ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಸುದ್ದಿಗಳು News

Posted by vidyamaana on 2024-07-24 18:06:21 | Last Updated by Vidyamaana on 2024-07-24 18:06:21

Share: | | | | |


ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಕಾರವಾರ: ಉತ್ತರ ಕನ್ನಡದ ಶಿರೂರಿನ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಕೋಝಿಕ್ಕೋಡ್ ಮೂಲದ ಅರ್ಜುನ್ ಅವರ ಲಾರಿ ಎಂದು ನಂಬಲಾದ ಟ್ರಕ್ ನದಿಯ ಆಳದಲ್ಲಿ ಇರುವ ಸುಳಿವು ಲಭ್ಯವಾಗಿದೆ. ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇದನ್ನು ಖಚಿತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಸಚಿವರು ಮಾಹಿತಿ ನೀಡಿದ್ದಾರೆ.

ನದಿಯ ಕೆಳಭಾಗದಲ್ಲಿ ಟ್ರಕ್ ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು ಅದಕ್ಕಾಗಿ ಶೋಧ ನಡೆಯುತ್ತಿದೆ.

ಶಿರೂರಿನಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ಒಂಬತ್ತನೇ ದಿನದಂದು, ಲಾರಿಯ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಪಡೆಯಲಾಗಿದೆ. ಇಂದು ಬೆಳಗ್ಗೆ ಬೂಮ್ ಲೆಂಗ್ತ್ ಕ್ರೇನ್ ಬಂದಿದ್ದು, ತಪಾಸಣೆ ಪುನರಾರಂಭವಾಗಿದೆ. ಈ ಯಂತ್ರವು 60 ಅಡಿ ಆಳದವರೆಗೆ ಹುಡುಕಬಲ್ಲ ಸಾಮರ್ಥ್ಯ ಹೊಂದಿದೆ. ಪೊಲೀಸ್ ವಾಹನದೊಂದಿಗೆ ವಾಹನವನ್ನು ಸ್ಥಳಕ್ಕೆ ತರಲಾಗಿದೆ.

ಈ ಕುರಿತು ಕೃಷ್ಣ ಬೈರೇಗೌಡ Xನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ X ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.ಜುಲೈ 16 ರಂದು ಬೆಳಿಗ್ಗೆ ಕೋಝಿಕ್ಕೋಡ್‌ನ ಕಂಡ್ಯಕ್ಕಲ್ ಮೂಲದ ಅರ್ಜುನ್ (30) ಕರ್ನಾಟಕ-ಗೋವಾ ಗಡಿಯಲ್ಲಿ ಹಾದು ಹೋಗುವ ಪನ್ವೇಲ್-ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದರು. ಭೂಕುಸಿತದಲ್ಲಿ ಟೀ ಅಂಗಡಿ ಮಾಲೀಕ ಸೇರಿದಂತೆ 10 ಜನರು ಸಾವನ್ನಪ್ಪಿದ ಸ್ಥಳದಲ್ಲಿ ಲಾರಿಯ ಜಿಪಿಎಸ್ ಸ್ಥಳವನ್ನು ಕೊನೆಯದಾಗಿ ಪತ್ತೆ ಹಚ್ಚಲಾಯಿತು.

 Share: | | | | |


ಉಳ್ಳಾಲದಿಂದ ಕಾಣೆಯಾದ ಹುಡುಗ ಗೋವಾದಲ್ಲಿ ಪತ್ತೆ

Posted by Vidyamaana on 2023-10-31 07:23:11 |

Share: | | | | |


ಉಳ್ಳಾಲದಿಂದ ಕಾಣೆಯಾದ ಹುಡುಗ ಗೋವಾದಲ್ಲಿ ಪತ್ತೆ

ಮಂಗಳೂರು: ಉಳ್ಳಾಲದ ಮಾಸ್ತಿಕಟ್ಟೆ – ಆಝಾದ್ ನಗರದ ಹುಡುಗನೊಬ್ಬ ಕಾಣೆಯಾಗಿ ದಿನದ ಬಳಿಕ ಪತ್ತೆಯಾದ ಘಟನೆ ನಡೆದಿದೆ.


ಉಳ್ಳಾಲ ಮಾಸ್ತಿ ಕಟ್ಟೆ ಆಝಾದ್ ನಗರದ ಉಸ್ಮಾನ್ ಫಯಾಝ್ ಎಂಬವರ ಮಗ ಸ್ಥಳೀಯ ಶಾಲೆ ಯೊಂದರಲ್ಲಿ 10 ನೇ ತರಗತಿಯಲ್ಲಿ ಕಲಿಸುತ್ತಿರುವ ಮೊಹಮ್ಮದ್ ಹುಝಯ್ಫ್ ಎಂಬ 16 ವರ್ಷದ ಹುಡುಗ ನಿನ್ನೆ ಸಂಜೆಯಿಂದ (28-10-2023) ಕಾಣೆಯಾಗಿದ್ದನು.ಮನೆಯವರು, ಬಂಧುಗಳು ಆತಂಕಕ್ಕೆ ಈಡಾಗಿದ್ದರು. ಇದೀಗ ಆತ ಗೋವಾದಲ್ಲಿ ಸಿಕ್ಕಿದ ಮಾಹಿತಿಯನ್ನು ಬಾಲಕನ ಕುಟುಂಬ ಹಂಚಿಕೊಂಡಿದೆ.


ಮನೆಯಿಂದ ಹೊರ ಹೋದವನು ವಾಪಸ್ ಬರದೇ ಇರುವ ಕಾರಣ ಹುಡುಗನ ಹೆತ್ತವರು ತುಂಬಾ ಆತಂಕ, ಗಾಬರಿಗೊಂಡಿದ್ದರು. ಒಂದು ದಿನದ ಬಳಿಕ ಹುಡುಗ ಪತ್ತೆಯಾಗಿದ್ದು, ನಾಪತ್ತೆಯ ಕಾರಣ ತಿಳಿದುಬಂದಿಲ್ಲ.

BREAKING: ನಾಳೆಯೇ ದ್ವಿತೀಯ PUC ಪರೀಕ್ಷೆ-1ರ ಫಲಿತಾಂಶ ಪ್ರಕಟ: ರಿಸಲ್ಟ್ ನೋಡಲು ಹೀಗೆ ಮಾಡಿ

Posted by Vidyamaana on 2024-04-09 17:51:34 |

Share: | | | | |


BREAKING: ನಾಳೆಯೇ ದ್ವಿತೀಯ PUC ಪರೀಕ್ಷೆ-1ರ ಫಲಿತಾಂಶ ಪ್ರಕಟ: ರಿಸಲ್ಟ್ ನೋಡಲು ಹೀಗೆ ಮಾಡಿ

ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ( 2nd PUC Examination-1 Result ) ನಾಳೆ ಬೆಳಗ್ಗೆ 10 ಗಂಟೆಗೆ ಪ್ರಕಟಿಸುವುದಾಗಿ ಶಾಲಾ ಶಿಕ್ಷಣ ಇಲಾಖೆ ( School Education Department ) ತಿಳಿಸಿದೆ. ರಿಸಲ್ಟ್ ಹೇಗೆ ನೋಡಬೇಕು ಅನ್ನೋ ಬಗ್ಗೆ ಮುಂದೆ ಓದಿ.ಈ  ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ಮಾಹಿತಿ ನೀಡಿದ್ದು, ಮಾರ್ಚ್ 2024ರ ದ್ವಿತೀಯ ಪಿಯುಸಿ ಪರೀಕ್ಷೆ- ನ್ನು ದಿನಾಂಕ:01/03/2024 ರಿಂದ 22/03/2024 ರವರೆಗೆ ನಡೆಸಲಾಯಿತು ಎಂದಿದೆ.

ಈಶ್ವರಮಂಗಲ: ಮೇನಾಲ ದರ್ಗಾಗೆ ಶಾಸಕರ ಭೇಟಿ

Posted by Vidyamaana on 2024-01-18 07:21:45 |

Share: | | | | |


ಈಶ್ವರಮಂಗಲ: ಮೇನಾಲ ದರ್ಗಾಗೆ ಶಾಸಕರ ಭೇಟಿ

ಪುತ್ತೂರು: ಈಶ್ವರಮಂಗಲ ಮೇನಾ ಮಖಾಂ ದರ್ಗಾ ಶರೀಫ್‌ಗೆ ಪುತ್ತೂರು ಶಾಸಕರಾದ ಅಶೋಕ್ ರೈ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ದರ್ಗಾದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನಡೆದಿತ್ತು.  ಈ ಸಂದರ್ಬದಲ್ಲಿ ಮಸೀದಿಯ ಧರ್ಮಗುರುಗಳಾದ ಜಮಾಲುದ್ದೀನ್ ತಂಙಳ್ ದುಗ್ಗಲಡ್ಕ, ನೆಟ್ಟಣಿಗೆ ಮುಡ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಮೂಸಾನ್, ನೆಟ್ಟನಿಗೆ ಮುಡ್ನೂರು ಗ್ರಾಪಂ ಸದಸ್ಯರಾದ ಶ್ರೀರಾಂ ಪಕ್ಕಳ, ಅಕ್ರಮಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು, ನೆಟ್ಟಣಿಗೆ ಮುಡ್ನೂರು ಗ್ರಾಪಂ ಉಪಾಧ್ಯಕ್ಷರಾದ ರಾಮ ಕೆ ಮೇನಾಲ, ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಉದ್ಯಮಿಗಳಾದ ರಿತೇಶ್ ಶೆಟ್ಟಿ ಮಂಗಳೂರು, ಪುತ್ತೂರು ಡ್ಯಾಶ್ ಮಾರ್ಕೆಂಟಿಂಗ್ ವ್ಯವಸ್ಥಾಪಕರಾದ ನಿಹಾಲ್ ಶೆಟ್ಟಿ ಕಲ್ಲಾರೆ, ದೀಕ್ಷಿತ್ ರೈ ಕುತ್ಯಾಳ, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ರಹಿಮಾನ್ ಮೇನಾಲ, ಕರ್ನೂರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಅಬ್ದುಲ್ಲ , ವಿಕ್ರಂ ರೈ ಸಾಂತ್ಯ, ಸುರೇಶ್ ಮೇನಾಲ, ಅಬೂ ಮೇನಾಲ, ಎಂ ಪಿ ಅಬ್ದುಲ್ ಕುಂಞಿ ಪಳ್ಳತ್ತೂರು, ಗಿರೀಶ್ ರೈ ಮರ್ಕಡ,ಅಬ್ದುಲ್ ಕುಂಞಿ ಮೇನಾಲ, ಇಬ್ರಾಹಿಂ ಪಳ್ಳತ್ತೂರು ಮೊದಲಾದವರು ಉಪಸ್ತಿತರಿದ್ದರು.


ಇದೇ ಸಂದರ್ಭದಲ್ಲಿ ನೂತನ ದರ್ಗಾ ಕಟ್ಟ ಕಾಮಗಾರಿಗೆ ರೂ. ೫೦ ಸಾವಿರ ಅನುದಾನವನ್ನು ನೀಡುವುದಾಗಿ ಶಾಸಕರು ಭರವಸೆ ನೀಡಿದರು.ಜಮಾತ್ ಕಮಿತಿ ವತಿಯಿಂದ ಶಾಸಕರನ್ನು ಶಾಲು ಹೊದಿಸಿ ಸನ್ಮಾನಿಸಿದರು.

ಫಾಸ್ಟಾಗ್‌ಗಳಿಗೆ ಕೆವೈಸಿ ಪೂರ್ಣಗೊಳಿಸದಿದ್ದರೆ ಜ.31ರಿಂದ ಫಾಸ್ಟಾಗ್‌ ಖಾತೆಗಳು ನಿಷ್ಟ್ರಿಯ

Posted by Vidyamaana on 2024-01-17 09:31:21 |

Share: | | | | |


ಫಾಸ್ಟಾಗ್‌ಗಳಿಗೆ ಕೆವೈಸಿ ಪೂರ್ಣಗೊಳಿಸದಿದ್ದರೆ ಜ.31ರಿಂದ ಫಾಸ್ಟಾಗ್‌ ಖಾತೆಗಳು ನಿಷ್ಟ್ರಿಯ

ಹೊಸದಿಲ್ಲಿ: ಫಾಸ್ಟಾಗ್‌ಗಳಿಗೆ ಕೆವೈಸಿ ಪೂರ್ಣಗೊಳಿಸದಿದ್ದರೆ ಜ.31ರಿಂದ ಫಾಸ್ಟಾಗ್‌ ಖಾತೆಗಳು ನಿಷ್ಟ್ರಿಯವಾಗಲಿವೆ ಎಂದು ಈಗಾಗಲೇ ಎನ್‌ಎಚ್‌ಎಐ ಎಚ್ಚರಿಸಿದೆ. ಫಾಸ್ಟಾಗ್‌ಗೆ ಕೆವೈಸಿ ಪೂರ್ಣಗೊಂಡಿದೆಯೇ, ಇಲ್ಲವೇ ಎಂಬ ಸ್ಥಿತಿಗತಿ ತಿಳಿಯುವುದು ಹೇಗೆ ಹಾಗೂ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.


ಪರಿಶೀಲನೆ ಹೇಗೆ?

ಬಳಕೆದಾರರು https://fastag.ihmcl.com ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

ಲಾಗಿನ್‌ ಆಗಲು ನೋಂದಾಯಿತ ಮೊಬೈಲ್‌ ಸಂಖ್ಯೆ, ಪಾಸ್‌ವರ್ಡ್‌ ಮತ್ತು ಬಳಿಕ ಮೊಬೈಲ್‌ಗೆ ಬರುವ ಒಟಿಪಿ ಬೇಕಾಗಲಿದೆ.

ಒಮ್ಮೆ ಲಾಗಿನ್‌ ಆದ ಅನಂತರ, ಡ್ಯಾಶ್‌ಬೋರ್ಡ್‌ಗೆ ತೆರಳಿ, “ಮೈ ಪ್ರೊಫೈಲ್‌’ ವಿಭಾಗದ ಮೇಲೆ ಕ್ಲಿಕ್‌ ಮಾಡಬೇಕು.

ಇಲ್ಲಿ ನಿಮ್ಮ ಕೈವೈಸಿ ಪ್ರಕ್ರಿಯೆ ಪೂರ್ಣಗೊಂಡಿದೆಯೇ ಎಂಬ ಸ್ಥಿತಿಗತಿ ಹಾಗೂ ನೀವು ಸಲ್ಲಿಸಿರುವ ಪ್ರೊಫೈಲ್‌ ವಿವರ ಸಿಗಲಿದೆ.

ಪೂರ್ಣಗೊಳ್ಳದಿದ್ದರೆ ಏನು ಮಾಡಬೇಕು?

ಪ್ರೊಫೈಲ್‌ ವಿಭಾಗದಲ್ಲಿ, ಕೆವೈಸಿ ಎಂಬ ಉಪ ವಿಭಾಗವಿದೆ. ಅಲ್ಲಿ ಕ್ಲಿಕ್‌ ಮಾಡಿ ನೀವು ನಿಮ್ಮ ಕೆವೈಸಿ ಅಪ್‌ಡೇಟ್‌ ಮಾಡಬಹುದು.

ಬಳಕೆದಾರರು ಗುರುತು, ವಿಳಾಸದ ದಾಖಲೆಗಳನ್ನು ಸಲ್ಲಿಸಬೇಕು. ಪಾಸ್‌ಪೋರ್ಟ್‌ ಗಾತ್ರದ ಫೋಟೋ ಕೂಡ ಅಗತ್ಯ.

ಒಮ್ಮೆ ಪರಿಶೀಲಿಸಿ, ಅನಂತರ ದೃಢೀಕರಿಸಬೇಕಾಗುತ್ತದೆ.

ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಅನಂತರ, “ಪ್ರೊಸೀಡ್‌’ ಕ್ಲಿಕ್‌ ಮಾಡಿ ದರೆ ಕೈವೈಸಿ ಪೂರ್ಣಗೊಳ್ಳಲಿದೆ.

ಶ್ರೀ ಭಗವತೀ ಸಹಕಾರ ಬ್ಯಾಂಕ್‌ನ 8ನೇ ಶಾಖೆ ಏಳ್ಮುಡಿಯಲ್ಲಿ ಶುಭಾರಂಭ

Posted by Vidyamaana on 2024-03-28 21:47:26 |

Share: | | | | |


ಶ್ರೀ ಭಗವತೀ ಸಹಕಾರ ಬ್ಯಾಂಕ್‌ನ 8ನೇ ಶಾಖೆ ಏಳ್ಮುಡಿಯಲ್ಲಿ ಶುಭಾರಂಭ

ಪುತ್ತೂರು:ಬ್ಯಾಂಕಿಂಗ್ ಕ್ಷೇತ್ರದಲ್ಲಿ ೪೮ ವರ್ಷಗಳ ಇತಿಹಾಸವಿರುವ, ಮಂಗಳೂರಿನ ಮೊರ್ಗನ್ಸ್ ಗೇಟ್ ಜಪ್ಪುನಲ್ಲಿ ಪ್ರಧಾನ ಕಚೇರಿ ಹೊಂದಿರುವ ಶ್ರೀ ಭಗವತೀ ಸಹಕಾರ ಬ್ಯಾಂಕ್‌ನ ೮ನೇ ಶಾಖೆಯು ಮಾ.೨೮ ರಂದು ಇಲ್ಲಿನ ಮುಖ್ಯರಸ್ತೆಯ ಏಳ್ಮುಡಿ ಮಹಾದೇವಿ ಸಂಕೀರ್ಣದ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ನ್ಯಾಯವಾದಿ ಪಿ.ಕೆ ಸತೀಶನ್ ಮಾತನಾಡಿ, ಸಹಕಾರ ಸಂಘಗಳಿಗೂ ಸಹಕಾರ ಬ್ಯಾಂಕ್‌ಗಳಿಗೂ ವ್ಯತ್ಯಾಸಗಳಿವೆ. ನಗರ ಸಹಕಾರಿ ಬ್ಯಾಂಕ್‌ಗಳು ಆರ್‌ಬಿಐಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಜನರಿಗೆ ಬ್ಯಾಂಕ್‌ನಿಂದ ಯಾವುದೇ ಸಮಸ್ಯೆ ಉಂಟಾಗಲು ಸಾಧ್ಯವಿಲ್ಲ. ಬಹಳಷ್ಟು ಸಹಕಾರಿ ಸಂಘಗಳು, ಬ್ಯಾಂಕ್‌ಗಳು ದ.ಕ ಜಿಲ್ಲೆಯಲ್ಲಿ ಪ್ರಾರಂಭವಾದ ಇತಿಹಾಸವಿದೆ.

ಸೆ 24 ಏಕಾದಶ ಕೋಟಿ ಮಹಾಲಿಂಗೇಶ್ವರ ಜಪಯಜ್ಞದ ಮಹಾಜಪ ಶತರುದ್ರಾಭಿಷೇಕ ಧಾರ್ಮಿಕ ಕಾರ್ಯಕ್ರಮ

Posted by Vidyamaana on 2023-09-23 14:33:09 |

Share: | | | | |


ಸೆ 24 ಏಕಾದಶ ಕೋಟಿ ಮಹಾಲಿಂಗೇಶ್ವರ ಜಪಯಜ್ಞದ ಮಹಾಜಪ ಶತರುದ್ರಾಭಿಷೇಕ ಧಾರ್ಮಿಕ ಕಾರ್ಯಕ್ರಮ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಸೆ.9ರಿಂದ ಸೀಮೆ, ಪರವೂರಿನಾದ್ಯ೦ತ ಮನೆ ಮನೆಯಲ್ಲಿ ಏಕಾದಶ ಕೋಟಿ ಮಹಾಲಿಂಗೇಶ್ವರ ಜಪಯಜ್ಞದ ಮಹಾಜಪ ಯಜ್ಞ ಮತ್ತು ಶತರುದ್ರಾಭಿಷೇಕ ಹಾಗು ಧಾರ್ಮಿಕ ಕಾರ್ಯಕ್ರಮ ಸೆ.24ರಂದು ಬೆಳಿಗ್ಗೆ ಗಂಟೆ 9ರಿಂದ ಶ್ರೀ ಮಹಾಲಿಂಗೇಶ್ವರ


ದೇವಸ್ಥಾನದಲ್ಲಿ ಜರುಗಲಿದೆ ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್‌ ಮುಳಿಯ ತಿಳಿಸಿದ್ದಾರೆ.


ಅಂದು ಬೆಳಿಗ್ಗೆ ಮಹಾಜಪ ಮತ್ತು ಸಂಖ್ಯೆ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ.ದೇವಳದಲ್ಲಿ ಪ್ರತ್ಯೇಕವಾಗಿ ತೆರೆಯಲಾದ 1 ಸೇವಾ ಕೌಂಟರ್‌ನಲ್ಲಿ ಜಪಯಜ್ಞದಲ್ಲಿ ಸ್ವಯಂ ಭಾಗಿಗಳಾದ ಭಕ್ತರು ಮತ್ತು ತಂಡಗಳು ಕಾರ್ಡ್‌ಗಳನ್ನು ದಾಖಲಿಸಿ ಜಪಯಜ್ಞಕ್ಕೆ ಬಳಸಿದ ನಾಣ್ಯಗಳ ಮೊತ್ತವನ್ನು ತಿಳಿಸಿ ಸೇವಾ ರಶೀದಿ ಪಡೆಯಬೇಕು.ದೇವಳದ ರಾಜಗೋಪುರದಲ್ಲಿ ಜಪಯಜ್ಞ ಧಾರ್ಮಿಕ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಅಲ್ಲಿ ವೈದಿಕರುಗಳಿಗೆ ಅಭಿಮುಖವಾಗಿ ಭಕ್ತರು ಕುಳಿತು 108 ಗುಣಕಗಳಲ್ಲಿ ಜಪಮಾಡುವುದು. ಕನಿಷ್ಟ 108 ಜಪಯಜ್ಞ ಪೂರ್ಣಗೊಳಿಸಿದ ಭಕ್ತರು ಸರತಿ ಸಾಲಿನಲ್ಲಿ ದೇವಳಕ್ಕೆ ಪ್ರವೇಶಿಸಿ ಪ್ರದಕ್ಷಿಣೆ ಬ0ದು ಒಳಾಂಗಣದಲ್ಲಿ ಸೂಚಿಸಿದ ಸಮರ್ಪಣೆ ಮಂಟಪದಲ್ಲಿ ಜಪಯಜ್ಞ ನಾಣ್ಯಗಳನ್ನು ಸಮರ್ಪಣೆ ಮಾಡಿ ಶ್ರೀ ದೇವರ ದರ್ಶನ ಪಡೆಯಬೇಕೆಂದು ಅವರು ಹೇಳಿದರು.


ಜಪಯಜ್ಞ ಪ್ರಸಾದ ವಿತರಣೆ: ಜಪಯಜ್ಞದ ಪ್ರಸಾದ ಕೌಂಟರ್ ಅನ್ನು ದೇವಳದ ಒಳಾಂಗಣದ ಗೋಪುರದಲ್ಲಿ ವ್ಯವಸ್ಥೆ ಮಡಲಾಗಿದ್ದು, ಪ್ರಸಾದ ಸ್ವೀಕರಿಸಿದವರು ದೇವಳದ ಎದುರು ಗದ್ದೆಯಲ್ಲಿರುವ ಸಾರ್ವಜನಿಕ ಗಣೇಶೋತ್ಸವ ಪೆಂಡಾಲ್‌ನಲ್ಲಿ ಭಕ್ತರಿಗೆ ಅನ್ನಪ್ರಸಾದ ವಿತರಣೆ ನಡೆಯಲಿದೆ ಎಂದು ಕೇಶವಪ್ರಸಾದ್‌ ಮುಳಿಯ ತಿಳಿಸಿದ್ದಾರೆ.

Recent News


Leave a Comment: