ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಸುದ್ದಿಗಳು News

Posted by vidyamaana on 2024-07-25 09:34:49 |

Share: | | | | |


ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಬೆಂಗಳೂರು : ಕೋರಮಂಗಲದ ಲೇಡಿಸ್ ಪಿಜಿ ಒಳಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದ್ದು, ಈ ಬಗ್ಗೆ ಪೊಲೀಸರು ಮಹತ್ವದ ಮಾಹಿತಿ ನೀಡಿದ್ದಾರೆ. ಮೃತ ಯುವತಿಯನ್ನು ಬಿಹಾರದ ಕೃತಿ ಕುಮಾರಿ‌ (24) ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯತಮನೇ ಕೊಲೆಗಾರ ಎಂದು ಪೊಲೀಸರು ತಿಳಿಸಿದ್ದಾರೆ .

ಕೃತಿ ಕುಮಾರಿ ತಾನು ಪ್ರೀತಿಸುತ್ತಿದ್ದ ಯುವಕನಿಂದಲೇ ಕೊಲೆಯಾಗಿದ್ದಾರೆ. ರಾತ್ರಿ 11:30ಕ್ಕೆ ಕೃತಿ ಕುಮಾರಿಯೇ ಯುವಕನನ್ನು ಕರೆದುಕೊಂಡು ಬಂದಿರುವ ಬಗ್ಗೆ ಮೇಲ್ನೋಟಕ್ಕೆ ಮಾಹಿತಿ ಸಿಕ್ಕಿದೆ. ಪಿಜಿಯಿಂದ ಹೊರ ಬಂದ ಕೃತಿ ತನ್ನ ಪ್ರಿಯತಮನ ಜತೆ ರಾತ್ರಿ ಊಟ ಮಾಡಿದ್ದರು. ಊಟ ಮುಗಿಸಿದ ಕೃತಿ ತನ್ನೊಂದಿಗೆ ಯುವಕನ್ನು ಪಿಜಿಗೆ ಕರೆತಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೃತಿಯ ರೂಂಗೆ ಆಗಮಿಸಿದ್ದ ವೇಳೆ ಇಬ್ಬರ ಮಧ್ಯೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ಇದೆ.

ಪಿಜಿಯ ಸಿಸಿಟಿವಿ ಎಲ್ಲವನ್ನು ಕೂಡ ಪರಿಶೀಲನೆ ನಡೆಸಿದ್ದೇವೆ. ಪಿಜಿಯ ನಿರ್ಲಕ್ಷ್ಯತನದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿ ಪತ್ತೆಗಾಗಿ ಪೊಲೀಸರ ವಿಶೇಷ ತಂಡವನ್ನ ರಚನೆ ಮಾಡಲಾಗಿದೆ ಎಂದಿದ್ದಾರೆ

 Share: | | | | |


ಬೆಟ್ಟಂಪಾಡಿ: ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಶಂಕುಸ್ಥಾಪನೆ

Posted by Vidyamaana on 2022-12-16 13:44:26 |

Share: | | | | |


ಬೆಟ್ಟಂಪಾಡಿ: ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಶಂಕುಸ್ಥಾಪನೆ


ಪುತ್ತೂರು: ಲೋಕೋಪಯೋಗಿ ವಿಶೇಷ ಅನುದಾನದಲ್ಲಿ ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಚೆಲ್ಯಡ್ಕ ಪುಳಿತ್ತಡಿ ರಸ್ತೆ ಕಾಮಗಾರಿಗೆ 10 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಶಾಸಕ ಸಂಜೀವ ಮಠಂದೂರು ಅವರು ಡಿ. 16ರಂದು ಶಂಕುಸ್ಥಾಪನೆ ನೆರವೇರಿಸಿದರು. ಶಕ್ತಿ ಕೇಂದ್ರದ  ಅಧ್ಯಕ್ಷ ಜಗನಾಥ್ ರೈ ಕೋರ್ಮಂಡ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ್, ಬೆಂದ್ರ್ ತೀರ್ಥ ಶಿವಾಜಿ ಫ್ರೆಂಡ್ ಕಾರ್ಯಕರ್ತರು PLD ಬ್ಯಾಂಕ್ ಸದಸ್ಯ ಪ್ರವೀಣ್ ರೈ , ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.

ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್‌ : ರಾಜ್ಯ ಸರ್ಕಾರದಿಂದ ಮನೆ ಬಾಗಿಲಿಗೆ ಆರೋಗ್ಯ ಸೇವೆ, ಔಷಧ ವಿತರಣೆ

Posted by Vidyamaana on 2024-06-03 08:28:45 |

Share: | | | | |


ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್‌ : ರಾಜ್ಯ ಸರ್ಕಾರದಿಂದ ಮನೆ ಬಾಗಿಲಿಗೆ ಆರೋಗ್ಯ ಸೇವೆ, ಔಷಧ ವಿತರಣೆ

ಹುಬ್ಬಳ್ಳಿ : ರಾಜ್ಯ ಕಾಂಗ್ರೆಸ್‌ ಸರ್ಕಾರವು ರಾಜ್ಯದ ಜನತೆಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಮನೆ ಬಾಗಿಲಿಗೆ ಆರೋಗ್ಯ ಸೇವೆ ಪೂರೈಸಲು ಮುಂದಾಗಿದೆ.

ಹೌದು, ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಮನೆ ಬಾಗಿಲಿಗೆ ಆರೋಗ್ಯ ಸೇವೆ, ಔಷಧ ಪೂರೈಸಲು ನಮ್ಮ ಸರ್ಕಾರ ಮುಂದಾಗಿದೆ.

ಪ್ರೇಮಿಗಳ ಬೆಡ್ ರೂಂ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್ ಮೇಲ್ - ಮಂಗಳೂರು ಶೆಟ್ಟಿ ಲಂಚ್ ಹೋಂ ನ ಪಾರ್ಟ್ನರ್ಸ್ ಬಂಧನ.

Posted by Vidyamaana on 2023-09-15 16:11:05 |

Share: | | | | |


ಪ್ರೇಮಿಗಳ ಬೆಡ್ ರೂಂ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್ ಮೇಲ್ - ಮಂಗಳೂರು ಶೆಟ್ಟಿ ಲಂಚ್ ಹೋಂ ನ ಪಾರ್ಟ್ನರ್ಸ್ ಬಂಧನ.

ಬೆಂಗಳೂರು : ಪ್ರೇಮಿಗಳ ಖಾಸಗಿ ವಿಡಿಯೊ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡಿದ ಜೋಡಿಯನ್ನು ಬಂಧಿಸಲಾಗಿದೆ.


ಎಂಬಿಎ ಪದವೀಧರೆ ವಿದ್ಯಾರ್ಥಿನಿಯೊಬ್ಬರಿಗೆ ಇವರೇ ರೂಮ್‌ ನೀಡಿ ಬ್ಲಾಕ್‌ಮೇಲ್ ಮಾಡಿರುವುದು ಪತ್ತೆಯಾಗಿದೆ.ನಯನಾ ಹಾಗೂ ಕಿರಣ್ ಬಂಧಿತರು. ಇವರಿಬ್ಬರೂ ಕೆಂಚನಾಪುರದಲ್ಲಿ ಶೆಟ್ಟಿ ಲಂಚ್ ಹೋಮ್ ಎಂಬ ಹೋಟೆಲ್ ನಡೆಸುತ್ತಿದ್ದರು.ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಶೆಟ್ಟಿ ಲಂಚ್ ಹೋಮ್ ಹೋಟೆಲ್ ನಲ್ಲಿ ಪ್ರೇಮಿಗಳಿಗೆ ರೂಮ್​ ನೀಡಲಾಗಿತ್ತು. ಆದ್ರೆ, ರೂಮ್​ನಲ್ಲಿ ರಹಸ್ಯವಾಗಿ‌ ಕ್ಯಾಮೆರಾ ಅಡಗಿಸಿ ಇಟ್ಟಿದ್ದರು. ಬಳಿಕ ನಯನಾ ಹಾಗೂ ಪಾರ್ಟರ್ ಕಿರಣ್ ಎನ್ನುವರು ಯುವತಿಗೆ ಬ್ಲ್ಯಾಕ್​ ಮೇಲ್ ಮಾಡಿ ಹಣಕ್ಕೆ ಪೀಡಿಸುತ್ತಿದ್ದರು.ಒಂದು ಲಕ್ಷ ಹಣಕ್ಕೆ ನೀಡಬೇಕು. ಹಣ ಕೊಡದಿದ್ರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡ್ತೀನಿ. ನಿಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಕಳುಹಿಸುತ್ತೇನೆ ಎಂದು ಕಿರಣ್ ಬೆದರಿಕೆ ಹಾಕಿದ್ದ.


ನಯನಾ ಹಾಗೂ ಕಿರಣ್ ಜೊತೆಯಾಗಿ ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಕೆಂಚನಾಪುರದಲ್ಲಿ ಶೆಟ್ಟಿ ಲಂಚ್ ಹೋಮ್ ಹೋಟೆಲ್ ಆರಂಭಿಸಿದ್ದರು. ಅದೇ ಹೋಟೆಲ್​ಗೆ ನಯನಾ ಸಂಬಂಧಿ ಯುವತಿ(ಬ್ಲ್ಯಾಕ್​ ಮೇಲ್​ ಪ್ರಕರಣದ ಸಂತ್ರಸ್ಥೆ) ಆಗಾಗ ತನ್ನ ಪ್ರಿಯಕರ ಜೊತೆ ಬರುತ್ತಿದ್ದಳು. ವೇಳೆ ಹೋಟೆಲ್ ರೂಮ್ ನಲ್ಲಿ ಇರುವಂತೆ ಹೇಳಿದ್ದ ನಯನಾ, ಬಳಿಕ ಇಬ್ಬರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಳು. ನಂತರ ಅವರೇ ರೂಮ್ ಕೊಟ್ಟು ಅವರೆ ಬೀಸಿದ್ದು, ಅಶ್ಲೀಲವಾಗಿ ಎಡಿಟ್ ಮಾಡಿ‌ ಯುವತಿಗೆ ಆರೋಪಿ ಕಿರಣ್, ವಾಟ್ಸಪ್​ ಮಾಡಿ ಒಂದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕೋದಾಗಿ ಬೆದರಿಸುತ್ತಿದ್ದ.ಇದರಿಂದ ಯುವತಿ ಹೆದರಿಕೊಂಡು ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ಇದೀಗ ಈ ದೂರಿನ ಆಧಾರ ಮೇಲೆ ಪೊಲೀಸರು ನಯನಾ ಹಾಗೂ ಕಿರಣ್​ನನ್ನು ಬಂಧಿಸಿದ್ದಾರೆ. ಅಲ್ಲದೇ ಮೊಬೈಲ್ ವಶಕ್ಕೆ ಪಡೆದು ಯುವತಿಯ ವಿಡಿಯೋ ಡಿಲೀಟ್ ಮಾಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಬೈಯುವ ಆಡಿಯೋ ವೈರಲ್‌: ಪೊಲೀಸ್ ಆಯುಕ್ತರಿಗೆ ದೂರು

Posted by Vidyamaana on 2023-04-20 03:27:37 |

Share: | | | | |


ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್  ಗೆ ಬೈಯುವ ಆಡಿಯೋ ವೈರಲ್‌: ಪೊಲೀಸ್ ಆಯುಕ್ತರಿಗೆ ದೂರು

ಮಂಗಳೂರು: ಸಂಸದ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ವ್ಯಕ್ತಿಯೋರ್ವ ಏಕವಚನದಲ್ಲಿ ಅವಾಚ್ಯವಾಗಿ ಬೈಯುವ ಆಡಿಯೋ ವೈರಲ್‌ ಆಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ನಳಿನ್‌ 2019ರ ಲೋಕಸಭಾ ಚುನಾವಣೆ ಯಲ್ಲಿ ಗೆದ್ದ ಸಂದರ್ಭ ಮುಸ್ಲಿಂ ಧರ್ಮಗುರು ಗಳು ತಮ್ಮ ಬೆಂಬಲಿಗರೊಂದಿಗೆ ನಳಿನ್‌ ಅವರಲ್ಲಿಗೆ ಆಗಮಿಸಿ ಹೂಗುತ್ಛ ನೀಡಿ ಅಭಿನಂದಿಸಿ

ಫೋಟೋ ತೆಗೆಸಿಕೊಂಡಿದ್ದರು.ಆದರೆ ಈಗ ಯಾರೋ ದುಷ್ಕರ್ಮಿ ಆ ಫೋಟೋವನ್ನು ಜಾಲತಾಣದಲ್ಲಿ ಹಾಕಿ ಅದರೊಂದಿಗೆ ನಳಿನ್‌ ಅವರಿಗೆ ಏಕವಚನದಲ್ಲಿ, ಅವಾಚ್ಯ ಶಬ್ದ ಗಳಿಂದ ಬೈಯುವ ಆಡಿಯೋ ವೈರಲ್‌ ಮಾಡಿ ದ್ದಾನೆ. ಈ ಬಗ್ಗೆ ಬಿಜೆಪಿ ಕಾನೂನು ಪ್ರಕೋಷ್ಠ ದಿಂದ ಪೊಲೀಸರಿಗೆ ದೂರು ನೀಡಲಾಗಿದೆ. ದುಷ್ಕರ್ಮಿಯನ್ನು ಪತ್ತೆ ಹಚ್ಚಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಆಯುಕ್ತರನ್ನು ಒತ್ತಾಯಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ ಶೇಣವ ತಿಳಿಸಿದ್ದಾರೆ.

ಹತ್ಯೆಗೀಡಾದ ದೀಪಕ್- ಫಾಝಿಲ್ ಸೇರಿ 6 ಕುಟುಂಬಗಳಿಗೆ ಪರಿಹಾರ ಚೆಕ್ ವಿತರಿಸಿದ:ಸಿಎಂ

Posted by Vidyamaana on 2023-06-19 08:46:24 |

Share: | | | | |


ಹತ್ಯೆಗೀಡಾದ ದೀಪಕ್- ಫಾಝಿಲ್ ಸೇರಿ 6 ಕುಟುಂಬಗಳಿಗೆ ಪರಿಹಾರ ಚೆಕ್ ವಿತರಿಸಿದ:ಸಿಎಂ

ಬೆಂಗಳೂರು, ಜೂನ್ 19: ಸರ್ಕಾರ ಸರ್ವರಿಗೂ ಸೇರಿದ್ದು. ಬಿಡಿ ಬಿಡಿಯಾಗಿ ಒಂದು ಜಾತಿ, ಒಂದು ಧರ್ಮದ ಪರವಾಗಿ ವರ್ತಿಸುವುದು ಸಂವಿಧಾನ ವಿರೋಧಿ ಕೃತ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.


ಬಿಜೆಪಿ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಹತ್ಯೆಗೀಡಾದ ಮಸೂದ್, ಮಹಮ್ಮದ್ ಫಾಝಿಲ್, ಅಬ್ದುಲ್ ಜಲೀಲ್ ಹಾಗೂ ದೀಪಕ್ ರಾವ್, ಮಂಡ್ಯದ ಇದ್ರೀಸ್ ಪಾಶಾ, ನರಗುಂದದ ಶಮೀರ್ ಕುಟುಂಬದವರಿಗೆ 25 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು.


ಬಿಜೆಪಿಯ ದ್ವೇಷ ಮತ್ತು ತಾರತಮ್ಯದ ರಾಜಕಾರಣದ ವಿರುದ್ಧ ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಸದನದಲ್ಲೇ ಧ್ವನಿ ಎತ್ತಿದ್ದೆ. ಕೋಮುಗಲಭೆಗಳಿಗೆ ಬಲಿಯಾದ ಮೃತರ ಹೆಸರಲ್ಲೂ ಬಿಜೆಪಿ ತಾರತಮ್ಯ ನೀತಿಯನ್ನು ಅನುಸರಿಸಿತು. ಮೃತರ ಕುಟುಂಬದವರ ಕಣ್ಣೀರು ಒರೆಸುವುದು ಮತ್ತು ಪರಿಹಾರ ವಿತರಣೆಯಲ್ಲೂ ಹಿಂದಿನ ಸರ್ಕಾರ ತಾರತಮ್ಯವನ್ನು ಮೆರೆದಿತ್ತು. ಹಿಂದಿನ ಬಿಜೆಪಿ ಪರಿವಾರ ಮಾಡಿದ ತಾರತಮ್ಯವನ್ನು ಸರಿ ಪಡಿಸಿದ್ದೇವೆ ಎಂದರು.ನಮ್ಮ ಅವಧಿಯಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಮತಾಂಧರಿಗೆ, ಅನೈತಿಕ ಪೊಲೀಸ್ ಗಿರಿಗೆ, ಜಾತಿ-ಧರ್ಮದ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವವರಿಗೆ ತಕ್ಕ ಶಾಸ್ತಿ ಮಾಡ್ತೀವಿ. ಕಠಿಣ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಪುತ್ತೂರು ಶಾಸಕ ಅಶೋಕ್  ಕುಮಾರ್ ರೈ ಸಚಿವರಾದ ಚೆಲುವರಾಯಸ್ವಾಮಿ, ಝಮೀರ್ ಅಹಮದ್ ಖಾನ್, ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹಮದ್, ಗೋವಿಂದರಾಜು ಸೇರಿ ಇತರೆ ನಾಯಕರು ಉಪಸ್ಥಿತರಿದ್ದರು.

ರಸ್ತೆ ಅಪಘಾತ: ಗಾಯಾಳು ಪತ್ರಕರ್ತ ಪಾವ್ಲ್ ಬೆಂಜಮಿನ್‌ ಮೃತ್ಯು

Posted by Vidyamaana on 2023-07-13 10:01:24 |

Share: | | | | |


ರಸ್ತೆ ಅಪಘಾತ: ಗಾಯಾಳು ಪತ್ರಕರ್ತ ಪಾವ್ಲ್ ಬೆಂಜಮಿನ್‌ ಮೃತ್ಯು

ಮಂಗಳೂರು: ಬೆಂಗಳೂರಿನ ಸೈಂಟ್‌ ಪಾವ್ಲ್ ಸ್‌ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ ಪತ್ರಕರ್ತ ಪಾವ್ಲ್ ಬೆಂಜಮಿನ್‌ (27) ಅವರು ಜು.12ರಂದು ನಿಧನ ಹೊಂದಿದರು.ಮೈಸೂರು ಜಿಲ್ಲೆಯ ಕೊಳ್ಳೇಗಾಲ ಹನೂರು ಸಮೀಪದ ಲಾಸರದೊಡ್ಡಿ ನಿವಾಸಿಯಾಗಿದ್ದ ಅವರು ರಸ್ತೆ ಅಪಘಾತದಲ್ಲಿ ಗಾಯಗೊಂಡು ಕಳೆದ 25 ದಿನಗಳಿಂದ ಆಸ್ಪತ್ರೆಯಲ್ಲಿದ್ದರು.


ಮಂಗಳೂರಿನ ಸೈಂಟ್‌ ಅಲೋಶಿಯಸ್‌ ಕಾಲೇಜು ಮತ್ತು ಎಸ್‌ಡಿಎಂ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದರು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದರು 

ಮೃತರು ತಂದೆ, ತಾಯಿ ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ.



Leave a Comment: