ಇಂದಿನಿಂದ ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ :ರಾಜ್ಯ ಸರ್ಕಾರ ಆದೇಶ

ಸುದ್ದಿಗಳು News

Posted by vidyamaana on 2024-07-05 17:43:40 |

Share: | | | | |


ಇಂದಿನಿಂದ ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ :ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ಇಂದಿನಿಂದ ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ ಮಾಡಿ ರಾಜ್ಯ ಸರ್ಕಾರ ಖಡಕ್ ಆದೇಶ ಹೊರಡಿಸಿದೆ .ಈ ಮೂಲಕ ಆಟೋ, ಕ್ಯಾಬ್ ಚಾಲಕರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.ಕಳೆದ ವರ್ಷ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸುವಂತೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಲಾಗಿತ್ತು.

ಈ ವೇಳೆ ಸರ್ಕಾರದಿಂದ ಎಲ್ಲ ಮಾದರಿಯ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಆದರೂ, ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಮಾಡಲಾಗುತ್ತಿದೆ.ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ ಮಾಡುವಂತೆ ಸಾರಿಗೆ ಸಂಘಟನೆಗಳು ಸರ್ಕಾರಕ್ಕೆ ಹಲವು ಬಾರಿ ಒತ್ತಾಯಿಸಿತ್ತು ಸಾರಿಗೆ ಸಂಘಟನೆಗಳ ಮನವಿ ಬೆನ್ನಲ್ಲೇ ಸಾರಿಗೆ ಇಲಾಖೆ ಅಧಿಕಾರಿಗಳು ಅನಧಿಕೃತ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ವಿರುದ್ದ ಕ್ರಮಕ್ಕೆ ಮುಂದಾಗಿದೆ.

ಈ ಹಿನ್ನೆಲೆ ಸಾರಿಗೆ ಅಧಿಕಾರಿಗಳು ನಗರದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೀಜ್ ಮಾಡಲು ಮುಂದಾಗಿದ್ದು. 11 ತಂಡವನ್ನು ರಚಿಸಿ ಆರ್ಟಿಓ ಅಧಿಕಾರಿಗಳ ನೇತೃತ್ವದಲ್ಲಿ ಸೀಜ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.ರಾಜ್ಯಾದ್ಯಂತ ಜು.5ರಿಂದ ಕಡ್ಡಾಯವಾಗಿ ಎಲೆಕ್ಟ್‌ಇಕ್ ಬೈಕ್ ಟ್ಯಾಕ್ಸಿಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಒಂದು ವೇಳೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಕಂಡುಬಂದಲ್ಲಿ ಕೂಡಲೇ ಅವುಗಳನ್ನು ಜಪ್ತಿ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

 Share: | | | | |


ಏ. 19ರಂದು (ಇಂದು ) ಜೈಲಿನಿಂದಲೇ SDPI ಅಭ್ಯರ್ಥಿ ಯಾಗಿ ಶಾಫಿ ನಾಮಪತ್ರ ಸಲ್ಲಿಕೆ

Posted by Vidyamaana on 2023-04-18 14:30:38 |

Share: | | | | |


ಏ. 19ರಂದು (ಇಂದು ) ಜೈಲಿನಿಂದಲೇ SDPI ಅಭ್ಯರ್ಥಿ ಯಾಗಿ ಶಾಫಿ ನಾಮಪತ್ರ ಸಲ್ಲಿಕೆ

ಪುತ್ತೂರು: ಎಸ್.ಡಿ.ಪಿ.ಐ. ಅಭ್ಯರ್ಥಿಯಾಗಿ ಶಾಫಿ ಬೆಳ್ಳಾರೆ ಏ. 19ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಇದರಲ್ಲೇನು ವಿಶೇಷ ಅಂತೀರಾ? ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿಯೇ ಇರುವುದಿಲ್ಲ ಎನ್ನುವುದೇ ಇಲ್ಲಿನ‌ ವಿಶೇಷ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಶಾಫಿ ಬೆಳ್ಳಾರೆ, ಪುತ್ತೂರು ಎಸ್.ಡಿ.ಪಿ.ಐ. ಅಭ್ಯರ್ಥಿ.   ಶಾಫಿ ಬೆಳ್ಳಾರೆ ಯವರ ಪರವಾಗಿ ಎಲೆಕ್ಷನ್ ಏಜೆಂಟ್ ಅಬ್ದುಲ್ ರಹಿಮಾನ್ ನಾಮಪತ್ರ ಸಲ್ಲಿಸಲಿದ್ದಾರೆ.

    ಈ ಸಂದರ್ಭದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ನಾಯಕರುಗಳಾದ  ರಿಯಾಜ್ ಪರಂಗಿಪೇಟೆ, ಅಲ್ಪಾನ್ಸ್ ಫ್ರಾಂಕೋ, ಅಬ್ದುಲ್ ಲತೀಫ್, ಅಬ್ದುಲ್ ಮಜೀದ್, ರಿಯಾಜ್ ಕಡಂಬು, ಅನ್ವರ್ ಸಾದಾತ್, ಇಬ್ರಾಹಿಂ ಸಾಗರ್ ಮೊದಲಾದವರು ಆಗಮಿಸಲಿದ್ದಾರೆ.

    ಎಪಿಎಂಸಿ ರಸ್ತೆಯಲ್ಲಿರುವ ಪಕ್ಷದ ಕಚೇರಿಯಿಂದ ಕಾಲ್ನಡಿಗೆ ಮೆರವಣಿಗೆ ಮೂಲಕ ತಾಲೂಕು ಆಡಳಿತ ಸೌಧಕ್ಕೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ ತಿಳಿದು ಬಂದಿದೆ.

BREAKING : ಕೌಟುಂಬಿಕ ಕಲಹದ ಹಿನ್ನೆಲೆ ಬಾಮೈದನನ್ನು ಭೀಕರವಾಗಿ ಹತ್ಯೆಗೈದ ಭಾವ

Posted by Vidyamaana on 2024-04-09 22:58:30 |

Share: | | | | |


BREAKING : ಕೌಟುಂಬಿಕ ಕಲಹದ ಹಿನ್ನೆಲೆ ಬಾಮೈದನನ್ನು ಭೀಕರವಾಗಿ ಹತ್ಯೆಗೈದ ಭಾವ

ಬೆಂಗಳೂರು : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಭಾವನಿಂದ ಭಾಮೈದನ ಹತ್ಯೆಗೆ ಈಡಗಿರುವ ಘಟನೆ ಬೆಂಗಳೂರಿನ ವೆಂಕಟೇಶಪುರದಲ್ಲಿ ನಡೆದಿದೆ.ಹೌದು ಕಿರಣ್ ಕುಮಾರ್ (32) ಹತ್ಯೆಗೆ ಈಡಾದ ವ್ಯಕ್ತಿಯಾಗಿದ್ದಾನೆ.ಚಾಕುವಿನಿಂದ ಇರಿದು ಭಾಮೈದನನ್ನು ಭಾವ ಲಕ್ಷ್ಮಣ ಎನ್ನುವವರು ಭೀಕರವಾಗಿ ಹತ್ಯೆಗೈದಿದ್ದಾರೆ.

ಹೆಂಡತಿ, ಮಕ್ಕಳನ್ನು ಕೊಂದು ರೈಲ್ವೆ ವೈದ್ಯನ ಆತ್ಮಹತ್ಯೆ

Posted by Vidyamaana on 2023-12-06 19:56:10 |

Share: | | | | |


ಹೆಂಡತಿ, ಮಕ್ಕಳನ್ನು ಕೊಂದು ರೈಲ್ವೆ ವೈದ್ಯನ ಆತ್ಮಹತ್ಯೆ

ಲಕ್ನೋ, ಡಿ 06: ರೈಲ್ವೇಸ್‌ನಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರೊಬ್ಬರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ರಾಯ್ ಬರೇಲಿಯ ರೈಲ್ವೇಸ್ ಕಾಲೋನಿಯಲ್ಲಿ ನಡೆದಿದೆ.


ರೈಲ್ವೇಯಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕಣ್ಣಿನ ತಜ್ಞ ಡಾ.ಅರುಣ್ ಕುಮಾರ್ ಅವರನ್ನು ರಾಯ್ ಬರೇಲಿಯಲ್ಲಿರುವ ಮಾಡರ್ನ್ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು ಎನ್ನಲಾಗಿದೆ.


ಮಿರ್ಜಾಪುರದ ನಿವಾಸಿಯಾಗಿರುವ ಡಾ.ಕುಮಾರ್ ಅವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ರಾಯ್ ಬರೇಲಿಯ ರೈಲ್ವೇ ಕ್ವಾರ್ಟರ್ಸ್‌ನಲ್ಲಿ ವಾಸವಾಗಿದ್ದರು.


ಕಳೆದ ಭಾನುವಾರ ನೆರೆಹೊರೆಯವರಿಗೆ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ ಆ ಬಳಿಕ ಯಾರ ಕಣ್ಣಿಗೂ ಈ ಕುಟುಂಬ ಸದಸ್ಯರು ಕಾಣಲಿಲ್ಲ ಇದರಿಂದ ಅನುಮಾನಗೊಂಡ ಅಕ್ಕಪಕ್ಕದ ಮನೆಯವರು ಹಾಗೂ ವೈದ್ಯರ ಸಹೋದ್ಯೋಗಿಗಳು ಮನೆಯ ಬಳಿ ಬಂದು ಬೆಲ್ ಮಾಡಿದ್ದಾರೆ ಆದರೆ ಮನೆಯ ಒಳಗಿಂದ ಯಾವುದೇ ಸದ್ದು ಕೇಳಿಸಲಿಲ್ಲ ಆದರೆ ಮನೆಯ ಒಳಗಿನಿಂದ ಬಾಗಿಲು ಹಾಕಿತ್ತು ಇದನ್ನು ಕಂಡು ಸಂಶಗೊಂಡ ಸಹೋದ್ಯೋಗಿಗಳು ಮನೆಯ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಒಳಗೆ ವೈದ್ಯ, ಅವರ ಪತ್ನಿ ಅರ್ಚನಾ, ಮಗಳು ಆದಿವಾ (12) ಮತ್ತು ಮಗ ಆರವ್ (4) ಅವರ ಮೃತದೇಹ ಪತ್ತೆಯಾಗಿದೆ.


ಆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಮೃತದೇಹದ ಬಳಿ ಸುತ್ತಿಗೆ, ರಕ್ತದ ಕಲೆಗಳು ಮತ್ತು ಡ್ರಗ್ ಇಂಜೆಕ್ಷನ್‌ಗಳು ಪತ್ತೆಯಾಗಿದ್ದು ಪೊಲೀಸರ ಮಾಹಿತಿಯಂತೆ ವೈದ್ಯರು ಮೊದಲು ಮಕ್ಕಳು ಹಾಗೂ ಪತ್ನಿಗೆ ಅಮಲು ಬರುವ ಇಂಜೆಕ್ಷನ್ ನೀಡಿ ಬಳಿಕ ಸುತ್ತಿಗೆಯಿಂದ ಹಲ್ಲೆ ನಡೆಸಿ ಹತ್ಯೆಗೈದಿರಬೇಕು ಆ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣುತ್ತಿದ್ದು ಮರಣೋತ್ತರ ಪರೀಕ್ಷೆಯ ಬಳಿಕ ಹೆಚ್ಚಿನ ವಿವರ ಸಿಗಲಿದೆ ಎಂದು ರಾಯ್ ಬರೇಲಿ ಎಸ್ಪಿ ಅಲೋಕ್ ಪ್ರಿಯದರ್ಶಿ ಹೇಳಿದ್ದಾರೆ.


ನೆರೆಹೊರೆಯವರ ಪ್ರಕಾರ ಕೌಟುಂಬಿಕ ಸಮಸ್ಯೆ ಇದ್ದಿರಬಹುದು ಆದರೆ ರೋಗಿಗಳಿಗೆ ಮತ್ತು ನೆರೆಹೊರೆಯವರೊಂದಿಗೆ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು ಕೆಲವೊಮ್ಮೆ ಕೋಪಗೊಳ್ಳುತ್ತಿದ್ದರು ಖಿನ್ನತೆಗೆ ಒಳಗಾಗುತ್ತಿದ್ದರು ಇದೇ ಖಿನ್ನತೆಯಿಂದ ಈ ರೀತಿಯ ಕೃತ್ಯ ಎಸಗಿರಲು ಬಹುದು ಎಂದು ಸ್ಥಳೀಯರು ಹೇಳಿದ್ದಾರೆ.

ಉಳ್ಳಾಲ : ಮೊಬೈಲ್ ನೋಡಿಕೊಂಡೇ ಬಸ್ ಚಲಾಯಿಸಿದ ಚಾಲಕ-ವೀಡಿಯೋ ವೈರಲ್

Posted by Vidyamaana on 2023-07-23 16:38:04 |

Share: | | | | |


ಉಳ್ಳಾಲ : ಮೊಬೈಲ್ ನೋಡಿಕೊಂಡೇ ಬಸ್ ಚಲಾಯಿಸಿದ ಚಾಲಕ-ವೀಡಿಯೋ ವೈರಲ್

ಉಳ್ಳಾಲ : ಸ್ಟೇಟ್ ಬ್ಯಾಂಕ್ -ತಲಪಾಡಿ ನಡುವೆ ಚಲಿಸುವ ಸಿಟಿ ಬಸ್ ಚಾಲಕ ಚಾಲನೆ ವೇಳೆ ಮೊಬೈಲ್ ಉಪಯೋಗಿಸುತ್ತಿರುವುದನ್ನು ಪ್ರಯಾಣಿಕರೊಬ್ಬರು ಸೆರೆಹಿಡಿದಿರುವುದು, ಇದೀಗ ವೈರಲ್ ಆಗಿದೆ. ಸಾರ್ವಜನಿಕ ವಲಯದಿಂದ ಚಾಲಕನ ವಿರುದ್ಧ ಕ್ರಮಕ್ಕಾಗಿ ಆಗ್ರಹ ವ್ಯಕ್ತವಾಗಿದೆ.42 ನಂಬರಿನ ಸೈಂಟ್ ಆಂಟನಿ ಬಸ್ ಚಾಲಕ ನಿರ್ಲಕ್ಷ್ಯ ರೀತಿಯಲ್ಲಿ ಬಸ್ ಚಲಾಯಿಸಿದ್ದಾನೆ. ನೇತ್ರಾವತಿ ಸೇತುವೆಯಿಂದ ಮೊಬೈಲ್ ನೋಡಲು ಆರಂಭಿಸಿದ ಚಾಲಕ ತೊಕ್ಕೊಟ್ಟು ವರೆಗೂ , ಒಂದು ಕೈಯಲ್ಲಿ ಸ್ಟೇರಿಂಗ್, ಇನ್ನೊಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಬೇಜವಾಬ್ದಾರಿಯುತ ವಾಗಿ ಬಸ್ಸನ್ನು ಚಲಾಯಿಸಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.


ಬಸ್ಸಲ್ಲಿ ಅಧಿಕ ಪ್ರಯಾಣಿಕರೂ ಇದ್ದರು ಎಂಬುದನ್ನು ಪ್ರಯಾಣಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಸ್ತೆಗಿಂತ ಹೆಚ್ಚಾಗಿ ಮೊಬೈಲನ್ನೇ ಚಾಲಕ ವೀಕ್ಷಿಸುತ್ತಿರುವುದು ಅನಾಹುತ ಆಹ್ವಾನಿಸುತ್ತಿದೆ.


ಸಾರಿಗೆ ಅಧಿಕಾರಿಗಳು ಬಸ್ ಪರ್ಮಿಟ್ ರದ್ದುಗೊಳಿಸಬೇಕು ಹಾಗೂ ಸಂಚಾರಿ ಪೊಲೀಸರು ಚಾಲಕನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.117 (ಐಎಂವಿ) ಮೋಟಾರ್ ಆಕ್ಟ್ ನಡಿ ಸಿಟಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಪ್ರಸ್ತುತ ಕಾಯಿದೆಯಡಿ ಲೈಸನ್ಸ್ ರದ್ದುಗೊಳಿಸುವುದು ಹಾಗೂ ದಂಡ ವಿಧಿಸಲಾಗುವುದು. ಸಾರ್ವಜನಿಕವಾಗಿ ವೀಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ಇಲಾಖೆ ಪ್ರಕರಣ ದಾಖಲಿಸಲಾಗುವುದು’ ಎಂದು ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ರಮೇಶ್ ಹಾನಾಪುರ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಇದೊಂದು ಹುಚ್ಚು ಶುರುವಾಗಿದೆ

Posted by Vidyamaana on 2023-09-07 11:23:04 |

Share: | | | | |


ಇತ್ತೀಚಿನ ದಿನಗಳಲ್ಲಿ ಇದೊಂದು ಹುಚ್ಚು ಶುರುವಾಗಿದೆ

ಪುತ್ತೂರು: ಹಿಂದೂ ಧರ್ಮದ ಬಗ್ಗೆ ಗೃಹಸಚಿವ ವಿವಾದಾತ್ಮಕ ಜಿ. ಪರಮೇಶ್ವರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪುತ್ತೂರಿನಲ್ಲಿ ಪ್ರತಿಕ್ರಿಯಿಸಿದ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ‌ ಭಟ್ ಪ್ರತಿಕ್ರಿಯೆ ನೀಡಿದ್ದಾರೆ.


ಇತ್ತೀಚಿನ ದಿನಗಳಲ್ಲಿ ಇದೊಂದು ಹುಚ್ಚು ಶುರುವಾಗಿದೆ. ಸನಾತನ ಧರ್ಮದ ಬಗ್ಗೆ ದೂಷಣೆ ಮಾಡಿದರೆ ಅಲ್ಪಸಂಖ್ಯಾತರ ಮತ ಸಿಗುತ್ತದೆ. ಅಧಿಕಾರಿ ಸಿಗುತ್ತೆ ಅನ್ನುವ ಕಾರಣಕ್ಕೆ ಈ ರೀತಿ ಹೇಳಿಕೆ ನೀಡುತ್ತಾರೆ. ಹಿಂದೂ ಧರ್ಮದ ಹುಟ್ಟು ಗೊತ್ತಿಲ್ಲದ ಪರಮೇಶ್ವರ್ ಅವರ ಹೆಸರನ್ನು ಇಸ್ಮಾಯಿಲ್ ಅಂತ ಯಾಕೆ ಇಟ್ಟುಕೊಂಡಿಲ್ಲ. ಸ್ಟಾಲಿನ್ ಎಂದು ಹೆಸರು ಇಟ್ಟುಕೊಳ್ಳುಬಹುದಿತ್ತಲ್ಲವೇ ಎಂದು ಪ್ರಶ್ನಿಸಿದ್ದಾರೆ.


ಇದ್ದ ದೇವಸ್ಥಾನಕ್ಕೆಲ್ಲಾ ಭೇಟಿ ನೀಡುವ ಪರಮೇಶ್ವರ್ ,ದೇವಸ್ಥಾನದ ಹೊರಗೆ ಬಂದ ಬಳಿಕ ಈ ರೀತಿ ಹೇಳಿಕೆ ನೀಡುತ್ತಾರೆ. ಸನಾತನ ಧರ್ಮದ ಹುಟ್ಟು ಯಾರಿಗೂ ತಿಳಿದಿಲ್ಲ. ಸನಾತನ ಧರ್ಮಕ್ಕೆ ಹುಟ್ಟೂ ಇಲ್ಲ, ನಾಶವೂ ಇಲ್ಲ. ಕ್ರಿಶ್ಚಿಯನ್, ಇಸ್ಲಾಂ ಮತ ಇತ್ತೀಚೆಗೆ ಹುಟ್ಟಿರುವ ಮತಗಳು. ಸನಾತನ ಧರ್ಮ ನಿತ್ಯ ನೂತನವಾದ ಧರ್ಮ.


ಎಲ್ಲಾ ಕಾಲಕ್ಕೂ ,ಎಲ್ಲವನ್ನೂ ಒಪ್ಪಿಕೊಳ್ಳುವ ಧರ್ಮ. ಕಾಲಕ್ಕೆ ತಕ್ಕಂತೆ ತನ್ನಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಕಾಶವಿರುವ ಧರ್ಮ. ಹಿಂದೆ ಹಿಂದು ಧರ್ಮದಲ್ಲಿದ್ದ ಬಾಲ್ಯವಿವಾಹ, ವರದಕ್ಷಿಣೆ ಮೊದಲಾದ ಪಿಡುಗನ್ನು ತೆಗೆದು ಹಾಕಲಾಗಿದೆ. ಮೂಢನಂಬಿಕೆಯನ್ನು ತೊಡೆದು‌ ಹಾಕುವ ಕೆಲಸವನ್ನು ಮಹಾಪುರುಷರು ಮಾಡಿದ್ದಾರೆ. ಈಗಿರುವ ಕೆಲವು ಆಚಾರಗಳನ್ನೂ ಬದಲಾಯಿಸಲಾಗುತ್ತದೆ.


ಆ ಬದಲಾವಣೆಯನ್ನು ನಾವು ಮಾಡುತ್ತೇವೆ. ಆದರೆ ಇಸ್ಲಾಂ ಮತ್ತು ಕ್ರಿಶ್ಚಿಯನ್ ಮತದಲ್ಲಿ ಈ ಅವಕಾಶವಿಲ್ಲ. ಆ ಕಾರಣಕ್ಕಾಗಿಯೇ ಆ ಮತದ ಜನರೇ ಮತವನ್ನು ಒಪ್ಪಿಕೊಳ್ಳುತ್ತಿಲ್ಲ. ಅಮೇರಿಕಾ ಮತ್ತು ಬ್ರಿಟನ್ ನಲ್ಲಿ ಚರ್ಚುಗಳಿಗೆ ಜನ ಬರುತ್ತಿಲ್ಲ. ಆ ಕಾರಣಕ್ಕಾಗಿ ಅಲ್ಲಿ ಚರ್ಚುಗಳನ್ನು ಹರಾಜಿಗೆ ಇಡುತ್ತಿದ್ದಾರೆ. ಚಂದ್ರನ ಬಗ್ಗೆ ಸನಾತನ ಧರ್ಮದಲ್ಲಿ ಉಲ್ಲೇಖವಿದೆ. ಅಲ್ಲಿನ ಕೃಷ್ಣ ಪರ್ವ, ಶ್ವೇತ ಪರ್ವದ ಉಲ್ಲೇಖವಿದೆ. ಆ ಸತ್ಯ ಇದೀಗ ಚಂದ್ರಯಾನ-3 ಉಡಾವಣೆ ಯಶಸ್ವಿಯಾದಾಗ ಬೆಳಕಿಗೆ ಬಂದಿದೆ. ಸನಾತನ ಧರ್ಮ ಮತ್ತು ವಿಜ್ಞಾನ ಪರಸ್ಪರ ಒಪ್ಪಿಕೊಂಡಿದೆ. ಹಿಂದೂ ಧರ್ಮ ಮತ್ತು ವಿಜ್ಞಾನ ಒಟ್ಟೊಟ್ಟಿಗೆ ಹೋಗುತ್ತದೆ.


ಸನಾತನ ಧರ್ಮದ ಬಗ್ಗೆ ಮಾತನಾಡುವ ಉದಯನಿಧಿ‌ ಸ್ಟಾಲಿನ್ ತಂದೆ ಹಿಂದೂ ಧರ್ಮದ ಸತ್ವ ಒಪ್ಪಿಕೊಂಡಿದ್ದರು. ಅವರ ಕಾರನ್ನು‌ ಅವರ ಮನೆ ಮುಂದೆ ದೇವಸ್ಥಾನಕ್ಕೆ ಮುಖಮಾಡಿ ನಿಲ್ಲಿಸುತ್ತಿದ್ದರು.


ಈಗ ಢೋಂಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸನಾತನ ಧರ್ಮದ ಬಗ್ಗೆ ಮಾತನಾಡುವವರು ಎಚ್ಚರಿಕೆಯಿಂದ ಮಾತನಾಡಬೇಕು. ಇದರಿಂದ ಅವರ ಮುಂದಿನ ಪೀಳಿಗೆ ಚೆನ್ನಾಗಿ ಇರುತ್ತದೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

ಚೈತ್ರಾ ಇಲೆಕ್ಟ್ರಾನಿಕ್ಸ್ ಕಾರ್ ಆಕ್ಸಸರೀಸ್ ಶಾಪ್ ಮಾಲಕ ರಮೇಶ್ ಆತ್ಮಹತ್ಯೆ

Posted by Vidyamaana on 2023-04-29 23:17:39 |

Share: | | | | |


ಚೈತ್ರಾ ಇಲೆಕ್ಟ್ರಾನಿಕ್ಸ್ ಕಾರ್ ಆಕ್ಸಸರೀಸ್ ಶಾಪ್ ಮಾಲಕ ರಮೇಶ್  ಆತ್ಮಹತ್ಯೆ

ಪುತ್ತೂರು: ದರ್ಬೆ ಲಿಟ್ಲ್ ಫ್ಲವರ್ ಶಾಲಾ ಸಮೀಪದ ಚೈತ್ರಾ ಇಲೆಕ್ಟ್ರಾನಿಕ್ಸ್ ಕಾರ್ ಆಕ್ಸಸರೀಸ್ ಶಾಪ್ ಮಾಲಕ ರಮೇಶ್ (49 ವ.) ತಮ್ಮ ಶಾಪ್ ನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಮೇಶ್ ಜೇಸಿಐ ಸದಸ್ಯರಾಗಿಯೂ ಗುರುತಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.

Recent News


Leave a Comment: