ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

ಸುದ್ದಿಗಳು News

Posted by vidyamaana on 2024-07-03 19:28:29 |

Share: | | | | |


ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು:  ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಶಾಸಕ ಅಶೋಕ್ ರೈ ಕಚೇರಿ ಮೂಲಕ ಉಚಿತ ಕಾರ್ಮಿಕ ಇ ಕಾರ್ಡು ಮಾಡಿಸಿಕೊಂಡ ಕಟ್ಟಡ ಕಾರ್ಮಿಕರಿಗೆ ಕಾರ್ಡು ವಿತರಣಾ ಕಾರ್ಯಕ್ರಮ ಶಾಸಕರ ಕಚೇರಿಯಲ್ಲಿ ನಡೆಯಿತು.

ಒಟ್ಟು ೩೪ ಮಂದಿ ಕಾರ್ಮಿಕರಿಗೆ ಕಾರ್ಡು ವಿತರಿಸಲಾಯಿತು. ಕಟ್ಟಡ ಕಾರ್ಮಿಕರು ಶಾಸಕರ ಕಚೇರಿ ಮೂಲಕ ನೋಂದಾವಣೆ ಮಾಡಿಕೊಂಡಿದ್ದರು. ಇ ಕಾರ್ಡು ವಿತರಿಸಿ ಮಾತನಾಡಿದ ಶಾಸಕರು ರಾಜ್ಯ ಸರಕಾರದಿಂದ ಕಾರ್ಮಿಕರಿಗ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ.ಆಕಸ್ಮಿಕಮರಣಾವಾದರೆ ರೂ ೧ ಲಕ್ಷ ಮತ್ತು ಅಪಘಾತದಲ್ಲಿ ಮರಣಹೊಂದಿದರೆ ೫ ಲಕ್ಷ ಸರಕಾರದಿಂದ ಪರಿಹಾರ ಸಿಗುತ್ತದೆ. ಕಾರ್ಮಿಕರು ತನ್ನ ಕಚೇರಿ ಮೂಲಕವೇ ನೋಂದಣಿ ಮಾಡಿಕೊಳ್ಳಬಹುದು. ಒಟ್ಟು ೩೦೦೦ ಮಂದಿಗೆ ಕಾರ್ಡು ವಿತರಣೆ ಮಾಡಲಾಗಿದೆ.

ಕಟ್ಟಡ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಸರಕಾರ ನೀಡುತ್ತಿದೆ. ಕಳೆದ ಸಾಲಿನಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್ ಕೂಡಾ ವಿತರಣೆ ಮಾಡಲಾಗಿದೆ. ಕಟ್ಟಡ ಕಾರ್ಮಿಕರು ಈ ಸೌಲಭ್ಯವನ್ನು ಪಡೆದುಕೊಳ್ಳುವುದರ ಜೊತೆ ಇದುವರೆಗೂ ಕಾರ್ಡು ಮಾಡಿಸದವರು ಶಾಸಕರ ಕಚೇರಿಗೆ ಬಂದು ಉಚಿತವಾಗಿ ಕಾರ್ಡು ಮಾಡಿಸಿಕೊಳ್ಳಬಹುದಾಗಿದೆ ಎಂದು ಶಾಸಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಮಾಧ್ಯಮ ಸಂಚಾಲಕ ಕೃಷ್ಣಪ್ರಸಾದ್ ಭಟ್ ಬೊಳ್ಳಾಯಿ ಉಪಸ್ಥಿತರಿದ್ದರು. ಸಿಬಂದಿ ರಚನಾ ಸ್ವಾಗತಿಸಿ ವಂದಿಸಿದರು.

 Share: | | | | |


ಕರ್ನಾಟಕದಿಂದ ಟೋಮೆಟೋ ಖರೀದಿಗೆ ಕೇಂದ್ರ ಸರಕಾರದಿಂದ ಸೂಚನೆ

Posted by Vidyamaana on 2023-07-13 09:51:46 |

Share: | | | | |


ಕರ್ನಾಟಕದಿಂದ ಟೋಮೆಟೋ ಖರೀದಿಗೆ ಕೇಂದ್ರ ಸರಕಾರದಿಂದ ಸೂಚನೆ

ನವದೆಹಲಿ: ದೇಶದಲ್ಲೆಡೆ ಟೊಮೆಟೋ ದರ ಏರಿಕೆಯಾಗಿದೆ. ಕೆ.ಜಿಗೆ 150 ರೂ ದಾಟಿದಂತೆ ದರ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕ್ರಮಕೈಗೊಳ್ಳಲು ಮುಂದಾಗಿದೆ

ಹೆಚ್ಚು ಟೊಮೆಟೋ ಬೆಳೆಯುವ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಂದ ಬೆಳೆ ಖರೀದಿಸಿ ವಿತರಿಸುವ ನಿಟ್ಟಿನಲ್ಲಿ ಭಾರತದ ರಾಷ್ಟ್ರೀಯ ಗ್ರಾಹಕರ ಸಹಕಾರ ಒಕ್ಕೂಟ , ಭಾರತದ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟಗಳಿಗೆ ಕೇಂದ್ರ ಸೂಚನೆ ನೀಡಿದೆ.


ಈ ಹಿನ್ನಲೆ ಗಗನಕ್ಕೇರಿರುವ ಟೊಮೆಟೋ ದರ ಇಳಿಕೆಯಾಗುವ ಸಾಧ್ಯತೆ ಇದೆ. ಜು.14 ಅನ್ವಯವಾಗುವಂತೆ ದಿಲ್ಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ ದ ವ್ಯಾಪ್ತಿಯಲ್ಲಿ ಎನ್‌ಸಿಸಿಎಫ್ ಮತ್ತು ನಾಫೆಡ್‌ ವತಿಯಿಂದ ಟೊಮೆಟೋವನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವ ಬಗ್ಗೆ ಕೇಂದ್ರ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ ಸೂಚಿಸಿದೆ.


ಯಾವ ಭಾಗದಲ್ಲಿ ಹೆಚ್ಚು ಬೇಡಿಕೆ ಇದೆ ಅದರ ಆಧಾರದಲ್ಲಿ ಟೊಮೆಟೋ ಪೂರೈಸಬೇಕು ಎಂಬ ವಿಚಾರವನ್ನೂ ಗುರುತಿಸಲಾಗಿದ್ದು, ಗುಜರಾತ್‌, ಮಧ್ಯಪ್ರದೇಶ, ಮಹಾರಾಷ್ಟ್ರದ ಸತಾರಾ, ನಾರಾಯಣಗಾಂವ್‌ ಮತ್ತು ನಾಸಿಕ್‌, ಆಂಧ್ರಪ್ರದೇಶದದಿಂದ ಹೆಚ್ಚಿನ ಪ್ರಮಾಣದಲ್ಲಿ ಟೋಮೋಟೋ ಪೂರೈಕೆಯಾಗುತ್ತದೆ. ಇನ್ನು ದಿಲ್ಲಿ ಮತ್ತು ಎನ್‌ಸಿಆರ್‌ಗೆ ಕರ್ನಾಟಕದ ಕೋಲಾರ, ಹಿಮಾಚಲ ಪ್ರದೇಶದಿಂದ ಟೊಮೆಟೋ ಪೂರೈಕೆಯಾಗುತ್ತದೆ.


ಹೀಗಾಗಿ ನಾಸಿಕ್‌ನಿಂದ ಹೊಸ ಬೆಳೆ ಪೂರೈಕೆಯಾಗಲಿದೆ. ಮುಂದಿನ ತಿಂಗಳು ನಾರಾಯಣಗಾಂವ್‌, ಔರಂಗಾಬಾದ್‌, ಮಧ್ಯಪ್ರದೇಶಗಳಿಂದ ಮಾರುಕಟ್ಟೆಗೆ ಟೊಮೆಟೋ ಪೂರೈಕೆಯಾಗುವ ವಿಶ್ವಾಸವನ್ನುಸರಕಾರದ ಮೂಡಿಸಿದೆ.

ಸುಳ್ಯದಲ್ಲಿ ಎರಡು ಖಾಸಗಿ ಬಸ್ ಸೀಝ್

Posted by Vidyamaana on 2023-07-06 02:15:00 |

Share: | | | | |


ಸುಳ್ಯದಲ್ಲಿ ಎರಡು ಖಾಸಗಿ ಬಸ್  ಸೀಝ್

ಸುಳ್ಯ; ಅತೀ ಹಳೆಯ ಪರ್ಮಿಟ್ ಹೊಂದಿದ್ದ ಎರಡು ಖಾಸಗಿ ಬಸ್ ಗಳನ್ನು ಆರ್ ಟಿ ಓ ಅಧಿಕಾರಿಗಳು ಸೀಝ್ ಮಾಡಿದ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯ - ಮಂಡೆಕೋಲು ಮಾರ್ಗದಲ್ಲಿ ಸಂಚರಿಸುತ್ತಿದ್ದ ಎರಡು ಬಸ್ ಗಳನ್ನು ಸೋಮವಾರ ಮುಂಜಾನೆ ಸಾರಿಗೆ ಇಲಾಖೆ ಇನ್ಸ್ ಪೆಕ್ಟರ್ ಇಸ್ಮಾನ್ ನೇತೃತ್ವದಲ್ಲಿ ಪುತ್ತೂರು ಆರ್ ಟಿ ಓ ಅಧಿಕಾರಿಗಳ ತಂಡ ಸೀಝ್ ಮಾಡಿದೆ.


ಹಿಂದಿನಿಂದಲೂ ಅಜ್ಜಾವರ ಮಂಡೆಕೋಲು - ಅಡೂರು ಗೆ ತೆರಳುತ್ತಿದ್ದ ಕೆಎ-20-ಸಿ-1809 ಖಾಸಗಿ ಬಸ್ ಅನಿಲ್ ಛಾತ್ರ ಎಂಬುವವರ ಹೆಸರಿನಲ್ಲಿದ್ದು ಈ ಬಸ್ಸು ಒಂದು ಲಕ್ಷದ ಹನ್ನೆರಡು ಸಾವಿರ ಟ್ಯಾಕ್ಸ್ ಉಳಿಸಿಕೊಂಡಿದೆ. ಅಲ್ಲದೇ ಕೆಎ-19-ಸಿ-0329 ಎಂಬ ಸಂಖ್ಯೆಯ ಇನ್ನೊಂದು ಬಸ್ ಸುಮಾರು ಮೂವತ್ತೊಂಬತ್ತು ಸಾವಿರ ಟ್ಯಾಕ್ಸ್ ಉಳಿಸಿಕೊಂಡಿದೆ. ಇವುಗಳಲ್ಲಿ ಒಂದು ಡಿಸೆಂಬರ್ ತಿಂಗಳಿನಲ್ಲಿ ಹಾಗೂ ಇನ್ನೊಂದು ಜನವರಿ ತಿಂಗಳಿನಲ್ಲಿ ಅವಧಿ ಮುಗಿದಿದ್ದರೂ ನವೀಕರಣ ಮಾಡದೇ ಬಸ್ ಗಗಳನ್ನು ಓಡಿಸುತ್ತಿರುವ ಕುರಿತು ಆರ್ ಟಿ ಓ ಅಧಿಕಾರಿಗಳಿಗೆ ದೂರು ಕೇಳಿಬಂದಿತ್ತು ಈ ಹಿನ್ನೆಲೆ ಬಸ್ ಗಳನ್ನು ಸೀಝ್ ಮಾಡಿದ್ದಾರೆ.ಸೀಝ್ ಆಗಿರುವ ಬಸ್ಸುಗಳು ಚೆನ್ನಕೇಶವ ದೇವಾಲಯದ ಬಳಿಯಲ್ಲಿ ಪೋಲೀಸ್ ಸುಪರ್ದಿಗೆ ನೀಡಲಾಗಿದೆ. ಈ ಕುರಿತಂತೆ ಕಾನೂನು ರೀತಿಯಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಹಾಗೂ ಪರವಾನಿಗೆ ಹೊಂದಿದ ಮಾಲಕರು ನೋಟಿಸ್ ಗೆ ಉತ್ತರ ಸಲ್ಲಿಸಿದ ಬಳಿಕ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎನ್ನಲಾಗಿದೆ.

ಲುಲು ಗ್ರೂಪ್ ಇಂಟರ್‌ನ್ಯಾಶನಲ್‌ನ ಅಧ್ಯಕ್ಷ ಖ್ಯಾತ ಅನಿವಾಸಿ ಉದ್ಯಮಿ ಯೂಸುಫ್ ಅಲಿಗೆ ED ಸಮನ್ಸ್

Posted by Vidyamaana on 2023-03-14 08:29:22 |

Share: | | | | |


ಲುಲು ಗ್ರೂಪ್ ಇಂಟರ್‌ನ್ಯಾಶನಲ್‌ನ ಅಧ್ಯಕ್ಷ ಖ್ಯಾತ ಅನಿವಾಸಿ ಉದ್ಯಮಿ ಯೂಸುಫ್ ಅಲಿಗೆ ED ಸಮನ್ಸ್

ನವದೆಹಲಿ: ಲುಲು ಮಾಲ್ ಗುಂಪುಗಳ ಒಡೆಯ, ಯುಎಇ ನೆಲೆಯ ಉದ್ಯಮಿ ಎಂ. ಎ. ಯೂಸುಫ್ ಅಲಿ ಅವರಿಗೆ ಜಾರಿ ನಿರ್ದೇಶನಾಲಯ-ಇಡಿ ಅಕ್ರಮ ಹಣ ವರ್ಗಾವಣೆ ಸಂಬಂಧ ಸಮನ್ಸ್ ಜಾರಿ ಮಾಡಿದೆ.

ರೂ. 300 ಕೋಟಿಗಳಷ್ಟು ಹಣ ವರ್ಗಾವಣೆ ಮಾಡಿರುವುದಾಗಿ ಇ.ಡಿ. ಆರೋಪಿಸಿದೆ. ಯುನೈಟೆಡ್ ಅರಬ್’ನಲ್ಲಿದ್ದುಕೊಂಡು ಖಾಸಗಿ ಸಂಸ್ಥೆಗಳ ಮೂಲಕ ಕೇರಳ ಸರಕಾರದೊಂದಿಗೆ ಜಂಟಿ ಯೋಜನೆಯಾಗಿ ಲೈಫ್ ಮಿಶನ್ ಎಂಬ ಜನ ಮನೆ ನಿರ್ಮಾಣದಲ್ಲಿ ಅಲಿ ಅಕ್ರಮ ಎಸಗಿದ್ದಾರೆ ಎಂದು ಇ.ಡಿ.ಹೇಳಿದೆ.

ಮಾರ್ಚ್ 1ರಂದು ಹಾಜರಾಗುವಂತೆ ಜಾರಿ ನಿರ್ದೇಶನಾಲಯದ ಕೊಚ್ಚಿ ಕಚೇರಿಯು ಯೂಸುಫ್ ಅಲಿಯವರಿಗೆ ಹಿಂದೆ ನೋಟಿಸ್ ನೀಡಿತ್ತು. ಯುಎಇಯಲ್ಲಿರುವ ಅಲಿಯವರಿಗೆ ಬರಲಾಗಿಲ್ಲ. ಮಾರ್ಚ್ 16ರಂದು ಕೊಚ್ಚಿ ಇಡಿ ಕಚೇರಿಗೆ ವಿಚಾರಣೆಗೆ ಬರುವಂತೆ ಅಕ್ರಮ ಹಣ ವರ್ಗಾವಣೆ ತಡೆ ಏಜೆನ್ಸಿಯು ಆಲಿಯವರಿಗೆ ಸಮನ್ಸ್ ನೀಡಿದೆ. ಚಿನ್ನದ ಅಕ್ರಮ ಸಾಗಣೆ ಸಂಬಂಧ ಬಂಧಿಸಲಾಗಿರುವ ತಿರುವನಂತಪುರದ ಯುಎಇ ರಾಯಭಾರಿ ಕಚೇರಿಯ ಹಿಂದಿನ ಉದ್ಯೋಗಿ ಸ್ವಪ್ನ ಸುರೇಶ್ ಪ್ರಕರಣದಲ್ಲಿ ಇತ್ತೀಚೆಗೆ ಅಲಿ ಹೆಸರು ಕೇಳಿ ಬಂದಿತ್ತು. ಹಿಂದೆ ಈಗಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮುಖ್ಯ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಶಿವಶಂಕರನ್ ಕೂಡ ಈ ಚಿನ್ನದ ಕಳ್ಳ ಸಾಗಣೆ ವ್ಯವಹಾರದಲ್ಲಿ ಹುದ್ದೆ ದುರುಪಯೋಗಿಸಿಕೊಂಡುದಕ್ಕಾಗಿ ಬಂಧಿಸಲ್ಪಟ್ಟಿದ್ದಾರೆ.

ಶಿವಶಂಕರನ್ ಅವರು ಮನೆ ನಿರ್ಮಾಣದ ಕೇರಳದ ಲೈಫ್ ಮಿಶನ್ ಕಾರ್ಯಕ್ರಮದಲ್ಲಿ ಅಕ್ರಮ ಎಸಗಿರುವುದು ಸಹ ತಿಳಿದು ಬಂದಿದೆ. ಈ ವಿವಾದದ ಮನೆ ಯೋಜನೆಯನ್ನು ಖಾಸಗಿಯವರ ಪಾಲುದಾರಿಕೆಯಲ್ಲಿ ಮಾಡಲಾಗಿದೆ. ಈ ಖಾಸಗಿ ಪಾಲುದಾರ ಕಂಪೆನಿಗಳು ಯುಎಇ ಮೂಲದವಾಗಿದ್ದು, ಅವುಗಳಲ್ಲಿ ಕೆಲವು ಯೂಸುಫ್ ಅಲಿ ಒಡೆತನದವು ಎಂದು ಹೇಳಲಾಗಿದೆ. ಈ ಲೈಫ್ ಮಿಶನ್ ಯೋಜನೆಯಡಿ ಯೂಸುಫ್ ಅಲಿ 300 ಕೋಟಿ ರೂಪಾಯಿ ಅಕ್ರಮ ವರ್ಗಾವಣೆ ಮಾಡಿದ್ದಾರೆ ಎನ್ನುವುದು ಇಡಿ ಆರೋಪ.

ಕಳೆದ 30 ವರ್ಷಗಳಿಂದ ಯುಎಇಯಲ್ಲಿ ಉದ್ಯಮಿಯಾಗಿರುವ ಕೇರಳ ಮೂಲದ ಯೂಸುಫ್ ಅಲಿಯವರು ಲುಲು ಮಾಲ್’ಗಳ ಸರಣಿಗಳನ್ನು ಸಾಕಷ್ಟು ಹೊಂದಿದ್ದಾರೆ. ಕೇರಳದ ಕಾಂಗ್ರೆಸ್ ಮತ್ತು ಸಿಪಿಎಂ ನಾಯಕರೊಂದಿಗೆ ಅಲಿಯವರಿಗೆ ಉತ್ತಮ ಸಂಬಂಧವಿದೆ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಲಿಯವರು ಕಾಂಗ್ರೆಸ್, ಎಡ ಪಕ್ಷಗಳ ಜೊತೆಗಿರುವಂತೆಯೇ ಬಿಜೆಪಿ ನಾಯಕರ ಸಂಗಡವೂ ಸಂಬಂಧ ಕುದುರಿಸಿಕೊಂಡಿದ್ದಾರೆ.

ಯೂಸುಫ್ ಅಲಿಯವರ ಕಂಪೆನಿಗಳು 94% ಷೇರುಗಳು ಕೇಮನ್ ದ್ವೀಪದ ಸಂಸ್ಥೆಗಳೊಡನೆ ಸಂಬಂಧ ಹೊಂದಿದೆ. ಉಳಿಕೆ 6% ಷೇರುಗಳು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಕಿರಿಯ ಮಗ ವಿವೇಕ್ ದೋವಲ್ ಹೆಸರಿನಲ್ಲಿವೆ. 2018ರಲ್ಲಿ ಯೂಸುಫ್ ಅಲಿಯವರು ತನ್ನ ಯುಎಇ ಮನೆಯಲ್ಲಿ ರಾಹುಲ್ ಗಾಂಧಿಯವರಿಗೆ ಆತಿಥ್ಯ ನೀಡಿದ್ದರು.

ಡ್ರಾಮಾ ಜೂನಿಯರ್ ಸೀಸನ್ 5 - ಕುಡ್ಲದ ರಿಷಿಕಾ ಕುಂದೇಶ್ವರ ಮತ್ತು ಕುಣಿಗಲ್‌ನ ವಿಷ್ಣು ಜಂಟಿ ವಿನ್ನರ್

Posted by Vidyamaana on 2024-04-22 13:28:29 |

Share: | | | | |


ಡ್ರಾಮಾ ಜೂನಿಯರ್ ಸೀಸನ್ 5 - ಕುಡ್ಲದ ರಿಷಿಕಾ ಕುಂದೇಶ್ವರ ಮತ್ತು ಕುಣಿಗಲ್‌ನ ವಿಷ್ಣು ಜಂಟಿ ವಿನ್ನರ್

ಮಂಗಳೂರು, ಎ.22: ಜೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ ಸೀಸನ್ 5ರಲ್ಲಿ ಮಂಗಳೂರಿನ ರಿಷಿಕಾ ಕುಂದೇಶ್ವರ ಮತ್ತು ತುಮಕೂರು ಜಿಲ್ಲೆಯ ಕುಣಿಗಲ್‌ನ ವಿಷ್ಣು ಡ್ರಾಮಾ ಜೂನಿಯರ್ ವಿನ್ನರ್‌ ಆಗಿ ಹೊರಹೊಮ್ಮಿದ್ದಾರೆ. 

ಭಾನುವಾರ ರಾತ್ರಿ ಸೀಸನ್‌ 5ರ ವಿಜೇತರು ಯಾರು ಎಂಬುದನ್ನು ಘೋಷಿಸುವ ಮೂಲಕ ಕಾರ್ಯಕ್ರಮ ಮುಕ್ತಾಯ ಕಂಡಿದೆ. ಈ ಸಲ ಇಬ್ಬರನ್ನು ವಿಜೇತರಾಗಿ ಆಯ್ಕೆ ಮಾಡಲಾಗಿದೆ‌. ರಾಜ್ಯದ 31 ಜಿಲ್ಲೆಗಳಿಂದ ಹಲವಾರು ಬಾಲ ಪ್ರತಿಭೆಗಳನ್ನು ಆಡಿಷನ್‌ ಮೂಲಕ ಆಯ್ಕೆ ಮಾಡಲಾಗಿತ್ತು. ಮೊದಲ ವಾರದಿಂದಲೇ ಶುರುವಾದ ಮಕ್ಕಳ ಆಟ, ಫಿನಾಲೆ ಹಂತಕ್ಕೆ ಬರುವ ವರೆಗೂ ಬರೋಬ್ಬರಿ 200ಕ್ಕೂ ಅಧಿಕ ಸ್ಕಿಟ್‌ಗಳನ್ನು ಮಾಡಿ ಮುಗಿಸಿದ್ದರು. ಪುಟಾಣಿಗಳು. ಪೌರಾಣಿಕ, ಸಾಮಾಜಿಕ, ಹಾಸ್ಯ ಪ್ರಧಾನ ಎಲ್ಲ ಬಗೆಯ ಶೋಗಳಿಂದಲೇ ಈ ಸಲದ ವೇದಿಕೆಯನ್ನು ರಂಗಾಗಿಸಿದ್ದರು. 21 ವಾರ ಕರುನಾಡನ್ನು ಮನರಂಜಿಸಿದ 14 ಮಕ್ಕಳ ಪೈಕಿ ಯಾರು ವಿಜೇತರು ಎಂಬ ಕೌತುಕಕ್ಕೆ ಭಾನುವಾರ ತೆರೆಬಿದ್ದಿದೆ. ಈ ಬಾರಿ ಎಲ್ಲ14 ಮಂದಿ ಪುಟಾಣಿಗಳು ಫಿನಾಲೆ ಸುತ್ತಿನಲ್ಲಿದ್ದರು. ಆ ಪೈಕಿ ಫಿನಾಲೆ ರೌಂಡ್‌ನಲ್ಲಿ ಭದ್ರಾವತಿಯ ಇಂಚರ, ಶಿವಮೊಗ್ಗದ ಮಹಾಲಕ್ಷ್ಮೀ, ಮಂಗಳೂರಿನ ರಿಶಿಕಾ,

ಕಾಂಗ್ರೆಸ್ ಸಮಾಲೋಚನಾ ಸಭೆಯಲ್ಲಿ ಸೋಲು – ಗೆಲುವಿನ ಲೆಕ್ಕಾಚಾರ

Posted by Vidyamaana on 2023-05-30 09:10:06 |

Share: | | | | |


ಕಾಂಗ್ರೆಸ್ ಸಮಾಲೋಚನಾ ಸಭೆಯಲ್ಲಿ ಸೋಲು – ಗೆಲುವಿನ ಲೆಕ್ಕಾಚಾರ

ಪುತ್ತೂರು: ವಿಧಾನಸಭಾ ಚುನಾವಣೆಯಲ್ಲಿ ಸೋಲು – ಗೆಲುವಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಂಗಳೂರು ಜಿಲ್ಲಾ ಕಚೇರಿಯಲ್ಲಿ ಸಮಾಲೋಚನಾ ಸಭೆ ನಡೆಯಿತು.

ಜಿಲ್ಲಾ  ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಸೋಲು – ಗೆಲುವಿನ ಬಗ್ಗೆ ವಿಮರ್ಶೆ ನಡೆಯಿತು.

ಪುತ್ತೂರು ಶಾಸಕ ಅಶೋಕ್ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಸಹಿತ ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಿದ ಬಂಟ್ವಾಳ ಪೊಲೀಸರು

Posted by Vidyamaana on 2024-02-13 11:08:34 |

Share: | | | | |


ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಿದ ಬಂಟ್ವಾಳ ಪೊಲೀಸರು

ಬಂಟ್ವಾಳ : ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.


ಮಂಚಿ ಗ್ರಾಮ ಕುಕ್ಕಾಜೆ ನಿವಾಸಿ ಮಹಮ್ಮದ್ ಸಮೀವುಲ್ಲಾ, ಮಂಚಿ ಗ್ರಾಮ ಕಂಚಿಲ ನಿವಾಸಿ ಇಬ್ರಾಹಿಂ ಬಂಧಿತರು.ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಅ.ಕ್ರ 04/2004 ಕಲಂ: 147,148,504,447,427, 435, 324,326,307,506 r/w 149 ಐಪಿಸಿ ಪ್ರಕರಣದಲ್ಲಿ ಆರೋಪಿಗಳಾದ ಮಹಮ್ಮದ್ ಸಮೀವುಲ್ಲಾ (34) ಹಾಗೂ ಇಬ್ರಾಹಿಂ (35) ಎಂಬವರುಗಳು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಅವರನ್ನು ಫೆ.12 ರಂದು ಪೊಲೀಸ್ ಉಪನಿರೀಕ್ಷರಾದ ಮೂರ್ತಿ, ಸಿಬ್ಬಂದಿಗಳಾದ ಹೆಚ್ ಸಿ ಕೃಷ್ಣ ಮತ್ತು ಪಿ ಸಿ ಯೋಗೇಶ್ ಡಿ ಎಲ್ , ಪುನೀತ್ ರವರು ಬೆಂಗಳೂರಿನಲ್ಲಿ ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.


ನ್ಯಾಯಾಲಯವು ಸದ್ರಿ ಆರೋಪಿಗಳಿಗೆ ನ್ಯಾಯಾಂಗ ಬಂಧನದ ವಿಧಿಸಿರುತ್ತದೆ.



Leave a Comment: