ಪುತ್ತೂರು: ಲಾರಿ ಟಯರ್ ಜೋಡಣೆ ವೇಳೆ ಅಪಘಾತ- ಟಯರ್‌ ಸಮೇತ ಎಸೆಯಲ್ಪಟ್ಟ ಕರಾಯ ಜನತಾ ಕಾಲೋನಿ ರಶೀದ್ ಗಂಭೀರ

ಸುದ್ದಿಗಳು News

Posted by vidyamaana on 2024-07-22 23:30:36 |

Share: | | | | |


ಪುತ್ತೂರು: ಲಾರಿ ಟಯರ್ ಜೋಡಣೆ ವೇಳೆ ಅಪಘಾತ- ಟಯರ್‌ ಸಮೇತ ಎಸೆಯಲ್ಪಟ್ಟ   ಕರಾಯ ಜನತಾ ಕಾಲೋನಿ ರಶೀದ್ ಗಂಭೀರ

ಪುತ್ತೂರು: ಲಾರಿಯೊಂದರ ಟಯರ್ ಜೋಡಣೆ ವೇಳೆ ಟಯ‌ರ್ ರಿಂಗ್ ಚಿಮ್ಮಿ ಟಯರ್ ಸಮೇತ ಎಸೆಯಲ್ಪಟ್ಟ ಕಾರ್ಮಿಕರೊಬ್ಬರು ಗಂಭೀರ ಗಾಯಗೊಂಡ ಘಟನೆ ಪುತ್ತೂರು ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ಜು.22ರಂದು ರಾತ್ರಿ ನಡೆದಿದೆ.

ಲಾರಿಯೊಂದು ಟಯರ್ ಪಂಚರ್ ಆಗಿ ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ನಿಲ್ಲಿಸಲಾಗಿತ್ತು. ಅದರ ಚಾಲಕ ಕರಾಯಕ್ಕೆ ಹೋಗಿ ಟಯರ್ ಪಂಚರ್ ಮಾಡಿಸಿಕೊಂಡು ಆಟೋ ರಿಕ್ಷಾದಲ್ಲಿ ಟಯ‌ರ್ ತಂದಿದ್ದರು. ಟಯರ್ ಜೋಡಣೆ ಮಾಡಲು ಕರಾಯದಿಂದಲೇ ಬಂದ ಟಯರ್ ಕಾರ್ಮಿಕ ಜೋಡಣೆ ವೇಳೆ ಟಯರ್‌ನ ರಿಂಗ್ ಹೊರಚಿಮ್ಮಿದ ರಭಸಕ್ಕೆ ಟಯರ್‌ ಸಮೇತ  ಕರಾಯ ಜನತಾ ಕಾಲೋನಿ ಕರೀಂ ರವರ ಮಗ ರಶೀದ್ ತುಸು ದೂರ ಎಸೆಯಲ್ಪಟ್ಟಿದ್ದಾರೆ. ತಕ್ಷಣ ತೀವ್ರ ಗಾಯಗೊಂಡ ಕಾರ್ಮಿಕನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

 Share: | | | | |


ಪುತ್ತೂರು : ನಳಿನ್ ಹಾಗೂ ಡಿವಿ ಕುರಿತು ಅವಹೇಳನಕಾರಿ ಬ್ಯಾನರ್ ಅಳವಡಿಸಿದ ಪ್ರಕರಣ. –ವಿಶ್ವನಾಥ್- ಮಾಧವ ಪೊಲೀಸ್ ವಶಕ್ಕೆ

Posted by Vidyamaana on 2023-05-15 13:48:30 |

Share: | | | | |


ಪುತ್ತೂರು : ನಳಿನ್ ಹಾಗೂ ಡಿವಿ ಕುರಿತು ಅವಹೇಳನಕಾರಿ ಬ್ಯಾನರ್ ಅಳವಡಿಸಿದ ಪ್ರಕರಣ. –ವಿಶ್ವನಾಥ್- ಮಾಧವ ಪೊಲೀಸ್ ವಶಕ್ಕೆ

ಪುತ್ತೂರು : ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡರ ವಿರುದ್ಧ ಅವಹೇಳನಕಾರಿ ಬರಹದೊಂದಿಗೆ  ಭಾವಚಿತ್ರ ಲಗತ್ತಿಸಿ ಬ್ಯಾನರ್‌ ಅಳವಡಿಸಿದ ಪುತ್ತೂರು ಬಸ್ಸು ನಿಲ್ದಾಣದ ಬಳಿ ಪ್ರಕರಣದಲ್ಲಿ ಇಬ್ಬರನ್ನು ಪುತ್ತೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನರಿಮೊಗರು ಗ್ರಾಮದ ಸಹೋದರರಾದ ವಿಶ್ವನಾಥ್‌ ಹಾಗೂ ಮಾಧವ ಪೊಲೀಸ್‌ ವಶದಲ್ಲಿರುವವರು. ಪುತ್ತೂರು ಕೆ.ಎಸ್ಆರ್.ಟಿಸಿ ಬಸ್ಸು ನಿಲ್ದಾಣದ ಎದುರು ಅರಣ್ಯ ಇಲಾಖೆಯ ಆವರಣ ಗೋಡೆ ಬಳಿ ಅವಹೇಳನಕಾರಿ ಬ್ಯಾನರ್ ಅಳವಡಿಸಲಾಗಿತ್ತು.

ಪುತ್ತೂರು ನಗರಸಭಾ ಆಯುಕ್ತ ಮಧು ಎಸ್‌ ಮನೋಹರ್‌  ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

 ಅದರಲ್ಲಿ   “ಬಿಜೆಪಿ ಹೀನಾಯವಾಗಿ ಸೋಲಲು ಕಾರಣಕರ್ತರಾದ ನಿಮಗೆ ಭಾವಪೂರ್ಣ ಶ್ರಧ್ಧಾಂಜಲಿ “ ಎಂದು ನಳಿನ್‌ ಕುಮಾರ್‌ ಕಟೀಲು ಹಾಗೂ  ಡಿ.ವಿ ಸದಾನಂದ ಗೌಡ ಎಂದು ಬರೆಯಲಾಗಿತ್ತು.  ಆ ಬ್ಯಾನರ್‌ ಗೆ  ಚಪ್ಪಲಿ ಹಾರವನ್ನು ಹಾಕಿರುವ ಬಗ್ಗೆಯೂ  ಸಾಮಾಜಿಕ ಜಾಲತಾಣದಲ್ಲಿ ದೂರು ನೀಡಲಾಗಿತ್ತು.

ಅರ್ಲಪದವು ಗುತ್ತಿಗೆದಾರ ವಿಜಯ್ ಕುಮಾರ್ ಆತ್ಮಹತ್ಯೆ

Posted by Vidyamaana on 2024-01-01 22:13:21 |

Share: | | | | |


ಅರ್ಲಪದವು ಗುತ್ತಿಗೆದಾರ ವಿಜಯ್ ಕುಮಾರ್ ಆತ್ಮಹತ್ಯೆ

ಪುತ್ತೂರು: ಪಾಣಾಜೆ ಗ್ರಾಮದ ಆರ್ಲಪದವು ನಿವಾಸಿ, ಮೇಸ್ತ್ರಿ ಕಂ ಗುತ್ತಿಗೆದಾರ ವಿಜಯ್ ಕುಮಾರ್ (38 ವ.) ಸೋಮವಾರ ಸಂಜೆ ಸ್ವಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭಾನುವಾರ ಪುತ್ತೂರಿನಲ್ಲಿ ನಡೆದ ಮರಾಟಿ ಸಂಘದ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ವಿಜಯ್ ಕುಮಾರ್ ಅವರಿಗೆ ವಿವಾಹ ನಡೆಸಲು ಮನೆಯವರು ಸಿದ್ಧತೆ ನಡೆಸಿಕೊಂಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತರು ತಂದೆ ಶಿವಪ್ಪ ನಾಯ್ಕ, ತಾಯಿ ಲಲಿತಾ, ಅಣ್ಣ, ಅಕ್ಕಾ, ಕುಟುಂಬಸ್ಥರನ್ನು ಅಗಲಿದ್ದಾರೆ.

ಅ.23: ಉರ್ವ ಕ್ರಿಕೆಟ್ ಮೈದಾನದಲ್ಲಿ ಪಿಲಿ ನಲಿಕೆ-2023

Posted by Vidyamaana on 2023-10-20 17:54:31 |

Share: | | | | |


ಅ.23: ಉರ್ವ ಕ್ರಿಕೆಟ್ ಮೈದಾನದಲ್ಲಿ ಪಿಲಿ ನಲಿಕೆ-2023

ಮಂಗಳೂರು: ಪಿಲಿನಲಿಕೆ ಪ್ರತಿಷ್ಠಾನ ಹಾಗೂ ನಮ್ಮ ಟಿ.ವಿ. ಸಂಸ್ಥೆಯ ಜಂಟಿ ಆಶ್ರಯದಲ್ಲಿ ಜಿಲ್ಲೆಯ ಆಯ್ದ 10 ಪ್ರಸಿದ್ಧ ಹುಲಿವೇಷ ತಂಡಗಳ ಮಧ್ಯೆ "ಪಿಲಿ ನಲಿಕೆ-2023" 8ನೇ ಆವೃತ್ತಿಯ ಸ್ಪರ್ಧೆ ಅ.23ರಂದು ಸೋಮವಾರ ಮಂಗಳೂರಿನ ಉರ್ವ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವುದು ಎಂದು ಪಿಲಿನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 


ತುಳುನಾಡಿನ ಅಪ್ರತಿಮ ಕಲಾ ಪರಂಪರೆಯಲ್ಲಿ ಒಂದಾದ ಹುಲಿವೇಷ ಇಂದು ಕುಣಿತ, ಬಣ್ಣಗಾರಿಕೆ, ನರ್ತನ, ಹಿನ್ನೆಲೆ ಸಂಗೀತ ಹೀಗೆ ಎಲ್ಲ ವಿಭಾಗದಲ್ಲೂ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಮೂಲ ಸೊಗಡಿನೊಂದಿಗೆ ಉಳಿಸಿ, ಪೋಷಿಸುವ ನಿಟ್ಟಿನಲ್ಲಿ ಪ್ರತೀ ವರ್ಷವೂ ಮಂಗಳೂರು ದಸರಾದ ಸಂದರ್ಭದಲ್ಲಿ ಪಿಲಿ ನಲಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು, ಈ ಬಾರಿ ಮಂಗಳೂರಿನ ಉರ್ವ ಕ್ರಿಕೆಟ್ ಮೈದಾನದಲ್ಲಿ 8ನೇ ಆವೃತ್ತಿ ನಡೆಯಲಿರುವುದು‌ ಎಂದರು. 




ಪ್ರತಿಷ್ಠಿತ 10 ತಂಡಗಳು ಭಾಗವಹಿಸಲಿರುವ ಪಿಲಿನಲಿಕೆ ಸ್ಪರ್ಧೆಯನ್ನು ಬೆಳಗ್ಗೆ 11 ಗಂಟೆಗೆ ಶ್ರೀಮದ್ ಆನೆಗುಂದಿ ಜಗದ್ಗುರು ಮಹಾ ಸಂಸ್ಥಾನ ಮಹಾ ಸರಸ್ವತಿ ಪೀಠ, ಕಟಪಾಡಿಯ ಜಗದ್ಗುರು, ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಉದ್ಘಾಟಿಸಲಿರುವರು. ದ.ಕ. ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹಾಗೂ ಹಾಗೂ ಮಂಗಳೂರಿನ ಪೊಲೀಸ್ ಅಧೀಕ್ಷಕ ಅನುಪಮ್ ಅಗರ್‌ವಾಲ್ ಉಪಸ್ಥಿತರಿರಲಿದ್ದಾರೆ.


ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಥಮ ರೂ.5 ಲಕ್ಷ ಹಾಗೂ ಟ್ರೋಫಿ, ದ್ವಿತೀಯ ರೂ. 3 ಲಕ್ಷ ಹಾಗೂ ಟ್ರೋಫಿ, ತೃತೀಯ ರೂ. 2 ಲಕ್ಷ, ಟ್ರೋಫಿ ನೀಡಲಾಗುವುದು. ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ಬಣ್ಣಗಾರಿಕೆ, ಕರಿ ಹುಲಿ, ಮರಿ ಹುಲಿ, ತಾಸೆ, ಮುಡಿ ಹಾರಿಸುವುದು, ನರ್ತನ ವಿಜೇತರಿಗೆ ತಲಾ ರೂ. 50 ಸಾವಿರ ನಗದು ಪುರಸ್ಕಾರ ನೀಡಲಾಗುವುದು. ಭಾಗವಹಿಸುವ ಎಲ್ಲಾ ತಂಡಗಳಿಗೆ ತಲಾ 50 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡಲಾಗುವುದು. ಜಿಲ್ಲೆಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಪರ್ಧಾ ಕಾರ್ಯಕ್ರಮವೊಂದಕ್ಕೆ ಜರ್ಮನ್ ಸ್ಟ್ರಕ್ಚರ್ ಅಳವಡಿಸಲಾಗುತ್ತಿದ್ದು, 10 ಸಾವಿರ ಜನರು ಕುಳಿತು ನೋಡುವ ಅವಕಾಶ ಕಲ್ಪಿಸಲಾಗಿದೆ. ಮಹಿಳೆಯರು ಹಾಗೂ ಮಕ್ಕಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆಯನ್ನು ಮಾಡಲಾಗುವುದು.


ಹಿಂದಿ, ಕನ್ನಡ, ತುಳು ಚಿತ್ರ ರಂಗದ ತಾರೆಯರು, ವಿಶೇಷವಾಗಿ ಸುನೀಲ್ ಶೆಟ್ಟಿ, ರಿಷಭ್ ಶೆಟ್ಟಿ, ರಾಜ್ ಶೆಟ್ಟಿ ಹಾಗೂ ಕ್ರಿಕೆಟ್ ಲೋಕದ ಸಾಧಕರಾದ ಹರ್ಭಜನ್ ಸಿಂಗ್, ಜಾಂಟಿ ರೋಡ್ಸ್, ಪಿಲಿನಲಿಕೆಗೆ ತಾರಾ ಮೆರುಗು ನೀಡಲಿದ್ದಾರೆ. ರಾಜಕೀಯ ನಾಯಕರು ಸೇರಿದಂತೆ ಹಲವು ಕ್ಷೇತ್ರದ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವರು ಎಂದು ಮಿಥುನ್ ರೈ ಮಾಹಿತಿ ನೀಡಿದರು.


ಪತ್ರಿಕಾಗೋಷ್ಠಿಯಲ್ಲಿ ನಮ್ಮ ಟಿವಿಯ ಡಾ.ಶಿವಚರಣ್ ಶೆಟ್ಟಿ, ಅವಿನಾಶ್, ವಿಕಾಸ್, ನವೀನ್ ಶೆಟ್ಟಿ ಎಡ್ಮೆಮಾರ್ ಉಪಸ್ಥಿತರಿದ್ದರು.

ನಾಪತ್ತೆಯಾಗಿದ್ದ ಕಾರ್ಕಳ ಹೆಡ್ ಕಾನ್ಸ್ ಟೇಬಲ್ ಶವ ಬಾವಿಯಲ್ಲಿ ಪತ್ತೆ ; ಕಾರ್ಕಳ ಪೊಲೀಸರ ತನಿಖೆ

Posted by Vidyamaana on 2023-10-23 15:51:51 |

Share: | | | | |


ನಾಪತ್ತೆಯಾಗಿದ್ದ ಕಾರ್ಕಳ ಹೆಡ್ ಕಾನ್ಸ್ ಟೇಬಲ್ ಶವ ಬಾವಿಯಲ್ಲಿ ಪತ್ತೆ ; ಕಾರ್ಕಳ ಪೊಲೀಸರ ತನಿಖೆ

ಉಡುಪಿ, ಅ.23: ಮನೆಗೆ ಬರುತ್ತೇನೆಂದು ಹೇಳಿ ನಾಪತ್ತೆಯಾಗಿದ್ದ ಕಾರ್ಕಳ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 


ಕಾರ್ಕಳ ನಗರ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಶೃತಿನ್ ಶೆಟ್ಟಿ (35) ಮೃತದೇಹ ಕಾರ್ಕಳ ಪುಲ್ಕೇರಿ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ. ಅಸಹಜ ಸಾವೆಂದು ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಅಕ್ಟೋಬರ್ 19ರಂದು ಶೃತಿನ್ ಶೆಟ್ಟಿ ಕಾರ್ಕಳ ಠಾಣೆಗೆ ಕರ್ತವ್ಯಕ್ಕೆಂದು ತೆರಳಿ, ಅಲ್ಲಿ ರಜೆ ಹಾಕಿ ನಾಪತ್ತೆಯಾಗಿದ್ದರು.


ಪಡುಬಿದ್ರೆಯ ಕಾಪು ಜನಾರ್ದನ ದೇವಸ್ಥಾನ ಬಳಿಯ ಅಂಗಡಿಮನೆ ನಿವಾಸಿ ಶೃತಿನ್ ಶೆಟ್ಟಿ (35) ಎರಡು ತಿ‌ಂಗಳ ಹಿಂದೆಯಷ್ಟೆ ಹೆಡ್ ಕಾನ್ಸ್ ಟೇಬಲ್ ಆಗಿ ಭಡ್ತಿ ಪಡೆದು ಕಾರ್ಕಳ ನಗರ ಠಾಣೆಗೆ ಬಂದಿದ್ದರು.  19 ರಂದು ಸಂಜೆ 7.30ಕ್ಕೆ ಪತ್ನಿಗೆ ಫೋನ್ ಮಾಡಿ, ಮನೆಗೆ ಬರುತ್ತಿದ್ದೇನೆ ಎಂದು ಶೃತಿನ್ ಹೇಳಿದ್ದರು. ಮನೆಗೂ ಬಾರದೇ ಇದ್ದುದರಿಂದ ಮತ್ತು ಪತಿಯ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಪತ್ನಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಬಾವಿಯಲ್ಲಿ ಶವ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಸಾವಿನ ಹಿಂದೆ ಬೇರೆ ಕಾರಣ ಇದೆಯೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.‌

ಮಂಗಳೂರು: SDPI ರಾಷ್ಟ್ರೀಯ ಅಧ್ಯಕ್ಷರಿಗೆ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ

Posted by Vidyamaana on 2023-05-05 08:31:45 |

Share: | | | | |


ಮಂಗಳೂರು:  SDPI ರಾಷ್ಟ್ರೀಯ ಅಧ್ಯಕ್ಷರಿಗೆ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ SDPI ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಕೈಗೊಳ್ಳಲು  ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ ಫೈಝಿಯವರು ಇಂದು ಮಂಗಳೂರಿಗೆ ಆಗಮಿಸಿದರು.

ಬಜಪೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಜಿಲ್ಲಾ ಸಮಿತಿಯ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಿ ಬಜಪೆ ಪಟ್ಟಣದವರೆಗೆ ವಾಹನ ಜಾಥಾ ಮೂಲಕ ಕರೆ ತರಲಾಯಿತು.ಈ ಸಂದರ್ಭದಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೊ, ರಾಜ್ಯ ಕಾರ್ಯದರ್ಶಿ ಆನಂದ ಮಿತ್ತಬೈಲ್, ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು, ರಾಜ್ಯ ಸಮಿತಿ ಸದಸ್ಯರಾದ ಅಥಾವುಲ್ಲ ಜೋಕಟ್ಟೆ, ರಾಜ್ಯ ಚುನಾವಣಾ ಸಹ ಉಸ್ತುವಾರಿ ನವಾಝ್ ಉಳ್ಳಾಲ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ  ಜಮಾಲ್ ಜೋಕಟ್ಟೆ, ಅಶ್ರಫ್ ಅಡ್ಡೂರು, ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್, ಮೂಡಬಿದ್ರೆ ಕ್ಷೇತ್ರಾಧ್ಯಕ್ಷರಾದ ಆಸಿಫ್ ಕೋಟೆಬಾಗಿಲು, ಕಾರ್ಯದರ್ಶಿ ನಿಸಾರ್ ಮರವೂರು ಹಾಗೂ ಇತರ ನಾಯಕರು ಉಪಸ್ಥಿತರಿದ್ದರು

ಇಂದು ಮತ್ತು ನಾಳೆ ಉಳ್ವಾಲ, ಬಂಟ್ವಾಳ, ಮೂಡಬಿದ್ರೆ ಕ್ಷೇತ್ರಗಳಲ್ಲಿ ನಡೆಯುವ ವಿವಿಧ ಚುನಾವಣಾ ಪ್ರಚಾರ ಸಭೆಗಳಲ್ಲಿ ಎಂ.ಕೆ ಫೈಝಿಯವರು ಭಾಗವಹಿಸಲಿದ್ದಾರೆ.

ಉಪ್ಪಿನಂಗಡಿ ಅಪ್ರಾಪ್ತ ಬಾಲಕರು ಚಲಾಯಿಸುತ್ತಿದ್ದ ಡಿಯೋ ಅಪಘಾತ ಕುಪ್ಪೆಟ್ಟಿ ಅಬೂಬಕ್ಕರ್ ಸಿದ್ದೀಕ್ ಮೃತ್ಯು ಸವಾರ ಗಂಭೀರ ನಕಲಿ ನಂಬರ್ ಪ್ಲೇಟ್ ಪತ್ತೆ.

Posted by Vidyamaana on 2023-02-10 03:26:59 |

Share: | | | | |


ಉಪ್ಪಿನಂಗಡಿ ಅಪ್ರಾಪ್ತ ಬಾಲಕರು ಚಲಾಯಿಸುತ್ತಿದ್ದ ಡಿಯೋ ಅಪಘಾತ ಕುಪ್ಪೆಟ್ಟಿ ಅಬೂಬಕ್ಕರ್ ಸಿದ್ದೀಕ್  ಮೃತ್ಯು ಸವಾರ ಗಂಭೀರ ನಕಲಿ ನಂಬರ್ ಪ್ಲೇಟ್ ಪತ್ತೆ.

ಉಪ್ಪಿನಂಗಡಿ: ಇಲ್ಲಿನ ಸರಕಾರಿ ಶಾಲೆಯ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಚಲಾಯಿಸುತ್ತಿದ್ದ ಡಿಯೋ ಸ್ಕೂಟರ್ ಸ್ಕಿಡ್ ಆಗಿ ಬಿದ್ದ ದುರ್ಘಟನೆ ಕಲ್ಲೇರಿ ಸಮೀಪದ ಶಿವಗಿರಿ ಎಂಬಲ್ಲಿ ಫೆ. 1 ರಂದು ಸಂಭವಿಸಿದ್ದು, ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಓರ್ವ ವಿದ್ಯಾರ್ಥಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.ತಲೆಗೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಪ್ಪೆಟ್ಟಿಯ ಅಬೂಬಕ್ಕರ್ ಸಿದ್ದೀಕ್ ಎಂಬಾತ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.ಫೆಬ್ರವರಿ 1 ರಂದು ಕಲ್ಲೇರಿ ಸಮೀಪದ ಶಿವಗಿರಿ ಎಂಬಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯ ದಿಂದ ಉಪ್ಪಿನಂಗಡಿಯಿಂದ ಕುಪ್ಪೆಟ್ಟಿ ಕಡೆಗೆ ಅತೀ ವೇಗದಿಂದ ಚಲಾಯಿಸಿಕೊಂಡು ಬಂದ ಡಿಯೋ ಸ್ಕೂಟರ್ ಸವಾರನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಉಪ್ಪಿನಂಗಡಿಯಿಂದ ಕಲ್ಲೇಗಿ ಕಡೆಗೆ ಚಲಿಸುತ್ತಿದ್ದ ಜೀತೋ ಟೆಂಪೊಗೆ ಹಿಂಬದಿಯಿಂದ ಡಿಕಿ ಹೊಡೆದಿದೆ ಎನಲಾಗಿದೆ. ಆದರೆ ಸ್ಕೂಟರ್ ಜೀತೋ ಟೆಂಪೊಗೆ ಡಿಕ್ಕಿ ಹೊಡೆದಿರುವ ಬಗ್ಗೆ ಜೀತೋ ಟೆಂಪೋದಲ್ಲಿ ಯಾವುದೇ ಕುರುಹುಗಳು ಪತ್ತೆ ಆಗಿಲ್ಲ ಎನ್ನಲಾಗಿದೆ.ಅಪ್ರಾಪ್ತ ಸ್ಕೂಟರ್ ಸವಾರರು ಹೆಲ್ಮಟ್ ಧರಿಸದ ಕಾರಣ ಸ್ಕೂಟರ್ ಸ್ಕಿಡ್ ಆಗಿ ಬಿದ್ದ ಸಂದರ್ಭದಲ್ಲಿ ಸವಾರ ಮತ್ತು ಸಹ ಸವಾರನ ತಲೆಗೆ ಗಂಭೀರವಾದ ಗಾಯಗಳಾಗಿದ್ದು, ಸಹ ಸವಾರ ಕುಪ್ಪೆಟ್ಟಿಯ ಅಬೂಬಕ್ಕರ್ ಸಿದ್ದೀಕ್ ಎಂಬಾತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಅಪ್ರಾಪ್ತ ಬಾಲಕರು ಚಲಾಯಿಸುತ್ತಿದ್ದ KA 53 ER 6958 ಡಿಯೋ ಸ್ಕೂಟರಿನ ನಂಬರ್ ಪ್ಲೇಟ್ ನಕಲಿಯಾಗಿದ್ದು, ಈ ಬಗ್ಗೆ ಬಂಟ್ವಾಳದ ಸಾರಿಗೆ ಅಧಿಕಾರಿಗಳು ಪೊಲೀಸರಿಗೆ ದೂರನ್ನು ನೀಡಿದ್ದು, ಅಪ್ರಾಪ್ತ ಬಾಲಕರು ಚಲಾಯಿಸುತ್ತಿದ್ದಡಿಯೋ ಸ್ಕೂಟರಿನ ಅಸಲಿ ಮಾಲಕನ ಮೇಲೆ ಪ್ರಕರಣ ದಾಖಲಿಸಿದ್ದಾರೆ.

       ಅಜಾಗರೂಕತೆ ಮತ್ತು ನಿರ್ಲಕ್ಷ್ಯತನ, ಹೆಲ್ಮಟ್ ಧರಿಸದೆ, ಇನ್ಸುರೆನ್ಸ್ ಇಲ್ಲದೆ,ಡ್ರೈವಿಂಗ್ ಲೈಸನ್ಸ್ ಇಲ್ಲದ ಅಪ್ರಾಪ್ತ ಮಕ್ಕಳಿಂದ ಸ್ಕೂಟರ್ ಚಲಾವಣೆ ಎಂಬ ಕಾರಣದಿಂದ ಪುತ್ತೂರು ಸಂಚಾರಿ  ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



Leave a Comment: