ಯು ಕೆ ಎಲೆಕ್ಷನ್ ನಲ್ಲಿ ಹೀನಾಯ ಸೋಲು; ರಿಶಿ ಸುನಕ್ ಫಸ್ಟ್ ರಿಯಾಕ್ಷನ್

ಸುದ್ದಿಗಳು News

Posted by vidyamaana on 2024-07-05 12:01:03 |

Share: | | | | |


ಯು ಕೆ ಎಲೆಕ್ಷನ್ ನಲ್ಲಿ ಹೀನಾಯ ಸೋಲು; ರಿಶಿ ಸುನಕ್ ಫಸ್ಟ್ ರಿಯಾಕ್ಷನ್

ಲಂಡನ್ : ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆ(UK Election) ಫಲಿತಾಂಶ ಹೊರಬಿದ್ದಿದ್ದು, ಬರೋಬ್ಬರಿ 14ವರ್ಷಗಳ ಬಳಿಕ ಲೇಬರ್ ಪಕ್ಷ ಜಯಭೇರಿ ಭಾರಿಸಿದೆ. ಲೇಬರ್‌ ಪಕ್ಷ 360 ಸ್ಥಾನಗಳನ್ನು ಗಳಿಸಿ ಮ್ಯಾಜಿಕ್‌ ನಂಬರ್‌ 320 ಅನ್ನು ದಾಟುವ ಮೂಲಕ ಸರ್ಕಾರ ರಚನೆಗೆ ಮುಂದಾಗಿದೆ.

ಹಾಲಿ ಪ್ರಧಾನಿ ರಿಷಿ ಸುನಕ್‌(Rishi Sunak) ಅವರ ಪಕ್ಷ ಕನ್ಸರ್ವೇಟಿವ್‌ ಪಕ್ಷ ಭಾರೀ ಹಿನ್ನಡೆ ಅನುಭವಿಸಿದ್ದು, ಲೇಬರ್‌ ಪಕ್ಷದ ಕೀರ್‌ ಸ್ಟಾರ್ಮರ್‌(Keir Starmer) ಅವರಿಗೆ ಪ್ರಧಾನಿ ಗಿಟ್ಟಿದೆ. ಇನ್ನು


ಫಲಿತಾಂಶ ಹೊರ ಬೀಳುತ್ತಿದ್ದಂತೆ ರಿಶಿ ಸುನಕ್‌ ಪ್ರತಿಕ್ರಿಯಿಸಿದ್ದು, ಈ ಸೋಲಿನ ಜವಾಬ್ದಾರಿಯನ್ನು ತಾವು ಹೊತ್ತುಕೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೇ ಲೇಬರ್‌ ಪಕ್ಷದ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಲೇಬರ್ ಪಕ್ಷವು ಈ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದೆ ಮತ್ತು ಅವರ ವಿಜಯಕ್ಕಾಗಿ ಅಭಿನಂದಿಸಲು ನಾನು ಸರ್ ಕೀರ್ ಸ್ಟಾರ್ಮರ್‌ಗೆ ಕರೆ ಮಾಡಿದ್ದೇನೆ. ಇಂದು, ಅಧಿಕಾರವು ಶಾಂತಿಯುತವಾಗಿ ಮತ್ತು ಕ್ರಮಬದ್ಧವಾಗಿ ಅಧಿಕಾರ ಹಸ್ತಾಂತರಗೊಂಡಿದೆ. ಎಲ್ಲಾ ಕಡೆಯಿಂದಲೂ ಸದ್ಭಾವನೆ ಇರುತ್ತದೆ. ಇದು ನಮ್ಮ ದೇಶದ ಸ್ಥಿರತೆ ಮತ್ತು ಭವಿಷ್ಯದ ಬಗ್ಗೆ ನಮಗೆಲ್ಲರಿಗೂ ವಿಶ್ವಾಸವನ್ನು ನೀಡುವ ವಿಷಯವಾಗಿದೆ ಎಂದು ಹೇಳಿದ್ದಾರೆ.

ಪಕ್ಷಗಳ ಬಲಾಬಲ ಹೇಗಿದೆ?

ಇನ್ನು ಕಣದಲ್ಲಿರುವ ಪಕ್ಷಗಳ ಬಲಾಬಲ ಹೇಗಿದೆ ಎಂದು ನೋಡುವುದಾದರೆ,

ಕನ್ಸರ್ವೇಟಿವ್‌ ಪಕ್ಷ ಕೇವಲ – 81

ಲೇಬರ್ ಪಾರ್ಟಿ - 360

ಸ್ಕಾಟಿಷ್ ನ್ಯಾಶನಲಿಸ್ಟ್ ಪಾರ್ಟಿ (SNP) - 3

ಲಿಬರಲ್ ಡೆಮೋಕ್ರಾಟ್‌ಗಳು - 49

ರಿಫಾರ್ಮ್‌ ಯುಕೆ - 3

ಇತರೆ - 1

ಎಕ್ಸಿಟ್‌ ಪೋಲ್‌ ಭವಿಷ್ಯ ಏನು?


ಇನ್ನು ಚುನಾವಣಾ ಪೂರ್ವ ಸಮೀಕ್ಷೆಗಳು ಕನ್ಸರ್ವೇಟಿವ್‌ ಪಕ್ಷ ಈ ಬಾರಿ ಸೋಲುವುದು ಖಚಿತ ಎಂಬ ಭವಿಷ್ಯ ನುಡಿದಿತ್ತು. ಈ ಬಾರಿ ಕನ್ಸರ್ವೇಟಿಕವ್‌ ಪಕ್ದ್ ಸ್ಥಾನ 131ಕ್ಕೆ ಇಳಿಯಲಿದ್ದು, ಲೇಬರ್‌ ಪಕ್ಷ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾಕ್ಕೆ ಬರಲಿದೆ ಎಂದು ಹೇಳಿದೆ. ಹಾಗಿದ್ದರೆ ಎಕ್ಸಿಟ್‌ ಪೋಲ್‌ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು ದೊರೆಯಲಿದೆ ನೋಡೋಣ.


ಕನ್ಸರ್ವೇಟಿವ್‌: 131

ಲೇಬರ್ ಪಕ್ಷ: 410

ಲಿಬರಲ್ ಡೆಮೋಕ್ರಾಟ್‌ಗಳು: 61

ಸ್ಕಾಟಿಷ್ ನ್ಯಾಶನಲಿಸ್ಟ್ ಪಾರ್ಟಿ (SNP): 10

ರಿಫಾರ್ಮ್ ಯುಕೆ: 13

ಪ್ಲೈಡ್ ಸಿಮ್ರು: 4

ಗ್ರೀನ್ಸ್: 2

ರಿಷಿ ಸುನಕ್‌ಗೆ ಆಡಳಿತ ವಿರೋಧಿ ಅಲೆ

44 ವರ್ಷದ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದು, 61 ವರ್ಷದ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಾರ್ಟಿಗಿಂತ ಕಳೆದ 6 ವಾರಗಳ ಪ್ರಚಾರದಲ್ಲಿ ಅತ್ಯಂತ ಹಿಂದುಳಿದಿದ್ದಾರೆ. ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್‌ನಾದ್ಯಂತ 650 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ, ಮೊದಲ ಬಾರಿಗೆ ಪೋಸ್ಟ್ ಸಿಸ್ಟಮ್‌ನಲ್ಲಿ ಬಹುಮತಕ್ಕೆ 326 ಮತಗಳ ಅಗತ್ಯವಿದೆ.

 Share: | | | | |


ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್.ಐ ರಾಮ ನಾಯ್ಕ ಅವರಿಗೆ ಸೇವಾ ನಿವೃತ್ತಿ

Posted by Vidyamaana on 2023-08-31 10:03:19 |

Share: | | | | |


ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್.ಐ ರಾಮ ನಾಯ್ಕ ಅವರಿಗೆ ಸೇವಾ ನಿವೃತ್ತಿ

ಪುತ್ತೂರು:ಪುತ್ತೂರು ನಗರ ಪೊಲೀಸ್ ಠಾಣೆ ಎಸ್ ಐ ರಾಮ ನಾಯ್ಕ ಅವರು ಆ.31ರಂದು ನಿವೃತ್ತಿ ಹೊಂದಲಿದ್ದಾರೆ.


1989ರಲ್ಲಿ ಪಾಂಡೇಶ್ವರ ಠಾಣೆಯಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ಅವರು ಬಳಿಕ ಬಂದಾರು, ಅರಣ್ಯ ಸಂಚಾರಿ ದಳ, ಪುತ್ತೂರು ನಗರ ಪೊಲೀಸ್‌ ಠಾಣೆ, ಬಂಟಾಳ್ವ ಪೊಲೀಸ್‌ ಠಾಣೆ, ಪುಂಜಾಲಕಟ್ಟೆ, ಧರ್ಮಸ್ಥಳ, ಕೊಲ್ಲೂರು, ಬಂಟ್ವಾಳ ಮತ್ತು ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದುತ್ತಿದ್ದಾರೆ

ಪುತ್ತೂರು: ಖ್ಯಾತ ಪಾಕತಜ್ಞ ಖಾದರ್ ಕೆರೆಮೂಲೆ ಹೃದಯಾಘಾತದಿಂದ ನಿಧನ

Posted by Vidyamaana on 2023-09-27 20:39:28 |

Share: | | | | |


ಪುತ್ತೂರು: ಖ್ಯಾತ ಪಾಕತಜ್ಞ ಖಾದರ್ ಕೆರೆಮೂಲೆ ಹೃದಯಾಘಾತದಿಂದ ನಿಧನ

ಪುತ್ತೂರು: ಸಾಲ್ಮರ ನಿವಾಸಿ ಅಬ್ದುಲ್ ಖಾದರ್ ಕೆರೆಮೂಲೆ ಯವರು ಹೃದಯಾಘಾತದಿಂದ ಸೆ. 27ರಂದು ನಿಧನರಾದರು. 

ನುರಿತ ಪಾಕತಜ್ಞರಾಗಿದ್ದ ಅವರು, ಉಪ್ಪಿನಂಗಡಿ ಸಮೀಪದ ಕುದ್ರಡ್ಕ ಮಸೀದಿ ಕಾರ್ಯಕ್ರಮವೊಂದರಲ್ಲಿ ಅಡುಗೆ ಕೆಲಸದಲ್ಲಿ ತೊಡಗಿಕೊಂಡಿರುವಾಗಲೇ ಕುಸಿದು ಬಿದ್ದು ನಿಧನರಾದರು.

ಅವರ ಅಂತಿಮ ವಿಧಿವಿಧಾನ ಸೆ. 28ರಂದು ಬೆಳಗ್ಗಿನ ನಮಾಝ್ ನ ನಂತರ ನಡೆಯಲಿದೆ. ಬೆಳಿಗ್ಗೆ 7ಕ್ಕೆ ಮಯ್ಯತ್ ನಮಾಝ್ ಮಾಡಿದ ನಂತರ ಸೈಯ್ಯದ್ ಮಲೆಯಲ್ಲಿ ದಫನ ಕಾರ್ಯ ಮಾಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಪುರುಷರಕಟ್ಟೆ ಮದ್ರಸ ವಠಾರದಲ್ಲಿ ಧಾರ್ಮಿಕ ಮತಪ್ರವಚನ ಕಾರ್ಯಕ್ರಮ

Posted by Vidyamaana on 2024-02-04 09:14:39 |

Share: | | | | |


ಪುರುಷರಕಟ್ಟೆ ಮದ್ರಸ ವಠಾರದಲ್ಲಿ ಧಾರ್ಮಿಕ ಮತಪ್ರವಚನ ಕಾರ್ಯಕ್ರಮ

ಪುತ್ತೂರು: ನಾನೇ ಶ್ರೇಷ್ಠ, ನನ್ನ ಧರ್ಮ ಮಾತ್ರ ಶ್ರೇಷ್ಠ ಉಳಿದವು ಶೂನ್ಯ ಎಂಬ ಭಾವನೆ ನಮ್ಮಲ್ಲಿ ಇರಬಾರದು, ಎಲ್ಲಾ ಧರ್ಮಗಳು ಒಳಿತನ್ನೇ ಕಲಿಸಿಸುತ್ತದೆ, ಧರ್ಮಗಳ ಬಗ್ಗೆ ಪರಸ್ಪರ ಅರಿತುಕೊಂಡಲ್ಲಿ ಸಮಾಜದಲ್ಲಿ ಸೌಹಾರ್ಧತೆಯನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.


ಅವರು ಪುರುಷರಕಟ್ಟೆ ಮದ್ರಸ ವಠಾರದಲ್ಲಿ ನಡೆಯುತ್ತಿರುವ ಧಾರ್ಮಿಕ ಮತಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಮಕ್ಕಳಿಗೆ ಸಣ್ಣ ಪ್ರಾಯದಲ್ಲೇ ನಮ್ಮ ಧರ್ಮದ ಆಚಾರ ವಿಚಾರಗಳನ್ನು ಕಲಿಸಬೇಕು. ತನ್ನ ಧರ್ಮವನ್ನು ಅರಿತುಕೊಳ್ಳುವುದರ ಜೊತೆಗೆ ಸಹೋದರ ಧರ್ಮದ ಬಗ್ಗೆ ಅರಿವು ಮೂಡಿಸಿಕೊಂಡಲ್ಲಿ ಪರಸ್ಪರ ಜ್ಞಾನ ವೃದ್ದಿಯಾಗುತ್ತದೆ. ಧರ್ಮದ ಬಗ್ಗೆ ತಿಳುವಳಿಕೆಯ ಕೊರತೆಯಿಂದಲೇ ಇಂದು ಸಮಾಜದಲ್ಲಿ ಧರ್ಮ ದಂಗಲ್‌ಗಳು ನಡೆಯುತ್ತದೆ ಎಂದು ಹೇಳಿದರು. ಭಾರತ ವಿಸ್ವ ಗುರುವಾಗಬೇಕಾದರೆ ದೇಶದಲ್ಲಿ ಸೌಹಾರ್ಧತೆ ನೆಲಸಬೇಕು. ಸೌಹಾರ್ಧತೆಯ ಭಾಷಣ ಮಾಡಿದ ಮಾತ್ರಕ್ಕೆ ಭಾರತ ವಿಶ್ವಗುರುವಾಗಲು ಸಾಧ್ಯವಿಲ್ಲ. ದೇಶದಲ್ಲಿರುವ ಎಲ್ಲಾ ಧರ್ಮದ ಸಹೋದರರು ಅಣ್ಣ ತಮ್ಮಂದಿರಂತೆ ಬಾಳಿದರೆ ಮಾತ್ರ ನಾವು ವಿಶ್ವಕ್ಕೆ ಗುರುವಾಗಲು ಸಾಧ್ಯವಾಗುತ್ತದೆ. ಧರ್ಮ, ಜಾತಿ ಹೆಸರಿನಲ್ಲಿ ಯಾರೂ ಕಚ್ಚಾಟ ಮಾಡಬಾರದು. ಎಲ್ಲರೂ ಉಸಿರಾಡುವ ಗಾಳಿಯೊಂದೇ, ರಕ್ತವೂ ಒಂದೇ ಹೀಗಿರುವಾಗ ನಾವು ವಿಭಜನೆಯ ಹಾದಿಯನ್ನು ಹಿಡಿಯಬಾರದು.ಜನರು ಪರಸ್ಪರ ಹತ್ತಿರವಾದಾಗ ಮಾತ್ರ ಎಲ್ಲವನ್ನೂ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ಭರತ ಭೂಮಿಯಲ್ಲಿ ಸಾಧನೆ ಮಾಡಿದವರು ಯಾರೂ ಇಲ್ಲ ಎಂದು ಹೇಳಿದರು.


ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಎಲ್ಲರನ್ನೂ ಪ್ರೀತಿಸುವುದೇ ಹಿಂದುತ್ವವಾಗಿದೆ.ಅನ್ಯ ಧರ್ಮದವರನ್ನು ದ್ವೇಷಿಸುವುದು ಹಿಂದುತ್ವ ಎಂದು ನಂಬಿಕೊಂಡ ಅಲ್ಪಜ್ಞಾನಿಗಳು ನಮ್ಮೊಳಗಿದ್ದಾರೆ. ಪರಸ್ಪರ ಸಾಹೋದರ್ಯ ಭಾನವೆಯಿದ್ದಲ್ಲಿ ಮಾತ್ರ ನಾವು ಮನುಷ್ಯರಾಗಲು ಸಾಧ್ಯವಾಗುತ್ತದೆ. ಮಾನವೀಯ ಧರ್ಮವೇ ಶ್ರೇಷ್ಟ ಎಂಬ ಭಾವನೆ ನಮ್ಮಲ್ಲಿ ಮಾಡಿದಾಗ ಸಹೋದರತ್ವ ಮೂಡುತ್ತದೆ ಅದು ಇಲ್ಲದವರು ಮನುಷ್ಯರಾಗಲು ಸಾಧ್ಯವಿಲ್ಲ ಎಂದು ಹೇಳಿದರು.


ವೇದಿಕೆಯಲ್ಲಿ ಧಾರ್ಮಿಕ ಮುಖಂಡರುಗಳು ಉಪಸ್ಥಿತರಿದ್ದರು.

ಊರಿಗೆ ತೆರಳಲು ಹಣ ಇಲ್ಲ ಎಂದು ಕಚೇರಿಗೆ ಬಂದ ಅಂಧ ಯುವಕ

Posted by Vidyamaana on 2023-08-03 03:50:29 |

Share: | | | | |


ಊರಿಗೆ ತೆರಳಲು ಹಣ ಇಲ್ಲ ಎಂದು ಕಚೇರಿಗೆ ಬಂದ ಅಂಧ ಯುವಕ

ಪುತ್ತೂರು: ನಾನು ಬೀದರ್ ಜಿಲ್ಲೆಯ ಬಾಲ್ಕಿ ನಿವಾಸಿ ಕಲ್ಲಪ್ಪ. ಊರು ಸುತ್ತುವ ಅಲೆಮಾರಿ ಯುವಕ, ನನ್ನಲ್ಲಿ ಉಚಿತ ಬಸ್ ಪಾಸ್ ಇತ್ತು ಅದನ್ನು ಕಳೆದುಕೊಂಡಿದ್ದೇನೆ.ನನಗೆ ಊರಿಗೆ ಹೋಗಲು ನನ್ನಲ್ಲಿ ನಯಾ ಪೈಸೆ ಇಲ್ಲ ನನಗೆ ಸಹಾಯ ಮಾಡಿ, ನೀವು ಬಡವರಿಗೆ ಸಹಾಯ ಮಾಡುತ್ತೀರಿ ಎಂದು ಯಾರೋ ನನ್ನನ್ನು ಇಲ್ಲಿಗೆ ತಂದು ಬಿಟ್ಟಿದ್ದಾರೆ. ದಯವಿಟ್ಟು ನನಗೆ ನೆರವು ನೀಡಿ ಎಂದು ಅಂಧ ಯುವಕ ಪುತ್ತೂರು ಶಾಸಕರ ಕಚೇರಿಯಲ್ಲಿ ಬಂದು ಕೇಳಿಕೊಂಡಿದ್ದಾನೆ.

ಯುವಕನ ನೋವನ್ನು ಆಲಿಸಿದ ಶಾಸಕರು ನಿನಗೆ ಎಷ್ಟು ಹಣ ಬೇಕು ನಾನು ಕೊಡುತ್ತೇನೆ, ಸುರಕ್ಷಿತವಾಗಿ ಊರಿಗೆ ಹೋಗಿ ಎಂದು ಅಂಧ ಯುವಕ ಊರಿಗೆ ಹೋಗಲು ಅವನು ಕೇಳಿದಷ್ಟು ಹಣ ನೀಡುವ ಮೂಲಕ ಮಾನವೀಯತೆ ಮೆರೆದರು. ಎಲ್ಲಿಂದಲೋ ಬಂದ ಯುವಕ ಶಾಸಕರ ಬಳಿ ಹಣ ಕೇಳಿದಾಗ ಆತನ ಪೂರ್ವಾ ಪರ ವಿಚಾರಿಸದೆ ಆತ ಬಡವನಾದ ಕಾರಣ ನನ್ನ ಬಳಿ ಬಂದಿದ್ದಲ್ವ ಆತನಿಗೆ ಸಹಾಯ ಮಾಡುವುದು ನನ್ನ ಧರ್ಮ ಎಂದು ಶಾಸಕರು ಈ ವೇಳೆ ಹೇಳಿದರು. ಕಚೇರಿಯಲ್ಲಿ ಸೇರಿದ್ದ ಸಾರ್ವಜನಿಕರು‌ ಶಾಸಕರ ಮಾನವೀಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಳ್ತಂಗಡಿ ರಿಕ್ಷಾ ಢಿಕ್ಕಿ: ಮೂರು ವರ್ಷದ ಮಗು ಕೌಶಿಕ್ ಮೃತ್ಯು

Posted by Vidyamaana on 2024-03-17 07:54:31 |

Share: | | | | |


ಬೆಳ್ತಂಗಡಿ ರಿಕ್ಷಾ ಢಿಕ್ಕಿ: ಮೂರು ವರ್ಷದ ಮಗು ಕೌಶಿಕ್ ಮೃತ್ಯು

ಬೆಳ್ತಂಗಡಿ: ಸೋಣಂದೂರು ಪಣಕಜೆಯಲ್ಲಿ ರಿಕ್ಷಾ ಢಿಕ್ಕಿ ಹೊಡೆದು ಮೂರು ವರ್ಷದ ಮಗು ಮೃತಪಟ್ಟ ಘಟನೆ ಶನಿವಾರ ಸಂಭವಿಸಿದೆ.ಕೌಶಿಕ್ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ.


ಮುಂಡಾಡಿಯಲ್ಲಿ ಚಂದ್ರಶೇಖ‌ರ್ ಅವರ ಮನೆ ರಸ್ತೆಯ ಹತ್ತಿರವಿದ್ದು, ಮನೆಯಲ್ಲಿದ್ದ ಮಗು ಮನೆಯವರು ನೋಡದೆ ಓಡಿ ರಸ್ತೆಗೆ ಬಂದಿದೆ ಎನ್ನಲಾಗುತ್ತಿದ್ದು, ಈ ಸಂದರ್ಭ ಮಗುವಿಗೆ ರಿಕ್ಷಾ ತಾಗಿ ಗಂಭೀರ ಗಾಯಗೊಂಡಿದ್ದು, ಮಗುವನ್ನು ಕೂಡಲೇ ಉಜಿರೆ ಖಾಸಗಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ದರೂ, ಯಾವುದೇ ಪ್ರಯೋಜನವಾಗದೆ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೆ 06: ಬೊಳುವಾರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಲೇಸರ್ ಸ್ಟೋನ್ ಕ್ಯಾಂಪ್

Posted by Vidyamaana on 2024-02-05 15:54:33 |

Share: | | | | |


ಫೆ 06: ಬೊಳುವಾರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಲೇಸರ್ ಸ್ಟೋನ್ ಕ್ಯಾಂಪ್

ಪುತ್ತೂರು: ಬೊಳುವಾರಿನಲ್ಲಿರುವ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫೆ.6ರಂದು ಸಾಯಂಕಾಲ 5.30ರಿಂದ ಉಚಿತ ಲೇಸರ್ ಸ್ಟೋನ್ ಕ್ಯಾಂಪ್ ನಡೆಯಲಿದೆ.


ಖ್ಯಾತ ಮೂತ್ರಶಾಸ್ತ್ರಜ್ಞ ಡಾ. ಅಭೀಷ್ ಹೆಗ್ಡೆರವರು ತಪಾಸಣೆ ನಡೆಸಲಿದ್ದಾರೆ. ಈ ಆನ್ ಲೈನ್ ನ್ಯೂಸ್ ಸಂದರ್ಭದಲ್ಲಿ ಎಲ್ಲಾ ರೀತಿಯ ಮೂತ್ರ ಕಲ್ಲಿನ ಮತ್ತು ಪ್ರಾಸ್ಟೇಟ್‌ನ ಲೇಸರ್ ಚಿಕಿತ್ಸೆಗೆ ಸಂಬಂದಪಟ್ಟ ತಪಾಸಣೆ ನಡೆಯಲಿದೆ.


ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ನೋಂದಾವಣೆಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9449991115, 9188656671ಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Recent News


Leave a Comment: