ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಯಾಗಿ ಯತೀಶ್ N. IPS ಅಧಿಕಾರ ಸ್ವೀಕಾರ

ಸುದ್ದಿಗಳು News

Posted by vidyamaana on 2024-07-05 10:22:02 |

Share: | | | | |


ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಯಾಗಿ ಯತೀಶ್ N. IPS ಅಧಿಕಾರ ಸ್ವೀಕಾರ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿ ಯತೀಶ್ N. IPS ಇಂದು ಮಂಗಳೂರಿನ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರಿಷ್ಯಂತ್ ಬೆಂಗಳೂರು ವೈರ್ ಲೆಸ್ ವಿಭಾಗದ ಎಸ್ಪಿಯಾಗಿ ವರ್ಗಾವಣೆಯಾಗಿದ್ದರು.

2016 ರ ಕರ್ನಾಟಕ ಕೇಡರ್ ನ IPS ಅಧಿಕಾರಿ ಯತೀಶ್ ಎನ್ ಈ ಹಿಂದೆ ಮಂಡ್ಯ ಎಸ್ಪಿಯಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದರು. ಇನ್ನೂ ಹಲವಾರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

 Share: | | | | |


ಮುತ್ತು ಬೆಳೆದ ಊರಿನಲ್ಲಿ ಮಿನುಗಲು ಸಿದ್ಧವಾಗಿದೆ ಸುಲ್ತಾನ್ ಡೈಮಂಡ್ಸ್ ಗೋಲ್ಡ್

Posted by Vidyamaana on 2024-02-20 23:15:54 |

Share: | | | | |


ಮುತ್ತು ಬೆಳೆದ ಊರಿನಲ್ಲಿ ಮಿನುಗಲು ಸಿದ್ಧವಾಗಿದೆ ಸುಲ್ತಾನ್ ಡೈಮಂಡ್ಸ್  ಗೋಲ್ಡ್

ಪುತ್ತೂರು: ಗ್ರಾಹಕರ ವಿಶ್ವಾಸ ಗಳಿಸಿ ವಿಶ್ವಾಸಾರ್ಹ ಅಭರಣ ಬ್ರಾಂಡ್ ಎನಿಸಿಕೊಂಡಿರುವ ಸುಲ್ತಾನ್ ಡೈಮಂಡ್ಸ್ ಅಂಡ್ ಗೋಲ್ಡ್ ಪುತ್ತೂರು ಶಾಖೆ ಫೆಬ್ರವರಿ 22ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆಗೊಳ್ಳಲಿದ್ದು, ಶುಭಾರಂಭಕ್ಕೆ ಸಿದ್ಧತೆಗಳು ಭರ್ಜರಿಯಾಗಿಯೇ ನಡೆಯುತ್ತಿವೆ.

ಸಮಕಾಲೀನ ಮತ್ತು ಸಾಂಪ್ರದಾಯಿಕ ವಿನ್ಯಾಸಗಳು, ಸರಿಸಾಟಿಯಿಲ್ಲದ ಪರಿಶುದ್ಧತೆ ಮತ್ತು ಸೇವೆಗಳ ಉತ್ತಮ ಮಿಶ್ರಣದೊಂದಿಗೆ, ಸುಲ್ತಾನ್ ಪುತ್ತೂರಿನ ಆಭರಣ ಪ್ರಿಯರ ಮನಸ್ಸನ್ನು ಅಸ್ವಾದಿಸಲು ಸಿದ್ಧವಾಗಿದೆ. 1992ರಿಂದಲೇ ಗ್ರಾಹಕರ ವಿಶ್ವಾಸ ಗಳಿಸಿರುವ ಸುಲ್ತಾನ್ ಡೈಮಂಡ್ಸ್ ಅಂಡ್ ಗೋಲ್ಡ್ , ತನ್ನ 10ನೇ ಶಾಖೆಯನ್ನು ಪುತ್ತೂರಿನಲ್ಲಿ ತೆರೆಯುತ್ತಿದೆ.

ಬಹುಭಾಷಾ ತಾರೆ ಪ್ರಿಯಾಮಣಿ ಅವರು ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅತಿಥಿಯಾಗಿರಲಿದ್ದು, ಮಾಜಿ ಶಾಸಕ ಸಂಜೀವ ಮಠಂದೂರು ಅವರು ವೈವಿಧ್ಯಮಯದ ವಜ್ರದ ಸಂಗ್ರಹವನ್ನು ಅನಾವರಣಗೊಳಿಸಲಿದ್ದಾರೆ. 

ನಗರಸಭೆ ಸದಸ್ಯೆ ವಿದ್ಯಾ ಗೌರಿ ಅವರು ಜೆಮ್ ಸ್ಟೋನ್ ಸಂಗ್ರಹವನ್ನು ಅನಾವರಣಗೊಳಿಸಲಿದ್ದಾರೆ. ಪುತ್ತೂರಿನ ಎಸ್.ಡಿ.ಪಿ.ಐ. ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ಅವರು "ಆಂಟಿಕ್" ಸಂಗ್ರಹವನ್ನು ಅನಾವರಣಗೊಳಿಸಲಿದ್ದಾರೆ. 

ಮೌಂಟನ್ ವ್ಯೂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆಪಿ ಅಹಮದ್ ಹಾಜಿ ಆಕರ್ಷಣ್ ಅವರು ಚಿನ್ನಾಭರಣದ ಸಂಗ್ರಹವನ್ನು ಅನಾವರಣಗೊಳಿಸಲಿದ್ದಾರೆ. ಸುದಾನ ವಸತಿಯುತ ಶಾಲಾ ಸಂಚಾಲಕ ರೆವರೆಂಡ್ ವಿಜಯ್ ಹಾರ್ವಿನ್ ಅವರು ಮಕ್ಕಳ ಚಿನ್ನಾಭರಣದ ಮತ್ತು ಬೆಳ್ಳಿಯ ಸಂಗ್ರಹವನ್ನು ಅನಾವರಣಗೊಳಿಸಲಿದ್ದಾರೆ. ಲಯನ್ಸ್ 317D ಅಧ್ಯಕ್ಷೆ  ಡಾಕ್ಟರ್ ರಂಜಿತಾ ಶೆಟ್ಟಿ ಅವರು CAIA - ಲೈಫ್ ಸ್ಟೈಲ್ ಜ್ಯುವೆಲ್ಲರಿಯನ್ನು ಅನಾವರಣಗೊಳಿಸಲಿದ್ದಾರೆ.

ಕಳೆದ ಮೂರು ದಶಕಗಳಿಂದ ಸುಲ್ತಾನ್ ಡೈಮಂಡ್ ಅಂಡ್ ಗೋಲ್ಡ್ - ನಂಬಿಕೆ, ಶುದ್ಧತೆ, ಡಿಸೈನ್, ವೈವಿಧ್ಯತೆ, ಕನಿಷ್ಠ ತಯಾರಿಕಾ ವೆಚ್ಚ, ಮಾರಾಟ ನಂತರದ ಗ್ರಾಹಕ ಸ್ನೇಹಿ ಸೇವೆ, ಉಚಿತ ಜ್ಯುವೆಲ್ಲರಿ ನಿರ್ವಹಣಾ ವ್ಯವಸ್ಥೆ ಮುಂತಾದವುಗಳಿಂದಾಗಿ ಜನಮನ್ನಣೆ ಪಡೆದಿದೆ. ಸುಲ್ತಾನ್ ನಲ್ಲಿ ನಿವ್ವಳ ತೂಕಕ್ಕೆ ಚಿನ್ನದ ಬೆಲೆ ಮತ್ತು ಆಭರಣಗಳಲ್ಲಿರುವ ಕಲ್ಲುಗಳು ಅಥವಾ ಇನ್ನಿತರ ಪೂರಕ ಬೀಟ್ಸ್ - ಮಣಿಗಳನ್ನು ಪ್ರತ್ಯೇಕವಾಗಿ ಬೆಲೆ ಸೂಚ್ಯಂಕದಿಂದ ಮಾರಾಟ ಮಾಡಲಾಗುತ್ತದೆ. ಸುಲ್ತಾನ್ ನಲ್ಲಿ IGI ಪ್ರಮಾಣೀಕೃತ ವಜ್ರದ ಆಭರಣಗಳನ್ನು ಮತ್ತು ಪ್ಲಾಟಿನಮ್ ಗಿಲ್ಡ್ ಇಂಟರ್ನ್ಯಾಷನಲ್ (PGI) ಪ್ರಮಾಣಿಕೃತ ಪ್ಲಾಟಿನಮ್ ಆಭರಣಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ. ಹಾಗೆಯೇ ಶೇ. 100 ಶುದ್ಧ BIS ಹಾಲ್ ಮಾರ್ಕ್ HUID 916 ಚಿನ್ನಾಭರಣಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ.


ಪುತ್ತೂರು ಮಳಿಗೆ ಮಳಿಗೆಯ ಉದ್ಘಾಟನೆಯ ಅಂಗವಾಗಿ ಗ್ರಾಹಕರಿಗೆ ವಿಶೇಷ ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತದೆ. ಉದ್ಘಾಟನೆ ಪ್ರಯುಕ್ತ ಕೊಡುಗೆಗಳು 2024ರ ಮಾರ್ಚ್ 10ರ ವರೆಗೆ ಇರಲಿದೆ.

• ಪ್ರತಿದಿನ ಇಬ್ಬರು ಗ್ರಾಹಕರಿಗೆ ಒಂದು ಗ್ರಾಂ ಚಿನ್ನದ ನಾಣ್ಯ ಗೆಲ್ಲುವ ಅವಕಾಶ.

• ಚಿನ್ನಾಭರಣದ ತಯಾರಿಕಾ ವೆಚ್ಚದಲ್ಲಿ ಶೇ. 50 ಕಡಿತ

• ಡೈಮಂಡ್ ಪ್ರತಿ ಕ್ಯಾರೆಟ್ ಮೇಲೆ ರೂ. 8000/- ರಿಯಾಯಿತಿ.

• ಬೆಳ್ಳಿ ಆಭರಣಗಳ ತಯಾರಿಕಾ ವೆಚ್ಚದ ಮೇಲೆ ಶೇ. 25 ಕಡಿತ.

• ಹಳೆಯ ಚಿನ್ನದ ವಿನಿಮಿಯದಲ್ಲಿ ಪ್ರತೀ ಗ್ರಾಮಿಗೆ ರೂ. 50/- ಹೆಚ್ಚುವರಿಯಾಗಿ ಪಡೆಯಬಹುದು.


ಸುಮಾರು 10,000 ಚದರ ಅಡಿ ವಿಶಾಲವಾಗಿರುವ ಪುತ್ತೂರು ಮಳಿಗೆಯಲ್ಲಿ ಸುಲ್ತಾನ್ ನ ಬ್ರಾಂಡ್ ಗಳಾದ ಪ್ಯೂರ್ ವೇರ್ ಡೈಮಂಡ್ ಕಲೆಕ್ಷನ್, ಅಮೋಕ ಪ್ಲಾಟಿನಂ ಕಲೆಕ್ಷನ್ಸ್, ಆಕರ್ಷ" ಅನ್ ಕಟ್ ಡೈಮಂಡ್, ಅಮೂಲ್ಯ ಜೆಮ್ ಸ್ಟೋನ್ ಕಲೆಕ್ಷನ್ಸ್, ತಾರಕ ಮಕ್ಕಳ ಆಭರಣಗಳು, CAIA ಲೈಟ್ ವೈಟ್ ಆಭರಣಗಳು, ಮತ್ತು ನಿತ್ಯೋಪಯೋಗಿ ಆಭರಣಗಳು ಇಲ್ಲಿ ಲಭ್ಯ  ಇರಲಿದೆ.


ಕಡಿಮೆ ಬೆಲೆಯಲ್ಲಿ ಉತ್ಕೃಷ್ಟ ಆಭರಣ:

ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್ ನಿರ್ದೇಶಕರಾದ ಡಾಕ್ಟರ್ ಅಬ್ದುಲ್ ರಹೂಫ್ ಮತ್ತು ಅಬ್ದುಲ್ ರಹೀಮ್ ಮಾತನಾಡಿ, “ನಾವು ಸುಲ್ತಾನ್ ಜ್ಯುವೆಲ್ಲರಿಯ ವಿಶೇಷತೆಗಳನ್ನು ಪುತ್ತೂರು ಜನತೆಗೆ  ಪರಿಚಯಿಸಲಿದ್ದು, ನಮ್ಮ ಶೋರೂಮ್ಗೆ ಭೇಟಿ ಮಾಡಿ ಸುಲ್ತಾನ್ ತನ್ನ ಗ್ರಾಹಕರಿಗೆ ನೀಡುವ ಅನನ್ಯ ಆಭರಣ ಸಂಗ್ರಹ ಮತ್ತು ಸೇವೆಯನ್ನು ಆನಂದಿಸಬೇಕು" ಎಂದು ವಿನಂತಿಸಿದ್ದಾರೆ. ಹಾಗೆಯೇ “ಪುತ್ತೂರಿನ ಈ ಮಳಿಗೆ ನೂರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿದೆ” ಎಂದಿದ್ದಾರೆ.

"ಸುಲ್ತಾನ್ ಡೈಮಂಡ್ಸ್ ಅಂಡ್ ಗೋಲ್ಡ್ ಕರ್ನಾಟಕ ಮತ್ತು ಕೇರಳದಲ್ಲಿ ಒಟ್ಟು 10 ಶೋ ರೂಮ್ಗಳನ್ನು ಹೊಂದಿದೆ. ಹಾಗೆಯೇ ಶೀಘ್ರದಲ್ಲಿ ಮೈಸೂರು ಮತ್ತು ಬೆಂಗಳೂರುನಲ್ಲಿ ಮತ್ತೆರಡು ಮಳಿಗೆಗಳನ್ನು ತೆರೆಯಲಿದೆ. ಸುಲ್ತಾನ್ ಚಿನ್ನ ಆಮದು ಮಾಡುವ ಲೈಸೆನ್ಸ್ ಹೊಂದಿದ್ದು, ಆಮದಿತ ಶುದ್ಧ ಚಿನ್ನದ ಬಾರ್ ಗಳನ್ನು ತರಿಸುತ್ತದೆ. ಹಾಗೆಯೇ ತನ್ನದೇ ತಯಾರಿಕಾ ಘಟಕವನ್ನು ಹೊಂದಿದೆ. ಹೀಗಾಗಿ ಶುದ್ಧ ಚಿನ್ನದ ಅತ್ಯಂತ ಉತ್ಕೃಷ್ಟವಾಗಿ ತಯಾರಿಸಲಾದ ಆಭರಣಗಳನ್ನು ಕಡಿಮೆ ಬೆಲೆಯಲ್ಲಿ ನೀಡಲು ನಮಗೆ ಸಾಧ್ಯವಾಗುತ್ತದೆ” ಎಂದು ತಿಳಿಸಿದ್ದಾರೆ.

ಸುಲ್ತಾನ್ ನಲ್ಲಿ ಕನಿಷ್ಠ ತಯಾರಿಕಾ ವೆಚ್ಚ ಇದೆ ಮತ್ತು ವೇಸ್ಟೇಜ್ ವೆಚ್ಚ ಇರುವುದಿಲ್ಲ, ಹಾಗೆಯೇ 11 ತಿಂಗಳ ಮಾಸಿಕ ಕಂತುಗಳ ಯೋಜನೆ ಇದೆ. ಪಾವತಿಗಾಗಿ ಮೊಬೈಲ್ ಆಪ್ ಕೂಡ ಇರುತ್ತದೆ. ಮದುವೆ ಮತ್ತು ಇನ್ನಿತರ ಸಮಾರಂಭಗಳಿಗಾಗಿ ಮುಂಗಡ ಪಾವತಿ ಮಾಡಿ. ಚಿನ್ನದ ಬೆಲೆ ಏರಿಕೆಯಿಂದ ರಕ್ಷಣೆ ಪಡೆಯಬಹುದು. ಮದುವೆ ಖರೀದಿಗೆ ವಿಶೇಷ ರಿಯಾಯಿತಿ ಇರುತ್ತದೆ. ಸುಲ್ತಾನ್  ಹಬ್ಬ ಹರಿದಿನಗಳಿಗೆ, ಹಾಗೆಯೇ ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೆ, ವಧು-ವರರಿಗೆ... ಹೀಗೆ ಎಲ್ಲಾ ವರ್ಗದ ಜನರಿಗೆ ಜನಪ್ರಿಯ ಆಕರ್ಷಕ ಆಭರಣಗಳ ಮಳಿಗೆಯಾಗಿದೆ ಎಂದು ತಿಳಿಸಿದ್ದಾರೆ.

ಪುತ್ತೂರು ಏಳ್ಮುಡಿ ಸೇತುವೆ ಬಳಿಯ ತಾಜ್ ಟವರ್ಸ್ ನಲ್ಲಿ ಈ ವಿಶಾಲ ಮಳಿಗೆ ಕಣ್ಮನ ಸೆಳೆಯುತ್ತಿದೆ. ವಿವರಗಳಿಗೆ ಸಂಪರ್ಕಿಸಿ 08246816916.

ಮಾನಸಿಕ ಆರೋಗ್ಯ ಸಮಸ್ಯೆ; ಖ್ಯಾತ ನೀಲಿ ಚಿತ್ರತಾರೆ ಆತ್ಮಹತ್ಯೆ

Posted by Vidyamaana on 2024-02-20 14:29:04 |

Share: | | | | |


ಮಾನಸಿಕ ಆರೋಗ್ಯ ಸಮಸ್ಯೆ; ಖ್ಯಾತ ನೀಲಿ ಚಿತ್ರತಾರೆ ಆತ್ಮಹತ್ಯೆ

ನವದೆಹಲಿ: ಆತ್ಮಹತ್ಯೆ ಮಾಡಿಕೊಂಡು ಖ್ಯಾತ ನೀಲಿ ಚಿತ್ರತಾರೆಯೊಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.ಕಾಗ್ನಿ ಲಿನ್ ಕಾರ್ಟರ್(36)  ಆತ್ಮಹತ್ಯೆ ಮಾಡಿಕೊಂಡು ಪ್ರಾಣತೆತ್ತಿರುವುದನ್ನು ಅವರ ಸ್ನೇಹಿತರು ಸೋಶಿಯಲ್‌ ಮೀಡಿಯಾದಲ್ಲಿ ವಿಚಾರವನ್ನು ಅಧಿಕೃತವಾಗಿ ಹೇಳಿದ್ದಾರೆ. ಅವರು ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರ ಸ್ನೇಹಿತರು ಹೇಳಿದ್ದಾರೆ.

2000 ಇಸವಿಯಲ್ಲಿ ನೀಲಿ ಚಿತ್ರದ ಲೋಕಕ್ಕೆ ಕಾಲಿಟ್ಟ ಅವರು ತನ್ನ ಕೆಲಸಕ್ಕಾಗಿ ಹಲವು ಅಮೇರಿಕನ್‌ ಅಡಲ್ಟ್‌ ವಿಡಿಯೋ ಪ್ರಶಸ್ತಿ(AVN Awards) ಗಳನ್ನು ಪಡೆದಿದ್ದಾರೆ. ಇದಲ್ಲದೆ ಅವರು ಗಾಯಕಿಯಾಗಿ, ಕ್ಲಬ್‌ ನಲ್ಲಿ ನೃತ್ಯಗಾರ್ತಿಯಾಗಿಯೂ ಹಾಗೂ ಮಾಡೆಲ್‌ ಆಗಿಯೂ ಅನೇಕ ವರ್ಷ ಮನರಂಜಿಸಿದ್ದರು.

2019 ರಲ್ಲಿ ಅವರು ಲಾಸ್ ಏಂಜಲೀಸ್‌ನಿಂದ ಮರಳಿ ಪೋಲ್ ಡ್ಯಾನ್ಸ್‌ನಲ್ಲಿ ತೊಡಗಿಕೊಂಡಿದ್ದರು. ಇದಾದ ನಂತರ ಅವರು ತಮ್ಮದೇ ಆದ ಸ್ಟುಡಿಯೋ ತೆರೆದು ವಯಸ್ಕ ಚಿತ್ರಗಳ ಬದಲು ಪೋಲ್ ಡ್ಯಾನ್ಸ್‌ನತ್ತ ಹೆಚ್ಚಿನ ಗಮನ ಹರಿಸಿದ್ದರು.ಕಳೆದ ಕೆಲ ಸಮಯದಿಂದ ಕಾಗ್ನಿಅವರಿಗೆ ಮಾನಸಿಕ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ಅವರ ಸ್ನೇಹಿತು ಹೇಳಿರುವುದಾಗಿ ವರದಿ ತಿಳಿಸಿದೆ.ಅವರ ಸ್ನೇಹಿತರು ʼಗೋ ಫಂಡ್‌ ಮಿʼ ಮೂಲಕ ನಟಿಯ ನೆನಪಿಗೆ ಹಾಗೂ ಅವರ ತಾಯಿಯ ನೆರವಿಗೆ ಹಣ ಸಂಗ್ರಹಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ

ಮಂಗಳೂರು : ಕೊಲೆಗೈದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

Posted by Vidyamaana on 2023-03-16 16:15:01 |

Share: | | | | |


ಮಂಗಳೂರು : ಕೊಲೆಗೈದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

ಉಳ್ಳಾಲ: ಕೊಲೆಗೈದ ಸ್ಥಿತಿಯಲ್ಲಿ ಮಹಿಳೆಯೋರ್ವರ ಮೃತದೇಹ ಉಳ್ಳಾಲ ಕೋಟೆಪುರದ ಬಾಡಿಗೆ ಮನೆಯ ಶೌಚಾಲಯದಲ್ಲಿ ಗುರುವಾರ ಸಂಜೆ ಪತ್ತೆಯಾಗಿದೆ.

ಮೃತರನ್ನು ದೆಹಲಿ ಮೂಲದ ಸುಮಾರು 45 ವರ್ಷದ ಮಹಿಳೆ ಎಂದು ಗುರುತಿಸಲಾಗಿದೆ. ಮಹಿಳೆಯ ಜತೆಗಿದ್ದ ಅದೇ ಊರಿನ ನಯೀಮ್ (35) ಎಂಬಾತ  ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂರು ದಿನಗಳ ಹಿಂದಷ್ಟೆ ಕೋಟೆಪುರಕ್ಕೆ ಹೊರ ರಾಜ್ಯದಿಂದ ಬಂದಿದ್ದ ಇವರು, ಸ್ಥಳೀಯ ಸೆಲೂನ್ ಮಾಲೀಕರ ಪರಿಚಯ ಮಾಡಿ ಅವರ ಮೂಲಕ ಕೋಟೆಪುರದ ಹಮೀದ್ ಎಂಬವರ ಬಾಡಿಗೆ ಮನೆಯಲ್ಲಿ ಆಶ್ರಯ ಪಡೆದಿದ್ದರು. ಮನೆ ಮಾಲೀಕರಲ್ಲಿ ತಾವು ಬಟ್ಟೆ ವ್ಯಾಪಾರ ನಡೆಸುವವರು, ವ್ಯಾಪಾರ ನಡೆಸಲು ಬಟ್ಟೆಗಳು ಬರಬೇಕಿದೆ ಎಂದು ತಿಳಿಸಿದ್ದರು.

ಇಂದು ಸಂಜೆಯ ವೇಳೆ ಇಬ್ಬರೂ ಮನೆಯಿಂದ ಹೊರಬಾರದೇ ಇರುವುದನ್ನು ಗಮನಿಸಿ ಸ್ಥಳೀಯ ಯುವಕನೋರ್ವ ಮನೆಯನ್ನು ಗಮನಿಸಿದಾಗ ಶೌಚಾಲಯದೊಳಗೆ ಮಹಿಳೆಯ ಮೃತದೇಹ ಚೂರಿಯಿಂದ ಇರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸ್ಥಳಕ್ಕೆ ಉಳ್ಳಾಲ ಪೊಲೀಸರು, ವಿಧಿ ವಿಜ್ಞಾನ ತಜ್ಞರ ತಂಡ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ

ಮಂಗಳೂರು : ಮಹಿಳಾ ಸಿಬ್ಬಂದಿಗೆ ಹಲ್ಲೆ ಆರೋಪ- ಆಪತ್ ಬಾಂಧವ ಆಸಿಫ್ ಅರೆಸ್ಟ್

Posted by Vidyamaana on 2023-10-12 15:13:36 |

Share: | | | | |


ಮಂಗಳೂರು : ಮಹಿಳಾ ಸಿಬ್ಬಂದಿಗೆ ಹಲ್ಲೆ ಆರೋಪ- ಆಪತ್ ಬಾಂಧವ ಆಸಿಫ್ ಅರೆಸ್ಟ್

ಮಂಗಳೂರು: ಅನಾಥ ರೋಗಿಗಳಿಗೆ ಸಹಾಯ ಮಾಡುತ್ತಿದ್ದ ಮುಲ್ಕಿ ನಿವಾಸಿ ಆಪತ್ಥಾಂಧವ ಎಂದೇ ಗುರುತಿಸಲ್ಪಟ್ಟಿದ್ದ ಆಸಿಫ್ ಅವರನ್ನು ಪಾಂಡೇಶ್ವರ ಮಹಿಳಾ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ವೆನ್ಲಾಕ್ ಆಸ್ಪತ್ರೆಯ ಮಹಿಳಾ ಸೆಕ್ಯುರಿಟಿ ಸಿಬ್ಬಂದಿಗೆ ಹಲ್ಲೆ ನಡೆಸಿರುವ ಆರೋಪದ ಮೇರೆಗೆ ಬಂಧಿಸಿದ್ದಾರೆ. ಆಸಿಫ್ ಬುಧವಾರ ಸಂಜೆ ವೆಸ್ಲಾಕ್ ಆಸ್ಪತ್ರೆಗೆ ಇಬ್ಬರು ರೋಗಿಗಳನ್ನು ಕರೆತಂದಿದ್ದರು ಎನ್ನಲಾಗಿದೆ. ಈ ಸಂದರ್ಭ ಸೆಕ್ಯುರಿಟಿ ಗಾರ್ಡ್ ವಾಹನವನ್ನು ಹೊರಗೆ ಒಯ್ಯುವಂತೆ ಸೂಚಿಸಿದಾಗ ತಾನು ರೋಗಿಗಳನ್ನು ಅಡ್ಮಿಷನ್ ಮಾಡಿಸುತ್ತಿದ್ದೇನೆ, ಸ್ವಲ್ಪ ಹೊತ್ತು ಕಾಯಿರಿ ಎಂದು ಆಸಿಫ್ ಹೇಳಿದ್ದಾರೆ. ಆದರೆ ಕೆಲವು ಹೊತ್ತಿನ ಬಳಿಕವೂ ಆ್ಯಂಬುಲೆನ್ಸ್ ತೆರವು ಮಾಡದಿದ್ದಾಗ ಮಹಿಳಾ ಸಿಬ್ಬಂದಿ ಆಕ್ಷೇಪಿಸಿದರು. ಈ ಸಂದರ್ಭ ಆಸಿಫ್ ಮತ್ತು ಮಹಿಳಾ ಸಿಬ್ಬಂದಿಯ ಮಧ್ಯೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ತನ್ನನ್ನು ದೂಡಿ ಹಾಕಿ ಆಸಿಫ್ ಹಲ್ಲೆ ಮಾಡಿದ್ದಾರೆ ಎಂದು ಮಹಿಳಾ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪೊಲೀಸರು ಆಸಿಫ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

Posted by Vidyamaana on 2024-03-23 10:38:46 |

Share: | | | | |


ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ‌ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.

ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 


ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.

ಮಾಣಿ : ಬಜರಂಗದಳ, ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ : ಆಸ್ಪತ್ರೆಗೆ ದಾಖಲು

Posted by Vidyamaana on 2023-05-24 11:48:40 |

Share: | | | | |


ಮಾಣಿ : ಬಜರಂಗದಳ, ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ : ಆಸ್ಪತ್ರೆಗೆ ದಾಖಲು

ಬಂಟ್ವಾಳ : ಬಜರಂಗದಳ, ಬಿಜೆಪಿ ಕಾರ್ಯಕರ್ತರ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಜಗಳ ನಡೆದ ಘಟನೆ ಮಾಣಿಯಲ್ಲಿ ನಡೆದಿದೆ.ಘಟನೆಯಲ್ಲಿ ಪೆರಾಜೆ ಬಜರಂಗದಳ ಸಂಚಾಲಕ ಮಹೇಂದ್ರ ಹಾಗೂ ಬಿಜೆಪಿ ಕಾರ್ಯಕರ್ತ ಪ್ರಶಾಂತ್ ನಾಯ್ಕ್ ಗಾಯಗೊಂಡಿದ್ದು, ಇಬ್ಬರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಚುನಾವಣಾ ಫಲಿತಾಂಶದ ದಿನ ಬಂಟ್ವಾಳ ಶಾಸಕರ ಗೆಲುವಿನ ಹರ್ಷ ಆಚರಣೆ ವೇಳೆ ಪಟಾಕಿ ಸಿಡಿಸಿ ಸಂಭ್ರಮ ಮಾಡುವ ವೇಳೆ ಇದೇ ತಂಡಗಳ ಮಧ್ಯೆ ಗಲಾಟೆ ನಡೆದಿತ್ತು ಎನ್ನಲಾಗಿದೆ.

ಸ್ಥಳಕ್ಕೆ ವಿಟ್ಲ ಪೊಲೀಸರ ತಂಡ ಭೇಟಿ ನೀಡಿ ಪ್ರಕರಣ ದಾಖಲಿಸಿದೆ.

ಹಲ್ಲೆ ನಡೆದದ್ದು ಕಟ್ಟಿಗೆಯಿಂದ, ತಲ್ವಾರಿನಿಂದಲ್ಲ:ಎಸ್ಪಿ‌ ವಿಕ್ರಮ್ ಅಮಟೆ ಸ್ಪಷ್ಟನೆ

ಬಂಟ್ವಾಳ : ಬಜರಂಗದಳ, ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾಣಿಯಲ್ಲಿ ನಡೆದ ಜಗಳದಲ್ಲಿ ಕಟ್ಟಿಗೆಯಿಂದ ಹಲ್ಲೆ ನಡೆಸಲಾಗಿದೆಯೇ ಹೊರತು, ತಲವಾರಿನಿಂದಲ್ಲ ಎಂದು ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ಘಟನೆಯಲ್ಲಿ ಪೆರಾಜೆ ಬಜರಂಗದಳ ಸಂಚಾಲಕ ಮಹೇಂದ್ರ ಹಾಗೂ ಬಿಜೆಪಿ ಕಾರ್ಯಕರ್ತ ಪ್ರಶಾಂತ್ ನಾಯ್ಕ್ ಗಾಯಗೊಂಡಿದ್ದು, ಇಬ್ಬರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚುನಾವಣಾ ಫಲಿತಾಂಶದ ದಿನ ಬಂಟ್ವಾಳ ಶಾಸಕರ ಗೆಲುವಿನ ಹರ್ಷ ಆಚರಣೆ ವೇಳೆ ಪಟಾಕಿ ಸಿಡಿಸಿ ಸಂಭ್ರಮ ಮಾಡುವ ವೇಳೆ ಇದೇ ತಂಡಗಳ ಮಧ್ಯೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರ ತಂಡ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Recent News


Leave a Comment: