ಮಂಗಳೂರು : ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ ಪ್ರಕರಣ ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಚಂದನ್ ಕುಮಾರ್ ಮೃತ್ಯು

ಸುದ್ದಿಗಳು News

Posted by vidyamaana on 2024-07-03 20:52:26 |

Share: | | | | |


ಮಂಗಳೂರು : ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ ಪ್ರಕರಣ ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಚಂದನ್ ಕುಮಾರ್ ಮೃತ್ಯು

ಮಂಗಳೂರು : ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ ಸಂಭವಿಸಿ ಮಣ್ಣಿನಡಿ ಸಿಲುಕಿದ್ದ ಓರ್ವ ಕಾರ್ಮಿಕ ಮೃತಪಟ್ಟ ಘಟನೆ ನಗರದ ಬಲ್ಮಠ ಬಳಿ ಬುಧವಾರ ಸಂಭವಿಸಿದೆ.ಮೃತ ಕಾರ್ಮಿಕನನ್ನು ಉತ್ತರ ಪ್ರದೇಶ ಮೂಲದ ಚಂದನ್ ಕುಮಾರ್ (30) ಎಂದು ತಿಳಿದು ಬಂದಿದೆ.ಮಧ್ಯಾಹ್ನ ಕಟ್ಟಡದ ಕಾಮಗಾರಿ ನಡೆಯುತಿದ್ದ ವೇಳೆ ಭೂಕುಸಿತ ಸಂಭವಿಸಿ ಮಣ್ಣಿನಡಿ ಇಬ್ಬರು ಕಾರ್ಮಿಕರು ಸಿಲುಕಿದ್ದರು.

ಘಟನೆ ನಡೆದ ವಿಚಾರ ತಿಳುಯುತ್ತಲೇ ಸ್ಥಳಕ್ಕೆ ಅಗ್ನಿಶಾಮಕ ದಳ , ಎಸ್ ಡಿ ಆರ್ ಎಫ್, ಎನ್ ಡಿ ಆರ್ ಎಫ್ ತಂಡ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಲು ಆರಂಭಿಸಿದ್ದಾರೆ ಇದಾದ ಕೆಲವು ಗಂಟೆಗಳ ಬಳಿಕ ಓರ್ವ ಕಾರ್ಮಿಕನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ನಡುವೆ ಮಣ್ಣಿನಡಿ ಸಿಲುಕಿದ್ದ ಚಂದನ್ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿತ್ತು.

ರಿಟೇನಿಂಗ್ ವಾಲ್ ಮತ್ತು ಶೀಟ್ ಗಳ ಮಧ್ಯೆ ಸಿಲುಕಿದ್ದ ಕಾರ್ಮಿಕನ ರಕ್ಷಣೆಗಾಗಿ ರಾತ್ರಿಯ ವರೆಗೂ ಕಾರ್ಯಾಚರಣೆ ನಡೆಸಿದರೂ ಕಾರ್ಮಿಕನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಸುಮಾರು ಏಳು ಗಂಟೆಯ ವೇಳೆಗೆ ಮೃತದೇಹವನ್ನು ಎನ್ ಡಿ ಆರ್ ಎಫ್ ತಂಡ ಹೊರತೆಗೆದಿದೆ.

 Share: | | | | |


ಕ್ಷೇತ್ರದ ಮಾದರಿ ಶಾಸಕ

Posted by Vidyamaana on 2023-05-21 10:39:46 |

Share: | | | | |


ಕ್ಷೇತ್ರದ ಮಾದರಿ ಶಾಸಕ

ಪುತ್ತೂರು: ಬ್ಯಾನರ್‌ ಪ್ರಕರಣದಲ್ಲಿ ಪೊಲೀಸ್‌ ದೌರ್ಜನ್ಯಕ್ಕೊಳಗಾಗಿ ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದೂ ಕಾರ್ಯಕರ್ತರನ್ನು ಭೇಟಿಯಾದ ಶಾಸಕ ಅಶೋಕ್‌ ಕುಮಾರ್‌ ರೈ ಆರೋಗ್ಯ ವಿಚಾರಿಸಿ ಮಾತುಕತೆ ನಡೆಸಿ, ಏನು ಸಹಕಾರ ಬೇಕಿದ್ದರೂ ನನಗೆ ಹೇಳಿ ಎಂದು ಸಾಂತ್ವನ ಹೇಳಿದ್ದಾರೆ.

ನಮ್ಮಿಂದಾಗುವ ಎಲ್ಲಾ ಕೆಲಸವನ್ನು ನಾವು ಮಾಡಿದ್ದೇವೆ. ಇದರಲ್ಲಿ ಕಾಂಗ್ರೆಸ್ ಪಕ್ಷದ ಯಾವುದೇ ಕೈವಾಡವಿಲ್ಲ, ಏನೆಲ್ಲಾ ವಿಚಾರ ಆಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಪೊಲೀಸರು ಪ್ರಕರಣವನ್ನು ಅಲ್ಲಿಂದಲ್ಲಿಗೆ ಮುಗಿಸುವ ಯೋಚನೆಯಲ್ಲಿದ್ದರು. ನಿಮ್ಮಲ್ಲಿಗೂ ಕೆಲವರು ಸಂಧಾನಕ್ಕೆ ಬಂದಿದ್ದಾರೆ ಎನ್ನುವುದು ಗೊತ್ತಾಗಿದೆ. ಘಟನೆ ಬಗ್ಗೆ ತಿಳಿಯುತ್ತಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು‌ ಹೇಳಿದ್ದೆ. ಏನು ಸಹಕಾರ ಬೇಕಿದ್ದರೂ ನನಗೆ ಹೇಳಿ ಎಂದು ಶಾಸಕ ಅಶೋಕ್‌ ಕುಮಾರ್‌ ರೈ ಸಾಂತ್ವನದ ಮಾತನ್ನಾಡಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ವಿಟ್ಲ- ಉಪ್ಪಿನಂಗಡಿ ಬ್ಲಾಕ್‌ ಅಧಕ್ಷ ಡಾ.ರಾಜಾರಾಂ ಕೆ ಬಿ ಮತ್ತಿತರರು ಉಪಸ್ಥಿತರಿದ್ದರು.

ದ.ಕ., ಉಡುಪಿ ಜಿಲ್ಲೆ: (ಮಾ.12) ಮಂಗಳವಾರದಿಂದ ರಮಝಾನ್ ಉಪವಾಸ ಆರಂಭ

Posted by Vidyamaana on 2024-03-11 19:42:48 |

Share: | | | | |


ದ.ಕ., ಉಡುಪಿ ಜಿಲ್ಲೆ: (ಮಾ.12) ಮಂಗಳವಾರದಿಂದ ರಮಝಾನ್ ಉಪವಾಸ ಆರಂಭ

ಮಂಗಳೂರು: ಪವಿತ್ರ ರಮಝಾನ್‌ ನ ಪ್ರಥಮ ಚಂದ್ರದರ್ಶನವು ಸೋಮವಾರ ಆಗಿರುವುದರಿಂದ ಮಂಗಳವಾರದಿಂದ ರಮಝಾನ್ ಉಪವಾಸ ಆಚರಿಸಲು ದ.ಕ.ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರ ನಿರ್ದೇಶನದಂತೆ ಮಂಗಳೂರು ಝೀನತ್ ಬಕ್ಸ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ದಾ ಮಸೀದಿಯ ಕೋಶಾಧಿಕಾರಿ ಎಸ್‌.ಎಂ. ರಶೀದ್‌ ಹಾಜಿ ತಿಳಿಸಿದ್ದಾರೆ.

*ಉಡುಪಿ ಸಂಯುಕ್ತ ಖಾಝಿ ಅಲ್‌ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಹಾಗೂ ಉಳ್ಳಾಲ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಬಳ್ ಅಲ್ ಬುಖಾರಿ ಪ್ರತ್ಯೇಕ ಹೇಳಿಕೆಯಲ್ಲಿ ಮಂಗಳವಾರದಿಂದ ಉಪವಾಸ ಆಚರಿಸಲು ಕರೆ ನೀಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ವಿಟ್ಲ: ಹಿಂದೂ ಮುಖಂಡ ಅಕ್ಷಯ್ ಗೆ ಗಡಿಪಾರು ಆದೇಶ - ಕೋಮು ಸೌಹಾರ್ದತೆ ಧಕ್ಕೆ ತಂದ ಆರೋಪ

Posted by Vidyamaana on 2023-10-03 21:31:18 |

Share: | | | | |


ವಿಟ್ಲ: ಹಿಂದೂ ಮುಖಂಡ ಅಕ್ಷಯ್ ಗೆ ಗಡಿಪಾರು ಆದೇಶ - ಕೋಮು ಸೌಹಾರ್ದತೆ ಧಕ್ಕೆ ತಂದ ಆರೋಪ

ವಿಟ್ಲ: ಭಾಗಿಯಾಗಿದ್ದ ಅಕ್ಷಯ್ ರಜಪೂತ್ ಗೆ ಗಡಿಪಾರು ನೋಟಿಸ್ ನೀಡಲಾಗಿದೆ.


ಕಲ್ಲಡ್ಕ ಬಾಳ್ತಿಲ ನಿವಾಸಿ ಅಕ್ಷಯ್ ರಜಪೂತ್ ಹಿಂದೂ ಜಾಗರಣಾ ವೇದಿಕೆಯ ಜವಾಬ್ದಾರಿಯನ್ನು ಹೊಂದಿದ್ದು ಇದೀಗ ಗಡಿಪಾರು ನೋಟೀಸ್ ನೀಡಿದ್ದಾರೆ.


ಪಡೀಲ್ ಕೆಪುಳು ಬಳಿ ಬೈಕ್ ಸ್ಕೂಟರ್ ನಡುವೆ ನಡೆದ ಅಪಘಾತದ ಸಿ ಸಿ ಟಿವಿ ದೃಶ್ಯ!

ಗಡಿಪಾರು ನೋಟೀಸ್ ನಲ್ಲಿ ಏನಿದೆ ..?


ವಿಟ್ಲ ಠಾಣಾ ವ್ಯಾಪ್ತಿಯ ಯುವಕರನ್ನು ಸೇರಿಸಿಕೊಂಡು ಗುಂಪುಗಾರಿಕೆ ನಡೆಸುವುದು, ಹಲ್ಲೆ, ದೊಂಬಿ, ಮತೀಯ ಗಲಭೆಗಳನ್ನು ಸೃಷ್ಟಿಸಲು ಜೀವಬೆದರಿಕೆ ಹಾಕುವುದು, ನೈತಿಕ ಪೊಲೀಸ್ ಗಿರಿಯಂತಹ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿದ್ದು ವಿಟ್ಲ ಪರಿಸರದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಹಲವು ಬಾರಿ ಠಾಣೆಗೆ ಕರೆದು ಕಾನೂನು ತಿಳುವಳಿಕೆ ನೀಡಿದರೂ ಸಹ ತನ್ನ ಚಾಳಿ ಬಿಡದಿದ್ದು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟಾಗುವ ಸಾಧ್ಯತೆ ಇರುವುದರಿಂದ ಈತನನ್ನು ಗಡಿಪಾರು ಮಾಡಿ ಎಂದು ಬಂಟ್ವಾಳ ಠಾಣೆಯ ಪೊಲೀಸ್ ಉಪ ಅಧೀಕ್ಷರಕರು ಪ್ರಸ್ತಾವನೆ ಸಲ್ಲಿಸಿದರಿಂದ ದಿನಾಂಕ 9.10.2023 ರಂದು ಸಹಾಯಕ ಆಯುಕ್ತರ ನ್ಯಾಯಾಲಯ ಮಂಗಳೂರು ಉಪವಿಭಾಗ ಇಲ್ಲಿಗೆ ಹಾಜರಾಗುವಂತೆ ಅಕ್ಷಯ್ ರಜಪೂತ್‌ಗೆ ನೋಟೀಸ್ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಪುತ್ತೂರು: ಫೇಸ್‌ಬುಕ್‌ನಲ್ಲಿ ಪರಿಚಯವಾದ ಅಪ್ರಾಪ್ತ ಮೇಲೆ ಅತ್ಯಾಚಾರ- ಆರೋಪಿ ನವೀನ್ ಮಾಡವು ಬಂಧನ.

Posted by Vidyamaana on 2023-04-25 07:27:36 |

Share: | | | | |


ಪುತ್ತೂರು: ಫೇಸ್‌ಬುಕ್‌ನಲ್ಲಿ ಪರಿಚಯವಾದ ಅಪ್ರಾಪ್ತ ಮೇಲೆ ಅತ್ಯಾಚಾರ- ಆರೋಪಿ ನವೀನ್ ಮಾಡವು ಬಂಧನ.

ಪುತ್ತೂರು: ಫೇಸ್‌ಬುಕ್‌ನಲ್ಲಿ ಪರಿಚಯವಾದ ಅಪ್ರಾಪ್ತಯನ್ನು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಸಂದರ್ಭ ಭೇಟಿಯಾಗಿ ಆಕೆಯನ್ನು ಪುಸಲಾಯಿಸಿ ಅಂಗನವಾಡಿ ಶಾಲೆಯ ವರಾಂಡಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ ಬಗ್ಗೆ ಅಪ್ರಾಪ್ತಯೋರ್ವಳು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ನವೀನ್ ಫೇಸ್‌ಬುಕ್‌ನಲ್ಲಿ ಪರಿಚಯವಾದಕಾಸರಗೋಡು ಮೂಲದ ಅಪ್ರಾಪ್ತಯನ್ನು ಎ.16ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಸಂದರ್ಭ ಭೇಟಿಯಾಗಿದ್ದ. ಬಳಿಕ ಆಕೆಯನ್ನು ಪುಸಲಾಯಿಸಿ ರಾತ್ರಿ ಸ್ಕೂಟರ್‌ನಲ್ಲಿ ಕೆಯೂರಿನ ಮಾಡಾವು ಅಂಗನವಾಡಿ ಬಳಿ ಕರೆದೊಯ್ದು ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿ ದೂರು ನೀಡಲಾಗಿದೆ. ಆರೋಪಿಯ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ರೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.ಕೆಯ್ಯರು ಗ್ರಾಮದ ಮಾಡವು ನಿವಾಸಿ ನವೀನ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಿಲಿಕ್ ಮೈಟ್ ಬತ್ತಂಡ್ ಉಡುಪಿಯಲ್ಲೊಂದು ವಿಸ್ಮಯ

Posted by Vidyamaana on 2023-09-07 15:00:06 |

Share: | | | | |


ಪಿಲಿಕ್ ಮೈಟ್ ಬತ್ತಂಡ್ ಉಡುಪಿಯಲ್ಲೊಂದು ವಿಸ್ಮಯ

ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜಾನಪದ ಆಚರಣೆಗಳಲ್ಲಿ ಹುಲಿ ಕುಣಿತಕ್ಕೆ ತನ್ನದೇ ಆದ ನಂಬಿಕೆ ಮತ್ತು ಪ್ರಾಮುಖ್ಯತೆ ಇದೆ.

ದಕ್ಷಿಣ ಕನ್ನಡ ಭಾಗದಲ್ಲಿ ನವರಾತ್ರಿ ಸಂದರ್ಭದಲ್ಲಿ ಹುಲಿ ಕುಣಿತ ಕಂಡುಬಂದರೆ, ಉಡುಪಿ ಭಾಗದಲ್ಲಿ ಅಷ್ಟಮಿ ಮತ್ತು ಅದರ ಮರುದಿನ ವಿಟ್ಲ ಪಿಂಡಿ ಸಂದರ್ಭದಲ್ಲಿ ಹುಲಿಗಳ ಅಬ್ಬರ ಜೋರಾಗಿರುತ್ತದೆ.

ಆದರೆ, ಈ ಹುಲಿ ವೇಷ ಹಾಕುವುದರ ಹಿಂದೆ ಒಂದು ನಂಬಿಕೆ ಇದೆ. ದೇವಿಯ ವಾಹನವೆಂದೇ ನಂಬುವ ಹುಲಿಯನ್ನು ಈ ಹುಲಿ ವೇಷಧಾರಿ ತಂಡದವರು ಆರಾಧಿಸಿ ಬಳಿಕವೇ ಹುಲಿ ವೇಷವನ್ನು ಹಾಕಿಕೊಳ್ಳುತ್ತಾರೆ.

ಕೆಲವರು ತಮ್ಮ ಆರೋಗ್ಯ ಸಮಸ್ಯೆಗಳ ನಿವಾರಣೆಗಾಗಿ ಹರಕೆ ಹೇಳಿಕೊಂಡು ಹುಲಿ ವೇಷ ಹಾಕುವುದೂ ಇದೆ. ಇನ್ನು ಹುಲಿ ವೇಷಕ್ಕೆ ತಮ್ಮ ಮೈಯನ್ನು ಒಡ್ಡುವ ಮುನ್ನ ಅಲ್ಲಿ ಕೆಲವು ದೈವಿಕ ಕ್ರಮಗಳನ್ನು ಪಾಲಿಸಲಾಗುತ್ತದೆ.

ಮತ್ತು ಹುಲಿ ವೇಷಧಾರಿ ನಿರ್ಧಿಷ್ಟ ವ್ರತಾಚರಣೆಯಲ್ಲೂ ಇರಬೇಕಾಗಿರುವುದು ಕಡ್ಡಾಯವಾಗಿರುತ್ತದೆ.

ಮೊದಲ ಬಾರಿಗೆ ಹುಲಿ ವೇಷ ಹಾಕಿಕೊಳ್ಳುತ್ತಿರುವವರಲ್ಲಿ ಅವರ ದೇಹಕ್ಕೆ ಬಣ್ಣವನ್ನು ಬಲಿಯುವಾಗ ಕೆಲವೊಮ್ಮೆ ಅವರಲ್ಲಿ ಅಗೋಚರ ಶಕ್ತಿಯೊಂದು ಆವಾಹನೆಗೊಂಡು ಅವರು ಆವೇಶಕ್ಕೊಳಗಾಗುವುದು ಸಾಮಾನ್ಯವಾಗಿರುತ್ತದೆ.

ಹುಲಿ ವೇಷಧಾರಿಯ ಮೈಮೇಲೆ ಶಕ್ತಿ ಆವಾಹನೆಗೊಳ್ಳುವ ವಿಡಿಯೋ ಒಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 

ಉಡುಪಿಯ ನಿಟ್ಟೂರಿನಲ್ಲಿ ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಿದ್ದ ಹುಲಿ ತಂಡವೊಂದರ ಸದಸ್ಯ ಪ್ರದರ್ಶನ ನೀಡುತ್ತಿದ್ದ ಸಂದರ್ಭದಲ್ಲೇ ಅವರು ಆವೇಶಕ್ಕೊಳಗಾಗಿ ಅಲ್ಲಿದ್ದ ಮ್ಯಾಟ್ ಚೂರನ್ನು ಬಾಯಿಂದ ಹರಿದು, ತನ್ನ ಸಹ ವೇಷಧಾರಿಗಳು ಮತ್ತು ತಂಡದ ಇತರರಿಗೂ ಹಿಡಿಯಲು ಸಾಧ್ಯವಾಗದಿರುವ ಘಟನೆ ನಡೆದಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

SDPI ಪುತ್ತೂರು ಅಭ್ಯರ್ಥಿ ಚಿಹ್ನೆ ಆಟೋ ರಿಕ್ಷಾ

Posted by Vidyamaana on 2023-04-24 12:20:21 |

Share: | | | | |


SDPI ಪುತ್ತೂರು ಅಭ್ಯರ್ಥಿ ಚಿಹ್ನೆ ಆಟೋ ರಿಕ್ಷಾ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಚಿಹ್ನೆ‌ ಪ್ರಕಟವಾಗಿದೆ.

ಆಟೋ ರಿಕ್ಷಾ ಚಿಹ್ನೆಯನ್ನು ಪಕ್ಷದ ಆಭ್ಯರ್ಥಿ ಶಾಫಿ ಬೆಳ್ಳಾರೆ ಅವರಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.



Leave a Comment: