ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಸುದ್ದಿಗಳು News

Posted by vidyamaana on 2024-07-25 12:27:06 |

Share: | | | | |


ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಪಣಂಬೂರು: ಇಲ್ಲಿನ ಜೋಕಟ್ಟೆ ಗ್ರಾಮ ಪಂಚಾಯತ್ ಗುಡ್ಡೆ ಎಂಬಲ್ಲಿ ಮನೆಯ ಮೇಲೆ� ತಡೆಗೋಡೆ ಕುಸಿದು ಬಿದ್ದು ಯುವಕ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ‌.ಮುಲ್ಕಿ ಕೊಲ್ನಾಡು ನಿವಾಸಿ ಶಂಕರ ಎಂಬವರ ಪುತ್ರ ಶೈಲೇಶ್ (17) ಮೃತ ಯುವಕ. ಜೋಕಟ್ಟೆಯಲ್ಲಿರುವ ತನ್ನ ದೊಡಮ್ಮನ ಮಗಳ ಮನೆಗೆ ಬಂದಿದ್ದ ಶೈಲೇಶ್, ಇಲ್ಲಿಯೇ ಉಳಿದುಕೊಂಡಿದ್ದ.

ಮನೆಯಲ್ಲಿ ಶೈಲೇಶ್ ರವರ ದೊಡ್ಡಮನ ಮಗಳು ಸವಿತಾ, ಆಕೆಯ ಗಂಡ ಸುರೇಶ್ ಮತ್ತು ಮಗು ಸಾಕ್ಷಿ ಮನೆಯ ಒಂದು ಕೋಣೆಯಲ್ಲಿ ಮಲಗಿದ್ದು, ಶೈಲೇಶ್ ಇನ್ನೊಂದು ಕಡೆ ಮಲಗಿದ್ದ. ತಡೆಗೋಡೆ ಕುಸಿದು ಹಂಚಿನ ಮನೆಯ ಮೇಲೆ ಬಿದ್ದಿದ್ದರಿಂದ ಅಲ್ಲಿ ಮಲಗಿದ್ದ ಶೈಲೇಶ್ ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ. ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಇತರ ಮೂರು ಜನರಲ್ಲಿ ಸವಿತಾ ಅವರಿಗೆ ಸಣ್ಣ ಗಾಯವಾಗಿದ್ದು‌, ಚಿಕಿತ್ಸೆ ಪಡೆದಿದ್ದಾರೆ‌ ಎಂದು ತಿಳಿದು ಬಂದಿದೆ.

ಶೈಲೇಶ್ ಅವರ ಮೃತದೇಹವನ್ನು ನಗರದ ಎ.ಜೆ.ಆಸ್ಪತ್ರೆಯ ಶವಗಾರದಲ್ಲಿಡಲಾಗಿದ್ದು, ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

 Share: | | | | |


ಪುತ್ತೂರು : ಎ.16 ರಂದು ನಡೆಯಬೇಕಿದ್ದ ಸಿಎಂ,ಡಿಸಿಎಂ ಕಾರ್ಯಕ್ರಮ ಮುಂದೂಡಿಕೆ

Posted by Vidyamaana on 2024-04-13 16:21:25 |

Share: | | | | |


ಪುತ್ತೂರು : ಎ.16 ರಂದು ನಡೆಯಬೇಕಿದ್ದ ಸಿಎಂ,ಡಿಸಿಎಂ ಕಾರ್ಯಕ್ರಮ ಮುಂದೂಡಿಕೆ

ಪುತ್ತೂರಿನಲ್ಲಿ ಎ.16 ರಂದು ನಡೆಯಬೇಕಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾ‌ರ್ ಅವರ ಚುನಾವಣಾ ಪ್ರಚಾರ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಶ್ರೀ ಅನಂತಪುರದಲ್ಲಿ ಪೂರ್ಣ ದರ್ಶನ ತೋರಿದ ಬಬಿಯಾ

Posted by Vidyamaana on 2024-06-16 08:13:42 |

Share: | | | | |


ಶ್ರೀ ಅನಂತಪುರದಲ್ಲಿ ಪೂರ್ಣ ದರ್ಶನ ತೋರಿದ ಬಬಿಯಾ

ಕುಂಬಳೆ : ಸರೋವರ ಕ್ಷೇತ್ರವೆಂದೇ ಖ್ಯಾತಿ ಪಡೆದ ಶ್ರೀ ಅನಂತಪುರದಲ್ಲಿ ತಿಂಗಳುಗಳ ಹಿಂದೆ ಪ್ರತ್ಯಕ್ಷಗೊಂಡ ನೂತನ ಮೊಸಳೆ ಮರಿ (ಬಬಿಯಾ – 3) ಇದೇ ಮೊದಲ ಬಾರಿಗೆ ಶುಕ್ರವಾರ ಸಂಜೆ ಕ್ಷೇತ್ರ ಪ್ರಾಂಗಣ ಏರುವ ಮೂಲಕ ತನ್ನ ಪೂರ್ಣ ದರ್ಶನ ತೋರಿದೆ.

ಸುಮಾರು 80 ವರ್ಷಗಳಿಂದ ಕ್ಷೇತ್ರದ ಕೊಳದಲ್ಲಿ ನೆಲೆಸಿದ್ದ ಮೊಸಳೆಯು 2022ರ ಅಕ್ಟೋಬರ್‌ 9ರಂದು ರಾತ್ರಿ ಈ ಹಿಂದೆ ಇದ್ದ ಮೊಸಳೆ (ಬಬಿಯಾ) ಮೃತಪಟ್ಟಿತ್ತು

ರೈಲ್ವೆ ಹಳಿಗಳ ಮೇಲೆ ವಿಧ್ವಂಸಕ ಕೃತ್ಯ ನಡೆಸಲು ಯತ್ನ: ಮೂವರ ಬಂಧನ

Posted by Vidyamaana on 2023-11-16 04:40:47 |

Share: | | | | |


ರೈಲ್ವೆ ಹಳಿಗಳ ಮೇಲೆ ವಿಧ್ವಂಸಕ ಕೃತ್ಯ ನಡೆಸಲು ಯತ್ನ: ಮೂವರ ಬಂಧನ

ಮೈಸೂರು: ರೈಲ್ವೆ ಹಳಿಗಳ ಮೇಲೆ ಕಬ್ಬಿಣದ ಸ್ಲೀಪರ್ ಮತ್ತು ಮರದ ದಿಮ್ಮಿಗಳನ್ನು ಇರಿಸಿ ವಿಧ್ವಂಸಕ ಕೃತ್ಯ ನಡೆಸಲು ಯತ್ನಿಸಿದ ಪ್ರಕರಣವನ್ನು ರೈಲ್ವೆ ರಕ್ಷಣಾ ಪಡೆ ಪತ್ತೆ ಹಚ್ಚುವ ಮೂಲಕ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಿದೆ.



ಚಾಮರಾಜನಗರದಿಂದ ಮೈಸೂರಿಗೆ ಬರುತ್ತಿದ್ದ ಎಕ್ಸ್ ಪ್ರೆಸ್ ರೈಲು ಗಾಡಿ ಸಂ. 06275 ರ ಲೋಕೋ ಪೈಲಟ್ (ಚಾಲಕ) ನಂಜನಗೂಡು ಮತ್ತು ಕಡಕೊಳ ರೈಲ್ವೆ ನಿಲ್ದಾಣಗಳ ನಡುವಿನ ರೈಲ್ವೆ ಹಳಿಯಲ್ಲಿ ಸಂಭಾವ್ಯ ಅನಾಹುತವನ್ನು ತಪ್ಪಿಸಿ ಅತ್ಯಂತ ಜಾಗರೂಕವಾದ ಶ್ಲಾಘನೀಯವಾದ ಕಾರ್ಯ ಮಾಡಿದ್ದಾರೆ. ರೈಲ್ವೆ ಎಂಜಿನ್ ನ ಚಾಲಕನ ತ್ವರಿತ ಪ್ರತಿಕ್ರಿಯೆಯ ಕಾರಣವಾಗಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಕಾಪಾಡಲಾಗಿದ್ದು ರೈಲನ್ನು ಧ್ವಂಸಗೊಳಿಸುವ ದುರುದ್ದೇಶಪೂರಿತ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ.


ಘಟನೆಗೆ ಸಂಬಂಧಿಸಿದಂತೆ ಸೋಮಯ್ ಮರಾಂಡಿ, ಭಜನು ಮುರ್ಮು ಮತ್ತು ದಸಮತ್ ಮರಾಂಡಿ ಎಂದು ಗುರುತಿಸಲಾದ ಮೂವರು ವ್ಯಕ್ತಿಗಳನ್ನು ರೈಲ್ವೆ ಸಂರಕ್ಷಣಾ ಪಡೆ ಮತ್ತು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಮೂವರೂ ಆರೋಪಿಗಳು ಉದ್ದೇಶಪೂರ್ವಕವಾಗಿ ಕಿಲೋ ಮೀಟರ್. ನಂ 19/200-300ರಲ್ಲಿ ಹಳಿಗಳ ಮೇಲೆ ಕಬ್ಬಿಣದ ಸ್ಲೀಪರ್ ಮತ್ತು ಮರದ ದಿಮ್ಮಿಗಳನ್ನು ಇರಿಸಿದ್ದರು. ಇದರಿಂದಾಗಿ ರೈಲು ಗಾಡಿ ಸಂಖ್ಯೆ 06275 ಅನ್ನು ಬಲವಂತವಾಗಿ ನಿಲ್ಲಿಸಬೇಕಾಯಿತು.


ಈ ಕುರಿತು ಮಾಹಿತಿ ಪಡೆದ ಮೈಸೂರಿನ ರೈಲ್ವೆ ಸಂರಕ್ಷಣಾ ದಳದ ಸಹಾಯಕ ರಕ್ಷಣಾ ಆಯುಕ್ತ ಎಂ.ಎನ್.ಎ.ಖಾನ್, ಪೋಸ್ಟ್ ಕಮಾಂಡರ್ ಲ ಕೆ.ವಿ.ವೆಂಕಟೇಶ ಮತ್ತು ಅವರ ತಂಡ, ಆರ್‌ಪಿಎಫ್ ನ ಶ್ವಾನ ದಳ ಘಟನಾ ಸ್ಥಳಕ್ಕೆ ಕ್ಷಿಪ್ರವಾಗಿ ತೆರಳಿ ಅನಾಹುತ ತಪ್ಪಿಸುವಲ್ಲಿ‌ ಯಶಸ್ವಿಯಾಗಿದ್ದಾರೆ.ಒಡಿಶಾದ ಮಯೂರ್‌ಬಂಜ್ ನ ಬಂಗಿರಿಪೋಸಿದ ಜಲ್ದಿಹಾ ಮೂಲದ ಸೋಮಯ್ ಮರಾಂಡಿ ಎಂಬಾತ ಸ್ಥಳದಲ್ಲಿ ಪತ್ತೆಯಾಗಿದ್ದು, ವಿಚಾರಣೆ ನಡೆಸಿದಾಗ, ತನ್ನ ಸಹಚರರೊಂದಿಗೆ



ವಿಧ್ವಂಸಕ ಕೃತ್ಯದ ಯತ್ನವನ್ನು ಒಪ್ಪಿಕೊಂಡಿದ್ದಾನೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಮೈಸೂರಿನ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಆರೋಪಿಗಳ‌ವಿರುದ್ದ ರೈಲ್ವೆ ಕಾಯಿದೆ-1989ರ ಅನ್ವಯ Cr.No.39/2023 U/s 150(1)(A) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ಕುರಿತಂತೆ ತನಿಖೆಯು ನಡೆಯುತ್ತಿದ್ದು ಜೀವಾವಧಿವರೆಗಿನ ಶಿಕ್ಷೆಗೆ ಗುರಿಯಾಗಬಹುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.


ಘಟನೆಯ ಕಾರಣಕ್ಕಾಗಿ ರೈಲು ಸಂಖ್ಯೆ 06275ರ ಸಂಚಾರವನ್ನು ತಡೆಹಿಡಿದಿದ್ದ ಹಿನ್ನೆಲೆಯಲ್ಲಿ ಆ ಮಾರ್ಗದ ರೈಲುಗಳ ಸಂಚಾರದಲ್ಲಿ ಕೆಲ‌ ನಿಮಿಷಗಳ ಕಾಲ ವ್ಯತ್ಯಯ ಉಂಟಾಗಿತ್ತು.


ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ರವರು ರೈಲಿನ ಚಾಲಕನ ಸಮಯೋಚಿತ ಕ್ರಮ ಮತ್ತು ಭದ್ರತಾ ಪಡೆಗಳ ತ್ವರಿತ ಪ್ರತಿಕ್ರಿಯೆ ಶ್ಲಾಘಿಸಿ, ಪ್ರಯಾಣಿಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ವಿಚಾರಿಸಿಕೊಂಡು ಕೃತಜ್ಞತೆ ಸಲ್ಲಿಸಿದರು.


ಹಳಿಗಳ ಮೇಲೆ ಇಂತಹ ಕೃತ್ಯದಲ್ಲಿ ತೊಡಗಿ ಪ್ರಯಾಣಿಕರಿಗೆ ದೊಡ್ಡ ಆಪತ್ತು ತರುವ ಮತ್ತು ಜೀವಹಾನಿ ಉಂಟುಮಾಡುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಅಂತಹ ಚಟುವಟಿಕೆಗಳಲ್ಲಿ ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ ಅವರ ವಿರುದ್ಧ ರೈಲ್ವೆ ಆಡಳಿತವು ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸೆಲ್ ಝೋನ್ ಗ್ರೇಟ್ ಫೆಸ್ಟಿವಲ್ ಸೇಲ್ ನಲ್ಲಿ ಗಮನ ಸೆಳೆಯುವ ಆಫರ್ ಗಳು

Posted by Vidyamaana on 2023-09-19 17:28:51 |

Share: | | | | |


ಸೆಲ್ ಝೋನ್ ಗ್ರೇಟ್ ಫೆಸ್ಟಿವಲ್ ಸೇಲ್ ನಲ್ಲಿ ಗಮನ ಸೆಳೆಯುವ ಆಫರ್  ಗಳು

ಪುತ್ತೂರು: ಮೊಬೈಲ್ ಕ್ಷೇತ್ರದಲ್ಲಿ 2003ರಿಂದ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಸೆಲ್ ಝೋನ್ ಇದೀಗ ಗ್ರೇಟ್ ಫೆಸ್ಟಿವಲ್ ಸೇಲ್ ಅನ್ನು ಗ್ರಾಹಕರ ಮುಂದಿಟ್ಟಿದೆ.

ಗ್ರೇಟ್ ಫೆಸ್ಟಿವಲ್ ಸೇಲ್’ನಲ್ಲಿ ಗ್ರೇಟ್ ಎಕ್ಸ್’ಚೇಂಜ್ ಆಫರನ್ನು ಜನತೆಯ ಮುಂದಿಡಲಾಗಿದೆ. ಮುನ್ನಡೆಯಿರಿ ಹೊಸ ತಂತ್ರಜ್ಞಾನದೆಡೆಗೆ 5ಜಿ ಫೋನಿಗೆ ಅಪ್’ಗ್ರೇಡ್ ಆಗಿರಿ ಎನ್ನುವ ಸಂದೇಶದೊಂದಿಗೆ ತಂತ್ರಜ್ಞಾನದ ಪ್ರಸ್ತುತತೆಯನ್ನು ಗ್ರಾಹಕರಿಗೆ ನೀಡುವ ಕಾಯಕವೂ ಇಲ್ಲಿ ಆಗುತ್ತಿದೆ.

ಇದರೊಂದಿಗೆ, ಸ್ಮಾರ್ಟ್ ಫೋನ್ ಖರೀದಿಸಿದರೆ, ಹೀರೋ ಬೈಕ್ ಸಹಿತ ಹತ್ತು ಹಲವು ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ನೀಡಲಾಗಿದೆ. ನಿಮ್ಮ ಬಜೆಟಿಗೆ ಫಿಟ್ ಆಗೋ ಸುಲಭ ಕಂತುಗಳೊಂದಿಗೆ ಆಕ್ಸೆಸರೀಸ್ ಮೇಲೆ ಶೇ. 50ರಷ್ಟು ಆಫ್ ಕೊಡಲಾಗಿದೆ. ಪ್ರತಿ ಖರೀದಿಗೂ ಖಚಿತ ಉಡುಗೊರೆಯನ್ನು ಗ್ರಾಹಕರು ಪಡೆದುಕೊಳ್ಳಬಹುದು.

ಈ ಗ್ರೇಟ್ ಫೆಸ್ಟಿವಲ್ ಸೇಲ್’ನ ಇನ್ನೊಂದು ವಿಶೇಷವೇನೆಂದರೆ, ಮಲ್ಟಿ ಬ್ರಾಂಡ್ ಸ್ಮಾರ್ಟ್ ವಾಚ್’ಗಳ ಎಕ್ಸ್’ಕ್ಲೂಸಿವ್ ಸಂಗ್ರಹ ಎಂದು ಸೆಲ್ ಝೋನ್ ಪ್ರಕಟಣೆ ತಿಳಿಸಿದೆ.

ಮಂಗಳೂರು; ಉಳ್ಳಾಲದಲ್ಲಿ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Posted by Vidyamaana on 2023-08-29 01:48:42 |

Share: | | | | |


ಮಂಗಳೂರು; ಉಳ್ಳಾಲದಲ್ಲಿ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

ಮಂಗಳೂರು; ಕೆರೆಯಲ್ಲಿ ಮುಳುಗಿ ಯುವಕ ಸಾವನ್ನಪ್ಪಿರುವ ಘಟನೆ ಉಳ್ಳಾಲದ ತಲಪಾಡಿಯಲ್ಲಿ ನಡೆದಿದೆ.ದುರ್ಗಿಪಳ್ಳ ನಿವಾಸಿ ಹರೀಶ ಯಾನೆ ಹರಿ ಪ್ರಸಾದ್ ಆಚಾರ್ಯ (36) ದುರ್ದೈವಿ.ಅವಿವಾಹಿತರಾಗಿದ್ದ ಹರಿಪ್ರಸಾದ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದು, ವಿಪರೀತ ಕುಡಿತ ಚಟ ಹೊಂದಿದ್ದರಂತೆ.ಕಳೆದ ನಾಲ್ಕು ದಿವಸಗಳಿಂದ ಮನೆಗೂ ಹೋಗಿರಲಿಲ್ಲ ಎನ್ನಲಾಗಿದೆ.ಹರಿಪ್ರಸಾದ್ ಯುವರಾಜ್ ಯಾನೆ ಮುನ್ನ ಲೋಹಿತ್, ನವೀನ್ ದೇವಾಡಿಗ, ನಿತೇಶ್ ಉಚ್ಚಿಲ್ ಎಂಬವರೊಂದಿಗೆ ಸಮೀಪದ ಖಾಸಗಿ ಲೇ ಔಟ್ ನಲ್ಲಿರುವ ಕೆರೆಗೆ ಸ್ನಾನಕ್ಕೆ ತೆರಳಿದ್ದ ಸಂದರ್ಭ ಅಕಸ್ಮತ್ ಆಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.


ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಮೃತದೇಹವನ್ನು ಮೇಲಕ್ಕೆತ್ತಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ

ಹೋಟೆಲ್ ಮ್ಯಾನೇಜರ್‌ ಮಹೇಶ್ ಶೆಟ್ಟಿ ಹೃದಯಾಘಾತದಿಂದ ನಿಧನ

Posted by Vidyamaana on 2024-01-10 07:29:51 |

Share: | | | | |


ಹೋಟೆಲ್ ಮ್ಯಾನೇಜರ್‌ ಮಹೇಶ್ ಶೆಟ್ಟಿ ಹೃದಯಾಘಾತದಿಂದ ನಿಧನ

ಉಡುಪಿ: ಮಂಗಳೂರಿನ ಹೆಸರಾಂತ ಹೋಟೆಲ್ ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮ್ಯಾನೇಜರ್‌ ಸೋಮವಾರ ರಾತ್ರಿ ನಿಧನ ಹೊಂದಿದ್ದಾರೆ.


ಆತ್ರಾಡಿ ಪರೀಕ ನಿವಾಸಿ ಮಹೇಶ ಶೆಟ್ಟಿ(28) ಜ.8ರಂದು ನಿಧನ ಹೊಂದಿದ್ದು, ಮೃತರು ತಂದೆ, ತಾಯಿ, ಸಹೋದರ, ಸಹೋದರಿಯನ್ನುಅಗಲಿದ್ದಾರೆ.


ಇತ್ತೀಚೆಗಷ್ಟೇ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್‌ ಮುಗಿಸಿದ್ದ ಅವರು ಬಳಿಕ ಉಡುಪಿ, ಮಂಗಳೂರಿನಲ್ಲಿ ಹೋಟೆಲ್ ಮ್ಯಾನೇಜರ್‌ ಆಗಿ ಕರ್ತವ್ಯ ನಿರ್ವಹಿಸಿದ್ದರು. ಇವರು ಈ ಹಿಂದೆ ಆತ್ರಾಡಿಯಲ್ಲಿ ಡ್ಯಾನ್ಸ್‌ ಕ್ರಿವ್‌ ನೃತ್ಯ ತರಬೇತಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದರು. ಮತ್ತೆ ಸಂಸ್ಥೆಯನ್ನು ಮುಂದುವರಿಸಬೇಕೆಂಬ ಇಚ್ಚೆಯನ್ನೂ ಹೊಂದಿದ್ದರು ಎನ್ನಲಾಗಿದೆ.



Leave a Comment: