ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಯಾಗಿ ಯತೀಶ್ N. IPS ಅಧಿಕಾರ ಸ್ವೀಕಾರ

ಸುದ್ದಿಗಳು News

Posted by vidyamaana on 2024-07-05 10:22:02 |

Share: | | | | |


ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಯಾಗಿ ಯತೀಶ್ N. IPS ಅಧಿಕಾರ ಸ್ವೀಕಾರ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿ ಯತೀಶ್ N. IPS ಇಂದು ಮಂಗಳೂರಿನ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರಿಷ್ಯಂತ್ ಬೆಂಗಳೂರು ವೈರ್ ಲೆಸ್ ವಿಭಾಗದ ಎಸ್ಪಿಯಾಗಿ ವರ್ಗಾವಣೆಯಾಗಿದ್ದರು.

2016 ರ ಕರ್ನಾಟಕ ಕೇಡರ್ ನ IPS ಅಧಿಕಾರಿ ಯತೀಶ್ ಎನ್ ಈ ಹಿಂದೆ ಮಂಡ್ಯ ಎಸ್ಪಿಯಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದರು. ಇನ್ನೂ ಹಲವಾರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

 Share: | | | | |


ಇ-ಕಾಮರ್ಸ್ ಡೆಲಿವರಿ ಬಾಯ್ ಗಳಿಗೊಂದು ಗುಡ್ ನ್ಯೂಸ್ ಇಲ್ಲಿದೆ

Posted by Vidyamaana on 2023-09-12 10:40:54 |

Share: | | | | |


ಇ-ಕಾಮರ್ಸ್ ಡೆಲಿವರಿ ಬಾಯ್ ಗಳಿಗೊಂದು ಗುಡ್ ನ್ಯೂಸ್ ಇಲ್ಲಿದೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ ತಿಂಗಳಲ್ಲಿ 2023-24ನೇ ಸಾಲಿನ ಬಜೆಟ್ ಮಾಡಿದ್ದರು. ಈ ಆಯವ್ಯಯದಲ್ಲಿ ಗಿಗ್​ ಕೆಲಸಗಾರರಿಗೆ ಅಂದರೇ ಸ್ವಿಗ್ಗಿ, ಜೊಮಾಟೊ ಮತ್ತು ಅಮೆಜಾನ್​​ನಂತಹ ಇ-ಕಾಮರ್ಸ್​​ ಡೆಲಿವರಿ ಬಾಯ್​​ಗಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ 4 ಲಕ್ಷ ರೂ. ಜೀವ ಮತ್ತು ಅಪಘಾತ ವಿಮೆಯನ್ನು ಘೋಷಿಸಿದ್ದರು. ಇದೀಗ ಸರ್ಕಾರ ಸೆ.08 ರಂದು ಅಧಿಕೃತ ಸುತ್ತೋಲೆ ಹೊರಡಿಸುವ ಮೂಲಕ ಯೋಜನೆಯನ್ನು ಜಾರಿ ಮಾಡಿದೆ.


2022 ರ ನೀತಿ ಆಯೋಗದ ವರದಿ ಪ್ರಕಾರ ರಾಜ್ಯದಲ್ಲಿ ಅಂದಾಜು 2.3 ಲಕ್ಷ ಗಿಗ್ ಕೆಲಸಗಾರರಿದ್ದಾರೆ. ಆದರೆ ರಾಜ್ಯ ಕಾರ್ಮಿಕ ಇಲಾಖೆಯು ಈ ಬಗ್ಗೆ ಯಾವುದೇ ನಿಖರ ಅಂಕಿ-ಸಂಖ್ಯೆ ಹೊಂದಿಲ್ಲ. ಸರಕು ಮತ್ತು ಸೇವೆಗಳನ್ನು ನಿಗದಿತ ಸಮಯದಲ್ಲಿ ತಲುಪಿಸಲು ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡುವ ಕಾರ್ಮಿಕರ ಭದ್ರತೆಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಪ್ರಯೋಜನ ಪಡೆಯಬೇಕಾದರೇ ಕೆಲವು ಷರತ್ತುಗಳನ್ನು ಸರ್ಕಾರ ವಿಧಿಸಿದೆ. ಅವು ಈ ಕೆಳಗಿನಂತಿದೆ.


ಜೀವ, ಅಪಘಾತ ಜೀವ ವಿಮೆ ಷರತ್ತುಗಳು


►18-60 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಮತ್ತು ಕನಿಷ್ಠ ಒಂದು ವರ್ಷದ ಅವಧಿಯವರೆಗೆ ಯಾವುದೇ ಆನ್‌ಲೈನ್ ಆಹಾರ ವಿತರಣೆ ಅಥವಾ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಕಂಪನಿಯಲ್ಲಿ ಗಿಗ್ ಕೆಲಸಗಾರರಾಗಿ ಕೆಲಸ ಮಾಡುತ್ತಿರಬೇಕು.


►ಅಪಘಾತದಲ್ಲಿ ಮೃತಪಟ್ಟರೇ 4 ಲಕ್ಷ ರೂಪಾಯಿಗಳನ್ನು ಒದಗಿಸಲಾಗುತ್ತದೆ. ಇದರಲ್ಲಿ 2 ಲಕ್ಷ ರೂಪಾಯಿ ಅಪಘಾತ ಕವರೇಜ್ ಕೂಡ ಸೇರಿದೆ. ಒಂದು ವೇಳೆ ಅಪಘಾತದಿಂದ ಗಾಯ ಮತ್ತು ಅಂಗವೈಕಲ್ಯರಾದರೆ ಅದರ ಪ್ರಮಾಣವನ್ನು ಆಧರಿಸಿ ಗಿಗ್ ಕೆಲಸಗಾರರಿಗೆ ಹಣ ನೀಡಲಾಗುತ್ತದೆ.


►ಆಸ್ಪತ್ರೆಗೆ ದಾಖಲಾದರೆ, 1 ಲಕ್ಷದವರೆಗಿನ ಮೊತ್ತವನ್ನು ಮರುಪಾವತಿ ಮಾಡಲಾಗುತ್ತದೆ.


►ಗಿಗ್ ಕಾರ್ಮಿಕರು ಆದಾಯ ತೆರಿಗೆ ಪಾವತಿಸುತ್ತಿದ್ದರೆ, ಭವಿಷ್ಯ ನಿಧಿ ಅಥವಾ ಇಎಸ್‌ಐ ಹೊಂದಿದ್ದರೆ ಹಂತವರು ಯೋಜನೆಗೆ ಅರ್ಹರಾಗಿರುವುದಿಲ್ಲ.


►ಕೆಲಸದಲ್ಲಿರುವಾಗ ಗಿಗ್  ಕಾರ್ಮಿಕ ಮದ್ಯಪಾನ ಅಥವಾ ಡ್ರಗ್ಸ್‌ನ ಅಮಲಿನಲ್ಲಿ ಅಪಘಾತ ಅಥವಾ ಮೃತಪಟ್ಟರೆ ಯೋಜನೆಯ ಪ್ರಯೋಜನಗಳಿಗೆ ಅರ್ಹರಾಗಿರುವುದಿಲ್ಲ.


►ಗಿಗ್ ಕಾರ್ಮಿಕ ಆತ್ಮಹತ್ಯೆಯಿಂದ ಸತ್ತರೆ, ಉದ್ದೇಶಪೂರ್ವಕವಾಗಿ ಯಾರನ್ನಾದರೂ ನೋಯಿಸಲು ಅಪಘಾತದ ಕೃತ್ಯವನ್ನು ಮಾಡಿದರೆ ಅಥವಾ ಮಾನಸಿಕ ಅಸ್ಥಿರತೆಯಿಂದ ಅಪಘಾತ ಸಂಭವಿಸಿದಲ್ಲಿ ಯೋಜನೆಯ ಪ್ರಯೋಜನೆ ಪಡೆಯಲು ಸಾಧ್ಯವಿಲ್ಲ.


►ಅಪಘಾತ ಅಥವಾ ಸಾವಿನ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಬೇಕು.


ಅರ್ಜಿ ಸಲ್ಲಿಸುವುದು ಹೇಗೆ?


►ರಾಜ್ಯ ಸರ್ಕಾರದ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು.


►ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ ಮತ್ತು ಇ-ಲೇಬರ್ ಐಡೆಂಟಿಟಿ ಕಾರ್ಡ್ ಸೇರಿದಂತೆ ವೈಯಕ್ತಿಕ ದಾಖಲೆ ಮತ್ತು ಬ್ಯಾಂಕ್ ಖಾತೆ ವಿವರ ನೀಡಿ ನೋಂದಾಯಿಸಿಬೇಕು.

ಬೆಳ್ತಂಗಡಿ: ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತೆ ಕೌಶಲ್ಯ ವಿಷ ಸೇವಿಸಿ ಆತ್ಮಹತ್ಯೆ.

Posted by Vidyamaana on 2023-04-23 09:29:21 |

Share: | | | | |


ಬೆಳ್ತಂಗಡಿ: ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತೆ ಕೌಶಲ್ಯ  ವಿಷ ಸೇವಿಸಿ ಆತ್ಮಹತ್ಯೆ.

ಬೆಳ್ತಂಗಡಿ: ನವ ವಿವಾಹಿತೆ ಮಹಿಳೆಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿಯ ಇಂದಬೆಟ್ಟುವಿನಲ್ಲಿ ನಡೆದಿದೆ.ಇಂದಬೆಟ್ಟು ಗ್ರಾಮದ ಕೊಪ್ಪದಕೋಡಿ ನಿವಾಸಿ ದೇವಕಿಯವರ ಪುತ್ರಿ ಕೌಶಲ್ಯ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ,

ಕೌಶಲ್ಯ ಅವರು ಇತ್ತೀಚೆಗಷ್ಟೇ ನೆರೆಯ ಸೂರ್ಯಬೆಟ್ಟು ನಿವಾಸಿ ಜೊತೆ ಪ್ರೀತಿಸಿ ಮದುವೆಯಾಗಿದ್ದರು. ಎರಡು ದಿನಗಳ ಹಿಂದೆ ವಿಷ ಸೇವಿಸಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿಸದುಬಂದಿಲ್ಲ. ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

9000ಕ್ಕೂ ಮಿಕ್ಕಿ ಪೋಸ್ಟ್ ಮಾರ್ಟಂ ಮಾಡಿದ ಗುತ್ತಿಗೆ ನೌಕರನ ವಿರುದ್ಧ ಆರೋಪ ಹಿನ್ನಲೆ

Posted by Vidyamaana on 2023-06-17 13:09:32 |

Share: | | | | |


9000ಕ್ಕೂ ಮಿಕ್ಕಿ ಪೋಸ್ಟ್ ಮಾರ್ಟಂ ಮಾಡಿದ ಗುತ್ತಿಗೆ ನೌಕರನ ವಿರುದ್ಧ  ಆರೋಪ ಹಿನ್ನಲೆ

ಪುತ್ತೂರು: ಕಳೆದ 23 ವರ್ಷಗಳಿಂದ ಪೋಸ್ಟ್ ಮಾರ್ಟಂ ನಡೆಸುವುದೇ ವೃತ್ತಿ. ಇದುವರೆಗೆ ಮಾಡಿರುವ ಪೋಸ್ಟ್ ಮಾರ್ಟಂಗಳ ಸಂಖ್ಯೆ 9000ಕ್ಕೂ ಮಿಕ್ಕಿ. ಹಾಗಿದ್ದರೂ ಇವರ ವಿರುದ್ಧ ಹೀಗೊಂದು ವಿಚಿತ್ರ ಆರೋಪ ಮಾಡುವುದೇ?

ಲಂಚ, ಭ್ರಷ್ಟಾಚಾರ ತಾಂಡವವಾಡುವ ದಿನಗಳಲ್ಲಿ ಪೋಸ್ಟ್ ಮಾರ್ಟಂಗಾಗಿ ೧೦೦-೨೦೦ ರೂಪಾಯಿ ನೀಡಿದರೆಂದು ಸಂಘಟನೆಯೊಂದು ಮಾಡಿದ್ದ ದೂರಿನ ಆಧಾರದಲ್ಲಿ ಮಾಧ್ಯಮಗಳು ವರದಿ ಪ್ರಕಟಿಸಿದ್ದವು. ಇದನ್ನು ಖಂಡಿಸಿ ಶನಿವಾರ ಪ್ರತಿಭಟನೆ ನಡೆಸಿದ ಪುತ್ತೂರು ಸರ್ಕಾರಿ ಆಸ್ಪತ್ರೆಯ ಹೊರಗುತ್ತಿಗೆ ಸಿಬ್ಬಂದಿಗಳು, "ಆರೋಪ ಮಾಡಿದವರೇ ಬಂದು ಪೋಸ್ಟ್ ಮಾರ್ಟಂ ನಡೆಸಲಿ" ಎಂದು ಕುಳಿತೇಬಿಟ್ಟರು. ಅಷ್ಟರಲ್ಲಿ ಬೆನ್ನು ಬೆನ್ನಿಗೇ ಆಗಮಿಸಿದ ಎರಡು ಶವಗಳು ಶವಾಗಾರದಲ್ಲೇ ಬಾಕಿಯಾದವು. ಪರಿಸ್ಥಿತಿ ಬಿಗಡಾಯಿಸಿರುವುದನ್ನು ಕಂಡ ಅಧಿಕಾರಿಗಳು ಮಧ್ಯಪ್ರವೇಶಿಸಿದರು. ಸಿಬ್ಬಂದಿಗಳನ್ನು ಸಮಾಧಾನಿಸಿ, ಪೋಸ್ಟ್ ಮಾರ್ಟಂ ನಡೆಸಲು ಮನವೊಲಿಸಿದರು. ಶವ ತೆಗೆದುಕೊಂಡು ಬಂದ‌ ಮನೆಯವರ ಪರಿಸ್ಥಿತಿ ಅರ್ಥ ಮಾಡಿಕೊಂಡ ಆಸ್ಪತ್ರೆ ಸಿಬ್ಬಂದಿ ಪೋಸ್ಟ್ ಮಾರ್ಟಂ ನಡೆಸಿಕೊಟ್ಟರು.


ಕಾದ ಶವಗಳು:

ಸಿಬ್ಬಂದಿಗಳ ಹಠಾತ್ ಪ್ರತಿಭಟನೆಯಿಂದ ಎರಡು ಶವಗಳು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಕಾದು ಕುಳಿತ ಪ್ರಸಂಗವೂ ಇದೇ ಸಂದರ್ಭ ನಡೆಯಿತು. ಮರಣೋತ್ತರ ಪರೀಕ್ಷೆಗೆ ಬಂದಿದ್ದ ಉಪ್ಪಿನಂಗಡಿ ಹಾಗೂ ಬೆಳ್ಳಾರೆ ಠಾಣಾ ವ್ಯಾಪ್ತಿಯ ಎರಡು ಶವಗಳನ್ನು ಶವಾಗಾರದಲ್ಲಿ ಇಡಲಾಗಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಹಾಗೂ ಡಾ. ಯತಿರಾಜ್‌ ಅವರು ಘಟನಾ ಸ್ಥಳಕ್ಕೆ  ಭೇಟಿ ನೀಡಿ ಮರಣೋತ್ತರ ಪರೀಕ್ಷೆಯನ್ನು ನಡೆಸುವ ಗುತ್ತಿಗೆ ನೌಕರರಲ್ಲಿ ಮಾತುಕತೆ ನಡೆಸಿ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು. ಆ ಬಳಿಕ ಬೆಳ್ಳಾರೆ ಹಾಗೂ ಉಪ್ಪಿನಂಗಡಿಯಿಂದ ಬಂದಿದ್ದ ಶವಗಳ ಮರಣೋತ್ತರ ಪರೀಕ್ಷೆಯನ್ನು ವೈದ್ಯರು ಹಾಗೂ ಹೊರ ಗುತ್ತಿಗೆ ಸಿಬ್ಬಂದಿಗಳು ನಡೆಸಿ ಮೃತ ದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದರು.

ಪುತ್ತೂರು ಬೆಥನಿ ಶಾಲಾ ವಿದ್ಯಾರ್ಥಿನಿ ಫಾತಿಮಾ ಅಫ್ನಾ ನಾಪತ್ತೆ

Posted by Vidyamaana on 2024-02-01 18:21:30 |

Share: | | | | |


ಪುತ್ತೂರು ಬೆಥನಿ ಶಾಲಾ ವಿದ್ಯಾರ್ಥಿನಿ ಫಾತಿಮಾ ಅಫ್ನಾ ನಾಪತ್ತೆ

ಪುತ್ತೂರು: ಇಲ್ಲಿನ ಬೆಥನಿ ಪ್ರಾಥಮಿಕ ಶಾಲೆಯ ವಿದ್ಯಾರ್ಥೀನಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.

ನಾಪತ್ತೆಯಾಗಿರುವ ಬಾಲಕಿಯನ್ನು ಫಾತಿಮಾ ಅಫ್ನಾ ಎಂದು ಗುರುತಿಸಲಾಗಿದೆ.

ಭಾವಚಿತ್ರದಲ್ಲಿರುವ ಬಾಲಕಿ ಸಿಕ್ಕಿದಲ್ಲಿ ಮಾಹಿತಿ ನೀಡಲು ಸಂಪರ್ಕಿಸಿ 7899860151.

ಅಹಿಂಸೆಯನ್ನು ಪ್ರತಿಪಾದಿಸುವ ಜೈನ ಮುನಿಗಳ ಹತ್ಯೆ ಘನಘೋರ ಕೃತ್ಯ

Posted by Vidyamaana on 2023-07-10 16:52:13 |

Share: | | | | |


ಅಹಿಂಸೆಯನ್ನು ಪ್ರತಿಪಾದಿಸುವ ಜೈನ ಮುನಿಗಳ ಹತ್ಯೆ ಘನಘೋರ ಕೃತ್ಯ

ಮಂಗಳೂರು;ಅಹಿಂಸಾ ತತ್ವದ ಜೈನ ಮುನಿ ಧಾರ್ಮಿಕ ಆಚಾರ್ಯ  ಕಾಮಕುಮಾರ ನಂದಿ ಮಹಾರಾಜ ಸ್ವಾಮೀಜಿಗಳ ಬೀಬತ್ಸ  ಹತ್ಯೆಯು ಇಡೀ ಮಾನವ ಕುಲಕ್ಕೆ ಕಪ್ಪು ಚುಕ್ಕೆಯಾಗಿದ್ದು ಇದು ಅಮನವೀಯವೂ  ರಾಕ್ಷಸೀಯವೂ ಆದ ಕೃತ್ಯವಾಗಿದೆ.

ಈ ಕ್ರೂರ ಕೃತ್ಯವೆಸಗಿದ ರಾಕ್ಷಸರನ್ನು ಜಾತಿ ಧರ್ಮದ ಹಂಗಿಗೆ ಒಳಗಾಗದೇ ಮರಣ ದಂಡನೆಯಂತಹ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕೆಂದು ರಾಜ್ಯ ದಾರಿಮಿ ಉಲಮಾ ಒಕ್ಕೂಟ ಸರಕಾರವನ್ನು ಒತ್ತಾಯಿಸಿದೆ.

ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೇ ಇದರ ಹಿಂದಿರುವ ಎಲ್ಲಾ ಷಡ್ಯಂತ್ರವನ್ನು ಬಯಲಿಗೆಳೆದು ನ್ಯಾಯಯುತವಾದ ತನಿಖೆ ನಡೆಸಿ ಜನರ ಗೊಂದಲವನ್ನು ನಿವಾರಿಸ ಬೇಕಾಗಿದೆ. 

ಇಂತಹ ಕ್ರೂರ ಕೃತ್ಯಗಳಿಂದಾಗಿ ಇಡೀ ದೇಶದ ಮಾನ ಹರಾಜಾಗುತ್ತಿದ್ದು ಇದನ್ನು ಸ್ವಾರ್ಥ ರಾಜಕೀಯಕ್ಕೆ ಬಳಸಿಕೊಳ್ಳದೇ ಮುಂದೆ ಇಂತಹ ಕೃತ್ಯಗಳು ಮರುಕಳಿಸದಂತೆ ನೋಡಿ ಕೊಳ್ಳ ಬೇಕಾದ ಕಾನೂನು ಕ್ರಮಗಳನ್ನು ತೆಗೆದು ಕೊಳ್ಳಲು ಪಕ್ಷ ಭೇದ ಮೆರೆತು ಒತ್ತಾಯಿಸ ಬೇಕಿದೆ ಎಂದು ದಾರಿಮಿ ಒಕ್ಕೂಟ ಅಭಿಪ್ರಾಯ ಪಟ್ಟಿದೆ ಎಂದು ಸಮಿತಿಯ ಅಧ್ಯಕ್ಷ ಎಸ್ ಬಿ ದಾರಿಮಿ,ಕಾರ್ಯದರ್ಶಿ ಯುಕೆ ದಾರಿಮಿ,ಕೋಶಾಧಿಕಾರಿ ಹುಸೈನ್ ದಾರಿಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಮಗನನ್ನೇ ಹೊಡೆದು ಕೊಂದ ತಂದೆ!

Posted by Vidyamaana on 2023-04-05 03:18:22 |

Share: | | | | |


ಮಗನನ್ನೇ ಹೊಡೆದು ಕೊಂದ ತಂದೆ!

ಸುಳ್ಯ :  ಮೊಗ್ರ ಏರಣಗುಡ್ಡೆಯ ಮಾತೃ ಮಜಲು ನಿವಾಸಿ ಶೀನ ಮತ್ತು  ಮಗ ಶಿವರಾಮ ಎಂಬವರಿಗೂ ನಿನ್ನೆ ರಾತ್ರಿ 12 ಗಂಟೆಗೆ ಕೋಳಿ ಪದಾರ್ಥದ ವಿಚಾರವಾಗಿ ಜಗಳ ಆರಂಭವಾಯಿತು. ಶಿವರಾಮ ರಾತ್ರಿ ಮನೆಗೆ ಬರುವಾಗ ಕೋಳಿ ಪದಾರ್ಥ ಖಾಲಿ ಆಗಿತ್ತೆನ್ನಲಾಗಿದೆ. ಇದನ್ನು ಆಕ್ಷೇಪಿಸಿ ಆತ ಮಾತನಾಡತೊಡಗಿದಾಗ ತಂದೆ ಶೀನರಿಗೂ ಆತನಿಗೂ ಜಗಳ ಆರಂಭವಾಯಿತು. ಕೋಪಗೊಂಡ ಶೀನ ಬಡಿಗೆಯಿಂದ ಮಗನ ತಲೆಗೆ ಹೊಡೆದರೆನ್ನಲಾಗಿದೆ. ಏಟು ಬಲವಾಗಿ ಬಿದ್ದು ತಲೆಯ ಬುರುಡೆ ಒಡೆಯಿತು. ಪರಿಣಾಮವಾಗಿ ಶಿವರಾಮ ಸ್ಥಳದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದನೆನ್ನಲಾಗಿದೆ.

ವಿಷಯ ತಿಳಿದು ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಶೀನನನ್ನು ಬಂಧಿಸಿದ್ದಾರೆ. ಶಿವರಾಮರ ಮೃತ ದೇಹವನ್ನು ಕಡಬ ಆಸ್ಪತ್ರೆಗೆ ಕೊಂಡಯ್ಯಲಾಗಿದೆ.

 ಮೃತ  ಶಿವರಾಮ (32) ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ.

Recent News


Leave a Comment: