ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಸುದ್ದಿಗಳು News

Posted by vidyamaana on 2024-07-25 09:34:49 |

Share: | | | | |


ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಬೆಂಗಳೂರು : ಕೋರಮಂಗಲದ ಲೇಡಿಸ್ ಪಿಜಿ ಒಳಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದ್ದು, ಈ ಬಗ್ಗೆ ಪೊಲೀಸರು ಮಹತ್ವದ ಮಾಹಿತಿ ನೀಡಿದ್ದಾರೆ. ಮೃತ ಯುವತಿಯನ್ನು ಬಿಹಾರದ ಕೃತಿ ಕುಮಾರಿ‌ (24) ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯತಮನೇ ಕೊಲೆಗಾರ ಎಂದು ಪೊಲೀಸರು ತಿಳಿಸಿದ್ದಾರೆ .

ಕೃತಿ ಕುಮಾರಿ ತಾನು ಪ್ರೀತಿಸುತ್ತಿದ್ದ ಯುವಕನಿಂದಲೇ ಕೊಲೆಯಾಗಿದ್ದಾರೆ. ರಾತ್ರಿ 11:30ಕ್ಕೆ ಕೃತಿ ಕುಮಾರಿಯೇ ಯುವಕನನ್ನು ಕರೆದುಕೊಂಡು ಬಂದಿರುವ ಬಗ್ಗೆ ಮೇಲ್ನೋಟಕ್ಕೆ ಮಾಹಿತಿ ಸಿಕ್ಕಿದೆ. ಪಿಜಿಯಿಂದ ಹೊರ ಬಂದ ಕೃತಿ ತನ್ನ ಪ್ರಿಯತಮನ ಜತೆ ರಾತ್ರಿ ಊಟ ಮಾಡಿದ್ದರು. ಊಟ ಮುಗಿಸಿದ ಕೃತಿ ತನ್ನೊಂದಿಗೆ ಯುವಕನ್ನು ಪಿಜಿಗೆ ಕರೆತಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೃತಿಯ ರೂಂಗೆ ಆಗಮಿಸಿದ್ದ ವೇಳೆ ಇಬ್ಬರ ಮಧ್ಯೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ಇದೆ.

ಪಿಜಿಯ ಸಿಸಿಟಿವಿ ಎಲ್ಲವನ್ನು ಕೂಡ ಪರಿಶೀಲನೆ ನಡೆಸಿದ್ದೇವೆ. ಪಿಜಿಯ ನಿರ್ಲಕ್ಷ್ಯತನದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿ ಪತ್ತೆಗಾಗಿ ಪೊಲೀಸರ ವಿಶೇಷ ತಂಡವನ್ನ ರಚನೆ ಮಾಡಲಾಗಿದೆ ಎಂದಿದ್ದಾರೆ

 Share: | | | | |


ಕಾಂಗ್ರೆಸ್ ನಿರ್ನಾಮ ಮಾಡಬೇಕೆಂದ ಶೆಟ್ಟರ್ - ಡಿಕೆಶಿ ಮಾತಲ್ಲೇ ಕೊಟ್ರೂ ಟಕ್ಕರ್

Posted by Vidyamaana on 2024-01-28 17:37:05 |

Share: | | | | |


ಕಾಂಗ್ರೆಸ್ ನಿರ್ನಾಮ ಮಾಡಬೇಕೆಂದ ಶೆಟ್ಟರ್ - ಡಿಕೆಶಿ ಮಾತಲ್ಲೇ ಕೊಟ್ರೂ ಟಕ್ಕರ್

ಬೆಂಗಳೂರು :- ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಬೇಕು ಎಂಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.ಈ ಸಂಬಂಧ ಮಾತನಾಡಿದ ಅವರು,ಶೆಟ್ಟರ್ ಅವರು ಇಲ್ಲಿದ್ದಾಲೂ ಹಾಗೆಯೇ ಮಾತಾಡುತ್ತಿದ್ದರು, ಬಿಜೆಪಿಯನ್ನು ನಿರ್ನಾಮಗೊಳಿಸಬೇಕು ಅನ್ನುತ್ತಿದ್ದರು ಎಂದು ನಗುತ್ತಾ ಹೇಳಿದರು.ಆರ್ ಅಶೋಕ್ ವಿರೋಧ ಪಕ್ಷದ ನಾಯಕನಾದಾಗ, ಬಿವೈ ವಿಜಯೇಂದ್ರ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷನಾದಾಗ ಅವರ ಕಟು ಟೀಕೆಗಳನ್ನು ಮಾಡಿದ್ದರು. ವಿಪಕ್ಷ ನಾಯಕನ ಆಯ್ಕೆ ನಡೆಯುವ ಮೊದಲು ಅವರು ಹೊಸ ಸರ್ಕಾರ ರಚನೆನಯಾಗಿ 7 ತಿಂಗಳಾದರೂ ಬಿಜೆಪಿ ನಾಯಕರಿಗೆ ಒಬ್ಬ ವಿರೋಧ ಪಕ್ಷನನ್ನು ಆಯ್ಕೆ ಮಾಡಿವುದು ಸಾಧ್ಯವಾಗಿಲ್ಲ ಅಂತ ಮೂದಲಿಸುತ್ತಿದ್ದರು. ಬಿಜೆಪಿಗೆ ವಾಪಸ್ಸು ಹೋದ ಕೇವಲ ಎರಡ ದಿನಗಳ ಬಳಿಕ ಅಂಥ ಟೀಕೆಗಳನ್ನು ಕಾಂಗ್ರೆಸ್ ಮತ್ತು ಅದರ ನಾಯಕರ ಮಾಡುತ್ತಿದ್ದಾರೆ.ಇವತ್ತು ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲ 28 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಬೇಕು ಅಂದರಂತೆ. ಅದನ್ನು ಕೆಪಿಸಿಸಿ ಆಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ತಿಳಿಸಿದಾಗ, ಶೆಟ್ಟರ್ ಅವರು ಇಲ್ಲಿದ್ದಾಲೂ ಹಾಗೆಯೇ ಮಾತಾಡುತ್ತಿದ್ದರು, ಬಿಜೆಪಿಯನ್ನು ನಿರ್ನಾಮಗೊಳಿಸಬೇಕು ಅನ್ನುತ್ತಿದ್ದರು ಎಂದು ನಗುತ್ತಾ ಹೇಳಿದರು.

SDPI ಚುನಾವಣಾ ಏಜೆಂಟ್ ಆಗಿ ಅಬ್ದುಲ್ ರಹಿಮಾನ್

Posted by Vidyamaana on 2023-04-24 10:53:46 |

Share: | | | | |


SDPI ಚುನಾವಣಾ ಏಜೆಂಟ್ ಆಗಿ ಅಬ್ದುಲ್ ರಹಿಮಾನ್

ಪುತ್ತೂರು: ಎಸ್.ಡಿ.ಪಿ.ಐ. ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಏಜೆಂಟ್ ಆಗಿ ಅಬ್ದುಲ್ ರಹಿಮಾನ್ ನೇಮಕಗೊಂಡಿದ್ದಾರೆ.

ಎಸ್.ಡಿ.ಪಿ.ಐ. ಪುತ್ತೂರು ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿಯಾಗಿರುವ ಅಬ್ದುಲ್ ರಹಿಮಾನ್ ಅವರು, ಶಾಫಿ ಬೆಳ್ಳಾರೆ ಅವರ ಪರವಾಗಿ ಚುನಾವಣಾ ಏಜೆಂಟ್ ಆಗಿ ನೇಮಕಗೊಳಿಸಿ ಆದೇಶಿಸಿಲಾಗಿದೆ.

ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪದಲ್ಲಿ ಶಾಫಿ ಬೆಳ್ಳಾರೆ ಜೈಲಿನಲ್ಲಿದ್ದು, ಅವರ ಪರವಾಗಿ ಅಬ್ದುಲ್ ರಹಿಮಾನ್ ನಾಮಪತ್ರ ಸಲ್ಲಿಸಿದ್ದರು.

ಫೇಸ್‌ಬುಕ್‌ ಹೆಣ್ಣಿನ ಆಸೆಗೆ ಬಿದ್ದ ಉದ್ಯಮಿ ಕಳೆದುಕೊಂಡಿದ್ದು ಬರೋಬ್ಬರಿ 95 ಲಕ್ಷ

Posted by Vidyamaana on 2024-03-16 14:34:47 |

Share: | | | | |


ಫೇಸ್‌ಬುಕ್‌ ಹೆಣ್ಣಿನ ಆಸೆಗೆ ಬಿದ್ದ ಉದ್ಯಮಿ  ಕಳೆದುಕೊಂಡಿದ್ದು ಬರೋಬ್ಬರಿ 95 ಲಕ್ಷ

ಬೆಂಗಳೂರು : ಪತ್ನಿಯನ್ನು ತನ್ನೊಂದಿಗೆ ಒಂದು ರಾತ್ರಿ ಕಳುಹಿಸಿಕೊಂಡು ಎಂದ ರಿಯಲ್‌ ಎಸ್ಟೇಟ್‌ ಉದ್ಯಮಿಯನ್ನು ಕಾರಿನಲ್ಲಿ 14 ಬಾರಿ ಇರಿದು ಕೊಲೆಗೈದಿದ್ದ ಬಟ್ಟೆ ವ್ಯಾಪಾರಿಯನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.ದಾಸರಹಳ್ಳಿ ಮರಿಯಣ್ಣಪಾಳ್ಯ ನಿವಾಸಿ ಸಂತೋಷ್‌ ಕುಮಾರ್‌(39) ಬಂಧಿತ ಆರೋಪಿ.ಮಾ .12ರಂದು ಈತ ಮಾರುತಿನಗರ ನಿವಾಸಿ ಕೃಷ್ಣಯಾದವ್‌(55) ಎಂಬಾತನನ್ನು ಕೊಲೆಗೈದು, ಮೃತದೇಹವನ್ನು ಕಾರಿನಲ್ಲಿ ಇರಿಸಿ ಪರಾರಿಯಾಗಿದ್ದ. ಬಟ್ಟೆ ಅಂಗಡಿಗೆ ಲಕ್ಷಾಂತರ ರೂ. ಹೂಡಿಕೆ ಮಾಡಲು ಪತ್ನಿಯನ್ನು ಒಂದು ರಾತ್ರಿ ತನ್ನೊಂದಿಗೆ ಕಳುಹಿಸುವಂತೆ ಕೇಳಿದಕ್ಕೆ ಆರೋಪಿ ಉದ್ಯಮಿಯನ್ನು ಕೊಲೆಗೈದಿದ್ದಾನೆ ಎಂದು ಪೊಲೀಸರು ಹೇಳಿದರು.


ಆಂಧ್ರಪ್ರದೇಶ ಮೂಲದ ಕೃಷ್ಣಯಾದವ್‌ ನಗರದಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡಿಕೊಂಡಿದ್ದ. ಈತನ ಸ್ನೇಹಿತ ತಮಿಳುನಾಡು ಮೂಲದ ಸಂತೋಷ್‌ ಮೊಬೈಲ್‌ ಅಂಗಡಿ ಮುಂಭಾಗದ ಫ‌ುಟ್‌ಪಾತ್‌ನಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ. ಒಂದೆರಡು ಬಾರಿ ಆರೋಪಿಯ ಅಂಗಡಿಯಲ್ಲಿ ಬಟ್ಟೆ ಖರೀದಿಸಿದ್ದ ಕೃಷ್ಣಯಾದವ್‌, “ಉತ್ತಮ ಗುಣಮಟ್ಟದ ಬಟ್ಟೆ ಮಾರಾಟ ಮಾಡುತ್ತಿಯಾ, ಹೊಸ ಬಟ್ಟೆ ಅಂಗಡಿಗೆ ನಾನು ಹಣ ಹೂಡಿಕೆ ಮಾಡುತ್ತೇನೆ” ಎಂದು ಭರವಸೆ ನೀಡಿದ್ದ. ಆದರೆ, ನಾಲ್ಕೈದು ತಿಂಗಳಾದರೂ ಹಣ ಹೂಡಿಕೆ ಮಾಡಿರಲಿಲ್ಲ.

14 ಬಾರಿ ಇರಿತಕ್ಕೊಳಗಾದ ಉದ್ಯಮಿ: ಈ ಮಧ್ಯೆ ಉದ್ಯಮಿ ಕೃಷ್ಣಯಾದವ್‌ಗೆ ಹೆಣ್ಣಿನ ಮೇಲೆ ಹೆಚ್ಚಿನ ವ್ಯಾಮೋಹ ಇತ್ತು ಎಂದು ಹೇಳಲಾಗಿದೆ. ಮಾ.11ರಂದು ಆರೋಪಿ ಸಂತೋಷ್‌ ಜತೆ ಕಾರಿನಲ್ಲಿ ಯಲಹಂಕದ ಬಾರ್‌ನಲ್ಲಿ ಮದ್ಯ ಸೇವಿಸಿ ವಿವಿಧೆಡೆ ಸುತ್ತಾಡಿದ್ದ ಕೃಷ್ಣಯಾದವ್‌ಗೆ ಆರೋಪಿ ಸಂತೋಷ್‌ ಕುಮಾರ್‌, ತನ್ನ ಮೊಬೈಲ್‌ನಲ್ಲಿದ್ದ 2ನೇ ಪತ್ನಿಯ ಫೋಟೋವನ್ನು ತೋರಿಸಿದ್ದಾನೆ. ಅದರಿಂದ ವ್ಯಾಮೋಹಕ್ಕೊಳಗಾದ ಕೃಷ್ಣಯಾದವ್‌, “ಬಟ್ಟೆ ಅಂಗಡಿಗೆ ಒಂದೆರಡು ದಿನದಲ್ಲೇ ಲಕ್ಷಾಂತರ ರೂ. ಹೂಡಿಕೆ ಮಾಡುತ್ತೇನೆ. ಇಂದು ರಾತ್ರಿ ನಿನ್ನ ಪತ್ನಿಯನ್ನು ನನ್ನೊಂದಿಗೆ ಕಳುಹಿಸು’ ಎಂದು ಕೇಳಿದ್ದಾನೆ. ಅದರಿಂದ ಕೋಪಗೊಂಡು ಆರೋಪಿ, ಉದ್ಯಮಿ ಕೃಷ್ಣಯಾದವ್‌ ಜತೆ ಜಗಳ ಆರಂಭಿಸಿದ್ದಾನೆ. ಅದು ವಿಕೋಪಕ್ಕೆ ಹೋದಾಗ ಆರೋಪಿ ಕಾರಿನಲ್ಲಿದ್ದ ಚಾಕುವಿನಿಂದ ಕೃಷ್ಣಯಾದವ್‌ನ ದೇಹದ ವಿವಿಧೆಡೆ 14 ಬಾರಿ ಇರಿದು ಪರಾರಿಯಾಗಿದ್ದ. ಇತ್ತ ಕೃಷ್ಣಯಾದವ್‌ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದ.ಬಳಿಕ ಪ್ರಕರಣ ದಾಖಲಿಸಿಕೊಂಡು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.


ಏನಿದು ಪ್ರಕರಣ? : 


ಆರೋಪಿ ಸಂತೋಷ್‌ ಜತೆ ಉದ್ಯಮಿ ಕೃಷ್ಣಯಾದವ್‌ ಸೋಮವಾರ ಸಂಜೆ ತನ್ನ ಸ್ವಿಫ್ಟ್‌ ಕಾರಿನಲ್ಲಿ ಹೊರಗಡೆ ಹೋಗಿದ್ದಾನೆ. ರಾತ್ರಿಯಾದರೂ ಮನೆಗೆ ವಾಪಸ್‌ ಬಂದಿರಲಿಲ್ಲ. ಈ ಸಂಬಂಧ ಕುಟುಂಬ ಸದಸ್ಯರು ಠಾಣೆಗೆ ದೂರು ನೀಡಿದ್ದರು. ಮಂಗಳವಾರ ಬೆಳಗ್ಗೆ ಬಾಗಲೂರು ಕ್ರಾಸ್‌ನ ಪಾದಚಾರಿ ಮಾರ್ಗದಲ್ಲಿ ಅನುಮಾನ ಸ್ಪದ ರೀತಿ ಯಲ್ಲಿ ಕಾರಿನಲ್ಲಿ ಕೃಷ್ಣ ಯಾದವ್‌ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆಡ್ವಾಣಿ ಮುರಳಿ ಮನೋಹರ ಜೋಷಿ ಮಂದಿರ ಉದ್ಘಾಟನೆಗೆ ಬರದಂತೆ ಮನವಿ ಮಾಡಿದ್ದೇವೆ ; ಚಂಪತ್ ರಾಯ್

Posted by Vidyamaana on 2023-12-19 20:47:58 |

Share: | | | | |


ಆಡ್ವಾಣಿ ಮುರಳಿ ಮನೋಹರ ಜೋಷಿ ಮಂದಿರ ಉದ್ಘಾಟನೆಗೆ  ಬರದಂತೆ ಮನವಿ ಮಾಡಿದ್ದೇವೆ ; ಚಂಪತ್ ರಾಯ್

ಅಯೋಧ್ಯೆ, ಡಿ.19: ರಾಮಮಂದಿರ ಚಳವಳಿಯ ಮುಂಚೂಣಿಯಲ್ಲಿದ್ದ ಬಿಜೆಪಿ ಪಾಲಿನ ಮುತ್ಸದ್ಧಿಗಳಾದ ಎಲ್.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿಯವರು ವಯಸ್ಸು ಮತ್ತು ಆರೋಗ್ಯಸಮಸ್ಯೆ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ನಡೆಯುವ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಗೈರುಹಾಜರಾಗುವ ಸಾಧ್ಯತೆಗಳಿವೆ ಎಂದು ರಾಮ ಮಂದಿರ ಟ್ರಸ್ಟ್ ಹೇಳಿದೆ.


"ಕುಟುಂಬದ ಅತ್ಯಂತ ಹಿರಿಯರಾಗಿರುವ ಇಬ್ಬರು ಮುಖಂಡರ ವಯಸ್ಸಿನ ಹಿನ್ನೆಲೆಯಲ್ಲಿ ಅವರು ಸಮಾರಂಭಕ್ಕೆ ಆಗಮಿಸದಂತೆ ಮನವಿ ಮಾಡಿಕೊಳ್ಳಲಾಗಿದ್ದು, ಇದಕ್ಕೆ ಇಬ್ಬರೂ ಒಪ್ಪಿಕೊಂಡಿದ್ದಾರೆ" ಎಂದು ರಾಮಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸುದ್ದಿಗಾರರಿಗೆ ತಿಳಿಸಿದ್ದಾರೆ. 


ಅಡ್ವಾಣಿಗೆ 96 ವರ್ಷ ವಯಸ್ಸಾಗಿದ್ದು, ಮುರಳಿ ಮನೋಹರ ಜೋಶಿಯವರು ಮುಂದಿನ ತಿಂಗಳು 90ಕ್ಕೆ ಕಾಲಿಡಲಿದ್ದಾರೆ. ಜನವರಿ 22ರಂದು ನಡೆಯುವ ಪ್ರತಿಷ್ಠೆ ಕಾರ್ಯಕ್ಕೆ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಇದರಲ್ಲಿ ಭಾಗವಹಿಸುತ್ತಿದ್ದಾರೆ ಎಂದು ರಾಯ್ ಸ್ಪಷ್ಟಪಡಿಸಿದರು.


ಜನವರಿ 15ರ ವೇಳೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಳ್ಳಲಿದ್ದು, ಪ್ರಾಣ ಪ್ರತಿಷ್ಠೆಯ ಪೂಜಾ ವಿಧಿವಿಧಾನಗಳು ಜನವರಿ 16ರಂದು ಆರಂಭಗೊಂಡು 22ರ ವರೆಗೂ ಮುಂದುವರಿಯಲಿವೆ ಎಂದು ವಿವರಿಸಿದರು. ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಕರೆಸಲು ಮೂರು ಮಂದಿಯ ತಂಡವನ್ನು ನೇಮಕ ಮಾಡಲಾಗಿದೆ. ಇದಲ್ಲದೆ, ದೇಶದ ವಿವಿಧೆಡೆಯಿಂದ ನಾಲ್ಕು ಸಾವಿರ ಸಾಧು ಸಂತರು, 2200 ಅತಿಥಿಗಳು ಆಗಮಿಸಲಿದ್ದಾರೆ ಎಂದು ಚಂಪತ್ ರಾಯ್ ತಿಳಿಸಿದ್ದಾರೆ. 


ಉದ್ಘಾಟನಾ ಕಾರ್ಯಕ್ರಮದ ನಂತರ ಜನವರಿ 24ರಿಂದ 48 ದಿವಸಗಳ ಮಂಡಲ ಪೂಜೆ ಆರಂಭಗೊಳ್ಳಲಿದ್ದು ಜನವರಿ 23ರಿಂದಲೇ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದಿದ್ದಾರೆ.

ಡಾ .ನಝೀರ್‍ಸ್ ಡಯಾಬೆಟ್ಸ್ ಸೆಂಟರ್ 10ನೇ ವರ್ಷಕ್ಕೆ ಪಾದಾರ್ಪಣೆ ಉಚಿತ ಆರೋಗ್ಯ ತಪಾಸಣೆ

Posted by Vidyamaana on 2023-04-09 08:31:43 |

Share: | | | | |


ಡಾ .ನಝೀರ್‍ಸ್ ಡಯಾಬೆಟ್ಸ್ ಸೆಂಟರ್ 10ನೇ ವರ್ಷಕ್ಕೆ ಪಾದಾರ್ಪಣೆ  ಉಚಿತ ಆರೋಗ್ಯ ತಪಾಸಣೆ

ಪುತ್ತೂರು: ಕಲ್ಲಾರೆ ಕೃಷ್ಣಾ ಆರ್ಕೆಡ್‌ನಲ್ಲಿ ಕಾರ್ಯಾಚರಿಸುತ್ತಿರುವ ವೈದ್ಯಕೀಯ ಹಾಗೂ ಮಧುಮೇಹ ತಜ್ಞ ಡಾ.ನಝೀರ್ ಅಹಮದ್ ಕೆ.ರವರ ಡಾ.ನಝೀರ್‍ಸ್ ಡಯಾಬೆಟ್ಸ್ ಸೆಂಟರ್ ನ ದಶಮಾನೋತ್ಸವಕ್ಕೆ ಕಾಲಿಟ್ಟ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ನಡೆಯಿತು.

ನ್ಯೂಜಿಲ್ಯಾಂಡ್ ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟ ಭಾರತ

Posted by Vidyamaana on 2023-11-15 22:40:21 |

Share: | | | | |


ನ್ಯೂಜಿಲ್ಯಾಂಡ್ ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟ ಭಾರತ

ಮುಂಬೈ: ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಭಾರತ ತಂಡ ನ್ಯೂಝಿಲ್ಯಾಂಡ್ ವಿರುದ್ಧ 70 ರನ್ ಗಳ ಗೆಲುವು ಸಾಧಿಸಿದೆ.


ಮುಹಮ್ಮದ್ ಶಮಿ ಶಿಸ್ತುಬದ್ಧ ಬೌಲಿಂಗ್ ದಾಳಿ ವಿರಾಟ್ ಮತ್ತು ಶ್ರೇಯಸ್ ಅಮೋಘ ಶತಕದ ನೆರವಿನಿಂದ ಭಾರತ ಸೆಮಿ ಫೈನಲ್ ನಲ್ಲಿ ನ್ಯೂಝಿಲ್ಯಾಂಡ್ ಮಣಿಸಿ ಕಳೆದ ಬಾರಿಯ ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಂಡಿದೆ.


ವಿರಾಟ್ ಸಾರ್ವಕಾಲಿಕ ದಾಖಲೆಯ 50 ನೇ ಏಕದಿನ ಶತಕ ಹಾಗೂ ಮುಹಮ್ಮದ್ ಶಮಿ ಜೀವನ ಶ್ರೇಷ್ಠ ವಿಶ್ವಕಪ್ ನ 4 ಐದು ವಿಕೆಟ್ ಗೊಂಚಲು ನೆರವಿಂದ ಭಾರತ ಫೈನಲ್ ಪ್ರವೇಶಿಸಿದೆ.ಭಾರತ ನೀಡಿದ 398 ರನ್ ಗುರಿ ಬೆನ್ನತ್ತಿದ ಕಿವೀಸ್ ತೀವ್ರ ಹೋರಾಟ ನೀಡಿ ಸೋಲೊಪ್ಪಿಕೊಂಡಿದೆ.ಭಾರತದ ಕಠಿಣ ಗುರಿ ಬೆನ್ನತ್ತಲು ಸ್ಪೋಟಕ ಆರಂಭದ ನಿರೀಕ್ಷೆಯಲ್ಲಿ ಬ್ಯಾಟಿಂಗ್ ಗೆ ಬಂದಿದ್ದಕಿವೀಸ್ ಗೆ ಮುಹಮ್ಮದ್ ಶಮಿ ಆರಂಭಿಕ ಆಘಾತ ನೀಡಿದರು. ನ್ಯೂಝಿಲ್ಯಾಂಡ್ ಓಪನರ್ ಗಳಾದ ಡೆವೋನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಕ್ರಮವಾಗಿ 13 ರನ್ ಗೆ ಮುಹಮ್ಮದ್ ಶಮಿ ಎಸೆತದಲ್ಲಿ ವಿಕೆಟ್ ಕೀಪರ್ ಕೆ ಎಲ್ ರಾಹುಲ್ ಗೆ ಕ್ಯಾಚಿತ್ತು ಔಟ್ ಆದರು. ಬಳಿಕ ಬ್ಯಾಟಿಂಗ್ ಬಂದ ನಾಯಕ ಕೇನ್ ವಿಲಿಯಮ್ಪನ್ ಹಾಗೂ ಡೆರಲ್ ಮಿಚೆಲ್ ಜೋಡಿ, ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಚೇತರಿಕೆ ನೀಡುವಲ್ಲಿ ಯಶಸ್ವಿ ಯಾದರು. ಭಾರತೀಯ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ವಿಲಿಯನ್ಸನ್ 69 ರನ್ ಗಳಿಸಿ ಶಮಿ ಎಸೆತದಲ್ಲಿ ವಿಕೆಟ್ ಒಪ್ಪಿಸಿದರೆ, ಡರೆಲ್ ಮಿಚೆಲ್ 119 ಎಸೆತಗಳಲ್ಲಿ 9 ಬೌಂಡರಿ 7 ಸಿಕ್ಸರ್ ನೆರವಿನಿಂದ ಸ್ಪೋಟಕ ಬ್ಯಾಟಿಂಗ್ ಮುಂದುವರಿಸಿ ಕಿವೀಸ್ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದ್ದರು. ಆದರೆ ಶಮಿ ಬೌಲಿಂಗ್ ನಲ್ಲಿ ಜಡೇಜಾಗೆ ವಿಕೆಟ್ ನೀಡಿ ಪೆವಿಲಿಯನ್ ಸೇರಿಕೊಂಡರು.

Recent News


Leave a Comment: