ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಹೃದಾಯಘಾತದಿಂದ ನಿಧನ

ಸುದ್ದಿಗಳು News

Posted by vidyamaana on 2024-07-05 17:20:19 |

Share: | | | | |


ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಹೃದಾಯಘಾತದಿಂದ ನಿಧನ

ಪುತ್ತೂರು: ಖ್ಯಾತ ಯಕ್ಷಗಾನ ಕಲಾವಿದರಾಗಿದ್ದಂತ ಕುಂಬ್ಳೆ ಶ್ರೀಧರ ರಾವ್ ಅವರು ಇಂದು ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿರುವುದಾಗಿ ತಿಳಿದು ಬಂದಿದೆ.

ಇಂದು ನೆಕ್ಕಿಲಾಡಿ ಗ್ರಾಮದ ಶಾಂತಿನಗರದ ಸಮೀಪದಲ್ಲಿನ ಬೇರಿಕೆ ನಿವಾಸಿಯಾಗಿದ್ದಂತ ಶ್ರೀಧರ ರಾವ್ ಅವರಿಗೆ ಇಂದು ಬೆಳಿಗ್ಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು.

ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದ್ರೇ ಚಿಕಿತ್ಸೆ ಫಲಿಸದೇ ಅವರು ಇಂದು ನಿಧನರಾಗಿದ್ದಾರೆ.

ಮೃತರು ಶಾಂತಿನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಪತ್ನಿ ಸುಲೋಚನಾ, ಪುತ್ರರಾದ ಬೆಂಗಳೂರಿನಲ್ಲಿ ಪತ್ರಕರ್ತರಾಗಿರುವ ಗಣೇಶ್ ಪ್ರಸಾದ್, ಕೃಷ್ಣಪ್ರಸಾದ್ ಮತ್ತು ದೇವಿಪ್ರಸಾದ್, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

 Share: | | | | |


ಪೋಕ್ಸೊ ಕೇಸ್: ಜಾಮೀನಿನ ಮೇಲೆ ಬಿಡುಗಡೆಯಾದ 4 ದಿನಗಳಲ್ಲೇ ಮುರುಘಾ ಶ್ರೀ ಮರು ಬಂಧನ

Posted by Vidyamaana on 2023-11-20 15:51:04 |

Share: | | | | |


ಪೋಕ್ಸೊ ಕೇಸ್: ಜಾಮೀನಿನ ಮೇಲೆ ಬಿಡುಗಡೆಯಾದ 4 ದಿನಗಳಲ್ಲೇ ಮುರುಘಾ ಶ್ರೀ ಮರು ಬಂಧನ

ದಾವಣಗೆರೆ: ನವೆಂಬರ್.16ರಂದು ಪೋಕ್ಸೊ ಮೊದಲನೇ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾ ಶ್ರೀಗಳಿಗೆ ಹೈಕೋರ್ಟ್ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಈ ಜಾಮೀನಿನ ಮೇಲೆ ಬಿಡುಗಡೆ ಕೂಡ ಆಗಿದ್ದರು. ಆದ್ರೇ 2ನೇ ಪೋಕ್ಸೊ ಪ್ರಕರಣದಲ್ಲಿ ಜಾಮೀನು ಪಡೆಯೋ ಮುನ್ನವೇ ಬಿಡುಗಡೆ ಆಗಿದ್ದ ಕಾರಣ, ಅವರನ್ನು ಇಂದು ಜಾಮೀನು ಪಡೆದ 4 ದಿನಗಳಲ್ಲೇ ಮತ್ತೆ ಬಂಧಿಸಲಾಗಿದೆ.ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಚಿತ್ರದುರ್ಗದ ಮುರುಘಾ ಶ್ರೀ ವಿರುದ್ಧ ಪೋಕ್ಸೊ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಕಳೆದ 14 ತಿಂಗಳುಗಳ ಕಾಲ ಜೈಲು ಸೇರಿದ್ದರು. ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ ಬಂಧನದಲ್ಲಿದ್ದಂತ ಅವರಿಗೆ ಕೆಲ ದಿನಗಳ ಹಿಂದಷ್ಟೇ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿತ್ತು. ಆ ಜಾಮೀನಿನ ಮೇಲೆ ಬಿಡುಗಡೆ ಕೂಡ ಆಗಿದ್ದರು.


ಜಾಮೀನಿನ ಮೇಲೆ ಬಿಡುಗಡೆಗೊಂಡಿರುವಂತ ಮುರುಘಾ ಶ್ರೀಗಳು 2ನೇ ಪೋಕ್ಸೊ ಪ್ರಕರಣದಲ್ಲಿ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯಕ್ಕೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದ್ರೇ ಈ ಆದೇಶವನ್ನು ಪಾಲಿಸದೇ ವೀಡಿಯೋ ಕಾನ್ಫೆರೆನ್ಸ್ ಮೂಲಕ ಹಾಜರಾಗಿದ್ದರು. ಇದನ್ನು ಸರ್ಕಾರಿ ವಕೀಲರು ಪ್ರಶ್ನಿಸಿದ್ದರು. ಜೊತೆಗೆ ಆದೇಶ ಉಲ್ಲಂಘನೆ ಸಂಬಂಧ ಅವರ ವಿರುದ್ಧ ಕಾನೂನು ಕ್ರಮಕ್ಕೆ ಮನವಿ ಮಾಡಿದ್ದರು.ಸರ್ಕಾರಿ ವಕೀಲರ ಆಕ್ಷೇಪದ ನಂತ್ರ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯವು ಮುರುಘಾ ಶ್ರೀ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಗೊಳಿಸಿದೆ. ಈ ಹಿನ್ನಲೆಯಲ್ಲಿ ಇಂದು ದಾವಣಗೆರೆಯ ವಿರಕ್ತ ಮಠಕ್ಕೆ ತೆರಳಿದಂತ ಚಿತ್ರದುರ್ಗ ಜಿಲ್ಲೆಯ ಗ್ರಾಮಾಂತರ ಠಾಣೆಯ ಪೊಲೀಸರು, ಮುರುಘಾ ಶ್ರೀಗಳನ್ನು 2ನೇ ಪೊಕ್ಸೊ ಪ್ರಕರಣದಲ್ಲಿ ಬಂಧಿಸಿದ್ದಾರೆ.

ಅರಣ್ಯ ಸಂಚಾರಿದಳದ ಎಸ್.ಐ.‌ ಜಾನಕಿ ನೇತೃತ್ವದಲ್ಲಿ ಕಾರ್ಯಾಚರಣೆ : ಶ್ರೀಗಂಧ ವಶದಲ್ಲಿಟ್ಟುಕೊಂಡಿದ್ದ ವ್ಯಕ್ತಿಯ ಬಂಧನ

Posted by Vidyamaana on 2024-04-23 07:56:24 |

Share: | | | | |


ಅರಣ್ಯ ಸಂಚಾರಿದಳದ ಎಸ್.ಐ.‌ ಜಾನಕಿ ನೇತೃತ್ವದಲ್ಲಿ ಕಾರ್ಯಾಚರಣೆ : ಶ್ರೀಗಂಧ ವಶದಲ್ಲಿಟ್ಟುಕೊಂಡಿದ್ದ ವ್ಯಕ್ತಿಯ ಬಂಧನ

ಪುತ್ತೂರು : ಸರಕಾರಿ ಜಮೀನಿನಿಂದ ಶ್ರೀಗಂಧ ಕಡಿದು ಸಾಗಾಟ ಮಾಡಲು ವಶದಲ್ಲಿಟ್ಟುಕೊಂಡಿದ್ದ ಪ್ರಕರಣವನ್ನು ಎ.22ರಂದು ಪತ್ತೆ ಹಚ್ಚಿರುವ ಅರಣ್ಯ ಸಂಚಾರಿ ದಳದ ಎಸ್.ಐ.‌ ಜಾನಕಿ ನೇತೃತ್ವದ ತಂಡ ಓರ್ವನನ್ನು ಬಂಧಿಸಿದೆ.

ಬೆಂಗಳೂರು ಸಿಐಡಿ ಅರಣ್ಯ ಘಟಕದ ಪೊಲೀಸ್ ಉಪ ಮಹಾ ನಿರೀಕ್ಷಕ ಸುಧೀರ್ ಕುಮಾರ್ ರೆಡ್ಡಿ ಹಾಗೂ ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೋಲಿಸ್ ಅಧೀಕ್ಷಕ ಎಸ್.ಎಸ್. ಕಾಶಿ ರವರ ಮಾರ್ಗದರ್ಶನದಲ್ಲಿ ಮಂಗಳೂರು ಪೊಲೀಸ್ ಸಿಐಡಿ ಅರಣ್ಯ ಸಂಚಾರಿದಳದ ಪಿ.ಎಸ್.ಐ ಜಾನಕಿ ಕೆ. ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ವಿಟ್ಲ ಚಂದಳಿಕೆ :ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

Posted by Vidyamaana on 2023-05-02 23:02:43 |

Share: | | | | |


ವಿಟ್ಲ ಚಂದಳಿಕೆ :ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

ಪುತ್ತೂರು; ನಾನು ಬಿಜೆಪಿಯಲ್ಲಿರುವಾಗಲೇ ಕಳೆದ ಹಲವು ವರ್ಷಗಳಿಂದ ಉದ್ಯಮ ನಡೆಸುತ್ತಿದ್ದೇನೆ. ನಾನು ಮಾಡುವ ಎಲ್ಲಾ ವ್ಯವಹಾರವೂ ಪ್ರಾಮಾಣಿಕವಾಗಿಯೇ ಮಾಡುತ್ತಿದ್ದೇನೆ, ಸರಕಾರಕ್ಕೆ ಪಾವತಿಸಬೇಕಾದ ಎಲ್ಲಾ ತೆರಿಗೆಗಳನ್ನು ಸರಿಯಾದ ಸಮಯಕ್ಕೆ ಪಾವತಿಮಾಡುತ್ತಿದ್ದೇನೆ ಇದೆಲ್ಲವೂ ಬಿಜೆಪಿಗರಿಗೆ ಗೊತ್ತಿದೆ. ಇದೆಲ್ಲವೂ ಗೊತ್ತಿದ್ದೂ ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಹವಾ ಕಂಡು ಬೆದರಿದ ಬಿಜೆಪಿ ನನ್ನ ಮನೆಯ ಮೇಲೆ ಐ ಟಿ ದಾಳಿ ನಡೆಸಿ ನನ್ನನ್ನು ಕಟ್ಟಿಹಾಕುವ ಕೆಲಸವನ್ನು ಮಾಡಿದ್ದಲ್ಲದೆ ನನಗೆ ಮಾನಸಿಕ ಕಿರುಕುಳ ನೀಡುವ ಕೆಲಸವನ್ನು ಮಾಡುತ್ತಿದೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಸಭೆಯಲ್ಲಿ ಕಣ್ಣೀರು ಹಾಕಿದ ಘಟನೆ ವಿಟ್ಲ ವ್ಯಾಪ್ತಿಯ ಚಂದಳಿಕೆಯಲ್ಲಿ ನಡೆದಿದೆ.

ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ ಯವರ ಅಧ್ಯಕ್ಷತೆಯಲ್ಲಿ ಚಂದಳಿಕೆಯಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಅಶೋಕ್ ರೈ ನನ್ನ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮನೆಯಲ್ಲೆಲ್ಲಾ ಹುಡುಕಾಡಿ ಮನೆಯಲ್ಲಿದ್ದ ೧,೮೯೦೦೦ ರೂವನ್ನು ಕೊಂಡೊಯ್ದಿದ್ದಾರೆ. ನಾನು ಮನೆಯಲ್ಲಿ ಕೋಟಿಗಟ್ಟಲೆ ಹಣ ಇಟ್ಟಿದ್ದೇನೆ ಎಂಬ ತಪ್ಪು ಮಾಹಿತಿಯನ್ನು ಬಿಜೆಪಿಯೇ ನೀಡಿದೆ. ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದು ಪುತ್ತೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಕಳೆದ ಕೆಲವು ದಿನಗಳಿಂದ ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯದಲ್ಲಿ ಮಗ್ನನಾಗಿದ್ದೇನೆ. ನಾವು ಹೋದಲ್ಲೆಲ್ಲಾ, ಸಭೆ ನಡೆಸಿದಲ್ಲೆಲ್ಲಾ ಅಭೂತ ಪೂರ್ವ ಜನಬೆಂಬಲ ವ್ಯಕ್ತವಾಗುತ್ತಿದೆ ಇದನ್ನು ಕಂಡು ಸಹಿಸದ ಬಿಜೆಪಿ ಈ ಕೃತ್ಯಕ್ಕೆ ಕೈ ಹಾಕಿದೆ ಎಂದು ಹೇಳಿ ಭಾವುಕರಾದ ಅವರು ಮಾತನಾಡುತ್ತಲೇ ನೋವು ತಡೆಯಲಾರದೆ ಕಣ್ಣೀರು ಹಾಕಿದರು. ನಾನು ಯಾರಿಗೂ ಅನ್ಯಾಯ ಮಾಡಿಲ್ಲ, ಸರಕಾರದ , ಇಲಾಖೆಯ ಕಣ್ಣು ತಪ್ಪಿಸಿ ವ್ಯವಹಾರ ಮಾಡಿಲ್ಲ. ನಾನು ನನ್ನ ಉದ್ದಿಮೆಯ ಒಂದು ಪಾಲು ಬಡವರಿಗೆ ದಾನವಾಗಿ ನೀಡಿದ್ದೇನೆ ಅದೇ ಬಡವನ ಆಶೀರ್ವಾದದಿಂದ ನನಗೆ ಎಷ್ಟೇ ಕಿರುಕುಳ ಕೊಟ್ಟರೂ ಧೈರ್ಯವಾಗಿ ಮುನ್ನಡೆಯುತ್ತಿದ್ದೇನೆ. ಬಡ ಜೀವಗಳ ಆಶೀರ್ವಾದ ಇರುವ ತನಕ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿಗರು ಅರಿತುಕೊಳ್ಳಬೇಕು ಎಂದು ಹೇಳಿದರು.

ಅಭಿವೃದ್ದಿ ಕೆಲಸ ಮಾಡಿದ್ದರೆ ಚರ್ಚೆಗೆ ಬನ್ನಿಬಿಜೆಪಿ ಶಾಸಕರು ಕಳೆದ ಐದು ವರ್ಷಗಳಿಂದ ಮಾಡಿದ ಅಭಿವೃದ್ದಿ ಕಾರ್ಯ ಏನು ಎಂಬುದನ್ನು ಜನರ ಮುಂದೆ ಇಡಿ, ಆ ವಿಚಾರದಲ್ಲಿ ನಾನು ಚರ್ಚೆ ಮಾಡುವ. ಜಿಲ್ಲೆಯಲ್ಲಿ ಏಳುಮಂದಿ ಶಾಸಕರು, ಇಬ್ಬರು ಮಂತ್ರಗಳಿದ್ದರೂ ಒಬ್ಬ ಬಡವನಿಗೆ ಸೂರು ಕಲ್ಪಿಸಲು ಸಾಧ್ಯವಾಗಿಲ್ಲ, ಬಡವನ ಮನೆಯನ್ನು ಬೆಳಗಿಸಲು ಸಾಧ್ಯವಾಗಿಲ್ಲ. ಅಭಿವೃದ್ದಿ ಕೆಲಸ ಮಾಡದೆ ಚುನವಣೆ ಸಂದರ್ಭದಲ್ಲಿ ಎದುರಾಳಿ ಅಭ್ಯರ್ಥಿಗೆ ಐಟಿ ದಾಳಿ ಮಾಡಿಸುವುದು, ನನ್ನ ಸಿಬಂದಿಗಳನ್ನು ದಿಗ್ಬಂದನದಲ್ಲಿರಿಸುವ ಕೆಲಸಕ್ಕೆ ಯಾಕೆ ಕೈ ಹಾಕುತ್ತೀರಿ. ಅಭಿವೃದ್ದಿ ಮಾಡಿದ್ದರೆ ಧೈರ್ಯವಾಗಿ ಬನ್ನಿ ಎಂದು ಬಿಜೆಪಿಗೆ ಸವಾಲು ಹಾಕಿದರು. ವಿಟ್ಲ- ಕಬಕ ರಸ್ತೆಯನ್ನು ೬೦% ನಲ್ಲಿ ಡಾಮರೀಕರಣ ಮಾಡಲಾಗಿದೆ. ಈ ಬಾರಿಯ ಮಳೆಗಾಲದಲ್ಲಿ ಡಾಮಾರು ಕೊಚ್ಚಿ ಹೋಗಬಹುದು, ವಿಟ್ಲದಲ್ಲಿ, ಪುತ್ತೂರಿನಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ, ರಿಂಗ್ ರೋಡ್ ಮಾಡುವುದಾಗಿ ಹೇಳಿದವರು ಕಮಿಷನ್ ಪಡೆದು ತನ್ನ ಹಾಗೂ ತನ್ನ ಕುಟುಮಬದವರ ಕೈ ಬೆರಳಿಗೆ ಚಿನ್ನದ ರಿಂಗ್ ಹಾಕಿಸಿದ್ದು ಬಿಟ್ಟರೆ ಏನೂ ಅಭಿವೃದ್ದಿ ಕೆಲಸ ಮಾಡಿಲ್ಲ ಎಂದು ಹೇಳಿದರು.

ಬಡವರಿಗೆ ನೆರವು ನೀಡುವೆ ತಾಕತ್ತಿದ್ದರೆ ತಡೆಯಿರಿನಾನು ಬಡವರ ಸಮಾಜ ಸೇವೆ ಮಾಡಲೆಂದೇ ಚುನಾವಣಾ ಆಖಾಡಕ್ಕೆ ಇಳಿದಿದ್ದೇನೆ. ಕಳೆದ ೧೨ ವರ್ಷಗಳಿಂದ ಇದನ್ನೇ ಮಾಡುತ್ತಿದ್ದೇನೆ ಸಮಾಜ ಸೇವೆಯಲ್ಲಿ ನನಗೆ ಅತ್ಮ ತೃಪ್ತಿ ಇದೆ ಇದನ್ನು ತಡೆಯುವ ತಾಕತ್ತಿದ್ದರೆ ಬಂದು ತಡೆಯಿರಿ ಎಂದು ಬಿಜೆಪಿಗರಿಗೆ ಸವಾಲು ಹಾಕಿದರು. ತಾನು ಶಾಸಕನಾದಲ್ಲಿ ಬಡವರ ಮನೆಗೆ ಅಧಿಕಾರಿಗಳನ್ನು ಕಳಿಸಿ ಅವರ ಕೆಲಸವನ್ನು ಮಾಡಿಸುತ್ತೇನೆ. ಜನಪ್ರತಿನಿಧಿಯಾದವ ಜನಸೇವೆ ಮಾಡಬೇಕೇ ವಿನಾ ಸರಕಾರದ, ಜನರ ಸೊತ್ತನ್ನು ಲೂಟಿ ಹೊಡೆಯುವುದಲ್ಲ, ಮೋಜು ಮಸ್ತಿ ಮಾಡುವುದಲ್ಲ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ ಅಶೋಕ್ ರೈ ಜನರ ಸೇವೆ ಮಾಡಲು ಸಾಧ್ಯವಾಗದ ಜನಪ್ರತಿನಿಧಿ ಚುನಾವಣೆಗೆ ಸ್ಪರ್ದಿಸಬಾರದು ಎಂದು ಹೇಳಿದರು.

೮ ಊಟದ ಲೆಕ್ಕವನ್ನು ತನಿಖೆ ಮಾಡಿದ ಮಠಂದೂರು ಇಂದಿರಾ ಕ್ಯಾಂಟೀನ್ ಬಂದ್ ಮಾಡಿಸಿದ್ದು ಯಾಕೆ; ಶಕುಂತಳಾ ಶೆಟ್ಟಿ

ಎಂಟು ಊಟ ಯಾರಿಗೆ ಕೊಟ್ಟಿದ್ದು ಎಂಬುದರ ತನಿಖೆ ಮಾಡಬೇಕು ಎಂದು ಹೇಳಿದ್ದ ಶಾಸಕ ಸಂಜೀವ ಮಠಂದೂರುರವರು ಬಡವರ ಇಂದಿರಾ ಕ್ಯಾಂಟೀನ್ ಬಂದ್ ಮಾಡಿಸಿದ್ದು ಯಾಕೆ? ಬಡವರು ಕನಿಷ್ಠ ದರಕ್ಕೆ ಊಟ ಮಾಡಬಾರದು ಎಂಬುದೇ ಬಿಜೆಪಿಯ ಉದ್ದೇಶವಾಗಿತ್ತು. ಕಾಂಗ್ರೆಸ್ ಸರಕರ ಜಾರಿಗೆ ತಂದಿದ್ದ ಎಲ್ಲಾ ಜನಪ್ರ ಯೋಜನೆಗಳನ್ನು ಬಂದ್ ಮಾಡಿದ್ದ ಬಿಜೆಪಿ ಮಕ್ಕಳಿಗೆ ಕೊಡುವ ಹಾಲು, ಮೊಟ್ಟೆ, ಶೂ ಭಾಗ್ಯ ಎಲ್ಲವನ್ನೂ ಬಂದ್ ಮಾಡಿದ್ದರು. ಬಿಜೆಪಿಗೆ ಮಾನವೀಯತೆ ಇದ್ದರೆ ಆಕೆಲಸ ಮಾಡುತ್ತಿದ್ರ ಎಂದು ಪ್ರಶ್ನಿಸಿದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಬಿಜೆಪಿಗರ ಅಮಾನವೀಯ ಕೃತ್ಯಗಳು ಮಿತಿಮೀರಿದ್ದು ಇದು ಇಂದು ಶಾಸಪವಾಗಿ ಅವರಿಗೆ ತಟ್ಟಿದೆ ಎಂದು ಹೇಳಿದರು. ಬೆಲೆ ಏರಿಕೆ ಮಾಡಿ ಬಡವರನ್ನು ಸುಲಿಗೆ ಮಾಡುತ್ತಿರುವ ಬಿಜೆಪಿಗೆ ಹಸಿದವನ ಕಣ್ಣೀರ ಒಂದೊಂದು ಹನಿಗಳೂ ಅವರಿಗೆ ಕಂಟಕವಾಗಿ ಚುಚ್ಚಲಿದೆ ಎಂಬುದನ್ನು ಅರಿತುಕೊಂಡರೆ ಉತ್ತಮ ಎಂದು ಹೇಳಿದ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ವಿಜಯಾ ಬ್ಯಾಂಕನ್ನು ಮಾರ್ವಾಡಿಗಳ ಮುಳುಗುತ್ತಿದ್ದ ಬ್ಯಾಂಕ್ ಜೊತೆ ಮಾಡಿದೆ ವಿಜಯಾ ಬ್ಯಾಂಕ್ ಯಾವಾಗ ಮುಳುಗುತ್ತದೋ ಆದೇವರೇ ಬಲ್ಲ ಎಂದು ಹೇಳಿದರು. ಭೂ ಮಸೂದೆ ಕಾನೂನಿನಲ್ಲಿ ಭೂಮಿ ದೊರೆತ ಮನೆಯ ಯಜಮಾನನ ಮಕ್ಕಳು ಇಂದು ಭೂಮಿ ಕೊಟ್ಟ ಕಾಂಗ್ರೆಸ್ಸನ್ನು ಮರೆತು ಕೇಸರಿ ಶಾಲು ಹಾಕಿ ಬಿಜೆಪಿ ಜೊತೆ ಹೆಜ್ಜೆ ಹಾಕುತ್ತಿರುವುದು ಖೇದಕರ ಸಂಗತಿ ಎಂದು ಹೇಳಿದರು.

ವಿಟ್ಲ ಪಟ್ಟಣ ಪಂಚಾಯತ್ ದುರಾವಸ್ಥೆಯಿಂದ ಕೂಡಿದೆ: ಹೇಮನಾಥ ಶೆಟ್ಟಿ

ವಿಟ್ಲ ಪಟ್ಟಣಪಂಚಾಯತ್‌ಗೆ ಚುನಾವಣೇ ನಡೆದು ಹಲವು ತಿಂಗಳುಗಳೇ ಕಳೆದರೂ ಇನ್ನೂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ. ಚುನಾಯಿತ ಸದಸ್ಯರು ಯಾವುದೇ ಕೆಲಸವನ್ನು ಮಾಡದಂತ ಸನ್ನಿವೇಶ ನಿರ್ಮಾಣವಾಗಿದೆ. ವಿಟ್ಲದಲ್ಲಿರುವ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ಒಳಚರಂಡಿ ಇಲ್ಲದೆ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಇಲ್ಲದೆ ಜನ ಕಂಗೆಟ್ಟಿದ್ದಾರೆ. ಬಿಜೆಪಿಗೆ ಮತ ಕೊಟ್ಟ ಮತದಾರ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಆರೋಪಿಸಿದರು. ಈ ಬರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈಗೆ ಗೆಲುವಾಗಲಿದೆ. ಇದನ್ನು ಕಂಡು ಬಿಜೆಪಿ ಬೆರಗಾಗಿದೆ. ಬಿಜೆಪಿಯವರ ಕೈಯ್ಯಲ್ಲಿದ್ದ ಹಿಂದುತ್ವವನ್ನು ಪಕ್ಷೇತರ ಅಭ್ಯರ್ಥಿ ಕೊಂಡು ಹೋಗಿದ್ದಾರೆ. ಈಗ ಬಿಜೆಪಿಯನ್ನು ಹಿಂಧೂ ಸಂಗಟನೆಗಳು ದೂರುತ್ತಿದೆ, ಹಿಂದೂ ಸಂಘಟನೆಗಳನ್ನು ಬಿಜೆಪಿ ತೆಗಳುವ ಕೆಲಸವನ್ನು ಮಾಡುತ್ತಿದೆ ಇದೆಲ್ಲವೂ ಶಾಫದ ಪರಿಣಾಮವಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಕೆಪಿಸಿಸಿ ಸದಸ್ಯರಾದ ಎಂ ಎಸ್ ಮಹಮ್ಮದ್, ಹಿರಿಯ ಕಾಂಗ್ರೆಸ್ ಮುಖಂಡ ದೇಜಪ್ಪ ಸೇರಿದಂತೆ ಹಲವು ಮಂದಿ ಕಾಂಗ್ರೆಸ್ ನಾಯಕರುಗಳು ಉಪಸ್ತಿತರಿದ್ದರು.

ಇಂಡಸ್ಟ್ರಿಯಲ್ ಏರಿಯಾ ಸೇರಿ ಪುತ್ತೂರಿನ ಈ ಏರಿಯಾಗಳಲ್ಲಿ ಇಂದು ಕರೆಂಟ್ ಇರೋದಿಲ್ಲ

Posted by Vidyamaana on 2023-09-30 04:48:52 |

Share: | | | | |


ಇಂಡಸ್ಟ್ರಿಯಲ್ ಏರಿಯಾ ಸೇರಿ ಪುತ್ತೂರಿನ  ಈ ಏರಿಯಾಗಳಲ್ಲಿ ಇಂದು ಕರೆಂಟ್ ಇರೋದಿಲ್ಲ

ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 33/11 ಕೆವಿ ಕ್ಯಾಂಪ್ಟ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮುಕ್ರಂಪಾಡಿ & ಮುದ್ದೆ ಫೀಡರ್‌ನಲ್ಲಿ ಸೆ.30 ಶನಿವಾರ ರಂದು ಪೂರ್ವಾಹ್ನ ಗಂಟೆ 10:00 ರಿಂದ ಅಪರಾಹ್ನ 5:00 ರ ವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.ಆದುದರಿಂದ, 33/11ಕೆವಿ ಕ್ಯಾಂಪ್ಪೋ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಈ ಮೇಲೆ ತಿಳಿಸಿದ ಫೀಡರ್ ನಿಂದ ವಿದ್ಯುತ್ ಸರಬರಾಜಾಗುವ ಕೂರ್ನಡ್ಕ ಕೆಮ್ಮಿಂಜೆ, ಮರೀಲ್, ಮುಕ್ರಂಪಾಡಿ, ಮೊಟ್ಟೆತ್ತಡ್ಕ, ಇಂಡಸ್ಟ್ರಿಯಲ್ ಏರಿಯಾ & ಕಮ್ಮಾಡಿ ಪರಿಸರದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಕೇರಳದ ಯುವ ಜೋಡಿಗೆ ಕಿರುಕುಳ: ಬಂಟ್ವಾಳ ಮೂಲದ ಸಂದೇಶ್ ಸಹಿತ ಮೂವರ ಬಂಧನ

Posted by Vidyamaana on 2023-12-25 13:07:55 |

Share: | | | | |


ಕೇರಳದ ಯುವ ಜೋಡಿಗೆ ಕಿರುಕುಳ: ಬಂಟ್ವಾಳ ಮೂಲದ ಸಂದೇಶ್ ಸಹಿತ ಮೂವರ ಬಂಧನ

ಮಂಗಳೂರು: ಕೇರಳ ಯುವ ಜೋಡಿಯನ್ನು ತಡೆದು ಅವರ ಧರ್ಮದ ಬಗ್ಗೆ ವಿಚಾರಿಸಿ ಮತೀಯ ಗೂಂಡಾಗಿರಿ ನಡೆಸಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ಹಂಪನಕಟ್ಟೆಯ ಮಳಿಗೆಯೊಂದರ ಬಳಿ ಗುರುವಾರ ರಾತ್ರಿ 1 ಗಂಟೆ ಸುಮಾರಿಗೆ ನಿಂತಿದ್ದ ಕೇರಳದ ಯುವಕ ಹಾಗೂ ಆತನ ಜೊತೆಗಿದ್ದ ಯುವತಿಯನ್ನು ಯುವಕರ ಗುಂಪೊಂದು ವಿಚಾರಿಸಿತ್ತು.ಕೇರಳದ ಯುವಕ ಮತ್ತು ಯುವತಿಯ ಧರ್ಮದ ಬಗ್ಗೆ ಪ್ರಶ್ನಿಸಿ, ಗುರುತಿನ ಚೀಟಿ ತೋರಿಸುವಂತೆ ಗುಂಪಿನಲ್ಲಿದ್ದ ಯುವಕನೊಬ್ಬ ಏರುಧ್ವನಿಯಲ್ಲಿ ಸೂಚಿಸಿದ ಹಾಗೂ ಅವರ ಸೊತ್ತುಗಳನ್ನು ಪರೀಶೀಲಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.


ಬಂಟ್ವಾಳ ನಿವಾಸಿ ಸಂದೇಶ (28), ಆತನ ಜೊತೆಗಿದ್ದ ಪ್ರಶಾಂತ್ (31) ಹಾಗೂ ರೋನಿತ್ (31) ಅವರನ್ನು ಬಂಧಿತರು. ಆರೋಪಿಗಳ ವಿರುದ್ಧ ಶಾಂತಿಭಂಗಕ್ಕೆ ಉದ್ದೇಶಪೂರ್ವಕ ಪ್ರಚೋದನೆ ಮತ್ತು ಅಕ್ರಮವಾಗಿ ನಿರ್ಬಂಧ ವಿಧಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ

ಉಡುಪಿ: ತಾಯಿಯ ಶವದೊಂದಿಗೆ 3 ದಿನ ಕಳೆದಿದ್ದ ಮಾನಸಿಕ ಅಸ್ವಸ್ಥೆ ಪುತ್ರಿ ಪ್ರಗತಿ ಶೆಟ್ಟಿ ಆಸ್ಪತ್ರೆಯಲ್ಲಿ ನಿಧನ

Posted by Vidyamaana on 2024-05-19 15:28:02 |

Share: | | | | |


ಉಡುಪಿ: ತಾಯಿಯ ಶವದೊಂದಿಗೆ 3 ದಿನ ಕಳೆದಿದ್ದ ಮಾನಸಿಕ ಅಸ್ವಸ್ಥೆ ಪುತ್ರಿ ಪ್ರಗತಿ ಶೆಟ್ಟಿ ಆಸ್ಪತ್ರೆಯಲ್ಲಿ ನಿಧನ

ಉಡುಪಿ: ತಾಯಿಯ ಶವದೊಂದಿಗೆ ಮಾನಸಿಕ ಅಸ್ವಸ್ಥಳಾಗಿದ್ದ ಪುತ್ರಿ 3 ದಿನ ಕಳೆದಿರುವ ಮನ ಕಲಕುವ ಘಟನೆ ಕುಂದಾಪುರ ತಾಲೂಕಿನಲ್ಲಿ ನಡೆದಿದೆ.ತಾಯಿ ಮೃತಪಟ್ಟಿದ್ದ ಕಾರಣ ಅಹಾರ ಮತ್ತು ನೀರಿಲ್ಲದೇ ಮಗಳು ಕೂಡಾ ಅಸ್ವಸ್ಥಳಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕುಂದಾಪುರ ತಾಲೂಕಿನ ಮೂಡುಗೋಪಾಡಿಯ ದಾಸನಹಾಡಿಯ ನಿವಾಸಿಗಳಾಗಿದ್ದ ತಾಯಿ ಜಯಂತಿ ಶೆಟ್ಟಿ (62) ಮತ್ತು ಮಗಳು ಪ್ರಗತಿ ಶೆಟ್ಟಿ (32) ಮೃತಪಟ್ಟವರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಜಯಂತಿ ಶೆಟ್ಟಿ

Recent News


Leave a Comment: