ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಸುದ್ದಿಗಳು News

Posted by vidyamaana on 2024-07-25 09:34:49 |

Share: | | | | |


ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಬೆಂಗಳೂರು : ಕೋರಮಂಗಲದ ಲೇಡಿಸ್ ಪಿಜಿ ಒಳಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದ್ದು, ಈ ಬಗ್ಗೆ ಪೊಲೀಸರು ಮಹತ್ವದ ಮಾಹಿತಿ ನೀಡಿದ್ದಾರೆ. ಮೃತ ಯುವತಿಯನ್ನು ಬಿಹಾರದ ಕೃತಿ ಕುಮಾರಿ‌ (24) ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯತಮನೇ ಕೊಲೆಗಾರ ಎಂದು ಪೊಲೀಸರು ತಿಳಿಸಿದ್ದಾರೆ .

ಕೃತಿ ಕುಮಾರಿ ತಾನು ಪ್ರೀತಿಸುತ್ತಿದ್ದ ಯುವಕನಿಂದಲೇ ಕೊಲೆಯಾಗಿದ್ದಾರೆ. ರಾತ್ರಿ 11:30ಕ್ಕೆ ಕೃತಿ ಕುಮಾರಿಯೇ ಯುವಕನನ್ನು ಕರೆದುಕೊಂಡು ಬಂದಿರುವ ಬಗ್ಗೆ ಮೇಲ್ನೋಟಕ್ಕೆ ಮಾಹಿತಿ ಸಿಕ್ಕಿದೆ. ಪಿಜಿಯಿಂದ ಹೊರ ಬಂದ ಕೃತಿ ತನ್ನ ಪ್ರಿಯತಮನ ಜತೆ ರಾತ್ರಿ ಊಟ ಮಾಡಿದ್ದರು. ಊಟ ಮುಗಿಸಿದ ಕೃತಿ ತನ್ನೊಂದಿಗೆ ಯುವಕನ್ನು ಪಿಜಿಗೆ ಕರೆತಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೃತಿಯ ರೂಂಗೆ ಆಗಮಿಸಿದ್ದ ವೇಳೆ ಇಬ್ಬರ ಮಧ್ಯೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ಇದೆ.

ಪಿಜಿಯ ಸಿಸಿಟಿವಿ ಎಲ್ಲವನ್ನು ಕೂಡ ಪರಿಶೀಲನೆ ನಡೆಸಿದ್ದೇವೆ. ಪಿಜಿಯ ನಿರ್ಲಕ್ಷ್ಯತನದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿ ಪತ್ತೆಗಾಗಿ ಪೊಲೀಸರ ವಿಶೇಷ ತಂಡವನ್ನ ರಚನೆ ಮಾಡಲಾಗಿದೆ ಎಂದಿದ್ದಾರೆ

 Share: | | | | |


ಇನ್‌ಸ್ಟಾಗ್ರಾಮ್ ಸರ್ವರ್‌ ಡೌನ್‌ - ಬಳಕೆದಾರರ ಪರದಾಟ

Posted by Vidyamaana on 2023-03-09 04:54:22 |

Share: | | | | |


ಇನ್‌ಸ್ಟಾಗ್ರಾಮ್ ಸರ್ವರ್‌ ಡೌನ್‌ - ಬಳಕೆದಾರರ ಪರದಾಟ

ನವದೆಹಲಿ: ಮೆಟಾ ಒಡೆತನದ ಇನ್‌ಸ್ಟಾಗ್ರಾಮ್ ಸರ್ವರ್‌ ಡೌನ್‌ ಆಗಿ ಸಾವಿರಾರು ಬಳಕೆದಾರರಿಗೆ ತೊಂದರೆಯುಂಟಾಗಿದೆ ಎಂದು ವರದಿಯಾಗಿದೆ.

ಸರ್ವರ್‌ ಸ್ಥಗಿತ ಟ್ರ್ಯಾಕಿಂಗ್ ವೆಬ್‌ಸೈಟ್ ಡೌನ್‌ ಡಿಟೆಕ್ಟರ್ ವರದಿ ಮಾಡಿರುವ ಪ್ರಕಾರ 46 ಸಾವಿರಕ್ಕೂ ಅಧಿಕ ಬಳಕೆದಾರರಿಗೆ ಇನ್‌ಸ್ಟಾಗ್ರಾಮ್ ಬಳಕೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಇದರಲ್ಲಿ 2000 ಕ್ಕೂ ಅಧಿಕ ಮಂದಿ ಅಮೆರಿಕಾದ ಬಳಕೆದಾರರು, 1000 ಕ್ಕೂ ಹೆಚ್ಚಿನ ಆಸ್ಟ್ರೇಲಿಯಾ, ಭಾರತದ ಬಳಕೆದಾರರಿಗೆ ಸರ್ವರ್‌ ಕನೆಕ್ಷನ್‌ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವರದಿ ಹೇಳಿದೆ

ಬೆಳಿಗ್ಗೆ 7 ಗಂಟೆಗೆ ಡೌನ್ ಡಿಟೆಕ್ಟರ್ ಔಟ್ಟೇಜ್ ಗ್ರಾಫ್‌ನಲ್ಲಿ ಸಮಸ್ಯೆ ಬಗ್ಗೆ ವರದಿಯಾಗಿದ್ದು ಬಳಿಕ ಏರಿಕೆ ಕಂಡಿತು

ಶೇ.50 ಮಂದಿಗೆ ಸರ್ವರ್‌ ಕನೆಕ್ಷನ್‌ ಸಮಸ್ಯೆ ಕಾಣಿಸಿಕೊಂಡಿದ್ದು, ಶೇ.20 ಮಂದಿಗೆ ಲಾಗಿನ್‌ ಮಾಡುವಾಗ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವರದಿ ತಿಳಿಸಿದೆ.

ಅಶೋಕ್ ಕುಮಾರ್ ರೈಗೆ ಬಾಲಕ ನೀಡಿದ ಪತ್ರದಲ್ಲೇನಿತ್ತು

Posted by Vidyamaana on 2023-06-03 02:02:32 |

Share: | | | | |


ಅಶೋಕ್ ಕುಮಾರ್ ರೈಗೆ ಬಾಲಕ ನೀಡಿದ ಪತ್ರದಲ್ಲೇನಿತ್ತು

ವಿಟ್ಲ: ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಟ್ಲದಲ್ಲಿ ವಿಜಯೋತ್ಸವ, ಕೃತಜ್ಞತಾ ಸಬೆ ಆಯೋಜಿಸಿರುವುದು ಎಲ್ಲರಿಗೂ ತಿಳಿದ ವಿಚಾರ. ಕಾಂಗ್ರೆಸಿಗರು ಹರ್ಷ ವ್ಯಕ್ತಪಡಿಸಿದರು. ಅಶೋಕ್ ಕುಮಾರ್ ರೈ ಅವರ ಅಭಿಮಾನಿಗಳು ಸಂಭ್ರಮಿಸಿದರು. ಎಲ್ಲವೂ ಆಯಿತು. ಆದರೆ ಬಾಲಕರೀರ್ವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ ಬಗೆ ಯಾರಿಗೂ ತಿಳಿಯಲೇ ಇಲ್ಲ.

ಸಮಾರಂಭಕ್ಕೆ ಮೊದಲು ನಡೆದ ವಿಜಯೋತ್ಸವ ಮೆರವಣಿಗೆ ನಡೆದಿತ್ತು. ಅಶೋಕ್ ಕುಮಾರ್ ರೈ ಅವರು ಜೀಪಿನಿಂದ ಇಳಿಯುವುದನ್ನೇ ಕಾಯುತ್ತಿದ್ದರೆಂದು ಕಾಣಬೇಕು. ತೆರೆದ ಜೀಪಿನಿಂದ ಅಶೋಕ್ ರೈ ಇಳಿಯುತ್ತಿದ್ದಂತೆ ಇಬ್ಬರು ಬಾಲಕರು ನೇರವಾಗಿ ಅಶೋಕ್ ಕುಮಾರ್ ರೈ ಅವರ ಬಳಿಗೆ ಓಡೋಡಿ ಬಂದರು. ಹಾಗೆ ಬಂದವರೇ ಅಶೋಕ್ ರೈ ಅವರ ಕೈಗೆ ಚೀಟಿಯೊಂದನ್ನು ನೀಡಿದರು.

ಲಗುಬಗೆಯ ವಾತಾವರಣದಲ್ಲೂ ಅಶೋಕ್ ರೈ ಆ ಪತ್ರವನ್ನು ತದೇಕಚಿತ್ತದಿಂದ ಓದತೊಡಗಿದರು. ಗಡಿಬಿಡಿಯ ನಡುವೆಯೂ ಮುಖದಲ್ಲಿ ನಗು ಅರಳಿತು. ಮಕ್ಕಳ ಸಂತೋಷದಲ್ಲಿ ತಾವು ಪಾಲ್ಗೊಂಡರು. 

ಬಾಲಕರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಶಾಸಕರು ಮಕ್ಕಳ ಸಂತೋಷ ನೋಡಿ, ಮನತುಂಬಿ ಹರಸಿದರು. ಮಾತ್ರವಲ್ಲ. ತಮ್ಮ ಕಿಸೆಗೆ ಕೈ ಹಾಕಿ, ಕೈಗೆ ಸಿಕ್ಕ ನೋಟನ್ನು ಬಾಲಕರಿಗೆ ನೀಡಿದರು.

ಮಕ್ಕಳು ಬರೆದ ಪತ್ರದ ಸಾಲುಗಳು ಹೀಗಿತ್ತು…

ಕರ್ನಾಟಕ, ವಿಧಾನಸಭಾ ಚುನಾವಣೆ ಪುತ್ತೂರು ವಿಧಾನಸಭಾ ಕ್ಷೇತ್ರ

      ನಮ್ಮ ಊರಿನ ನೆಚ್ಚಿನ MLA ಆಗಿರುವ ಪ್ರೀಯ ಅಶೋಕ್ ಕುಮಾರ್ ರೈ ಅವರಿಗೆ ನಮಸ್ಕಾರ.

ನೀವು ಚಂದಳಿಗೆ ಭಾರತ್ ಅಡಿಟೋರಿಯಂಗೆ ಸಂದರ್ಶಿಸಿದಾಗ ನಿಮ್ಮಲ್ಲಿ ನಾನು ನಿಮ್ಮ ಕೈ ಹಿಡಿದು ಹೇಳಿದ್ದೆ. ನೀವು ಈ ಸಲ ಗೆಲ್ಲುತ್ತೀರಿ ಎಂದಾಗ ನೀವು (ತುಳು ಭಾಷೆಯಲ್ಲಿ) ಎಡ್ಡೆ ಬಾಳೆ ಎಂದು ಹೇಳಿದ್ದೀರಿ.

ಇನ್ನು ಮುಂದಕ್ಕೂ ನೀವು ಪ್ರಧಾನ ಮಂತ್ರಿಯಾಗಬೇಕು ಎಂದೂ ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸುತ್ತೇವೆ.

- ಶಾಹುಲ್ ಹಮೀದ್ 2ನೇ ತರಗತಿ,

ಚಂದಳಿಕೆ ಶಾಲೆ

ರನ್ ವೇ ನಲ್ಲಿ ಬದ್ಧ ವೈರಿಗಳ ಕಾಳಗ: ನಾಗರ ಹಾವಿನ ಮೇಲೆ 3 ಮುಂಗುಸಿಗಳ ದಾಳಿ, ಅಪರೂಪದ Video

Posted by Vidyamaana on 2024-08-13 07:51:26 |

Share: | | | | |


ರನ್ ವೇ ನಲ್ಲಿ ಬದ್ಧ ವೈರಿಗಳ ಕಾಳಗ: ನಾಗರ ಹಾವಿನ ಮೇಲೆ 3 ಮುಂಗುಸಿಗಳ ದಾಳಿ, ಅಪರೂಪದ Video

ಪಾಟ್ನಾ: ವಿಮಾನ ನಿಲ್ದಾಣದ ರನ್ ವೇ ನಲ್ಲಿಯೇ ಬದ್ಧ ವೈರಿಗಳಾದ ಹಾವು ಮತ್ತು ಮುಂಗುಸಿಗಳು ಕಾದಾಡಿರುವ ವಿಡಿಯೋ ವೈರಲ್ ಆಗುತ್ತಿದೆ.ಹಾವು ಮತ್ತು ಮುಂಗುಸಿ ಜೈವಿಕವಾಗಿ ಬದ್ಧವೈರಿಗಳು.. ಇವುಗಳ ಕದನ ಮನುಷ್ಯಕ ಕಣ್ಣಿಗೆ ಕಾಣಸಿಗುವುದು ಅಪರೂಪ. ಆದರೆ ಬಿಹಾರ ರಾಜಧಾನಿ ಪಾಟ್ನಾದ ವಿಮಾನ ನಿಲ್ದಾಣದ ರನ್ ವೇ ಮೇಲೆಯೇ ಇಂತಹ ಅಪರೂಪದ ದೃಶ್ಯ ಕಂಡಿದೆ.

ಪುತ್ರನ ಟೆಸ್ಟ್ ಪದಾರ್ಪಣೆ ಕಂಡು ಭಾವುಕರಾದ ನೌಶಾದ್ ಖಾನ್ Video

Posted by Vidyamaana on 2024-02-15 13:35:25 |

Share: | | | | |


ಪುತ್ರನ ಟೆಸ್ಟ್ ಪದಾರ್ಪಣೆ ಕಂಡು ಭಾವುಕರಾದ ನೌಶಾದ್ ಖಾನ್ Video

ರಾಜ್ ಕೋಟ್: ಹಲವು ವರ್ಷಗಳ ಕಾಯುವಿಕೆಯ ಬಳಿಕ ಕೊನೆಗೂ ಮುಂಬೈನ ಆಟಗಾರ ಸರ್ಫರಾಜ್ ಖಾನ್ ಅವರಿಗೆ ಟೆಸ್ಟ್ ಕ್ಯಾಪ್ ಸಿಕ್ಕಿದೆ. ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸರ್ಪರಾಜ್ ಖಾನ್ ಪದಾರ್ಪಣೆ ಮಾಡಿದ್ದಾರೆ.


ರಾಜ್ ಕೋಟ್ ನಲ್ಲಿ ಪಂದ್ಯಕ್ಕೂ ಮುನ್ನ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರು ಸರ್ಫರಾಜ್ ಖಾನ್ ಅವರಿಗೆ ಟೆಸ್ಟ್ ಕ್ಯಾಪ್ ನೀಡಿದರು.

ಸರ್ಫರಾಜ್ ತಂದೆ ನೌಶಾದ್ ಖಾನ್ ಅವರು ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದು, ಮಗನ ಈ ಐತಿಹಾಸಿಕ ಸನ್ನಿವೇಶವನ್ನು ಕಣ್ತುಂಬಿಕೊಂಡರು. ಇದೇ ವೇಳೆ ಭಾವುಕರಾದ ನೌಶಾದ್ ಖಾನ್ ಮಗನಿಗಾಗಿ ಸಂತಸ ವ್ಯಕ್ತಪಡಿಸಿದರು. ಕಣ್ಣೀರು ಹರಿಸುತ್ತಲೇ ಮಗನನ್ನು ಅಪ್ಪಿಕೊಂಡರು.

ಇದೇ ವೇಳೆ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ಕೂಡಾ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. ಜುರೆಲ್ ಗೆ ದಿನೇಶ್ ಕಾರ್ತಿಕ್ ಅವರು ಟೆಸ್ಟ್ ಕ್ಯಾಪ್ ನೀಡಿ ಹಾರೈಸಿದರು

ನಾಲ್ಕು ವರ್ಷಗಳಿಂದ ಅರ್ಜಿ ಹಾಕಿದ್ರೂ ಸಿಗದ ಸ್ಕೂಟರ್ - ವಿಕಲಚೇತನರ ಮನವಿಗಿಲ್ಲ ಬೆಲೆ

Posted by Vidyamaana on 2023-06-10 14:43:06 |

Share: | | | | |


ನಾಲ್ಕು ವರ್ಷಗಳಿಂದ ಅರ್ಜಿ ಹಾಕಿದ್ರೂ ಸಿಗದ ಸ್ಕೂಟರ್ - ವಿಕಲಚೇತನರ ಮನವಿಗಿಲ್ಲ ಬೆಲೆ

ಪುತ್ತೂರು: ನನ್ನ ಎರಡು ಕಾಲುಗಳು ಬಲಹೀನವಾಗಿದೆ. ವಿಕಲಚೇತನರಿಗೆ ಅಥವಾ ನಡೆದಾಡಲು ಸಾಧ್ಯವಾಗದ ಚೇತನರಿಗೆ ಸರಕಾರದಿಂದ ನಾಲ್ಕು ಚಕ್ರದ ಸ್ಕೂಟರ್ ನೀಡುತ್ತಾರೆ. ನನಗು ಒಂದು ಸ್ಕೂಟರ್ ಕೊಡಿ ಎಂದು ಕಳೆದ ನಾಲ್ಕು ವರ್ಷಗಳಿಂದ ಸಾಸಕರಿಗೆ ಮನವಿ ಮಾಡುತ್ತಿದ್ದೇನೆ ಸ್ಕೂಟರ್ ಕೊಟ್ಟಿಲ್ಲ. ನೀವು ನನಗೊಂದು ಸ್ಕೂಟರ್ ಕೊಡಿಸಿ ಎಂದು ವಿಕಲಚೇತನ ಯುವಕ ಅಜ್ಜಿನಡ್ಕದ ಕೃಷ್ಣಪ್ಪ ಎಂಬವರು ಶಾಸಕರಾದ ಅಶೋಕ್ ರೈ ದೂರಿನ ಜೊತೆ ಮನವಿಯನ್ನು ಸಲ್ಲಿಸಿದ್ದಾರೆ.


ಸುಧಾನ ಶಾಲೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ ಕೃಷ್ಣಪ್ಪರು ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ವೇದಿಕೆಗೆ ಅವರನ್ನು ಸಂಬಂಧಿಕರು ಎತ್ತಿಕೊಂಡು ಬಂದರು. ಇವರ ಸ್ಥಿತಿಯನ್ನು ಕಂಡು ಶಾಸಕರೇ ಅವರನ್ನು ಕುರ್ಚಿಯ ಮೇಲೆ ಕೂರಿಸಿದರು. ಬಳಿಕ ಅವರ ಅರ್ಜಿಯನ್ನುನ ಸ್ವೀಕರಿಸಿದ ಶಾಸಕರು ನಿಮಗೆ ಏನು ಬೇಕು ಎಂದು ಕೇಳಿದ್ದಾರೆ. ಆ ವೇಳೆ ತನ್ನ ಸಮಸ್ಯೆಯನ್ನು ಕೃಷ್ಣಪ್ಪರು ಶಾಸಕರ ಬಳಿ ತೋಡಿಕೊಂಡರು. ನಿಮ್ಮ ಬೇಡಿಕೆಯನ್ನು ಈಡೇರಿಸುತ್ತೇನೆ ಎಂದು ಶಾಸಕರು ಭರವಸೆ ನೀಡಿದಾಗ ಕೃಷ್ಣಪ್ಪರು ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.

ಬೆಳ್ತಂಗಡಿ : ನೆರಿಯ ಒಂಟಿ ಸಲಗ ಕಾರಿನ ಮೇಲೆ ದಾಳಿ ಪ್ರಕರಣ

Posted by Vidyamaana on 2023-11-28 11:45:29 |

Share: | | | | |


ಬೆಳ್ತಂಗಡಿ : ನೆರಿಯ ಒಂಟಿ ಸಲಗ ಕಾರಿನ ಮೇಲೆ ದಾಳಿ ಪ್ರಕರಣ

ಬೆಳ್ತಂಗಡಿ : ಕುಟುಂಬವೊಂದು ತನ್ನ ಪತ್ನಿ ಮನೆಗೆ ಬಂದು ಉಜಿರೆ ಶಾಪಿಂಗ್ ಹೋಗಿ ವಾಪಸ್ ನೆರಿಯ ಪತ್ನಿ ಮನೆಗೆ ಹೋಗುವಾಗ ಒಂಟಿ ಸಲಗ ಕಾರಿಗೆ ಮೇಲೆ ದಾಳಿ ಮಾಡಿದ್ದು ಇಬ್ಬರಿಗೆ ಗಾಯವಾಗಿದ್ದು , ಮೂರು ಮಕ್ಕಳು ಸೇರಿ ಐದು ಜನ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ನ.27 ರಂದು ರಾತ್ರಿ 8:30 ರ ಸಮಯಕ್ಕೆ ನಡೆದಿದೆ.


*ಗಂಭೀರ ಗಾಯಗೊಂಡ ಕಾರಿನಲ್ಲಿದ್ದ ಇಬ್ಬರು:* ಪುತ್ತೂರು ತಾಲೂಕಿನ ಕಬಕ ಗ್ರಾಮದ ವಿದ್ಯಾಪುರ ಮನೆಯ ಅಬ್ದುಲ್ ರಹಮಾನ್(40) ತಲೆಗೆ ಹಾಗೂ ಎಡಕಾಲು ಮುರಿದಿದ್ದು. ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಹಿಟ್ಟಾಡಿ ಮನೆಯ ಅಬ್ದುಲ್ ರಹಮಾನ್ ಪತ್ನಿಯ ತಂಗಿ ನಾಸಿಯಾ(30) ಎಡಕಾಲು ಮುರಿದಿದ್ದು. ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


*ಆನೆ ದಾಳಿ ವೇಳೆ ಕಾರಿನದಲ್ಲಿದ್ದವರ ಮಾಹಿತಿ:* ಕಾರಿನಲ್ಲಿ ಅಬ್ದುಲ್ ರಹಮಾನ್ (40) ಪತ್ನಿ ಫೌಸಿಯಾ(35) , ನಾಸಿಯಾ ತಾಯಿ ಜುಬೈದಾ (50), ನಾಸಿಯಾ ಚಿಕ್ಕಮ್ಮ ಅಯಿಷಾ (45), ನಾಸಿಯಾ ಮಕ್ಕಳಾದ ಫಾತಿಮಾ ಅಲ್ಫಾ(1) , ಅಯಿಷಾ ವಾಫಾ(4) ,ಅಬ್ದುಲ್ ರಹಮಾನ್ ಮಗಳು ಮಹಮ್ಮದ್ ಮೋಹಜ್(4) ಸೇರಿ ಒಟ್ಟು 7 ಜನರು ಇದ್ದವರು ಎಂದು ಗಾಯಗೊಂಡ ಅಬ್ದುಲ್ ರಹಮಾನ್ ಮಾಹಿತಿ ನೀಡಿದ್ದಾರೆ.


*ಘಟನೆಯ ವಿವರ:* ದಕ್ಷಿಣ ಕನ್ನಡ‌ ಜಿಲ್ಲೆಯ ಪುತ್ತೂರಿನಿಂದ ನೆರಿಯ ಪತ್ನಿ ಮನೆಗೆ ಹೋಗಿ ಉಜಿರೆ ಶಾಪಿಂಗ್ ಮುಗಿಸಿಕೊಂಡು ನೆರಿಯ ಪತ್ನಿ ಮನೆಗೆ ಹೋಗುವಾಗ ಒಂಟಿ ಸಲಗ ಕಂಡಿದ್ದು ತಕ್ಷಣ ಕಾರನ್ನು ಬಯಲು ಬಳಿ ನಿಲ್ಲಿಸಿದ್ದು ಆನೆ ಕಾರಿನ ಮೇಲೆ ದಾಳಿ ಮಾಡಿ ಕಾರನ್ನು ಪಲ್ಟಿ ಮಾಡಿದ್ದು ಈ ವೇಳೆ ಕಾರಿನಲ್ಲಿದ್ದವರು ಜರಿದ್ದರಿಂದ  ದಂತದಿಂದ ಕಾರಿನ ಡೋರ್ ಮತ್ತು ಚಾಲಕನ ಸೀಟ್ ಸಿಲಿ ಪ್ರಾಣ ಉಳಿದಿದ್ದು ಬಳಿಕ ಆನೆ ವಾಪಸ್  ಹೋಗಿದೆ ಇದರಿಂದ ಇಬ್ಬರ ಕಾಲು ಮುರಿದಿದ್ದು. ಮೂರು ಮಕ್ಕಳು ಯಾವುದೆ ಗಾಯವಾಗದೆ ಒಟ್ಟು ಐದು ಜನ ಪ್ರಾಣಾ ಉಳಿಸಿಕೊಂಡಿದ್ದಾರೆ. ತಕ್ಷಣ ಸಾರ್ವಜನಿಕರು ಸ್ಥಳಕ್ಕೆ ಬಂದು ಗಾಯಗೊಂಡ ಇಬ್ಬರನ್ನು ಕಕ್ಕಿಂಜೆ ಕೃಷ್ಣ ಆಸ್ಪತ್ರೆಗೆ ಸೇರಿಸಿದ್ದಾರೆ. ಇಬ್ಬರು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳ್ತಂಗಡಿ ಅರಣ್ಯಾ ಇಲಾಖೆ ತಂಡ ಗಾಯಗೊಂಡವರನ್ನು ಭೇಟಿ ಮಾಡಿ ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಆನೆ ಹೋದ ಸ್ಥಳಕ್ಕೆ ಹೋಗಿ ಮಾಹಿತಿ ಪಡೆದುಕೊಂಡಿದ್ದಾರೆ. 


*ಒಂಟಿ ಸಲಗ ಬಗ್ಗೆ ಎಚ್ಚರಿಕೆ ನೀಡಿದ ಆರ್.ಎಫ್.ಓ:* ಒಂಟಿ ಸಲಗ ನೆರಿಯ ಸುತ್ತಮುತ್ತ ತಿರುಗಾಟ ನಡೆಸುತ್ತಿದ್ದು ಈ ಬಗ್ಗೆ ಸಾರ್ವಜನಿಕರಿಗೆ ಬೆಳ್ತಂಗಡಿ ಅರಣ್ಯಾಧಿಕಾರಿ ಮೋಹನ್ ಕುಮಾರ್ ಮತ್ತಿ ಸಿಬ್ಬಂದಿ ರಾತ್ರಿ ಹೊತ್ತು ಸಂಚಾರಿಸುವ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದ್ದಾರೆ. ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿಗಳನ್ನು ಒಂಟಿ ಸಲಗದ ಬಗ್ಗೆ ನಿಗಾ ಇಡಲು ನೇಮಿಸಲಾಗಿದೆ ಎಂದು ಅರಣ್ಯಾಧಿಕಾರಿ ಮೋಹನ್ ಕುಮಾರ್ ಮಾಹಿತಿ ನೀಡಿದ್ದಾರೆ.


ಬೆಳ್ತಂಗಡಿ ಅರಣ್ಯಾಧಿಕಾರಿ ಮೋಹನ್ ಕುಮಾರ್ , ಡಿ.ಆರ್.ಎಫ್.ಓ ಯತೀಂದ್ರ ಮತ್ತು ರಾಜ್ ಶೇಖರ್ , ಅರಣ್ಯ ಗಸ್ತು ಪಾಲಕ ಪಾಂಡುರಂಗ ಕಮತಿ ಮತ್ತು ಅಖಿಲೇಶ್, ಅರಣ್ಯ ಕವಾಲುಗಾರ ಕಿಟ್ಟಣ್ಣ ಮತ್ತು ವಿನಯಚಂದ್ರ ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.



Leave a Comment: