ಲಡ್ಡು ಬಂದು ಬಾಯಿಗೆ ಬಿತ್ತು..! ಆರ್ಡರ್ ಮಾಡಿದ್ದು ಫುಡ್ ಪಾರ್ಸೆಲ್ ಬಂದಿದ್ದು ಕ್ಯಾಶ್!!

ಸುದ್ದಿಗಳು News

Posted by vidyamaana on 2024-07-21 15:34:53 |

Share: | | | | |


ಲಡ್ಡು ಬಂದು ಬಾಯಿಗೆ ಬಿತ್ತು..! ಆರ್ಡರ್ ಮಾಡಿದ್ದು ಫುಡ್ ಪಾರ್ಸೆಲ್ ಬಂದಿದ್ದು ಕ್ಯಾಶ್!!

ಕೊಪ್ಪಳ: ಗ್ರಾಹಕನಿಗೆ ಆಹಾರ ಪಾರ್ಸಲ್​ ಕವರ್​ ನೀಡುವ ಬದಲಿಗೆ ಹೋಟೆಲ್ ಮಾಲಿಕ 50 ಸಾವಿರ ರೂ. ಹಣವಿದ್ದ ಕವರ್​ ನೀಡಿದ ಘಟನೆ ನಡೆದಿದ್ದು, ಗ್ರಾಹಕ ಪಾರ್ಸಲ್​ ತೆಗೆದುಕೊಂಡು ಹೋಗಿ ಮನೆಯಲ್ಲಿ ನೋಡಿದಾಗ ತಿಂಡಿ ಬದಲಿಗೆ 50 ಸಾವಿರ ರೂ. ಇರುವುದು ಕಂಡಿದೆ.

ರಸೂಲ್ ಸಾಬ ಸೌದಾಗರ್ ಎಂಬುವರು ಕುಷ್ಟಗಿ ಪಟ್ಟಣದಲ್ಲಿ ಪುಟ್ಟ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಶನಿವಾರ ಅವರು ಬ್ಯಾಂಕ್​ಗೆ ಕಟ್ಟಲು ಎಂದು ಮನೆಯಿಂದ 49,625 ರೂಪಾಯಿ ಇದ್ದ ಹಣದ ಕವರ್​ನ್ನು ಹೋಟೆಲ್ ನಲ್ಲಿಟ್ಟಿದ್ದರು.



ಮುಂಜಾನೆ ಕುಷ್ಟಗಿ ಪಟ್ಟಣದ ನಿವಾಸಿಯಾಗಿರುವ ಸರ್ಕಾರಿ ಶಾಲೆ ಶಿಕ್ಷಕ ಶ್ರೀನಿವಾಸ್ ದೇಸಾಯಿ, ಸೌದಾಗರ್ ಹೋಟೆಲ್​ಗೆ ಬಂದಿದ್ದರು. ತನಗೆ ಇಡ್ಲಿ, ವಡೆ, ದೋಸೆಯನ್ನು ಪಾರ್ಸಲ್ ಕೊಡಿ ಅಂತ ಹೇಳಿದ್ದರು. ಆದರೆ ಸೌದಾಗರ್ ಆಹಾರವಿದ್ದ ಕವರ್ ನೀಡುವ ಬದಲು ಹಣವಿದ್ದ ಕವರ್ ನೀಡಿ, ನಿಮ್ಮ ಪಾರ್ಸಲ್ ತೆಗೆದುಕೊಂಡು ಹೋಗಿ ಅಂತ ಹೇಳಿದ್ದರು. ಹೀಗಾಗಿ ಶ್ರೀನಿವಾಸ ದೇಸಾಯಿ ಅವರು ಕವರ್​​ ಅನ್ನು ಮನೆಗೆ ತೆಗೆದುಕೊಂಡು ಹೋಗಿದ್ದರು. ಆದರೆ ಆ ಹಣವನ್ನು ಹೋಟೆಲ್​ ಮಾಲಿಕನಿಗೆ ಗ್ರಾಹಕ ​ ಶಿಕ್ಷಕ ಮರಳಿಸಿದ್ದಾರೆ.

 Share: | | | | |


ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ರೇಸ್ ಮಾಡುತ್ತಿದ್ದ ನಾಲ್ವರು ವಶಕ್ಕೆ

Posted by Vidyamaana on 2023-05-24 08:11:49 |

Share: | | | | |


ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ರೇಸ್ ಮಾಡುತ್ತಿದ್ದ ನಾಲ್ವರು ವಶಕ್ಕೆ

ಉಡುಪಿ :ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾ‌ ರೇಸ್ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸುತ್ತಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ನಾಲ್ವರು ಚಾಲಕರ ಸಹಿತ ನಾಲ್ಕು ವಾಹನಗಳನ್ನು ಕಾಪು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಉಡುಪಿಯ ಶಾನೂನ್ ಡಿಸೋಜ(25), ಉಡುಪಿ ಕೊಡಂತೂರಿನ ವಿವೇಕ್(23), ಉದ್ಯಾವರ ಗುಡ್ಡೆ ಅಂಗಡಿ ನಿವಾಸಿ ಅಯಾನ್(24) ಹಾಗೂ ಕುಂಜಿಬೆಟ್ಟು ನಿವಾಸಿ ಮಿಶಾಲುದ್ದೀನ್ (23) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಿಂದ ಮಹೀಂದ್ರಾ ಜೀಪು, ಕ್ರೆಟಾ ಕಾರು, ಫಾರ್ಚುನರ್ ಕಾರು, ಸ್ವಿಫ್ಟ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಈ ಬಗ್ಗೆ ಕಾಪು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿಯು ರಿಸಲ್ಟ್ ನಲ್ಲಿ ಅಮೋಘ ಪ್ರಗತಿ – ವಿಜ್ಞಾನ ವಿಭಾಗದಲ್ಲಿ 100 ಸಾಧನೆ

Posted by Vidyamaana on 2024-04-14 16:09:20 |

Share: | | | | |


ಪಿಯು ರಿಸಲ್ಟ್ ನಲ್ಲಿ ಅಮೋಘ ಪ್ರಗತಿ – ವಿಜ್ಞಾನ ವಿಭಾಗದಲ್ಲಿ 100 ಸಾಧನೆ

ಪುತ್ತೂರು: ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನ 2023-24ನೇ ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ.99 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದ ಟ್ಯೂಷನ್ ತರಗತಿಯಲ್ಲಿ ದಾಖಲಾಗಿರುವ ಒಟ್ಟು 10 ವಿದ್ಯಾರ್ಥಿಗಳಲ್ಲಿ 7 ಮಂದಿ ಪ್ರಥಮ, 2 ಮಂದಿ ದ್ವಿತೀಯ ಹಾಗೂ ಓರ್ವ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 

ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಒಟ್ಟು 56 ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ-1, ಪ್ರಥಮ ಶ್ರೇಣಿಯಲ್ಲಿ 21, ದ್ವಿತೀಯ ಶ್ರೇಣಿಯಲ್ಲಿ22 ಹಾಗೂ 11 ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 

ಕಲಾ ವಿಭಾಗದಲ್ಲಿ ಒಟ್ಟು 5 ವಿದ್ಯಾರ್ಥಿಗಳಲ್ಲಿ ಇಬ್ಬರು ಪ್ರಥಮ, ಒಬ್ಬರು ದ್ವಿತೀಯ ಹಾಗೂ ಒಬ್ಬರು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ರುತ್ತಾರೆ ಎಂದು ಸಂಸ್ಥೆಯ ಪ್ರಾಂಶುಪಾಲೆ ಕೆ.ಹೇಮಲತಾ ಗೋಕಲ್ ನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ವಾಣಿಜ್ಯಶಾಸ್ತ್ರ/ಕಲಾ ವಿಭಾಗ

ದಿಶಾ-517, ಆಯಿಷಾತುಲ್ ಮಿಶ್ರಿಯಾ-479, ಹೇಮಂತ್ ಗೌಡ-459, ಚೈತಾಲಿ-447, ಗೌಡಪ್ಪ ಗೌಡ-425, ದರ್ಶನ್ ಸುಬ್ಬಯ್ಯ-413, ಧನುಷ್-410, ಧನುಷ್ ಪುಣಚ-410, ಮಹಮ್ಮದ್ ಯಝೀದ್-390, ಇಹ್‌ಶಾನ್-387, ಲಿಂಕಿತ್ ತಿಮ್ಮಯ್ಯ-386, ನಂದನಾ ಜೆ-352, ಮಹಮ್ಮದ್ ತಹಝ್ ಪಿ.-350, ಸಂಕೇತ್ ಪೂಜಾರಿ-349, ಮಹಮ್ಮದ್ ತಲ್‌ಹತ್-339, ಕುಮಾರಸ್ವಾಮಿ-335, ಶಂಬ್ರೀನಾ-327, ಯಶ್ವಂತ್-324, ನಿತಿನ್-320, ಲಿತಿಶ್-320.

ವಿಜ್ಞಾನ ಟ್ಯೂಷನ್ ವಿಭಾಗ :

ಅಶ್ವಿಜ-497, ಆಯಿಷಾ ಮುಶ್ರಿಫಾ-488, ಫಾತಿಮತ್ ಅಫೀದಾ-484, ಜೀವಿತಾ-450, ಇಬ್ರಾಹಿಂ ಅನಾಝ್-435, ಮಹಮ್ಮದ್ ರಿಝ್ವಾನ್-426, ಮಹಮ್ಮದ್ ಅನ್ಸಫ್-402, ಮಹಮ್ಮದ್ ಅಕ್ಮಲ್-337


ಕುಡಿದ ಮತ್ತಿನಲ್ಲಿ ಗಲಾಟೆ: ಜೈಲರ್ ಸಿನಿಮಾದ ನಟನ ಬಂಧನ

Posted by Vidyamaana on 2023-10-25 15:40:01 |

Share: | | | | |


ಕುಡಿದ ಮತ್ತಿನಲ್ಲಿ ಗಲಾಟೆ: ಜೈಲರ್ ಸಿನಿಮಾದ ನಟನ ಬಂಧನ

ಕೊಚ್ಚಿ : ಕುಡಿದ ಮತ್ತಿನಲ್ಲಿ ಕೊಚ್ಚಿ ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ ಆರೋಪದ ಮೇಲೆ ಜೈಲರ್ ನಟ ವಿನಾಯಕನ್ ಅವರನ್ನು ಕೇರಳ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.ನಟ ಸಂಜೆ ಎರ್ನಾಕುಲಂ ಟೌನ್ ಉತ್ತರ ಪೊಲೀಸ್ ಠಾಣೆಯಲ್ಲಿ ಕೋಲಾಹಲ ಸೃಷ್ಟಿಸಿದ್ದಾರೆ. ಅವರು ತಮ್ಮ ಅಪಾರ್ಟ್ಮೆಂಟ್ನಲ್ಲಿ ಗಲಾಟೆ ಮಾಡಿದ್ದಕ್ಕಾಗಿ ನೆರೆದಿದ್ದವರು ಪೊಲೀಸರನ್ನು ಕರೆಸಿದರು.ಬಳಿಕ ಪೊಲೀಸ್ ಠಾಣೆಯಲ್ಲಿಯೂ ತೊಂದರೆ ಉಂಟುಮಾಡಿದ್ದಕ್ಕಾಗಿ ಆತನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಗತ್ಯ ವೈದ್ಯಕೀಯ ಪರೀಕ್ಷೆಗಾಗಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.


ವಿನಾಯಗನ್ ಅವರನ್ನು ಪೊಲೀಸ್ ಠಾಣೆಯ ಮೂಲೆಯೊಂದರಲ್ಲಿ ನಿಲ್ಲಿಸಿರುವ ಚಿತ್ರ ಹಾಗೂ ವಿನಾಯಗನ್ ಅವರನ್ನು ಆಟೋನಲ್ಲಿ ಕರೆದುಕೊಂಡು ಹೋಗುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶಾಸಕರ ಇಂದಿನ ಕಾರ್ಯಕ್ರಮ(ಜೂ.5)

Posted by Vidyamaana on 2023-06-04 23:14:37 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ(ಜೂ.5)

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರು ಜೂನ್ 5ರಂದು ಬೆಳಿಗ್ಗೆ 9.30ಕ್ಕೆ ಉಪ್ಪಿನಂಗಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೀಯಳಾಭಿಷೇಕ ನೆರವೇರಿಸಲಿದ್ದಾರೆ.

ನಂತರ 10.30ಕ್ಕೆ ಪುತ್ತೂರು ಬಾಲವನದಲ್ಲಿ ವಿಶ್ವ ಪರಿಸರ ದಿನಾಚರಣೆಯಲ್ಲಿ ಭಾಗಿಯಾಗುವರು.

ಬೆಳಿಗ್ಗೆ 11.15ಕ್ಕೆ ಕುಂಬ್ರ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿಯಲ್ಲಿ ಶಾಸಕರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ.

ಜಿಎಲ್ ವನ್ ಮಾಲ್ ಲೋಕಾರ್ಪಣೆ

Posted by Vidyamaana on 2023-04-02 15:39:58 |

Share: | | | | |


ಜಿಎಲ್ ವನ್ ಮಾಲ್ ಲೋಕಾರ್ಪಣೆ

ಪುತ್ತೂರು: ಬಹುನಿರೀಕ್ಷಿತ ಪುತ್ತೂರಿನ ಪ್ರಥಮ ಸರ್ವಸುಸಜ್ಜಿತ ಜಿಎಲ್ ವನ್ ಮಾಲ್ ಏ 2ರಂದು ಲೋಕಾರ್ಪಣೆಗೊಂಡಿತು.

ಒಂದೇ ಸೂರಿನಡಿ ಎಲ್ಲಾ ವಸ್ತು: ಎಡನೀರು ಶ್ರೀ

ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಸಂಸ್ಕ್ರತಿ, ಪರಿಕಲ್ಪನೆ ನಮ್ಮ ದೇಶದ್ದೇ ಆಗಿರಬೇಕು. ಅದರಂತೆ ಜಿಎಲ್ ವನ್ ಮಾಲ್ ಪುತ್ತೂರಿಗೆ ಬಂದಿದೆ‌. ಮುಂದಿನ ದಿನಗಳಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯುವಂತಾಗಲಿ.

ಮಂಗಳೂರಿನಲ್ಲಿ ವೇಶ್ಯಾವಾಟಿಕೆ ಜಾಲದಲ್ಲಿ ಮಂಡ್ಯ ಮೂಲದ ವ್ಯಕ್ತಿ ಲಕ್ಕಪ್ಪ ಅರೆಸ್ಟ್ ಮತ್ತೊಬ್ಬ ಪರಾರಿ

Posted by Vidyamaana on 2023-06-24 11:18:56 |

Share: | | | | |


ಮಂಗಳೂರಿನಲ್ಲಿ ವೇಶ್ಯಾವಾಟಿಕೆ ಜಾಲದಲ್ಲಿ ಮಂಡ್ಯ ಮೂಲದ ವ್ಯಕ್ತಿ ಲಕ್ಕಪ್ಪ ಅರೆಸ್ಟ್ ಮತ್ತೊಬ್ಬ ಪರಾರಿ

ಮಂಗಳೂರು : ಮಂಗಳೂರು ನಗರದ ಕುಲಶೇಖರದ ಕಾಂಪ್ಲೆಕ್ಸ್ ಒಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಮಂಗಳೂರು ನಗರ ಪೊಲೀಸರು ದಾಳಿ ನಡೆಸಿದ್ದಾರೆ.

ಈ ಸಂದರ್ಭ ಅಲ್ಲಿದ್ದ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕುಲಶೇಖರದ ಬಳಿ ಇರುವ ಅಬ್ಬಿ ಕಾಂಪ್ಲೆಕ್ಸ್ ನಲ್ಲಿ ಕೃಷ್ಣ ಎಂಬಾತನು ಫ್ಲಾಟ್ ಬಾಡಿಗೆಗೆ ಪಡೆದು ಮಂಡ್ಯ ನಿವಾಸಿ ಲಕ್ಕಪ್ಪ ಎಂಬಾತನ ಜೊತೆ ಸೇರಿ ಈ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.ಈ ಸಂದರ್ಭ ಅಲ್ಲಿದ್ದ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾದ ಮಂಡ್ಯ ಮೂಲದ ಲಕ್ಕಪ್ಪ(25 ವರ್ಷ),ಎಂಬಾತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Recent News


Leave a Comment: