ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಸುದ್ದಿಗಳು News

Posted by vidyamaana on 2024-07-25 12:27:06 |

Share: | | | | |


ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಪಣಂಬೂರು: ಇಲ್ಲಿನ ಜೋಕಟ್ಟೆ ಗ್ರಾಮ ಪಂಚಾಯತ್ ಗುಡ್ಡೆ ಎಂಬಲ್ಲಿ ಮನೆಯ ಮೇಲೆ� ತಡೆಗೋಡೆ ಕುಸಿದು ಬಿದ್ದು ಯುವಕ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ‌.ಮುಲ್ಕಿ ಕೊಲ್ನಾಡು ನಿವಾಸಿ ಶಂಕರ ಎಂಬವರ ಪುತ್ರ ಶೈಲೇಶ್ (17) ಮೃತ ಯುವಕ. ಜೋಕಟ್ಟೆಯಲ್ಲಿರುವ ತನ್ನ ದೊಡಮ್ಮನ ಮಗಳ ಮನೆಗೆ ಬಂದಿದ್ದ ಶೈಲೇಶ್, ಇಲ್ಲಿಯೇ ಉಳಿದುಕೊಂಡಿದ್ದ.

ಮನೆಯಲ್ಲಿ ಶೈಲೇಶ್ ರವರ ದೊಡ್ಡಮನ ಮಗಳು ಸವಿತಾ, ಆಕೆಯ ಗಂಡ ಸುರೇಶ್ ಮತ್ತು ಮಗು ಸಾಕ್ಷಿ ಮನೆಯ ಒಂದು ಕೋಣೆಯಲ್ಲಿ ಮಲಗಿದ್ದು, ಶೈಲೇಶ್ ಇನ್ನೊಂದು ಕಡೆ ಮಲಗಿದ್ದ. ತಡೆಗೋಡೆ ಕುಸಿದು ಹಂಚಿನ ಮನೆಯ ಮೇಲೆ ಬಿದ್ದಿದ್ದರಿಂದ ಅಲ್ಲಿ ಮಲಗಿದ್ದ ಶೈಲೇಶ್ ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ. ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಇತರ ಮೂರು ಜನರಲ್ಲಿ ಸವಿತಾ ಅವರಿಗೆ ಸಣ್ಣ ಗಾಯವಾಗಿದ್ದು‌, ಚಿಕಿತ್ಸೆ ಪಡೆದಿದ್ದಾರೆ‌ ಎಂದು ತಿಳಿದು ಬಂದಿದೆ.

ಶೈಲೇಶ್ ಅವರ ಮೃತದೇಹವನ್ನು ನಗರದ ಎ.ಜೆ.ಆಸ್ಪತ್ರೆಯ ಶವಗಾರದಲ್ಲಿಡಲಾಗಿದ್ದು, ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

 Share: | | | | |


ಕುದ್ಕಾಡಿ ಮನೆ ದರೋಡೆ ಪ್ರಕರಣ – ಖದೀಮರು ಅದೆಷ್ಟು ಚಾಣಾಕ್ಷರಾಗಿದ್ರು ಗೊತ್ತಾ?

Posted by Vidyamaana on 2023-09-30 09:35:38 |

Share: | | | | |


ಕುದ್ಕಾಡಿ ಮನೆ ದರೋಡೆ ಪ್ರಕರಣ – ಖದೀಮರು ಅದೆಷ್ಟು ಚಾಣಾಕ್ಷರಾಗಿದ್ರು ಗೊತ್ತಾ?

ಪುತ್ತೂರು: ಪಡುವನ್ನೂರು ಗ್ರಾಮದ ಕುದ್ಕಾಡಿಯಲ್ಲಿ ನಡೆದ ದರೋಡೆ ಪ್ರಕರಣವನ್ನು ಭೇದಿಸಿರುವ ಪುತ್ತೂರು ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಈ ಪೈಕಿ ಒಬ್ಬಾತ ಜೈಲಿನಲ್ಲಿದ್ದು ಪೆರೋಲ್ ಮೇಲೆ ಹೊರಗೆ ಬಂದಿರುವಾಗಲೇ ಕೃತ್ಯ ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.


ದರೋಡೆ ಕೃತ್ಯದಲ್ಲಿ ಆರು ಮಂದಿಯನ್ನು ಬಂಧಿಸಿರುವ ಬಗ್ಗೆ ಎಸ್ಪಿ ರಿಷ್ಯಂತ್, ಸುದ್ದಿಗೋಷ್ಟಿ ನಡೆಸಿ ವಿವರ ನೀಡಿದ್ದಾರೆ. ಕಾಸರಗೋಡು ಜಿಲ್ಲೆಯ ಕುಖ್ಯಾತ ದರೋಡೆ ಗ್ಯಾಂಗ್ ಕೃತ್ಯದಲ್ಲಿ ಭಾಗಿಯಾಗಿದ್ದನ್ನು ಎಸ್ಪಿ ದೃಢಪಡಿಸಿದ್ದಾರೆ. ಸನಾಲ್, ಕಿರಣ್, ವಸಂತ್, ಫೈಜಲ್, ಸುಧೀರ್, ಅಬ್ದುಲ್ ನಿಸಾರ್ ಬಂಧಿತ ಆರೋಪಿಗಳು. ಇವರ ಪೈಕಿ ಸನಾಲ್ ಕೆವಿ ಕಾಸರಗೋಡು ಜಿಲ್ಲೆಯಲ್ಲಿ ಕುಖ್ಯಾತ ದರೋಡೆಕೋರನಾಗಿದ್ದು, 15ಕ್ಕೂ ಹೆಚ್ಚು ಕೇಸುಗಳನ್ನು ಹೊಂದಿದ್ದಾನೆ. ಹಿಂದೊಮ್ಮೆ ಜೈಲಿನಿಂದ ತಪ್ಪಿಸಿಕೊಂಡು ಹೋಗಿದ್ದ ಪ್ರಕರಣವೂ ಈತನ ಮೇಲಿದೆ. ನಾಲ್ಕು ಪ್ರಕರಣಗಳಲ್ಲಿ ಕೇರಳದ ಜೈಲಿನಲ್ಲಿ 9 ವರ್ಷಗಳ ಶಿಕ್ಷೆ ಅನುಭವಿಸಿದ್ದ.

ಎಲ್ಲರೂ ಕ್ರಿಮಿನಲ್ ಹಿನ್ನೆಲೆಯವರಾಗಿದ್ದು ಕಿರಣ್ ಮತ್ತು ಫೈಜಲ್ ತಲಾ ಮೂರು ಪ್ರಕರಣ ಹೊಂದಿದ್ದಾರೆ. ಸುಧೀರ್ ಮೇಲೆ ವಿಟ್ಲ ಮತ್ತು ಪುತ್ತೂರಿನಲ್ಲಿ ಕೇಸು ಇದೆ. ಕಾಸರಗೋಡು ಗಡಿಭಾಗ ಇಚ್ಲಂಗೋಡು ಗ್ರಾಮದ ಪಜ್ಜಂಬಳ ರವಿ 12 ವರ್ಷಗಳ ಹಿಂದಿನ ಪೆರ್ಲದ ಜಬ್ಬಾರ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ. ಕೇರಳದ ಜೈಲಿನಲ್ಲಿದ್ದ ರವಿ ಇತ್ತೀಚೆಗೆ 15 ದಿನಗಳ ಜಾಮೀನಿನಲ್ಲಿ ಜೈಲಿನಿಂದ ಹೊರಬಂದಿದ್ದ. ಈ ವೇಳೆ, ದರೋಡೆ ತಂಡದ ಜೊತೆ ಸೇರಿ ಕೃತ್ಯಕ್ಕೆ ಕೈಜೋಡಿಸಿದ್ದು, ಆನಂತರ ಮತ್ತೆ ಜೈಲಿಗೆ ಹೋಗಿದ್ದಾನೆ. ಕುದ್ಕಾಡಿಯ ಗುರುಪ್ರಸಾದ್ ಅವರ ಪರಿಚಯ ಹೊಂದಿದ್ದ ವಿಟ್ಲ ಪೆರುವಾಯಿ ನಿವಾಸಿ ಸುಧೀರ್, ದರೋಡೆ ತಂಡಕ್ಕೆ ಮಾಹಿತಿ ನೀಡಿ, ಅಲ್ಲಿ ಸಾಕಷ್ಟು ಬಂಗಾರ, ನಗದು ಇರಬಹುದು ಎಂದು ಹೇಳಿದ್ದ. ಆದರೆ ಮನೆಯಲ್ಲಿ ತಡಕಾಡಿದ್ದ ದರೋಡೆ ತಂಡಕ್ಕೆ ನಿರೀಕ್ಷೆ ಮಾಡಿದಷ್ಟು ಚಿನ್ನಾಭರಣ ಸಿಕ್ಕಿರಲಿಲ್ಲ. ಸುಧೀರ್ ಈ ಹಿಂದೆ ವಿಟ್ಲದಲ್ಲಿ ಕಾಳು ಮೆಣಸು ದರೋಡೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಕುದ್ಕಾಡಿ ಗುರುಪ್ರಸಾದ್ ರೈ ಅವರಿಗೆ ಸಂಬಂಧಿಕರ ಮೂಲಕ ಪರಿಚಯ ಆಗಿದ್ದ. ಹೀಗಾಗಿ ಉಂಡ ಮನೆಗೇ ದ್ರೋಹ ಬಗೆದಿರುವುದು ಈಗ ಬಯಲಾಗಿದೆ.

ಪದೇ ಪದೇ ಕೃತ್ಯದಲ್ಲಿ ತೊಡಗುತ್ತಿದ್ದುದರಿಂದ ಇವರಿಗೆ ಸಾಕ್ಷ್ಯ ನಾಶದ ಬಗ್ಗೆ ತಿಳಿದಿತ್ತು. ದರೋಡೆ ಕೃತ್ಯ ನಡೆಸಿದ ವೇಳೆ ಮೊಬೈಲ್ ಬಳಕೆ ಮಾಡಿರಲಿಲ್ಲ. ಅಲ್ಲದೆ, ಮನೆಮಂದಿಯ ಮೊಬೈಲನ್ನೂ ತೆಗೆದು ನೀರಿಗೆ ಹಾಕಿದ್ದರು. ಅಲ್ಲದೆ, ತಾವು ಬಳಸಿದ್ದ ಪರಿಕರಗಳನ್ನು ಯಾವುದನ್ನೂ ಬಿಡದೆ ಒಯ್ದಿದ್ದರು. ಎಲ್ಲರೂ ಮುಸುಕು ಹಾಕಿದ್ದರಿಂದ ಮನೆಯವರಿಗೂ ಗುರುತು ಹಚ್ಚಲು ಆಗಿರಲಿಲ್ಲ. ಹೀಗಾಗಿ ಪ್ರಕರಣ ಭೇದಿಸುವುದು ತುಂಬ ಸವಾಲಾಗಿತ್ತು. ತಾಂತ್ರಿಕ ಸಾಕ್ಷ್ಯಗಳನ್ನು ಆಧರಿಸಿ ಪೊಲೀಸರು ಪ್ರಕರಣ ಪತ್ತೆಹಚ್ಚಿದ್ದು, ಉತ್ತಮ ಕೆಲಸ ಮಾಡಿದ್ದಕ್ಕಾಗಿ ಪೊಲೀಸ್ ತಂಡಕ್ಕೆ ಬಹುಮಾನ ನೀಡುತ್ತೇನೆ ಎಂದು ಎಸ್ಪಿ ರಿಷ್ಯಂತ್ ತಿಳಿಸಿದ್ದಾರೆ.


ಕೃತ್ಯದ ಬಳಿಕ ಗುರುಪ್ರಸಾದ್ ಮತ್ತು ಅವರ ತಾಯಿಯನ್ನು ಹಗ್ಗದಿಂದ ಬಿಡಿಸಿ, ಕುಡಿಯಲು ನೀರು ಕೊಟ್ಟಿದ್ದರು. ವೃದ್ಧ ತಾಯಿಯ ಕಾಲು ಮುಟ್ಟಿ ನಮಸ್ಕರಿಸಿ ತೆರಳಿದ್ದರು. ಇದರಿಂದ ಮನೆಯವರ ಬಗ್ಗೆ ತಿಳಿದವರೇ ಕೃತ್ಯ ಎಸಗಿದ್ದಾರೆಂಬ ಅನುಮಾನ ಪೊಲೀಸರಲ್ಲಿತ್ತು. ಕೂಲಿ ಕೆಲಸಕ್ಕೆ ಬರುತ್ತಿದ್ದವರ ಬಗ್ಗೆಯೂ ಅನುಮಾನಗಳಿದ್ದವು. ಸುಳಿವು ಸಿಗದೇ ಇದ್ದಾಗ ದರೋಡೆ ಕೃತ್ಯದಲ್ಲಿ ನಿರತರಾಗಿರುವ ಕಾಸರಗೋಡಿನ ಕುಖ್ಯಾತ ಕ್ರಿಮಿನಲ್ ಗಳನ್ನು ಗುರಿಯಾಗಿಸಿ ತನಿಖೆ ನಡೆಸಿದಾಗ, ಕೃತ್ಯ ಬೆಳಕಿಗೆ ಬಂದಿತ್ತು. ಸೆ.6ರಂದು ನಸುಕಿನ ವೇಳೆಗೆ ಪಡುವನ್ನೂರು ಗ್ರಾಮದ ಕುದ್ಕಾಡಿಯ ಕಾಂಗ್ರೆಸ್ ಮುಖಂಡ ಗುರುಪ್ರಸಾದ್ ರೈ ಮನೆಯಲ್ಲಿ ದರೋಡೆ ಕೃತ್ಯ ನಡೆದಿತ್ತು.


ಪ್ರಕರಣದ ತನಿಖೆಗಾಗಿ ಸರ್ಕಲ್ ಇನ್ಸ್ ಪೆಕ್ಟರ್ ರವಿ ಬಿಎಸ್ ನೇತೃತ್ವದಲ್ಲಿ ಅಪರಾಧ ಪತ್ತೆಯಲ್ಲಿ ಪಳಗಿದ್ದ ಸಿಬಂದಿಯನ್ನು ಒಳಗೊಂಡ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಪೊಲೀಸ್ ಅಧೀಕ್ಷಕ ರಿಷ್ಯಂತ್ ಸಿ.ಬಿ., ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ ಎಸ್‌ .ಎಂ. ಇವರುಗಳ ನಿರ್ದೇಶನದಂತೆ ಮತ್ತು ಪುತ್ತೂರು ಉಪ-ವಿಭಾಗದ ಪೊಲೀಸ್ ಉಪ ಅಧೀಕ್ಷಕ ಡಾ. ಗಾನ ಪಿ, ಕುಮಾರ್ ರವರ ಮಾರ್ಗದರ್ಶನದ ಮೇರೆಗೆ ವಿಶೇಷ ಪತ್ತೆ ತಂಡದ ಅತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್. ರವರ ನೇತೃತ್ವದಲ್ಲಿ ಪುತ್ತೂರು ಸಂಚಾರ ಪೊಲೀಸ್ ಪಿಎಸ್‌ಐ ಉದಯರವಿ ಎಂ ವೈ, ಪುತ್ತೂರು ಗ್ರಾಮಾಂತರ ಠಾಣಾ ಪಿಎಸ್‌ಐ ಧನಂಜಯ ಬಿ.ಸಿ., ಉಪ್ಪಿನಂಗಡಿ ಠಾಣಾ ಪಿಎಸ್‌ಐ ರುಕ್ಮ ನಾಯ್ಕ್, ಉಪ್ಪಿನಂಗಡಿ ಠಾಣಾ ಹೆಚ್.ಸಿ. ಹರೀಶ್ಚಂದ್ರ, ವೇಣೂರು ಠಾಣಾ ಹೆಚ್.ಸಿ. ಪ್ರವೀಣ್ ಮೂರುಗೋಳಿ, ವಿಟ್ಲ ಪೊಲೀಸ್ ಠಾಣಾ ಹೆಚ್ ಸಿ ಉದಯ ರೈ, ಪುತ್ತೂರು ಗ್ರಾಮಾಂತರ ವೃತ್ತ ಕಛೇರಿಯ ಹೆಚ್ ಸಿ ಅಬ್ದುಲ್ ಸಲೀಂ, ಪಿಸಿ, ಜಗದೀಶ್ ಅತ್ತಾಜೆ, ಎ.ಹೆಚ್.ಸಿ ಹರೀಶ್, ಪುತ್ತೂರು ಗ್ರಾಮಾಂತರ ಠಾಣಾ ಎಎಸ್‌ಐ ಮುರುಗೇಶ್, ಹೆಚ್.ಸಿ ಪ್ರವೀಣ್ ರೈ, ಹೆಚ್.ಸಿ ಅದ್ರಾಮ್, ಹೆಚ್.ಸಿ ಬಾಲಕೃಷ್ಣ, ಹೆಚ್.ಸಿ ಹರೀಶ್, ಹೆಚ್.ಸಿ ಪ್ರಶಾಂತ್, ಪಿಸಿ ಮುನಿಯ ನಾಯ್ಕ, ಪುತ್ತೂರು ಸಂಚಾರ ಠಾಣಾ ಹೆಚ್.ಸಿ ಪ್ರಶಾಂತ್ ರೈ, ಪುತ್ತೂರು ನಗರ ಠಾಣಾ ಪಿಸಿ ವಿನಾಯಕ ಎಸ್ ಬಾರ್ಕಿ, ಪಿಸಿ ಶರಣಪ್ಪ ಪಾಟೀಲ್, ಬಂಟ್ವಾಳ ಸಂಚಾರ ಠಾಣಾ ಪಿಸಿ ವಿವೇಕ್, ಪಿಸಿ ಕುಮಾರ್ ಕೆ, ಜಿಲ್ಲಾ ಗಣಕಯಂತ್ರ ವಿಭಾಗದ ಎಹೆಚ್‌ ಸಂಪತ್‌ ಕುಮಾರ್, ಸಿಪಿಸಿ ದಿವಾಕರ್, ವಾಹನ ಚಾಲಕ ಪ್ರವೀಣ್ ಹಾಗೂ ಪುತ್ತೂರು ಗ್ರಾಮಾಂತರ ಠಾಣೆಯ ಎಲ್ಲಾ ಅಧಿಕಾರಿ & ಸಿಬ್ಬಂದಿಗಳು ಈ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಬಡವರ ಮನೆಗೆ ಅಕ್ಕಿ ಮುಟ್ಟಿಸುವ ಯೋಜನೆಗೆ ನನ್ನ ಅಭಿನಂದನೆ

Posted by Vidyamaana on 2023-07-17 14:52:01 |

Share: | | | | |


ಬಡವರ ಮನೆಗೆ ಅಕ್ಕಿ ಮುಟ್ಟಿಸುವ ಯೋಜನೆಗೆ ನನ್ನ ಅಭಿನಂದನೆ

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರಕಾರದ ಅನ್ನ ಭಾಗ್ಯ ಯೋಜನೆ ಕುರಿತು ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಗುರುರಾಜ್ ಗಂಟಿಹೊಳೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ವಿಧಾನಸಭೆಯಲ್ಲಿ ಸೋಮವಾರ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ನಾನು ಬಿಜೆಪಿ ಸದಸ್ಯನಾಗಿದ್ದರೂ ಬಡವರ ಮನೆಗೆ ಅಕ್ಕಿಯನ್ನು ಮುಟ್ಟಿಸುವ ಯೋಜನೆಯನ್ನು ಅಭಿನಂದಿಸುತ್ತೇನೆ.ಅನ್ನಭಾಗ್ಯ ಯೋಚನೆ ಮತ್ತು ಯೋಜನೆ ರೂಪಿಸಿದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದನ್ನು ಯಾವುದೇ ಸರಕಾರ ಜಾರಿ ಮಾಡಿರಲಿ, ಕೊನೆಗೆ ಬಡವನ ಮನೆಗೆ ಅದು ಮುಟ್ಟಿದೆ. ಬಡತನವನ್ನು ಅನುಭವಿಸಿದವನಿಗಷ್ಟೇ ಅದರ ಮೌಲ್ಯ ಗೊತ್ತಾಗುತ್ತೆ ಎಂದು ಹೇಳಿದರು.ಆದರೆ ಬಡತನ ಎನ್ನುವುದು ಅಣಕದ ವಿಚಾರವಾಗ ಕೂಡದು. ದುಡಿಯುವ ಕೈಗಳಿಗೆ ಕೆಲಸ ಒದಗಿಸಿದರೆ ಬಡತನ ಎನ್ನುವುದಕ್ಕೆ ತಿಲಾಂಜಲಿ ಹಾಡಬಹುದು. ಸರಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕು ಎಂದು ಗುರುರಾಜ್ ಅವರು ತಿಳಿಸಿದರು.

ಎ 24:ಮುಕ್ವೆ ಯಲ್ಲಿ ಕಾಂಗ್ರೆಸ್ ಚುನಾವಣಾ ಸಭೆ.

Posted by Vidyamaana on 2023-04-23 10:24:41 |

Share: | | | | |


ಎ 24:ಮುಕ್ವೆ ಯಲ್ಲಿ ಕಾಂಗ್ರೆಸ್ ಚುನಾವಣಾ ಸಭೆ.

ಪುತ್ತೂರು :ಇಲ್ಲಿನ ಮುಕ್ವೆ ಜಂಕ್ಷನ್ ಹೆವೆನ್ ರೆಸಿಡೆನ್ಸಿ ಬಳಿ ಏ 24 ಸೋಮವಾರ ದಂದು ಬೆಳಗ್ಗೆ 9ಗಂಟೆಗೆ ಸಾರ್ವಜನಿಕ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ್ ಕುಮಾರ್ ಮುಖ್ಯ ಭಾಷಣ ಮಾಡಲಿದ್ದಾರೆ, ಮುಖ್ಯ ಅತಿಥಿಗಳಾಗಿ  ಪಕ್ಷದ ನಾಯಕರುಗಳು ಭಾಗವಹಿಸಲಿದ್ದಾರೆ. ಸ್ಥಳೀಯ ಘಟಕದ ಅಧ್ಯಕ್ಷರುಗಳು ಎಲ್ಲಾ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕಾಗಿ ನರಿಮೊಗರು  ವಲಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು  ಪ್ರಕಟಣೆಗೆ ತಿಳಿಸಿದ್ದಾರೆ

15 ದಿನದಲ್ಲಿ ನೂತನ ಕಚೇರಿ ಪ್ರಾರಂಭ ಸಾರ್ವಜನಿಕರ ಸೇವೆಗಾಗಿ 6 ಸಿಬಂದಿ ನೇಮಕ: ಶಾಸಕ ರೈ

Posted by Vidyamaana on 2023-06-12 12:45:41 |

Share: | | | | |


15 ದಿನದಲ್ಲಿ ನೂತನ ಕಚೇರಿ ಪ್ರಾರಂಭ ಸಾರ್ವಜನಿಕರ ಸೇವೆಗಾಗಿ 6 ಸಿಬಂದಿ ನೇಮಕ: ಶಾಸಕ ರೈ

ಪುತ್ತೂರು: ಮುಂದಿನ ೧೫ ದಿನದೊಳಗೆ ನನ್ನ ನೂತನ ಕಚೇರಿ ಪುತ್ತೂರಿನಲ್ಲಿ ಪ್ರಾರಂಭವಾಗಲಿದ್ದು ಸರಕಾರಿ ಆಸ್ಪತ್ರೆಯ ಬಳಿ ಇರುವ ಈಗಿನ ಪುಡಾ ಕಟ್ಟಡದಲ್ಲಿ ನೂತನ ಕಚೇರಿ ಕಾರ್ಯಾರಂಭಿಸಲಿದೆ ಎಂದು ಶಾಸಕರಾದ ಅಶೋಕ್ ರೈ ತಿಳಿಸಿದರು.

ನೂತನ ಕಚೇರಿಯಲ್ಲಿ ಸಾರ್ವಜನಿಕರ ಸೇವೆಗಾಗಿ ೬ ಮಂದಿ ಸಿಬಂದಿಯನ್ನು ನೇಮಕ ಮಾಡಲಿದ್ದೇನೆ. ವಿವಿಧ ಇಲಾಖೆಗೆ ಸಂಬಂಧಿಸಿದಂತೆ ಅರ್ಜಿ ಸ್ವೀಕರಿಸಲು, ಮಾಹಿತಿ ನೀಡಲು, ಜನರಿಗೆ ಸ್ಪಂದನೆ ನೀಡಲು ಮತ್ತು ನಗರಸಭಾ ವ್ಯಾಪ್ತಿಯಲ್ಲಿರುವ ಜನರಿಗೆ ಸೇವೆ ಸಲ್ಲಿಸಲು ಬೇರೆ ಬೇರೆ ಕೌಂಟರ್‌ಗಳನ್ನು ಮಾಡಿ ಕಚೇರಿಯಲ್ಲಿ ಸಿಬಂದಿಗಳು ಸೇವೆ ಸಲ್ಲಿಸಲಿದ್ದಾರೆ. ಕಚೇರಿಗೆ ಬರುವ ಮಂದಿಗೆ ಕಚೇರಿಯಲ್ಲಿ ಶಾಸಕರಿಲ್ಲದೇ ಇದ್ದರೂ ಅವರ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯಬೇಕು ಮತ್ತು ಶಾಸಕರಿಲ್ಲದೇ ಇರುವ ಸಂದರ್ಭದಲ್ಲಿ ಬಂದ ಕೆಲಸ ಆಗಿಲ್ಲ ಎಂದು ಯಾರೂ ನೊಂದು ಕೊಳ್ಳುವಂತಾಗಬಾರದು. ದೂರದ ಊರುಗಳಿಂದ ಶಾಸಕರನ್ನು ಭೇಟಿಯಾಗಲು ಬರುವ ಶಾಸಕರು ತಮ್ಮ ಕೆಲಸ ಆಗದೆ ಯಾರೂ ಬರಿಗೈಯ್ಯಲ್ಲಿ ತೆರಳುವಂತಾಗಬಾರದು ಎಂಬ ಉದ್ದೇಶದಿಂದ ಕಚೇರಿಯಲ್ಲಿ ಎಲ್ಲಾ ಸೇವೆಗಳು ಲಭ್ಯವಾಗಲಿದೆ ಎಂದು ಶಾಸಕರು ತಿಳಿಸಿದ್ದಾರೆ.

ಕಡಬ : ಕಳಾರ ನಿವಾಸಿ ಮುಸ್ತಫಾ ನೇಣು ಬಿಗಿದು ಆತ್ಮಹತ್ಯೆ!

Posted by Vidyamaana on 2024-07-29 12:32:13 |

Share: | | | | |


ಕಡಬ : ಕಳಾರ ನಿವಾಸಿ ಮುಸ್ತಫಾ ನೇಣು ಬಿಗಿದು ಆತ್ಮಹತ್ಯೆ!

ಕಡಬ : ಕಳಾರ ನಿವಾಸಿ ಮುಸ್ತಫಾ (33) ಕಳಾರದ ಹಳೆ ಮನೆಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಸೌಜನ್ಯ ಪ್ರಕರಣ:ತಿಮರೋಡಿ ನೇತೃತ್ವದಲ್ಲಿಂದು ಪ್ರತಿಭಟನೆ

Posted by Vidyamaana on 2023-09-03 08:30:09 |

Share: | | | | |


ಸೌಜನ್ಯ ಪ್ರಕರಣ:ತಿಮರೋಡಿ ನೇತೃತ್ವದಲ್ಲಿಂದು ಪ್ರತಿಭಟನೆ

ಬೆಳ್ತಂಗಡಿ: ಸೌಜನ್ಯಾ ಸ್ತ್ರೀ ಸ್ವರೂಪ ತೊರೆದು ಕಾಳಿ ಸ್ವರೂಪವನ್ನ ಪಡೆದಿದ್ದಾಳೆ. ಅವಳ ಆತ್ಮ ಭೀಕರ ಸ್ವರೂಪ ಪಡೆಯುವ ಮುನ್ನ ಸರಕಾರ ಎಚ್ಚೆತ್ತು ಕೊಳ್ಳಬೇಕು ಎಂದು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಹೇಳಿದ್ದಾರೆ. 


ಸೌಜನ್ಯಾ ಪರವಾಗಿ ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಧರ್ಮಪಾಲನಾಥ ಸ್ವಾಮೀಜಿ ಭಾಷಣ ಮಾಡಿದ್ದಾರೆ. ಸತ್ಯ, ನ್ಯಾಯದ ಹೋರಾಟಕ್ಕೆ ಆದಿಚುಂಚನಗಿರಿ ಮಠದ ಸಂಪೂರ್ಣ ಬೆಂಬಲವಿದೆ. ಒಕ್ಕಲಿಗ ಸಮಾಜದ ಬೆಂಬಲ ಇದೆ. 

ಆರು ವರ್ಷ ಜೈಲಿನಲ್ಲಿದ್ದ ಸಂತೋಷ ರಾವ್ ಗೆ ಮರಳಿ ಜೀವನ ನೀಡಲು ಸಾಧ್ಯವಿಲ್ಲ. ಅದಕ್ಕಾಗಿ ರಾಜ್ಯ ಸರಕಾರ ಅವನ ಬದುಕಿಗೆ ಏನಾದ್ರು ವ್ಯವಸ್ಥೆ ಮಾಡಬೇಕು. ಜೊತೆಗೆ ಸೌಜನ್ಯಾ ಕುಟುಂಬಕ್ಕೂ ರಾಜ್ಯ ಸರಕಾರ ರಕ್ಷಣೆ ನೀಡಬೇಕು. 11 ವರ್ಷಗಳ ಸಿಬಿಐ ತನಿಖೆಯಲ್ಲಿ ನ್ಯಾಯ ಸಿಗದೇ ಇರುವುದು ನಮ್ಮ ವ್ಯವಸ್ಥೆಯ ದುರಂತ. 


ತನಿಖೆಯ ಸಂದರ್ಭದಲ್ಲಿ ಒಬ್ಬನಿಂದ ಆಗಿರುವ ಕೃತ್ಯ ಅಲ್ಲ. ಸಾಮೂಹಿಕ ಅತ್ಯಾಚಾರ ಆಗಿರುವುದು ಪತ್ತೆಯಾಗಿತ್ತು. ಹಾಗಾದರೆ ಯಾರು ಈ ಕೃತ್ಯ ಎಸಗಿದ್ದೆಂದು ಪತ್ತೆಯಾಗಬೇಕು. ಅದಕ್ಕಾಗಿ ಶವ ಪರೀಕ್ಷೆ ಮಾಡಿದ ವೈದ್ಯರು ಮತ್ತು ಪೊಲೀಸ್ ತನಿಖಾಧಿಕಾರಿಯನ್ನ ಮಂಪರು ಪರೀಕ್ಷೆ ಮಾಡಬೇಕು. ಮಹೇಶ್ ಶೆಟ್ಟಿ ಅವರ ಹೋರಾಟಕ್ಕೆ ಆದಿಚುಂಚನಗಿರಿ ಮಠ ಮತ್ತು ಒಕ್ಕಲಿಗ ಸಮಾಜದ ಬೆಂಬಲ ಇದೆ.‌ ನಮ್ಮ ಮಠದ ಹಿರಿಯ ಸ್ವಾಮೀಜಿಗಳು ಸಭೆ ಕರೆದಿದ್ದಾರೆ. ಮಾಹಿತಿ ನೀಡುತ್ತೇವೆ.‌ ಸರಕಾರ ಶೀಘ್ರ ತನಿಖೆ ನಡೆಸಿ ಯಾರು ಆರೋಪಿ ಎಂಬುದನ್ನು ಪತ್ತೆ ಮಾಡಬೇಕು‌ ಎಂದು ಸ್ವಾಮೀಜಿ ಪ್ರಖರ ಭಾಷಣ ಮಾಡಿದ್ದಾರೆ. 


ಸಭೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್, ಗಿರೀಶ್ ಮಟ್ಟೆಣ್ಣವರ್, ತಮ್ಮಣ್ಣ ಶೆಟ್ಟಿ, ಪ್ರಸನ್ನ ರವಿ ಮತ್ತಿತರರು ಇದ್ದಾರೆ. ಸಾವಿರಾರು ಜನರು ಸೇರಿದ್ದಾರೆ.

Recent News


Leave a Comment: