ಎರಡು ವರ್ಷಗಳ ಹಿಂದಿನ ಮನೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು

ಸುದ್ದಿಗಳು News

Posted by vidyamaana on 2024-07-03 08:00:29 |

Share: | | | | |


ಎರಡು ವರ್ಷಗಳ ಹಿಂದಿನ ಮನೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು

ಬೆಳ್ಳಾರೆ : ಎರಡು ವರ್ಷಗಳ ಹಿಂದೆ ನಡೆದ ಮನೆ ಕಳ್ಳತನ ಪ್ರಕರಣವನ್ನು ಬೆಳ್ಳಾರೆ ಪೊಲೀಸರು ಭೇದಿಸಿದ್ದಾರೆ.


ಪೊಲೀಸ್ ಠಾಣಾ ವ್ಯಾಪ್ತಿಯ ಕಡಬ ತಾಲೂಕು ಎಡಮಂಗಲ ಗ್ರಾಮದ ದಡ್ಡು ಎಂಬಲ್ಲಿ ನಡೆದ ಸುಮಾರು 1,48,000 ರೂ. ಮೌಲ್ಯದ ಚಿನ್ನಾಭರಣಗಳು ಮತ್ತು ನಗದು ಹಣ 30,000 ರೂ. ಸೇರಿ ಒಟ್ಟು 1,78,000 ರೂ. ಮೌಲ್ಯದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಠಾಣೆಯಲ್ಲಿ ಅಪರಾಧ ಕ್ರಮಾಂಕ. 22/2022 ಕಲಂ 457,380 ಭಾ. ದಂ. ಸಂ ರಂತೆ ಪ್ರಕರಣ ದಾಖಲಿಸಿಕೊಂಡು, ಕಳೆದ ಎರಡು ವರ್ಷಗಳಿಂದ ತನಿಖೆ ನಡೆಸಿದ್ದು, ಪ್ರಸ್ತುತ ಪ್ರಕರಣದ ಆರೋಪಿ ಬೆಳ್ತಂಗಡಿ ನೆರಿಯಾ ನಿವಾಸಿ ಶರತ್ (24) ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ಕಳವು ಮಾಡಿದ ಸೊತ್ತುಗಳನ್ನು ಪತ್ತೆ ಮಾಡಿ ಸ್ವಾದೀನಪಡಿಸಿಕೊಳ್ಳಲಾಗಿದೆ.

ಸದ್ರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಸಿ ಬಿ ರಿಷ್ಯಂತ್ ಐಪಿಎಸ್ ರವರು, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಗದೀಶ್ ಎಂ ಕೆ.ಎಸ್.ಪಿ.ಎಸ್ ಮತ್ತು ರಾಜೇಂದ್ರ ಕೆ.ಎಸ್.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ವಿಜಯ ಪ್ರಸಾದ್, ಪ್ರಭಾರ ಪೊಲೀಸ್ ಉಪಾಧೀಕ್ಷಕರು, ಪುತ್ತೂರು ಉಪವಿಭಾಗ ಮತ್ತು ಸುಳ್ಯ ವೃತ್ತ ನಿರೀಕ್ಷಕರಾದ ಸತ್ಯನಾರಾಯಣ ಕೆ ರವರ ನೇತೃತ್ವದಲ್ಲಿ, ಸಂತೋಷ್ ಬಿ ಪಿ ಪೊಲೀಸ್ ಉಪನಿರೀಕ್ಷಕರು, ಬೆಳ್ಳಾರೆ ಪೊಲೀಸ್ ಠಾಣೆ ಹಾಗೂ ಬೆಳ್ಳಾರೆ ಪೊಲೀಸ್ ಠಾಣಾ ಸಿಬ್ಬಂದಿಗಳಾದ ನವೀನ ಕೆ. ಚಂದ್ರಶೇಖರ್ ಗೌಡ, ಸಂತೋಷ್ ಜಿ. ಜೀಪು ಚಾಲಕ ಪುರಂದರ ಹಾಗೂ ಬೆರಳುಮುದ್ರೆ ಘಟಕದ ಪ್ರಶಾಂತ್ ಹೊಸಮನಿ ಮತ್ತು ಸಚಿನ್ ಬಿ. ಬಿ ರವರನ್ನೊಳಗೊಂಡು ವಿಶೇಷ ತನಿಖಾ ತಂಡವು ಕರ್ತವ್ಯ ನಿರ್ವಹಿಸಿರುತ್ತದೆ.

ಸದ್ರಿ ತನಿಖಾ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಂದ ಮತ್ತು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಯನ್ನು ವ್ಯಕ್ತವಾಗಿದೆ.

 Share: | | | | |


ಬೆಳ್ತಂಗಡಿ ಚಂದು ಎಲ್. ನಿಧನ

Posted by Vidyamaana on 2024-06-20 09:36:07 |

Share: | | | | |


ಬೆಳ್ತಂಗಡಿ  ಚಂದು ಎಲ್. ನಿಧನ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ದಲಿತ ಚಳವಳಿಯ ಮುಂಚೂಣಿ ನಾಯಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್ (52) ಅವರು ಅಲ್ಪ ಕಾಲದ‌ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಜೂ.19 ರಂದು ರಾತ್ರಿ ನಿಧನರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಲಿತ ಚಳವಳಿಯನ್ನು ಕಟ್ಟಿ ಬೆಳೆಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದ ಚಂದು ಎಲ್.

ಸಿನಿಮಾ ಆಗುತ್ತಿದೆ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ - ಕೊಲೆ ಪ್ರಕರಣ ಹೆಸರು ನೋಂದಣಿ

Posted by Vidyamaana on 2023-07-21 08:32:46 |

Share: | | | | |


ಸಿನಿಮಾ ಆಗುತ್ತಿದೆ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ - ಕೊಲೆ ಪ್ರಕರಣ ಹೆಸರು ನೋಂದಣಿ

ಬೆಂಗಳೂರು(ಜು.21) ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರಾ ಹಾಗೂ ಕೊಲೆ ಪ್ರಕರಣ ರಾಜ್ಯದಲ್ಲಿ ಬಾರಿ ಸಂಚಲನ ಸೃಷ್ಟಿಸಿದೆ. ಇತ್ತೀಚೆಗೆ ಸಿಬಿಐ ಕೋರ್ಟ್ ಆರೋಪಿ ಎಂದು ಜೈಲಿನಲ್ಲಿದ್ದ ಸಂತೋಷ್ ರಾವ್‌ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ದೋಷ ಮುಕ್ತಗೊಳಿಸಿತ್ತು. ಈ ತೀರ್ಪಿನ ಬಳಿಕ ಸೌಜನ್ಯ ಪ್ರಕರಣ ಮತ್ತೆ ಭುಗಿಲೆದ್ದಿದೆ. ನ್ಯಾಯಕ್ಕಾಗಿ ಸೌಜನ್ಯ ಪೋಷಕರು ಹಾಗೂ ಕೆಲ ಸಂಘಟನೆಗಳು ಹೋರಾಟ ನಡೆಸುತ್ತಿದೆ. . ಈ ಬೆಳವಣಿಗೆ ನಡುವೆ ಇದೀಗ ಇದೇ ಸೌಜನ್ಯ ಪ್ರಕರಣ ಸಿನಿಮಾ ಆಗುತ್ತಿದೆ. ಬೆಂಗಳೂರಿನ ಫಿಲ್ಮ್ ಚೇಂಬರ್‌ನಲ್ಲಿ ಸೌಜನ್ಯ ಚಿತ್ರದ ಹೆಸರು ನೊಂದಣಿಯಾಗಿದೆಸ್ಟೋರಿ ಆಫ್ ಸೌಜನ್ಯ ಹೆಸರಿನಲ್ಲಿ ಹೆಸರು ನೋಂದಣಿಯಾಗಿದೆ. ಖ್ಯಾತ ನಿರ್ದೇಶಕ ಲವ ನಿರ್ದೇಶನದಲ್ಲಿ ಚಿತ್ರ ಸೆಟ್ಟೇರಲಿದೆ. ಇಂದು ಸಾಮಾಜಿಕ ಚಿತ್ರವಾಗಲಿದೆ ಎಂದು ನಿರ್ದೇಶಕರು ಲವ ಹೇಳಿದ್ದಾರೆ. ಇನ್ನು ಜೆಕೆ ವೆಂಚರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ

ಶಿಲ್ಪಾ ಶೆಟ್ಟಿ ಪತಿಯು ಬ್ರೇಕ್ ಹೇಳಿದ್ದು ಪತ್ನಿಗಲ್ಲ: ಅಸಲಿ ವಿಷಯ ಬಹಿರಂಗ

Posted by Vidyamaana on 2023-10-20 20:47:53 |

Share: | | | | |


ಶಿಲ್ಪಾ ಶೆಟ್ಟಿ ಪತಿಯು ಬ್ರೇಕ್ ಹೇಳಿದ್ದು ಪತ್ನಿಗಲ್ಲ: ಅಸಲಿ ವಿಷಯ ಬಹಿರಂಗ

ಮಂಗಳೂರು ಮೂಲದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ನಿರ್ಮಾಪಕ ರಾಜ್ ಕುಂದ್ರಾ ಸೋಷಿಯಲ್ ಮೀಡಿಯಾದಲ್ಲಿ ಬ್ರೇಕ್ ಸ್ಟೋರಿ ಹಾಕುವುದರ ಮೂಲಕ ಶಾಕ್ ನೀಡಿದ್ದರು. ‘ನಾವು ಬೇರ್ಪಟ್ಟಿದ್ದೇವೆ. ಕಷ್ಟದ ಈ ಸಮಯದಲ್ಲಿ ನೀವು ನಮಗಷ್ಟು ಸಮಯ ಕೊಡಿ’ ಎಂದು ಬರೆದುಕೊಂಡಿದ್ದರು. ಶಿಲ್ಪಾ ಶೆಟ್ಟಿ ಜೊತೆ ಡಿವೋರ್ಸ್ (Divorce) ಏನಾದರೂ ಆಯಿತಾ ಎಂದು ಅಭಿಮಾನಿಗಳು ಆತಂಕಗೊಂಡಿದ್ದರು. ಕೊನೆಗೂ ಅಸಲಿ ಕಾರಣವನ್ನು ರಾಜ್ ಕುಂದ್ರಾ ಹೊರ ಹಾಕಿದ್ದಾರೆ.ಕಳೆದ ಎರಡು ವರ್ಷಗಳಿಂದ ಅವರು ಮನೆಯಿಂದ ಆಚೆ ಕಾಲಿಡುವಾಗ ಫೇಸ್ ಮಾಸ್ಕ್ ಧರಿಸುತ್ತಿದ್ದರು. ಆ ಮಾಸ್ಕ್ ನಿಂದ ಮುಕ್ತಿ ಪಡೆದುಕೊಂಡಿದ್ದಾರೆ. ಆ ವಿಷಯವನ್ನು ಅವರು ಅನುಮಾನ ಬರುವ ರೀತಿಯಲ್ಲಿ ಬರೆದುಕೊಂಡಿದ್ದರು. ಆ ಬರಹ ಕಂಡು ಬಹಳಷ್ಟು ಜನ ಶಿಲ್ಪಾ ಶೆಟ್ಟಿ ಅವರಿಂದ ರಾಜ್ ಕುಂದ್ರಾ ದೂರವಾಗಿದ್ದಾರೆ ಎಂದೇ ತಿಳಿದುಕೊಂಡಿದ್ದರು. ಇದೀಗ ಎಲ್ಲದಕ್ಕೂ ರಾಜ್ ಕುಂದ್ರಾ ತೆರೆ ಎಳೆದಿದ್ದಾರೆ.

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್

Posted by Vidyamaana on 2024-03-01 12:20:35 |

Share: | | | | |


ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್

ಬೆಂಗಳೂರು : ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್ ಲೀಸ್ಗೆ ಪಡೆದಿದ್ದರು. ಮೂರು ತಿಂಗಳು ಕಳೆಯುತ್ತಿದ್ದಂತೆ ಅವ್ರಿಗೆ ಕಾದಿತ್ತು ಮುಂದೆ ಶಾಕ್. ಬಾಗಿಲಿಗೆ ಬಂದ ಬ್ಯಾಂಕಿ ನೋಟಿಸ್ ನೋಡಿ ಶಾಕ್ ಆಗಿದ್ರು.ಏಕಾಏಕಿ ಬ್ಯಾಂಕಿನವರು ಮನೆಗೆ ಬೀಗ ಜಡಿದಿದ್ದು, ಪ್ಲಾಟ್ ಲೀಸ್ಗೆ ಪಡೆದವರು ಅತ್ತ ಇರಲು ಮನೆ ಇಲ್ಲದೆ, ಇತ್ತ ಕೊಟ್ಟ ಹಣವು ಇಲ್ಲದ ಬೀದಿ ಪಾಲಾಗಿದ್ದಾರೆ.. ಅಷ್ಟಕ್ಕೂ ಈ ಘಟನೆ ನಡೆದಿದಾದ್ರು ಎಲ್ಲಿ ಅಂತೀರಾ ನೋಡಿ ಈ ರಿಪೋರ್ಟ್ ನಲ್ಲಿ..


ಹೀಗೆ ಫೋಟೋದಲ್ಲಿ ಪೋಸ್ ಕೋಡುತ್ತಿರುವ ಇವ್ರು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಚಂದಾಪುರ ನಿವಾಸಿಗಳಾದ ಅಜಿತ್ ಕುಮಾರ್ ಮತ್ತು ಸುಜತಾ. ವಂಚನೆಯನ್ನೆ ಕಾಯಕ ಮಾಡಿಕೊಂಡಿರುವ ಇವ್ರು ಆನೇಕಲ್ ಪೊಲೀಸರ ಅತಿಥಿಯಾಗಿದ್ದಾರೆ. ಹೌದು ಚಂದಾಪುರ ರಸ್ತೆಯಲ್ಲಿನ ಯುಬಿಎಚ್ಸಿ ಅಪಾರ್ಟ್ಮೆಂಟ್ನಲ್ಲಿನ ತಮ್ಮ ಎರಡು ಪ್ಲಾಟ್ಗಳ ಮೇಲೆ ಬರೋಬ್ಬರಿ ಐವತ್ತು ಲಕ್ಷ ಲೋನ್ ಪಡೆದ ಅಸಾಮಿಗಳು ಅದೇ ಪ್ಲಾಟ್ ಗಳನ್ನು ಲೀಜ್ಗೆ ನೀಡಿ ಲಕ್ಷ ಲಕ್ಷ ವಸೂಲಿ ಮಾಡಿದ್ದಾರೆ. ಬಳಿಕ ಬ್ಯಾಂಕ್ ಲೋನ್ ಕಟ್ಟದೇ ಎಸ್ಕೇಪ್ ಆಗಿದ್ದಾರೆ. ಮೂರ್ನಾಲ್ಕು ನೋಟಿಸ್ ಕೊಟ್ಟ ಬ್ಯಾಂಕಿನವರು ಪ್ಲಾಟ್ ವಾಸಿಗಳನ್ನು ಉಟ್ಟಬಟ್ಟೆಯಲ್ಲಿ ಹೊರ ಹಾಕಿ ಬೀಗ ಜಡಿದಿದ್ದಾರೆ.ಇನ್ನೂ ರಿಯಲ್ ಎಸ್ಟೇಟ್ ಹೆಸರಲ್ಲಿ ರೀಲ್ ಬಿಟ್ಟು ಯಾಮಾರಿಸುವ ಅಜಿತ್ ಮತ್ತು ಸುಜತಾ ದಂಪತಿ ತಾವು ರಿಯಲ್ ಎಸ್ಟೇಟ್ ನಲ್ಲಿ ಒಳ್ಳೆಯ ಬಿಸಿನೆಸ್ ಮಾಡುತ್ತಿದ್ದೆವೆ. ತಮ್ಮದು ಸಾಕಷ್ಟು ಪ್ಲಾಟ್, ವಿಲ್ಲಾ ಮತ್ತು ನಿವೇಶನಗಳಿದ್ದು, ಕಡಿಮೆ ಬೆಲೆಗೆ ಲೀಜ್ ಮತ್ತು ಮಾರಾಟ ಮಾಡುತ್ತೆವೆ ಎಂದು ಜಾಹಿರಾತು ನೀಡುತ್ತಾರೆ. ಇವರ ಬಿಲ್ಡ್ ಅಪ್ ಕಂಡು ಇಂದು ಪ್ಲಾಟ್ ಲೀಜ್ ಪಡೆದವರು ಅಕ್ಷರಶಃ ಹಣ ಮತ್ತು ಮನೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಇನ್ನೂ ಸಾಕಷ್ಟು ಮಂದಿಗೆ ಅಜಿತ್ ದಂಪತಿ ಮಕ್ಮಲ್ ಟೋಪಿ ಹಾಕಿದ್ದು, ನಮಗೆ ನ್ಯಾಯ ಕೊಡಿಸಿ ಎಂದು ವಂಚನೆಗಳೊಗಾದ ಗ್ರಾಹಕರು ಆನೇಕಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.


ಇನ್ನೂ ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಂಚಕ ದಂಪತಿಯನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದು, ಲಕ್ಷಾಂತರ ರೂಪಾಯಿ ಹಣ ನೀಡಿ ಮನೆ ಲೀಸ್ಗೆ ಪಡೆದಿದ್ದ ಗ್ರಾಹಕರು ಅತ್ತ ನೀಡಿದ ಹಣವೂ ಕೈ ಸೇರದೆ ಇತ್ತ ಇರಲು ಮನೆಯು ಸಹ ಇಲ್ಲದೆ ಬೀದಿಗೆ ಬೀಳುವಂತಾಗಿದ್ದು ಮಾತ್ರ ವಿಪರ್ಯಾಸ ಸಂಗತಿ.

ನೂತನ ಸಹಾಯಕ ಆಯುಕ್ತ ಅಧಿಕಾರ ಸ್ವೀಕಾರ

Posted by Vidyamaana on 2023-07-10 12:40:11 |

Share: | | | | |


ನೂತನ ಸಹಾಯಕ ಆಯುಕ್ತ ಅಧಿಕಾರ ಸ್ವೀಕಾರ

ಪುತ್ತೂರು: ನೂತನ ಸಹಾಯಕ ಆಯುಕ್ತರಾಗಿ ಕೆ. ಮಹೇಶಚಂದ್ರ ಸೋಮವಾರ ಅಧಿಕಾರ ಸ್ವೀಕರಿಸಿದರು.

ಕೆ.ಐ.ಎ.ಡಿ.ಬಿ.ಯ ಬೈಕಂಪಾಡಿ ಕಚೇರಿಯಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದ ಮಹೇಶಚಂದ್ರ ಕೆ. ಅವರು ಇನ್ನು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಗಿರೀಶ್ ನಂದನ್ ಅವರು ಎತ್ತಿನಹೊಳೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದು, ತೆರವಾದ ಹುದ್ದೆಗೆ ಕೆ. ಮಹೇಶಚಂದ್ರ ಆಗಮಿಸಿದ್ದಾರೆ.

ಉಳ್ಳಾಲದಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ – ವಿಟ್ಲ ಕೋಡಿ ಮೂಲದ ರುಕಿಯ ಸಹಿತ ನಾಲ್ವರ ಬಂಧನ- ಪಿಂಪ್‌ ಲತೀಫ್ ಪರಾರಿ

Posted by Vidyamaana on 2023-03-08 11:42:43 |

Share: | | | | |


ಉಳ್ಳಾಲದಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ – ವಿಟ್ಲ ಕೋಡಿ ಮೂಲದ ರುಕಿಯ ಸಹಿತ ನಾಲ್ವರ ಬಂಧನ- ಪಿಂಪ್‌ ಲತೀಫ್ ಪರಾರಿ

ಉಳ್ಳಾಲ: ವೇಶ್ಯಾವಾಟಿಕೆ ದಂಧೆಯನ್ನು ಭೇದಿಸಿರುವ ಉಳ್ಳಾಲ ಪೊಲೀಸರು, ಮಹಿಳೆ ಸೇರಿದಂತೆ ನಾಲ್ವರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ. ದಾಳಿಯ ವೇಳೆ ಗ್ರಾಹಕ ಹಾಗೂ ಮಹಿಳೆಯರ ಮಧ್ಯೆ ಪಿಂಪ್‌ ರೀತಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿ ಪರಾರಿಯಾಗಿ ತಪ್ಪಿಸಿಕೊಂಡಿದ್ದಾನೆ.ಬಂಟ್ವಾಳದ ಬೋಳಂತೂರು ವಿಟ್ಲಕೋಡಿ ನಿವಾಸಿ ರುಕಿಯಾ (50), ಉಳ್ಳಾಲ ಸುಭಾಶ್ ನಗರ, ಕಡಪರನಿವಾಸಿ ಅಬ್ದುಲ್ ಶಮೀರ್ (30), ಬೆಳ್ತಂಗಡಿ ಕಾಣಿಯೂರು ನೋಂಡಿಲ್ ಕಜೆ ಮನೆ ನಿವಾಸಿ ಅಬ್ದುಲ್ ರಝಾಕ್ ಉಸ್ಮಾನ್ (45) ಹಾಗೂ ಉಳ್ಳಾಲ ಅಕ್ಕರೆಕೆರೆಮಿಲಾಸ್ ಪ್ಲಾಟ್ ನಿವಾಸಿ ಮುಹಮ್ಮದ್ ಇಬ್ರಾಹೀಂ(38) ಬಂಧಿತ ಆರೋಪಿಗಳು. ಲತೀಫ್ ಎಂಬಾತ ತಲೆಮರೆಸಿಕೊಂಡಿರುವ ಪಿಂಪ್‌.ಉಳ್ಳಾಲದ ಪೆರ್ಮನ್ನೂರು ಗ್ರಾಮದ ಪಂಡಿತ್ ಹೌಸ್ ವಿಜೇತ ನಗರದಲ್ಲಿರುವ ʼ ಯಾನ್ವಿʼ   ಎಂಬ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಬಂದ ಮೇರೆಗೆ ಉಳ್ಳಾಲ ಪೊಲೀಸರು ,  ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ದಾಳಿ ನಡೆಸಿದ್ದಾರೆ.   ಈಸಂಬಂಧ ರುಕಿಯಾ ಮತ್ತು ಲತೀಫ್ ಎಂಬವರ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತುರುಕಿಯಾಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿ ಲತೀಫ್  ತಲೆಮರೆಸಿಕೊಂಡಿದ್ದಾನೆ. ದಾಳಿಯ ವೇಳೆ 3 ದ್ವಿಚಕ್ರ ವಾಹನಗಳು, 9 ಮೊಬೈಲ್ ಫೋನ್’ಗಳು, 5000 ರೂ.ನಗದು ಸೇರಿ ಒಟ್ಟು 1,76,580 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಉಳ್ಳಾಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಂದೀಪ್ ಜಿ.ಎಸ್ ಹಾಗೂ ಪಿಎಸ್ಐ ಮಂಜುಳಾ, ಸಿಬ್ಬಂದಿಗಳಾದ ಮಂಜುನಾಥ್, ವಾಸುದೇವ, ಚವ್ಹಾಣ್, ದಾಕ್ಷಾಯಿಣಿ, ಲಕ್ಷ್ಮೀ, ಎಸಿಪಿ ಸ್ಮಾಡ್ ಸಿಬ್ಬಂದಿ ರೆಜಿ ಭಾಗವಹಿಸಿದ್ದರು.



Leave a Comment: