KSRTC ಬಸ್-ಕಾರು ಡಿಕ್ಕಿ, ಕ್ರೈಸ್ಥ ಧರ್ಮಗುರು ಫಾ. ಆಂಥೋಣಿ ಪೀಟರ್ ಮೃತ್ಯು..

ಸುದ್ದಿಗಳು News

Posted by vidyamaana on 2024-07-24 17:11:55 |

Share: | | | | |


KSRTC ಬಸ್-ಕಾರು ಡಿಕ್ಕಿ, ಕ್ರೈಸ್ಥ ಧರ್ಮಗುರು ಫಾ. ಆಂಥೋಣಿ ಪೀಟರ್ ಮೃತ್ಯು..

ಶಿವಮೊಗ್ಗ : ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಕಾರು ಡಿಕ್ಕಿಯಾದ ಪರಿಣಾಮ ಕ್ರೈಸ್ತ ಧರ್ಮಗುರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಸಮೀಪ ಸವಳಂಗ ಚಿನ್ನಿಕಟ್ಟೆ ಬಳಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.ಕೆಎಸ್‌ಆರ್‌ಟಿಸಿ ಬಸ್ಸು ಹಾನಗಲ್‌ನಿಂದ ಶಿವಮೊಗ್ಗ ಕಡೆಗೆ ಹೋಗುತ್ತಿತ್ತುಎನ್ನಲಾಗಿದೆ.

ಕ್ರೈಸ್ತ ಧರ್ಮಗುರು ಇದ್ದ ಕಾರು ಶಿವಮೊಗ್ಗ ಕಡೆಯಿಂದ ತೆರಳುತ್ತಿತ್ತು. ಚಿನ್ನಿಕಟ್ಟೆ ಬಳಿ ಕಾರು, ಬಸ್ಸು ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದ ರಭಸಕ್ಕೆ ಕಾರು ರಸ್ತೆ ಪಕ್ಕದ ಜಮೀನಿಗೆ ಉರುಳಿ ಬಿದ್ದಿದ್ದು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಶಿಕಾರಿಪುರ ಧರ್ಮಕೇಂದ್ರದ ಧರ್ಮಗುರು ಆಂಥೋಣಿ ಪೀಟರ್‌ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು ನ್ಯಾಮತಿ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.

 Share: | | | | |


ಆ.14 ಶೀಂಟೂರು ನಾರಾಯಣ ರೈ ಸ್ಮರಣಾರ್ಥ 13ನೇ ವರ್ಷದ ಸ್ಥಾಪಕರ ದಿನಾಚರಣೆ

Posted by Vidyamaana on 2024-08-10 21:54:34 |

Share: | | | | |


ಆ.14 ಶೀಂಟೂರು ನಾರಾಯಣ ರೈ ಸ್ಮರಣಾರ್ಥ 13ನೇ ವರ್ಷದ ಸ್ಥಾಪಕರ ದಿನಾಚರಣೆ

ಪುತ್ತೂರು: ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸ್ಥಾಪಕ ಶೀಂಟೂರು ನಾರಾಯಣ ರೈಯವರ 13ನೇ ವರ್ಷದ ಸ್ಥಾಪಕರ ದಿನಾಚರಣೆ ಸವಣೂರು ವಿದ್ಯಾಗಂಗೋತ್ರಿಯ ವಿದ್ಯಾಚೇತನ ಸಭಾಂಗಣದಲ್ಲಿ ಆ. 14 ರಂದು ಬೆಳಿಗ್ಗೆ 10.00 ಗಂಟೆಗೆ ನಡೆಯಲಿದೆ ಎಂದು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈಯವರು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಸಂಸದ ಮಾಜಿ ಸೈನಿಕ ಕ್ಯಾ। ಬ್ರಿಜೇಶ್ ಚೌಟ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪ್ರತಿ ವರ್ಷದಂತೆ ನೀಡುವ ಶೀಂಟೂರು ಸನ್ಮಾನವನ್ನು ಈ ಭಾರಿ ಶಿಕ್ಷಕ್ಕೆ ಕ್ಷೇತ್ರಕ್ಕೆ ಮೀಸಲಿಟ್ಟು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾದ್ಯಾಯನಿ ರೂಪಕಲಾ ಕೆ ಅವರಿಗೆ ನೀಡಿ ಗೌರವಿಸಲಾಗುವುದು. ಇದೇ ಸಂದರ್ಭ ಸೇನೆಗೆ ನೀಡುವ ಗೌರವಾರ್ಥ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ನೀಡಿ ಗೌರವಿಸಲಾಗುವುದು. ಬಳ್ಳಾರಿ ಕುಮಾರಸ್ವಾಮಿ ಮಿನರಲ್ ಎಕ್ಸ್‌ಪೋರ್ಟ್ಸ್‌ನ ಮಾಲಕ ಮಲಾರ್‌ಬೀಡು ರವೀಂದ್ರನಾಥ ಆಳ್ವ, ಗುಜರಾತ್‌ನ ಗ್ರೀನ್ ಹೀರೋ ಆಫ್ ಇಂಡಿಯಾದ ಫಾರೆಸ್ಟ್ ಕ್ರಿಯೇಟರ್‌ನ ಸಹ ಸ್ಥಾಪಕ ಡಾ. ಆರ್ ಕೆ.ನಾಯರ್, ದ.ಕ. ಮತ್ತು ಉಡುಪಿ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ನಡುಮನೆ, ಸವಣೂರು ಎಸ್.ಎನ್.ಆರ್.ರೂರಲ್ ಎಜ್ಯುಕೇಶನ್ ಟ್ರಸ್ಟ್‌ನ ವಿಶ್ವಸ್ಥರಾಗಿರುವ ಎನ್ ಸುಂದರ ರೈ ನಡುಮನೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ

Posted by Vidyamaana on 2023-04-26 11:44:07 |

Share: | | | | |


ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ

 ಬೆಳ್ತಂಗಡಿ :ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿರುವ ಅರುಣ್ ಕುಮಾರ್ ಪುತ್ತಿಲ ಇವರು ಶ್ರೀ ಚಾಮುಂಡೇಶ್ವರಿ ಕ್ಷೇತ್ರಆರಿಕೋಡಿಗೆ ಬಂದು ಶ್ರೀದೇವಿ ಚಾಮುಂಡೇಶ್ವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ, ಧರ್ಮದರ್ಶಿಗಳ ಆಶೀರ್ವಾದವನ್ನು ಪಡೆದುಕೊಂಡರು.

ಶಿವಮೊಗ್ಗ ರಾಗಿಗುಡ್ಡದಲ್ಲಿ ಹಿಂಸಾಚಾರ ಅರುಣ್ ಪುತ್ತಿಲ ನೇತೃತ್ವದ ತಂಡ ಭೇಟಿ ನ್ಯಾಯಾಂಗ ತನಿಖೆಗೆ ಅರುಣ್‌ ಕುಮಾರ್‌ ಪುತ್ತಿಲ ಒತ್ತಾಯ

Posted by Vidyamaana on 2023-10-07 04:49:46 |

Share: | | | | |


ಶಿವಮೊಗ್ಗ ರಾಗಿಗುಡ್ಡದಲ್ಲಿ ಹಿಂಸಾಚಾರ  ಅರುಣ್ ಪುತ್ತಿಲ ನೇತೃತ್ವದ ತಂಡ ಭೇಟಿ ನ್ಯಾಯಾಂಗ ತನಿಖೆಗೆ ಅರುಣ್‌ ಕುಮಾರ್‌ ಪುತ್ತಿಲ ಒತ್ತಾಯ

ಹಾರ್ಟ್ ಅಟ್ಯಾಕ್ - ಹಾರ್ಟ್ ಫೈಲ್ಯೂರ್ - ಕಾರ್ಡಿಯಾಕ್ ಅರೆಸ್ಟ್: ಏನಿದೆ ವ್ಯತ್ಯಾಸ?


ಶಿವಮೊಗ್ಗ ರಾಗಿಗುಡ್ಡದಲ್ಲಿ ಈದ್ ಮಿಲಾದ್ ನಂತರ ಭಯಾನಕ ಹಿಂಸಾಚಾರ ನಡೆದ ಎಲ್ಲಾ ಮನೆಗಳಿಗೆ ಅರುಣ್ ಪುತ್ತಿಲ ನೇತೃತ್ವದ ತಂಡ ಭೇಟಿ ನೀಡಿತು. ರಾಗಿಗುಡ್ಡದಲ್ಲಿ ಈದ್ ಮಿಲಾದ್ ಹಬ್ಬ ಆಚರಣೆಯಲ್ಲಿ ಮತಾಂಧ ಟಿಪ್ಪು, ಔರಂಗಜೇಬನನ್ನು ವೈಭವೀಕರಿಸಿ ತಲವಾರು ತೋರಿಸಿ ಪೊಲೀಸರಿಗೆ ಕಲ್ಲುತೂರಾಟ ನಡೆಸಿ, ನೂರಾರು ಮನೆಗಳಿಗೆ ಹಾನಿ ಉಂಟು ಮಾಡಿದ ಪ್ರದೇಶಗಳಿಗೆ ಅರುಣ್‌ ಕುಮಾರ್‌ ಪುತ್ತಿಲ ಭೇಟಿ ಸಂತ್ರಸ್ತರಿಗೆ ಸಾಂತ್ವನ ತಿಳಿಸಿದರು.


ಶಿವಮೊಗ್ಗ ರಾಗಿಗುಡ್ಡದಲ್ಲಿ ಲಕ್ಷ್ಮೀ ಎಂಬವರು ತಾಳಿ ಅಡವಿಟ್ಟು ಆಟೋ ಖರೀದಿಸಿದ್ದು ಮತಾಂದರ ಕ್ರೂರತೆಗೆ ಆಟೋ ಜಖಂಗೊಂಡಿದೆ. ಹಲವು ಮನೆಗಳ ಕಿಟಕಿ, ಬಾಗಿಲು , ಗೋಡೆ ಜಖಂಗೊಂಡಿದೆ. ಸ್ವಂತ ವಿದ್ಯಾಭ್ಯಾಸ ಕಲಿಸಿದ ಶಿಕ್ಷಕಿ ಮನೆಗೆ ಅವರ ಶಿಷ್ಯಂದಿರೇ ಕಲ್ಲು ತೂರಾಟ ನಡೆಸಿದ್ದು ನೆನೆಸಿಕೊಂಡು ನಿವೃತ್ತ ಶಿಕ್ಷಕಿ ಬೇಸರ ವ್ಯಕ್ತಪಡಿಸಿದರು. ಈಗಲೂ ಹಿಂದೂಗಳು ಅಲ್ಲಿ ಭಯದ ವಾತಾವರಣದಲ್ಲಿ ಬದುಕು ಸವೆಸುತ್ತಿದ್ದಾರೆ. ಈ ಘಟನೆಯಲ್ಲಿ ಭಯೋತ್ಪಾದಕ ಬೆಂಬಲಿಗರ ಕೈವಾಡವಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಪುತ್ತಿಲ ತಂಡ ಹೇಳಿತು.

ಹಾರ್ಟ್ ಅಟ್ಯಾಕ್ - ಹಾರ್ಟ್ ಫೈಲ್ಯೂರ್ - ಕಾರ್ಡಿಯಾಕ್ ಅರೆಸ್ಟ್: ಏನಿದೆ ವ್ಯತ್ಯಾಸ?

ಸರ್ಕಾರ ಈ ಕ್ರೌರ್ಯ ಘಟನೆಯನ್ನು ಶೀಘ್ರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಮತ್ತು ಸಂತ್ರಸ್ಥರಿಗೆ ಸೂಕ್ತ ಭದ್ರತೆ ಹಾಗೂ ಪರಿಹಾರ ಒದಗಿಸಬೇಕು ಎಂದು ಅರುಣ್‌ ಕುಮಾರ್‌ ಪುತ್ತಿಲ ಒತ್ತಾಯಿಸಿದ್ದಾರೆ.

BREAKING:ಬೆಂಗಳೂರು ಕೆಫೆ ಸ್ಫೋಟ:ಮಾಸ್ಕ್ ಟೋಪಿ ಇಲ್ಲದ ಶಂಕಿತನ ಫೋಟೋ ಬಿಡುಗಡೆ

Posted by Vidyamaana on 2024-03-07 12:18:52 |

Share: | | | | |


BREAKING:ಬೆಂಗಳೂರು ಕೆಫೆ ಸ್ಫೋಟ:ಮಾಸ್ಕ್ ಟೋಪಿ ಇಲ್ಲದ ಶಂಕಿತನ ಫೋಟೋ ಬಿಡುಗಡೆ

ಬೆಂಗಳೂರು : ಬೆಂಗಳೂರು ಕೆಫೆ ಸ್ಫೋಟದ ಶಂಕಿತ ವ್ಯಕ್ತಿಯು ಬಸ್ ನಲ್ಲಿ ಪ್ರಯಾಣಿಸುತ್ತಿರುವುದನ್ನು ತೋರಿಸುವ ಚಿತ್ರಗಳು ಹೊರಬಂದಿವೆ. ಪೂರ್ವ ಬೆಂಗಳೂರಿನ ಬ್ರೂಕ್ಫೀಲ್ಡ್ನ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1 ರಂದು ಸ್ಫೋಟ ಸಂಭವಿಸಿದ್ದು, ಕನಿಷ್ಠ 10 ಜನರು ಗಾಯಗೊಂಡಿದ್ದಾರೆ.ಒಂದು ಚಿತ್ರದಲ್ಲಿ ಶಂಕಿತನು ಟೋಪಿ ಅಥವಾ ಮುಖವಾಡವಿಲ್ಲದೆ ಕಾಣಿಸಿಕೊಂಡಿದ್ದಾನೆ.ಮತ್ತೊಂದು ಫೋಟೋದಲ್ಲಿ ಶಂಕಿತನು ಮಾಸ್ಕ್ ಮತ್ತು ಕ್ಯಾಪ್ ಯೊಂದಿಗೆ ಬಸ್ಸಿನಲ್ಲಿ ಕಾಣಿಸಿಕೊಂಡಿದ್ದಾನೆ.

ಈ ಹಿಂದೆ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೆಫೆಗೆ ಪ್ರವೇಶಿಸುವಾಗ ಕ್ಯಾಪ್, ಮಾಸ್ಕ್ ಮತ್ತು ಕನ್ನಡಕ ಧರಿಸಿದ ಶಂಕಿತ ಬಾಂಬರ್ನ ಚಿತ್ರವನ್ನು ಪೋಸ್ಟ್ ಮಾಡಿತ್ತು.ಏಜೆನ್ಸಿಯು ಫೋನ್ ಸಂಖ್ಯೆಗಳು ಮತ್ತು ಇಮೇಲ್ಗಳನ್ನು ಹಂಚಿಕೊಂಡಿದೆ, ಅಲ್ಲಿ ಜನರು ಪ್ರಮುಖ ಶಂಕಿತ ಅಪರಿಚಿತ ವ್ಯಕ್ತಿಯ ಬಗ್ಗೆ ಮಾಹಿತಿಯನ್ನು ಕಳುಹಿಸಬಹುದು.

ಮಾಹಿತಿದಾರರ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಭರವಸೆ ನೀಡಿದೆ.ಕೆಫೆಯಲ್ಲಿ ಸಂಭವಿಸಿದ ಸ್ಫೋಟದ ತನಿಖೆಯನ್ನು ಈ ವಾರದ ಆರಂಭದಲ್ಲಿ ಎನ್‌ಐಎಗೆ ಹಸ್ತಾಂತರಿಸಲಾಗಿತ್ತು.ಸುಧಾರಿತ ಸ್ಫೋಟಕ ಸಾಧನದಿಂದ (ಐಇಡಿ) ಸ್ಫೋಟ ಸಂಭವಿಸಿದೆ ಎಂದು ಶಂಕಿಸಲಾಗಿದೆ.

ಸ್ಫೋಟದ ನಂತರ, ಕರ್ನಾಟಕ ಪೊಲೀಸರು ಕಠಿಣ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ

ಹೊಸ ಭಾಷ್ಯ ಬರೆದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ರೋಡ್ ಶೋ

Posted by Vidyamaana on 2023-05-09 04:07:38 |

Share: | | | | |


ಹೊಸ ಭಾಷ್ಯ ಬರೆದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ರೋಡ್ ಶೋ

ಪುತ್ತೂರು: ಈ ಬಾರಿಯ ಚುಣಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ, ಸಮಾಜ ಸೇವೆಯ ಉದ್ದೇಶಕ್ಕೋಸ್ಕರ ನಾನು ರಾಜಕಾರಣಕ್ಕೆ ಬಂದಿದ್ದು ಬಡವರ ಪರವಾಗಿ ಕೆಲಸ ಮಾಡಲು ಕ್ಷೇತ್ರದ ಜನತೆ ನನಗೊಂದು ಅವಕಾಶ ಮಾಡಿಕೊಡಬೇಕು, ನಾನು ಈ ಕ್ಷೇತ್ರದ ಒಬ್ಬ ವ್ಯಕ್ತಿಯ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳುವೆ, ನನ್ನನ್ನು ಬಹುಮತದಿಂದ ಗೆಲ್ಲಿಸಿಕೊಡಬೇಕು ಎಂದು ನೆರೆದಿದ್ದ ಸಹಸ್ರಾರು ಕಾರ್ಯಕರ್ತರ ಮುಂದೆ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕೈ ಮುಗಿದು ಬೇಡಿಕೊಂಡರು.

ಮೇ.೮ರಂದು ಬೊಳ್ವಾರಿನಿಂದ ದರ್ಬೆ ತನಕ ನಡೆದ ಕಾಂಗ್ರೆಸ್ ರೋಡ್ ಶೋ ಕಾರ್ಯಕ್ರಮ ದರ್ಬೆಯಲ್ಲಿ ಸಮಾಪ್ತಿಗೊಂಡಿತು. ದಭೆಯಲ್ಲಿ ನೆರೆದಿದ್ದ ಕಾರ್ಯಕರ್ತರನ್ನುದ್ದೇಶಿಸಿ ಅಭ್ಯರ್ಥಿ ಅಶೋಕ್ ಕುಮಾರ್ ರೈ ಮಾತನಾಡಿದರು.

ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷರಾಗಿ ರಾಕೇಶ್ ಮಲ್ಲಿ ಆಯ್ಕೆ

Posted by Vidyamaana on 2024-01-08 15:31:10 |

Share: | | | | |


ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷರಾಗಿ ರಾಕೇಶ್ ಮಲ್ಲಿ ಆಯ್ಕೆ

ಪುತ್ತೂರು: ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್‌ ಅಧ್ಯಕ್ಷರಾಗಿ ರಾಕೇಶ್ ಮಲ್ಲಿ ಹಾಗೂ ಕಾರ್ಯಾಧ್ಯಕ್ಷರಾಗಿ ಎನ್. ಚಂದ್ರಹಾಸ ಶೆಟ್ಟಿರವರು ಆಯ್ಕೆಯಾಗಿದ್ದಾರೆ.

ಉದ್ಯಮಿ ರಾಕೇಶ್ ಮಲ್ಲಿರವರು ಬಂಟ್ವಾಳ ತಾಲೂಕಿನವರಾಗಿದ್ದು, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಅಮೆಚೂರು ಕಬಡ್ಡಿ ಅಸೋಸಿಯೇಶನ್ ನ ಕಾರ್ಯಾಧ್ಯಕ್ಷರಾಗಿ, ಕಾಂಗ್ರೆಸ್‌ ಕಾರ್ಮಿಕ ಘಟಕದ ಇಂಟಕ್ ರಾಜ್ಯಾಧ್ಯಕ್ಷರಾಗಿ, ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಎನ್.ಚಂದ್ರಹಾಸ ಶೆಟ್ಟಿಯವರು ಪ್ರತಿಷ್ಠಿತ ವಿಜಯಾ ಬ್ಯಾಂಕಿನ ನಿವೃತ್ತ ಅಧಿಕಾರಿಯಾಗಿದ್ದು, ಪುತ್ತೂರು ಕೋಟಿ- ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷರಾಗಿ, ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ನ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯ ನಡುವೆ ಉದ್ಯಮಿ ಮುತ್ತಪ್ಪ ರೈ ನೇತೃತ್ವದ ಪುತ್ತೂರಿನ ಕೋಟಿ ಚೆನ್ನಯ ಕಂಬಳದ ಮುಂದಾಳತ್ವ ವಹಿಸಿಕೊಂಡು ಅದರ ಯಶಸ್ಸಿಗಾಗಿ ಈಗಲೂ ಶ್ರಮಿಸುತ್ತಾ ಬಂದಿರುತ್ತಾರೆ.

Recent News


Leave a Comment: