ಹಾಸ್ಟೆಲ್‌ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ನರ್ಸಿಂಗ್ ವಿದ್ಯಾರ್ಥಿನಿ ದಿಯಾ

ಸುದ್ದಿಗಳು News

Posted by vidyamaana on 2024-07-08 14:36:42 |

Share: | | | | |


ಹಾಸ್ಟೆಲ್‌ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ನರ್ಸಿಂಗ್ ವಿದ್ಯಾರ್ಥಿನಿ ದಿಯಾ

ಬೆಂಗಳೂರು : ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ದಿಯಾ ಮಂಡೋಲ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.ದಿಯಾ ಮಂಡೋಲ್ ಪಶ್ಚಿಮ ಬಂಗಾಳ‌ ಮೂಲದವಳಾಗಿದ್ದು, ಮದರ್ ಥೆರೆಸಾ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದಳು.

ಮೂರು ದಿನಗಳ ಹಿಂದೆ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ದಿಯಾ ಕೌಟುಂಬಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹಾಸ್ಟೆಲ್​​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಹಪಾಠಿಗಳು ರೂಮಿಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಾಲಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

 Share: | | | | |


ಎಚ್‌3ಎನ್‌2 ಜತೆಗೆ ಕಾಡುತ್ತಿದೆ ಅಡೆನೋವೈರಸ್ ಭೀತಿ: ಮಕ್ಕಳೇ ಟಾರ್ಗೆಟ್

Posted by Vidyamaana on 2023-03-10 08:14:03 |

Share: | | | | |


ಎಚ್‌3ಎನ್‌2 ಜತೆಗೆ ಕಾಡುತ್ತಿದೆ ಅಡೆನೋವೈರಸ್ ಭೀತಿ: ಮಕ್ಕಳೇ ಟಾರ್ಗೆಟ್

ಪಶ್ಚಿಮ ಬಂಗಾಳ, ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಅಡೆನೋವೈರಸ್ ಪ್ರಕರಣಗಳು ಹೆಚ್ಚುತ್ತಿವೆ. ಮುಖ್ಯವಾಗಿ ಮಕ್ಕಳನ್ನು ಕಾಡುವ ಈ ಸೋಂಕು, ಪ್ಲೂ ಪ್ರಕರಣಗಳ ಜತೆಗೆ ಆರೋಗ್ಯ ಕ್ಷೇತ್ರದಲ್ಲಿನ ಆತಂಕವನ್ನು ಹೆಚ್ಚಿಸಿದೆ.

ಭಾರತದ ಅನೇಕ ಭಾಗಗಳಲ್ಲಿ ಎಚ್‌3ಎನ್‌2 ಫ್ಲೂ ಹಾವಳಿ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಮಾರಕ ಅಡೆನೋವೈರಸ್ ಪ್ರಕರಣಗಳಲ್ಲಿಯೂ ಗಂಭೀರ ಏರಿಕೆ ಉಂಟಾಗುತ್ತಿದೆ. ಮಕ್ಕಳು ಈ ವೈರಸ್‌ಗೆ ತುತ್ತಾಗುತ್ತಿದ್ದು, ವೈದ್ಯರು ಅಪಾಯದ ಗಂಟೆ ಮೊಳಗಿಸಿದ್ದಾರೆ.

ಮುಖ್ಯವಾಗಿ ಪಶ್ಚಿಮ ಬಂಗಾಳದಲ್ಲಿ ಅಡೆನೋವೈರಸ್ ಭೀತಿ ಹೆಚ್ಚಾಗಿದೆ. ತೀವ್ರ ಉಸಿರಾಟ ಸೋಂಕಿನಿಂದಾಗಿ (ಎಆರ್‌ಐ) ಮಂಗಳವಾರ ಮತ್ತು ಬುಧವಾರದ ನಡುವೆ ಕೋಲ್ಕತಾದ ಮೂರು ಸರ್ಕಾರಿ ಆಸ್ಪತ್ರೆಗಳಲ್ಲಿ ನಾಲ್ಕು ಮಕ್ಕಳು ಕೊನೆಯುಸಿರೆಳೆದಿದ್ದಾರೆ. ಅವರಲ್ಲಿ ಎರಡು ಮಕ್ಕಳಲ್ಲಿ ಅಡೆನೋವೈರಸ್ ಪಾಸಿಟಿವ್ ದೃಢಪಟ್ಟಿದೆ.

ಪಶ್ಚಿಮ ಬಂಗಾಳದಲ್ಲಿ ಕಳೆದ 9 ದಿನಗಳಲ್ಲಿ 36ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ. ಆದರೆ ಎರಡು ಮಕ್ಕಳ ಸಾವು ಮಾತ್ರ ಅಡೆನೋವೈರಸ್‌ಗೆ ಸಂಬಂಧಿಸಿದ್ದು ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಕೂಡ ಅಡೆನೋವೈರಸ್ ಪ್ರಕರಣಗಳಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಆದರೆ ಸೋಂಕು ಸ್ವಯಂ ಸೀಮಿತತೆ ಹೊಂದಿರುವುದರಿಂದ ಹೆಚ್ಚು ಕಳವಳ ಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.

"ಕಳೆದ ಮೂರು ವಾರಗಳಲ್ಲಿ ಅಡೆನೋವೈರಸ್ ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಹಿಂದಿನ ಎರಡು ತಿಂಗಳಲ್ಲಿ 21 ಖಚಿತ ಪಾಸಿಟಿವ್ ಪ್ರಕರಣಗಳಿದ್ದವು. ಈಗ ಅಂತಹ ಸೋಂಕು ಹೊಂದಿರಬಹುದಾದ ಸುಮಾರು 30 ಮಕ್ಕಳು ಪ್ರತಿದಿನವೂ ಒಪಿಡಿ ಮತ್ತು ಇಆರ್‌ಗಳಿಗೆ ಬರುತ್ತಿದ್ದಾರೆ. ಫ್ಲೂ ಅಥವಾ ಅಡೆನೋವೈರಸ್ ಲಕ್ಷಣಗಳೊಂದಿಗೆ ದಾಖಲಾದ ಮಕ್ಕಳ ಗಂಟಲಿನ ದ್ರವಗಳನ್ನು ಪರೀಕ್ಷೆ ಮಾಡಲಾಗುತ್ತಿದೆ. ಪ್ರತಿದಿನವೂ ಅಂತಹ 3-4 ಮಕ್ಕಳನ್ನು ದಾಖಲು ಮಾಡಿಕೊಳ್ಳುತ್ತಿದ್ದೇವೆ" ಎಂದು ಬೆಂಗಳೂರಿನ ಸಕ್ರಾ ವರ್ಲ್ಡ್ ಆಸ್ಪತ್ರೆಯ ಶಿಶುವೈದ್ಯ ವಿಭಾಗದ ಹಿರಿಯ ಕನ್ಸಲ್ಟೆಂಟ್ ಡಾ. ರಜತ್ ಅತ್ರೇಯಾ ತಿಳಿಸಿದ್ದಾರೆ.

ರಾಷ್ಟ್ರೀಯ ವೈರಾಣು ಸಂಸ್ಥೆಯ ಪ್ರಕಾರ, ನಗರದಲ್ಲಿ ಈ ವರ್ಷ ಇದುವರೆಗೂ ಕೇವಲ 13 ಅಡೆನೋವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. ಕರ್ನಾಟಕದ ಒಟ್ಟು ಸೋಂಕಿತರ ಸಂಖ್ಯೆ 37 ಇದೆ. ಖಾಸಗಿ ಆಸ್ಪತ್ರೆಗಳು ಅಡೆನೋವೈರಸ್ ಪ್ರಕರಣಗಳ ಬಗ್ಗೆ ನೀಡುವ ಮಾಹಿತಿ ಸುಧಾರಿಸಬೇಕಿದೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

ಫ್ಲೂ ಮತ್ತು ಅಡೆನೋವೈರಸ್ ಲಕ್ಷಣಗಳೇನು?

ಅಡೆನೋವೈರಸ್, ಅಧಿಕ ಅಪಾಯಕಾರಿ ವೈರಸ್ ಆಗಿದೆ. ಅದು ಸಾಮಾನ್ಯವಾದ ಶೀತ, ಶ್ವಾಸನಾಳಗಳ ಒಳ ಪದರ ಉರಿತ ಮತ್ತು ನ್ಯುಮೋನಿಯಾ ಸೇರಿದಂತೆ ವಿವಿಧ ಬಗೆಯ ಅನಾರೋಗ್ಯಗಳನ್ನು ಉಂಟುಮಾಡುತ್ತದೆ. ಅಡೆನೋವೈರಸ್ ಸೋಂಕು ಹೆಚ್ಚಾಗಿ ಜ್ವರ, ಕೆಮ್ಮು, ನೆಗಡಿ ಹಾಗೂ ಪಿಂಕ್ ಐ ಸಮಸ್ಯೆಗಳಂತಹ ಲಕ್ಷಣಗಳನ್ನು ಉಂಟುಮಾಡುತ್ತದೆ. ಆದರೆ ಅದು ಮುಖ್ಯವಾಗಿ, ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ ಹೊಂದಿರುವವರಲ್ಲಿ ಬಹಳ ಗಂಭೀರ ಕಾಯಿಲೆಯನ್ನೂ ಉಂಟುಮಾಡಬಹುದು.

ಎಚ್‌3ಎನ್‌2 ಅಥವಾ ಫ್ಲೂ ಎನ್ನುವುದು ಇನ್‌ಫ್ಲೂಯೆಂಜಾ ವೈರಸ್‌ಗಳಿಂದ ಸೃಷ್ಟಿಯಾಗುವ ಉಸಿರಾಟದ ಸಮಸ್ಯೆಯಾಗಿದೆ. ಫ್ಲೂ ಕೂಡ ತೀವ್ರ ಅಪಾಯಕಾರಿ ಮತ್ತು ಸೋಂಕು ತಗುಲಿದ ವ್ಯಕ್ತಿಗಳ ಜತೆಗಿನ ನಿಕಟ ಸಂಪರ್ಕ, ಕಲುಷಿತ ಮೇಲ್ಮೈಗಳು ಅಥವಾ ಗಾಳಿಯಿಂದ ಹರಡುವ ದ್ರವಗಳಿಂದ ಕೂಡ ಹರಡಬಲ್ಲದು. ಜ್ವರ, ಕೆಮ್ಮು, ಗಂಟಲು ನೋವು, ಸ್ನಾಯು ನೋವು ಮತ್ತು ಅಸ್ವಸ್ಥತೆ- ಇವು ಫ್ಲೂ ಲಕ್ಷಣಗಳು. ಇದು ಕೂಡ ನ್ಯುಮೋನಿಯಾ, ಶ್ವಾಸನಾಳಗಳ ಉರಿತ ಹಾಗೂ ಸಾವಿಗೆ ಕೂಡ ಕಾರಣವಾಗಬಹುದು.

ಎರಡರ ನಡುವಿನ ವ್ಯತ್ಯಾಸವೇನು?

ಅಡೆನೋವೈರಸ್ ಮತ್ತು ಇನ್‌ಫ್ಲೂಯೆಂಜಾಗಳು ಉಸಿರಾಟ ಸಂಬಂಧಿ ಕಾಯಿಲೆಗೆ ಕಾರಣವಾಗುವ ಎರಡು ಸಾಮಾನ್ಯ ವೈರಸ್‌ಗಳಾದರೂ, ಇವರೆಡರ ನಡುವೆ ವ್ಯತ್ಯಾಸಗಳಿವೆ. ಇವೆರಡೂ ಉಂಟುಮಾಡಬಹುದಾದ ಅನಾರೋಗ್ಯದ ತೀವ್ರತೆಯೇ ಮುಖ್ಯ ವ್ಯತ್ಯಾಸ. ಎರಡೂ ಸಂಕೀರ್ಣ ಸಮಸ್ಯೆಗಳಿಗೆ ಕಾರಣವಾಗಬಹುದು. ಆದರೆ ಫ್ಲೂ ಸಾಮಾನ್ಯವಾಗಿ ಗಂಭೀರ ಕಾಯಿಲೆ ಮತ್ತು ಆಸ್ಪತ್ರೆ ದಾಖಲಾಗುವಿಕೆಗೆ ಎಡೆಮಾಡಿಕೊಡುತ್ತದೆ. ಚಿಕ್ಕ ಮಕ್ಕಳು, ವೃದ್ಧರು, ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಅಪಾಯ ಅಧಿಕ. ಅಡೆನೋವೈರಸ್ ಸಾಧಾರಣದಿಂದ ಮಧ್ಯಮ ಪ್ರಮಾಣದ ಲಕ್ಷಣಗಳನ್ನು ಉಂಟುಮಾಡುತ್ತದೆ.

ಫ್ಲೂಗೆ ಪ್ರಸ್ತುತ ಲಸಿಕೆ ಲಭ್ಯವಿದೆ. ಆದರೆ ಅಡೆನೋವೈರಸ್‌ಗೆ ಲಸಿಕೆ ಇಲ್ಲ. ಫ್ಲೂ ಬರುವ ಸಾಧ್ಯತೆಗಳನ್ನು ತಡೆಗಟ್ಟಲು ಆರು ತಿಂಗಳು ದಾಟಿದ ಮಕ್ಕಳಿಂದ ಎಲ್ಲ ದೊಡ್ಡವರೂ ಪ್ರತಿ ವರ್ಷ ಕೂಡ ಈ ಲಸಿಕೆ ಹಾಕಿಸಿಕೊಳ್ಳಬೇಕು. ಇದರಿಂದ ಫ್ಲೂ ಬಂದರೂ ಅದರ ತೀವ್ರತೆ ಕಡಿಮೆ ಇರುತ್ತದೆ ಎಂದು ಸಲಹೆ ನೀಡಲಾಗಿದೆ. ಅಡೆನೋವೈರಸ್‌ಗೆ ಲಸಿಕೆ ಇಲ್ಲದಿರುವುದರಿಂದ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುವುದು, ಸೋಂಕಿತರೊಂದಿಗೆ ಸಮೀಪದ ಸಂಪರ್ಕ ಸಾಧಿಸುವುದರಿಂದ ದೂರ ಇರುವುದು ಮುಂತಾದ ಉತ್ತಮ ಅಭ್ಯಾಸಗಳನ್ನು ಕಾಪಾಡಿಕೊಳ್ಳುವುದೇ ಪರಿಹಾರ.

ರೈ ಚಾರಿಟೇಬಲ್ ಟ್ರಸ್ಟ್ ನಿಂದ ಕಾರ್ಮಿಕರ ಕಾರ್ಡ್ ವಿತರಣೆ

Posted by Vidyamaana on 2023-12-01 07:03:23 |

Share: | | | | |


ರೈ ಚಾರಿಟೇಬಲ್ ಟ್ರಸ್ಟ್ ನಿಂದ ಕಾರ್ಮಿಕರ ಕಾರ್ಡ್ ವಿತರಣೆ

ಪುತ್ತೂರು: ಬಡ ಜನರ ಸೇವೆಗೆಂದು ಕಳೆದ 11 ವರ್ಷಗಳಿಂದ ರೈ ಎಸ್ಟೇಟ್  ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ರಚನೆ ಮಾಡಲಾಗಿದ್ದು ಮುಂದೆಯೂ ಟ್ರಸ್ಟ್ ನ ಸಮಾಜ ಸೇವೆ ಮುಂದುವರೆಯುತ್ತದೆ ಎಂದು ಟ್ರಸ್ಟ್ ಅಧ್ಯಕ್ಷರಾದ ಶಾಸಕ ಅಶೋಕ್ ರೈ ಹೇಳಿದರು.

ಅವರು ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಾರ್ಮಿಕರಬಕಾರ್ಡ್ ವಿತರಿಸಿ ಮಾತನಾಡಿದರು.

ಒಟ್ಟು 5400 ಕಾರ್ಮಿಕ ಕಾರ್ಡುಗಳನ್ನು ವಿತರಿಸಲಾಗಿದೆ.‌ಕಾರ್ಮಿಕರಬಕಾರ್ಡು ನೀಡುವ ಮೂಲಕ ಬಡವರ ಬದುಕಿನಲ್ಲಿ‌ಭರವಸೆ ಮೂಡಿಸುವ ಕೆಲಸ ಟ್ರಸ್ಟಿನಿಂದ ನಡೆಯುತ್ತಿದೆ.

ಮುಂದಿನ‌ದಿನಗಳಲ್ಲಿ‌ಇನ್ನಷ್ಟು ಸಮಾಜ ಸೇವೆಗಳು ಟ್ರಸ್ಟ್ ವತಿಯಿಂದ ನಡೆಯಲಿದ್ದು ಜನರ ಸಹಕಾರವನ್ನು ಬಯಸುವುದಾಗಿ ಹೇಳಿದರು.

ವೇದಿಕೆಯಲ್ಲಿ ಟ್ರಸ್ಟ್ ಪ್ರಮುಖರಾದ ಕಾವು ಹೇಮನಾಥ ಶೆಟ್ಟಿ, ನಿಹಾಲ್ ಶೆಟ್ಟಿ ಕಲ್ಲಾರೆ, ಉಪಸ್ಥಿತರಿದ್ದರು. 

ರಚನಾ ರೈ ಸ್ವಾಗತಿಸಿ ಕಾರ್ಯಕ್ರಮ‌ನಿರೂಪಿಸಿದರು.

ಭಾರತ್ ಬ್ರ್ಯಾಂಡ್ ಅಕ್ಕಿಗೆ ಚಾಲನೆ, ಎಲ್ಲಿ ಸಿಗುತ್ತೆ ಈ ಅಕ್ಕಿ? ಬೆಲೆ ಎಷ್ಟು?

Posted by Vidyamaana on 2024-02-06 21:37:19 |

Share: | | | | |


ಭಾರತ್ ಬ್ರ್ಯಾಂಡ್ ಅಕ್ಕಿಗೆ ಚಾಲನೆ, ಎಲ್ಲಿ ಸಿಗುತ್ತೆ ಈ ಅಕ್ಕಿ? ಬೆಲೆ ಎಷ್ಟು?

ಬೆಂಗಳೂರು : ಕೇಂದ್ರ ಸರ್ಕಾರದ ಭಾರತ್ ಬ್ರ್ಯಾಂಡ್ ಅಕ್ಕಿ ಯೋಜನೆಗೆ ಇಂದು ಚಾಲನೆ‌ ಸಿಕ್ಕಿದೆ. ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಈ ಭಾರತ್ ಬ್ರಾಂಡ್ ಅಕ್ಕಿ ಯೋಜನೆಗೆ ಚಾಲನೆ ನೀಡಿದರು.ಮತ್ತೊಂದೆಡೆ ವಸಂತ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ನೆಫೆಡ್ ಕಚೇರಿ ಮುಂಭಾಗದಲ್ಲಿ ಭಾರತ್ ಅಕ್ಕಿ ಮಾರಟ ವಾಹನಗಳಿಗೆ ಚಾಲನೆ ನೀಡಲಾಗಿದೆ.ಎಫ್‌ಸಿಐ ಚೆರ್ಮನ್ ಭೂಪೇಂದ್ರ ಸಿಂಗ್ ಬಾಟಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಒಟ್ಟು 7 ವಾಹನಗಳಿಗೆ ಚಾಲನೆ ನೀಡಿದರು.


ಅಕ್ಕಿ ದರ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ಘೋಷಿಸಿದೆ. ನಾಫೆಡ್​​-ಭಾರತ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದಿಂದ ಇಂದು ನಾಫೆಡ್​​ನ 7 ಸಂಚಾರಿ ವಾಹನಗಳಲ್ಲಿ ಭಾರತ್​ ಅಕ್ಕಿ ಮಾರಾಟ ಮಾಡಲಾಗುತ್ತದೆ.


ಭಾರತ್ ಅಕ್ಕಿ ಯೋಜನೆಯಡಿ ಕೆಜಿ ಭಾರತ್ ಅಕ್ಕಿಗೆ 29 ರೂ. ನಿಗದಿ ಪಡಿಸಲಾಗಿದ್ದು, 5 ಕೆಜಿ, 10 ಕೆಜಿ ಬ್ಯಾಗ್​ಗಳಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿ ಲಭ್ಯವಿದೆ. ಇಂದು ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದ್ದು, ನಾಳೆಯಿಂದೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ಲಭ್ಯವಾಗಲಿದೆ.


ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮುಂತಾದ ಇ - ಕಾಮರ್ಸ್‌ ತಾಣಗಳಲ್ಲಿ ಅಕ್ಕಿ ಮಾರಾಟಕ್ಕೆ ಮುಂದಾಗುತ್ತಿರುವ ಬೆನ್ನಲ್ಲೇ ಈ ನಿರ್ಧಾರ ಕೈಗೊಂಡಿದೆ. ಭಾರತ್‌ ಅಕ್ಕಿ 5 ಕೆ.ಜಿ, 10 ಕೆ.ಜಿ ಪ್ಯಾಕೆಟ್‌ಗಳಲ್ಲಿ ಮಾರಾಟಗೊಳ್ಳಲಿದ್ದು,ಪ್ರತಿ ಕಿ.ಲೋಗೆ 29 ರೂ. ನಿಗದಿ ಪಡಿಸಲಾಗಿದೆ ಎಂದು ಆಹಾರ ಸಚಿವಾಲಯದ ಕಾರ್ಯದರ್ಶಿ ಸಂಜೀವ್‌ ಚೋಪ್ರಾ ಮಾಹಿತಿ ನೀಡಿದ್ದಾರೆ.

ಅಯ್ಯೋ ದೇವ್ರೇ.. ಆಟವಾಡ್ತಿದ್ದ ಮಗು ಫರ್ಸ್ಟ್ ಫ್ಲೋರಿನಿಂದ ಬಿತ್ತು..

Posted by Vidyamaana on 2023-08-27 10:30:32 |

Share: | | | | |


ಅಯ್ಯೋ ದೇವ್ರೇ.. ಆಟವಾಡ್ತಿದ್ದ ಮಗು ಫರ್ಸ್ಟ್ ಫ್ಲೋರಿನಿಂದ ಬಿತ್ತು..

ಮಂಗಳೂರು: ತಾಯಿ ಜೊತೆ ಬ್ಯಾಂಕಿಗೆ ಬಂದಿದ್ದ ಮಗುವೊಂದು ಹೊರಗಡೆ ಆವರಣದಲ್ಲಿ ಆಟವಾಡುತ್ತಾ ಗ್ರಿಲ್ ಮೇಲೇರಿ ಅಲ್ಲಿಂದ ಆಯತಪ್ಪಿ ಕೆಳಗೆ ಬಿದ್ದು ಗಾಯಗೊಂಡಿರುವ ಘಟನೆ ಉಳ್ಳಾಲ ತಾಲೂಕಿನ ಮಂಜನಾಡಿ ಎಂಬಲ್ಲಿ ನಡೆದಿದೆ. 

ಆ.25ರಂದು ಮಗು ತನ್ನ ತಾಯಿ ಜೊತೆಗೆ ಇಲ್ಲಿರುವ ಬ್ಯಾಂಕಿಗೆ ಬಂದಿದ್ದ ಸಂದರ್ಭದಲ್ಲಿ ತಾಯಿ ಒಳಗಿರುವಂತೆ ಮಗು ಪ್ರಥಮ ಮಹಡಿಯ ಆವರಣದಲ್ಲಿ ಆಟವಾಡುತ್ತಿತ್ತು.

ಬಳಿಕ ಅಲ್ಲೇ ಇದ್ದ ಗ್ರಿಲ್ ಮೇಲೆರಿ ಮುಂದಕ್ಕೆ ಬಾಗಿದ ಸಂದರ್ಭ ಮಗು ತಲೆಕೆಳಗಾಗಿ ಬಿದ್ದಿದೆ.

ಈ ಸಂದರ್ಭದಲ್ಲಿ ಮಗುವನ್ನು ಹುಡುಕುತ್ತಾ ಹೊರಗಡೆ ಬಂದ ಮಗುವಿನ ತಾಯಿ ಕೆಳಗೆ ನೋಡಿ ಮಗು ಬಿದ್ದಿರುವುದನ್ನು ಕಂಡು ಬೊಬ್ಬೆ ಹಾಕಿದಾಗ ಬ್ಯಾಂಕ್ ಒಳಗಿದ್ದವರು ಮತ್ತು ಅಕ್ಕಪಕ್ಕದವರು ಬಂದು ಕೆಳಗೆ ಬಿದ್ದಿದ್ದ ಮಗುವನ್ನು ರಕ್ಷಿಸಿದ್ದಾರೆ.

ಅದೃಷ್ಟವಶಾತ್ ಈ ಮಗು ಪ್ರಾಣಾಪಾಯದಿಂದ ಪಾರಾಗಿದ್ದು,ಕೆಳಗೆ ಬಿದ್ದ ರಭಸಕ್ಕೆ ಮಗುವಿನ ತಲೆ ಮತ್ತು ಕೈಗೆ ಗಾಯಗಳಾಗಿವೆ.

ಮಗುವನ್ನು ದೇರಳಕಟ್ಟೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದುಅಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮಗು ಆಟವಡುತ್ತಾ ಗ್ರಿಲ್ ಮೇಲೆ ಹತ್ತಿ ಕೆಳಗೆ ಬೀಳುತ್ತಿರುವ ದೃಶ್ಯ ಇಲ್ಲಿ ಅಳವಡಿಸಲಾಗಿದ್ದ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.

ಹತ್ತೂರ ಒಡೆಯನ ಜಾತ್ರೋತ್ಸವ ಸಂದರ್ಭದಲ್ಲಿ ಯುವಶಕ್ತಿ ಸೇವಾಪಥ ಸ್ವಚ್ಛತಾ ಶಪಥ

Posted by Vidyamaana on 2024-04-12 07:03:49 |

Share: | | | | |


ಹತ್ತೂರ ಒಡೆಯನ ಜಾತ್ರೋತ್ಸವ ಸಂದರ್ಭದಲ್ಲಿ ಯುವಶಕ್ತಿ ಸೇವಾಪಥ ಸ್ವಚ್ಛತಾ ಶಪಥ

ಪುತ್ತೂರು :ಯುವಶಕ್ತಿ ಸೇವಾಪಥ ದ.ಕ ವತಿಯಿಂದ ಹತ್ತೂರ ಒಡೆಯ ಪುತ್ತೂರು‌ ಮಹಾಲಿಂಗೇಶ್ವರನ ಸನ್ನಿಧಾನದಲ್ಲಿ ಸ್ವಚ್ಚ ದೇಗುಲ ಅಭಿಯಾನ ಇದೇ ಬರುವ ರವಿವಾರ ಎಪ್ರಿಲ್ 14 ರಂದು ಬೆಳಗ್ಗೆ 7.30 ರಿಂದ ಮದ್ಯಾಹ್ನ 12 ರವರೆಗೆ ಶ್ರೀ ಕ್ಷೇತ್ರದಲ್ಲಿ ಶ್ರಮದಾನ ಸೇವೆ ನೆರವೇರಲಿದೆ.

ಸಮಾಜದಲ್ಲಿ ಅಶಕ್ತರಿಗೆ ನೆರವಾಗುವ ಮೂಲಕ ಸುಮಾರು 70 ಲಕ್ಷ ಸೇವಾನಿಧಿ ಸಮರ್ಪಿಸುವ ಮೂಲಕ ಚಿರಪರಿಚಿತ ಸಂಸ್ಥೆ ಧಾರ್ಮಿಕ ಕ್ಷೇತ್ರಗಳಲ್ಲಿ ಸೇವಾಚಟುವಟಿಕೆಗಳನ್ನು ನಡೆಸುವ ಮೂಲಕ ಸೇವಾಭಿಯಾನ ಮುಂದುವರೆಸುತ್ತಿದೆ.

ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 4

Posted by Vidyamaana on 2023-09-03 22:55:04 |

Share: | | | | |


ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 4

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಸೆ 4 ರಂದು


ಬೆಳಿಗ್ಗೆ 11 ಗಂಟೆಗೆ ಪಶು ಆಸ್ಪತ್ರೆಯಲ್ಲಿ ಕೌ ಮ್ಯಾಟ್ ವಿತರಣೆ

12 ಗಂಟೆಗೆ ಉಪ್ಪಳಿಗೆ ಶಾಲೆಯಲ್ಲಿ ಆಂಗ್ಲ‌ಮಾಧ್ಯಮ ಎಲ್ ಕೆ ಜಿ ತರಗತಿ ಉದ್ಘಾಟನೆ


ಅಪರಾಹ್ನ ಮಂಗಳೂರಿನಲ್ಲಿ‌ಸಭೆಯಲ್ಲಿ  ಭಾಗವಹಿಸಲಿದ್ದಾರೆ

Recent News


Leave a Comment: