ಮಂಗಳೂರಲ್ಲಿ ಮಣ್ಣು ಕುಸಿತ ಪ್ರಕರಣ : ಓರ್ವ ಕಾರ್ಮಿಕನ ರಕ್ಷಣೆ

ಸುದ್ದಿಗಳು News

Posted by vidyamaana on 2024-07-03 16:20:08 |

Share: | | | | |


ಮಂಗಳೂರಲ್ಲಿ ಮಣ್ಣು ಕುಸಿತ ಪ್ರಕರಣ : ಓರ್ವ ಕಾರ್ಮಿಕನ ರಕ್ಷಣೆ

ಮಂಗಳೂರು : ಮಂಗಳೂರಿನ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮಣ್ಣು ಕುಸಿತದಿಂದ ಮಣ್ಣಿನ ಅಡಿಯಲ್ಲಿ ಇಬ್ಬರು ಕಾರ್ಮಿಕರು ಸಿಲುಕಿದ್ದರು. ಇದೀಗ ಮಣ್ಣಿನ ಅಡಿ ಸಿಲುಕಿದ್ದ ಕಾರ್ಮಿಕರ ಪೈಕಿ ಒಬ್ಬನನ್ನು ರಕ್ಷಣೆ ಮಾಡಲಾಗಿದೆ.ಹೌದು ಇಂದು ಮಂಗಳೂರಿನ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು

ಈ ವೇಳೆ 20 ಅಡಿ ಅಡಿ ಆಳದಲ್ಲಿ ಇಬ್ಬರು ಕಾರ್ಮಿಕರು ಇದ್ದು ತಕ್ಷಣ ಮಣ್ಣು ಕುಸಿತವಾಗಿದೆ. ಇವಳೇ ಇಬ್ಬರು ಕಾರ್ಮಿಕರು ಮಣ್ಣಿನ ಆಡಿ ಸಿಕ್ಕಿದ್ದಾರೆ ತಕ್ಷಣ ಘಟನಾ ಸ್ಥಳಕ್ಕೆ ಎಸ್‌ಡಿಆರ್‌ಎಫ್ ತಂಡ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಒಬ್ಬನನ್ನು ರಕ್ಷಣೆ ಮಾಡಿದ್ದಾರೆ.

ಆದರೆ ಇನ್ನೊಬ್ಬ ಕಾರ್ಮಿಕನ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆದಿದ್ದು ಈ ವೇಳೆ ಮಳೆ ಕಾರ್ಯಾಚರಣೆಗೆ ಅಡ್ಡಿ ಪಡಿಸುತ್ತಿದೆ. ಜೋರಾದ ಮಳೆಯಿಂದ ಇದೀಗ ಕಾರ್ಯಾಚರಣೆಗೆ ತೊಂದರೆ ಉಂಟಾಗುತ್ತಿದೆ. ರಕ್ಷಿತ ಕಾರ್ಮಿಕನನ್ನು ತಕ್ಷಣ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಡನಾಸ್ ತಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಮುಲ್ಲೈ ಮುಗಿಲನ್   ಹಾಗೂ ಇತರೆ ಅಧಿಕಾರಿಗಳು ಸ್ಥಳದಲ್ಲಿ ಇದ್ದಾರೆ.

 Share: | | | | |


ಕೃಷಿಕರ ಖಾತೆಗೆ ಬಂತು ಲಕ್ಷ ಲಕ್ಷ ಹಣ; ಶಾಸಕ ಅಶೋಕ್ ರೈ ಹೋರಾಟದ ಫಲ

Posted by Vidyamaana on 2023-12-19 21:10:16 |

Share: | | | | |


ಕೃಷಿಕರ ಖಾತೆಗೆ ಬಂತು ಲಕ್ಷ ಲಕ್ಷ ಹಣ; ಶಾಸಕ ಅಶೋಕ್ ರೈ ಹೋರಾಟದ ಫಲ

ಪುತ್ತೂರು: ಹವಾಮಾನ ಆಧಾರಿತ ಬೆಳೆ ವಿಮೆ ಮಾಡಿಸಿಕೊಂಡ ಕೃಷಿಕರಿಗೆ ಮಂಗಳವಾರ ಶುಭ ದಿನ ಯಾಕೆಂದರೆ ಕೃಷಿಕರ ಖಾತೆಗೆ ನಿರೀಕ್ಷೆಗೂ ಮೀರಿ ಹಣ ಜಮೆಯಾಗಿದ್ದು ಕೃಷಿಕರ ಮೊಗದಲ್ಲಿ ಸಂತಸದ ಕಳೆ ತುಂಬಿದೆ. ಈ ಸಂತಸಕ್ಕೆ ಕಾರಣರಾದವರು ಪುತ್ತೂರು ಶಾಸಕರು. ಬೆಳೆ ವಿಮೆ ಕೃಷಿಕರಿಗೆ ಇನ್ನೂ ಸಿಕ್ಕಿಲ್ಲ, ಎಲ್ಲಾ ಜಿಲ್ಲೆಗಳಲ್ಲೂ ಈಗಾಗಲೇ ನೀಡಲಾಗಿದೆ ಎಂದು ಆರೋಪದ ಮಧ್ಯೆ ಕಳೆದ ಅಧಿವೇಶನದಲ್ಲಿ ಶಾಸಕರು ಈ ವಿಚಾರದಲ್ಲಿ ಸರಕಾರದ ಗಮನ ಸೆಳೆದಿದ್ದರು. ವಾರದೊಳಗೆ ವಿಮೆ ಪಾವತಿಯಾಗುತ್ತದೆ ಎಂದು ಸಚಿವರು ಭರವಸೆ ನೀಡಿದ್ದರು. ಮಂಗಳವಾರದಂದು ವಿಮೆ ಮಾಡಿಸಿಕೊಂಡ ಕೃಷಿಕರ ಖಾತೆಗೆ ನಿರೀಕ್ಷೆಗೂ ಮೀರಿ ಹಣ ಜಮೆಯಾಗಿದೆ.


ಹವಾಮಾನ ಆಧಾರಿತ ಮತ್ತು ಬೆಳೆ ವಿಮೆ ಈ ಎರಡೂ ವಿಮೆಯನ್ನು ಕೃಷಿಕರು ಮಾಡಿಸಿಕೊಂಡಿದ್ದರು. ಹವಾಮಾನ ಆಧಾರಿತ ವಿಮೆಗೆ ಅಡಿಕೆ ಮತ್ತು ಬೆಳೆ ವಿಮಾ ವ್ಯಾಪ್ತಿಗೆ ಕಾಳುಮೆಣಸು ಒಳಪಟ್ಟಿತ್ತು. ಹೆಕ್ಟೇರ್‌ಗೆ ೬ ಸಾವಿರದಂತೆ ಕೃಷಿಕರು ವಿಮಾ ಮೊತ್ತವನ್ನು ಪಾವತಿಸಿದ್ದು ಕಳೆದ ಬಾರಿಗಿಂತ ಈ ಬಾರಿ ದುಪ್ಪಟ್ಟು ವಿಮೆ ಮಂಜೂರಾಗಿದೆ.


೬ ಸಾವಿರ ವಿಮಾ ಕಂತು ಪಾವತಿಸಿದ ಕೃಷಿಕರ ಖಾತೆಗೆ ೪೦ ಸಾವಿರ ವಿಮಾ ಮೊತ್ತ ಜಮೆಯಾಗಿದ್ದು ದುಪ್ಪಟ್ಟು ಎಂದೇ ಹೇಳಲಾಗಿದೆ.


ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಅಡಕೆ ಒಳಪಟ್ಟಿದ್ದು ರೋಗ, ಹವಾಮಾನ ವೈಪರೀತ್ಯ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಕೃಷಿಕರು ಬೆಳೆ ನಷ್ಟ ಅನುಭವಿಸಿದ್ದರೆ ಅವರಿಗೆ ಸರಕಾರದಿಂದ ಹವಾಮಾನ ಆಧರಿತ ಬೆಳೆ ವಿಮೆಯಿಂದ ಪರಿಹಾರವನ್ನು ನೀಡಲಾಗುತ್ತದೆ. ಬೆಳೆ ವಿಮಾ ವ್ಯಾಪ್ತಿಗೆ ಕರಾವಳಿ ಜಿಲ್ಲೆಗಳಲ್ಲಿ ಕಾಳುಮೆಣಸು ಒಳಪಟ್ಟಿದ್ದು ಬೆಳೆ ವಿಮೆ ಮಾಡಿಸಿಕೊಂಡವರ ಖಾತೆಗೆ ಲಕ್ಷ ಲಕ್ಷ ಹಣ ಜಮೆಯಾಗಿದ್ದು ಕೃಷಿಕರು ಫುಲ್ ಖುಷಿಯಲ್ಲಿದ್ದಾರೆ.


ಹವಾಮಾನ ಆಧಾರಿತ ಬೆಳೆ ವಿಮೆಯು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೃಷಿಕರಿಗೆ ಸಿಕ್ಕಿರಲಿಲ್ಲ. ಈ ಬಗ್ಗೆ ಈ ಭಾಗದ ಕೃಷಿಕರು ನನ್ನ ಗಮನಕ್ಕೆ ತಂದಿದ್ದರು. ಕಳೆದ ಅಧಿವೇಶನದಲ್ಲಿ ಈವಿಚಾರವನ್ನು ಸಚಿವರ ಗಮನಕ್ಕೆ ತಂದು ಕೂಡಲೇ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದೆ. ಒಂದು ವಾರದೊಳಗೆ ವಿಮಾ ಪರಿಹಾರವನ್ನು ನೀಡಲಾಗುತ್ತದೆ ಎಂದು ಸಚಿವರು ಭರವಸೆಯನ್ನು ನೀಡಿದ್ದರು. ಅದರಂತೆ ಡಿ. ೧೯ ರಂದು ಪುತ್ತೂರು ಕ್ಷೇತ್ರ ವ್ಯಾಪ್ತಿಯ ಕೃಷಿಕರ ಖಾತೆಗೆ ವಿಮಾ ಪಾವತಿಯಾಗಿದೆ. ಕೃಷಿಕರಲ್ಲಿ ಸಂತಸದ ಅಲೆ ಇದೆ, ಕೃಷಿಕರು ಸಮೃದ್ದರಾದರೆ ಎಲ್ಲರಿಗೂ ಸಂತೋಷ. ಅಡಿಕೆ ಎಲೆ ಚುಕ್ಕಿ ರೋಗಕ್ಕೂ ಸರಕಾರ ಪರಿಹಾರ ಕೊಡಬೇಕೆಂದು ಮನವಿ ಮಾಡಿದ್ದೇನೆ ಮುಂದಿನ ದಿನಗಳಲ್ಲಿ ರಾಜ್ಯ ಸರಕಾರ ಪರಿಹಾರ ನೀಡಬಹುದು ಅಥವಾ ಎಲೆ ಚುಕ್ಕಿ ರೋಗಕ್ಕೆ ಔಷಧಿಯನ್ನಾದರೂ ಕಂಡು ಹಿಡಯಬಹುದು ಎಂಬ ವಿಶ್ವಾಸ ನನಗಿದೆ.

ಅಶೋಕ್ ಕುಮಾರ್ ರೈ ಶಾಸಕರು, ಪುತ್ತೂರು

ಮೇ 6 ಕ್ಕೆ ಪುತ್ತೂರಿಗೆ ಯೋಗಿ ಆದಿತ್ಯನಾಥ್

Posted by Vidyamaana on 2023-04-25 03:40:15 |

Share: | | | | |


ಮೇ 6 ಕ್ಕೆ ಪುತ್ತೂರಿಗೆ ಯೋಗಿ ಆದಿತ್ಯನಾಥ್

ಪುತ್ತೂರು: ಚುನಾವಣಾ ಕಣ ರಂಗು ಪಡೆಯುತ್ತಿದ್ದಂತೆ ಸ್ಟಾರ್ ಪ್ರಚಾರಕರ ದಂಡು ಪುತ್ತೂರಿಗೆ ಆಗಮಿಸುತ್ತಿದೆ.

ಮೇ 6ರಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪುತ್ತೂರಿನ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವುದು ಪಕ್ಕಾ ಆಗಿದೆ. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಪರವಾಗಿ ಮತ ಯಾಚಿಸಲಿರುವ ಯೋಗಿ, ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಸಂಚಲನ ಸೃಷ್ಟಿಸಲಿದ್ದಾರೆ.

ರಾಜ್ಯ, ರಾಷ್ಟ್ರದ ರಾಜಕಾರಣ ಪುತ್ತೂರಿನೆಡೆಗೆ ಮುಖ ಮಾಡಿದ್ದು, ಕಣ ರಣಾಂಗಣವಾಗಿದೆ. ವಿಪಕ್ಷ, ಪಕ್ಷೇತರ ಅಭ್ಯರ್ಥಿಗಳ ಪ್ರಚಾರದ ಭರಾಟೆ ಜೋರಾಗುತ್ತಿರುವ ನಡುವೆ ಬಿಜೆಪಿಯೂ ಸ್ಟಾರ್ ಪ್ರಚಾರಕರನ್ನು ಕರೆಸಿಕೊಳ್ಳುತ್ತಿದೆ.

ಅಶೋಕ್ ರೈ ಭೇಟಿಯಾದ ಯು.ಟಿ.ಖಾದರ್

Posted by Vidyamaana on 2023-04-18 13:15:50 |

Share: | | | | |


ಅಶೋಕ್ ರೈ ಭೇಟಿಯಾದ ಯು.ಟಿ.ಖಾದರ್

ಪುತ್ತೂರು: ಕುತೂಹಲ ಕೆರಳಿಸಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ಕಾಂಗ್ರೆಸ್ ಚುನಾವಣಾ ಕಚೇರಿಗೆ ಮಾಜಿ ಸಚಿವ, ಹಾಲಿ ಶಾಸಕ ಯು.ಟಿ. ಖಾದರ್ ಮಂಗಳವಾರ ಭೇಟಿ ನೀಡಿದರು.

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರೊಂದಿಗೆ ಮಾತುಕತೆ ನಡೆಸಿ, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸಿ, ಶುಭಹಾರೈಸಿದರು.

ಈ ಸಂದರ್ಭ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಯುವ ಕಾಂಗ್ರೆಸ್ ನಗರಾಧ್ಯಕ್ಷ ಮೋನು ಬಪ್ಪಳಿಗೆ, ನಗರಸಭೆ ಸದಸ್ಯ ರಿಯಾಜ್ ಪರ್ಲಡ್ಕ, ಪ್ರಮುಖರಾದ ಮಹಮ್ಮದ್ ಆಲಿ, ನಿರಂಜನ್ ರೈ ಮಠಂತಬೆಟ್ಟು, ಜಯಪ್ರಕಾಶ್ ಬದಿನಾರು ಮೊದಲಾದವರು ಉಪಸ್ಥಿತರಿದ್ದರು.

ಹೆಚ್ಚುವರಿ ಅಕ್ಕಿ ಬದಲು ಹಣ ನೀಡುವ ಅನ್ನಭಾಗ್ಯ ಯೋಜನೆಗೆ ಸಿಎಂ ಅಧಿಕೃತ ಚಾಲನೆ

Posted by Vidyamaana on 2023-07-10 13:41:33 |

Share: | | | | |


ಹೆಚ್ಚುವರಿ ಅಕ್ಕಿ ಬದಲು ಹಣ ನೀಡುವ ಅನ್ನಭಾಗ್ಯ ಯೋಜನೆಗೆ ಸಿಎಂ ಅಧಿಕೃತ ಚಾಲನೆ

ಬೆಂಗಳೂರು : ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಬದಲು ನೇರ ಹಣ ವರ್ಗಾವಣೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಇಂದು ಚಾಲನೆ ನೀಡಿದರು. ಈ ಮೂಲಕ ಜನರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, 170 ರೂ ಹಣ ನೇರವಾಗಿ ಖಾತೆಗೆ ವರ್ಗಾವಣೆಯಾಗಲಿದೆ.

ಇಂದು  ಮೈಸೂರು ಮತ್ತು ಕೋಲಾರ ಜಿಲ್ಲೆಯ ಪಡಿತರದಾರರಿಗೆ ಹಣವರ್ಗಾವಣೆಯಾಗಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತದಲ್ಲಿ ಬೇರೆ ಬೇರೆ ಜಿಲ್ಲೆಗಳ ಪಡಿತರದಾರರಿಗೆ ಹಣ ವರ್ಗಾವಣೆಯಾಗಲಿದೆವಿಶೇಷ ಅಂದರೆ ಅನ್ನಭಾಗ್ಯ ಯೋಜನೆ ಜಾರಿಗೆ ಇದೀಗ ದಶಕದ ಸಂಭ್ರಮ ಇದೇ ಹೊತ್ತಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ 10 ಕೆಜಿ ಅಕ್ಕಿ ಬದಲಾಗಿ ಫಲಾನುಭವಿಗಳ ಖಾತೆಗೆ 5 ಕೆಜಿ ಅಕ್ಕಿಯ ಹಣ ವಿತರಿಸುತ್ತಿದೆ.

2013ರಲ್ಲಿ ಅನ್ನಭಾಗ್ಯ ಅಕ್ಕಿ ಯೋಜನೆಯನ್ನು ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಜಾರಿಗೆ ತಂದಿದ್ದರು. ಮೇ 13ರಂದು ಐತಿಹಾಸಿಕ ಅನ್ನಭಾಗ್ಯ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು. ಜುಲೈ ತಿಂಗಳಿಂದ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ಬಂದಿತು. ಅನ್ನಭಾಗ್ಯ ಯೋಜನೆಯಿಂದ ರಾಜ್ಯದಲ್ಲಿ ಸುಮಾರು 1.08 ಕೋಟಿ ಕುಟುಂಬಗಳು ಯೋಜನೆ ಲಾಭ ಪಡೆಯುತ್ತಿವೆ.ಸಿಎಂ ಸಿದ್ದರಾಮಯ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಉಚಿತ ಅಕ್ಕಿ ಘೋಷಣೆ ಮಾಡಿದ್ದು, ಹೆಚ್ಚುವರಿ ಅಕ್ಕಿ ಸಿಗುವವರೆಗೂ 5 ಕೆಜಿ ಅಕ್ಕಿ ಉಳಿದ 5 ಕೆಜಿ ಅಕ್ಕಿಗೆ ಕೆಜಿ ಅಕ್ಕಿಗೆ 34 ರೂ.ನಂತೆ 170 ರೂಪಾಯಿ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸುವುದಾಗಿ ತಿಳಿಸಿದೆ. ಈ ಯೋಜನೆಗೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.

ಬೆಳ್ತಂಗಡಿ: ನದಿಯಲ್ಲಿ ಒಡೆದ ರೀತಿಯಲ್ಲಿ ಕಾಣಿಕೆ ಡಬ್ಬಿಗಳು ಪತ್ತೆ

Posted by Vidyamaana on 2023-06-10 10:49:46 |

Share: | | | | |


ಬೆಳ್ತಂಗಡಿ: ನದಿಯಲ್ಲಿ ಒಡೆದ ರೀತಿಯಲ್ಲಿ  ಕಾಣಿಕೆ ಡಬ್ಬಿಗಳು ಪತ್ತೆ

ಬೆಳ್ತಂಗಡಿ:  ಎರಡು  ಕಾಣಿಕೆ ಡಬ್ಬಗಳು ಒಡೆದ ರೀತಿಯಲ್ಲಿ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ  ಬಜಕ್ರೆಸಾಲು ಸೇತುವೆ ಅಡಿಯಲ್ಲಿ ಪತ್ತೆಯಾಗಿದೆ. 

ಬೆಳ್ತಂಗಡಿ ತಾಲೂಕಿನ ಲಾಯಿಲದಿಂದ ಮುಂಡೂರು ಸಂಪರ್ಕಿಸುವ ಸೋಮವತಿ ನದಿಗೆ ಬಜಕ್ರೆಸಾಲು ಎಂಬಲ್ಲಿ ಸೇತುವೆಯ ಅಡಿ ಭಾಗದಲ್ಲಿ (ಇಂದು) ಜೂ 10 ರಂದು  ಮಧ್ಯಾಹ್ನ  ಸ್ಥಳೀಯ ನಿವಾಸಿ ರಾಜು ಅವರು  ಕಲ್ಲಿನ ಮೇಲೆ ಇರುವ ಪ್ಲಾಸ್ಟಿಕ್ ಗೋಣಿಗಳನ್ನು ಗಮನಿಸಿ ಹತ್ತಿರ ಹೋಗಿ ನೋಡಿದಾಗ ಎರಡು ಸ್ಟೀಲ್ ಡಬ್ಬಗಳು ಪತ್ತೆಯಾಗಿವೆ. ಈ ಬಗ್ಗೆ ಅವರು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ಅವರ ಗಮನಕ್ಕೆ ತಂದಾಗ ಅವರು ಪೊಲೀಸ್ ಅವರಿಗೆ ಮಾಹಿತಿ ನೀಡಿದ್ದಾರೆ. ಯಾರೋ ಕಳ್ಳರು ಕಳೆದ ರಾತ್ರಿ ಎಲ್ಲಿಂದಲೂ ಕಳ್ಳತನ ಎಸಗಿ ಗೋಣಿಗಳಲ್ಲಿ ತುಂಬಿಸಿಕೊಂಡು ಬಂದು ಸೇತುವೆ ಅಡಿಯಲ್ಲಿ ಇದನ್ನು ಒಡೆದು ಹಣ ಕಳವು ಗೈದಿರುವ ಶಂಕೆ ಮೂಡಿದೆ. 

ಬೆಳ್ತಂಗಡಿ ಪೊಲೀಸ್ ಠಾಣೆಯ ಎಎಸ್ಐ ದೇವಪ್ಪ , ಕ್ರೈಂ ಪಿಸಿಗಳಾದ ಚರಣ್ ರಾಜ್ , ಅಶೋಕ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಡಬ್ಬದೊಳಗೆ ಬೀಗ ಮತ್ತು ಕೀ ಪತ್ತೆಯಾಗಿದ್ದು . ತನಿಖೆಗಾಗಿ ಎರಡು ಕಾಣಿಕೆ ಡಬ್ಬಿಯನ್ನು ವಶಕ್ಕೆ ಪಡೆದಿದ್ದಾರೆ. ಕಾಣಿಕೆ ಡಬ್ಬಿಗಳು ಎಲ್ಲಿಂದ ಕಳ್ಳತನವಾಗಿದೆ. ಎಂದು ಇನ್ನಷ್ಟೆ ತಿಳಿದು ಬರಬೇಕಾಗಿದೆ.

ಅರುಣ್ ಕುಮಾರ್ ಪುತ್ತಿಲ ದಿಗ್ವಿಜಯ ಯಾತ್ರೆ

Posted by Vidyamaana on 2023-06-24 10:25:38 |

Share: | | | | |


ಅರುಣ್ ಕುಮಾರ್ ಪುತ್ತಿಲ ದಿಗ್ವಿಜಯ ಯಾತ್ರೆ

ಪುತ್ತೂರು: ವಿಧಾನಸಭಾ ಚುನಾವಣೆಯಲ್ಲಿ ಸಣ್ಣ ಮತಗಳ ಅಂತರದಿಂದ ಸೋಲು ಕಂಡಿರುವ, ಹಿಂದೂ ಫೈರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ ಅವರು ಶನಿವಾರ ಅಂದರೆ ಇಂದು ಸಂಜೆ 5.57ಕ್ಕೆ ದಿಗ್ವಿಜಯ ಚಾನೆಲ್ ಮೂಲಕ ಜನರ ಮುಂದೆ ಬರಲಿದ್ದಾರೆ.

ಇತ್ತೀಚೆಗೆ ಅರುಣ್ ಕುಮಾರ್ ಪುತ್ತಿಲ ಅವರ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಲ್ಲೆಯಾದ್ಯಂತ ಹಾಗೂ ಹೊರಗಡೆಯೂ ಹೆಚ್ಚು ಹೆಚ್ಚು ಅಭಿಮಾನಿಗಳನ್ನು ಸಂಪಾದಿಸುತ್ತಿದ್ದಾರೆ. ವಿಧಾನಸಭಾ ಚುನಾವಣೆ ಸಂದರ್ಭವೇ ರಾಜ್ಯಾದ್ಯಂತ ಬೆಂಬಲ ಸೂಚಿಸಿ ಅನೇಕರು ಸಂದೇಶ ರವಾನಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಇದೀಗ ಅರುಣ್ ಕುಮಾರ್ ಪುತ್ತಿಲ ಅವರ ಸಂದರ್ಶನ ರಾಜ್ಯದ ಪ್ರತಿಷ್ಠಿತ ದಿಗ್ವಿಜಯ ಚಾನೆಲಿನಲ್ಲಿ ಪ್ರಸಾರಗೊಳ್ಳಲಿದೆ.

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಪುತ್ತಿಲ ಅವರ ಸಂದರ್ಶನ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಸಂದರ್ಶನದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧೆ, ತಮಗಿದ್ದ ಜೀವ ಬೆದರಿಕೆ, ಶನಿ ಪೂಜೆಯ ಘಟನೆ ಮೊದಲಾದ ವಿಚಾರಗಳ ಬಗ್ಗೆ ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ.



Leave a Comment: