ಶಿರೂರು ಭೂಕುಸಿತ ದುರಂತ : ಪತ್ತೆಯಾಯ್ತು ಎಂಟನೇ ಮೃತದೇಹ

ಸುದ್ದಿಗಳು News

Posted by vidyamaana on 2024-07-23 18:35:28 |

Share: | | | | |


ಶಿರೂರು ಭೂಕುಸಿತ ದುರಂತ : ಪತ್ತೆಯಾಯ್ತು ಎಂಟನೇ ಮೃತದೇಹ

ಕಾರವಾರ: ಶಿರೂರು ಭೂಕುಸಿತ ಸ್ಥಳದಲ್ಲಿ 8 ದಿವಸದ ಬಳಿಕ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಈ ಮೂಲಕ 8ನೇ ಮೃತದೇಹ ಸಿಕ್ಕಂತಾಗಿದೆ. ಈ ನಡುವೆ ಕೇರಳದ ಲಾರಿ ಚಾಲಕ ಅರ್ಜುನ್‌ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. 

ಮಂಗಳವಾರ ಬೆಳಗ್ಗೆ ಗುಡ್ಡ ಕುಸಿತದಿಂದ ನಾಪತ್ತೆಯಾಗಿದ್ದ ಮಹಿಳೆ ಸಣ್ಣಿ ಹನ್ಮಂತ ಗೌಡ (57) ಸಾವನ್ನಪ್ಪಿದ್ದು, ಮೃತದೇಹ ದೊರೆತಿದೆ. ಗಂಗಾವಳಿ ನದಿಯ ಗಂಗೆಕೊಳ್ಳ ಸಮೀಪ ಅವರ ಶವ ಪತ್ತೆಯಾಗಿದೆ. ಶಿರೂರು ಗುಡ್ಡ ಕುಸಿತದಿಂದಾಗಿ ಉಳುವರೆ ಗ್ರಾಮದಲ್ಲಿ ಮನೆ ಕುಸಿತವಾಗಿ ಸಣ್ಣಿ ಹನ್ಮಂತ ಗೌಡ ಅವರು ಕಣ್ಮರೆಯಾಗಿದ್ದರು. ಇನ್ನೂ ಅರ್ಜುನ್‌ ಸಹಿತ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸ್ಥಳದಲ್ಲಿ NDRF, SDRF, ಮಿಲಿಟರಿ ಕಾರ್ಯಪಡೆಯಿಂದ ಶೋಧ ಕಾರ್ಯ ಮುಂದುವರೆದಿದೆ. 

ಕೇರಳ ಮಾಧ್ಯಮಗಳ ಕವರೇಜ್‌ 

ಸದ್ಯ ಕರ್ನಾಟಕದ ಉತ್ತರ ಕನ್ನಡದಲ್ಲಾದ ಭೂಕುಸಿತ ವರದಿಯನ್ನ ಕನ್ನಡಿಗರು ಕೂಡಾ ಮಲಯಾಳಂ ಸುದ್ದಿವಾಹಿನಿಗಳಲ್ಲಿ ವೀಕ್ಷಿಸುವಂತಾಗಿದೆ. ಕೇರಳದ ಪ್ರಮುಖ ರಾಜ್ಯ ಮಟ್ಟದ ವಾಹಿನಿಗಳು ಕಳೆದ 4 ದಿನಗಳಿಂದಲೂ ಉತ್ತರ ಕನ್ನಡದಲ್ಲಿ ಬೀಡುಬಿಟ್ಟಿವೆ. ಅರ್ಜುನ್‌ ಶೋಧ ಕಾರ್ಯಾಚರಣೆಗೆ ಹೆಚ್ಚಿನ ಒತ್ತಡ ಏರುತ್ತಿದೆ. ಜೊತೆಗೆ ಕೇರಳದ ನಾಗರಿಕ ಸುರಕ್ಷತಾ ತಂಡಗಳು ಕೂಡಾ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಕೇರಳದಿಂದ ಶಿರೂರಿಗೆ ತಂಡವಾಗಿ ಆಗಮಿಸಿವೆ

 Share: | | | | |


ಕಡಬ: ಬೈಕ್ ಸ್ಕಿಡ್ -ಸವಾರ ಮಂಜು ಸ್ಥಳದಲ್ಲೇ ಮೃತ್ಯು

Posted by Vidyamaana on 2023-04-25 23:23:55 |

Share: | | | | |


ಕಡಬ:  ಬೈಕ್  ಸ್ಕಿಡ್ -ಸವಾರ ಮಂಜು ಸ್ಥಳದಲ್ಲೇ ಮೃತ್ಯು

ಕಡಬ : ಬೈಕೊಂದು ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಡಬ – ಪಂಜ ರಸ್ತೆಯ ಕಲ್ಲಂತಡ್ಕ ಎಂಬಲ್ಲಿ - ಮಂಗಳವಾರ ರಾತ್ರಿ ನಡೆದಿದೆ.ಮೃತ ಸವಾರನನ್ನು ದಾವಣಗೆರೆ ಮೂಲದ ಪ್ರಸ್ತುತ ಕೋಡಿಂಬಾಳದಲ್ಲಿ ವಾಸವಿರುವ ಮಂಜು ಎಂದು ಗುರುತಿಸಲಾಗಿದೆ. ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದ ಮಂಜು ಬೈಕಿನಲ್ಲಿ ಕೋಡಿಂಬಾಳ ಕಡೆಗೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಬೈಕ್ ರಸ್ತೆಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಮಂಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ದರ್ಬೆಯಲ್ಲಿ ಫಿಸಿಯೋಗ ಸೆಂಟರ್ ಮಾ‌ರ್ಚ್ 15ರಂದು ಶುಭಾರಂಭ

Posted by Vidyamaana on 2024-03-14 17:13:35 |

Share: | | | | |


ದರ್ಬೆಯಲ್ಲಿ ಫಿಸಿಯೋಗ ಸೆಂಟರ್ ಮಾ‌ರ್ಚ್ 15ರಂದು ಶುಭಾರಂಭ

ಪುತ್ತೂರು: ಇಲ್ಲಿನ ದರ್ಬೆ ಹಿತಾ ಆಸ್ಪತ್ರೆ ಮುಂಭಾಗದಲ್ಲಿ ಆಯು ಫಿಸಿಯೋಗ ಸೆಂಟರ್ ಮಾ. 15ರಂದು ಶುಭಾರಂಭಗೊಳ್ಳಲಿದೆ.

ಫಿಸಿಯೋ ಥೆರಪಿ, ಯೋಗ ಥೆರಪಿ, ಪಂಚಕರ್ಮ ಥೆರಪಿ, ಲೀಚ್ ಥೆರಪಿ, ಅಕ್ಯುಪಂಕ್ಚರ್ ಥೆರಪಿ, ಕಪ್ಪಿಂಗ್ / ಹಿಜಾಮ ಥೆರಪಿ, ಟ್ರಾಕ್ಷನ್ ಮಸಾಜ್, ವ್ಯಾಕ್ಸ್ ಥೆರಪಿ, ಕಾಸ್ಮೆಟಿಕ್ ಥೆರಪಿ, ಸೈಕ್ಯಾಟ್ರಿಕ್ ಕೌನ್ಸೆಲಿಂಗ್ ಮೊದಲಾದ ಸೌಲಭ್ಯಗಳನ್ನು ಸಂಸ್ಥೆ ನೀಡಲಿದೆ.

ಉತ್ತಮ ಸೇವೆಗಾಗಿ ಸಮರ್ಥ ಫ್ಯಾಕಲ್ಟಿಯನ್ನು ಸಂಸ್ಥೆ ಹೊಂದಿದೆ. ಡಾ. ಕ್ಷಮಾ ಕಶ್ಯಪ್, ಡಾ. ಶಿಲ್ಪ ಭಟ್ ಜಿ.ಎಸ್., ಡಾ. ಸುಶ್ಮಿತಾ ಎಂ.ಎಂ., ನಿತೇಶ್ ಕುಮಾರ್, ಎನ್. ಪೂಜಾ, ತುಳಸಿ ಎನ್., ಸಾನಿಯ ಯು. ಫ್ಯಾಕಲ್ಟಿಯಲ್ಲಿದ್ದಾರೆ.


ಪ್ರತಿದಿನ ಬೆಳಿಗ್ಗೆ 5.45ರಿಂದ 6.45ರವರೆಗೆ ಹಾಗೂ ಸಂಜೆ 5.45 6.45ರವರೆಗೆ ಯೋಗ ಕ್ಲಾಸ್ ಕೂಡ ನಡೆಯಲಿದೆ. ಇದರೊಂದಿಗೆ ಫಿಸಿಯೋ ಥೆರಪಿ ಹೋಮ್ ವಿಸಿಟ್ ಸೌಲಭ್ಯವೂ ಲಭ್ಯ ಎಂದು ಡಾ. ಪ್ರದೀಪ್ ಕುಮಾರ್ ಮಾಧ್ಯಮ ಪ್ರಕಟಣೆ ತಿಳಿಸಿದ್ದಾರೆ 

ಪೌರತ್ವ ಕಾಯಿದೆ ಜಾರಿ ವಿರೋಧಿಸಿ ಎಸ್‌ ಡಿಪಿಐ ವತಿಯಿಂದ ಪುತ್ತೂರಿನಲ್ಲಿ ಪ್ರತಿಭಟನೆ

Posted by Vidyamaana on 2024-03-14 12:49:33 |

Share: | | | | |


ಪೌರತ್ವ ಕಾಯಿದೆ ಜಾರಿ ವಿರೋಧಿಸಿ ಎಸ್‌ ಡಿಪಿಐ ವತಿಯಿಂದ ಪುತ್ತೂರಿನಲ್ಲಿ ಪ್ರತಿಭಟನೆ

ಪುತ್ತೂರು: ಕೇಂದ್ರ ಸರಕಾರ ಅಸಾಂವಿಧಾನಿಕ CAA ಜಾರಿ ಮಾಡಿದರ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದೇಶದಾದ್ಯಂತ ಕರೆ ನೀಡಿದ್ದ ಪ್ರತಿಭಟನೆಯ ಭಾಗವಾಗಿ  ಎಸ್‌ ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಪುತ್ತೂರಿನ ದರ್ಬೆ ವೃತ್ತದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ  ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ರವರ ನೇತೃತ್ವದಲ್ಲಿ  ಬೃಹತ್ ಪ್ರತಿಭಟನೆ ನಡೆಯಿತು.

ಸಭೆಯಲ್ಲಿ ಪ್ರಾಸ್ತಾವಿಕವಾಗಿ ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಸಾಲ್ಮರ ಮಾತಾಡಿ  CAA ಕಾಯ್ದೆಯು ಈ ದೇಶದ ಜಾತ್ಯಾತೀತ ಪರಂಪರೆಗೆ ಮಾರಕ ಮತ್ತು ಇದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.


ದಿಕ್ಸೂಚಿ ಭಾಷಣ ಮಾಡಿದ ಪಕ್ಷದ ಜಿಲ್ಲಾ ಸಮಿತಿ ಸದಸ್ಯರೂ ಕ್ಷೇತ್ರ ಸಮಿತಿಯ ಉಸ್ತುವಾರಿಯೂ ಆಗಿರುವ ಅಬೂಬಕ್ಕರ್ ಸಿದ್ದೀಕ್ ಪುತ್ತೂರು ರವರು ಮಾತಾಡಿ ಈ ದೇಶವು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕಾದರೆ ಸಂವಿಧಾನದ ಆಶಯಗಳನ್ನು ಉಪಯೋಗಿಸಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷವು ಇಂದು ಅದೇ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ದೇಶವನ್ನು ಒಡೆಯುವ ಕಾರ್ಯ ಮಾಡುತ್ತಿದೆ.ಆದುದರಿಂದ ಈ ದೇಶದಿಂದಲೇ ಬಿಜೆಪಿ ಪಕ್ಷವನ್ನು ನಿರ್ನಾಮ ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.


ಕಾರ್ಯಕ್ರಮದ ಸಮಾರೋಪ ಭಾಷಣವನ್ನು ಕ್ಷೇತ್ರ ಸಮಿತಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ಮಾತಾಡಿ  ಈ ಜನವಿರೋಧಿ ಕಾನೂನನ್ನು ಹಿಂಪಡೆಯದಿದ್ದರೆ SDPI ಪಕ್ಷವು ಯಾವುದೇ ರಾಜಿ ಇಲ್ಲದೆ ದೇಶಾದ್ಯಂತ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.


ಪ್ರತಿಭಟನಾ ಸಭೆಯಲ್ಲಿ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಉಸ್ಮಾನ್ ಏ.ಕೆ,ಜೊತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕೊಡಿಪ್ಪಾಡಿ, ಕೋಶಾಧಿಕಾರಿ ವಿಶ್ವನಾಥ ಪುಂಚತ್ತಾರು, ಕ್ಷೇತ್ರ ಸಮಿತಿ ಸದಸ್ಯರಾದ ಡಿ.ಬಿ. ಮುಸ್ತಫಾ ವಿಟ್ಲ, ಅಶ್ರಫ್ ಬಾವು ಪಡೀಲ್, ಹಾಗೂ ಬ್ಲಾಕ್ ಮಟ್ಟದ ಮತ್ತು ಪಟ್ಟಣ ಸಮಿತಿ ಮತ್ತು ನಗರ ಸಮಿತಿಯ ನಾಯಕರು ಮತ್ತು ವ್ಯಾಪ್ತಿಯ ಹಲವಾರು ಕಾರ್ಯಕರ್ತರು,ಬೆಂಬಲಿಗರು ಭಾಗವಹಿಸಿದ್ದರು.


 ಪುತ್ತೂರು ಕ್ಷೇತ್ರ ಪಕ್ಷ ಸಂಘಟನಾ ಕಾರ್ಯದರ್ಶಿ ರಿಯಾಝ್ ಬಳಕ್ಕ ರವರು ಕಾರ್ಯಕ್ರಮ ನಿರೂಪಿಸಿದರು

ಮಂಗಳೂರು: ಮೋತಿ ಮಹಲ್ ಹೋಟೆಲ್ ಈಜು ಕೊಳದಲ್ಲಿ ಬ್ಯಾಂಕ್‌ ಅಧಿಕಾರಿ ಮೃತದೇಹ ಪತ್ತೆ

Posted by Vidyamaana on 2023-09-11 10:28:32 |

Share: | | | | |


ಮಂಗಳೂರು: ಮೋತಿ ಮಹಲ್ ಹೋಟೆಲ್ ಈಜು ಕೊಳದಲ್ಲಿ ಬ್ಯಾಂಕ್‌ ಅಧಿಕಾರಿ ಮೃತದೇಹ ಪತ್ತೆ

ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಹೊಟೇಲ್ ನ ಈಜು ಕೊಳದಲ್ಲಿ ಮೃತ ದೇಹ ಪತ್ತೆಯಾಗಿದೆ.


ಮಂಗಳೂರಿನ ಪ್ರತಿಷ್ಠಿತ ಮೋತಿ ಮಹಲ್ ಹೊಟೇಲ್ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ‌ ಬ್ಯಾಂಕ್‌ ಅಧಿಕಾರಿ ಸಾವಿಗೀಡಾಗಿದ್ದಾರೆ. ಮೃತ ವ್ಯಕ್ತಿ ಕೇರಳದ ತಿರುವನಂತಪುರಂ ನಿವಾಸಿ ಗೋಪು ಆರ್ ನಾಯರ್ ಎಂದು ತಿಳಿದುಬಂದಿದೆ.


ಯೂನಿಯನ್ ಬ್ಯಾಂಕ್ ಅಧಿಕಾರಿಯಾದ ಗೋಪು ಆರ್ ನಾಯರ್ ಅವರು ನಿನ್ನೆ ಭಾನುವಾರ ಮಂಗಳೂರಿಗೆ ಬಂದು ಮೋತಿ ಮಹಲ್ ಹೊಟೇಲ್ ನಲ್ಲಿ ಉಳಿದು ಕೊಂಡಿದ್ದರು. ಬ್ಯಾಂಕ್ ಅಧಿಕಾರಿ ನಿನ್ನೆ ಸಂಜೆ 4 ಗಂಟೆ ವೇಳೆ ಹೊಟೇಲ್ ರೂಮ್ ನಿಂದ ಹೊರ ಹೋಗಿದ್ದರು.


ಸ್ಥಳಕ್ಕೆ ಪಾಂಡೇಶ್ವರ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ನಿಮ್ಮ ಮೊಬೈಲ್ ಆನ್ ಇದ್ದರೂ ಬೇರೆಯವರಿಗೆ ಸ್ವಿಚ್ ಆಫ್ ಆಗಿದೆ ಎಂದು ತೋರಿಸಬೇಕಾ..? ಇಲ್ಲಿದೆ ಟ್ರಿಕ್ಸ್

Posted by Vidyamaana on 2024-08-17 22:19:24 |

Share: | | | | |


ನಿಮ್ಮ ಮೊಬೈಲ್  ಆನ್ ಇದ್ದರೂ ಬೇರೆಯವರಿಗೆ ಸ್ವಿಚ್ ಆಫ್ ಆಗಿದೆ ಎಂದು ತೋರಿಸಬೇಕಾ..? ಇಲ್ಲಿದೆ ಟ್ರಿಕ್ಸ್

ಯಾವುದೇ ಬ್ಯುಸಿ ಸಮಯದಲ್ಲಿ ನೀವು ಫೋನ್ ಕರೆಗಳಿಗೆ ಉತ್ತರಿಸಲು ಸಾಧ್ಯವಾಗುವುದಿಲ್ಲ. ಇದು ಬಹಳಷ್ಟು ಜನರಿಗೆ ಹೀಗೆ ಆಗುತ್ತದೆ. ನೀವು ಫೋನ್ ಸಂಪರ್ಕವನ್ನು ಕಡಿತಗೊಳಿಸಲು ಅಥವಾ ನಿಮ್ಮ ಕೆಲಸವನ್ನು ನಿಲ್ಲಿಸಲು ಸಾಧ್ಯವಾಗದ ಸಮಸ್ಯೆ ಅನೇಕ ಬಾರಿ ಉದ್ಭವಿಸುತ್ತದೆ.ಆದರೆ ಈಗ ನೀವು ಚಿಂತಿಸಬೇಕಾಗಿಲ್ಲ.

ನಿಮ್ಮ ಫೋನ್ ಆನ್ ಆಗಿದ್ದರೂ ಸಹ, ನಿಮ್ಮ ಫೋನ್ ಸ್ವಿಚ್ ಆಫ್ ಆಗಿದೆ ಎಂದು ನಿಮ್ಮ ಮುಂದೆ ಇರುವ ವ್ಯಕ್ತಿಗೆ ತೋರಿಸಬಹುದು.

ಈ ಟ್ರಿಕ್ಸ್ ಬಳಸಿ

ಇದಕ್ಕಾಗಿ, ಮೊದಲು ಕರೆಗಳ ವಿಭಾಗಕ್ಕೆ ಹೋಗಿ ಮತ್ತು ಪೂರಕ ಸೇವೆಗಳ ಮೇಲೆ ಕ್ಲಿಕ್ ಮಾಡಿ. ಈ ಆಯ್ಕೆಯು ವಿಭಿನ್ನ ಹೆಸರುಗಳೊಂದಿಗೆ ವಿಭಿನ್ನ ಫೋನ್ ಗಳಲ್ಲಿ ಲಭ್ಯವಿರಬಹುದು.ಇದರ ನಂತರ, CALL WAITING ಇಲ್ಲಿ ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಸ್ಮಾರ್ಟ್ ಫೋನ್ ಗಳಲ್ಲಿ ಕಾಲ್ ವೇಟಿಂಗ್ ಆಯ್ಕೆಯನ್ನು ಪೂರ್ವನಿಯೋಜಿತವಾಗಿ ಆನ್ ಮಾಡಲಾಗುತ್ತದೆ. ನಂತರ CALL WAITING ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ.

ಮಗನ ಸಾವಿನ ನೋವಲ್ಲಿ ತಾಯಿ ಸಹೋದರಿ ಆತ್ಮಹತ್ಯೆ ; ದೀಪಾವಳಿ ಮಧ್ಯೆ ಕುಟುಂಬಕ್ಕೆ ಆಘಾತ

Posted by Vidyamaana on 2023-11-15 05:50:17 |

Share: | | | | |


ಮಗನ ಸಾವಿನ ನೋವಲ್ಲಿ ತಾಯಿ ಸಹೋದರಿ ಆತ್ಮಹತ್ಯೆ ; ದೀಪಾವಳಿ ಮಧ್ಯೆ ಕುಟುಂಬಕ್ಕೆ ಆಘಾತ

ಕಾರವಾರ, ನ.15: ದೀಪಾವಳಿ ಸಂಭ್ರಮದ ನಡುವೆ ಒಂದೇ ಮನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಪುತ್ರನ ಸಾವಿನ ನೋವಿನಲ್ಲಿ ತಾಯಿ ಹಾಗೂ ಸಹೋದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರಸಿ ತಾಲೂಕಿನ ತಾರಗೋಡು ಬೆಳಲೆ ಗ್ರಾಮದಲ್ಲಿ ನಡೆದಿದೆ. 


ಅನಾರೋಗ್ಯದ ಹಿನ್ನೆಲೆ ಉದಯ ಬಾಲಚಂದ್ರ ಹೆಗಡೆ (22) ಎಂಬ ಯುವಕ ಮನೆಯಲ್ಲೇ ಮೃತಪಟ್ಟಿದ್ದರು.‌ ಪುತ್ರನ ಮೃತದೇಹದ ಪಕ್ಕದಲ್ಲೇ ಕುಳಿತು ಕಣ್ಣೀರು ಹಾಕುತ್ತಿದ್ದ ಆತನ ತಾಯಿ ಹಾಗೂ ಸಹೋದರಿ ಬಳಿಕ ತಾವು ಕೂಡ ಸಾವಿಗೆ ಶರಣಾಗಿದ್ದಾರೆ.‌‌ ತಾಯಿ ನರ್ಮದಾ ಬಾಲಚಂದ್ರ ಹೆಗಡೆ (50) ಹಾಗೂ ಸಹೋದರಿ ದಿವ್ಯಾ ಬಾಲಚಂದ್ರ ಹೆಗಡೆ (25) ಆತ್ಮಹತ್ಯೆ ಮಾಡಿಕೊಂಡವರು.‌


ಕೊರೊನಾ ಸಂದರ್ಭದಲ್ಲಿ ಆನಾರೋಗ್ಯ ಕಾಡಿದ್ದರಿಂದ ಊರಿಗೆ ಹಿಂತಿರುಗಿದ್ದ ಉದಯ ಬಾಲಚಂದ್ರ ಹೆಗಡೆ ಮನೆಯಲ್ಲಿದ್ದಕೊಂಡೇ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಮಗನ ಚಿಕಿತ್ಸೆಗಾಗಿ ಆಸ್ಪತ್ರೆ- ಮನೆ ಅಂತ ಅಲೆದಾಡುತ್ತಿದ್ದರು. ಅನಾರೋಗ್ಯ ತೀವ್ರಗೊಂಡ ಹಿನ್ನೆಲೆ‌ ಮಂಗಳವಾರ ಬೆಳಗ್ಗೆ ಮಗ ಸಾವಿಗೀಡಾಗಿದ್ದ.‌ ಮನೆ ಮಗನ ಸಾವಿನ ನೋವಿನಿಂದ ತಾಯಿ ಹಾಗೂ ಸಹೋದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 


ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.



Leave a Comment: