ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2024-07-03 18:55:10 | Last Updated by Vidyamaana on 2024-07-03 18:55:10

Share: | | | | |


ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಬೆಂಗಳೂರು : ಕಾಲೇಜು ವಿದ್ಯಾರ್ಥಿಯೊಬ್ಬ ಸೆಕ್ಯೂರಿಟಿ ಗಾರ್ಡ್ ಓರ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದಿದೆ.

ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಜೈಕಿಸನ್ ರಾಯ್ ಕೊಲೆಯಾದ ಸೆಕ್ಯೂರಿಟಿ ಗಾರ್ಡ್. ಭಾರ್ಗವ್ ಎಂಬ ವಿದ್ಯಾರ್ಥಿ ಚಾಕುವಿನಿಂದ ಇರಿದು ಸೆಕ್ಯೂರಿಟಿ ಗಾರ್ಡ್ ನನ್ನು ಹತ್ಯೆ ಮಾಡಿದ್ದಾನೆ.

ಸ್ಥಳದಲ್ಲೇ ಸೆಕ್ಯೂರಿಟಿ ಗಾರ್ಡ್ ಮೃತಪಟ್ಟಿದ್ದಾರೆ.

ಕೊಲೆಗೆ ಕಾರಣವೇನು?


ಇಂದು ಸಿಂಧಿ ಕಾಲೇಜಿನಲ್ಲಿ ಕಾರ್ಯಕ್ರಮ ಇತ್ತು. ಈ ವೇಳೆ ಆರೋಪಿ ವಿದ್ಯಾರ್ಥಿ ಭಾರ್ಗವ್, ಕಾಲೇಜಿಗೆ ಕುಡಿದು ಬಂದಿದ್ದಾನೆ. ಈ ಹಿನ್ನಲೆ ಸೆಕ್ಯೂರಿಟಿಗಾರ್ಡ್, ಭಾರ್ಗವ್​​​ನನ್ನು ಕಾಲೇಜಿನ ಒಳಗೆ ಬಿಡಲು ನಿರಾಕರಿಸಿದ್ದಾರೆ. ಇದರಿಂದ ಸೆಕ್ಯೂರಿಟಿ ಗಾರ್ಡ್​ ಹಾಗೂ ವಿದ್ಯಾರ್ಥಿ ಮಧ್ಯೆ ಗಲಾಟೆ ಆಗಿದೆ. ಬಳಿಕ ಅಂಗಡಿಗೆ ಹೋಗಿ ಚಾಕು ಖರೀದಿಸಿದ್ದ ಭಾರ್ಗವ್, ನೇರವಾಗಿ ಬಂದು ಸೆಕ್ಯೂರಿಟಿ ಗಾರ್ಡ್ ಎದೆಗೆ ಐದಾರು ಬಾರಿ ಇರಿದಿದ್ದಾನೆ. ಅದು ಹೃದಯಕ್ಕೆ ಹೊಕ್ಕು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ.

 Share: | | | | |


ಅ. 2ರಿಂದ ಪುತ್ತೂರಿನ ನ್ಯೂ ಮಂಗಳೂರು ಎಲೆಕ್ಟ್ರಾನಿಕ್ಸ್ ಫರ್ನಿಚರ್ ನಲ್ಲಿ ಬಿಗ್ ಸೇಲ್

Posted by Vidyamaana on 2023-10-02 04:39:41 |

Share: | | | | |


ಅ. 2ರಿಂದ ಪುತ್ತೂರಿನ ನ್ಯೂ ಮಂಗಳೂರು ಎಲೆಕ್ಟ್ರಾನಿಕ್ಸ್  ಫರ್ನಿಚರ್ ನಲ್ಲಿ ಬಿಗ್ ಸೇಲ್

ಪುತ್ತೂರು: ದರ್ಬೆ ಬುಶ್ರಾ ಟವರ್ ನಲ್ಲಿರುವ ನ್ಯೂ ಮಂಗಳೂರು ಇಲೆಕ್ಟೋನಿಕ್ಸ್‌ನ ವಾರ್ಷಿಕೋತ್ಸವದ ಪ್ರಯುಕ್ತ ಬಿಗ್ ಸೇಲ್ ಅ. 2ರಿಂದ 7ರವರೆಗೆ ನಡೆಯಲಿದೆ.


ಪುತ್ತೂರಿನಲ್ಲಿ ಕಳೆದ 44 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ನ್ಯೂ ಮಂಗಳೂರು ಫರ್ನಿಚರಿನ ಸಹ ಸಂಸ್ಥೆಯಾಗಿರುವ ನ್ಯೂ ಮಂಗಳೂರು ಇಲೆಕ್ಟೋನಿಕ್ಸ್‌, ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ಮುಂದಿಟ್ಟಿದೆ.



ಗಿಫ್ಟ್ ಕೂಪನ್: ಪುತ್ತೂರಿನ ಬುಶ್ರಾ ಟವರ್ ನಲ್ಲಿ ಹಾಗೂ ದರ್ಬೆಯ ಐಕೆ ಮಾಲ್ ನಲ್ಲಿ ಪುತ್ತೂರಿನ ಅತೀ ದೊಡ್ಡ ಎಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ ಶೋರೂಮ್ ಹೊಂದಿರುವ ನ್ಯೂ ಮಂಗಳೂರು ಫರ್ನಿಚರ್ ಹಾಗೂ ಏಷಿಯನ್ ವುಡ್ ನಲ್ಲಿ ಪ್ರತೀ ಖರೀದಿಗೆ ಗಿಫ್ಟ್ ಕೂಪನ್ ಇರಲಿದ್ದು ಅದರಲ್ಲಿ ಪ್ರಥಮ ಬಹುಮಾನ ಸೈಡ್ ಬೈ ಸೈಡ್ ರೆಫ್ರಿಜರೆಟರ್, ದ್ವಿತೀಯ ಬಹುಮಾನ ಕಾರ್ನರ್ ಸೋಫಾ ಸೆಟ್, ಮೂರನೇ ಬಹುಮಾನ 32 ಇಂಚಿನ LED TV, ನಾಲ್ಕನೇ ಬಹುಮಾನ ಮಿಕ್ಸರ್ ಗ್ರೈಂಡರ್ ಹಾಗೂ ಇತರ 36 ಆಕರ್ಷಕ ಬಹುಮಾನಗಳಿರಲಿದೆ.


ಸ್ಕ್ರಾಚ್ & ವಿನ್: ಸ್ಕ್ರಾಚ್ & ವಿನ್ ಮೂಲಕ 10ಗ್ರಾಂ. ಗೋಲ್ಡ್ ಕಾಯಿನ್ , 32 ಇಂಚಿನ ಎಲ್ಇಡಿ ಟಿವಿ, ಸಿಲ್ವರ್ ಕಾಯಿನ್, ಏರ್ ಕಂಡಿಷನ್, ಸಿಂಗಲ್ ಡೋಲ್ ರೆಫ್ರಿಜರೇಟರ್ ಹಾಗೂ ಹಲವಾರು ಬಹುಮಾನ ಗೆಲ್ಲುವ ಅವಕಾಶವಿದೆ. ಗಿಫ್ಟ್ ವೋಚರ್:ಎಲೆಕ್ಟ್ರಾನಿಕ್ಸ್ ಖರೀದಿಯ ಮೇಲೆ ಗಿಫ್ಟ್ ವೋಚರ್ ಮತ್ತು ಪ್ರತಿ ಖರೀದಿಯ ಮೇಲೆ ಹಲವು ಉಡುಗೊರೆಗಳು ಲಭ್ಯವಿರುತ್ತದೆ.


ಕ್ಯಾಶ್ ಬ್ಯಾಕ್ : ಆಯ್ದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಎಕ್ಟ್ರಾ ವಾರಾಂಟಿಗಳಿದ್ದು, 20% ಕ್ಯಾಶ್ ಬ್ಯಾಕ್ ಕೂಡ ಲಭ್ಯವಿರುತ್ತದೆ.


40% ಆಫರ್: ಎಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ ಖರೀದಿಯ ಮೇಲೆ ಶೇ.40ರವರೆಗೆ ರಿಯಾಯಿತಿ ಹಾಗೂ ಖರೀದಿಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಲಭ್ಯವಿರುತ್ತದೆ.


6 ದಿನಗಳಲ್ಲಿ ಹಲವು ಆಫರ್ ಗಳಿದ್ದು ಅ.7ಕ್ಕೆ ಈ ಎಲ್ಲಾ ಆಫರ್ ಕೊನೆಗೊಳ್ಳಲಿದ್ದು ಗ್ರಾಹಕರು ಈ ವಿಶೇಷ ಆಫರ್ ನ ಸೌಲಭ್ಯ ಪಡೆದುಕೊಳ್ಳಬೇಕೆಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಕುತ್ತಾರು : ಮನೆ ಕುಸಿತದಿಂದ ನಾಲ್ವರು ಮೃತಪಟ್ಟ ಘಟನಾ ಸ್ಥಳಕ್ಕೆ ಕಂದಾಯ ಸಚಿವರು ಭೇಟಿ

Posted by Vidyamaana on 2024-06-27 08:40:07 |

Share: | | | | |


 ಕುತ್ತಾರು : ಮನೆ ಕುಸಿತದಿಂದ ನಾಲ್ವರು ಮೃತಪಟ್ಟ ಘಟನಾ ಸ್ಥಳಕ್ಕೆ ಕಂದಾಯ ಸಚಿವರು ಭೇಟಿ

ಮಂಗಳೂರು, ಜೂನ್.26: ಪ್ರಕೃತಿ ವಿಕೋಪವನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಮುಂಜಾಗ್ರತೆ ವಹಿಸದೆ ಇಳಿಜಾರಿನಲ್ಲಿ ಮನೆ ಕಟ್ಟಿಕೊಂಡಿರುವುದು ಇಲ್ಲಿ ಕಂಡುಬಂದಿದೆ. ಬೆಟ್ಟದ ಇಳಿಜಾರಿನಲ್ಲಿ ಈ ರೀತಿ ಮನೆ ಮಾಡಿರುವುದು ರಾಜ್ಯದಲ್ಲಿ ಸಾವಿರಾರು ಇರಬಹುದು. ಮಳೆಯ ಸಂದರ್ಭದಲ್ಲಿ ತೊಂದರೆ ಆಗಬಲ್ಲಂತಹ ಇಂತಹ ಮನೆಗಳನ್ನು ಗುರುತಿಸಿ, ಅಲ್ಲಿನ ನಿವಾಸಿಗಳಿಗೆ ಬೇರೆಡೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ

ಹುಲಿವೇಷಧಾರಿ ಕಾಡುಬೆಟ್ಟು ಅಶೋಕ್ ರಾಜ್ ನಿಧನ

Posted by Vidyamaana on 2024-02-01 20:29:37 |

Share: | | | | |


ಹುಲಿವೇಷಧಾರಿ ಕಾಡುಬೆಟ್ಟು ಅಶೋಕ್ ರಾಜ್ ನಿಧನ

ಉಡುಪಿ : ಕಾಡುಬೆಟ್ಟುನಿವಾಸಿ, ಸಾಂಪ್ರದಾಯಿಕ ಹುಲಿವೇಷಧಾರಿ, ಹುಲಿಕುಣಿತದಲ್ಲಿ ತನ್ನದೇ ಆದ ಚಾಪು ಮೂಡಿಸಿದ ಕಾಡುಬೆಟ್ಟು ಅಶೋಕ್ ರಾಜ್ ಅವರು ನಿಧನರಾದರು.ಹಲವು ದಿನಗಳಿಂದ ಅನಾರೋಗ್ಯದಿಂದಿದ್ದ ಅಶೋಕ್ ರಾಜ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.


ಕಳೆದ 36 ವರ್ಷಗಳಿಂದ ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಉಡುಪಿಯಲ್ಲಿ ಸಾಂಪ್ರದಾಯಿಕ ಹುಲಿವೇಷ ಧರಿಸಿದ್ದ ಅವರು 28 ವರ್ಷಗಳಿಂದ ಹುಲಿವೇಷ ತಂಡ ರಚಿಸಿದ್ದರು. ಉಭಯ ಜಿಲ್ಲೆಗಳಲ್ಲಿ ತಂಡವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು. 


ಮೃತರು ಪತ್ನಿ  ಸುಷ್ಮರಾಜ್ ಸಹಿತ ಇಬ್ಬರು ಪುತ್ರಿಯರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪುತ್ತೂರು ನಗರ ವ್ಯಾಪ್ತಿಗೆ ೨೪ ಕೋಟಿ ರೂ ಅನುದಾನ ದೂರ ದೃಷ್ಟಿಯಲ್ಲಿ ನಡೆಯಲಿದೆ ನಗರದ ಕಾಮಗಾರಿಗಳು: ಅಶೋಕ್ ರೈ

Posted by Vidyamaana on 2024-01-08 07:54:09 |

Share: | | | | |


ಪುತ್ತೂರು ನಗರ ವ್ಯಾಪ್ತಿಗೆ ೨೪ ಕೋಟಿ ರೂ ಅನುದಾನ  ದೂರ ದೃಷ್ಟಿಯಲ್ಲಿ ನಡೆಯಲಿದೆ ನಗರದ ಕಾಮಗಾರಿಗಳು: ಅಶೋಕ್ ರೈ

ಪುತ್ತೂರು: ಪುತ್ತೂರು ನಗರ ವ್ಯಾಪ್ತಿಯಲ್ಲಿ ರೂ ೨೪ ಕೋಟಿ ರೂ ಕಾಮಗಾರಿ ನಡೆಯಲಿದ್ದು ಇದಕ್ಕಾಗಿ ವಿವಿಧ ಕಡೆಗಳಿಗೆ ಅನುದಾನ ಹಂಚಿಕೆ ಕೆಲಸ ನಡೆದಿದ್ದು ಮುಂದಿನ ದಿನಗಳಲ್ಲಿ ನಗರದಲ್ಲಿ ಹೆಚ್ಚಿನ ಅಭಿವೃದ್ದಿ ಕಾರ್ಯಗಳು ನನಡೆಯಲಿದ್ದು ದೂರ ದೃಷ್ಟಿಯ ಕಾಮಗಾರಿಗಳು ನಡೆಯಲಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.


ಅವರು ಮರೀಲ್ ಬೆದ್ರಾಳ ರಸ್ತೆ ಅಗಲೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.


ಪುತ್ತೂರು ನಗರಕ್ಕೆ ೨೪ ಗಂಟೆಯೂ ಕುಡಿಯುವ ನೀರಿನ ವ್ಯವಸ್ಥೆ ಆಗಲಿದೆ. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ೧೦೧೦ ಕೋಟಿ ರಊ ಅನುದಾನ ಬಿಡುಗಡೆಯಾಗಿದ್ದು ಮುಂದಿನ ಒಂದೂವರೆ ವರ್ಷದೊಳಗೆ ಗ್ರಾಮೀಣ ಭಾಗದಲ್ಲೂ ದಿನದ ೨೪ ಗಂಠೆ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ಹೇಳಿದರು.


ಕೆಎಂಎಫ್ ಪುತ್ತೂರಿಗೆ ಶಿಫ್ಟ್ ಆಗಲಿದ್ದು ಇದರಿಂದ ಇಲ್ಲಿನ ಸುಮಾರು ೬೦೦ ಮಂದಿಗೆ ಉದ್ಯೋಗ ದೊರೆಯಲಿದೆ. ಯುವಕರಿಗೆ ಉದ್ಯೋಗ ನೀಡುವ ಕೆಲಸವನ್ನು ಮಾಡಬೇಕು. ಪುತ್ತೂರಿನಲ್ಲಿ ಉದ್ಯಮ ಆರಂಭವಾದರೆ ಎಲ್ಲರಿಗೂ ಆದಾಯ ಬರಲಿದೆ. ಆಟೋ ಚಾಲಕರಿಗೆ, ಲರಿ ಚಾಲಕರಿಗೆ ಸೇರಿದಂತೆ ವಿದ್ಯಾವಂತ ನಿರುದ್ಯೋಗಿಗಳಿಗೂ ಉದ್ಯೋಗಕವಾಶ ದೊರೆಯಲಿದೆ. ಪಕ್ಷಾತೀತವಾಗಿ ಪುತ್ತೂರಿನಲ್ಲಿ ಅಭಿವೃದ್ದಿ ಕಾರ್ಯಗಳನ್ನು ನಡೆಸುತ್ತೇನೆ. ಅಭಿವೃದ್ದಿಯಲ್ಲಿ ಯಾವುದೇ ರಾಜಕೀಯ ಖಂಡಿತವಾಗಿಯೂ ಮಾಡುವುದಿಲ್ಲ. ಪುತ್ತೂರಿನ ಜನತೆಯ ಕ್ಷೇಮವೇ ನನ್ನ ಕ್ಷೇಮವಾಗಿದೆ, ನನ್ನ ಕ್ಷೇತ್ರದಲ್ಲಿ ಸೂರು, ನೀರು, ಮತ್ತು ಕರೆಂಟ್ ಇಲ್ಲದೆ ವಂಚಿತರಾಗಿರುವ ಯವುದೇ ಕುಟುಂಬ ಇರಬಾರದು, ಯಾವ ಕುಟುಂಬವೂ ಹಸಿವಿನಿಂದ ಇರಬಾರದು ಎಂಬುದೇ ನನ್ನ ಉದ್ದೇಶವಾಗಿದೆ ಎಂದು ಹೇಳಿದರು.

ಬೆದ್ರಾಳದಿಂದ ಸರ್ವೆತನಕ ಚತುಷ್ಪಥ ರಸ್ತೆ


ಬೆದ್ರಾಳದಿಂದ ಸರ್ವೆ ತನಕ ಚತುಷ್ಪಥ ರಸ್ತೆ ನಿರ್ಮಾಣವಾಗಲಿದೆ ಈ ವಿಚಾರಕ್ಕೆ ಸಂಬಂಧಿಸಿಂದಂತೆ ಈಗಾಗಲೇ ಅನುದಾನಕ್ಕಾಗಿ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಶಾಸಕರು ಹೇಳಿದರು. ಸರಕಾರ ಐದು ಗ್ಯಾರಂಟಿಯನ್ನು ನೀಡಿ ಪ್ರತೀ ಕುಟುಂಬಕ್ಕೂ ನೆರವಾಗಿದೆ, ಎಲ್ಲರ ಖಾತೆಗೂ ಹಣ ಜಮೆಯಾಗುತ್ತಿದೆ, ಕಾಂಗ್ರೆಸ್ ಸರಕಾರ ಬಂದ ಬಳಿಕ ಜನತೆ ನೆಮ್ಮದಿಯಿಂದ ಇದ್ದಾರೆ. ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಕಾಂಗ್ರೆಸ್ ಸರಕಾರ ಬಂದ ಬಳಿಕ ಕೊಂಚ ನೆಮ್ಮದಿ ದೊರಕಿದೆ. ಮುಂದಿನ ದಿನಗಳಲ್ಲಿ ಅಭಿವೃದ್ದಿಗೂ ಸರಕಾರ ಹೆಚ್ಚಿನ ಅನುದಾನವನ್ನು ನೀಡಲಿದೆ ಎಂದು ಶಾಸಕರು ಹೇಳಿದರು.


ಅಶೋಕ್ ರೈ ಶಾಸಕರಾಗಿದ್ದೇ ನಮ್ಮ ಭಾಗ್ಯ: ಆಲಿ


ಅಶೋಕ್ ರೈ ಶಾಸಕರಾಗಿದ್ದೇ ನಮ್ಮೆಲಲ್ಲರ ಭಾಗ್ಯವಾಗಿದೆ. ಪುತ್ತೂರಿಗೆ ಗಟ್ಸ್ ಇರುವ ಶಾಸಕರು ಬೇಕು ಎಂದು ಜನ ಆಸೆಪಟ್ಟಿದ್ದರು ಅದರಂತೆ ಗಟ್ಸ್ ಇರುವ ಶಸಕರು ನಮಗೆ ಸಿಕ್ಕಿದ್ದಾರೆ. ಈಗಾಗಲೇ ಕೋಟಿಗಟ್ಟಲೆ ಅನುದಾನವನ್ನು ಎಂಟು ತಿಂಗಳಲ್ಲಿ ಕ್ಷೇತ್ರಕ್ಕೆ ತಂದಿದ್ದಾರೆ. ಬಡವರ ಪರ ಅಪಾರ ಕಾಳಜಿ ಇರುವ ಶಾಸಕರು ಇಂದು ಕ್ಷೇತ್ರದ ಬಡವರಿಗಾಗಿ ಸರ್ವಸ್ವವನ್ನೂ ನೀಡುತ್ತಿದ್ದಾರೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ನಗರೋತ್ತಾನ ಯೋಜನೆಯಡಿ ಮರೀಲ್ ಬೆದ್ರಾಳ ರಸ್ತೆಗೆ ರೂ. ೫೦ ಲಕ್ಷ ವನ್ನು ಶಾಸಕರು ಮಂಜೂರು ಮಾಡಿಸುವ ಮೂಲಕ ಇಲ್ಲಿನ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ್ದಾರೆ. ಮುಂದಿನ ದಿನಗಳಲ್ಲಿ ನಗರಸಭಾ ವ್ಯಾಪ್ತಿಯ ಜನರ ಎಲ್ಲಾ ಬೇಡಿಕೆಗಳು ಖಂಡಿತವಾಗಿಯೂ ಈಡೇರಲಿದೆ. ಕುಡಿಯುವ ನೀರು, ದಾರಿ ದೀಪ, ಚರಂಡಿ ಸೇರಿದಂತೆ ಜನತೆಯ ಬಹುಕಾಲದ ಬೇಡಿಕೆಗಳು ಈಡೇರಲಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಮಹಮ್ಮದಾಲಿ ಹೇಳಿದರು.

ಸನ್ಮಾನ

ಇದೇ ಸಂದರ್ಭದಲ್ಲಿ ಆರ್ಯಾಪು ಕೃಷಿಪತ್ತಿನ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದ ಮಹಮ್ಮದಾಲಿ ಹಗೂ ನೂತನ ನಿರ್ದೆಶಕರುಗಳಾಗಿ ಆಯ್ಕೆಯಾದ ರಂಜಿತ್ ಬಂಗೇರ ಹಾಗೂ ತೆರೆಸಾ ಎಂ ಸಿಕ್ವೆರಾ ಅವರನ್ನು ಶಾಸಕರು ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬನ್ನೂರು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಈಶ್ವರಭಟ್ ಪಂಜಿಗುಡ್ಡೆ, ಕಾಂಗ್ರೆಸ್ ಮುಖಂಡರುಗಳಾದ ಶಿವರಾಮ ಆಳ್ವ ಬಳ್ಳಮಜಲು, ಕೃಷ್ಣಪ್ರಸಾದ್ ಆಳ್ವ, ರೋಶನ್ ರೈ ಬನ್ನೂರು, ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಯಾಕೂಬ್ ಮುಲಾರ್, ರೆಝಾಕ್ ಖಾನ್, ಹೆರಾಲ್ಡ್ ಮಾಡ್ತಾ, ಇಬ್ರಾಹಿಂ ಟಿ ಎಂ, ಲಿಯೋ ಮಾರ‍್ಟಿಸ್,ದಿನೇಶ್, ಬೆನ್ನಿ ಡಿಸೋಜ, ತೆರೆಸಾ ಸಿಕ್ವೆರಾ, ಬೂತ್ ಅಧ್ಯಕ್ಷ ಜೀವನ್ ಮರ್ವಿನ್ ಡೆಲ್ಮೆದಾ, ಆರ್ಯಾಪು ಸೇವಾ ಸಹಕಾರಿ ಸಂಘದ ನಿರ್ದೇಶಕರಾದ  ರಂಜಿತ್ ಬಂಗೇರ, ಮರೀಲ್ ರಿಕ್ಷಾ ಚಾಲಕರ ಸಂಘದ ಪಧಾಧಿಕಾರಿಗಳು ಹಗೂ ಸ್ಥಳೀಯರು ಉಪಸ್ಥಿತರಿದ್ದರು.

ಬದಿಯಡ್ಕ: ಎದೆಹಾಲು ಕುಡಿಯುವಾಗ ಉಸಿರುಕಟ್ಟಿ ಅಬ್ದುಲ್ ರಹ್ಮಾನ್-ತಾಹಿರಾ ದಂಪತಿಗಳ ನವಜಾತ ಶಿಶು ಮೃತ್ಯು

Posted by Vidyamaana on 2023-02-18 14:42:11 |

Share: | | | | |


ಬದಿಯಡ್ಕ: ಎದೆಹಾಲು ಕುಡಿಯುವಾಗ ಉಸಿರುಕಟ್ಟಿ ಅಬ್ದುಲ್ ರಹ್ಮಾನ್-ತಾಹಿರಾ ದಂಪತಿಗಳ ನವಜಾತ ಶಿಶು ಮೃತ್ಯು

ಬದಿಯಡ್ಕ : ತಾಯಿಯ ಎದೆಹಾಲು ಕುಡಿಯುವಾಗ ಉಸಿರುಕಟ್ಟಿ ನವಜಾತ ಶಿಶು ಸಾವಿಗೀಡಾಗಿದ ಹೃದಯ ವಿದ್ರಾವಕ ಘಟನೆ ಬದಿಯಡ್ಕದಲ್ಲಿ ವರದಿಯಾಗಿದೆ. ಎದೆಹಾಲು ಗಂಟಲಲ್ಲಿ ಸಿಲುಕಿ ಉಕ್ಕಿನಡ್ಕ ನಿವಾಸಿಗಳಾದ ಅಬ್ದುಲ್ ರಹ್ಮಾನ್-ತಾಹಿರಾ ದಂಪತಿಯ ದಿನದ 25 ಹಸುಗೂಸು ಸಾವಿಗೀಡಾಗಿದೆ.

     ಫೆ. 16ರಂದು ಮಗುವಿಗೆ ಎದೆ ಹಾಲು ಉಣಿಸುತ್ತಿದ್ದಾಗ ಹಾಲು ಗಂಟಲಲ್ಲಿ ಸಿಲುಕಿಕೊಂಡು ಮಗು ಅಸ್ವಸ್ಥಗೊಂಡಿತು. ಕೂಡಲೇ ಮಗುವನ್ನು ಬದಿಯಡ್ಕ ಸರಕಾರಿ ಆಸ್ಪತ್ರೆಗೆ ಆ ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಗೂ ತಲುಪಿಸಿದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರೀಲ್ಸ್ ಮಾಡುತ್ತಲೇ ವಿಧವೆಯಾದ ಮಹಿಳೆ, ಸಾಯುವ ಮುನ್ನ ಪತಿ ಹೇಳಿದ್ದಿಷ್ಟು!

Posted by Vidyamaana on 2024-04-08 20:33:06 |

Share: | | | | |


ರೀಲ್ಸ್ ಮಾಡುತ್ತಲೇ ವಿಧವೆಯಾದ ಮಹಿಳೆ, ಸಾಯುವ ಮುನ್ನ ಪತಿ ಹೇಳಿದ್ದಿಷ್ಟು!

     ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಲೇ ಇರುತ್ತದೆ. ಈ ಜಗಳದಿಂದಾಗಿ ಸಂಬಂಧದಲ್ಲಿ ಮಾಧುರ್ಯ ಉಳಿಯುತ್ತದೆ. ಜಗಳಗಳ ನಂತರ ದಂಪತಿಗಳ ನಡುವೆ ಸಮನ್ವಯವಾದಾಗ, ಪ್ರೀತಿಯು ಮೊದಲಿಗಿಂತ ಹೆಚ್ಚು ಹೆಚ್ಚಾಗುತ್ತದೆ. ಆದರೆ ಅನೇಕ ಬಾರಿ ಈ ಕದನಗಳು ಅದ್ಯಾವ ಅತಿರೇಕಕ್ಕೆ ತಲುಪುತ್ತವೆ ಎಂದರೆ, ಅದರ ಫಲಿತಾಂಶವು ಊಹಿಸಲೂ ಸಾಧ್ಯವಿಲ್ಲ.ರಾಜಸ್ಥಾನದ ಅಲ್ವಾರ್​ನಲ್ಲಿ ಕೌಟುಂಬಿಕ ಕಲಹದಿಂದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆ ವ್ಯಕ್ತಿ ಅಳುತ್ತಾ ಹೆಂಡತಿಯನ್ನು ಬಿಟ್ಟು ಹೋಗಿದ್ದ.


ರೈನಿ ಪೊಲೀಸ್ ಠಾಣೆ ವ್ಯಾಪ್ತಿಯ ನಂಗಲ್ ಬಸ್ ಗ್ರಾಮದಲ್ಲಿ ವಾಸಿಸುತ್ತಿದ್ದ ಸಿದ್ಧಾರ್ಥ್ ವೃತ್ತಿಯಲ್ಲಿ ಸರ್ಕಾರಿ ನೌಕರನಾಗಿದ್ದ. ಆತನ ಪತ್ನಿ ಮಾಯಾ ಅವರು ರೀಲ್‌ಗಳನ್ನು ಮಾಡುವುದನ್ನು ಇಷ್ಟಪಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಪತ್ನಿಯ ಈ ಹವ್ಯಾಸದಿಂದ ಸಿದ್ಧಾರ್ಥ್ ತುಂಬಾ ನೊಂದುಕೊಂಡಿದ್ದ. ರೀಲ್‌ಗಳನ್ನು ಮಾಡದಂತೆ ಅವನು ತನ್ನ ಹೆಂಡತಿಯನ್ನು ಅನೇಕ ಬಾರಿ ಕೇಳಿಕೊಂಡಿದ್ದ. ಆದರೆ ಪ್ರತಿದಿನ ಪತ್ನಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಕುತ್ತಲೇ ಇದ್ದರು. ಈ ಕಾರಣಕ್ಕೆ ಇಬ್ಬರ ನಡುವೆ ಪ್ರತಿದಿನ ಜಗಳ ನಡೆಯುತ್ತಿತ್ತು. ಕೊನೆಗೆ ಇದೆಲ್ಲದರಿಂದ ಬೇಸತ್ತು ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.



Leave a Comment: