ ಪವಾರ್ ಮಾತನಾಡಿ, ಈ ಅಪಘಾತದಲ್ಲಿ ಸಂತ್ರಸ್ತೆ ರೇಖಾ ಗಾಯಗೊಂಡಿದ್ದಾರೆ. ಈಗ ಅವರ ಆರೋಗ್ಯ ಸ್ಥಿರವಾಗಿದೆ. 24 ವರ್ಷದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕಾರಿನ ಚಾಲಕ ಕುಡಿದಿರಲಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ. ಮೇಲ್ನೋಟಕ್ಕೆ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ಮಹಾರಾಷ್ಟ್ರದಲ್ಲಿ ವರದಿಯಾದ ಮೊದಲ ಹಿಟ್ ಅಂಡ್ ರನ್ ಪ್ರಕರಣವಲ್ಲ. ಈಗಾಗಲೇ ಹಿಟ್ ಅಂಡ್ ರನ್ ಪ್ರಕರಣ ಮತ್ತೊಂದು ಸುದ್ದಿಯಲ್ಲಿ, ವೇಗವಾಗಿ ಬಂದ ಆಡಿ ಕಾರು ಎರಡು ಆಟೋರಿಕ್ಷಾಗಳಿಗೆ ಡಿಕ್ಕಿ ಹೊಡೆದಿದೆ. ಒಂದು ಆಟೋರಿಕ್ಷಾ ಚಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ಅದರಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಮುಲುಂಡ್ ಪೊಲೀಸರು ಆಡಿ ಕಾರನ್ನು ವಶಪಡಿಸಿಕೊಂಡಿದ್ದಾರೆ, ಆದರೆ ಅಪಘಾತದ ನಂತರ ಅದರ ಚಾಲಕ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

 Share: | | | | |


ಸುಳ್ಯ: ಪಿಕಪ್ ಮತ್ತು ಟಿಟಿ ವಾಹನ ನಡುವೆ ಅಪಘಾತ

Posted by Vidyamaana on 2023-06-25 08:20:50 |

Share: | | | | |


ಸುಳ್ಯ: ಪಿಕಪ್ ಮತ್ತು ಟಿಟಿ ವಾಹನ ನಡುವೆ ಅಪಘಾತ

ಸುಳ್ಯ: ತಾಲೂಕಿನ ಅರಂತೋಡು ಎಂಬಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಿಕಪ್ ಮತ್ತು ಟಿಟಿ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ವ್ಯಕ್ತಿಗೆ ಗಂಭೀರ ಗಾಯಗೊಂಡಿದ್ದಾರೆ. ಟಿಟಿ 

ವಾಹನವು ಮಂಗಳೂರಿನಿಂದ ಮಡಿಕೇರಿಗೆ ಹಾಗೂ ಪಿಕಪ್ ಸುಳ್ಯ ಕಡೆಗೆ ಹೋಗುತ್ತಿದ್ದು, ತೆಕ್ಕಿಲ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ.ಗಾಯಾಳು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಸಂಬಂಧ ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ನ 12

Posted by Vidyamaana on 2023-11-12 07:38:42 |

Share: | | | | |


ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ನ 12

ಪುತ್ತೂರು : ಶಾಸಕ ಅಶೋಕ್ ಕುಮಾರ್ ಅವರು  ನವಂಬರ್ 12 ರಂದು

ಬೆಳಿಗ್ಗೆ 10 ಗಂಟೆಗೆ ಕೋಡಿಂಬಾಡಿ‌ಮಹಿಷಮರ್ಧಿನಿ‌ದೇವಸ್ಥಾನಕ್ಕೆ ಭೇಟಿ,ಪೂಜಾ ಕಾರ್ಯಕ್ರಮ

12._ಗಂಟೆಗೆ ಕೊಡಿಪ್ಪಾಡಿ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ

1 ಗಂಟೆಗೆ ಮುಳಿಯ ಹಾಲ್ ನಲ್ಲಿ ಗೂಡುದೀಪ ಸ್ಪರ್ದೆಯಲ್ಲಿ ಭಾಗವಹಿಸುವುದು

ಸಂಜೆ 3 ಗಂಟೆಗೆ ಕೊಂಬೆಟ್ಟು ಮೈದಾನದಲ್ಲಿ‌ರೈ ಚಾರಿಟೇಬಲ್ ಟ್ರಸ್ಟ್ ಸಭೆ ಯಲ್ಲಿ  ಭಾಗವಹಿಸಲಿದ್ದಾರೆ

ಸತ್ತ ಹೆಂಡತಿಗೆ ವರ್ಷಗಳ ಕಾಲ ಗಂಡ ಮೆಸ್ಸೆಜ್ ಕಳಿಸುತ್ತಲೇ ಇದ್ದ : ಕೊನೆಗೆ ಒಂದು ದಿನ ರಿಪ್ಲೆ ಬಂದೆ ಬಿಟ್ಟಿತು!

Posted by Vidyamaana on 2023-10-22 21:10:36 |

Share: | | | | |


ಸತ್ತ ಹೆಂಡತಿಗೆ ವರ್ಷಗಳ ಕಾಲ ಗಂಡ ಮೆಸ್ಸೆಜ್ ಕಳಿಸುತ್ತಲೇ ಇದ್ದ : ಕೊನೆಗೆ ಒಂದು ದಿನ ರಿಪ್ಲೆ ಬಂದೆ ಬಿಟ್ಟಿತು!

   ಈ ಜಗತ್ತನ್ನು ತೊರೆದ ತನ್ನ ಹೆಂಡತಿಯನ್ನು ನೆನಪಿಟ್ಟುಕೊಳ್ಳಲು ಈ ಪತಿ ಆಕೆ ಜೀವಂತ ಇದ್ದಾಗ ಬಳಸುತ್ತಿದ್ದ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸುವ ವಿಧಾನವನ್ನು ಅಳವಡಿಸಿಕೊಂಡ!!! ರಿಪ್ಲೆ ಬರಲ್ಲ ಅಂತ ಗೊತ್ತಿದ್ದೂ ಕಳಿಸುತ್ತಿದ್ದ, ಆದರೆ ಕೊನೆಗೂ ಒಂದು ದಿನ ಆತ ಆ ಸಂದೇಶಗಳಿಗೆ ಉತ್ತರವನ್ನು ಪಡೆದೇಬಿಟ್ಟ! ಪ್ರೀತಿಪಾತ್ರರ ಸಾವಿನ ಆಘಾತವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ. ಅನೇಕ ಜನರು ಅದನ್ನು ಮರೆಯಲು ವರ್ಷಗಳನ್ನು ತೆಗೆದುಕೊಳ್ಳುತ್ತಾರೆ.


ಅದೇ ರೀತಿ ಬ್ರಿಟನ್ನಿನ ಈ ವ್ಯಕ್ತಿ ಹೆಂಡತಿಯ ಮರಣದ ನಂತರ ತುಂಬಾ ದುಃಖಿತನಾದನು, ಹೆಂಡತಿ ಇನ್ನು ಮುಂದೆ ಈ ಜಗತ್ತಿನಲ್ಲಿ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆತನಿಗೆ ಆಗಲೇ ಇಲ್ಲ. ತನ್ನ ಹೆಂಡತಿಯ ನೆನಪಿಗಾಗಿ ಅವನು ಅವಳ ಮೊಬೈಲ್ ಸಂಖ್ಯೆಗೆ ಸಂದೇಶಗಳನ್ನು ಕಳುಹಿಸತೊಡಗಿದನು. ವರ್ಷಗಳ ಕಾಲ ಕಳಿಸಿದರೂ ಯಾವುದೇ ರಿಪ್ಲೆ ಬರಲಿಲ್ಲ, ಬರುವುದಾದರೂ ಹೇಗೆ!


ಆದರೆ ಒಂದು ದಿನ ಅವರು ತಮ್ಮ ಹೆಂಡತಿಯ ಸಂಖ್ಯೆಯಿಂದ ರಿಪ್ಲೆ ಪಡೆದರು ಮತ್ತು ಆ ವ್ಯಕ್ತಿಗೆ ಶಾಕ್ ಆಯಿತು!  ಈ ವ್ಯಕ್ತಿ ತನ್ನ ಹೆಂಡತಿಯನ್ನು ನೆನಪಿಟ್ಟುಕೊಳ್ಳುವ ಮಾರ್ಗವೆಂದರೆ, ಪ್ರತಿವರ್ಷ ತಾಯಂದಿರ ದಿನದಂದು ಅವನು ತನ್ನ ಹೆಂಡತಿಯ ಸಂಖ್ಯೆಗೆ "ಹ್ಯಾಪಿ ಮದರ್ಸ್ ಡೇ" ಸಂದೇಶವನ್ನು ಕಳುಹಿಸುತ್ತಿದ್ದನು.


ಆರಂಭದಲ್ಲಿ ಕೆಲವು ವರ್ಷ ಯಾವುದೇ ಉತ್ತರವನ್ನು ಪಡೆಯಲಿಲ್ಲ, ನಂತರ ಒಂದು ದಿನ ಅವರು ಆ ಸಂಖ್ಯೆಯಿಂದ ಉತ್ತರವನ್ನು ಪಡೆದರು. ಈ ಘಟನೆ ಅವನಿಗೆ  ಆಶ್ಚರ್ಯವನ್ನುಂಟು ಮಾಡಿತು. ತನ್ನ ತೀರಿ ಹೋದ ಹೆಂಡತಿಯೇ ರಿಪ್ಲೆ ಮಾಡಿದಷ್ಟು ಖುಷಿಯಾಯಿತು.

ತಾಯಿಯ ದಿನದಂದು ಒಂದು ಮುದ್ದಾದ ಸಂದೇಶವನ್ನು ಸ್ವೀಕರಿಸಿದ ನಂತರ ತನ್ನ ಹೆಂಡತಿಯ ಸಂಖ್ಯೆಯಿಂದ ರಿಪ್ಲೆ ಬಂತು, ಅದು “ನೀವು ಯಾರು?” ಎಂಬುದಾಗಿತ್ತು. ಅದು ಆ ವ್ಯಕ್ತಿಗೆ ಸ್ವಲ್ಪ ಆಘಾತಕಾರಿಯಾಗಿತ್ತಾದರೂ, ಮೊದಲ ಬಾರಿಗೆ ಯಾರಾದರೂ ನನ್ನ ಸಂದೇಶಕ್ಕೆ ಉತ್ತರವನ್ನು ಕಳುಹಿಸಿದ್ದಾರಲ್ಲ ಎಂದು ಖುಷಿಯಾಯಿತು. ವಾಸ್ತವದಲ್ಲಿ ಅವರ ಸಂಖ್ಯೆಯನ್ನು ಬೇರೆಯವರಿಗೆ ಅಲಾಟ್ ಮಾಡಲಾಗಿತ್ತು, ಅವರೇ ರಿಪ್ಲೆ ಮಾಡಿದ್ದರು.ತಕ್ಷಣ ಆತ ಅವರಿಗೆ ರಿಪ್ಲೆ ಮಾಡಿದ “ಕ್ಷಮಿಸಿ, ಇದು ನನ್ನ ದಿವಂಗತ ಪತ್ನಿಯ ಸಂಖ್ಯೆ, ಅವಳ ನೆನಪಿಗಾಗಿ ನಾನು ಸಂದೇಶ ಕಳಿಸುತ್ತಿದ್ದೆ, ಯಾರೂ ರಿಪ್ಲೆ ಮಾಡಲ್ಲ ಅಂದುಕೊಂಡಿದ್ದೆ, ಕ್ಷಮಿಸಿ, ನಾನು ಇನ್ನು ಮುಂದೆ ಸಂದೇಶ ಕಳಿಸುವುದಿಲ್ಲ, ದೇವರು ನಿಮಗೆ ಒಳ್ಳೆದು ಮಾಡಲಿ” ಎಂಬರ್ಥದಲ್ಲಿ ಉತ್ತರಿಸಿದ.


ಸೋಶಿಯಲ್ ಮೀಡಿಯಾದಲ್ಲಿ ಜನರ ಭಾವುಕರಾದರು :

ಈ ಕಥೆಯನ್ನು ರೆಡ್ಡಿಟ್ ನಲ್ಲಿ ಓದಿದ ನಂತರ ಜನರು ಬಗ್ಗೆ ಸಾಕಷ್ಟು ಪ್ರತಿಕ್ರಿಯಿಸಿದ್ದಾರೆ. ತನ್ನ ಸೋದರ ಸಂಬಂಧಿಯ ಮರಣದ ನಂತರ ಅವನು ಸ್ವತಃ ಅದೇ ರೀತಿ ಮಾಡುತ್ತಿದ್ದನು ಎಂದು ಯಾರೋ ಬರೆದಿದ್ದಾರೆ, ಅವರು ತುಂಬಾ ಕೆಟ್ಟ ರಿಪ್ಲೆ ಪಡೆದಿದ್ದರು. ಅನೇಕ ಜನರು ತಮ್ಮ ಕಥೆಯನ್ನು ಹಂಚಿಕೊಂಡರು ಮತ್ತು ಅವರು ಅದೇ ರೀತಿ ಮಾಡುತ್ತಿದ್ದರಂತೆ.

ಮಂಗಳೂರು : ಕುದ್ರೋಳಿಯಲ್ಲಿ ಇನಾರ ಮೆಡಿಕಲ್ ಶುಭಾರಂಭ

Posted by Vidyamaana on 2023-07-21 01:42:10 |

Share: | | | | |


ಮಂಗಳೂರು : ಕುದ್ರೋಳಿಯಲ್ಲಿ  ಇನಾರ ಮೆಡಿಕಲ್ ಶುಭಾರಂಭ

 ಮಂಗಳೂರಿನ ಹೃದಯ ಭಾಗದಲ್ಲಿರುವ ಕುದ್ರೋಳಿಯ ಜಿ ಟಿ ರಸ್ತೆಯಲ್ಲಿ ನೂತನವಾಗಿ ಆರಂಭಗೊಂಡ ಇನಾರ ಮೆಡಿಕಲ್ ಇದರ ಉದ್ಘಾಟನೆಯನ್ನು ಜು.17 ರಂದು ನಡುಪಳ್ಳಿ ಜುಮಾ ಮಸೀದಿಯ ಖತೀಬರಾದ ಮೌಲಾನ ರಿಯಾಝ್ ಫೈಝಿ ಕಕ್ಕಿಂಜೆ ನೆರವೇರಿಸಿದರು.


ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸ್ಥಳೀಯ ಮ.ನ.ಪಾ ಸದಸ್ಯರಾದ ಶಂಶುದ್ದೀನ್ ಹೆಚ್.ಬಿ.ಟಿ ,ಎಸ್.ಡಿ.ಪಿ.ಐ ಕುದ್ರೋಳಿ ವಾರ್ಡ್ ಅಧ್ಯಕ್ಷರಾದ ಮುಝೈರ್ ಕುದ್ರೋಳಿ ,ಸಾಮಾಜಿಕ ಕಾರ್ಯಕರ್ತರಾದ ಖಾದರ್ ಇಡ್ಯ ಮತ್ತಿತರರು ಭಾಗವಹಿಸಿ ಶುಭ ಹಾರೈಸಿದರು.


ಇನಾರ ಮೆಡಿಕಲ್ ಮಾಲಕರಾದ ಮುಹಮ್ಮದ್ ಸಮೀರ್ ಸರ್ವರನ್ನು ಸ್ವಾಗತಿಸಿ ನಮ್ಮಲ್ಲಿ ವೈದ್ಯಕೀಯ ವಿಭಾಗಕ್ಕೆ ಸಂಬಂಧಿಸಿದ ಎಲ್ಲಾ ಔಷಧಿಗಳು,ಸುಸಜ್ಜಿತ ವೈದ್ಯಕೀಯ ಸಲಕರಣೆಗಳು ಹಾಗೂ ಇನ್ನಿತರ ವೈದ್ಯಕೀಯ ರಂಗಕ್ಕೆ ಸಂಬಂಧಿಸಿದ  ವಿವಿಧ ಉಪಕರಣಗಳು ನಮ್ಮಲ್ಲಿ ಲಭ್ಯವಿದ್ದು 2 ಕಿ.ಮೀ ಅಂತರದ ಒಳಗೆ ಗ್ರಾಹಕರ ಮನೆ ಬಾಗಿಲಿಗೆ ಉತ್ಪನ್ನಗಳನ್ನು ತಲುಪಿಸುವ ಸೇವೆಯು ನೀಡಲಿದ್ದೇವೆ ಎಂದು ತಿಳಿಸಿ ಎಲ್ಲರ ಸಹಕಾರ ಕೋರಿದರು.

ದಿಲ್ಲಿಯ ಹಿಂಡನ್ ವಾಯುನೆಲೆಗೆ ಬಂದಿಳಿದ ಶೇಖ್ ಹಸೀನಾ

Posted by Vidyamaana on 2024-08-05 22:15:42 |

Share: | | | | |


ದಿಲ್ಲಿಯ ಹಿಂಡನ್ ವಾಯುನೆಲೆಗೆ ಬಂದಿಳಿದ ಶೇಖ್ ಹಸೀನಾ

ಹೊಸದಿಲ್ಲಿ : ಬಾಂಗ್ಲಾದೇಶದ ನಾಯಕಿ, ಮಾಜಿ ಪ್ರಧಾನಿ ಶೇಖ್ ಹಸೀನಾ ಸೋಮವಾರ ಸಂಜೆ ದಿಲ್ಲಿ ಸಮೀಪದ, ಉತ್ತರ ಪ್ರದೇಶದ ಗಾಝಿಯಾಬಾದ್‌ನಲ್ಲಿರುವ ಹಿಂಡನ್ ವಾಯುಪಡೆ ನೆಲೆಗೆ ಬಂದಿಳಿದಿದ್ದಾರೆ.ಸೋಮವಾರ ಮುಂಜಾನೆ ಪ್ರತಿಭಟನಾಕಾರರು ಪ್ರಧಾನಿ ಶೇಖ್ ಹಸೀನಾ ಅವರ ಢಾಕಾದ ನಿವಾಸ ಗೋನೋಬಬಾನ್‌ಗೆ ನುಗ್ಗಿದ್ದರು.ಅಷ್ಟರಲ್ಲಾಗಲೇ ಅವರು ಪಲಾಯನಗೈದಿದ್ದರು. ಮೂಲಗಳ ಪ್ರಕಾರ ದಿಲ್ಲಿಯಿಂದ ಶೇಖ್ ಹಸೀನಾ ಲಂಡನ್‌ಗೆ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗಿದೆ.

ಸರಕಾರಿ ಉದ್ಯೋಗದಲ್ಲಿ ಸ್ವಾತಂತ್ಯ ಹೋರಾಟಗಾರರ ಕುಟುಂಬಕ್ಕೆ ಮೀಸಲಾತಿ ವಿರೋಧಿಸಿ ಪ್ರಾರಂಭಗೊಂಡ ಪ್ರತಿಭಟನೆಯು ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು. 300 ಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಮೃತಪಟ್ಟಿದ್ದರು. ಐದು ಬಾರಿ ಪ್ರಧಾನಿಯಾಗಿದ್ದ 73 ವರ್ಷದ ಶೇಖ್ ಹಸೀನಾ ಅವರು ಕೆಲವೇ ಗಂಟೆಗಳ ಹಿಂದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಾಂಗ್ಲಾದೇಶ ಸೇನೆಯು ಸರಕಾರದ ಮೇಲೆ ಹಿಡಿತ ಸಾಧಿಸಿದೆ.

ರಾಷ್ಟ್ರವನ್ನು ಉದ್ದೇಶಿಸಿ ದೂರದರ್ಶನದಲ್ಲಿ ಭಾಷಣ ಮಾಡಿದ ಸೇನಾ ಮುಖ್ಯಸ್ಥ ಜನರಲ್ ವೇಕರ್-ಉಜ್-ಝಮಾನ್ ಅವರು ಬಾಂಗ್ಲಾ ಸೇನೆಯು ಮಧ್ಯಂತರ ಸರ್ಕಾರ ರಚಿಸಲಿದೆ ಎಂದರು.

ಬನ್ನೂರಿನ ಮನೆಗೆ ಪೊಲೀಸ್ ದಾಳಿ: ಇಬ್ಬರು ಮಹಿಳೆಯರು ಪೊಲೀಶ್ ವಶ!!

Posted by Vidyamaana on 2024-08-29 19:07:13 |

Share: | | | | |


ಬನ್ನೂರಿನ ಮನೆಗೆ ಪೊಲೀಸ್ ದಾಳಿ: ಇಬ್ಬರು ಮಹಿಳೆಯರು ಪೊಲೀಶ್ ವಶ!!

ಪುತ್ತೂರು: ಬನ್ನೂರಿನ ಕರ್ಮಲದ ಮನೆಗೆ ನಗರ ಠಾಣಾ ಪೊಲೀಸರು ದಾಳಿ ನಡೆಸಿದ್ದು, ಇಬ್ಬರು ಮಹಿಳೆಯರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Recent News


Leave a Comment: