ಇಂದು (ಜು.O6) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜಿಗೆ ರಜೆ

ಸುದ್ದಿಗಳು News

Posted by vidyamaana on 2024-07-06 04:30:03 |

Share: | | | | |


ಇಂದು (ಜು.O6) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜಿಗೆ ರಜೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಹಿನ್ನೆಲೆಯಲ್ಲಿ ಶನಿವಾರ (ನಾಳೆ, ಜು.6) ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ

ಪದವಿ ಪೂರ್ವ ಕಾಲೇಜುಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಜೆ ಘೋಷಿಸಿ ಆದೇಶಿಸಿದ್ದಾರೆ.

 Share: | | | | |


ಪುತ್ತೂರು : ಅನಾರೋಗ್ಯದಿಂದಿದ್ದ ಉರ್ಲಾಂಡಿ ನಿವಾಸಿ ಮಹೇಶ್ ಭಂಡಾರಿ ನಿಧನ..

Posted by Vidyamaana on 2023-09-19 06:49:32 |

Share: | | | | |


ಪುತ್ತೂರು : ಅನಾರೋಗ್ಯದಿಂದಿದ್ದ ಉರ್ಲಾಂಡಿ ನಿವಾಸಿ ಮಹೇಶ್ ಭಂಡಾರಿ ನಿಧನ..

ಪುತ್ತೂರು: ಪುತ್ತೂರು ಉರ್ಲಾಂಡಿ ನಿವಾಸಿ ಮಹೇಶ್ ಭಂಡಾರಿ (37.ವ) ಅಲ್ಪಕಾಲದ ಅನಾರೋಗ್ಯದಿಂದ ಸೆ.18ರಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸಂಜೆ ನಿಧನರಾದರು.ಮಹೇಶ್‌ರವರು ಪುತ್ತೂರಿನ ಪ್ರತಿಷ್ಠಿತ ಜವಳಿ ಅಂಗಡಿಯಲ್ಲಿ ಹಲವಾರು ವರ್ಷಗಳಿಂದ ಸೇಲ್ಸ್ ಮೆನ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ನಂತರ ಫ್ಯಾನ್ಸಿ ಅಂಗಡಿಯನ್ನು ತೆರೆದಿದ್ದರು. ಮೃತರು ತಾಯಿ ರೇವತಿ, ಸಹೋದರಿಯರಾದ ವಿಜಯ, ಜ್ಯೋತಿರವರನ್ನು ಅಗಲಿದ್ದಾರೆ.

ಡೆಂಗ್ಯೂ ಜ್ವರಕ್ಕೆ ಪೆರುವಾಯಿ ಮೂಲದ ಯುವತಿ ಬಲಿ

Posted by Vidyamaana on 2023-09-13 01:36:45 |

Share: | | | | |


ಡೆಂಗ್ಯೂ ಜ್ವರಕ್ಕೆ ಪೆರುವಾಯಿ ಮೂಲದ ಯುವತಿ ಬಲಿ

ವಿಟ್ಲ :ಡೆಂಗ್ಯೂ ಜ್ವರದಿಂದ  ಯುವತಿ ಮೃತಪಟ್ಟ ಘಟನೆ  ವಿಟ್ಲದ ಪೆರುವಾಯಿಯಲ್ಲಿ ನಡೆದಿದೆ.

ಪೆರುವಾಯಿ ನಿವಾಸಿ ಆಶಾ (25 )  ಮೃತಪಟ್ಟ ಯುವತಿ. 


ಕಳೆದ ಎರಡು ದಿನಗಳಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಯುವತಿಯನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಯುವತಿ ಸೆ 12 ರಂದು ಮೃತಪಟ್ಟಿದ್ದಾರೆ.

ವಿದ್ಯಾರ್ಥಿನಿಗೆ ಬಸ್ಸಿನಲ್ಲಿ ಲೈಂಗಿಕ ಕಿರುಕುಳ ಪರಾರಿಯಾಗಿದ್ದ ಆರೋಪಿ ಬೆಳ್ತಂಗಡಿ ಮೂಲದ ಅಝೀಮ್ ಪೊಲೀಸ್ ವಶಕ್ಕೆ

Posted by Vidyamaana on 2024-04-25 08:16:26 |

Share: | | | | |


ವಿದ್ಯಾರ್ಥಿನಿಗೆ ಬಸ್ಸಿನಲ್ಲಿ ಲೈಂಗಿಕ ಕಿರುಕುಳ ಪರಾರಿಯಾಗಿದ್ದ ಆರೋಪಿ ಬೆಳ್ತಂಗಡಿ ಮೂಲದ ಅಝೀಮ್ ಪೊಲೀಸ್ ವಶಕ್ಕೆ

ಉಪ್ಪಿನಂಗಡಿ: ಸ್ಟೀಪರ್ ಕೋಚ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೋರ್ವರಿಗೆ ಅದೇ ಬಸ್ಸಿನಲ್ಲಿದ್ದ  ಸಹ ಪ್ರಯಾಣಿಕ ಮುಸ್ಲಿಂ ಯುವಕನೋರ್ವ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದು, ವಿದ್ಯಾರ್ಥಿನಿಯ ಪ್ರತಿರೋಧದ ನಡುವೆ ಆರೋಪಿಯು ಬಸ್ಸಿನಿಂದ ಜಿಗಿದು ಪರಾರಿಯಾದ ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಮೂಲತಃ ಬಂಟ್ವಾಳ ತಾಲೂಕಿನ ನಿವಾಸಿಯಾಗಿರುವ ವಿದ್ಯಾರ್ಥಿನಿಯು ಬೆಂಗಳೂರಿನಲ್ಲಿ ಫ್ಯಾಶನ್ ಡಿಸೈನ್ ಕಲಿಯುತ್ತಿದ್ದು, ಊರಿಗೆ ಹೋಗುವ ಸಲುವಾಗಿ ಮಂಗಳವಾರ ರಾತ್ರಿ ಬೆಂಗಳೂರಿನಿಂದ ಖಾಸಗಿ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದ್ದರು. ಬಸ್ಸು ಸಕಲೇಶಪುರ ಕಳೆದು ಮುಂದಕ್ಕೆ ಸಾಗುತ್ತಿದ್ದಂತೆಯೇ ತ ಮಲಗಿದ್ದ ವಿದ್ಯಾರ್ಥಿನಿಯ ಮೈ ಮೇಲೆ ಅ ಕೈ ಮಾಡಿರುವುದು ಕಂಡು ಬಂತು. ತ ಬಳಿಕ ಮತ್ತೊಮ್ಮೆ ಇದೇ ಯತ್ನ ನಡೆದಾಗ ವ ವಿದ್ಯಾರ್ಥಿನಿ ಕೃತ್ಯವನ್ನು ಬಸ್ಸಿನ ಚಾಲಕನ ಪ ಗಮನಕ್ಕೆ ತಂದರು. ಆದರೆ ಚಾಲಕನಿಂದ ಸ ಯಾವುದೇ ಸ್ಪಂದನೆ ದೊರೆಯದಿದ್ದಾಗ , ಬಸ್ಸಿನಲ್ಲಿದ ಕೆಲ ಸಹ ಪ್ರಯಾಣಿಕರು ರಕ್ಷಣೆಗೆ ಧಾವಿಸಿ ಬಂದು ಆತನನ್ನು ವಿಚಾರಿಸಿದಾಗ ತಾನು, ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಆದರ್ಶ ನಗರ ನಿವಾಸಿ

ರಾಜ್ಯಾದ್ಯಂತ ವ್ಯಾಪಿಸುತ್ತಿದೆ ಸಾಂಕ್ರಾಮಿಕ ಡೆಂಗ್ಯೂ - ಎಚ್ಚರ ಇರಲಿ : ರಾಜ್ಯದ ಜನರಿಗೆ ಸಿಎಂ ಮನವಿ

Posted by Vidyamaana on 2023-09-11 16:32:51 |

Share: | | | | |


ರಾಜ್ಯಾದ್ಯಂತ ವ್ಯಾಪಿಸುತ್ತಿದೆ ಸಾಂಕ್ರಾಮಿಕ ಡೆಂಗ್ಯೂ - ಎಚ್ಚರ ಇರಲಿ : ರಾಜ್ಯದ ಜನರಿಗೆ ಸಿಎಂ ಮನವಿ

ಬೆಂಗಳೂರು : ಕಳೆದ ಕೆಲವು ದಿನಗಳಲ್ಲಿ ರಾಜ್ಯಾದ್ಯಂತ ಅತ್ಯಧಿಕ ಡೆಂಗ್ಯೂ ಪ್ರಕರಣಗಳು ವರದಿಯಾಗಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.ರಾಜ್ಯಾದ್ಯಂತ ಕಳೆದ ಕೆಲವು ದಿನಗಳಲ್ಲಿ ಸುಮಾರು 7 ಸಾವಿರಕ್ಕೂ ಅಧಿಕ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 4 ಸಾವಿರಕ್ಕೂ ಅಧಿಕ ಪ್ರಕರಣಗಳು ಬೆಂಗಳೂರು ನಗರವೊಂದರಲ್ಲೇ ಕಂಡುಬಂದಿದೆ. ಹೀಗಾಗಿ ಎಲ್ಲರೂ ಮನೆ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡಿ, ಸೊಳ್ಳೆ ಕಡಿತದ ಬಗ್ಗೆ ಎಚ್ಚರಿಕೆ ವಹಿಸುವಂತೆ ಅವರು ಹೇಳಿದ್ದಾರೆ.ಡೆಂಗ್ಯೂ ಕ್ಷಿಪ್ರಗತಿಯಲ್ಲಿ ವ್ಯಾಪಿಸುತ್ತಿರುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಮಾತನಾಡಿ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಔಷಧ ಸಿಂಪಡಣೆ, ನೀರು ಶೇಖರಣೆಯಾಗುವ ಸ್ಥಳಗಳನ್ನು ಗುರುತಿಸಿ ಸ್ವಚ್ಛಗೊಳಿಸುವುದು ಸೇರಿದಂತೆ ಸೊಳ್ಳೆ ನಿಯಂತ್ರಣಕ್ಕೆ ಪರಿಣಾಮಕಾರಿ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ. ಡೆಂಗ್ಯೂ ಬಗ್ಗೆ ಭಯ ಬೇಡ, ಆದರೆ ಜಾಗೃತೆ ವಹಿಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

BREAKING : ಇನ್ಮುಂದೆ ಎಲ್ಲಾ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯ : ರಾಜ್ಯ ಸರ್ಕಾರದಿಂದ ತಿದ್ದುಪಡಿ ಆದೇಶ

Posted by Vidyamaana on 2024-02-21 16:50:51 |

Share: | | | | |


BREAKING : ಇನ್ಮುಂದೆ ಎಲ್ಲಾ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯ : ರಾಜ್ಯ ಸರ್ಕಾರದಿಂದ ತಿದ್ದುಪಡಿ ಆದೇಶ

ಬೆಂಗಳೂರು : ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂದು ಅರ್ಥ ಬರುವ ಸುತ್ತೋಲೆಯನ್ನು ಹೊರಡಿಸಿದ್ದ ರಾಜ್ಯ ಸರ್ಕಾರ ವಿವಾದವಾಗುತ್ತಿದ್ದಂತೆ ಆದೇಶವನ್ನು ತಿದ್ದುಪಡಿ ಮಾಡಿ ಆದೇಶ ಹೊರಡಿಸಿದೆ.

ಏನಿದೆ ತಿದ್ದುಪಡಿ ಆದೇಶದಲ್ಲಿ..?

ರಾಷ್ಟ್ರಕವಿ ಜ್ಞಾನಪೀಠ ಪುರಸ್ಕೃತರಾದ ಡಾ.ಕುವೆಂಪುರವರ “ಜಯ ಭಾರತ ಜನನಿಯ ತನುಜಾತೆ” ಕವನವನ್ನು ನಾಡಗೀತೆಯಾಗಿ ಘೋಷಿಸುವ ಕುರಿತು ಹೊರಡಿಸಲಾದ ಸರ್ಕಾರದ ಆದೇಶ ಸಂಖ್ಯೆ: ಸಂಕಇ 207 ಕಸದ 2003, ದಿನಾಂಕ:07.01.2004ರ ಆದೇಶ ಭಾಗದಲ್ಲಿನ ಮಾರ್ಗಸೂಚಿ ‘ಇ” ಅಂಶಕ್ಕೆ ಹೊರಡಿಸಲಾದ ತಿದ್ದುಪಡಿ ಆದೇಶವನ್ನು ಹಿಂಪಡೆಯಲಾಗಿದೆ.


ಮುಂದುವರೆದು ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು” ಎಂಬುದರ ಬದಲಾಗಿ “(ಇ) ಎಲ್ಲಾ ಶಾಲೆಗಳಲ್ಲಿ (ಸರ್ಕಾರಿ, ಅನುದಾನಿತ, ಅನುದಾನ ರಹಿತ ಮತ್ತು ಖಾಸಗಿ) ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳು ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು” ಎಂದು ತಿದ್ದಿ ಓದಿಕೊಳ್ಳತಕ್ಕದ್ದು ಎಂದು ಆದೇಶಿಸಿದೆ.ಸ್ಪಷ್ಟನೆ ನೀಡಿದ ಸಚಿವರು


ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ ಎಂದು ರಾಜ್ಯ ಸರ್ಕಾರ ಈ ಮೊದಲು ಆದೇಶ ಹೊರಡಿಸಿತ್ತು, ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ ನೀಡಿದ್ದರು.

ಇದು ಪ್ರಿಂಟ್ ಮಿಸ್ಟೇಕ್ ಆಗಿದೆ. ಇದನ್ನು ಎಲ್ಲಾ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯ ಎಂದು ಬದಲಾವಣೆ ಮಾಡಿ ಸರ್ಕಾರ ಮರು ಆದೇಶ ಹೊರಡಿಸಲಿದೆ. ಸಣ್ಣ ತಪ್ಪಿನಿಂದ ಗೊಂದಲ ಆಗಿದೆ.ಎಲ್ಲವನ್ನು ಸರಿ ಮಾಡಿ ಆದೇಶ ಹೊರಡಿಸುತ್ತೇವೆ ಎಂದಿದ್ದರು.

ಮಂಗಳೂರು : ಮೊಬೈಲ್ ನೋಡುತ್ತಾ ಚಾಲಕ ಬಸ್ ಚಲಾಯಿಸಿದ ಪ್ರಕರಣ

Posted by Vidyamaana on 2023-07-25 06:48:33 |

Share: | | | | |


ಮಂಗಳೂರು : ಮೊಬೈಲ್ ನೋಡುತ್ತಾ ಚಾಲಕ ಬಸ್ ಚಲಾಯಿಸಿದ ಪ್ರಕರಣ

ಮಂಗಳೂರಿನಲ್ಲಿ ಮೊಬೈಲ್ ನೋಡುತ್ತಾ ಚಾಲಕ ಬಸ್ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಬಸ್ ಚಾಲಕನ ವಿರುದ್ಧ ಕ್ರಮಕ್ಕೆ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್ ಸೂಚಿಸಿದ್ದಾರೆ.ಬಸ್ ಚಾಲಕನ ವಿರುದ್ಧ ದಕ್ಷಿಣ ಟ್ರಾಫಿಕ್ ಪೊಲೀಸ್ ಠಾಣೆ ಕ್ರಮ ಕೈಗೊಂಡಿದೆ. ಅಲ್ಲದೇ ಚಾಲಕನ ಡಿಎಲ್ ಅನ್ನು ರದ್ದುಗೊಳಿಸುವಂತೆ ಆರ್‌ಟಿಒಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ ಅವರು ತಿಳಿಸಿದ್ದಾರೆ.


42 ನಂಬರಿನ ಸೈಂಟ್ ಆಂಟನಿ ಬಸ್ ಚಾಲಕ ನಿರ್ಲಕ್ಷ್ಯ ರೀತಿಯಲ್ಲಿ ಮೊಬೈಲ್ ಉಪಯೋಗಿಸುತ್ತ ಬಸ್ ಚಲಾಯಿಸಿದ್ದಾರೆ. ನೇತ್ರಾವತಿ ಸೇತುವೆಯಿಂದ ಮೊಬೈಲ್ ನೋಡಲು ಆರಂಭಿಸಿದ ಚಾಲಕ ತೊಕ್ಕೊಟ್ಟು ವರೆಗೂ ಮೊಬೈಲ್ ಹಿಡಿದುಕೊಂಡು ಬಸ್ ಚಲಾಯಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬಸ್‌ನಲ್ಲಿ ಅಧಿಕ ಪ್ರಯಾಣಿಕರಿದ್ದರು ಎಂಬುದನ್ನು ವಿಡಿಯೋ ಮಾಡಿದ ಪ್ರಯಾಣಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಸ್ತೆಗಿಂತ ಹೆಚ್ಚಾಗಿ ಮೊಬೈಲ್ ಅನ್ನೇ ಚಾಲಕ ವೀಕ್ಷಿಸುತ್ತಿರುವುದು ಜನರ ಕಳವಳಕ್ಕೆ ಕಾರಣವಾಗಿದೆ. ಸಾರಿಗೆ ಅಧಿಕಾರಿಗಳು ಬಸ್ ಪರ್ಮಿಟ್ ರದ್ದುಗೊಳಿಸಬೇಕು ಹಾಗೂ ಸಂಚಾರಿ ಪೊಲೀಸರು ಚಾಲಕನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Recent News


Leave a Comment: