ಜುಂಬಾ ಡ್ಯಾನ್ಸ್‌ ಮಾಡುತ್ತಲೇ ಹೃದಯಾಘಾತಕ್ಕೆ ಖ್ಯಾತ ಉದ್ಯಮಿ ಬಲಿ,ಸಾವಿನ ಕೊನೆ ಕ್ಷಣ ಸೆರೆ!

ಸುದ್ದಿಗಳು News

Posted by vidyamaana on 2024-07-23 06:33:29 | Last Updated by Vidyamaana on 2024-07-23 06:33:29

Share: | | | | |


ಜುಂಬಾ ಡ್ಯಾನ್ಸ್‌ ಮಾಡುತ್ತಲೇ ಹೃದಯಾಘಾತಕ್ಕೆ ಖ್ಯಾತ ಉದ್ಯಮಿ ಬಲಿ,ಸಾವಿನ ಕೊನೆ ಕ್ಷಣ ಸೆರೆ!

ಮುಂಬೈ :ಫಿಟ್ನೆಸ್ ಕಾಪಾಡಿಕೊಳ್ಳಲು ಹಲವರು ಜುಂಬಾ ಡ್ಯಾನ್ಸ್ ಮೊರೆ ಹೋಗುತ್ತಾರೆ. ಪ್ರತಿ ದಿನ ಜುಂಬಾ ಡ್ಯಾನ್ಸ್ ಕ್ಲಾಸ್‌ಗೆ ತೆರಳಿ ಬೆವರು ಹರಿಸುತ್ತಾರೆ. ಹೀಗೆ ಮಹಾರಾಷ್ಟ್ರದ ಉದ್ಯಮಿ ಕವಲ್ಜಿತ್ ಸಿಂಗ್ ಬಗ್ಗಾ ಫಿಟ್ನೆಸ್‌ಗಾಗಿ ಪ್ರತಿ ದಿನ ಜುಂಬಾ ಕ್ಲಾಸ್‌ಗೆ ತೆರಳಿ ಡ್ಯಾನ್ಸ್ ಮಾಡುತ್ತಾ ಬೆವರು ಹರಿಸುತ್ತಾರೆ.

ಇಂದು ಬೆಳಗ್ಗೆ ಜುಂಬಾ ಡ್ಯಾನ್ಸ್ ಮಾಡುತ್ತಿದ್ದಂತೆ ಉದ್ಯಮಿ ಕವಲ್ಜಿತ್ ಸಿಂಗ್ ಬಗ್ಗಾ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಉದ್ಯಮಿ ಬದುಕುಳಿಯಲಿಲ್ಲ.


ಛತ್ರಪತಿ ಸಂಭಾಜಿನಗರದ ನಿವಾಸಿಯಾಗಿರುವ ಅವಲ್ಜಿತ್ ಸಿಂಗ್ ಬಾಗ್ಗಾ ಪ್ರತಿದಿನ ಜುಂಬಾ ಡ್ಯಾನ್ಸ್ ಮಾಡುತ್ತಾರೆ. ಎಂದಿನಂತೆ ಇಂದೂ ಕೂಡ ಅವಲ್ಜಿತ್ ಸಿಂಗ್ ಬಾಗ್ಗಾ ಜುಂಬಾ ಡ್ಯಾನ್ಸ್‌ಗೆ ತೆರಳಿದ್ದಾರೆ. ಅವಲ್ಜಿತ್ ಸಿಂಗ್ ರೀತಿಯಲ್ಲಿ ಇತರ ಕೆಲವರು ಜುಂಬಾ ಡ್ಯಾನ್ಸ್ ಮಾಡುತ್ತಿದ್ದಾರೆ. ಜುಂಬಾ ಕ್ಲಾಸ್ ತೆರಳಿ 15 ನಿಮಿಷಗಳ ಕಾಲ ಡ್ಯಾನ್ಸ್ ಮಾಡಿದ್ದಾರೆ. ಹಲವರು ಇದೇ ಕ್ಲಾಸ್‌ನಲ್ಲಿ ಅವಲ್ಜಿತ್ ಸಿಂಗ್ ಜೊತೆ ಡ್ಯಾನ್ಸ್ ಮಾಡಿದ್ದಾರೆ.

ಕೊನೆಯ ಸಾಲಿನ ಬದಿಯಲ್ಲಿದ್ದ ಅವಲ್ಜಿತ್ ಸಿಂಗ್ ಡ್ಯಾನ್ಸ್ ಮಾಡುತ್ತಿದ್ದಂತೆ ಹೃದಯಾಘಾತವಾಗಿದೆ. ಡ್ಯಾನ್ಸ್ ಮಾಡಲು ಸಾಧ್ಯವಾಗದೆ ನಿಂತಿದ್ದಾರೆ. ಚೇತರಿಸಿಕೊಳ್ಳಲು ಕೆಲ ಕ್ಷಣ ನಿಂತಿದ್ದಾರೆ. ಇತರರು ಡ್ಯಾನ್ಸ್‌ನಲ್ಲಿ ತಲ್ಲೀನರಾಗಿದ್ದರು. ಆದರೆ ಅವಲ್ಜಿತ್ ಸಿಂಗ್ ಚೇತರಿಸಿಕೊಳ್ಳಲಿಲ್ಲ. ಕಾರಣ ತೀವ್ರ ಹೃದಯಾಘಾತದಿಂದ ಅವಲ್ಜಿತ್ ಕುಸಿದಿದ್ದಾರೆ. ಈ ವೇಳೆ ಮೆಲ್ಲನೆ ಕುಳಿತುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಅವಲ್ಜಿತ್ ಸಿಂಗ್ ಕುಸಿದು ಬೀಳುತ್ತಿದ್ದಂತೆ ಇತರರು ತಕ್ಷಣವೇ ನೆರವಿಗೆ ಧಾವಿಸಿದ್ದಾರೆ. ನೀರು ತಂದು ಕುಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಯಾವುದಕ್ಕೂ ಅವಲ್ಜಿತ್ ಸಿಂಗ್ ಸ್ಪಂದಿಸಿಲ್ಲ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಅವಲ್ಜಿತ್ ಎತ್ತಿಕೊಂಡು ವಾಹನದ ಮೂಲಕ ಆಸ್ಪತ್ರೆ ದಾಖಲಿಸಿದ್ದಾರೆ. ಆಸ್ಪತ್ರೆ ದಾಖಲಿಸುವ ಮೊದಲೇ ಅವಲ್ಜಿತ್ ಸಿಂಗ್ ಬಾಗ್ಗಾ ಪ್ರಾಣ ಪಕ್ಷಿ ಹಾರಿಹೋಗಿದೆ. ತಪಾಸಣೆ ನಡೆಸಿದ ವೈದ್ಯರು ಅವಲ್ಜಿತ್ ಸಿಂಗ್ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.

ಜಿಮ್ ಅಭ್ಯಾಸದ ವೇಳೆ ಈ ರೀತಿ ಹೃದಯಾಘಾತಕ್ಕೆ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಇತ್ತೀಚಗೆ ಹೃದಯಾಘಾತದ ಪ್ರಮಾಣ ಹೆಚ್ಚಾಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ಬೆಳವಣಿಗೆ ನಡುವೆ ಇದೀಗ ಉದ್ಯಮಿ ಅವಲ್ಜಿತ್ ಸಿಂಗ್ ಬಾಗ್ಗಾ ನಿಧನ ಸುದ್ದಿ ಆತಂಕ ಹೆಚ್ಚಿಸಿದೆ. ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದ ಕವಲ್ಜಿತ್ ಸಿಂಗ್ ದಿಢೀರ್ ನಿಧನ ಇದೀಗ ಮತ್ತೆ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.

 Share: | | | | |


ಕೋಡಿಂಬಾಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಚುನಾವಣಾ ಪ್ರಚಾರ ಸಭೆ

Posted by Vidyamaana on 2023-05-04 23:33:29 |

Share: | | | | |


ಕೋಡಿಂಬಾಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಚುನಾವಣಾ ಪ್ರಚಾರ ಸಭೆ

ಪುತ್ತೂರು: ಹುಟ್ಟೂರು ಕೋಡಿಂಬಾಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈಯವರು ಚುನಾವಣಾ ಪ್ರಚಾರ ಸಭೆ ನಡೆಸಿದರು. ಕಿಕ್ಕಿರಿದು ತುಂಬಿದ್ದ ಸಭೆಯಲ್ಲಿ ಮಾತನಾಡಿದ ಅಶೋಕ್ ರೈಯವರು ನಾನುಕೋಡಿಂಬಾಡಿಯ ಹುಡುಗ, ಹತ್ತೂರಲ್ಲಿ ನಾಲ್ಕು ಅಕ್ಷರ ಕಲಿಸಿದ ಸಂಜೀವ ರೈಯವರ ಪುತ್ರ ಈ ಸಲ ಕಾಂಗ್ರೆಸ್‌ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದು ನಿಮ್ಮೆಲ್ಲರ ಆಶೀರ್ವಾದವನ್ನು ಬೇಡುತ್ತಿದ್ದೇನೆ, ನೀವು ನನ್ನನ್ನು ಮನೆಮಗನಾಗಿ ಸ್ವೀಕರಿಸಿ ಆಶೀರ್ವಾದ ಮಾಡುತ್ತೀರಿ ಎಂಬ ಪೂರ್ಣ ನಂಬಿಕೆ ನನ್ನಲ್ಲಿದೆ. ಹುಟ್ಟೂರಿನ ಸಹೋದರ, ಸಹೋದರಿಯರು, ಬಂಧುಗಳು ತಾಯ೦ದಿರು, ಅಕ್ಕಂದಿರು, ಅಣ್ಣಂದಿರು ಮಾಡುವ ಆಶೀರ್ವಾದ ಅದು ದೊಡ್ಡ ಆಶೀರ್ವಾದ ಎಂಬ ನಂಬಿಕೆ ನನಗಿದೆ. ತಾಯಿ ಮಹಿಷ ಮರ್ಧಿನಿಯಲ್ಲಿಅನುಮತಿ ಪಡೆದು ನಾನು ಚುನಾವಣೆಗೆ ನಿಂತಿದ್ದೇನೆ, ತಾಯಿಯ ಆಶೀರ್ವಾದದ ಜೊತೆಗೆ ಹುಟ್ಟೂರಿನ ಬಂಧುಗಳ ಆಶೀರ್ವಾದವನ್ನು ನಾನು ಬೇಡುತ್ತಿದ್ದೇನೆ. ಚುನಾವಣೆಯಲ್ಲಿ ನನಗೆ ಮತ ಹಾಕುವ ಮೂಲಕ ಗೆಲ್ಲಿಸಿ, ನಾನು ಗೊತ್ತಿದ್ದೋ ಗೊತ್ತಿಲ್ಲದೆಯೋ ಏನಾದರೂ ತಪ್ಪು ಮಾಡಿದ್ದರೆ ನಿಮ್ಮ ಮನೆ ಮಗನಾಗಿ ನನ್ನನ್ನು ಕ್ಷಮಿಸಿ ಎಂದು ಸೇರಿದ್ದ ಸಾವಿರಾರು ಮಂದಿ ಕೋಡಿಂಬಾಡಿಯ ಜನತೆಗೆ ಕೈಮುಗಿದು ಬೇಡಿಕೊಂಡರು. ನಾನು ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ನನಗೆ ಬಿಜೆಪಿಯಿಂದ ಅನೇಕ ಕಿರುಕುಳ ಆರಂಭವಾಗಿದೆ. ನಾನು ಹೋದಲ್ಲೆಲ್ಲಾ ಬಂದಲ್ಲೆಲ್ಲಾ ನನ್ನ ಹಿಂದೆಯೇ ಜನರನ್ನು, ಅಧಿಕಾರಿಗಳನ್ನು ಕಳುಹಿಸಿ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ, ಎಲ್ಲಾ ಹಿಂಸೆಗಳನ್ನು ಸಹಿಸಿ ನಾನು ಹಲವು ದಿನಗಳಿಂದ ಕ್ಷೇತ್ರದಾದ್ಯಂತ ಕ್ರಯಿಸಿದ್ದೇನೆ, ಜನರ ಸಮಸ್ಯೆಗಳನ್ನು ಅರಿತುಕೊಂಡಿದ್ದೇನೆ, ಭರವಸೆಯನ್ನು ನೀಡಿದ್ದೇನೆ ಆಶೀರ್ವಾದ ಮಾಡುವುದಾಗಿ ಹೇಳಿದ್ದಾರೆ. ಸುಮಾರು 22 ಸಾವಿರ ಬಡ ಕುಟುಂಬಗಳಿಗೆ ನೆರವು ನೀಡಿದ್ದೇನೆ, ಬಡವರಿಗೆ ಮಾಡಿದ ದಾನದ ಶಕ್ತಿ ನನಗೆ ಆಶೀರ್ವಾದ ರೂಪದಲ್ಲಿ ಸಿಗಬಹುದು ಎಂಬ ನಂಬಿಕೆ ಇದೆ ಎಂದು ಮಾರ್ಮಿಕವಾಗಿ ಹೇಳಿದರು.

ಚಾರ್ಮಾಡಿ ಘಾಟ್ ನಲ್ಲಿ ಕೆಟ್ಟು ನಿಂತ ಎರಡು ಬಸ್ಸುಗಳು: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ

Posted by Vidyamaana on 2024-05-20 11:49:54 |

Share: | | | | |


ಚಾರ್ಮಾಡಿ ಘಾಟ್ ನಲ್ಲಿ ಕೆಟ್ಟು ನಿಂತ ಎರಡು ಬಸ್ಸುಗಳು: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ

ಬೆಳ್ತಂಗಡಿ: ಚಾರ್ಮಾಡಿ ಘಾಟ್ ನ ಅಣ್ಣಪ್ಪ ಸ್ವಾಮಿ ದೇವಸ್ಥಾನ ಬಳಿ ರಸ್ತೆ ಮಧ್ಯದಲ್ಲೇ ಎರಡು ಕೆ ಎಸ್ ಆರ್ ಟಿ ಸಿ ಬಸ್ಸುಗಳು ಕೆಟ್ಟು ನಿಂತ ಘಟನೆ‌ ನಡೆದಿದ್ದು, ಪರಿಣಾಮ ನೂರಾರು ವಾಹನಗಳು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದೆ.

ಗಂಟೆ ಗಟ್ಟಲೇ ಟ್ರಾಫಿಕ್ ಜಾಮ್ ಹಿನ್ನೆಲೆಯಲ್ಲಿ ವಿಷಯ ತಿಳಿದ ಹೈವೇ ಪಟ್ರೋಲ್ ನ ಎ. ಎಸ್.ಐ ಶಶಿ

ಬಲ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಸುಜ್ಞಾನ ರಂಗಮಂದಿರ ಉದ್ಘಾಟನೆ

Posted by Vidyamaana on 2024-02-02 12:31:52 |

Share: | | | | |


ಬಲ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಸುಜ್ಞಾನ ರಂಗಮಂದಿರ ಉದ್ಘಾಟನೆ

ಕಡಬ: ಬಲ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75ನೇ ವರ್ಷದ ಗಣರಾಜ್ಯೋತ್ಸವ ಆಚರಣೆ ಹಾಗೂ ಪೂರ್ವ ವಿದ್ಯಾರ್ಥಿಗಳು ಹಾಗೂ ಬಲ್ಯ ಶಾಲೆಯ ಸಮಸ್ತ ವಿದ್ಯಾಭಿಮಾನಿಗಳ ಸಹಕಾರದಿಂದ ಸುಮಾರು ಆರು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲ್ಪಟ್ಟ ನೂತನ ರಂಗಮಂದಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ನೂತನ  *ಪ್ರತಿಭಾ ಸುಜ್ಞಾನ* ರಂಗಮಂದಿರವನ್ನು  ಶ್ರೀ ಬಿ.ಎಂ ಲಿಂಗಪ್ಪ ಗೌಡ ಬಾಬ್ಲುಬೆಟ್ಟು ಅವರು ಉದ್ಘಾಟಿಸಿ ಶುಭ ಹಾರೈಸಿದರು. ಬಳಿಕ  ಕುಟ್ರುಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಸುಮನಾರವರು ಸಭಾ ಕಾರ್ಯಕ್ರಮವನ್ನು  ದೀಪ ಬೆಳಗಿಸಿ ಉದ್ಘಾಟಿಸಿದರು, ಈ ಸಂದರ್ಭದಲ್ಲಿ ನೂತನ ರಂಗಮಂದಿರ ನಿರ್ಮಾಣದ ಶ್ರಮಿಕರಿಗೆ ಗೌರವಾರ್ಪಣೆ, ನೂತನ ರಂಗ ಮಂದಿರ ನಿರ್ಮಾಣಕ್ಕೆ ಧನ ಸಹಾಯ ಹಾಗೂ ಶಾಲೆಗೆ ವಸ್ತುರೂಪದ ಕೊಡುಗೆ ನೀಡಿದವರಿಗೆ ಗೌರವಾರ್ಪಣೆ ನಡೆಯಿತು. ಪೂರ್ವ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ನಡೆದ ಕ್ರೀಡಾಸಂಭ್ರಮ 2023-24 ಕ್ರೀಡಾಕೂಟದ ಬಹುಮಾನ  ವಿತರಣೆ, ಪೂರ್ವ ವಿದ್ಯಾರ್ಥಿ ಸಂಘದ ಅಧಿಕಾರ ಹಸ್ತಾಂತರ  ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ 

ಪೂರ್ವ ವಿದ್ಯಾರ್ಥಿ ಸಂಘ ಹಾಗೂ ನೂತನ ರಂಗಮಂದಿರ ಸಮಿತಿಯ ಅಧ್ಯಕ್ಷರಾದ ಬಿ ಎಂ ಪೂರ್ಣೇಶ್ ಗೌಡ ಬಾಬ್ಲುಬೆಟ್ಟು ರವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.  ಶಾಲೆಯ ಪೂರ್ವ ವಿದ್ಯಾರ್ಥಿ, ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಗುಡ್ಡಪ್ಪ ಗೌಡ ನೆಲ್ಲ-ಬಲ್ಯ ಇವರು ದಿಕ್ಸೂಚಿ ಭಾಷಣ ಮಾಡಿದರು.  ಎಸ್ ಡಿ ಎಂ ಸಿ ಅಧ್ಯಕ್ಷ ವಿಲ್ಸನ್ ವಿ. ಟಿ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಶ್ರೀಮತಿ ಮೀನಾಕ್ಷಿ ನೆಲ್ಲ, ಶ್ರೀ ಪ್ರಕಾಶ್ ಬಾಕಿಲ, ಶ್ರೀಮತಿ ಪುಷ್ಪಾ.ಕೆ, ಶ್ರೀ ತುಕ್ರಪ್ಪ ನೆಲ್ಲ , ಶ್ರೀ ಕೆ.ಆರ್. ಆಚಾರ್ಯ ಪುತ್ತೂರು, ಶ್ರೀ ವಾಣಿ ನಾಗೇಶ್ ಬನಾರಿ, ಶ್ರೀ ರವಿ ಪ್ರಸಾದ್ ಆಲಾಜೆ, ಶ್ರೀ ನಾರಾಯಣ ಕೊಲ್ಲಿಮಾರು,  ಶ್ರೀ ವಿಮಲ್ ಕುಮಾರ್ ನೆಲ್ಯಾಡಿ, ಶ್ರೀ ಸತೀಶ್ಚಂದ್ರ ಶೆಟ್ಟಿ, ಶ್ರೀ ಶೇಖರ ಗೌಡ ದೇರಾಜೆ, ಶ್ರೀ ಕೊರಗಪ್ಪ ಗೌಡ ಪುಳಿತ್ತಡಿ, ಶ್ರೀ ತಿಮ್ಮಣ್ಣ ಭಟ್ ದೇವರಡ್ಕ , ಶ್ರೀಮತಿ ಅಮ್ಮಣಿ , ಶ್ರೀ ಜನಾರ್ದನ ಗೌಡ , ಹಾಗೂ ಶಾಲಾ ನಾಯಕ ಧನುಷ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 600ಕ್ಕಿಂತ ಹೆಚ್ಚು ಜನ , ಪೂರ್ವ ವಿದ್ಯಾರ್ಥಿಗಳು, ಊರ ಪರ ಊರ ಶಾಲಾ ವಿದ್ಯಾಭಿಮಾನಿಗಳು, ಗಣ್ಯರು ಭಾಗವಹಿಸಿದ್ದರು .ಈ ಹಿಂದೆ ಬಲ್ಯ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಗುರುಗಳಾದ  ರುಕ್ಮಿಣಿ ಪಿಜಕಳ, ಪೆರ್ಗಡೆ ಗೌಡ ದೇರಾಜೆ,  ಅಚ್ಚಮ್ಮ, ಜಿ. ಮಾಯಿಲಪ್ಪ ಇವರನ್ನು ಗೌರವಿಸಲಾಯಿತು. ನೂತನ ರಂಗಮಂದಿರಕ್ಕೆ ಹಾಗೂ ಶಾಲೆಗೆ ವಿಶೇಷವಾಗಿ ಸಹಕರಿಸಿದ ಹಲವಾರು ಜನರನ್ನು ಗೌರವಿಸಲಾಯಿತು.

  ಸಭಾ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಂದ ಮತ್ತು ಪೂರ್ವ ವಿದ್ಯಾರ್ಥಿಗಳಿಂದ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲೆಯ 

ಮುಖ್ಯ ಶಿಕ್ಷಕಿ ಪುಷ್ಪಾ. ಕೆ  ಸ್ವಾಗತಿಸಿ, ರಂಗ ಮಂದಿರ ನಿರ್ಮಾಣ ಸಮಿತಿಯ ಕೋಶಾಧಿಕಾರಿ ಗಣೇಶ್ ಭಟ್ ದೇವರಡ್ಕ ವಂದಿಸಿದರು, ಶೇಖರಗೌಡ ಪನ್ಯಾಡಿ  ಕಾರ್ಯಕ್ರಮ ನಿರೂಪಿಸಿದರು, ರಂಗಮಂದಿರ ನಿರ್ಮಾಣ ಸಮಿತಿಯ ಉಪಾಧ್ಯಕ್ಷರಾದ ಉದಯ್ ಕುಮಾರ್ ಪುತ್ತಿಲ ಹಾಗೂ ಶಾಲಾ ಶಿಕ್ಷಕಿಯರು ಸಹಕರಿಸಿದರು.

ಮಣಿಪುರದಲ್ಲಿ ಮಹಿಳೆಯರಿಬ್ಬರ ಬೆತ್ತಲೆ ಮೆರವಣಿಗೆ ಪ್ರಕರಣ ಪ್ರಮುಖ ಆರೋಪಿ ಹೆರದಾಸ್ ಅರೆಸ್ಟ್

Posted by Vidyamaana on 2023-07-20 05:35:30 |

Share: | | | | |


ಮಣಿಪುರದಲ್ಲಿ ಮಹಿಳೆಯರಿಬ್ಬರ ಬೆತ್ತಲೆ ಮೆರವಣಿಗೆ ಪ್ರಕರಣ ಪ್ರಮುಖ ಆರೋಪಿ ಹೆರದಾಸ್ ಅರೆಸ್ಟ್

ಮಣಿಪುರ: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆಯ ಹಳೆಯ ವೀಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಒಂದು ದಿನದ ನಂತರ, ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಯನ್ನು ಹೆರದಾಸ್ (32) ಎಂದು ಗುರುತಿಸಲಾಗಿದ್ದು, ಆತ ಹಸಿರು ಅಂಗಿ ಧರಿಸಿರುವ ವಿಡಿಯೋ ವೈರಲ್ ಆಗಿದ್ದು, ತೌಬಲ್ ಜಿಲ್ಲೆಯಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮಣಿಪುರದಲ್ಲಿ ಕುಕಿ-ಜೋ ಬುಡಕಟ್ಟು ಜನಾಂಗಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಪುರುಷರ ಗುಂಪೊಂದು ರಸ್ತೆಯಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿತ್ತು. ಇದೀಗ ವಿಡಿಯೋ ಹೊರಬಿದ್ದಿದೆ.


ಇದೀಗ ಈ ವಿಡಿಯೋವನ್ನು ತೆಗೆದುಹಾಕುವಂತೆ ಕೇಂದ್ರ ಸರಕಾರ ಗುರುವಾರ ಟ್ವಿಟರ್ ಸೇರದಂತೆ ಇತರ ಸಾಮಾಜಿಕ ಮಾಧ್ಯಮಗಳಿಗೆ ಸೂಚಿಸಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.

ಪುದುವೆಟ್ಟು ಪೈಪ್ ಲೈನ್ ನಲ್ಲಿ ಡಿಸೇಲ್ ಎಗರಿಸಿದ ಡಿಸೇಲ್ ಕಳ್ಳರು ಸಿಕ್ಕಿದ್ರು

Posted by Vidyamaana on 2024-04-04 18:54:47 |

Share: | | | | |


ಪುದುವೆಟ್ಟು ಪೈಪ್ ಲೈನ್ ನಲ್ಲಿ ಡಿಸೇಲ್ ಎಗರಿಸಿದ ಡಿಸೇಲ್ ಕಳ್ಳರು ಸಿಕ್ಕಿದ್ರು

ಬೆಳ್ತಂಗಡಿ: ಡಿಸೇಲ್ ಪೈಪ್ ಲೈನ್ ಕೊರೆದು 9 ಲಕ್ಷ ರೂ ಮೌಲ್ಯದ ಡಿಸೇಲ್ ಕಳ್ಳತನ ಮಾಡಿದ ಘಟನೆ ಪುದುವೆಟ್ಟು ಗ್ರಾಮದ ಆಲಡ್ಕದಲ್ಲಿ ನಡೆದಿದ್ದ ಪ್ರಕರಣ ಸಂಬಂಧ ಐದು ಜನ ಆರೋಪಿಗಳನ್ನು ಬಂಧಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.

*ಐದು ಜನ ಅರೋಪಿಗಳ ಬಂಧನ:*

ಆಟವಾಡುತ್ತಾ ನಿಂಬೆಹಣ್ಣು ನುಂಗಿದ 9 ತಿಂಗಳ ಮಗು ಮೃತ್ಯು

Posted by Vidyamaana on 2024-01-12 13:00:12 |

Share: | | | | |


ಆಟವಾಡುತ್ತಾ ನಿಂಬೆಹಣ್ಣು ನುಂಗಿದ 9 ತಿಂಗಳ ಮಗು ಮೃತ್ಯು

ಆಂಧ್ರ ಪ್ರದೇಶ: ಮನೆಯಲ್ಲಿ ಆಟವಾಡುತ್ತಾ ಮಗುವೊಂದು ನಿಂಬೆಹಣ್ಣು  ನುಂಗಿದ ಪರಿಣಾಮ ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಆಂಧ್ರಪ್ರದೇಶದ ಅನಂತಪುರಂನಲ್ಲಿ ನಡೆದಿದೆ.ಅನಂತಪುರ ಜಿಲ್ಲೆಯ ಪೆದ್ದವಡುಗೂರು ಮಂಡಲ ಮಲ್ಲೇನಿಪಲ್ಲಿಯದ ಸಾಕಿದೀಪ ಮತ್ತು ಗೋವಿಂದರಾಜ್​​​​ ದಂಪತಿಯ  ಜಸ್ವಿತಾ (9 ತಿಂಗಳು) ಮೃತ ಮಗು.ಎಂದಿನಂತೆ ಮನೆಯಲ್ಲಿ ಆಡುತ್ತಾ ಮನೆಯಲ್ಲಿತ್ತು. ತಾಯಿ ಮಗುವನ್ನು ನೋಡುತ್ತಾ , ಮತ್ತೊಂದು ಕಡೆ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಮಗು ಜಗಲಿಯಲ್ಲಿದ್ದ ನಿಂಬೆಹಣ್ಣನ್ನು ಹಿಡಿದು ನುಂಗಿದೆ. ಆ ಬಳಿಕ ಮಗುವಿನ ಉಸಿರಾಟದಲ್ಲಿ ತೊಂದರೆ ಆಗಿದೆ. ಕೂಡಲೇ ತಾಯಿ ಗಂಟಲಿನಲ್ಲಿ ಸಿಲುಕಿದ್ದ ನಿಂಬೆಹಣ್ಣನ್ನು ತೆಗೆಯಲು ಯತ್ನಿಸಿ, ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಆಸ್ಪತ್ರೆಯಲ್ಲಿ ವೈದ್ಯರು ಪರಿಕ್ಷೀಸಿದ ಬಳಿಕ ಆದಾಗಲೇ ಮಗು ಮೃತಪಟ್ಟಿದೆ ಎಂದಿದ್ದಾರೆ. ಸಾಕಿದೀಪ ಮತ್ತು ಗೋವಿಂದರಾಜ್ ದಂಪತಿಗೆ ಮದುವೆಯಾದ 7 ವರ್ಷದ ಬಳಿಕ ಮಗು ಜನಿಸಿತ್ತು. ಆದರೆ ಇಂತಹ ಆಕಸ್ಮಿಕ ದುರಂತದಲ್ಲಿ ಮಗು ಮೃತಪಟ್ಟಿರುವುದಕ್ಕೆ ಇಡೀ ಕುಟುಂಬವೇ ಶೋಕದಲ್ಲಿ ಮುಳುಗಿದೆ.

Recent News


Leave a Comment: