ಯು ಕೆ ಎಲೆಕ್ಷನ್ ನಲ್ಲಿ ಹೀನಾಯ ಸೋಲು; ರಿಶಿ ಸುನಕ್ ಫಸ್ಟ್ ರಿಯಾಕ್ಷನ್

ಸುದ್ದಿಗಳು News

Posted by vidyamaana on 2024-07-05 12:01:03 |

Share: | | | | |


ಯು ಕೆ ಎಲೆಕ್ಷನ್ ನಲ್ಲಿ ಹೀನಾಯ ಸೋಲು; ರಿಶಿ ಸುನಕ್ ಫಸ್ಟ್ ರಿಯಾಕ್ಷನ್

ಲಂಡನ್ : ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆ(UK Election) ಫಲಿತಾಂಶ ಹೊರಬಿದ್ದಿದ್ದು, ಬರೋಬ್ಬರಿ 14ವರ್ಷಗಳ ಬಳಿಕ ಲೇಬರ್ ಪಕ್ಷ ಜಯಭೇರಿ ಭಾರಿಸಿದೆ. ಲೇಬರ್‌ ಪಕ್ಷ 360 ಸ್ಥಾನಗಳನ್ನು ಗಳಿಸಿ ಮ್ಯಾಜಿಕ್‌ ನಂಬರ್‌ 320 ಅನ್ನು ದಾಟುವ ಮೂಲಕ ಸರ್ಕಾರ ರಚನೆಗೆ ಮುಂದಾಗಿದೆ.

ಹಾಲಿ ಪ್ರಧಾನಿ ರಿಷಿ ಸುನಕ್‌(Rishi Sunak) ಅವರ ಪಕ್ಷ ಕನ್ಸರ್ವೇಟಿವ್‌ ಪಕ್ಷ ಭಾರೀ ಹಿನ್ನಡೆ ಅನುಭವಿಸಿದ್ದು, ಲೇಬರ್‌ ಪಕ್ಷದ ಕೀರ್‌ ಸ್ಟಾರ್ಮರ್‌(Keir Starmer) ಅವರಿಗೆ ಪ್ರಧಾನಿ ಗಿಟ್ಟಿದೆ. ಇನ್ನು


ಫಲಿತಾಂಶ ಹೊರ ಬೀಳುತ್ತಿದ್ದಂತೆ ರಿಶಿ ಸುನಕ್‌ ಪ್ರತಿಕ್ರಿಯಿಸಿದ್ದು, ಈ ಸೋಲಿನ ಜವಾಬ್ದಾರಿಯನ್ನು ತಾವು ಹೊತ್ತುಕೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೇ ಲೇಬರ್‌ ಪಕ್ಷದ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಲೇಬರ್ ಪಕ್ಷವು ಈ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದೆ ಮತ್ತು ಅವರ ವಿಜಯಕ್ಕಾಗಿ ಅಭಿನಂದಿಸಲು ನಾನು ಸರ್ ಕೀರ್ ಸ್ಟಾರ್ಮರ್‌ಗೆ ಕರೆ ಮಾಡಿದ್ದೇನೆ. ಇಂದು, ಅಧಿಕಾರವು ಶಾಂತಿಯುತವಾಗಿ ಮತ್ತು ಕ್ರಮಬದ್ಧವಾಗಿ ಅಧಿಕಾರ ಹಸ್ತಾಂತರಗೊಂಡಿದೆ. ಎಲ್ಲಾ ಕಡೆಯಿಂದಲೂ ಸದ್ಭಾವನೆ ಇರುತ್ತದೆ. ಇದು ನಮ್ಮ ದೇಶದ ಸ್ಥಿರತೆ ಮತ್ತು ಭವಿಷ್ಯದ ಬಗ್ಗೆ ನಮಗೆಲ್ಲರಿಗೂ ವಿಶ್ವಾಸವನ್ನು ನೀಡುವ ವಿಷಯವಾಗಿದೆ ಎಂದು ಹೇಳಿದ್ದಾರೆ.

ಪಕ್ಷಗಳ ಬಲಾಬಲ ಹೇಗಿದೆ?

ಇನ್ನು ಕಣದಲ್ಲಿರುವ ಪಕ್ಷಗಳ ಬಲಾಬಲ ಹೇಗಿದೆ ಎಂದು ನೋಡುವುದಾದರೆ,

ಕನ್ಸರ್ವೇಟಿವ್‌ ಪಕ್ಷ ಕೇವಲ – 81

ಲೇಬರ್ ಪಾರ್ಟಿ - 360

ಸ್ಕಾಟಿಷ್ ನ್ಯಾಶನಲಿಸ್ಟ್ ಪಾರ್ಟಿ (SNP) - 3

ಲಿಬರಲ್ ಡೆಮೋಕ್ರಾಟ್‌ಗಳು - 49

ರಿಫಾರ್ಮ್‌ ಯುಕೆ - 3

ಇತರೆ - 1

ಎಕ್ಸಿಟ್‌ ಪೋಲ್‌ ಭವಿಷ್ಯ ಏನು?


ಇನ್ನು ಚುನಾವಣಾ ಪೂರ್ವ ಸಮೀಕ್ಷೆಗಳು ಕನ್ಸರ್ವೇಟಿವ್‌ ಪಕ್ಷ ಈ ಬಾರಿ ಸೋಲುವುದು ಖಚಿತ ಎಂಬ ಭವಿಷ್ಯ ನುಡಿದಿತ್ತು. ಈ ಬಾರಿ ಕನ್ಸರ್ವೇಟಿಕವ್‌ ಪಕ್ದ್ ಸ್ಥಾನ 131ಕ್ಕೆ ಇಳಿಯಲಿದ್ದು, ಲೇಬರ್‌ ಪಕ್ಷ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾಕ್ಕೆ ಬರಲಿದೆ ಎಂದು ಹೇಳಿದೆ. ಹಾಗಿದ್ದರೆ ಎಕ್ಸಿಟ್‌ ಪೋಲ್‌ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು ದೊರೆಯಲಿದೆ ನೋಡೋಣ.


ಕನ್ಸರ್ವೇಟಿವ್‌: 131

ಲೇಬರ್ ಪಕ್ಷ: 410

ಲಿಬರಲ್ ಡೆಮೋಕ್ರಾಟ್‌ಗಳು: 61

ಸ್ಕಾಟಿಷ್ ನ್ಯಾಶನಲಿಸ್ಟ್ ಪಾರ್ಟಿ (SNP): 10

ರಿಫಾರ್ಮ್ ಯುಕೆ: 13

ಪ್ಲೈಡ್ ಸಿಮ್ರು: 4

ಗ್ರೀನ್ಸ್: 2

ರಿಷಿ ಸುನಕ್‌ಗೆ ಆಡಳಿತ ವಿರೋಧಿ ಅಲೆ

44 ವರ್ಷದ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದು, 61 ವರ್ಷದ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಾರ್ಟಿಗಿಂತ ಕಳೆದ 6 ವಾರಗಳ ಪ್ರಚಾರದಲ್ಲಿ ಅತ್ಯಂತ ಹಿಂದುಳಿದಿದ್ದಾರೆ. ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್‌ನಾದ್ಯಂತ 650 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ, ಮೊದಲ ಬಾರಿಗೆ ಪೋಸ್ಟ್ ಸಿಸ್ಟಮ್‌ನಲ್ಲಿ ಬಹುಮತಕ್ಕೆ 326 ಮತಗಳ ಅಗತ್ಯವಿದೆ.

 Share: | | | | |


62ನೇ ವಯಸ್ಸಿನಲ್ಲಿ 46 ವರ್ಷದ ಮಹಿಳೆಯನ್ನು ಮದುವೆಯಾದ ಖತರ್ನಾಗ್ ಗ್ಯಾಂಗ್ ಸ್ಟರ್

Posted by Vidyamaana on 2024-03-21 15:39:55 |

Share: | | | | |


62ನೇ ವಯಸ್ಸಿನಲ್ಲಿ 46 ವರ್ಷದ ಮಹಿಳೆಯನ್ನು ಮದುವೆಯಾದ ಖತರ್ನಾಗ್ ಗ್ಯಾಂಗ್ ಸ್ಟರ್

ಬಿಹಾರ: ಲೋಕಸಭೆ ಚುನಾವಣೆಗೆ ಟಿಕೆಟ್​ ಆಕಾಂಕ್ಷಿಯಾಗಿದ್ದ ಕಿಮಿನಲ್​​ ಹಿನ್ನೆಲೆ ಇರುವ ಕುಖ್ಯಾತ ರೌಡಿಯೊಬ್ಬ ಚುನಾವಣೆಗೆ ನಿಲ್ಲುವ ಉದ್ದೇಶದಿಂದ ರಾತ್ರೋರಾತ್ರಿ ಮದುವೆ ಆಗಿದ್ದಾನೆ. ಮದುವೆಗೂ, ಚುನಾವಣೆಗೂ ಏನು ಸಂಬಂಧ ಎಂದು ನಿಮಗೆ ಪ್ರಶ್ನೆ ಮೂಡುತ್ತಿರಬಹುದು..

ಆದರೆ ಈ ಕುರಿತಾದ ಇಂಟ್ರಸ್ಟಿಂಗ್​ ಕಹಾನಿ ಇಲ್ಲಿದೆ…

ಅಶೋಕ್ ಮಹ್ತೋ ಬಿಹಾರದ ನವಾಡ ಪ್ರದೇಶದಲ್ಲಿ ದೊಡ್ಡ ಗ್ಯಾಂಗ್​ಸ್ಟರ್​. ನಾವಡ ಜೈಲ್ ಬ್ರೇಕ್ ಘಟನೆಯಲ್ಲೂ ಭಾಗಿಯಾಗಿದ್ದ. ಕೆಲವು ಕ್ರಿಮಿನಲ್​ ಹಿನ್ನೆಲೆ ಹೊಂದಿರುವ ಈತ ಲೋಕಸಭೆ ಚುನಾವಣೆಯಲ್ಲಿ ಭಾಗವಹಿಸಬೇಕು ಎಂದುಕೊಂಡಿದ್ದಾನೆ. ಈ ಕುರಿತಾಗಿ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಅವರನ್ನು ಈ ಹಿಂದೆ ಭೇಟಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

2001ರಲ್ಲಿ ನವಾಡ ಜೈಲಿನಿಂದ ತಪ್ಪಿಸಿಕೊಂಡ ಪ್ರಕರಣದಲ್ಲಿ 17 ವರ್ಷ ಸೆರೆಮನೆವಾಸಕ್ಕೆ ಗುರಿಯಾದ ಅಶೋಕ್ ಮಹ್ತೋ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎರಡು ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆಗೆ ಒಳಗಾದವರಿಗೆ ಜೈಲಿನಿಂದ ಬಿಡುಗಡೆಯಾಗಿ ಆರು ವರ್ಷ ಕಾಲ ಚುನಾವಣೆಗೆ ಸ್ಪರ್ಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಹೀಗಾಗಿ ನೀನು ಮದುವೆ ಆಗು, ಪತ್ನಿಯನ್ನೇ ಚುನಾವಣೆಯಲ್ಲಿ ಕಣಕ್ಕಿಳಿಸುವಂತೆ ಆರ್‌ಜೆಡಿ ಹಿರಿಯ ನಾಯಕರೊಬ್ಬರು ಸಲಹೆ ನೀಡಿದ್ದಾರೆ. ಈ ಗ್ಯಾಂಗ್​ಸ್ಟರ್​​ ಮಾಸ್ಟರ್​ ಪ್ಲ್ಯಾನ್​​ ಮಾಡಿದ್ದಾನೆ.

ಅಶೋಕ್ ಮಹ್ತೋ ಬಿಹಾರದ ಮುಂಗೇರ್ ಕ್ಷೇತ್ರದಿಂದ ಆರ್‌ಜೆಡಿ ಟಿಕೆಟ್‌ನಲ್ಲಿ ಸ್ಪರ್ಧಿಸಲು ಬಯಸಿದ್ದಾರೆ. ಆದರೆ, ಕ್ರಿಮಿನಲ್ ಹಿಸ್ಟರಿ ಇರುವ ಕಾರಣ ಟಿಕೆಟ್ ಸಿಗದಿದ್ದರೆ ಪತ್ನಿ ಮೂಲಕವಾಗಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾನೆ ಎನ್ನಲಾಗಿದೆ.

ಗ್ಯಾಂಗಸ್ಟರ್​ ಅಶೋಕ್ ಮಹ್ತೋ 62 ನೇ ವಯಸ್ಸಿನಲ್ಲಿ 46 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾನೆ. ಕೆಲವೇ ಮಂದಿ ಅತಿಥಿಗಳು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮತ್ತೋ ವಿವಾಹ ಸಮಾರಂಭ ನೆರವೇರಿದೆ. ಅಶೋಕ್ ಮಹತೋ ಮದುವೆಯಾದ ಹುಡುಗಿಯ ಹೆಸರು ಕುಮಾರಿ ಅನಿತಾ. ಆಕೆಗೆ 46 ವರ್ಷ ಮತ್ತು ದೆಹಲಿಯ ಆರ್‌ಕೆ ಪುರಂ ನಿವಾಸಿ. ಪಾಟ್ನಾ ಜಿಲ್ಲೆಯ ಸೇಲಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕರೌಟದಲ್ಲಿರುವ ಮಾ ಜಗದಂಬಾ ಸ್ಥಾನ ದೇವಸ್ಥಾನದಲ್ಲಿ ಮಂಗಳವಾರ ವಿವಾಹವಾದರು.

ವಿವಾಹದ ನಂತರ, ಅಶೋಕ್ ಮಹ್ತೋ ಪತ್ನಿ ಅನಿತಾ ಜತೆ ಮಾಜಿ ಸಿಎಂ ರಾಬಿದೇವಿಯವರ ನಿವಾಸಕ್ಕೆ ತೆರಳಿ ಆರ್ ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್ ಅವರ ಆಶೀರ್ವಾದ ಪಡೆದರು. ಬಿಹಾರದ ಮುಂಗೇರ್ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣದಲ್ಲಿ ಪತ್ನಿಯನ್ನು ಕಣಕ್ಕಿಳಿಸುವ ಮೂಲಕ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಈಡೇರಿಸಲು ಅವರು ವಿವಾಹವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪತ್ನಿಯನ್ನು ಚುನಾವಣಾ ಕಣಕ್ಕೆ ಇಳಿಸುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಇನ್ನೂ ಯಾವುದೂ ನಿರ್ಧಾರವಾಗಿಲ್ಲ ಎಂದ ಮತ್ತೋ, ಪತ್ನಿಗೆ ಟಿಕೆಟ್ ನೀಡುವ ಬಗ್ಗೆ ಲಾಲೂ ಯಾವುದೇ ಖಚಿತ ಭರವಸೆ ನೀಡಿಲ್ಲ.

ಕಳೆದ ವರ್ಷ ಜೈಲಿನಿಂದ ಬಿಡುಗಡೆಯಾಗಿದ್ದ ಈತನ ವಿರುದ್ಧ ಪ್ರಸ್ತುತ ನ್ಯಾಯಾಲಯಗಳಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳು ನಡೆಯುತ್ತಿವೆ ಎನ್ನಲಾಗಿದೆ.

ಪಾಣಾಜೆ ಗ್ರಾಮದಲ್ಲಿ‌1.27 ಕೋಟಿ ರೂ ಕಾಮಗಾರಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ

Posted by Vidyamaana on 2023-12-24 17:57:25 |

Share: | | | | |


ಪಾಣಾಜೆ ಗ್ರಾಮದಲ್ಲಿ‌1.27 ಕೋಟಿ ರೂ ಕಾಮಗಾರಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ

ಪುತ್ತೂರು: ರಾಜ್ಯದ ಕಾಂಗ್ರೆಸ್ ಸರಕಾರದ 5 ಗ್ಯಾರಂಟಿ ಯೋಜನೆಯಿಂದ ರಾಜ್ಯದ ಪ್ರತೀ ಮನೆಯೂ ಬೆಳಗಿದೆ, ಮನೆ ಬೆಳಗಿಸಿದ ಸರಕಾರ ಮನೆಗೆ ಹೋಗುವ ದಾರಿಗೂ ಕಾಂಕ್ರೀಟ್ ಸೌಲಭ್ಯಕ್ಕೆ‌ಅನುದಾನ ನೀಡಿ ಮನೆಯ ದಾರಿಯನ್ನೂ ಬೆಳಗಿಸುವ ಕಾರ್ಯ ಮಾಡುತ್ತಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಪಾಣಾಜೆ ಗ್ರಾಮದ ವಿವಿಧ ಕಡೆಗಳಲ್ಲಿ ರೂ 1.27 ಕೋಟಿ ರೂ ಅನುದಾನದಲ್ಲಿ ರಸ್ತೆ, ಅಂಗನವಾಡಿ ಹಾಗೂ ಶಾಲಾ ದುರಸ್ಥಿಗೆ ಅನುದಾನವನ್ನು ಒದಗಿಸಲಾಗಿದೆ. ಪಾಣಾಜೆ ಗ್ರಾಮದಲ್ಲಿ ಈ ಹಿಂದೆ ಅಭಿವೃದ್ದಿ ಕಾರ್ಯಗಳು ನಡೆದಿಲ್ಲ. ಗ್ರಾಮೀಣ ರಸ್ತೆಗಳು ಸಂಪೂರ್ಣ ಹದಗಡಟ್ಟಿತ್ತು ಇದನ್ನು ಮನಗಂಡು ಅತ್ಯಂತ ಗೆಚ್ಚು ಅನುದಾನವನ್ನು ನೀಡಲಾಗಿದೆ. ಅಗತ್ಯ ಇರುವ ಕಡೆಗಳಿಗೆ ಹೆಚ್ಚಿನ ಅನುದಾನವನ್ನು ನೀಡಲಾಗಿದೆ ಎಂದು ಹೇಳಿದರು.


ನಾನು ರಾಜಕೀಯ ಮಾಡುವುದಿಲ್ಲ:

ನಾನು ಅಭಿವೃದ್ದಿಯಲ್ಲಿ ಎಂದೂ ರಾಜಕೀಯಮಾಡುವುದಿಲ್ಲ, ಗ್ರಾಮದ ಎಲ್ಲಾ ವಾರ್ಡುಗಳಿಗೂ ಸಮಾನ ರೀತಿಯಲ್ಲಿ ಅನುದಾನ ನೀಡುತ್ತಿದ್ದೇನೆ. ಸರಕಾರದ ಗ್ಯಾರಂಟಿ ಯೋಜನೆಯ ಕಾರಣಕ್ಕೆ ಕಾಮಗಾರಿಗೆ ಅನುದಾನ ಸರಕಾರ ಕೊಡುವುದಿಲ್ಲ ಎಂದು ಅಪಪ್ರಚಾರ ಮಾಡಿದ್ದ ಬಿಜೆಪಿಗರು ಈಗ ಏನು ಹೇಳುತ್ತಿದ್ದಾರೆ ಎಂಬುದನ್ನು ತಿಳಿಸಲಿ. ಗ್ರಾಮಕ್ಕೆ ಒಂದು ಕೋಟಿಗೂ‌ಮಿಕ್ಕಿ ಅನುದಾನ ನೀಡಿದ್ದೇನೆ ,ಇನ್ನೂ ನೀಡುತ್ತೇನೆ ಎಂದು ಶಾಸಕರು ಹೇಳಿದರು.



ಗ್ರಾಪಂ ಅಧ್ಯಕ್ಷೆ ಮೈಮೂನತುಲ್ ಮೆಹ್ರಾ,ಪಾಣಾಜೆ ರಣಮಂಗಳ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಕೃಷ್ಣ ಬೊಳಿಲ್ಲಾಯ ಕಡಮಾಜೆ,ಉಪಾಧ್ಯಕ್ಷರು ಜಯಶ್ರೀ ,ಗ್ರಾಪಂ ಸದಸ್ಯ ನಾರಾಯಣ ನಾಯ್ಕ ಅಪಿನಿಮೂಲೆ, ಕೃಷ್ಣಪ್ಪ ಪೂಜಾರಿ ಬೊಳ್ಳಿಂಬಲ, ವಿಮಲ ಮಾಲಿಂಗ ನಾಯ್ಕ, ವಲಯಾಧ್ಯಕ್ಷ ಉಮ್ಮರ್ ಜನಪ್ರಿಯ, ಬಾಬು ರೈ ಕೋಟೆ, ಬಿಜೆಪಿ ಶಕ್ತಿಕೇಂದ್ರದ ಸದಾಶಿವ ರೈ ಸೂರಂಬೈಲು, ಲಕ್ಣ್ಮೀ ನಾರಾಯಣ ರೈ ಕೆದಂಬಾಡಿ, ಜಗನ್ಮೋಹನ್ ರೈ,ಅಬೂಬಕ್ಕರ್ ಆರ್ಲಪದವು, ವಿಶ್ವನಾಥ ರೈ, ಅದ್ರು ಆರ್ಲಪದವು, ಖಾಲಿದ್ ಬೊಳ್ಳಿಂಬಲ, ಅಲಿಕುಂಞಿ ಆರ್ಲಪದವು, ಎ ಕೆ ಆರ್ಲಪದವು, ಸೀತಾ ಉದಯಶಂಕರ ಭಟ್,ಕುಂಞಿ ಮಣಿಯಾಣಿ, ಉಪೇಂದ್ರ ಬಲ್ಯಾಯ, ನಾರಾಯಣ ನಾಯ್ಕ ಹಾರಿಸ್ ಆರ್ಲಪದವು,ಅನಂತ ರಾಮ,ಮಹಾಲಿಂಗ ಮಣಿಯಾಣಿ,ರತ್ನಾವತಿ, ತಮ್ಮಣ್ಣ ನಾಯ್ಕ,ನಾರಾಯಣ ಪೂಜಾರಿ ನಡುಕಟ್ಟ,ಮತ್ತಿತರರು ಉಪಸ್ಥಿತರಿದ್ದರು. ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಪ್ರಸಾದ್ ಪಾಣಾಜೆ ಸ್ವಾಗತಿಸಿ ವಂದಿಸಿದರು

ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಜೊತೆಯಲ್ಲಿದ್ದ ಭಿನ್ನ ಕೋಮಿನ ಯುವಕ, ಯುವತಿಗೆ ತರಾಟೆ

Posted by Vidyamaana on 2023-12-23 13:24:19 |

Share: | | | | |


ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ  ಜೊತೆಯಲ್ಲಿದ್ದ ಭಿನ್ನ ಕೋಮಿನ ಯುವಕ, ಯುವತಿಗೆ ತರಾಟೆ

ಮಂಗಳೂರು: ಜೊತೆಯಲ್ಲಿ ಇದ್ದ ಬೇರೆ ಬೇರೆ ಕೋಮಿನ ಯುವಕ ಮತ್ತು ಯುವತಿ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.


ಮಂಗಳೂರು ನಗರದ ಮಿಲಾಗ್ರಿಸ್ ಬಳಿ ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ಇದ್ದಿದ್ದನ್ನು ಗಮನಿಸಿ ಯುವಕನನ್ನ ಹಿಂದೂ ಸಂಘಟನೆಯ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ.


ಇಂದು ಸಂಜೆ ವೇಳೆಗೆ ಘಟನೆ ನಡೆದಿದ್ದು ಹಲ್ಲೆಗೆ ಯತ್ನ ಕೂಡಾ ನಡೆದಿದೆ ಎನ್ನಲಾಗಿದೆ. ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.


ಹಲ್ಲೆಗೆ ಯತ್ನಿಸಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಥಳದಿಂದ ಪರಾರಿಯಾಗಿದ್ದು, ಬಂದರು ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಶಾಸಕರ ಇಂದಿನ ಕಾರ್ಯಕ್ರಮ ಆ 7

Posted by Vidyamaana on 2023-08-06 23:16:09 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಆ 7

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಆಗಸ್ಟ್ 7 ರಂದು

ಮಧ್ಯಾಹ್ನ 2.30ಪೆರುವಾಯಿಯಲ್ಲಿ ಕಾರ್ಯಕರ್ತರ ಸಭೆ


ಸಂಜೆ 4 ಗಂಟೆಗೆ ಕೊಡಿಪ್ಪಾಡಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ

ಅಧಿಕಾರ ಖಚಿತವೆಂದು ನಂಬಿ 22 ಲ್ಯಾಂಡ್‌ ಕ್ರೂಸರ್ ಖರೀದಿಸಿದ್ದ ಕೆಸಿಆರ್: ರೇವಂತ್

Posted by Vidyamaana on 2023-12-28 12:07:33 |

Share: | | | | |


ಅಧಿಕಾರ ಖಚಿತವೆಂದು ನಂಬಿ 22 ಲ್ಯಾಂಡ್‌ ಕ್ರೂಸರ್ ಖರೀದಿಸಿದ್ದ ಕೆಸಿಆರ್: ರೇವಂತ್

ತೆಲಂಗಾಣ:ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಸರ್ಕಾರ ಸುಮಾರು ₹66 ಕೋಟಿ ಖರ್ಚು ಮಾಡಿ 22 ಟೊಯೊಟಾ ಲ್ಯಾಂಡ್ ಕ್ರೂಸರ್‌ ಕಾರುಗಳನ್ನು ಖರೀದಿಸಿತ್ತು ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಆರೋಪಿಸಿದ್ದಾರೆ.ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇವಂತ್‌, ಹಿಂದಿನ ಸರ್ಕಾರದ ದುಂದು ವೆಚ್ಚದಿಂದ ಜನರು ಸಮಸ್ಯೆ ಎದುರಿಸಬೇಕಾಯಿತು ಎಂದರು.


ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ನನಗಾಗಿ ಹೊಸ ವಾಹನಗಳನ್ನು ಖರೀದಿಸದಂತೆ ಅಧಿಕಾರಿಗಳಿಗೆ ತಿಳಿಸಿದ್ದೆ. ಹಳೆ ಕಾರುಗಳನ್ನೇ ರಿಪೇರಿ ಮಾಡಿ ಬಳಸುವಂತೆ ಸೂಚಿಸಿದ್ದೆ. ಈ ವೇಳೆ ಅಧಿಕಾರಿಗಳು ಹೊಸ ಕಾರುಗಳನ್ನು ಈಗಾಗಲೇ ಖರೀದಿಸಿರುವ ಬಗ್ಗೆ ನನಗೆ ಮಾಹಿತಿ ನೀಡಿದರು ಎಂದು ಹೇಳಿದ್ದಾರೆ.


ಹಿಂದಿನ ಸರ್ಕಾರ 22 ಲ್ಯಾಂಡ್ ಕ್ರೂಸರ್ ವಾಹನಗಳನ್ನು ಖರೀದಿಸಿತ್ತು. ಅವೆಲ್ಲವೂ ವಿಜಯವಾಡದಲ್ಲಿವೆ. ನೂತನ ಮುಖ್ಯಮಂತ್ರಿ(ಕೆಸಿಆರ್) ಪ್ರಮಾಣ ವಚನ ಸ್ವೀಕರಿಸಿದ ಮೇಲೆ ಅವುಗಳನ್ನು ತರಲು ಆಲೋಚಿಸಿದ್ದೆವು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು.ಇವುಗಳೆಲ್ಲವೂ ಬುಲೆಟ್ ಪ್ರೂಫ್‌ ಕಾರುಗಳಾಗಿದ್ದು, ಒಂದು ಕಾರಿನ ಬೆಲೆ ಸುಮಾರು ₹3 ಕೋಟಿ. ಈ ರೀತಿಯಲ್ಲಿ ಕೆಸಿಆರ್ ಸರ್ಕಾರ ರಾಜ್ಯದ ಸಂಪತ್ತನ್ನು ಕೊಳ್ಳೆ ಹೊಡೆಯಲು ಹೊರಟಿತ್ತು ಎಂದರು.

ಸುಳ್ಯದ ಖ್ಯಾತ ಉದ್ಯಮಿ ಸೊಸೆ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್; ಪತಿ ಅತ್ತೆ ಮಾವ ಸೇರಿ ಐವರ ಬಂಧನ

Posted by Vidyamaana on 2023-11-03 09:04:02 |

Share: | | | | |


ಸುಳ್ಯದ ಖ್ಯಾತ ಉದ್ಯಮಿ ಸೊಸೆ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್; ಪತಿ ಅತ್ತೆ ಮಾವ ಸೇರಿ ಐವರ ಬಂಧನ

ಸುಳ್ಯ :ಸುಳ್ಯದ ಖ್ಯಾತ ಉದ್ಯಮಿ ಕಾಪಿಲ ಗಿರಿಯಪ್ಪ ಗೌಡರ ಸೊಸೆ ಐಶ್ವರ್ಯಾ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತಿ ರಾಜೇಶ್, ಅತ್ತೆ ಸೀತಾ, ಮಾವ ಗಿರಿಯಪ್ಪ ಗೌಡ ಕಾಪಿಲ, ಮೈದುನ, ಮೈದುನನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.


ಕಳೆದ 5 ವರ್ಷಗಳ ಹಿಂದೆ ರಾಜೇಶ್ ಅವರನ್ನು ಐಶ್ವರ್ಯ ಮದುವೆಯಾಗಿದ್ದರು. ಐಶ್ವರ್ಯ ಯುಎಸ್ಎ ನಲ್ಲಿ ಎಂಬಿಎ ಮಾಡಿದ್ದರು. ಪತಿ ರಾಜೇಶ್, ಡೈರಿ ರಿಚ್ ಐಸ್ ಕ್ರೀಮ್ ಕಂಪನಿ ಮಾಲೀಕರಾಗಿದ್ದಾರೆ.ಇದೇ ಕಂಪನಿಯಲ್ಲಿ ಐಶ್ವರ್ಯ ತಂದೆ ಸುಬ್ರಮಣ್ಯ ಅವರ ತಂಗಿ ಗಂಡ ರವೀಂದ್ರ ಆಡಿಟರ್ ಆಗಿ ಕೆಲಸ ಮಾಡಿಕೊಂಡಿದ್ದರು. ಅವರೇ ಮುಂದೆ ನಿಂತು ರಾಜೇಶ್ ಹಾಗೂ ಐಶ್ವರ್ಯ ಮದುವೆ ಮಾಡಿಸಿದ್ದರು. ಆದರೆ ಆಸ್ತಿ ವಿಚಾರವಾಗಿ ರವೀಂದ್ರ ಮತ್ತು ಸುಬ್ರಮಣ್ಯ ಅವರ ಕುಟುಂಬದಲ್ಲಿ ಕಲಹ ಇದ್ದಿದ್ದರಿಂದ ಅದನ್ನು ಮಗಳ ಮೇಲೆ ತೀರಿಸಿಕೊಂಡಿದ್ದರು ಎನ್ನಲಾಗಿದೆ.


ರವೀಂದ್ರ ಕುಟುಂಬ ಐಶ್ಯರ್ಯ ಚಾರಿತ್ರ್ಯವಧೆ ಮಾಡಿ ಪತಿ ರಾಜೇಶ್ ಕುಟುಂಬಕ್ಕೆ ಇಲ್ಲಸಲ್ಲದ ಕಟ್ಟುಕಥೆ ಹೇಳುತ್ತಿತ್ತು. ಅಷ್ಟೇ ಅಲ್ಲದೇ ಐಶ್ವರ್ಯಳ ಪೋಟೋಗಳನ್ನ ಕಳುಹಿಸಿ ನಿಮ್ಮ ಸೊಸೆ ಸರಿಯಿಲ್ಲ ಎಂದು ಕೆಟ್ಟದಾಗಿ ಬಿಂಬಿಸಿದ್ದರು ಎಂದು ಆರೋಪಿಸಲಾಗಿದೆ. ಇದರಿಂದಾಗಿ ರಾಜೇಶ್ ಕುಟುಂಬದ ಸದಸ್ಯರು ಪ್ರತಿನಿತ್ಯ ಐಶ್ವರ್ಯಳಿಗೆ ಕಿರುಕುಳ ನೀಡುತ್ತಿದ್ದರಂತೆ.ಐಶ್ವರ್ಯ ಮಾವ ಗಿರಿಯಪ್ಪ, ಅತ್ತೆ ಸೀತಾ ಹಾಗೂ ಮೈದುನ ವಿಜಯ್ ಹಾಗೂ ಆತನ ಪತ್ನಿ ತಸ್ಮಿನ್ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.ಅಲ್ಲದೇ ವರದಕ್ಷಿಣೆ ತರುವಂತೆಯೂ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಎಷ್ಟೇ ಕಿರುಕುಳ ನೀಡುತ್ತಿದ್ದರೂ ಗಂಡನಿಗಾಗಿ ಐಶ್ವರ್ಯ ಸುಮ್ಮನಿದ್ದರಂತೆ.ಎಲ್ಲಾ ಘಟನೆಗಳಿಂದ ಮನನೊಂದ ಐಶ್ವರ್ಯಾ, 20 ದಿನಗಳ ಹಿಂದೆ ತವರು ಸೇರಿದ್ದರು.


ಅ. 26 ರಂದು ಮನನೊಂದು ಡೆತ್ ನೋಟ್ ಬರೆದು ಸಾವಿಗೆ ಶರಣಾಗಿದ್ದರು. ಘಟನೆ ಸಂಬಂಧ ಐಶ್ವರ್ಯಾಳ ತಾಯಿ,ರಾಜೇಶ್ ಮತ್ತು ಅವರ ಕುಟುಂಬಸ್ಥರ ವಿರುದ್ಧ,ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರುನೀಡಿದ್ದರು. ಅಲ್ಲದೇ ರವೀಂದ್ರ, ಗೀತಾ, ಶಾಲಿನ, ಓಂಪ್ರಕಾಶ್ಎಂಬುವವರ ಮೇಲೂ ದೂರು ದಾಖಲಿಸಿದ್ದರು.ಅದರಂತೆ ಐವರನ್ನು ಬಂಧಿಸಲಾಗಿದೆ.

Recent News


Leave a Comment: