ಪುತ್ತೂರು: ಲಾರಿ ಟಯರ್ ಜೋಡಣೆ ವೇಳೆ ಅಪಘಾತ- ಟಯರ್‌ ಸಮೇತ ಎಸೆಯಲ್ಪಟ್ಟ ಕರಾಯ ಜನತಾ ಕಾಲೋನಿ ರಶೀದ್ ಗಂಭೀರ

ಸುದ್ದಿಗಳು News

Posted by vidyamaana on 2024-07-22 23:30:36 |

Share: | | | | |


ಪುತ್ತೂರು: ಲಾರಿ ಟಯರ್ ಜೋಡಣೆ ವೇಳೆ ಅಪಘಾತ- ಟಯರ್‌ ಸಮೇತ ಎಸೆಯಲ್ಪಟ್ಟ   ಕರಾಯ ಜನತಾ ಕಾಲೋನಿ ರಶೀದ್ ಗಂಭೀರ

ಪುತ್ತೂರು: ಲಾರಿಯೊಂದರ ಟಯರ್ ಜೋಡಣೆ ವೇಳೆ ಟಯ‌ರ್ ರಿಂಗ್ ಚಿಮ್ಮಿ ಟಯರ್ ಸಮೇತ ಎಸೆಯಲ್ಪಟ್ಟ ಕಾರ್ಮಿಕರೊಬ್ಬರು ಗಂಭೀರ ಗಾಯಗೊಂಡ ಘಟನೆ ಪುತ್ತೂರು ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ಜು.22ರಂದು ರಾತ್ರಿ ನಡೆದಿದೆ.

ಲಾರಿಯೊಂದು ಟಯರ್ ಪಂಚರ್ ಆಗಿ ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ನಿಲ್ಲಿಸಲಾಗಿತ್ತು. ಅದರ ಚಾಲಕ ಕರಾಯಕ್ಕೆ ಹೋಗಿ ಟಯರ್ ಪಂಚರ್ ಮಾಡಿಸಿಕೊಂಡು ಆಟೋ ರಿಕ್ಷಾದಲ್ಲಿ ಟಯ‌ರ್ ತಂದಿದ್ದರು. ಟಯರ್ ಜೋಡಣೆ ಮಾಡಲು ಕರಾಯದಿಂದಲೇ ಬಂದ ಟಯರ್ ಕಾರ್ಮಿಕ ಜೋಡಣೆ ವೇಳೆ ಟಯರ್‌ನ ರಿಂಗ್ ಹೊರಚಿಮ್ಮಿದ ರಭಸಕ್ಕೆ ಟಯರ್‌ ಸಮೇತ  ಕರಾಯ ಜನತಾ ಕಾಲೋನಿ ಕರೀಂ ರವರ ಮಗ ರಶೀದ್ ತುಸು ದೂರ ಎಸೆಯಲ್ಪಟ್ಟಿದ್ದಾರೆ. ತಕ್ಷಣ ತೀವ್ರ ಗಾಯಗೊಂಡ ಕಾರ್ಮಿಕನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

 Share: | | | | |


ಬಸ್ ಸ್ಟ್ಯಾಂಡಿನಲ್ಲಿದ್ದ ಚನ್ನರಾಯಪಟ್ಟಣದ ಮಹಿಳೆಗೆ ಮದ್ಯ ಕುಡಿಸಿ ಅತ್ಯಾಚಾರವೆಸಗಿದ ಕಾಮುಕ ಅಂದರ್

Posted by Vidyamaana on 2023-11-29 20:27:55 |

Share: | | | | |


ಬಸ್ ಸ್ಟ್ಯಾಂಡಿನಲ್ಲಿದ್ದ ಚನ್ನರಾಯಪಟ್ಟಣದ ಮಹಿಳೆಗೆ ಮದ್ಯ ಕುಡಿಸಿ ಅತ್ಯಾಚಾರವೆಸಗಿದ ಕಾಮುಕ ಅಂದರ್

ಪುತ್ತೂರು : ಬಸ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಮಹಿಳೆಯೊಬ್ಬರಿಗೆ ಮದ್ಯ ಕುಡಿಸಿ ಅತ್ಯಾಚಾರ ಮಾಡಿರುವ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.


ಮೂಲತಃ ಆರ್ಯಾಪು ನಿವಾಸಿ, ಪ್ರಸ್ತುತ ಬನ್ನೂರಿನಲ್ಲಿ ವಾಸವಿರುವ ಸಂಶುದ್ದೀನ್ ಆಸ್ಗರ್ ಆಲಿ (23) ಬಂಧಿತ ಆರೋಪಿ.


ಹಾಸನ ತಾಲೂಕು ಚೆನ್ನರಾಯಪಟ್ಟಣದ ನಿವಾಸಿಯಾಗಿರುವ ಮಹಿಳೆ ನ.24 ರಂದು ರಾತ್ರಿ ವೇಳೆ ಪುತ್ತೂರು ಬಸ್ ನಿಲ್ದಾಣದಲ್ಲಿ ಇದ್ದಾಗ, ಅಪರಿಚಿತ ವ್ಯಕ್ತಿಯೋರ್ವ ಸದರಿ ಮಹಿಳೆಗೆ ಮದ್ಯವನ್ನು ಸೇವಿಸಲು ನೀಡಿ, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದು, ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ 114/2023 ಕಲಂ 376 ಐ.ಪಿ.ಸಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.


ನ.28 ರಂದು ಸಂಜೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ವರದಿಯಾಗಿದೆ.

ಕೇಳಿದಾಗ ಇಲ್ಲ ಅನ್ನಲು ಮನಸ್ಸು ಒಪ್ಪಲಿಲ್ಲ: ಮನಕಲಕುವಂತಿದೆ ಶಕೀಲಾರ ಅಸಲಿ ಲವ್​ಸ್ಟೋರಿ

Posted by Vidyamaana on 2024-01-02 18:29:32 |

Share: | | | | |


ಕೇಳಿದಾಗ ಇಲ್ಲ ಅನ್ನಲು ಮನಸ್ಸು ಒಪ್ಪಲಿಲ್ಲ: ಮನಕಲಕುವಂತಿದೆ ಶಕೀಲಾರ ಅಸಲಿ ಲವ್​ಸ್ಟೋರಿ

ನಟಿ ಶಕೀಲಾ ಬಗ್ಗೆ ಹೆಚ್ಚು ಪರಿಚಯಿಸುವ ಅಗತ್ಯವಿಲ್ಲ. 1990ರ ದಶಕದ ಬಹುತೇಕರಿಗೆ ಶಕೀಲಾ ಪರಿಚಯ ಇದ್ದೇ ಇರುತ್ತದೆ. ಒಂದು ಕಾಲದಲ್ಲಿ ತಮಿಳು ಮತ್ತು ಮಲಯಾಳಂನ ಸಾಫ್ಟ್​ಕೋರ್​ ನೀಲಿ ಚಿತ್ರಗಳಲ್ಲಿ ನಟಿಸುವ ಮೂಲಕ ಶಕೀಲಾ ಅವರು ದೊಡ್ಡ ದೊಡ್ಡ ನಟರಿಗೆ ಪೈಪೋಟಿ ನೀಡಿದ್ದರು.ಶಕೀಲಾ ಅವರ ಚಿತ್ರ ಬಿಡುಗಡೆಯಾಗುವಾಗ ಸ್ಟಾರ್​ ನಟರ ಚಿತ್ರಗಳೇ ಬದಿಗೆ ಸರಿಯುತ್ತಿದ್ದವು. ಆದರೆ ದಿನ ಕಳೆದಂತೆ ಶಕೀಲಾ ಅವರ ಖ್ಯಾತಿ ಕೂಡ ಕ್ಷೀಣಿಸುತ್ತಾ ಬಂದಿತು. ಅಲ್ಲದೆ, ಶಕೀಲಾ ನಿರಂತರವಾಗಿ ಸಾಫ್ಟ್​ಕೋರ್​ ನೀಲಿ ಚಿತ್ರಗಳಲ್ಲಿ ನಟಿಸಿದ್ದರಿಂದ ಕೇರಳ ಸಿನಿಮಾ ಕ್ಷೇತ್ರದಿಂದಲೇ ಅವರನ್ನು ಬ್ಯಾನ್​ ಮಾಡಲಾಯಿತು. ಬಳಿಕ ಮಲಯಾಳಂ ಸಿನಿಮಾ ಇಂಡಸ್ಟ್ರಿ ಬಿಟ್ಟು ತಮಿಳುನಾಡಿಗೆ ಬಂದು ನೆಲೆಸಿದರು.


ತಮಿಳುನಾಡಿಗೆ ಬಂದು ನೆಲೆಸಿದ ಬಳಿಕ ನೀಲಿ ಸಿನಿಮಾಗಳ ನಟನೆಯಿಂದ ದೂರ ಉಳಿದ ಶಕೀಲಾ ತಮಗೆ ಸಿಕ್ಕ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡುತ್ತಾ ಬಂದರು. ಜಯಂ, ಅಳಗಿಯ ತಮಿಳ್​ ಮಗನ್ ಸೇರಿದಂತೆ ಕೆಲವು ತಮಿಳು ಸಿನಿಮಾಗಳಲ್ಲಿಯೂ ಶಕೀಲಾ ನಟಿಸಿದ್ದಾರೆ. ಅಲ್ಲದೆ, ಟಿವಿ ರಿಯಾಲಿಟಿ ಶೋಗಳಲ್ಲಿಯೂ ಭಾಗಿಯಾಗಿದ್ದಾರೆ. ಕನ್ನಡದ ಬಿಗ್​ಬಾಸ್​ ಶೋನಲ್ಲೂ ಭಾಗಿಯಾಗಿದ್ದರು.ಸಾಕಷ್ಟು ಸಿನಿಮಾ ಅವಕಾಶಗಳು ಕೂಡ ಶಕೀಲಾರನ್ನು ಅರಸಿ ಬರುತ್ತಿವೆ.


ತಾಜಾ ಸಂಗತಿ ಏನೆಂದರೆ, ಶಕೀಲಾ ಅವರು ತಮ್ಮ ಲವ್​ಸ್ಟೋರಿಯನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಬಹುಕಾಲದ ಬಾಯ್​ಫ್ರೆಂಡ್​ ಬೇರೊಬ್ಬಳನ್ನು ಮದುವೆಯಾಗಿರುವ​ ಬಗ್ಗೆ ತಮಿಳಿನ ಆನ್​​ಲೈನ್​ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.


ನಾನೊಬ್ಬಳು ಮುಸ್ಲಿಂ ಮತ್ತು ನನ್ನ ಬಾಯ್​ಫ್ರೆಂಡ್​ ಹಿಂದು. ನಮ್ಮಿಬ್ಬರ ಪ್ರೀತಿಯ ವಿಚಾರವಾಗಿ ಕುಟುಂಬಗಳ ನಡುವೆ ತುಂಬಾ ಸಮಸ್ಯೆಗಳಿದ್ದವು. ನಮ್ಮ ಮದುವೆ ನಡೆದರೆ ಖಂಡಿತವಾಗಿ ಅಹಿತಕರ ಘಟನೆ ನಡೆಯುತ್ತದೆ ಎಂಬುದು ಮೊದಲೇ ತಿಳಿದಿತ್ತು. ಇದೇ ಸಂದರ್ಭದಲ್ಲಿ ಬೇರೊಬ್ಬಳನ್ನು ವರಿಸುವಂತೆ ನನ್ನ ಬಾಯ್​ಫ್ರೆಂಡ್​​ಗೆ ಕುಟುಂಬದಿಂದ ತುಂಬಾ ಒತ್ತಾಯವಿತ್ತು. ಈ ವಿಚಾರವನ್ನು ಆತ ನನಗೆ ತಿಳಿಸಿದಾಗ, ಬೇಡ ಅನ್ನಲು ಮನಸ್ಸು ಒಪ್ಪಲಿಲ್ಲ.ಹೀಗಾಗಿ ನಾನು ಬೇರೆ ಮದುವೆ ಮಾಡಿಕೊಳ್ಳುವಂತೆ ಸಮ್ಮತಿಸಿದೆ. ಏಕೆಂದರೆ, ನಾವು ಇಷ್ಟಪಡುವವರ ಮನಸ್ಸನ್ನು ನೋಯಿಸಲು ನನಗೆ ಇಷ್ಟವಿರಲಿಲ್ಲ. ಪ್ರತಿ ಸಮಯದಲ್ಲೂ ಆತ ಖುಷಿಯಾಗಿರಬೇಕೆಂದು ನಾನು ಬಯಸಿದೆ. ನಾನು ಆತನ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಬಹಿರಂಗಪಡಿಸಿದರೆ ತುಂಬಾ ತೊಂದರೆಗಳಾಗುತ್ತವೆ ಮತ್ತು ಆತನ ವೈವಾಹಿಕ ಜೀವನಕ್ಕೆ ಸಮಸ್ಯೆಯಾಗುತ್ತದೆ ಎಂದು ಶಕೀಲಾ ಹೇಳಿದ್ದಾರೆ.


ಇದೇ ಸಂದರ್ಭದಲ್ಲಿ ಶಕೀಲಾ ಅವರು ತನ್ನ ಮೊದಲ ಸಂಬಂಧದ ಬಗ್ಗೆಯೂ ಮಾತನಾಡಿದರು. 11ನೇ ವಯಸ್ಸಿನಲ್ಲಿ ಸಂಭವಿಸಿದ ಸಂಗತಿ ಇದು. ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿ ನನ್ನ ನೆರೆಹೊರೆಯವನಾಗಿದ್ದನು. ಅವನ ಹೆಸರು ಸುರೇಶ್ ರೆಡ್ಡಿ. ಇದು ಪ್ರೀತಿಯೋ? ಅಥವಾ ಇಲ್ಲವೋ? ನನಗೆ ಗೊತ್ತಿಲ್ಲ, ಆದರೆ ಅದು ಸಂಭವಿಸಿತು ಎಂದಿದ್ದಾರೆ.

VIDEO: ಕ್ರಿಕೆಟ್ ಆಡುವಾಗ ಖಾಸಗಿ ಅಂಗಕ್ಕೆ ತಾಗಿದ ಚೆಂಡು: ಬಾಲಕ ಮೃತ್ಯು

Posted by Vidyamaana on 2024-05-06 20:08:01 |

Share: | | | | |


VIDEO: ಕ್ರಿಕೆಟ್ ಆಡುವಾಗ ಖಾಸಗಿ ಅಂಗಕ್ಕೆ ತಾಗಿದ ಚೆಂಡು: ಬಾಲಕ ಮೃತ್ಯು

Cricket Video: ಕ್ರಿಕೆಟ್ ಆಡುತ್ತಿದ್ದಾಗ ಚೆಂಡು ಬಡಿದು ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. ಪುಣೆಯಲ್ಲಿ ನಡೆದಿರುವ ಈ ದಾರುಣ ಘಟನೆಯ ವಿಡಿಯೋ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕ್ರಿಕೆಟ್ ಆಡುವಾಗ ಖಾಸಗಿ ಅಂಗಕ್ಕೆ ಚೆಂಡು ಬಡಿದು ಬಾಲಕನೋರ್ವ ಮೃತಪಟ್ಟಿರುವ ದಾರುಣ ಘಟನೆ ಪುಣೆಯಲ್ಲಿ ನಡೆದಿದೆ.ಸ್ನೇಹಿತರೊಂದಿಗೆ ಕ್ರಿಕೆಟ್ (Cricket) ಆಡಲು ಹೋಗಿದ್ದ 11 ವರ್ಷದ ಶೌರ್ಯ ಮೃತಪಟ್ಟ ದುರ್ದೈವಿ. ಪುಣೆಯ ಲೋಹಗಾಂವ್‌ನಲ್ಲಿರುವ ಜಗದ್ಗುರು ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಗುರುವಾರ ರಾತ್ರಿ ಸ್ನೇಹಿತರೊಂದಿಗೆ ಶೌರ್ಯ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಬ್ಯಾಟ್ಸ್​ಮನ್ ಬಾರಿಸಿದ ಚೆಂಡು ನೇರವಾಗಿ ಬೌಲಿಂಗ್ ಮಾಡುತ್ತಿದ್ದ ಶೌರ್ಯ ಅವರ ಖಾಸಗಿ ಭಾಗಕ್ಕೆ ಬಲವಾಗಿ ಬಡಿದಿದೆ.

ಚೆಂಡು ಬಡಿದ ರಭಸದಿಂದ ನಿತ್ರಾಣಗೊಂಡಿದ್ದ ಬಾಲಕ ಹೆಜ್ಜೆಯಿಡುತ್ತಲೇ ಕುಸಿದು ಬಿದ್ದಿದ್ದಾನೆ. ಈ ವೇಳೆ ಸ್ನೇಹಿತರು ಉಪಚರಿಸಿ ಎಚ್ಚರಿಸಲು ಪ್ರಯತ್ನಿಸಿದ್ದಾರೆ. ಆದರೆ ಶೌರ್ಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ.


ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರುತ್ತಿದ್ದ ವ್ಲಾಗರ್‌ ಸ್ವಾತಿಕೃಷ್ಣ ಅರೆಸ್ಟ್

Posted by Vidyamaana on 2024-01-13 04:46:08 |

Share: | | | | |


ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರುತ್ತಿದ್ದ ವ್ಲಾಗರ್‌ ಸ್ವಾತಿಕೃಷ್ಣ ಅರೆಸ್ಟ್

ಕೊಚ್ಚಿ : ಕೇರಳದ ಎರ್ನಾಕುಲಂ ಕಾಲಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ ವ್ಲಾಗರ್ ರನ್ನು ಬಂಧಿಸಿದ್ದಾರೆ.ಕುನ್ನತ್ತುನಾಡು ಮೂಲದ ಸ್ವಾತಿ ಕೃಷ್ಣ (28) ಬಂಧಿತ ಆರೋಪಿಯಾಗಿದ್ದು ಅಬಕಾರಿ ವಿಶೇಷ ತಂಡ ಬಂಧಿಸಿದೆ.ಆಕೆಯಿಂದ 2.78 ಗ್ರಾಂ ಎಂಡಿಎಂಎ ಹಾಗೂ 20 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಕಾಲಡಿ ಅಬಕಾರಿ ನಿರೀಕ್ಷಕ ಸಿಜೋ ವರ್ಗೀಸ್ ಮತ್ತು ತಂಡ ಆರೋಪಿಯನ್ನು ಬಂಧಿಸಿದೆ.ಪೊಲೀಸರ ಪ್ರಕಾರ ಸ್ವಾತಿ ಕೃಷ್ಣ ಕಾಲೇಜು ವಿದ್ಯಾರ್ಥಿಗಳಿಗೆ ಸಿಂಥೆಟಿಕ್ ಡ್ರಗ್ಸ್ ಮಾರಾಟ ಮಾಡುತ್ತಿದ್ದಳು. ಕಳೆದ ಕೆಲ ದಿನಗಳಿಂದ ಅಬಕಾರಿ ಇಲಾಖೆ ನಿಗಾದಲ್ಲಿದ್ದಳು.

ಪುತ್ತೂರು ಜಾತ್ರೆ : ಯುವಶಕ್ತಿ ಸೇವಾಪಥ ನೇತೃತ್ವದಲ್ಲಿ ಏ. 9ರಂದು ಶ್ರಮದಾನ

Posted by Vidyamaana on 2023-04-07 12:50:46 |

Share: | | | | |


ಪುತ್ತೂರು ಜಾತ್ರೆ : ಯುವಶಕ್ತಿ ಸೇವಾಪಥ  ನೇತೃತ್ವದಲ್ಲಿ ಏ. 9ರಂದು ಶ್ರಮದಾನ

ಪುತ್ತೂರು: ಯುವಶಕ್ತಿ ಸೇವಾಪಥ  ನೇತೃತ್ವದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏಪ್ರಿಲ್ 9ರಂದು ಶ್ರಮದಾನ ಸೇವೆ ನಡೆಯಲಿದೆ.

ಯುವಶಕ್ತಿ ಸೇವಾಪಥ ದ.ಕ. ಇದರ ನೇತೃತ್ವದಲ್ಲಿ ಮಿತ್ರಸಂಸ್ಥೆಗಳ ಒಗ್ಗೂಡುವಿಕೆಯೊಂದಿಗೆ ಶ್ರಮದಾನ ಸೇವೆ ಆಯೋಜಿಸಲಾಗಿದೆ.

ಹತ್ತೂರು ಸಂಭ್ರಮಿಸುವ ಪುತ್ತೂರ ಒಡೆಯನ ಜಾತ್ರೋತ್ಸವದ ಶುಭಸಮಯದಿ ಶ್ರಮಸೇವೆಗೈಯೋಣ ಬನ್ನಿ ಎಂಬ ಧ್ಯೇಯವಾಕ್ಯದೊಂದಿಗೆ ಶ್ರಮದಾನ ನಡೆಯಲಿದೆ. ಈಗಾಗಲೇ ಹಲವಾರು ಜನಪರ ಕಾರ್ಯಕ್ರಮಗಳಲ್ಲಿ ಖ್ಯಾತಿ ಗಳಿಸಿರುವ ಯುವಶಕ್ತಿ  ಸೇವಾಪಥ  ತಂಡ ಏಪ್ರಿಲ್ 9ರಂದು ಜಾತ್ರೋತ್ಸವ ಹಿನ್ನೆಲೆಯಲ್ಲಿ ಶ್ರಮದಾನಕ್ಕೆ ಮುಂದಾಗಿದೆ ಎಂದು ಸಂಘಟಕರು ಮಾಧ್ಯಮ ಪ್ರಕಟಣೆಗೆ ತಿಳಿಸಿದ್ದಾರೆ .

ಪುತ್ತೂರು : ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ ರಾಧಾಕೃಷ್ಣ ಭಕ್ತ ನಿಧನ

Posted by Vidyamaana on 2023-05-04 18:02:16 |

Share: | | | | |


ಪುತ್ತೂರು :  ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ ರಾಧಾಕೃಷ್ಣ ಭಕ್ತ ನಿಧನ

ಪುತ್ತೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಚೇತನ, ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ , ಸಂಘಟನಾ ಚತುರ ರಾಧಾಕೃಷ್ಣ ಭಕ್ತ (71) ಮೇ.4 ರಂದು ನಿಧನರಾದರು.

ಜನಸಂಘದ ಕಾಲದಲ್ಲಿ ಸಕ್ರೀಯರಾಗಿದ್ದು, ತಮ್ಮ ಮನೆಯನ್ನೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಾಲಯ ಮಾಡಿಕೊಂಡಿದ್ದ ದಿ. ದೇವದಾಸ್ ಭಕ್ತ ಅವರ ಪುತ್ರ ರಾಧಾಕೃಷ್ಣ ಭಕ್ತ ತನ್ನ ತಂದೆಯ ಮಾರ್ಗದರ್ಶದನಲ್ಲೇ ಮುಂದುವರಿದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾಗಿದ್ದರು.ಪುತ್ತೂರಿನಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್ ಸ್ಥಾಪನೆಯ ಮುಖ್ಯ ರೂವಾರಿಯಾಗಿ, ಸಂಚಾಲಕರಾಗಿ, ಪುತ್ತೂರು ಶ್ರೀ ಲಕ್ಷ್ಮಿವೆಂಕಟರಮಣ ದೇವಸ್ಥಾನದ ಮಾಜಿ ಆಡಳಿತ ಮೋಕ್ತೇಸರಾಗಿದ್ದು ಹಲವು ಸಾಮಾಜಿಕ, ಧಾರ್ಮಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಅಖಿಲ ಭಾರತ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ ದೇವಾಲಯಗಳ ಒಕ್ಕೂಟದ ಉಪಾಧ್ಯಕ್ಷರಾಗಿದ್ದರು

ಮೃತರು ಪತ್ನಿ ಲಕ್ಷ್ಮಿಭಕ್ತ, ಪುತ್ರಿ ಅಶ್ವಿನಿ ಭಕ್ತ, ಸಹೋದರರಾದ ಯೋಗೀಶ್ ಭಕ್ತ, ಗುರುದತ್ ಭಕ್ತ ಮತ್ತು ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ.

ರಾಧಾಕೃಷ್ಣ ಭಕ್ತ ಅವರ ಪಾರ್ಥಿವ ಶರೀರವನ್ನು ಕೋರ್ಟ್ ರಸ್ತೆಯಲ್ಲಿರುವ ಮನೆಯಲ್ಲಿ ಇರಿಸಲಾಗಿದ್ದು, ನಾಳೆ (ಮೇ.5) ಬೆಳಿಗ್ಗೆ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಮೃತರ ಸಹೋದರ ಯೋಗೀಶ್ ಭಕ್ತ ತಿಳಿಸಿದ್ದಾರೆ.

Recent News


Leave a Comment: