ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2024-07-03 18:55:10 | Last Updated by Vidyamaana on 2024-07-03 18:55:10

Share: | | | | |


ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಬೆಂಗಳೂರು : ಕಾಲೇಜು ವಿದ್ಯಾರ್ಥಿಯೊಬ್ಬ ಸೆಕ್ಯೂರಿಟಿ ಗಾರ್ಡ್ ಓರ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದಿದೆ.

ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಜೈಕಿಸನ್ ರಾಯ್ ಕೊಲೆಯಾದ ಸೆಕ್ಯೂರಿಟಿ ಗಾರ್ಡ್. ಭಾರ್ಗವ್ ಎಂಬ ವಿದ್ಯಾರ್ಥಿ ಚಾಕುವಿನಿಂದ ಇರಿದು ಸೆಕ್ಯೂರಿಟಿ ಗಾರ್ಡ್ ನನ್ನು ಹತ್ಯೆ ಮಾಡಿದ್ದಾನೆ.

ಸ್ಥಳದಲ್ಲೇ ಸೆಕ್ಯೂರಿಟಿ ಗಾರ್ಡ್ ಮೃತಪಟ್ಟಿದ್ದಾರೆ.

ಕೊಲೆಗೆ ಕಾರಣವೇನು?


ಇಂದು ಸಿಂಧಿ ಕಾಲೇಜಿನಲ್ಲಿ ಕಾರ್ಯಕ್ರಮ ಇತ್ತು. ಈ ವೇಳೆ ಆರೋಪಿ ವಿದ್ಯಾರ್ಥಿ ಭಾರ್ಗವ್, ಕಾಲೇಜಿಗೆ ಕುಡಿದು ಬಂದಿದ್ದಾನೆ. ಈ ಹಿನ್ನಲೆ ಸೆಕ್ಯೂರಿಟಿಗಾರ್ಡ್, ಭಾರ್ಗವ್​​​ನನ್ನು ಕಾಲೇಜಿನ ಒಳಗೆ ಬಿಡಲು ನಿರಾಕರಿಸಿದ್ದಾರೆ. ಇದರಿಂದ ಸೆಕ್ಯೂರಿಟಿ ಗಾರ್ಡ್​ ಹಾಗೂ ವಿದ್ಯಾರ್ಥಿ ಮಧ್ಯೆ ಗಲಾಟೆ ಆಗಿದೆ. ಬಳಿಕ ಅಂಗಡಿಗೆ ಹೋಗಿ ಚಾಕು ಖರೀದಿಸಿದ್ದ ಭಾರ್ಗವ್, ನೇರವಾಗಿ ಬಂದು ಸೆಕ್ಯೂರಿಟಿ ಗಾರ್ಡ್ ಎದೆಗೆ ಐದಾರು ಬಾರಿ ಇರಿದಿದ್ದಾನೆ. ಅದು ಹೃದಯಕ್ಕೆ ಹೊಕ್ಕು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ.

 Share: | | | | |


ಸುಳ್ಯ : ಕಾರು ಡಿಯೋ ನಡುವೆ ಮುಖಾಮುಖಿ ಡಿಕ್ಕಿ ನಜ್ಜು ಗುಜ್ಜಾದ ದ್ವಿಚಕ್ರ ವಾಹನ!

Posted by Vidyamaana on 2023-02-19 09:58:08 |

Share: | | | | |


ಸುಳ್ಯ : ಕಾರು ಡಿಯೋ ನಡುವೆ ಮುಖಾಮುಖಿ ಡಿಕ್ಕಿ ನಜ್ಜು ಗುಜ್ಜಾದ ದ್ವಿಚಕ್ರ ವಾಹನ!

 ಸುಳ್ಯ :ಕಾರು ಮತ್ತು ಡಿಯೋ ಮುಖಾಮುಖಿ ಡಿಕ್ಕಿಯಾದ ಘಟನೆ ಫೆ .19 ಭಾನುವಾರ ಸುಳ್ಯದ ಕೋಲ್ಚಾರ್ ಸಮೀಪ ಸಂಭವಿಸಿದ್ದು ಇಬ್ಬರಿಗೆ ಗಾಯವಾಗಿದೆ ಎಂದು ವರದಿಯಾಗಿದೆ.

ಕೋಲ್ಚಾರು ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಕಾರಿಗೆ ಸ್ಕೂಟರ್ ಡಿಕ್ಕಿಯಾದ ಪರಿಣಾಮ , ಸ್ಕೂಟರ್ ಸಂಪೂರ್ಣ ನಜ್ಜು-ಗುಜ್ಜಾಗಿದೆ. ಇಬ್ಬರು ದ್ವಿಚಕ್ರ ಸವಾರರಾದ ಜತೀನ್ ಮತ್ತು ಮೋಹನ್ ಇವರಿಗೆ ಗಾಯಗಳಾದ ಬಗ್ಗೆ ವರದಿಯಾಗಿದೆ.

ಗಾಯಾಳುಗಳನ್ನು ಕೊಲ್ಲಮೊಗ್ರದ ಸತೀಶ್ ಮತ್ತು ಸಹೋದರರು ಸುಳ್ಯದ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಕ್ಷೇತ್ರ ಗೆಲ್ಲುವುದಕ್ಕಿಂತ ಅಭ್ಯರ್ಥಿ ಆಯ್ಕೆಯೇ ಜಟಿಲ

Posted by Vidyamaana on 2023-04-10 19:31:37 |

Share: | | | | |


ಕ್ಷೇತ್ರ ಗೆಲ್ಲುವುದಕ್ಕಿಂತ ಅಭ್ಯರ್ಥಿ ಆಯ್ಕೆಯೇ ಜಟಿಲ

ಪುತ್ತೂರು: ಯಾವುದೂ ಅಂದುಕೊಂಡಂತೆ ನಡೆಯುತ್ತಿಲ್ಲ. ಆದ್ದರಿಂದ ಬಿಜೆಪಿ, ಕಾಂಗ್ರೆಸ್ ಪಕ್ಷದೊಳಗಡೆ ಟಿಕೇಟ್ ಪೈಪೋಟಿ ಮುಂದುವರಿದಿದೆ. ವರಿಷ್ಠರಿಗೆ ಕ್ಷೇತ್ರ ಗೆಲ್ಲುವ ಲೆಕ್ಕಾಚಾರವಾದರೆ, ಅಭ್ಯರ್ಥಿಗಳಿಗೆ ಟಿಕೇಟ್ ಪಡೆದುಕೊಳ್ಳುವುದೇ ಪ್ರತಿಷ್ಠೆ ಎಂಬಂತಾಗಿದೆ.

ಪ್ರತಿಸಲ ಚುನಾವಣೆ ಬಂದಾಗಲೂ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವೋ ಗೊಂದಲ. ಆದರೆ ಈ ಬಾರಿ ಆ ಗೊಂದಲ ಬಿಜೆಪಿಗೆ ಶಿಫ್ಟ್!

ಸದ್ಯದ ಬೆಳವಣಿಗೆಗಳನ್ನು ಕಂಡಾಗ, ಬಿಜೆಪಿಯ ಅಭ್ಯರ್ಥಿ ಪಟ್ಟಿಯನ್ನು ಗಮನಿಸಿಕೊಂಡು, ಕಾಂಗ್ರೆಸ್ ಮುಂದೆ ಹೆಜ್ಜೆ ಇಡುವಂತೆ ಕಾಣುತ್ತಿದೆ. ಇದು ಪುತ್ತೂರು ಕ್ಷೇತ್ರಕ್ಕೆ ಹೆಚ್ಚು ಸಮೀಪವರ್ತಿಯಾದ ಹೇಳಿಕೆಯೂ ಹೌದು.

ಸೋಮವಾರ ಸಂಜೆಯ ಹೊತ್ತಿಗೆ ಬಿಜೆಪಿ ಪಟ್ಟಿ ಬಿಡುಗಡೆ ಮಾಡಬೇಕಿತ್ತು. ಆದರೆ ವರಿಷ್ಠರ ನಡುವೆಯೇ ಸ್ಪಷ್ಟ ನಿರ್ಧಾರ ಕೈಗೊಳ್ಳುವುದು ಸಾಧ್ಯವಾಗದ ಹಿನ್ನೆಲೆಯಲ್ಲಿ ಪಟ್ಟಿ ಫೈನಲ್ ಆಗಿಲ್ಲ. ಆದರೆ ಅಂತಿಮ ಪಟ್ಟಿಯಲ್ಲಿ ಪುತ್ತೂರು ಬಿಜೆಪಿ ಅಭ್ಯರ್ಥಿಗಳಾಗಿ ಅರುಣ್ ಕುಮಾರ್ ಪುತ್ತಿಲ ಹಾಗೂ ಕಿಶೋರ್ ಕುಮಾರ್ ಬೊಟ್ಯಾಡಿ ಅವರ ಹೆಸರು ಇದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಇದನ್ನು ಆಧರಿಸಿಕೊಂಡು ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆಯೇ ಎನ್ನುವುದೇ ಕುತೂಹಲ.

ಕಾಂಗ್ರೆಸಿನಲ್ಲಿ ಅಭ್ಯರ್ಥಿಗಳ ಸಂಖ್ಯೆ 14 ಇದ್ದರೂ, ಅಂತಿಮ ಪಟ್ಟಿಯಲ್ಲಿ ಶಕುಂತಳಾ ಶೆಟ್ಟಿ ಹಾಗೂ ಅಶೋಕ್ ಕುಮಾರ್ ರೈ ಅವರ ಹೆಸರು ಇದೆ. ಇವರಿಬ್ಬರ ಪೈಕಿ ಒಬ್ಬರ ಹೆಸರು ಅಂತಿಮಗೊಳ್ಳುವುದು ಬಹುತೇಕ ಪಕ್ಕಾ ಎನ್ನುವುದೇ ಸದ್ಯದ ಮಾಹಿತಿ.

ಬಿಜೆಪಿಗೆ ಎದುರಾದ ವಿಘ್ನ:

ಚುನಾವಣಾ ಪೂರ್ವ ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿ ಇರುವುದರಿಂದ, ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮ ಮಾಡಲು ಹಿಂದೇಟು ಹಾಕುತ್ತಿವೆಯೇ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಪುತ್ತೂರಿನ ಮಟ್ಟಿಗೆ ಹೇಳುವುದಾದರೆ, ಇತ್ತೀಚೆಗಷ್ಟೇ ವೈರಲ್ ಆಗಿರುವ ಫೊಟೋ, ಅಭ್ಯರ್ಥಿ ಅಂತಿಮಕ್ಕೆ ಬಿಸಿ ತುಪ್ಪದಂತಾಗಿದೆ ಎಂದೇ ಹೇಳಬಹುದು. ಅಭಿವೃದ್ದಿಯ ಹರಿಕಾರ ಎಂದೇ ಬಣ್ಣಿಸಿದರೂ, ಕೊನೆ ಕ್ಷಣದಲ್ಲಿ ಎದುರಾದ ವಿಘ್ನವೊಂದು ಹಾಲಿ ಶಾಸಕರ ರಾಜಕೀಯ ಜೀವನಕ್ಕೆ ಹೊಸ ತಿರುವು ನೀಡುವ ಸಾಧ್ಯತೆ ದಟ್ಟವಾಗಿದೆ.

ಬಿಜೆಪಿ ಟಿಕೇಟ್ ಸಂಜೀವ ಮಠಂದೂರು ಕೈತಪ್ಪುವುದು ಬಹುತೇಕ ಸ್ಪಷ್ಟ. ಆದ್ದರಿಂದ ಆ ಸ್ಥಾನಕ್ಕೆ ಅರುಣ್ ಕುಮಾರ್ ಪುತ್ತಿಲ ಹಾಗೂ ಕಿಶೋರ್ ಕುಮಾರ್ ಬೊಟ್ಯಾಡಿ ಹೆಸರು ಪಟ್ಟಿಯಲ್ಲಿ ಕಾಣಸಿಕ್ಕಿದೆ ಎನ್ನುತ್ತವೆ ಮೂಲಗಳು. ಇವರಿಬ್ಬರಲ್ಲಿ ಅಂತಿಮ ಯಾರು ಎನ್ನುವುದೇ ಯಕ್ಷಪ್ರಶ್ನೆ.

ಕಾಂಗ್ರೆಸ್ ಲೆಕ್ಕಾಚಾರ:

ಪುತ್ತೂರಿನಲ್ಲಿ ಕಾಂಗ್ರೆಸ್ ನಡೆ ಇನ್ನೂ ನಿರ್ಧಾರವಾದಂತಿಲ್ಲ. ಬಿಜೆಪಿಯ ಅಭ್ಯರ್ಥಿಯನ್ನು ಆಧರಿಸಿ, ಕಾಂಗ್ರೆಸ್ ಪಟ್ಟಿ ಅಂತಿಮಗೊಳಿಸುವ ಸಾಧ್ಯತೆಯೂ ಇದೆ. ಸಂಜೀವ ಮಠಂದೂರು ಅಭ್ಯರ್ಥಿಯಾದರೆ ಶಕುಂತಳಾ ಶೆಟ್ಟಿ ಅವರನ್ನೇ ಅಭ್ಯರ್ಥಿಯಾಗಿಸುವ ಸಾಧ್ಯತೆ ಇದೆ. ಕಾರಣ, ಮಹಿಳಾ ಹೋರಾಟಗಾರ್ತಿಯಾದ ಶಕುಂತಳಾ ಶೆಟ್ಟಿ, ಫೊಟೋ ವೈರಲ್ ಪ್ರಕರಣವನ್ನು ಸಮರ್ಥವಾಗಿ ಪಕ್ಷಕ್ಕೆ ಲಾಭವಾಗುವಂತೆ ತಿರುಗಿಸಬಲ್ಲರು. ಉಳಿದಂತೆ ಪುತ್ತಿಲ ಅಥವಾ ಬೊಟ್ಯಾಡಿ ಅಭ್ಯರ್ಥಿಯಾದರೆ, ಯಂಗ್ ಕ್ಯಾಂಡಿಡೇಟ್ ಅಶೋಕ್ ಕುಮಾರ್ ರೈ ಅಭ್ಯರ್ಥಿಯಾಗಲೂ ಬಹುದು.

ಕಣಕ್ಕೆ ಕಂಕಣ ಯಾವಾಗ?!:

ಒಟ್ಟಿನಲ್ಲಿ ಅಭ್ಯರ್ಥಿ ಆಯ್ಕೆಯ ಕಸರತ್ತು ಮುಗಿಯದೇ, ಚುನಾವಣಾ ಕಣ ರಂಗು ತುಂಬಿಕೊಳ್ಳುತ್ತಿಲ್ಲ. ಕೆಲ ದಿನಗಳ ಹಿಂದಿನವರೆಗೆ ನಡೆಯುತ್ತಿದ್ದ ಪ್ರಚಾರ ಕಾರ್ಯಗಳು, ಇದೀಗ ಮೆಲ್ಲನೆ ವೇಗ ಕುಂಠಿತಗೊಳ್ಳುವಂತೆ ಮಾಡಿದೆ. ಹಾಗೇ ನೋಡಿದರೆ, ಚುನಾವಣೆಯ ದಿನ ದೌಡಾಯಿಸುತ್ತಾ ಬರುತ್ತಿದೆ, ಬೆರಳೆಣಿಕೆಯ ದಿನಗಳಷ್ಟೇ ಬಾಕಿ. ಅಭ್ಯರ್ಥಿಯ ಗೊಂದಲದಲ್ಲೇ ಇರುವ ಕಾರ್ಯಕರ್ತರು, ಮುಖಂಡರು ಪ್ರಚಾರದೆಡೆಗೆ ಗಮನ ನೀಡುವುದು ಯಾವಾಗ? ರಂಗು ತುಂಬಿಕೊಳ್ಳುವುದು ಯಾವಾಗ? ಪಕ್ಷದ ಪರವಾಗಿ ಕಂಕಣ ಕಟ್ಟಿಕೊಳ್ಳುವವರು ಯಾರು?

ಶಕುಂತಳಾ ಶೆಟ್ಟಿಗೆ ಕಾಂಗ್ರೆಸ್ ಟಿಕೆಟ್ ನೀಡದಿದ್ದಲ್ಲಿ ಮಹಿಳಾ ಕಾಂಗ್ರೆಸ್ ನ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ:ಪುತ್ತೂರು ಮಹಿಳಾ ಕಾಂಗ್ರೆಸ್

Posted by Vidyamaana on 2023-04-12 08:26:51 |

Share: | | | | |


ಶಕುಂತಳಾ ಶೆಟ್ಟಿಗೆ ಕಾಂಗ್ರೆಸ್ ಟಿಕೆಟ್ ನೀಡದಿದ್ದಲ್ಲಿ ಮಹಿಳಾ ಕಾಂಗ್ರೆಸ್ ನ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ:ಪುತ್ತೂರು ಮಹಿಳಾ ಕಾಂಗ್ರೆಸ್

ಪುತ್ತೂರು : ಈ ಬಾರಿಯ ಚುನಾವಣೆಯಲ್ಲಿ ಮಾಜಿ ಶಾಸಕಿ ಹಾಗೂ ಕಾಂಗ್ರೆಸ್ ಮುಖಂಡೆ ಶಕುಂತಳಾ ಶೆಟ್ಟಿಯವರಿಗೆ ಟಿಕೆಟ್ ನೀಡದಿದ್ದಲ್ಲಿ ಪುತ್ತೂರು ಮಹಿಳಾ ಕಾಂಗ್ರೆಸ್ ನ ಎಲ್ಲ ಪದಾಧಿಕಾರಿಗಳು ಸಾಮೊಹಿಕ ರಾಜೀನಾಮೆ ನೀಡುವುದಾಗಿಯೂ ಹಾಗು ಶಕುಂತಳಾ ಶೆಟ್ಟಿಯವರು ಪಕ್ಷೇತರರರಾಗಿ ಸ್ಪರ್ಧಿಸಲು ಅಗ್ರಹಿಸುವುದಾಗಿಯೂ ಮಹಿಳಾ ಕಾಂಗ್ರೆಸ್ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅದ್ಯಕ್ಷೆ ಶಾರದ್ ಅರಸ್ ತಿಳಿಸಿದ್ದಾರೆ. ಈ ಮೂಲಕ ಪುತ್ತೂರು ಮಹಿಳಾ ಕಾಂಗ್ರೆಸ್ ಹೈ ಕಮಾಮಡ್ ವಿರುದ್ಧ ಬಂಡಾಯದ ಬಾವುಟ ಹಾರಿಸಿದೆ.ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು “ ಶಕುಂತಳಾ ಶೆಟ್ಟಿಯವರು ತಮ್ಮ ಶಾಸಕತ್ವದ ಅವಧಿಯಲ್ಲಿ ಮಹಿಳೆಯರ ಏಳಿಗೆಗಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಮಹಿಳೆಯರ ರಕ್ಷಣೆಗೆ ಮಹಿಳಾ ಪೋಲಿಸ್ ಠಾಣೆಯನ್ನು ಪುತ್ತೂರಿನಲ್ಲಿ ಆರಂಭಿಸಿದರು. ಮಹಿಳೆಯರು ಆರ್ಥಿಕವಾಗಿ ಬೆಳೆಯಲು ಸ್ತ್ರೀ ಶಕ್ತಿ ಸಂಘಟನೆಗಳನ್ನು ಬಲಪಡಿಸಲು ಸ್ತ್ರೀ ಶಕ್ತಿ ಭವನದ ಸ್ಥಾಪನೆ ಮಾಡಿದ್ದಾರೆ. ಮಹಿಳೆಯರ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡುವ ಮೂಲಕ ಮಹಿಳೆಯರಿಗೆ ಭರವಸೆಯ ಆಶಾಕಿರಣವಾಗಿದ್ದಾರೆ ಎಂದರು.ಒಂದು ವೇಳೆ ಶಕುಂತಳಾ ಶೆಟ್ಟಿಯವರಿಗೆ ಟಿಕೆಟ್  ನಿರಾಕರಣೆ ಮಾಡಿದರೆ ಮಹಿಳಾ ಕಾಂಗ್ರೆಸ್ ಸಮಿತಿಯು ಸಮೂಹಿಕ ರಾಜಿನಾಮೆನೀಡವುದರ ಜೊತೆಗೆ, ಶಕುಂತಳಾ ಶೆಟ್ಟಿಯವರು ಪಕ್ಷೇತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಒತ್ತಾಯಿಸಲಿದೆ ಎಂದು ಹೇಳಿದರು.

ಫಿಲೋಮಿನಾ ಹೈಸ್ಕೂಲ್ TO ಪುತ್ತೂರು ಕ್ಲಬ್ ವರೆಗೆ ನಿಧಿ ಇದೆ!

Posted by Vidyamaana on 2023-10-07 14:55:12 |

Share: | | | | |


ಫಿಲೋಮಿನಾ ಹೈಸ್ಕೂಲ್ TO ಪುತ್ತೂರು ಕ್ಲಬ್ ವರೆಗೆ ನಿಧಿ ಇದೆ!


ಪುತ್ತೂರು:  ಮನೋರಂಜನೆಗಳು ವಿಭಿನ್ನ ರೀತಿಯವು. ರೋಟರಿ ಯುವ ಕ್ಲಬ್ ನಿಂದ ಇದೀಗ ಮೂರನೆ ಬಾರಿ ಟ್ರೆಷರ್ ಹಂಟ್ ಕಾರ್ಯಕ್ರಮ ಹಮ್ಮಿಕೊಂಡಿದೆ ಅಕ್ಟೋಬರ್ 8 ರವಿವಾರದಂದು ನಡೆಯುವ ಈ ಸ್ಫರ್ಧೆ ಸಂತ ಫಿಲೋಮಿನಾ ಹೈಸ್ಕೂಲ್ ಬಳಿ ಆರಂಭಗೊಂಡು ಪುತ್ತೂರು ಕ್ಲಬ್ ನಲ್ಲಿ ಕೊನೆಗೊಳ್ಳಲಿದೆ


ಕುಟುಂಬದ ಸದಸ್ಯರು ಜೊತೆಗೂಡಿ ಭಾಗವಹಿಸಬಹುದಾದ ಆಟದಲ್ಲಿ ಎರಡು ಅಥವಾ ಮೂರು ಸ್ಪರ್ಧಿಗಳು ತಮ್ಮ ಕಾರಿನಲ್ಲಿ ಪ್ರಯಾಣ ಮಾಡುತ್ತಾ ರಸ್ತೆ ನಿಯಮಗಳನ್ನು ಪಾಲಿಸುತ್ತಾ, ಪ್ರಶ್ನೆಗಳಿಗೆ ಉತ್ತರಿಸುತ್ತಾ ಆಡುವ ಆಟವೇ “ಟ್ರೆಷರ್ ಹಂಟ್”. ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ಕೂಡ ದೊರೆಯಲಿದೆ. ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೆ ರೋಟರಿಯಿಂದ ಪ್ರಮಾಣಪತ್ರ ಸಹ ನೀಡಲಾಗುವುದು.

ಪ್ರತಿಯೊಂದು ತಂಡಕ್ಕೂ ವಿಭಿನ್ನ ರೀತಿಯ ಪ್ರಶ್ನೆ ಪತ್ರಿಕೆಯನ್ನು ನೀಡಿ ಅದರಲ್ಲಿ ನೀಡಿರುವ ಕ್ಲೂ(ಸುಳಿವು)ಗಳನ್ನು ಗಮನಿಸಿ, ಟ್ವಿಸ್ಟ್ ಪ್ರಶ್ನೆಗಳಿಗೆ ಉತ್ತರಿಸುವುದು.ಪ್ರಾಯೋಜಕತ್ವ ನೀಡಿರುವ ಪುತ್ತೂರಿನ ವ್ಯಾಪಾರ ಮಳಿಗೆಗಳಲ್ಲಿ ಟ್ರೆಷರ್ ಅನ್ನು ಸಂಗ್ರಹಿಸುವುದು.ನೀಡಿರುವ ಗಿಫ್ಟ್ ಗಳನ್ನು ಪಡೆದುಕೊಂಡು ಕೊನೆಗೆ ಪುತ್ತೂರು ಕ್ಲಬ್ ನ್ನು ತಲುಪುವುದು. ಸ್ಪರ್ಧೆಯ ಕೊನೆಯಲ್ಲಿ ತೀರ್ಪುಗಾರರು ಪ್ರಶ್ನೆಗಳ ಸರಿ ಉತ್ತರಗಳನ್ನು ಮೌಲ್ಯಮಾಪನ ಮಾಡಿ, ಗರಿಷ್ಟ ಅಂಕಗಳನ್ನು ಪಡೆದವರಿಗೆ ಬಹುಮಾನ ಘೋಷಣೆ ಮಾಡಲಾಗುವುದು. ಈ ವಿಭಿನ್ನ ರೀತಿಯ ಮನೋರಂಜನೆಯ ಆಟದಲ್ಲಿ  ಭಾಗವಹಿಸಲಿಚ್ಛಿಸುವವರು  ವಿನೀತ್ ಶೆಣೈ 9448125671, ನರಸಿಂಹ ಪೈ 9743703147, ಪಶುಪತಿ ಶರ್ಮ 9845522020 ಇವರಲ್ಲಿ ನೋಂದಾಯಿಸಿ ಭಾಗವಹಿಸಬಹುದು

ಇಂದಿನಿಂದ ಸಾರ್ವಜನಿಕರಿಗೆ ರಾಮ್ ಲಲ್ಲಾ ದರ್ಶನ ಕ್ಕೆ ಅವಕಾಶ! ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ

Posted by Vidyamaana on 2024-01-23 11:24:46 |

Share: | | | | |


ಇಂದಿನಿಂದ ಸಾರ್ವಜನಿಕರಿಗೆ ರಾಮ್ ಲಲ್ಲಾ ದರ್ಶನ ಕ್ಕೆ ಅವಕಾಶ! ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅಯೋಧ್ಯೆಯ ರಾಮ ಮಂದಿರದಲ್ಲಿ ಹೊಸ ರಾಮ್ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ನೆರವೇರಿಸಿದರು. ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ, ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯವನ್ನು ಇಂದು ಸಾರ್ವಜನಿಕರಿಗೆ ಪ್ರವೇಶಿಸಬಹುದು.ಭವ್ಯವಾದ ದೇವಾಲಯವು ದರ್ಶನ ಅವಧಿಗಳಲ್ಲಿ ಭಗವಾನ್ ರಾಮ್ ಲಲ್ಲಾ ಅವರ ದರ್ಶನವನ್ನು ಬಯಸುವ ಸಾವಿರಾರು ಭಕ್ತರು "ಆರತಿ" ಗಾಗಿ ಉಚಿತ ಪಾಸ್ ಗಳು ಆಫ್ ಲೈನ್ ಮತ್ತು ಆನ್ ಲೈನ್ ಎರಡರಲ್ಲೂ ಲಭ್ಯವಿದೆ. ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ವೆಬ್ಸೈಟ್ ಪ್ರಕಾರ, ಶ್ರೀ ರಾಮ್ ಜನ್ಮಭೂಮಿಯಲ್ಲಿರುವ ಶಿಬಿರ ಕಚೇರಿಯಲ್ಲಿ ಮಾನ್ಯ ಸರ್ಕಾರಿ ಗುರುತಿನ ಪುರಾವೆಯನ್ನು ಪ್ರಸ್ತುತಪಡಿಸುವ ಮೂಲಕ ಆಫ್ಲೈನ್ ಪಾಸ್ಗಳನ್ನು ಪಡೆಯಬಹುದು. ಹೆಚ್ಚುವರಿ ಮಾಹಿತಿಯನ್ನು ಅವರ ವೆಬ್ಸೈಟ್ನಲ್ಲಿ ಕಾಣಬಹುದು.


ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ, ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯವನ್ನು ಇಂದು , ಜನವರಿ 23 ರಿಂದ ಸಾರ್ವಜನಿಕರಿಗೆ ಪ್ರವೇಶಿಸಬಹುದು. ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರವು ಭಗವಾನ್ ರಾಮ್ ಲಲ್ಲಾ ಅವರ ದರ್ಶನ ಕ್ಕಾಗಿ ಸಮಯವನ್ನು ಹಂಚಿಕೊಂಡಿದೆ.

ದರ್ಶನದ ಸಮಯ:ಬೆಳಿಗ್ಗೆ 7:00 ರಿಂದ 11:30

ಮಧ್ಯಾಹ್ನ 2:00 ರಿಂದ ಸಂಜೆ 7:00


ರಾಮ ಮಂದಿರ: ಆರತಿ ಸಮಯ:


ಜಾಗರಣ್ / ಶೃಂಗಾರ್ ಆರತಿ: ಬೆಳಿಗ್ಗೆ 6:30 (ಮುಂಗಡ ಬುಕಿಂಗ್ ಸಾಧ್ಯ)


ಸಂಧ್ಯಾ ಆರತಿ: ಸಂಜೆ 7:30 (ಲಭ್ಯತೆಗೆ ಅನುಗುಣವಾಗಿ ಅದೇ ದಿನದ ಬುಕಿಂಗ್ ಸಾಧ್ಯ)


ಆರತಿ/ದರ್ಶನಕ್ಕೆ ಬುಕ್ ಮಾಡುವುದು ಹೇಗೆ?


> ಭಕ್ತರು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು.

> ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿ ಮತ್ತು ವಿಸ್ಟರ್ ಗಳು ನೋಂದಣಿಗಾಗಿ ಒಟಿಪಿಯನ್ನು ಸ್ವೀಕರಿಸುತ್ತಾರೆ.

> ಮೈ ಪ್ರೊಫೈಲ್ ಗೆ ಹೋಗಿ ಮತ್ತು ಆರತಿ ಅಥವಾ ದರ್ಶನಕ್ಕಾಗಿ ಬಯಸಿದ ಸ್ಲಾಟ್ ಅನ್ನು ಕಾಯ್ದಿರಿಸಿ.

> ರುಜುವಾತುಗಳು ಮತ್ತು ಬುಕ್ ಪಾಸ್ ಒದಗಿಸಿ.

> ಆವರಣವನ್ನು ಪ್ರವೇಶಿಸುವ ಮೊದಲು ದೇವಾಲಯದ ಕೌಂಟರ್ ನಿಂದ ಪಾಸ್ ಪಡೆಯಬಹುದು.


ಪ್ರವೇಶ ಪಾಸ್ನಲ್ಲಿ ಉಲ್ಲೇಖಿಸಲಾದ ಕ್ಯೂಆರ್ ಕೋಡ್ಗಳನ್ನು ಸ್ಕ್ಯಾನ್ ಮಾಡಿದ ನಂತರ ಭಕ್ತರಿಗೆ ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಹಿಂದೆ ಹೇಳಿತ್ತು.ಸ್ಲಾಟ್ ಗಳ ಲಭ್ಯತೆಯ ಆಧಾರದ ಮೇಲೆ ಆಫ್ ಲೈನ್ ಅದೇ ದಿನದ ಬುಕಿಂಗ್ ಮಾಡಲಾಗುತ್ತದೆ. ಆರತಿಗೆ 30 ನಿಮಿಷಗಳ ಮೊದಲು ಭಕ್ತರು ದೇವಾಲಯದ ಆವರಣದಲ್ಲಿ ಹಾಜರಿರಬೇಕು. ಆರತಿ ಪಾಸ್ಗಳಿಗಾಗಿ, ಭಕ್ತರು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವೆಬ್ಸೈಟ್ನಲ್ಲಿ ನಿರ್ದಿಷ್ಟಪಡಿಸಿದಂತೆ ಮಾನ್ಯ ಸರ್ಕಾರಿ ಗುರುತಿನ ಪುರಾವೆಯನ್ನು ತರಬೇಕು

ಜಾಗದ ತಕರಾರು - ಹೆತ್ತವರ ಮೇಲೆಯೇ ಕೆತ್ತಿ ಬೀಸಿದ ಕುಡುಕ ಮಗ

Posted by Vidyamaana on 2023-11-21 08:33:43 |

Share: | | | | |


ಜಾಗದ ತಕರಾರು - ಹೆತ್ತವರ ಮೇಲೆಯೇ ಕೆತ್ತಿ ಬೀಸಿದ ಕುಡುಕ ಮಗ

ಬೆಳ್ಳಾರೆ : ಮಗನೇ ತಂದೆ-ತಾಯಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಬೆಳ್ಳಾರೆ ಸಮೀಪದ ಕಲ್ಲಗುಡ್ಡೆ ಕೊಡಿಯಾಳದಲ್ಲಿ ನಡೆದಿದೆ ಎಂದು ವರದಿಯಾಗಿದೆ.


ಬೆಳ್ಳಾರೆ ಸಮೀಪದ ಕಲ್ಲಗುಡ್ಡೆ ಕೊಡಿಯಾಳ ನಿವಾಸಿಗಳಾದ ಮಂಜುನಾಥ್, ಧರ್ಮವತಿ ಗಾಯಗೊಂಡ ದಂಪತಿಗಳು ಎಂದು ಗುರುತಿಸಲಾಗಿದೆ.


ಜಾಗದ ವಿಚಾರವಾಗಿ ಮನೆಯಲ್ಲಿ ಜಗಳ ನಡೆದಿದ್ದು, ಈ ವೇಳೆ ಮಗ ತಂದೆ-ತಾಯಿ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.


ಬೆಳ್ಳಾರೆ ಠಾಣಾ ವ್ಯಾಪ್ತಿಯ ಕಲ್ಲಗುಡ್ಡೆ ಕೊಡಿಯಾಲ ಎಂಬಲ್ಲಿ ಮಂಜುನಾಥ್ ಮತ್ತು ಪತ್ನಿಗೆ ಪುತ್ರ ದೇವಿಪ್ರಸಾದ್ ಕತ್ತಿಯಿಂದ ಕಡಿದು ಕೊಲೆಯತ್ನ ಮಾಡಿದ್ದು, ಕಂಠಪೂರ್ತಿ ಕುಡಿದ ಪುತ್ರ ಜಮೀನು ವಿಚಾರವಾಗಿ ತಂದೆ, ತಾಯಿ ಮೇಲೆ ಹಲ್ಲೆ ನಡೆಸಿದ್ದಾನ್ನೆಲಾಗಿದೆ.


ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ. ಆರೋಪಿಯನ್ನು  ಪೊಲೀಸರು  ಬಂಧಿಸಿದ್ದಾರೆ .



Leave a Comment: