ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು

ಸುದ್ದಿಗಳು News

Posted by vidyamaana on 2024-07-25 16:34:52 |

Share: | | | | |


ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು

ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಲಾಗುತ್ತದೆ. ಹೀಗಾಗಿ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕರ್ನಾಟಕ ವಿದ್ಯುತ್ ನಿಗಮದ ಕಾರ್ಯ ನಿರ್ವಾಹಕ ಎಂಜಿನಿಯರ್ ಬುಧವಾರ ಮುನ್ನೆಚ್ಚರಿಕೆ ನೀಡಿದ್ದಾರೆ

ಕಾರ್ಗಲ್ ನ ಲಿಂಗನಮಕ್ಕಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ಸದ್ಯ 60 ಸಾವಿರ ಕ್ಯುಸೆಕ್ ಒಳಹರಿವು ಇದೆ.

Additional Image


ಜಲಾಶಯದ ಗರಿಷ್ಠ ಮಟ್ಟ 1819 ಅಡಿಗಳು ಇದ್ದು, ಜಲಾಶಯದಲ್ಲಿ ಈಗ 1801. 20 ಅಡಿ ನೀರಿನ ಸಂಗ್ರಹ ಇದೆ. ಮಳೆ ಹೆಚ್ಚಿರುವುದರಿಂದ ಜಲಾಶಯದ ಮಟ್ಟ ಶೀಘ್ರವೇ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ.


ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಬಹುದು ಎಂದು ಕೆಪಿಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

 Share: | | | | |


ನಾಟೆಕಲ್: ಪ್ರಪಾತಕ್ಕೆ ಉರುಳಿದ ಲಾರಿ ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Posted by Vidyamaana on 2023-07-27 13:58:51 |

Share: | | | | |


ನಾಟೆಕಲ್: ಪ್ರಪಾತಕ್ಕೆ ಉರುಳಿದ ಲಾರಿ ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಉಳ್ಳಾಲ: ಓವರ್ ಲೋಡ್ ಇದ್ದ ಲಾರಿ ತಿರುವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಘಟನೆ ನಾಟೆಕಲ್ – ಮಂಜನಾಡಿ ಮಾರ್ಗ ಮಧ್ಯೆ ಸಂಭವಿಸಿದ್ದು, ಘಟನೆಯಲ್ಲಿ ಚಾಲಕ ಅಲ್ಪಸ್ವಲ್ಪ ಗಾಯದಿಂದ ಪಾರಾಗಿದ್ದು, ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆದೇರಳಕಟ್ಟೆ ಕಡೆಯಿಂದ ತೌಡುಗೋಳಿ ಕಡೆಗೆ ಪ್ಲೈವುಡ್ ಇದ್ದ ಲಾರಿ ತೆರಳುತ್ತಿದ್ದು, ಈ ನಡುವೆ ತಿರುವಿನಲ್ಲಿ ಸಿಮೆಂಟ್ ಮಿಕ್ಸರ್ ಟ್ಯಾಂಕರ್ ಎದುರಿನಿಂದ ಬಂದಿದೆ. ಲಾರಿಯಲ್ಲಿ ಓವರ್ ಲೋಡ್ ಇದ್ದ ಹಿನ್ನೆಲೆಯಲ್ಲಿ ಚಾಲಕ ಎದುರಿನ ಲಾರಿಗೆ ಸೈಡ್ ಕೊಡುತ್ತಿದ್ದಂತೆ ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ ಪ್ರಪಾತಕ್ಕೆ ಉರುಳಿ ಬಿದ್ದಿದೆ.

ಎಂ.ಸಂಜೀವ ಶೆಟ್ಟಿ ಸಿಲ್ಟ್, ರೆಡಿಮೇಡ್ಸ್ ನೂತನ ಶಾಖೆ MSS ALL EXCLUSIVE ಮಾ.24ರಂದು ಶುಭಾರಂಭ

Posted by Vidyamaana on 2023-03-23 16:02:19 |

Share: | | | | |


ಎಂ.ಸಂಜೀವ ಶೆಟ್ಟಿ ಸಿಲ್ಟ್, ರೆಡಿಮೇಡ್ಸ್ ನೂತನ ಶಾಖೆ MSS ALL EXCLUSIVE ಮಾ.24ರಂದು ಶುಭಾರಂಭ

ಪತ್ತೂರು: ಸುಮಾರು 79 ವರ್ಷಗಳ ವಸ್ತ್ರ ಪರಂಪರೆಯನ್ನು ಹೊಂದಿರುವ, ಎಲ್ಲಾ ಪೀಳಿಗೆಯ ಗ್ರಾಹಕರ ಮನಗೆದ್ದ, ಮದುವೆ ಜವಳಿಗೆಂದೇ ಪ್ರಸಿದ್ದಿ ಪಡೆದ ಎಂ.ಸಂಜೀವ ಶೆಟ್ಟಿ ಮಳಿಗೆಯ ನೂತನ ಶಾಖೆ MSS ALL EXCLUSIVE ಮಾ.24ರಂದು ಬೆಳಿಗ್ಗೆ ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಎಂ. ಸಂಜೀವ ಶೆಟ್ಟಿ ಹಳೆಯ ಜವಳಿ ಮಳಿಗೆಯ ಎದುರುಗಡೆ ಶುಭಾರಂಭಗೊಳ್ಳಲಿದೆ.

1944ರಲ್ಲಿ ಪುತ್ತೂರಿನಲ್ಲಿ ಬಟ್ಟೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಎಂ.ಸಂಜೀವ ಶೆಟ್ಟಿ ವಸ್ತ್ರವ್ಯಾಪಾರ ಮಳಿಗೆ ಪ್ರಾರಂಭಿಸಿದೆ.

2017ರಲ್ಲಿ ಜಿಲ್ಲೆಯಲ್ಲೇ ಬಹುದೊಡ್ಡ 3 ಅಂತಸ್ತಿನವಸ್ತ್ರವ್ಯಾಪಾರ ಮಳಿಗೆ ಪ್ರಾರಂಭಿಸಿದೆ.ಹತ್ತು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಎಂ.ಸಂಜೀವ ಶೆಟ್ಟಿ ಶಾಖಾ ಶೋ ರೂಮ್ ಹೊಂದಿದೆ. ಗ್ರಾಹಕರ ಇನ್ನೂ ಹೆಚ್ಚಿನ ವೈವಿಧ್ಯಮಯ ಆಯ್ಕೆಗಾಗಿ ಇದೀಗ ವಿನೂತನ ವ್ಯವಹಾರಕ್ಕೆ ಕೈ ಹಾಕಿರುವ ಎಂ.ಸಂಜೀವ ಶೆಟ್ಟಿ ಸಂಸ್ಥೆಯವರು, ತಮ್ಮ ಮೊದಲಿನ ಶೋರೂಂ ನಲ್ಲಿ MSS ALL EXCLUSIVE ನ್ನು ಪ್ರಾರಂಭಿಸಿದ್ದಾರೆ.

ಗ್ರಾಹಕರಿಗೆ ಎಲ್ಲಾ ಬ್ರಾಂಡೆಡ್ ವಸ್ತುಗಳು ಒಂದೇ ಸೂರಿನಡಿ ಸಿಗಬೇಕೆನ್ನುವ ನಿಲುವಿನಿಂದ ಹಳೆಯ ಶೋರೂಂನ್ನೇ ಈ ಶೋರೂಂ ಆಗಿ ಬದಲಿಸಲಾಗಿದೆ.

ವೈಶಿಷ್ಟ್ಯತೆಗಳು: ಸಂಸ್ಥೆಯ ನೆಲಅಂತಸ್ತಿನಲ್ಲಿ ಕಾಸ್ಟೆಟಿಕ್ಸ್, ಪ್ಯಾಡ್ ಬ್ಯಾಗ್, ನ್ಯೂಬಾರ್ನ್ ಡೈಸನ್ಸ್, ಹಾಗೂ ಟಾಯ್ಸ್ ಲಭ್ಯವಿದೆ. ಪ್ರಥಮ ಮಹಡಿಯಲ್ಲಿ ಲೇಡಿಸ್ ಎಕ್ನಿಕ್ ವೇರ್, ಮನ್ಸ್ ಫಾರ್ಮಲ್, ಕ್ಯಾಸುವಲ್ ವೇರ್, ಎರಡನೇ ಮಹಡಿಯಲ್ಲಿ ಮನ ಎಕ್ನಿಕ್ ವೇರ್, ಟ್ರಾವಲ್ ಬ್ಯಾಗ್ ಮತ್ತು ಗೃಹಾಲಂಕಾರಿಕಾ ವಸ್ತುಗಳು ಗ್ರಾಹಕರಿಗೆ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

BREAKING: ರಾಜ್ಯದ 5 8 ಮತ್ತು 9ನೇ ತರಗತಿ ಬೋರ್ಡ್​ ಪರೀಕ್ಷೆ ಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ

Posted by Vidyamaana on 2024-03-12 17:16:03 |

Share: | | | | |


BREAKING: ರಾಜ್ಯದ 5 8 ಮತ್ತು 9ನೇ ತರಗತಿ ಬೋರ್ಡ್​ ಪರೀಕ್ಷೆ ಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ

ಬೆಂಗಳೂರು : ನಿನ್ನೆಯಿಂದ 5, 8 ಮತ್ತು 9ನೇ ತರಗತಿಯ ಬೋರ್ಡ್ ಪರೀಕ್ಷೆ ಆರಂಭಗೊಂಡಿದೆ. ಈ ಪರೀಕ್ಷೆಗಳನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ವಿಭಾಗಿಯ ನ್ಯಾಯಪೀಠಕ್ಕೆ ಮೇಲ್ಮನವಿ ಮಾಡಿತ್ತು. ಆಗ ಬೋರ್ಡ್ ಪರೀಕ್ಷೆಗೆ ಅನುಮತಿ ನೀಡಲಾಗಿತ್ತು.ಈ ಬೆನ್ನಲ್ಲೇ ಇಂದು ಹೈಕೋರ್ಟ್ ವಿಭಾಗೀಯ ಪೀಠದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಈ ಮೂಲಕ ಬೋರ್ಡ್ ಪರೀಕ್ಷೆ ರದ್ದುಗೊಂಡೆತೆ ಆಗಿದೆ.ರಾಜ್ಯ ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ರಾಜ್ಯ ಪಠ್ಯಕ್ರಮ ಇರುವ ಶಾಲೆಗಳ 5, 8 ಮತ್ತು 9ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿತ್ತು. ಖಾಸಗಿ ಅನುವಾದ ರಹಿತ ಶಾಲೆಗಳು ಸಲ್ಲಿಸಿದ್ದಂತ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಪೀಠವು ಇಂದು ವಿಚಾರಣೆ ನಡೆಸಿತು.


ಈಗಾಗಲೇ ಶಿಕ್ಷಣ ಇಲಾಖೆ ಸೋಮವಾರ ಮತ್ತು ಮಂಗಳವಾರದಂದು ಎರಡು ವಿಷಯಗಳ ಪರೀಕ್ಷೆಗಳನ್ನು ನಡೆಸಿದೆ. ಹೀಗಾಗಿ ಇನ್ನುಳಿದ ವಿಷಯಗಳ 5, 8 ಮತ್ತು 9ನೇ ತರಗತಿ ವಿಷಯಗಳ ಪರೀಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಮುಂದುವರೆಸಿ ಆದೇಶಿಸಿದೆ. ಆದರೇ 11ನೇ ತರಗತಿ ಪರೀಕ್ಷೆಗಳು ಪೂರ್ಣಗೊಂಡಿರುವುದರಿಂದ ನ್ಯಾಯಪೀಠವು ಯಾವುದೇ ಆದೇಶ ಮಾಡಿಲ್ಲ.

ಪ್ರವೀಣ್ ನೆಟ್ಟಾರು ಪತ್ನಿಯನ್ನು ಗ್ರೂಪ್-ಸಿ ಹುದ್ದೆಗೆ ಮರುನೇಮಕ - ಸಿಎಂ ಸಿದ್ಧರಾಮಯ್ಯ ಘೋಷಣೆ

Posted by Vidyamaana on 2023-05-27 15:51:17 |

Share: | | | | |


ಪ್ರವೀಣ್ ನೆಟ್ಟಾರು ಪತ್ನಿಯನ್ನು ಗ್ರೂಪ್-ಸಿ ಹುದ್ದೆಗೆ ಮರುನೇಮಕ - ಸಿಎಂ ಸಿದ್ಧರಾಮಯ್ಯ ಘೋಷಣೆ

ಬೆಂಗಳೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪತ್ನಿಯನ್ನು ಗ್ರೂಪ್ ಸಿ ಹುದ್ದೆಗೆ ಮರು ನೇಮಕ ಮಾಡಿಕೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದಾರೆ.ಈ ಕುರಿತಂತೆ ಇಂದು ಟ್ವಿಟ್ ಮಾಡಿರುವಂತ ಅವರು, ಹೊಸ ಸರ್ಕಾರ ಬಂದ ನಂತರ ಹಿಂದಿನ ಸರ್ಕಾರ ನೇಮಕ ಮಾಡಿಕೊಂಡಿದ್ದ ತಾತ್ಕಾಲಿಕ ನೌಕರರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡುವುದು ಒಂದು ಸಹಜ ಪ್ರಕ್ರಿಯೆ ಎಂದಿದ್ದಾರೆ.ಪ್ರವೀಣ್ ನೆಟ್ಟಾರು ಅವರ ಪತ್ನಿ ಮಾತ್ರವಲ್ಲ ಸುಮಾರು 150ಕ್ಕೂ ಹೆಚ್ಚು ಗುತ್ತಿಗೆ ನೌಕರರನ್ನು ಈಗಾಗಲೇ ಸೇವೆಯಿಂದ ವಜಾ ಮಾಡಲಾಗಿದೆ. ಇದರಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ ನೂತನ ಕುಮಾರಿ ಅವರ ಮರು ನೇಮಕ ಮಾಡಲಾಗುವುದು ಎಂಬುದಾಗಿ ತಿಳಿಸಿದ್ದಾರೆ.

ಮೂಡುಬಿದ್ರೆ ; ಖಾಸಗಿ ಕಾಲೇಜು ವಿದ್ಯಾರ್ಥಿನಿ ಆದಿರಾ ನಾಪತ್ತೆ

Posted by Vidyamaana on 2024-02-25 13:42:08 |

Share: | | | | |


ಮೂಡುಬಿದ್ರೆ ; ಖಾಸಗಿ ಕಾಲೇಜು ವಿದ್ಯಾರ್ಥಿನಿ ಆದಿರಾ ನಾಪತ್ತೆ

ಮೂಡಬಿದಿರೆ, ಫೆ.25: ಇಲ್ಲಿನ ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿದ್ದ ಬೈಂದೂರು ಮೂಲದ ವಿದ್ಯಾರ್ಥಿನಿ ನಾಪತ್ತೆಯಾದ ಬಗ್ಗೆ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಡುಬಿದ್ರೆ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಪಿಟಿ ಕಲಿಯುತ್ತಿದ್ದ ವಿದ್ಯಾರ್ಥಿನಿ ಬೈಂದೂರು ತಾಲೂಕಿನ ಕೊಲ್ಲೂರಿನ ಆದಿರಾ (19) ನಾಪತ್ತೆಯಾದವಳು. ಕಾಲೇಜಿನ ಹಾಸ್ಟೆಲ್‌ನಲ್ಲಿ ವಾಸವಾಗಿದ್ದ ಈಕೆ ಎಂದಿನಂತೆ ಶುಕ್ರವಾರ ಬೆಳಗ್ಗೆ ಸಹಪಾಠಿಗಳ ಜತೆ ಸ್ವರಾಜ್ಯ ಮೈದಾನದಲ್ಲಿರುವ ಕಾಲೇಜಿಗೆ ವಿದ್ಯಾಸಂಸ್ಥೆಯ ಬಸ್ಸಿನಲ್ಲಿ ಬಂದಿದ್ದು ಕನ್ನಡ ಭವನದ ಬಳಿ ಇಳಿದಿದ್ದಾಳೆಂದು ಜೊತೆಗಿದ್ದವರು ಮಾಹಿತಿ ನೀಡಿದ್ದಾರೆ. ಆನಂತರ ಯುವತಿ ಅಲ್ಲಿಂದ ಕಾಲೇಜಿಗೆ ಅಥವಾ ಮನೆಗೆ ಹೋಗದೆ ಕಾಣೆಯಾಗಿರುವುದಾಗಿ ತಿಳಿದುಬಂದಿದೆ. ಕಾಣೆಯಾಗುವ ಸಂದರ್ಭ ಕಾಲೇಜಿನ ಸಮವಸ್ತ್ರ ಧರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಡೂರು ಶಾಸಕರ ವಿರುದ್ಧ ವಾಟ್ಸಾಪ್ ಸ್ಟೇಟಸ್ : ಮಹಿಳಾ ಪೇದೆ ಅಮಾನತು

Posted by Vidyamaana on 2023-08-12 12:04:39 |

Share: | | | | |


   ಕಡೂರು ಶಾಸಕರ ವಿರುದ್ಧ ವಾಟ್ಸಾಪ್ ಸ್ಟೇಟಸ್  : ಮಹಿಳಾ ಪೇದೆ ಅಮಾನತು

ಚಿಕ್ಕಮಗಳೂರು: ವರ್ಗಾವಣೆ ವಿರೋಧಿಸಿ ಕಡೂರು ಶಾಸಕರ ವಿರುದ್ಧ ವಾಟ್ಸಾಪ್ ಸ್ಟೇಟಸ್ ಹಾಕಿದ್ದ ಪೊಲೀಸ್ ಕಾನ್ಸ್ಟೇಬಲ್ ರನ್ನು ಅಮಾನತು ಮಾಡಲಾಗಿದೆ.

ಕಡೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಪೇದೆ ಲತಾ ಅವರನ್ನು ತರಿಕೆರೆ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಇದು ದ್ವೇಷದ ವರ್ಗಾವಣೆ ಎಂದು ಶಾಸಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ವರ್ಗಾವಣೆ ವಿರೋಧಿಸಿ ಲತಾ ಸಬ್ ಇನ್ಸ್ ಪೆಕ್ಟರ್ ಜೊತೆಯೂ ಮಾತಿನ ಚಕಮಕಿ ನಡೆಸಿದ್ದರು.


ಇದೀಗ ‘ಕಡೂರು ಎಂಎಲ್ ಎ ಗೆ ನನ್ನ ಧಿಕ್ಕಾರವಿರಲಿ. ನನಗೆ ಏನಾದರು ತೊಂದರೆ ಆದರೆ ಎಂಎಲ್ಎ ಕಾರಣ’ ಎಂದು ವಾಟ್ಸಪ್ ಸ್ಟೇಟಸ್ ನಲ್ಲಿ ಶಾಸಕರ ವಿರುದ್ಧ ಸಮರಕ್ಕಿಳಿದಿದ್ದಾರೆ.


ಇದೀಗ ಚಿಕ್ಕಮಗಳೂರು ಎಸ್ ಪಿ ಅವರು ಮಹಿಳಾ ಪೇದೆ ಲತಾರನ್ನ ಅಮಾನತು ಮಾಡಿದ್ದಾರೆ.

Recent News


Leave a Comment: